ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು? ಬ್ರೋಷರಿನ ಅಭ್ಯಾಸದ ಪ್ರಶ್ನೆಗಳು
ಈ ಅಭ್ಯಾಸಗಳಲ್ಲಿ ಕೆಲವು ಕಡೆ, ಈ ಬ್ರೋಷರ್ನ 27-31ನೆಯ ಪುಟಗಳಲ್ಲಿರುವ ಪರಿಶಿಷ್ಟವನ್ನು ಸಹ ಸೂಚಿಸಲಾಗಿದೆ. ಇದರಲ್ಲಿ ಸೂಚಿಸಲ್ಪಟ್ಟ ಪ್ಯಾರಗ್ರಾಫ್ಗಳ ಉತ್ತರಗಳನ್ನು ಸಹ ಅಭ್ಯಾಸದಲ್ಲಿ ಒಳಗೂಡಿಸಬಹುದು. ಸಮಯವಿರುವಲ್ಲಿ, ಪರಿಶಿಷ್ಟದ ಪ್ಯಾರಗ್ರಾಫ್ಗಳನ್ನು ಸಹ ಓದಬಹುದು.
ಮೊದಲನೆಯ ವಾರ
ಪುಟ 2
1-4. ರಕ್ತವು ನಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು ಎಂಬ ವಿಷಯವನ್ನು ಪರಿಗಣಿಸುವುದು ಏಕೆ ಸಮಯೋಚಿತವಾದದ್ದಾಗಿದೆ? (ಪುಟ 27, ಪ್ಯಾರಗ್ರಾಫ್ 1-3ನ್ನು ಸಹ ನೋಡಿರಿ.)
ಪುಟ 3
1, 2. ರಕ್ತವು ಜೀವಕ್ಕೆ ಸಂಬಂಧಿಸಿದ್ದಾಗಿದೆಯೆಂದು ಪರಿಗಣಿಸುವುದು ಸಹಜವಾದದ್ದಾಗಿದೆ ಏಕೆ, ಮತ್ತು ಈ ವಿಷಯದಲ್ಲಿ ದೇವರು ಹೇಗೆ ಒಳಗೂಡಿದ್ದಾನೆ?
3, 4. ರಕ್ತದ ಕುರಿತು ದೇವರು ಹೇಳಲಿರುವ ವಿಷಯದಲ್ಲಿ ನಾವು ಏಕೆ ಆಸಕ್ತರಾಗಿರಬೇಕು?
5. ಯಾವ ಕಾರಣಕ್ಕಾಗಿ ನಾವು ಆದಿಕಾಂಡ 9:3-6ನೆಯ ವಚನಗಳಿಗೆ ಗಮನಕೊಡಬೇಕು, ಮತ್ತು ಆ ವಚನಗಳ ವೈಶಿಷ್ಟ್ಯತೆ ಏನು?
6. ರಕ್ತದ ವಿಷಯದಲ್ಲಿ ಇಸ್ರಾಯೇಲ್ಯರಿಗೆ ಯಾವ ಹಂಗುಗಳು ಇದ್ದವು?
ಪುಟ 4
1, 2. ಪುರಾತನ ಇಸ್ರಾಯೇಲ್ಯರಿಗೆ ದೇವರ ನಿಯಮಗಳು ಹೇಗೆ ಪ್ರಯೋಜನಕರವಾಗಿದ್ದವು, ಆದರೆ ಇಸ್ರಾಯೇಲ್ಯರು ರಕ್ತವನ್ನು ವಿಸರ್ಜಿಸಿದ್ದರ ಹಿಂದಿದ್ದ ಮುಖ್ಯ ಕಾರಣವು ಯಾವುದಾಗಿತ್ತು?
3. ತುರ್ತುಪರಿಸ್ಥಿತಿಯಲ್ಲಿಯೂ ರಕ್ತದ ಕುರಿತಾದ ನಿಯಮವನ್ನು ಹೇಗೆ ಪರಿಗಣಿಸಲಾಗುತ್ತಿತ್ತು?
ಪುಟ 5
1, 2. ರಕ್ತದ ನಿಯಮದ ವಿಷಯದಲ್ಲಿ ಯೇಸು ಯಾವ ಮಾದರಿಯನ್ನಿಟ್ಟನು?
