ದೇವರು ನರಳಾಟವನ್ನು ಅನುಮತಿಸಿರುವದರ ಕಾರಣ
“ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು. ಯೆಹೋವನೇ, ನನ್ನನ್ನು ಸರಿಪಡಿಸು.”—ಯೆರೆಮೀಯ 10:23, 24.
ಮನುಷ್ಯನು ಸೃಷ್ಟಿಸಲ್ಪಟ್ಟ ಸಾವಿರಾರು ವರ್ಷಗಳ ನಂತರ ಈ ಮಾತುಗಳು ಬರೆಯಲ್ಪಟ್ಟವು. ನಮ್ಮ ಪ್ರಥಮ ಹೆತ್ತವರಿಗೆ ದೇವರು ಕೊಟ್ಟ ಉತ್ತಮ ಆರಂಭಕ್ಕೆ ಹೋಲಿಸಿದಾಗ, ತನ್ನ ದಿನದ ವರೆಗಿನ ಮಾನವ ಇತಿಹಾಸವು ಒಂದು ದುರಂತವಾಗಿತ್ತು ಎಂಬುದನ್ನು ಯೆರೆಮೀಯನು ಗ್ರಹಿಸಿದನು.
ಅವನ ಕಾಲದಂದಿನಿಂದ ಕೂಡಿಸಲ್ಪಟ್ಟ 2,500 ವರ್ಷಗಳ ಇತಿಹಾಸದ ದಾಖಲೆಯಿಂದ ಯೆರೆಮೀಯನ ಅವಲೋಕನೆಯು ಬಲಪಡಿಸಲ್ಪಟ್ಟಿದೆ. ಮಾನವ ದುರಂತವು ಇನ್ನೂ ಕೆಟ್ಟದ್ದಾಗಿರುತ್ತದೆ. ಎಲ್ಲಿ ತಪ್ಪು ಸಂಭವಿಸಿತು?
ಇಚ್ಛಾ ಸ್ವಾತಂತ್ರ್ಯದ ದುರುಪಯೋಗ
ದೇವರ ಮತ್ತು ಅವನ ನಿಯಮಗಳ ಹೊರತಾಗಿ ಅವರು ಅಭ್ಯುದಯ ಹೊಂದುವ ರೀತಿಯಲ್ಲಿ ಅವರನ್ನು ಸೃಷ್ಟಿಸಲಿಲ್ಲ ಎಂಬ ನಿಜಾಂಶವನ್ನು ನಮ್ಮ ಮೊದಲ ಹೆತ್ತವರು ಮರೆತರು. ಅದು ಅವರ ಜೀವಿತಗಳನ್ನು ಉತ್ತಮಗೊಳಿಸುವದೆಂದು ಯೋಚಿಸುತ್ತಾ, ಅವರು ದೇವರಿಂದ ಸ್ವತಂತ್ರರಾಗಲು ನಿರ್ಣಯಿಸಿದರು. ಆದರೆ ಇದು ಅವರ ಸ್ವಾತಂತ್ರ್ಯದ ದುರುಪಯೋಗವಾಗಿತ್ತು. ಇಚ್ಛಾ ಸ್ವಾತಂತ್ರ್ಯದ ದೇವ-ನೇಮಿತ ಮಿತಿಗಳ ಹೊರಗೆ ಅವರು ತಮ್ಮ ಹೆಜ್ಜೆಗಳನ್ನಿಟ್ಟರು.—ಆದಿಕಾಂಡ, ಅಧ್ಯಾಯ 3.
