ಪೂರಣಗಳು ಪಾರಾಗುವುದಕ್ಕೆ ಕೀಲಿಕೈಯೇ?
ರಕ್ತ ಪೂರಣಗಳಿಗೆ 1941ರಲ್ಲಿ ಡಾ. ಜೋನ್ ಎಸ್. ಲಂಡೀ ಒಂದು ಮಟ್ಟವನ್ನಿಟ್ಟರು. ತನ್ನ ಬೆಂಬಲಕ್ಕಾಗಿ ಯಾವ ವೈದ್ಯಕೀಯ ರುಜುವಾತು ಇಲ್ಲದೇ ಅವರು ಹೇಳಿದ್ದೇನಂದರೆ, ಆಮ್ಲಜನಕವನ್ನೊಯ್ಯುವ ರಕ್ತದ ಉಪಾಂಗವಾದ ರೋಗಿಯ ಹಿಮೊಗ್ಲೋಬಿನ್ (ರಕ್ತವರ್ಣಜನಕ), ಪ್ರತಿಯೊಂದು ಡಿಸಿಲೀಟರಿಗೆ 10 ಗ್ರಾಮ್ ಯಾ ಅದಕ್ಕಿಂತ ಕಡಿಮೆ ಮಟ್ಟಕ್ಕೆ ಇಳಿದರೆ, ಆಗ ರೋಗಿಗೆ ರಕ್ತಪೂರಣದ ಅಗತ್ಯವಿದೆ. ತದನಂತರ ಆ ಸಂಖ್ಯೆಯು ಡಾಕ್ಟರುಗಳಿಗೆ ಒಂದು ಮಟ್ಟವಾಗಿ ಪರಿಣಮಿಸಿತು.
ಈ ಹತ್ತು-ಗ್ರಾಮ್ ಮಟ್ಟವು ಸುಮಾರು 30 ವರ್ಷಗಳ ತನಕ ಪಂಥಾಹ್ವಾನಕ್ಕೆ ಒಡ್ಡಲ್ಪಟ್ಟಿತು. 1988ರಲ್ಲಿ, ದ ಜರ್ನಲ್ ಆಫ್ ಮೆಡಿಕಲ್ ಎಸೋಸಿಯೇಶನ್, ಆ ಮಾರ್ಗದರ್ಶಕಕ್ಕೆ ರುಜುವಾತಿನ ಆಧಾರವಿಲ್ಲ ಎಂದು ಖಂಡಿತವಾಗಿ ನುಡಿಯಿತು. ಅದು “ಸಂಪ್ರದಾಯದ ಸೋಗಿನಿಂದ, ಅಸ್ಪಷ್ಟತೆಗಳ ಹೊದಿಕೆಯಿಂದ ಮರೆಯಾಗಿದೆ ಮತ್ತು ಅದಕ್ಕೆ ಯಾವ ವೈದ್ಯಕೀಯ ಯಾ ಪ್ರಯೋಗ ರುಜುವಾತಿನ ಆಧಾರವಿಲ್ಲ” ಎಂದು ಸುಪ್ತಕಾರಕತಜ್ಞ ಹವರ್ಡ್ ಎಲ್. ಸಾಡರ್ ಹೇಳಿದ್ದಾರೆ. ಬೇರೆಯವರು ಅದನ್ನು ಬರೇ ದಂತಕಥೆ ಎಂದು ಕರೆಯುತ್ತಾರೆ.
ಈ ಎಲ್ಲಾ ತಪ್ಪು ಭಾವನೆಯ ಕಂಠೋಕ್ತ ನಿವಾರಣೆಯ ನಡುವೆಯೂ, ಆ ದಂತಕಥೆಯಿನ್ನೂ ಯುಕ್ತ ಮಾರ್ಗದರ್ಶಕವೆಂದು ವಿಸ್ತಾರವಾಗಿ ಮಾನ್ಯ ಮಾಡಲ್ಪಟ್ಟಿದೆ. ಹೆಚ್ಚಿನ ಸುಪ್ತಕಾರಕ ತಜ್ಞರಿಗೆ ಮತ್ತು ಬೇರೆ ಡಾಕ್ಟರುಗಳಿಗೆ, ಹಿಮೊಗ್ಲೋಬಿನ್ ಮಟ್ಟವು 10ಕ್ಕಿಂತ ಕೆಳಗಿದೆಯೆಂದರೆ ಪೂರಣ ಬೇಕೇಬೇಕು, ರಕ್ತಹೀನತೆಯನ್ನು ಸರಿಪಡಿಸಲು. ಇದು ತತ್ವಥಾ ಯಾಂತ್ರಿಕತೆ.