3, 4. (ಎ) ಕ್ರೈಸ್ತರು ಹಾಗೂ ರಕ್ತದ ವಿಷಯದಲ್ಲಿ ಅಪೊಸ್ತಲರ ಮಂಡಲಿಯು ಯಾವ ನಿರ್ಧಾರಕ್ಕೆ ಬಂತು? (ಬಿ) ರಕ್ತವನ್ನು ವಿಸರ್ಜಿಸುವಂತಹ ನಿಯಮವು ಕೇವಲ ಒಂದು ತಾತ್ಕಾಲಿಕ ಆಜ್ಞೆಯಾಗಿತ್ತೋ ಅಲ್ಲವೋ ಎಂಬುದು ನಮಗೆ ಹೇಗೆ ಗೊತ್ತು?
5. ಯೇಸುವಿನ ಅಪೊಸ್ತಲರಿಗನುಸಾರ, ರಕ್ತವನ್ನು ವಿಸರ್ಜಿಸುವುದು ಎಷ್ಟು ಪ್ರಾಮುಖ್ಯವಾದದ್ದಾಗಿತ್ತು?
6, 7. ರಕ್ತದ ಕುರಿತಾದ ಆಜ್ಞೆಯು ಶಾಶ್ವತವಾದ ಆವಶ್ಯಕತೆಯಾಗಿತ್ತು ಎಂಬುದನ್ನು ಯಾವ ಹೆಚ್ಚಿನ ಪುರಾವೆಗಳು ರುಜುಪಡಿಸುತ್ತವೆ?
ಪುಟ 6
1, 2. ಕ್ರೈಸ್ತಪೂರ್ವ ಸಮಯಗಳಲ್ಲಿ ರಕ್ತವನ್ನು ವೈದ್ಯಕೀಯ ಉದ್ದೇಶಗಳಿಗಾಗಿ ಹೇಗೆ ಉಪಯೋಗಿಸಲಾಗುತ್ತಿತ್ತು?
3. ರೋಮನ್ ಸಮಯಗಳಲ್ಲಿ, ವೈದ್ಯಕೀಯ ಉದ್ದೇಶಗಳಿಗಾಗಿರುವ ರಕ್ತದ ಉಪಯೋಗದ ಆಜ್ಞೆಗೆ ಆದಿ ಕ್ರೈಸ್ತರು ಹೇಗೆ ಪ್ರತಿಕ್ರಿಯಿಸಿದರು?
4-6. (ಎ) ರಕ್ತ ಪೂರಣಗಳ ಉಪಯೋಗವು ಹೇಗೆ ಆರಂಭವಾಯಿತು? (ಬಿ) ದೇವರ ನಿಯಮವನ್ನು ಪರಿಗಣಿಸುವಾಗ, ಅಭಿಧಮನಿಗಳ ಮೂಲಕ ಮಾಡಲ್ಪಡುವ ರಕ್ತ ಪೂರಣವು ಸಹ ತಪ್ಪಾಗಿರುವುದು ಏಕೆ?
7. ಯೆಹೋವನ ಸಾಕ್ಷಿಗಳು ರಕ್ತ ಪೂರಣವನ್ನು ಏಕೆ ನಿರಾಕರಿಸುತ್ತಾರೆ? (ಪುಟ 27, ಪ್ಯಾರಗ್ರಾಫ್ 4-6, ಮತ್ತು ಪುಟ 28, ಪ್ಯಾರಗ್ರಾಫ್ 1ನ್ನು ನೋಡಿರಿ.)
ಪುಟ 7
1. ಕ್ರೈಸ್ತರು ರಕ್ತ ಪೂರಣವನ್ನು ನಿರಾಕರಿಸುವ ಮುಖ್ಯ ಕಾರಣವು ಧಾರ್ಮಿಕವಾದದ್ದಾಗಿರುವುದಾದರೂ, ರಕ್ತ ಚಿಕಿತ್ಸೆಯ ಕುರಿತಾದ ವೈದ್ಯಕೀಯ ಅಂಶಗಳನ್ನು ನಾವು ಏಕೆ ಪರೀಕ್ಷಿಸಬೇಕು?
ಎರಡನೆಯ ವಾರ
ಪುಟ 7
2, 3. ಆಧುನಿಕ ವೈದ್ಯಕೀಯ ಜಗತ್ತಿನಲ್ಲಿ ರಕ್ತ ಪೂರಣಗಳಿಗೆ ಯಾವ ಸ್ಥಾನವಿದೆ?