ಆದಾಮ ಮತ್ತು ಹವ್ವರನ್ನು ನಾಶಮಾಡಿ, ದೇವರು ಇನ್ನೊಂದು ಮಾನವ ಜೋಡಿಯೊಂದಿಗೆ ಪುನೊಮ್ಮೆ ಏಕೆ ಪ್ರಾರಂಭಿಸಲಿಲ್ಲ? ಏಕಂದರೆ ಅವನ ವಿಶ್ವ ಸಾರ್ವಭೌಮತೆಯು ಮತ್ತು ಅವನ ಆಳುವಿಕೆಯ ವಿಧಾನವು ಪ್ರಶ್ನಿಸಲ್ಪಟ್ಟಿತು. ಅವನು ಸರ್ವಶಕ್ತನಾದ ದೇವರು ಮತ್ತು ಎಲ್ಲಾ ಜೀವಿಗಳ ಸೃಷ್ಟಿಕರ್ತನಾಗಿರುವದು, ಅವುಗಳ ಮೇಲೆ ಅಧಿಕಾರ ನಡೆಸುವ ಹಕ್ಕನ್ನು ಅವನಿಗೆ ಕೊಡುತ್ತದೆ. ಅವನು ಸರ್ವ ಜ್ಞಾನಿಯಾಗಿರುವದರಿಂದ, ಎಲ್ಲಾ ಜೀವಿಗಳಿಗೆ ಅವನ ಆಳಿಕ್ವೆಯು ಅತ್ಯುತ್ತಮವಾಗಿದೆ. ಆದರೆ ದೇವರ ಆಳಿಕ್ವೆಯು ಈಗ ಪಂಥಾಹ್ವಾನಕ್ಕೊಡ್ಡಲ್ಪಟ್ಟಿತು.
ದೇವರಿಗೆ ಆಧೀನರಾಗಿ ನಡೆಯುವದಕ್ಕಿಂತ ಮಾನವರು ಅಧಿಕ ಒಳ್ಳೇದನ್ನು ಮಾನವರು ಮಾಡಸಾಧ್ಯವಿತ್ತೋ? ಸೃಷ್ಟಿಕರ್ತನಿಗೆ ಆ ಪ್ರಶೆಯ ಉತ್ತರವು ಖಂಡಿತವಾಗಿಯೂ ತಿಳಿದಿತ್ತು. ಮಾನವರಿಗೆ ತಿಳಿದುಕೊಳ್ಳುವ ನಿಶ್ಚಿತ ಮಾರ್ಗವು, ಅವರು ಆಶಿಸುತ್ತಿದ್ದ ಮಿತಿಹೇರದ ಸ್ವಾತಂತ್ರ್ಯವನ್ನು ಅನುಭವಿಸಲು ಬಿಡುವದಾಗಿತ್ತು. ಆದುದರಿಂದ, ದೇವರು ದುಷ್ಟತನ ಮತ್ತು ನರಳಾಟವನ್ನು ಅನುಮತಿಸಿರುವ, ಹಲವಾರು ಕಾರಣಗಳಲ್ಲಿ ಒಂದು ಏನಂದರೆ ಅವನಿಂದ ಸ್ವತಂತ್ರವಾಗಿರುವ ಮಾನವನಾಳಿಕ್ವೆಯು ಸಫಲಗೊಳ್ಳುತ್ತದೋ ಎಂಬುದನ್ನು ಖಂಡಿತವಾಗಿ ತೋರಿಸಿಕೊಡುವದಕ್ಕಾಗಿಯೇ.a
ಆದಾಮ ಮತ್ತು ಹವ್ವರು ತಮ್ಮ ಮೇಲೆ ಮತ್ತು ಅವರ ಸಂತಾನದ ಮೇಲೆ ಕಷ್ಟವನ್ನು ತಂದರು. ಅವರು ‘ಬಿತ್ತಿದ್ದನ್ನು ಕೊಯ್ದರು.’ (ಗಲಾತ್ಯ 6:7) “ಆದರೆ ಅವರು ತಮ್ಮ ವತಿಯಿಂದ ನಾಶಕರ ರೀತಿಯಲ್ಲಿ ವರ್ತಿಸಿದರು; ಅವರು [ದೇವರ] ಮಕ್ಕಳಲ್ಲ, ಅವರ ದೋಷವು ಅವರ ಸ್ವಂತದ್ದೇ.”—ಧರ್ಮೋಪದೇಶಕಾಂಡ 32:5, NW.