ಇದು ರಕ್ತದ ಮತ್ತು ರಕ್ತ ಉತ್ಪನ್ನಗಳ ಅತಿರೇಕ ಬಳಸುವಿಕೆಗೆ ಇಂದು ಕಾರಣವಾಗಿದೆ ನಿಸ್ಸಂಶಯ. ಅಮೆರಿಕ ಒಂದರಲ್ಲಿಯೇ, ಸುಮಾರು ಎರಡು ಮಿಲಿಯ ಅನಾವಶ್ಯಕ ಪೂರಣಗಳನ್ನು ಪ್ರತಿ ವರ್ಷ ನೀಡಲಾಗುತ್ತದೆ ಮತ್ತು ನಿಧಿರಕ್ತದ ಎಲ್ಲಾ ಪೂರಕಗಳಲ್ಲಿ ಸುಮಾರು ಅರ್ಧದಷ್ಟನ್ನು ದೂರ ಮಾಡಸಾಧ್ಯವಿದೆ ಎಂದು ಹ್ಯೂಮನ್ ಇಮ್ಯೂನೊಡಿಫಿಶನ್ಸಿ ವೈರಸ್ ರೋಗದ ಪ್ರೆಸಿಡೆನ್ಶಲ್ ಕಮಿಶನಿನಲ್ಲಿ ಕೆಲಸ ಮಾಡಿದ್ದ ಡಾ. ಥೆರೆಸ ಎಲ್. ಗ್ರೀನ್ಶಾ ಅಂದಾಜು ಮಾಡಿದ್ದಾರೆ. ಜಪಾನಿನ ಆರೋಗ್ಯ ಮತ್ತು ಕ್ಷೇಮ ಇಲಾಖೆಯು, “ಪೂರಣಗಳ ವಿಚಾರಹೀನ ಉಪಯೋಗವನ್ನು” ಹಾಗೂ “ಅವುಗಳ ಸಫಲತ್ವದಲ್ಲಿರುವ ಕುರುಡು ನಂಬಿಕೆಯನ್ನು” ನಿಂದಿಸಿದೆ.
ರಕ್ತ ಹೀನತೆಯನ್ನು ಪೂರಣಗಳಿಂದ ಸರಿಪಡಿಸಲು ಪ್ರಯತ್ನಿಸುವುದರಲ್ಲಿರುವ ಸಮಸ್ಯೆಯೇನಂದರೆ, ಪೂರಣಗಳು ರಕ್ತಹೀನತೆಗಿಂತಲೂ ಹೆಚ್ಚು ಮಾರಕವಾಗಿರುವ ಸಾಧ್ಯತೆಯೇ. ಮುಖ್ಯವಾಗಿ ಧಾರ್ಮಿಕ ಕಾರಣದಿಂದಾಗಿ ರಕ್ತ ಪೂರಣೆಯನ್ನು ನಿರಾಕರಿಸುವ ಯೆಹೋವನ ಸಾಕ್ಷಿಗಳು, ಈ ವಿಷಯವನ್ನು ರುಜುಪಡಿಸಲು ಸಹಾಯ ಮಾಡಿದ್ದಾರೆ.