4, 5. ರಕ್ತ ಪೂರಣಗಳು ಅಪಾಯಕರವಾಗಿವೆಯೋ ಎಂಬುದನ್ನು ಪರಿಗಣಿಸುವುದು ವಿವೇಕಯುತವಾಗಿದೆ ಏಕೆ?
ಪುಟ 8
1. ರಕ್ತ ಪೂರಣಗಳ ಕುರಿತು ಏನನ್ನು ನಾವು ವಿವೇಚನೆಯಿಂದ ಕೇಳುತ್ತೇವೆ?
2, 3. ರಕ್ತ ಪ್ರತ್ಯೇಕತೆ ಮತ್ತು ಅಡ್ಡ ಸರಿಸಮಾನತೆಗಳು ಸಂದಿಗ್ಧವಾಗಿರುವುದಾದರೂ, ಸಾಕಾಗಿರಬೇಕೆಂದಿಲ್ಲವೇಕೆ?
4, 5. ರಕ್ತ ಪೂರಣವು ಹೇಗೆ ರೋಗರಕ್ಷಾಸ್ಥಿತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಲ್ಲದು?
6, 7. ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ಬಳಿಕ ರಕ್ತ ಪೂರಣಗಳು ಯಾವ ರೀತಿಯ ಹಾನಿಯನ್ನು ಉಂಟುಮಾಡಬಹುದು?
ಪುಟ 9
1. ರಕ್ತ ಪೂರಣ ಹಾಗೂ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ಕುರಿತಾದ ಪುರಾವೆಯ ವಿಶೇಷತೆ ಏನಾಗಿದೆ?
2, 3. ಇನ್ನಿತರ ಯಾವ ರೋಗರಕ್ಷಾಸ್ಥಿತಿಯ ಹಾನಿಯನ್ನು ರಕ್ತ ಪೂರಣಗಳು ಉಂಟುಮಾಡಬಹುದು?
4, 5. ರಕ್ತ ಪೂರಣಗಳಿಂದ ಬರುವ ರೋಗಗಳ ಅಪಾಯದ ಬಗ್ಗೆ ಜನರು ತಿಳಿದುಕೊಳ್ಳಬೇಕಾದ ಅಗತ್ಯ ಏಕಿದೆ?
ಪುಟ 10 (ರೇಖಾಚೌಕ)
1, 2. ರಕ್ತ ಪೂರಣದಿಂದ ರವಾನಿಸಲ್ಪಡುವ ಯಕೃತ್ತಿನ ಊತದ ಅಪಾಯವು ಎಷ್ಟು ಗಂಭೀರವಾದದ್ದಾಗಿದೆ?
3. ಒಂದು ಹಂತದಲ್ಲಿ, ರಕ್ತದಿಂದ ಯಕೃತ್ತಿನ ಊತವು ಉಂಟಾಗುವ ಅಪಾಯವು ಜಯಿಸಲ್ಪಟ್ಟಿದೆ ಎಂಬಂತೆ ಏಕೆ ಕಂಡುಬಂತು?
4, 5. ರಕ್ತದಿಂದ ಯಕೃತ್ತಿನ ಊತವು ಬರುವ ಅಪಾಯವನ್ನು ಅಲಕ್ಷಿಸಸಾಧ್ಯವಿಲ್ಲ ಎಂಬುದನ್ನು ಯಾವ ವಿಕಸನಗಳು ರುಜುಪಡಿಸಿದವು?
6-8. ಯಕೃತ್ತಿನ ಊತದ ಕುರಿತಾದ ಚಿಂತೆಯು ಗತಕಾಲದ ವಿಷಯವಾಗಿರುವುದಿಲ್ಲ ಏಕೆ?
ಪುಟ 11
1. ರಕ್ತದಿಂದ ಉಂಟಾಗುವ ರೋಗದ ಅಪಾಯಗಳು ಕಾಣೆಯಾಗುತ್ತಿವೆ ಎಂದು ಹೇಳಸಾಧ್ಯವಿಲ್ಲ ಎಂಬುದನ್ನು ಯಾವುದು ಉದಾಹರಿಸಬಹುದು?