ದೇವರ ಆಳಿಕ್ವೆಯಿಂದಾದ ಸ್ವಾತಂತ್ರ್ಯದ ಫಲವಾಗಿ ಅವರ ಮರಣವು ಬರುವದು ಎಂದು ಪ್ರಥಮ ಹೆತ್ತವರನ್ನು ಎಚ್ಚರಿಸಲಾಗಿತ್ತು. (ಆದಿಕಾಂಡ 2:17) ಅದು ಸತ್ಯವೆಂದು ರುಜುವಾಯಿತು. ದೇವರನ್ನು ತ್ಯಜಿಸುವದರಿಂದ, ಅವರ ಆರೋಗ್ಯದ ಮತ್ತು ಜೀವಿತದ ಮೂಲವನ್ನು ಅವರು ತೊರೆದರು. ಮರಣವು ಅವರನ್ನು ಕೊನೆಗೊಳಿಸುವ ತನಕ ಅವರು ಅವನತಿ ಹೊಂದುತ್ತಾ ಹೋದರು.—ಆದಿಕಾಂಡ 3:19.
ತದನಂತರ, ಆವನ ಆಳಿಕ್ವೆಯಿಂದ ಸ್ವತಂತ್ರವಾಗಿ ಅವರು ರೂಪಿಸಿರುವ ಯಾವುದೇ ರಾಜಕೀಯ, ಸಾಮಾಜಿಕ ಅಥವಾ ಆರ್ಥಿಕ ವ್ಯವಸ್ಥೆಯ ಸಂಪೂರ್ಣವಾಗಿ ತೃಪ್ತಿಕರವಾಗಿ ರುಜುವಾಗಬಹುದೋ ಎಂದು ಸಮಗ್ರವಾಗಿ ಪ್ರದರ್ಶಿಸಲು ದೇವರು ಮಾನವ ಕುಟುಂಬಕ್ಕೆ ಸಾಕಷ್ಟು ಸಮಯವನ್ನು ಅನುಮತಿಸಿದನು. ಈ ವ್ಯವಸ್ಥೆಗಳಲ್ಲಿ ಯಾವುದಾದರೊಂದು ಒಂದು ಸಂತೋಷಭರಿತ, ದುಷ್ಕೃತ್ಯ ಮತ್ತು ಯುದ್ಧಗಳಿಂದ ಮುಕ್ತವಾಗಿರುವ ಒಂದು ಶಾಂತಿಯುತ ಲೋಕವನ್ನು ತರಸಾಧ್ಯವೋ? ಯಾವುದಾದರೊಂದು ಎಲ್ಲರಿಗಾಗಿ ಲೌಕಿಕ ಸಮೃದ್ಧತೆಯನ್ನು ತರಬಹುದೋ? ಯಾವುದಾದರೂ ರೋಗ, ವೃದ್ಧಾಪ್ಯ ಮತ್ತು ಮರಣವನ್ನು ಜಯಿಸಬಹುದೋ? ಆ ಎಲ್ಲಾ ವಿಷಯಗಳನ್ನು ಪೂರೈಸಲು ದೇವರ ಆಳಿಕ್ವೆಯನ್ನು ರೂಪಿಸಲಾಗಿತ್ತು.—ಆದಿಕಾಂಡ 1:26-31.
ಗತಿಸಿದ ಸಮಯವು ಏನನ್ನು ಕಲಿಸುತ್ತದೆ
ರೋಮಾಯ 5:12ರ ಸತ್ಯತೆಯನ್ನು ಇತಿಹಾಸವು ರುಜುಪಡಿಸಿತು: “ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.” ಈ ವಚನವು ವಿವರಿಸುವದೇನಂದರೆ “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು.” ನಮ್ಮ ಮೊದಲ ಹೆತ್ತವರು ದೇವರ ಆಳಿಕ್ವೆಯ ವಿರುದ್ಧ ದಂಗೆಯೆದ್ದಾಗ, ಅವರು ನ್ಯೂನ್ಯತೆಯುಳ್ಳವರೂ, ಅಸಂಪೂರ್ಣರೂ ಆದರು. ಅವರು ಕೇವಲ ಈ ಅಪರಿಪೂರ್ಣತೆಯನ್ನು ತಮ್ಮ ವಂಶಕ್ಕೆ ಕೊಡಶಕ್ತರಾದ
ರು. ಪರಿಣಾಮವಾಗಿ, ನಾವೆಲ್ಲರೂ ನ್ಯೂನ್ಯತೆಯುಳ್ಳವರಾಗಿ ಹುಟ್ಟಿದ್ದೇವೆ, ರೋಗ ಮತ್ತು ಮರಣಕ್ಕೆ ಈಡಾಗಿರುತ್ತೇವೆ.