ರಕ್ತ ಪೂರಣೆಯನ್ನು ನಿರಾಕರಿಸಿದರಿಂದಾಗಿ ಯೆಹೋವನ ಸಾಕ್ಷಿಗಳಲ್ಲೊಬ್ಬನು ಸತ್ತ ವರದಿಯನ್ನು ವಾರ್ತಾಪತ್ರದ ತಲೇಪಂಕ್ತಿಗಳಲ್ಲಿ ನೀವು ಕಂಡಿರಬಹುದು. ವಿಷಾದಕರವಾಗಿ, ಅಂಥ ವರದಿಗಳು ಇಡೀ ಕಥೆಯನ್ನು ಹೇಳುವದು ಬಹಳ ಅಪರೂಪ. ಹೆಚ್ಚಾಗಿ ಸಾಕ್ಷಿಗೆ ಸಾವನ್ನು ತರುವುದು, ಶಸ್ತ್ರಕ್ರಿಯೆ ಮಾಡಲು ಅಥವಾ ಅದನ್ನು ಸಾಕಷ್ಟು ಬೇಗನೇ ಮಾಡಲು ಡಾಕ್ಟರರ ನಿರಾಕರಣೆಯೇ ಆಗಿದೆ. ಹಿಮೊಗ್ಲೋಬಿನ್ ಮಟ್ಟವು ಹತ್ತಕ್ಕಿಂತ ಕೆಳಗಿಳಿದಿದ್ದರೆ, ಪೂರಣ ನೀಡದ ಹೊರತು ಶಸ್ತ್ರಕ್ರಿಯೆ ಮಾಡಲು ಕೆಲವು ಸರ್ಜನರು ಒಪ್ಪುವುದಿಲ್ಲ. ಆದರೂ, ಹಿಮೊಗ್ಲೋಬಿನ್ ಮಟ್ಟವು ಐದು, ಎರಡು, ಮತ್ತು ಅದಕ್ಕಿಂತ ಕಡಿಮೆಯಾದಾಗಲೂ, ಅನೇಕ ಸರ್ಜನರು ಸಾಕ್ಷಿಗಳನ್ನು ಸಾಫಲ್ಯದಿಂದ ಶಸ್ತ್ರಕ್ರಿಯಿಸಿದ್ದಾರೆ. ಸರ್ಜನ್ ರಿಚರ್ಡ್ ಕೆ. ಸ್ಪೆನ್ಸ್ ಹೇಳಿದ್ದು: “ಹಿಮೊಗ್ಲೋಬಿನ್ ಮಟ್ಟದ ಕೆಳಗಿಳಿಯುವಿಕೆಯು ಸಾವಿಗೆಂದೂ ಸಂಬಂಧಿಸುವದಿಲ್ಲವೆಂದು ಸಾಕ್ಷಿಗಳ ವಿಷಯದಲ್ಲಿ ನಾನು ಕಂಡಿದ್ದೇನೆ.”
ಸಮೃದ್ಧ ಅನ್ಯಮಾರ್ಗಗಳು
‘ರಕ್ತ ಇಲ್ಲವೇ ಸಾವು.’ ಹೀಗೆಂದು ಸಾಕ್ಷಿ ರೋಗಿಯು ಎದುರಿಸುವ ಅನ್ಯ ಮಾರ್ಗಗಳನ್ನು ಕೆಲವು ಡಾಕ್ಟರರುಗಳು ವರ್ಣಿಸುತ್ತಾರೆ. ಆದರೂ, ವಾಸ್ತವದಲ್ಲಿ, ರಕ್ತ ಪೂರಣಕ್ಕೆ ಬದಲಾಗಿ ಅನೇಕ ಅನ್ಯಮಾರ್ಗಗಳು ಅಲ್ಲಿರುತ್ತವೆ. ಯೆಹೋವನ ಸಾಕ್ಷಿಗಳಿಗೆ ಸಾಯುವುದರಲ್ಲಿ ಆಸಕ್ತಿ ಇಲ್ಲ. ಅನ್ಯ ಮಾರ್ಗಗಳಿಂದ ಉಪಚರಿಸಲ್ಪಡಲು ಅವರು ಆಸಕ್ತರಾಗಿದ್ದಾರೆ. ರಕ್ತವನ್ನು ಆಹಾರವಾಗಿ ಸೇವಿಸುವದನ್ನು ಬೈಬಲು ನಿಶೇಧಿಸುವದರಿಂದ, ರಕ್ತ ಪೂರಣಗಳೇ ಅನ್ಯ ಮಾರ್ಗವೆಂದು ಅವರು ಎಣಿಸುವದಿಲ್ಲ.