2-4. ಒಬ್ಬ ವ್ಯಕ್ತಿಯ ಕ್ಷೇತ್ರದಲ್ಲಿ ಅಸಾಮಾನ್ಯವಾಗಿರುವ ರೋಗಗಳಿಗೆ, ರಕ್ತವು ಒಬ್ಬನನ್ನು ಹೇಗೆ ಒಡ್ಡಸಾಧ್ಯವಿದೆ? (ಪುಟ 11ರಲ್ಲಿರುವ ರೇಖಾಚೌಕವನ್ನೂ ನೋಡಿರಿ.)
5-7. ಹೊಸ, ಮಾರಕ ರೋಗಗಳನ್ನು ರಕ್ತದೊಂದಿಗೆ ಸಂಬಂಧಿಸಬಹುದು ಎಂಬುದನ್ನು, ಏಯ್ಡ್ಸ್ ಸರ್ವವ್ಯಾಪಿ ವ್ಯಾಧಿಯು ಹೇಗೆ ರುಜುಪಡಿಸಿದೆ?
ಪುಟ 12
1, 2. ಏಯ್ಡ್ಸ್ ವೈರಸ್ನ ಪ್ರತಿವಿಷ ವಸ್ತುಗಳನ್ನು ಕಂಡುಹಿಡಿಯಲಿಕ್ಕಾಗಿ ಮಾಡಲ್ಪಡುವ ಪರೀಕ್ಷೆಗಳು, ರಕ್ತವು ಅಪಾಯರಹಿತವಾಗಿದೆ ಎಂಬ ಖಾತ್ರಿಯನ್ನು ಏಕೆ ನೀಡಲಾರವು?
3-5. ಏಯ್ಡ್ಸ್ ವೈರಸ್ನ ಬೆದರಿಕೆಯೇ ವಿಷಯದ ಅಂತ್ಯವಾಗಿರುವುದಿಲ್ಲ ಏಕೆ?
6, 7. ರಕ್ತ ರವಾನಿತ ವೈರಸ್ಗಳ ಕುರಿತು ಪರಿಣತರಿಗೆ ಯಾವ ಸಮಂಜಸ ಚಿಂತೆಗಳಿವೆ?
ಮೂರನೆಯ ವಾರ
ಪುಟ 13
1, 2. ಯಾರು ಶ್ರೇಷ್ಠ ಮಟ್ಟದ ವೈದ್ಯಕೀಯ ಆರೈಕೆಯನ್ನು ಬಯಸುತ್ತಾರೆ, ಮತ್ತು ಇದರಲ್ಲಿ ಏನು ಒಳಗೂಡಿದೆ?
3-5. ರಕ್ತ ಪೂರಣಗಳಿಗೆ ಬದಲಾಗಿ ಇನ್ನಿತರ ಅನ್ಯಮಾರ್ಗಗಳಿವೆ ಎಂಬುದನ್ನು ನೀವು ಹೇಗೆ ದೃಷ್ಟಾಂತಿಸಸಾಧ್ಯವಿದೆ?
6-8. ಅನೇಕವೇಳೆ ಯಾವಾಗ ರಕ್ತ ಪೂರಣವು ನೀಡಲ್ಪಟ್ಟಿದೆ, ಆದರೆ ಈ ರೂಢಿಗೆ ಯಾವುದೇ ಆಧಾರವಿಲ್ಲವೇಕೆ?
ಪುಟ 14
1. ಸಾಮಾನ್ಯಕ್ಕಿಂತ ಕಡಿಮೆ ಇರುವ ಹಿಮೊಗ್ಲೋಬಿನ್ ಮಟ್ಟವನ್ನು ಹೊಂದಿಸಿಕೊಳ್ಳಸಾಧ್ಯವಿದೆ ಎಂಬುದನ್ನು ಯಾವುದು ಸೂಚಿಸುತ್ತದೆ?
2, 3. ತುಂಬ ರಕ್ತ ನಷ್ಟವಾಗುವಲ್ಲಿ, ಯಾವುದರ ಅಗತ್ಯವಿದೆ, ಮತ್ತು ಈ ಸಮಸ್ಯೆಯನ್ನು ಹೇಗೆ ಬಗೆಹರಿಸಸಾಧ್ಯವಿದೆ?
4. ಅರಕ್ತ ಭರ್ತಿ ದ್ರವಗಳು ಏಕೆ ಪರಿಣಾಮಕಾರಿಯಾಗಿ ಕಾರ್ಯನಡಿಸುತ್ತವೆ?
5. ಕೆಂಪು ರಕ್ತ ಕಣಗಳ ನಷ್ಟವನ್ನು ನಿಭಾಯಿಸಲಿಕ್ಕಾಗಿ ವೈದ್ಯರು ರೋಗಿಗೆ ಹೇಗೆ ಸಹಾಯಮಾಡಬಲ್ಲರು?
ಪುಟ 15
1. ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ವೇಗಗೊಳಿಸಲಿಕ್ಕಾಗಿ ಏನು ಮಾಡಸಾಧ್ಯವಿದೆ?
2-4. ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ರಕ್ತ ನಷ್ಟವನ್ನು ಹೇಗೆ ಕಡಿಮೆಮಾಡಸಾಧ್ಯವಿದೆ?
ಪುಟ 16
1-3. ರಕ್ತ ಪೂರಣದ ಸಹಾಯವಿಲ್ಲದೆ ಒಂದು ದೊಡ್ಡ ಶಸ್ತ್ರಚಿಕಿತ್ಸೆಯನ್ನು ಮಾಡಸಾಧ್ಯವಿದೆ ಎಂಬುದನ್ನು ಯಾವ ರುಜುವಾತು ತೋರಿಸುತ್ತದೆ?
4-6. ರಕ್ತವನ್ನು ಉಪಯೋಗಿಸದೆ ಬೇರೆ ಬೇರೆ ರೀತಿಯ ಯಾವ ಶಸ್ತ್ರಚಿಕಿತ್ಸೆಗಳನ್ನು ಮಾಡಸಾಧ್ಯವಿದೆ? (ಪುಟ 28, ಪ್ಯಾರಗ್ರಾಫ್ 2-4ನ್ನು ನೋಡಿರಿ.)
ಪುಟ 17
1. ರಕ್ತವು ಕೊಡಲ್ಪಡದಿದ್ದಂತಹ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಯಾವ ಒಳ್ಳೇ ಫಲಿತಾಂಶಗಳನ್ನು ಪಡೆದುಕೊಳ್ಳಲಾಗಿದೆ?
2-4. ರಕ್ತರಹಿತ ಶಸ್ತ್ರಚಿಕಿತ್ಸೆಯಲ್ಲಿ ಸಿಗುವಂತಹ ಅತ್ಯುತ್ತಮ ಫಲಿತಾಂಶಕ್ಕೆ, ಯೆಹೋವನ ಸಾಕ್ಷಿಗಳಾಗಿರುವಂತಹ ರೋಗಿಗಳು ಸ್ವತಃ ಹೇಗೆ ನೆರವನ್ನು ನೀಡುತ್ತಾರೆ?
ನಾಲ್ಕನೆಯ ವಾರ
ಪುಟ 17
5, 6. ರಿಸ್ಕ್/ಬೆನೆಫಿಟ್ ಎನಾಲಿಸಿಸ್ ಎಂದರೇನು, ಮತ್ತು ಇದನ್ನು ಹೇಗೆ ಉಪಯೋಗಿಸಲಾಗುತ್ತದೆ?
ಪುಟ 19
1, 2. ರಿಸ್ಕ್/ಬೆನೆಫಿಟ್ ಎನಾಲಿಸಿಸ್ನಲ್ಲಿ ರೋಗಿಯು ಯಾವ ಪಾತ್ರವನ್ನು ವಹಿಸುತ್ತಾನೆ?
3-5. ರಕ್ತ ಪೂರಣದ ಅಪಾಯಗಳು ಮತ್ತು ಪ್ರಯೋಜನಗಳನ್ನು ತೂಗಿನೋಡುವುದರಲ್ಲಿ ರಕ್ತದ ಚಿಕಿತ್ಸೆಯು ಸೂಕ್ತವಾಗಿಯೇ ಒಳಗೂಡಿದೆ ಏಕೆ? (ಪುಟ 31, ಪ್ಯಾರಗ್ರಾಫ್ 1, 2ನ್ನು ನೋಡಿ.)
6. ವೈದ್ಯಕೀಯ ಚಿಕಿತ್ಸೆಗಳನ್ನು ಆಯ್ಕೆಮಾಡುವ ಹಕ್ಕು ನಿಮಗಿದೆ ಎಂಬುದಕ್ಕೆ ಯಾವ ಕಾನೂನು ರುಜುಪಡಿಸುತ್ತದೆ? (ಪುಟ 30, ಪ್ಯಾರಗ್ರಾಫ್ 1-8ನ್ನು ನೋಡಿ.)