ಪಾಪ ಹೊತ್ತ ಜನರು ಒಬ್ಬರು ಇನ್ನೊಬ್ಬರೆಡೆಗೆ ಎಷ್ಟು ಘೋರವಾಗಿ ವರ್ತಿಸುತ್ತಿದ್ದಾರೆ ಎಂಬುದನ್ನು ಗತಿಸಿದ ಸಮಯವು ಪ್ರಕಟ ಪಡಿಸಿದೆ. ಎಣಿಸಲು ಅಸಂಖ್ಯಾತವಾದ ಕ್ರೂರ ಯುದ್ಧಗಳು, ಜಾತಿ ಮತ್ತು ಧಾರ್ಮಿಕ ವೈಷಮ್ಯ, ಮಠೀಯ ವಿಚಾರಣೆಗಳು [ಇನ್ಕಿಶ್ವಿಸನ್], ಎಲ್ಲಾ ರೀತಿಯ ಭಯೋತ್ಪಾದಕ ದುಷ್ಕೃತ್ಯಗಳು ಮತ್ತು ಸ್ವಾರ್ಥ ಹಾಗೂ ಲೋಭದ ಕೃತ್ಯಗಳು ಇದ್ದವು. ಇದಕ್ಕೆ ಕೂಡಿಸಿ ದಾರಿದ್ರ್ಯ ಮತ್ತು ಹಸಿವೆ, ಅಸಂಖ್ಯಾತ ಲಕ್ಷಗಟ್ಟಲೆ ಜನರನ್ನು ಬಲಿ ತೆಗೆದುಕೊಂಡಿವೆ.
ಕಳೆದಿರುವ ಸಾವಿರಾರು ವರ್ಷಗಳಲ್ಲಿ, ಮಾನವ ಕುಲವು ಕಲ್ಪಿಸಿಕೊಳ್ಳ ಬಹುದಾದ ಎಲ್ಲಾ ರೀತಿಯ ಸರಕಾರವನ್ನು ಪ್ರಯತ್ನಿಸಿ ನೋಡಿದ್ದಾರೆ. ಆದಾಗ್ಯೂ, ಒಂದರ ನಂತರ ಇನ್ನೊಂದು ಮಾನವನ ಆವಶ್ಯಕತೆಗಳನ್ನು ತೃಪ್ತಿ ಪಡಿಸಲು ತಪ್ಪಿ ಹೋಗಿವೆ. ಇತ್ತೀಚೆಗೆ ಹಲವಾರು ದೇಶಗಳಲ್ಲಿ ಸಮಾತವಾದಿ [ಕಮ್ಯೂನಿಸ್ಟ್] ಸರಕಾರಗಳು ತಿರಸ್ಕರಿಸಲ್ಪಟ್ಟಿವೆ. ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಅಪರಾಧ, ದಾರಿದ್ರ್ಯತನ, ಆರ್ಥಿಕ ಅಸ್ಥಿರತೆ ಮತ್ತು ಭೃಷ್ಟಾಚಾರವು ಅತಿಯಾಗಿ ಹಬ್ಬಿದೆ. ನಿಜವಾಗಿ, ಮಾನವ ಸರಕಾರದ ಎಲ್ಲಾ ನಮೂನೆಗಳು ಕೊರತೆಗಳಿರುವಂತೆ ರುಜುವಾಗಿವೆ.
ಅದಲ್ಲದೆ, ಮಾನವರು ತಮ್ಮ ವೈಜ್ಞಾನಿಕ ಮತ್ತು ಐಹಿಕ ಸಾಧನೆಯ ಶಿಖರಕ್ಕೆ ಬಂದು ಮುಟ್ಟಲು ದೇವರು ಸಮಯವನ್ನು ಬಿಟ್ಟಿರುತ್ತಾನೆ. ಬಿಲ್ಲು ಮತ್ತು ಬಾಣಗಳ ಸ್ಥಾನದಲ್ಲಿ ಪರಮಾಣು ಕ್ಷಿಪಣಿಗಳು ಬಂದಿರುವಾಗ, ಯಾ ಜನರು ಅಂತರಿಕ್ಷಕ್ಕೆ ಪ್ರಯಾಣಿಸಲು ಶಕ್ತರಿದ್ದರೂ ಭೂಮಿಯಲ್ಲೇ ಶಾಂತಿಯಲ್ಲಿ ಜೀವಿಸಲಾಗದಿರುವಾಗ, ಪಾತಕಗಳ ಕಾರಣ ಲಕ್ಷಗಟ್ಟಲೆ ಜನರು ರಾತ್ರಿ ಸಮಯದಲ್ಲಿ ಹೊರಹೋಗಲು ಹೆದರುತ್ತಿರುವಾಗ, ಅದು ನಿಜವಾದ ಪ್ರಗತಿಯಾಗಿರುತ್ತದೋ?