ಜೂನ್ 1988ರಲ್ಲಿ, ರಿಪೋರ್ಟ್ ಆಫ್ ಪ್ರೆಸಿಡೆನ್ಶ್ಯಲ್ ಕಮಿಶನ್ ಆಫ್ ಹ್ಯೂಮನ್ ಇಮ್ಯೂನೋಡಿಫಿಯನ್ಸಿ ವೈರಸ್ ಎಪಿಡಮಿಕ್, ಸಾಕ್ಷಿಗಳು ವರ್ಷಗಳಿಂದ ಏನನ್ನು ವಿನಂತಿಸುತ್ತಿದ್ದರೋ ಅದನ್ನು ಎಲ್ಲಾ ರೋಗಿಗಳಿಗೆ ಕೊಡಬೇಕು ಎಂದು ಸೂಚಿಸಿತು. ಅದೇನಂದರೆ, “ರಕ್ತದ ಅಥವಾ ಅದರ ಉಪಾಂಗಗಳ ಪೂರಣವನ್ನು ಶ್ರುತಪಡಿಸುವ ಒಪ್ಪಿಗೆಯಲ್ಲಿ, ಅದರಲ್ಲಿರುವ ಅಪಾಯಗಳ ವಿವರಣೆ . . . ಮತ್ತು ರಕ್ತ ಪೂರಣೆಯ ಚಿಕಿತ್ಸೆಗೆ ಅನುರೂಪವಾದ ಯುಕ್ತ ಅನ್ಯಮಾರ್ಗಗಳ ಕುರಿತಾದ ಮಾಹಿತಿ ಸೇರಿರಬೇಕು.”
ಇನ್ನೊಂದು ಮಾತಿನಲ್ಲಿ ಹೇಳುವದಾದರೆ, ರೋಗಿಗಳಿಗೆ ಆಯ್ಕೆಯು ಕೊಡಲ್ಪಡಬೇಕು. ಅಂಥ ಒಂದು ಆಯ್ಕೆಯು ಅಟೊಲೋಗಸ್ ಪೂರಣೆ ವಿಧಾನ; ಇದು ಶಸ್ತ್ರಕ್ರಿಯೆಯ ಸಮಯದಲ್ಲಿ ರೋಗಿಯ ಸ್ವಂತ ರಕ್ತವನ್ನು ಉಳಿಸಿಕೊಂಡು ರೋಗಿಯ ರಕ್ತನಾಡಿಗಳಿಗೆ ಪುನಃ ಅದನ್ನು ಮರುಸಂಚಲನೆ ಮಾಡುವದೇ. ಇಂಥ ಕಾರ್ಯಗತಿಯು ಕೇವಲ ರೋಗಿಯ ಸ್ವಂತ ರಕ್ತ ಪರಿಚಲನಾಂಗದ ವಿಸ್ತರಣೆಯಾಗಿರಲಾಗಿ, ಹೆಚ್ಚಿನ ಸಾಕ್ಷಿಗಳಿಗೆ ಅದು ತೀರಾ ಸ್ವೀಕರಣೀಯವಾಗಿದೆ. ರೋಗಿಯ ರಕ್ತ ಗಾತ್ರವನ್ನು ಅರಕ್ತ ವಿಕಾಸಕಗಳಿಂದ ಅಧಿಕಗೊಳಿಸಿ, ದೇಹವು ತನ್ನ ಸ್ವಂತ ಕೆಂಪು ಕಣಗಳನ್ನು ಭರ್ತಿಮಾಡುವಂತೆ ಬಿಡುವ ಮೂಲ್ಯತೆಯನ್ನೂ ಸರ್ಜನರು ಒತ್ತಿಹೇಳುತ್ತಾರೆ. ಇಂಥಾ ವಿಧಾನಗಳು ಮರ್ತ್ಯತೆಯನ್ನು ಹೆಚ್ಚಿಸದೇ, ಪೂರಕಗಳಿಗೆ ಬದಲಿಗಳಾಗಿ ಉಪಯೋಗಿಸಲ್ಪಟ್ಟಿವೆ. ವಾಸ್ತವದಲ್ಲಿ ಅವು, ಸುರಕ್ಷೆಯನ್ನು ಹೆಚ್ಚಿಸುತ್ತವೆ.