ಪುಟ 18 (ರೇಖಾಚೌಕ)
1-4. ವೈದ್ಯಕೀಯ ಸಿಬ್ಬಂದಿಗಳ ಶಾಸನಬದ್ಧ ಸಮಸ್ಯೆಗಳನ್ನು ದೂರಮಾಡಲಿಕ್ಕಾಗಿ ಯೆಹೋವನ ಸಾಕ್ಷಿಗಳಾಗಿರುವ ರೋಗಿಗಳು ಏನು ಮಾಡುತ್ತಾರೆ? (ಪುಟ 28, ಪ್ಯಾರಗ್ರಾಫ್ 5ನ್ನು ನೋಡಿ.)
5-7. ಶಾಸನಬದ್ಧ ಸಮಸ್ಯೆಗಳನ್ನು ಪರಿಹರಿಸಲು ಸಾಕ್ಷಿಗಳು ತೆಗೆದುಕೊಳ್ಳುವ ಸೂಕ್ತಕ್ರಮಗಳನ್ನು ನೋಡುವಾಗ, ವೈದ್ಯರು ಹಾಗೂ ಆಸ್ಪತ್ರೆಗಳು ಇವರೊಂದಿಗೆ ಸಹಕರಿಸುವುದು ವಿವೇಚನಾರ್ಹವಾದದ್ದಾಗಿದೆ ಏಕೆ?
ಪುಟ 20
1-3. ಸಾಕ್ಷಿಗಳು ತೆಗೆದುಕೊಳ್ಳುವ ನಿಲುವಿಗೆ ಕೆಲವು ವೈದ್ಯಕೀಯ ಸಿಬ್ಬಂದಿಗಳು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ?
4, 5. ಯೆಹೋವನ ಸಾಕ್ಷಿಗಳಾಗಿರುವ ರೋಗಿಗಳ ಕೆಲವೊಂದು ಕೇಸ್ಗಳಲ್ಲಿ, ಕೋರ್ಟುಗಳು ಯಾವ ರೀತಿಯಲ್ಲಿ ಒಳಗೂಡಿವೆ?
6, ಪುಟ 21, 1. ಸಾಕ್ಷಿಗಳು ಹಾಗೂ ರಕ್ತವನ್ನು ಒಳಗೊಂಡಿರುವ ಕೇಸ್ಗಳನ್ನು ನಿರ್ವಹಿಸಲು, ಕೋರ್ಟುಗಳ ಮೊರೆಹೋಗುವುದು ಅತ್ಯುತ್ತಮ ಮಾರ್ಗವಾಗಿರುವುದಿಲ್ಲವೇಕೆ?
ಪುಟ 21
2, 3. ಒಂದು ಮಗುವು ರೋಗಿಯಾಗಿರುವಾಗಲೂ, ಕೋರ್ಟುಗಳ ಮೊರೆಹೋಗುವುದು ಯಾವ ಕಾರಣಗಳಿಂದಾಗಿ ಅಯುಕ್ತವಾದದ್ದಾಗಿದೆ?
4, 5. ಮಕ್ಕಳಿಗಾಗಿ ಚಿಕಿತ್ಸೆಯನ್ನು ಆಯ್ಕೆಮಾಡುವಾಗ, ಹೆತ್ತವರ ಯಾವ ಹಕ್ಕು ಉಪಯೋಗಕ್ಕೆ ಬರುತ್ತದೆ? (ಪುಟ 28, ಪ್ಯಾರಗ್ರಾಫ್ 6, ಮತ್ತು ಪುಟ 29, ಪ್ಯಾರಗ್ರಾಫ್ 1ನ್ನು ನೋಡಿರಿ.)
6, ಪುಟ 22, 1-3. ತಮ್ಮ ಮಕ್ಕಳಿಗಾಗಿ ವೈದ್ಯಕೀಯ ನಿರ್ಣಯಗಳನ್ನು ಮಾಡಲು ಹೆತ್ತವರು ಸ್ವತಂತ್ರರಾಗಿರಬೇಕು ಎಂಬುದಕ್ಕಿರುವ ಕೆಲವು ಶಾಸನಬದ್ಧ ಸೂಚನೆಗಳು ಯಾವುವು?