ಅವರು ಆಹಾರ, ನೀರು ಮತ್ತು ಗಾಳಿಯಿಲ್ಲದೇ ಜೀವದಿಂದ ಇರಲು ಆಗದಿರುವಂತೆ, ಮಾನವರು ‘ತನ್ನ ಸ್ವಂತ ಹೆಜ್ಜೆಯನ್ನು’ ಸಫಲತೆಯಿಂದ ‘ಇಡಲು’ ಅವರಿಂದ ಇನ್ನು ಮುಂದೆ ಸಾಧ್ಯವಿಲ್ಲ ಎಂದು ಗತಿಸಿದ ಸಮಯದ ಪರೀಕ್ಷಣೆಯು ತೋರಿಸಿದೆ. ಆಹಾರ, ನೀರು ಮತ್ತು ಗಾಳಿಯ ಮೇಲೆ ನಾವು ಆತುಕೊಂಡಿರಲು ನಮ್ಮನ್ನು ಸೃಷ್ಟಿಸಿದಷ್ಟೇ ಖಂಡಿತವಾಗಿ, ನಮ್ಮ ಸೃಷ್ಟಿಕರ್ತನ ಮಾರ್ಗದರ್ಶನೆಯ ಮೇಲೆ ಆತುಕೊಂಡಿರುವಂತೆ ನಮ್ಮನ್ನು ರಚಿಸಲಾಗಿದೆ.—ಮತ್ತಾಯ 4:4.
ದುಷ್ಟತನ ಮತ್ತು ನರಳಾಟವನ್ನು ಅನುಮತಿಸಿದ್ದರಿಂದ, ಇಚ್ಛಾ ಸ್ವಾತಂತ್ರ್ಯವನ್ನು ದುರುಪಯೋಗಿಸುವದರ ದುಃಖಕರ ಫಲಿತಾಂಶಗಳನ್ನು ದೇವರು ಒಂದೇ ಸಲ ಮತ್ತು ಎಲ್ಲಾ ಸಮಯಗಳಿಗಾಗಿ ತೋರಿಸಿರುತ್ತಾನೆ. ಇದು ಎಷ್ಟೊಂದು ಅಮೂಲ್ಯವಾದ ವರದಾನವೆಂದರೆ, ಆ ಇಚ್ಛಾ ಸ್ವಾತಂತ್ರ್ಯವನ್ನು ಮನುಷ್ಯರಿಂದ ತೆಗೆಯುವದರ ಬದಲು ಅದರ ದುರುಪಯೋಗ ಯಾವ ಅರ್ಥದಲ್ಲಿರುತ್ತದೆ ಎಂಬುದನ್ನು ನೋಡಲು ದೇವರು ಅವರನ್ನು ಬಿಟ್ಟಿರುತ್ತಾನೆ.
ಇಚ್ಛಾ ಸ್ವಾತಂತ್ರ್ಯದ ಕುರಿತಾಗಿ “ಸ್ಟೇಟ್ಮೆಂಟ್ ಆಫ್ ಪ್ರಿನ್ಸಿಪಲ್ಸ್ ಆಫ್ ಕನ್ಸರ್ವೆಟಿವ್ ಜೂಡೆಯಿಸಂ” ಎಂಬ ಪ್ರಕಾಶನವು ಹೇಳುವುದು: “ಒಳ್ಳೇದರ್ದಿಂದ ಮತ್ತು ಕೆಟ್ಟದ್ದರಿಂದ ಎದುರಿಸಲ್ಪಟ್ಟಾಗ, ಜನರು ತಪ್ಪು ಆಯ್ಕೆಯನ್ನು ಮಾಡುವ ನಿಜವಾದ ಸಾಧ್ಯತೆಗಳಿಲ್ಲದೆ ಆಯ್ಕೆಯ ಕುರಿತಾದ ಇಡೀ ಕಲ್ಪನೆಯೇ ಅರ್ಥವಿಲ್ಲದ್ದಾಗಿರುತ್ತದೆ. . . . ಲೋಕದಲ್ಲಿನ ಹೆಚ್ಚಿನ ನರಳುವಿಕೆಯು ನಮಗೆ ನೀಡಲ್ಪಟ್ಟ ಇಚ್ಛಾ ಸ್ವಾತಂತ್ರ್ಯದ ನಮ್ಮ ದುರುಪಯೋಗದ ನೇರವಾದ ಫಲಿತಾಂಶವಾಗಿರುತ್ತದೆ.”