ರಿಕಾಂಬಿನೆಂಟ್ ಎರಿತ್ರೊಪೊಯಿಟಿನ್ ಎಂಬ ಹೆಸರಿನ ಆಶಾಯುಕ್ತ ಔಷಧಿಯೊಂದು ಇತ್ತೀಚೆಗೆ ಸೀಮಿತ ಉಪಯೋಗಕ್ಕಾಗಿ ಮಂಜೂರಾಗಿದೆ. ಅದು ದೇಹದ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ತರ್ವೆಗೊಳಿಸಿ, ವ್ಯಕ್ತಿಯು ತನ್ನ ಸ್ವಂತ ರಕ್ತವನ್ನು ಹೆಚ್ಚಿಸುವಂತೆ ಕಾರ್ಯಥ ನೆರವಾಗುತ್ತದೆ.
ರಕ್ತದ ಆಮ್ಲಜನಕ ಒಯ್ಯುವ ಗಮನಾರ್ಹ ಸಾಮರ್ಥ್ಯವನ್ನು ಅನುಕರಿಸುವ ಒಂದು ಪರಿಣಾಮಕಾರಿ ಬದಲೀಯನ್ನು ವಿಜ್ಞಾನಿಗಳು ಇನ್ನೂ ಹುಡುಕುತ್ತಿದ್ದಾರೆ. ಅಮೆರಿಕದಲ್ಲಿ ಅಂಥ ಬದಲೀಗಳನ್ನು ಉತ್ಪಾದಿಸುವವರಿಗೆ ತಮ್ಮ ಉತ್ಪನ್ನಗಳ ಮೇಲೆ ಮಂಜೂರಿಯನ್ನು ದೊರಕಿಸುವುದು ಬಲು ಕಷ್ಟ. ಅಂಥಾ ಉತ್ಪಾದಕನೊಬ್ಬನು ಆಕ್ಷೇಪಿಸಿದ್ದು: “ರಕ್ತವನ್ನು FDA (ಫುಡ್ ಆ್ಯಂಡ್ ಡ್ರಗ್ ಎಡ್ಮಿನಿಸ್ಟ್ರೇಶನ್)ನ ಮಂಜೂರಿಗಾಗಿ ತರುವ ಕುರಿತು ನೀವು ಯೋಚಿಸುವದಾದರೆ, ಅದರ ವಿಷಕಾರತ್ವವನ್ನು ಪರೀಕ್ಷಿಸುವಷ್ಟು ಅವಕಾಶವೂ ಅಲ್ಲಿಲ್ಲ.” ಆದರೂ, ರಕ್ತದ ಆಮ್ಲಜನಕವನ್ನೊಯ್ಯುವ ಒಂದು ಬದಲೀಯಾಗಿ ಮಂಜೂರಾಗುವ ಒಂದು ಪರಿಣಾಮಕಾರಿ ರಸಾಯನವನ್ನು ಕಂಡುಹಿಡಿಯುವ ಉನ್ನತ ನಿರೀಕ್ಷೆಗಳು ಅಲ್ಲಿವೆ.
ಹೀಗೆ, ಅಲ್ಲಿ ಆಯ್ಕೆಗಳಿವೆ. ಇಲ್ಲಿ ತಿಳಿಸಿರುವವುಗಳು ದೊರೆಯುವವುಗಳಲ್ಲಿ ಕೇವಲ ಕೆಲವು. ಸರ್ಜರಿ ಚಿಕಿತ್ಸೆಯ ಪ್ರೊಫೆಸರರಾದ ಹೊರೇಸ್ ಹರ್ಬ್ಸ್ಮ್ಯಾನ್ ಎಮರ್ಜೆನ್ಸೀ ಮೆಡಿಸಿನ್ ಪತ್ರಿಕೆಯಲ್ಲಿ ಬರೆದ ಪ್ರಕಾರ: “ನಮ್ಮಲ್ಲಿ . . . ರಕ್ತದ ಬದಲೀಯಾಗಿ ಇರುವ ಅನ್ಯಮಾರ್ಗಗಳು ಇವೆ ಎಂಬದು ತೀರಾ ಸ್ಪಷ್ಟ. ಪ್ರಾಯಶಃ ಯೆಹೋವನ ಸಾಕ್ಷಿಗಳೊಂದಿಗೆ ನಮ್ಮ ಅನುಭವವು, ನಾವು ಒಮ್ಮೆ ನೆನಸಿದ್ದ ಪ್ರಕಾರ, ಅವುಗಳ ಎಲ್ಲಾ ಸಂಭಾವ್ಯ ತೊಡಕುಗಳೊಂದಿಗೂ, ರಕ್ತಪೂರಣಗಳ ಮೇಲೆಯೇ ಹೊಂದಿಕೊಳ್ಳುವ ಅಗತ್ಯವಿಲ್ಲವೆಂಬದಕ್ಕೆ ಅರ್ಥವನ್ನು ಕೊಡಬಹುದು ನಿಶ್ಚಯ.” ಇವುಗಳಲ್ಲಿ ಯಾವುದೂ ನಿಜವಾಗಿ ಹೊಸದಲ್ಲ ಖಂಡಿತ. ಅಮೆರಿಕನ್ ಸರ್ಜನ್ ಗಮನಿಸಿದ ಪ್ರಕಾರ: “ದೊಡ್ಡ ಅಪರೇಶನುಗಳನ್ನೂ ರಕ್ತಪೂರಣಗಳಿಲ್ಲದೆ ಸುರಕ್ಷಿತವಾಗಿ ನಡಿಸ ಬಹುದೆಂಬದು ಕಳೆದ 25 ವರ್ಷಗಳಿಂದ ಚೆನ್ನಾಗಿ ದೃಢೀಕರಿಸಲ್ಪಟ್ಟಿದೆ.”
ಆದರೆ ರಕ್ತವು ಅಪಾಯಕಾರಿಯಾಗಿದ್ದರೆ ಮತ್ತು ಉಪಯೋಗಿಸಲು ಸುರಕ್ಷಿತವಾದ ಅನ್ಯ ಮಾರ್ಗಗಳು ಅಲ್ಲಿವೆಯಾದರೆ, ರಕ್ತಪೂರಣಗಳನ್ನು ಮಿಲ್ಯಾಂತರ ಜನರಿಗೆ ಅನಾವಾಶ್ಯಕವಾಗಿ—ಅನೇಕರಿಗೆ ಅವರಿಗೆ ಅರಿವಿಲ್ಲದೆ ಮತ್ತು ಇತರರಿಗೆ ಅವರ ಚಿತ್ತಕ್ಕೆ ವಿರೋಧವಾಗಿ, ನೀಡುವದೇಕೆ? ಅನ್ಯಮಾರ್ಗಗಳ ಕುರಿತು ಡಾಕ್ಟರರುಗಳನ್ನು ಮತ್ತು ಆಸ್ಪತ್ರೆಗಳನ್ನು ಸುಶಿಕ್ಷಿತರನ್ನಾಗಿ ಮಾಡಲು ತಪ್ಪಿರುವದು ಇದಕ್ಕೆ ಒಂದು ಅಂಶಿಕ ಕಾರಣವೆಂದು ಏಯ್ಡ್ಸ್ ಮೇಲಣ ಪ್ರೆಸಿಡೆನ್ಶ್ಯಲ್ ಕಮಿಶನ್ ಗಮನಿಸಿದೆ. ಅದು ಇನ್ನೊಂದು ಸಂಗತಿಯನ್ನೂ ದೂರುತ್ತದೆ: “ಕೆಲವು ಪ್ರಾದೇಶಿಕ ರಕ್ತ ಕೇಂದ್ರಗಳು ಪೂರಣ ಔಷಧೋಪಚಾರದ ಉಪಯೋಗವನ್ನು ಕಡಿಮೆಗೊಳಿಸುವ ವಿಷಯವನ್ನು ಪ್ರವರ್ಧಿಸಲು ಹಿಂಜರಿಯುತ್ತವೆ ಯಾಕಂದರೆ ಅವರ ಆದಾಯವು ರಕ್ತ ಮತ್ತು ರಕ್ತ ಉತ್ಪಾದನೆಗಳ ವಿಕ್ರಯದಿಂದಾಗಿ ಬರುವದರಿಂದಲೇ.”
ಇನ್ನೊಂದು ಮಾತಿನಲ್ಲಿ ಹೇಳುವದಾದರೆ, ರಕ್ತ ವಿಕ್ರಯವು ಒಂದು ದೊಡ್ಡ ವ್ಯಾಪಾರ. (g90 10/22)