ತಂಬಾಕಿನ ಅತಿ ಸುಲಭಭೇದ್ಯ ಬಲಿಪಶುಗಳು
ಸರ್ಜನ್ ಜನರಲರ 1989 ರ ವರದಿ ತಿಳಿಸುವುದೇನಂದರೆ, ಒಬ್ಬನು ಸೇದಲು ಆರಂಭಿಸುವಾಗ ಎಷ್ಟು ಚಿಕ್ಕವನಾಗಿರುತ್ತಾನೋ ಶ್ವಾಸಕೋಶದ ಕ್ಯಾನ್ಸರಿನಿಂದ ಅವನು ಸಾಯುವುದು ಅಷ್ಟು ಹೆಚ್ಚು ಸಂಭವನೀಯ. “25 ವಯಸ್ಸಿನ ಬಳಿಕ ಸೇದಲಾರಂಭಿಸುವವರಿಗೆ ಸೇದದವರಿಗಿಂತ 5 ಪಾಲು ಹೆಚ್ಚು ಲಂಗ್ ಕ್ಯಾನ್ಸರ್ ಬರುತ್ತದೆ; 20 ಮತ್ತು 24 ವಯಸ್ಸಿನಲ್ಲಿ ಸೇದಲಾರಂಭಿಸುವವರಿಗೆ 9 ಪಾಲು ಹೆಚ್ಚು. 15 ಮತ್ತು 19 ವಯಸ್ಸುಗಳಲ್ಲಿ ಸೇದಲಾರಂಭಿಸುವವರಿಗೆ 14 ಪಾಲು ಹೆಚ್ಚು ಮತ್ತು 15 ವಯಸ್ಸಿಗಿಂತ ಮೊದಲು ಆರಂಭಿಸುವವರಿಗೆ ಸೇದದವರಿಗಿಂತ 19 ಪಾಲು ಹೆಚ್ಚು ಕ್ಯಾನ್ಸರ್ ತಗಲುವ ಸಂಭವವಿದೆ.”
ಅನೇಕ ಕೇಸುಗಳಲ್ಲಿ ಸೇದುವುದು ಅಮಲೌಷಧ ಪ್ರಯಾಣದ ಆರಂಭ. ಸೇದುತ್ತಿರುವ 12 ಮತ್ತು 17 ವಯಸ್ಸುಗಳ ಯುವಕರು ಮಾರಿವಾನ ಉಪಯೋಗಿಸುವ ಸಂಭವವು ಹತ್ತು ಪಾಲು ಜಾಸ್ತಿಯೆಂದೂ ಅವರು ಕೊಕೇಯ್ನ್, ಹ್ಯಾಲುಸಿನೋಜೆನ್ ಯಾ ಹಿರೋಯಿನ್ ಉಪಯೋಗಿಸುವ ಸಂಭವ 14 ಪಾಲು ಹೆಚ್ಚೆಂದೂ ಕಂಡುಬಂತು. ಮದ್ಯರೋಗಿಗಳಲ್ಲಿ ಮತ್ತು ಹಿರೋಯಿನ್ ವ್ಯಸನಿಗಳಲ್ಲಿ 90 ಸೇಕಡಕ್ಕೂ ಹೆಚ್ಚು ಮಂದಿ ಅತಿರೇಕವಾಗಿ ಸೇದುವವರೆಂದು ಅನೇಕ ಅಧ್ಯಯನಗಳು ಸೂಚಿಸುತ್ತವೆ.
ಇತ್ತೀಚೆಗಿನ ಒಂದು ಗ್ಯಾಲಪ್ ಎಣಿಕೆ ತೋರಿಸಿದ್ದೇನಂದರೆ ಹದಿಪ್ರಾಯದವರಲ್ಲಿ 64 ಪ್ರತಿಶತ, 21 ವಯಸ್ಸಿನ ಕೆಳಗಿನವರಿಗೆ ಸಿಗರೇಟ್ ನಿಷೇಧವಾಗಬೇಕೆಂದು ಹೇಳಿದರು ಮತ್ತು “ವಿಧಾನ ಸಭೆಗಳಲ್ಲಿ ಇಂಥ ನಿಯಮಕ್ಕೆ ಗಮನಾರ್ಹ ವಿರೋಧವು ಯುವಜನರಿಗೆ ಸಿಗರೇಟು ಮಾರಿ ಹಣ ಮಾಡುವ ವಯಸ್ಕರಿಂದ ಬರುತ್ತದೆ.”—ಸೈಖಾಯಟ್ರಿಕ್, ಮೆಂಟಲ್ ಹೆಲ್ತ್, ಆ್ಯಂಡ್ ಬಿಹೇವಿಯೋರಲ್ ಮೆಡಿಸಿನ್ ನ್ಯೂಸ್ ಅಪ್ಡೇಟ್, ಮಾರ್ಚ್-ಏಪ್ರಿಲ್ 1990, ಪುಟ 1. (g90 9/22)