ನಿಶ್ಚಯವಾಗಿಯೂ, ಯೆರೆಮೀಯನು ಹೀಗೆ ಹೇಳಿದಾಗ, ಸರಿಯಾಗಿಯೇ ಹೇಳಿದನು: “ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲ.” ಮತ್ತು ಸೊಲೊಮೋನನು ಕೂಡಾ ಹೀಗೆಂದಾಗ ಸರಿಯಾಗಿಯೇ ಅಂದಿದ್ದನು: “ಒಬ್ಬನು ಇನ್ನೊಬ್ಬನು ಮೇಲೆ ಅಧಿಕಾರ ನಡಿಸಿ ಅವನಿಗೆ ಹಾನಿಯನ್ನುಂಟು ಮಾಡಿದ್ದಾನೆ.”—ಪ್ರಸಂಗಿ 8:9.
ಬಲವತ್ತಾಗಿ, ಅದು ನರಳಾಟವನ್ನು ನಿರ್ಮೂಲಮಾಡುವ ಮಾನವನ ಅಸಾಮರ್ಥ್ಯವನ್ನು ಉದಾಹರಿಸುತ್ತದೆ. ಸೊಲೊಮೋನನು ಸಹ ತನ್ನ ಎಲ್ಲಾ ಜ್ಞಾನ, ಐಶ್ವರ್ಯ ಮತ್ತು ಶಕ್ತಿಯೊಂದಿಗೆ ಮಾನವಾಳಿಕ್ವೆಯಿಂದ ಬರುವ ದುರವಸ್ಥೆಯನ್ನು ಸರಿಪಡಿಸಲಾಗಲಿಲ್ಲ.
ಹಾಗಾದರೆ, ದೇವರು ನರಳಾಟಕ್ಕೆ ಹೇಗೆ ಒಂದು ಅಂತ್ಯವನ್ನು ತರುವನು? ಅವರ ಗತಕಾಲದ ನರಳುವಿಕೆಗಾಗಿ ಅವನು ಎಂದಾದರೂ ಮಾನವರಿಗೆ ಪರಿಹಾರವನ್ನು ನೀಡುವನೋ? (g90 10/8)
[ಅಧ್ಯಯನ ಪ್ರಶ್ನೆಗಳು]
a ಒಳಗೂಡಿರುವ ಎಲ್ಲಾ ವಿವಾದಾಂಶಗಳ ಸವಿವರ ಚರ್ಚೆಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರೇಕ್ಟ್ ಸೊಸೈಟಿಯಿಂದ ಪ್ರಕಾಶಿತವಾದ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕದ ಅಧ್ಯಾಯ 11 ಮತ್ತು 12 ನೋಡಿರಿ.
[ಪುಟ 9 ರಲ್ಲಿರುವಚಿತ್ರ]
ದೇವರು ಮಾನವಕುಲಕ್ಕೆ ಒಂದು ಪರಿಪೂರ್ಣ ಆರಂಭವನ್ನು ಕೊಟ್ಟನು, ಆದರೆ ದೇವರಿಂದ ಸ್ವತಂತ್ರಗೊಂಡ ಮಾನವರು, ಯಶಸ್ವೀಯಾಗಿ ‘ತಮ್ಮ ಹೆಜ್ಜೆಗಳನ್ನು ಇಡಲಾರರು’ ಎಂದು ಇತಿಹಾಸವು ತೋರಿಸುತ್ತದೆ