ಪುಟ 22
4. ಸಾಕ್ಷಿ ಹೆತ್ತವರು ಮತ್ತು ವೈದ್ಯಕೀಯ ಸಿಬ್ಬಂದಿಯು ಒಟ್ಟಿಗೆ ಕಾರ್ಯನಡಿಸಬೇಕು ಏಕೆ?
ಐದನೆಯ ವಾರ
ಪುಟ 22
5, 6. ರಕ್ತ ಹಾಗೂ ರಕ್ತರಹಿತ ವೈದ್ಯಕೀಯ ಸಿಬ್ಬಂದಿಗಾಗಿರುವ ಒಬ್ಬ ಸಾಕ್ಷಿಯು ಮಾಡಿಕೊಳ್ಳುವ ವಿನಂತಿಯ ಯಾವ ಮುಖ್ಯಾಂಶಗಳನ್ನು ನೀವು ಮನಸ್ಸಿನಲ್ಲಿಟ್ಟುಕೊಂಡಿರಬೇಕು?
ಪುಟ 23
1-3. ರಕ್ತವನ್ನು ತೆಗೆದುಕೊಳ್ಳಲು ನಿರಾಕರಿಸುವ ಮೂಲಕ ಒಬ್ಬನು ಸಾಯುವುದಾದರೂ, ನಾವು ಯಾವುದನ್ನು ಅಲಕ್ಷಿಸಬಾರದು? (ಪುಟ 29, ಪ್ಯಾರಗ್ರಾಫ್ 2-5, ಮತ್ತು ಪುಟ 31, ಪ್ಯಾರಗ್ರಾಫ್ 3-5)
4, 5. ಮರಣ ಹಾಗೂ ರಕ್ತದ ವಿಷಯದಲ್ಲಿ ಯಾವುದು ವಾಸ್ತವಿಕ ದೃಷ್ಟಿಕೋನವಾಗಿದೆ?
ಪುಟ 24
1, 2. ಯಾವ ರೀತಿಯಲ್ಲಿ ರಕ್ತವು ನಿಜವಾಗಿಯೂ ಜೀವರಕ್ಷಕವಾಗಿದೆ ಎಂಬುದನ್ನು ಗಣ್ಯಮಾಡುವಂತೆ ನಮಗೆ ಯಾವುದು ಸಹಾಯಮಾಡಸಾಧ್ಯವಿದೆ?
3, 4. ಕ್ರೈಸ್ತಪೂರ್ವ ಸಮಯಗಳಲ್ಲಿ, ರಕ್ತದ ಕುರಿತು ದೇವರ ದೃಷ್ಟಿಕೋನವೇನಾಗಿತ್ತು, ಮತ್ತು ಏಕೆ?
ಪುಟ 25
1. ಪ್ರಾಯಶ್ಚಿತ್ತ ದಿನದಲ್ಲಿ ರಕ್ತವು ಹೇಗೆ ಒಳಗೂಡಿತ್ತು, ಮತ್ತು ನಾವು ಇದಕ್ಕೆ ಏಕೆ ಗಮನಕೊಡಬೇಕಾಗಿದೆ?
2, 3. ಪ್ರಾಯಶ್ಚಿತ್ತ ದಿನ ಹಾಗೂ ಯೇಸುವಿನ ಪಾತ್ರದ ನಡುವೆ ಯಾವ ಸಂಬಂಧವಿದೆ?
4. (ಎ) ಕ್ರೈಸ್ತರು ರಕ್ತವನ್ನು ವಿಸರ್ಜಿಸಬೇಕು ಎಂಬುದಕ್ಕಿರುವ ಮುಖ್ಯ ಕಾರಣವು ಯಾವುದು? (ಬಿ) ರಕ್ತ ಪೂರಣಗಳ ಅಪಾಯಗಳಿಗೆ ನಾವು ಹೆಚ್ಚು ಒತ್ತನ್ನು ಏಕೆ ಕೊಡಬಾರದಾಗಿದೆ?
5, 6. (ಎ) ರಕ್ತವು ದೇವರೊಂದಿಗಿನ ನಮ್ಮ ನಿಲುವಿಗೆ ಹೇಗೆ ಸಂಬಂಧಿಸಿದ್ದಾಗಿದೆ? (ಬಿ) ರಕ್ತದ ಕುರಿತಾದ ನಮ್ಮ ದೃಷ್ಟಿಕೋನಕ್ಕೆ ಕೇಂದ್ರಬಿಂದುವಾಗಿರುವ ಯಾವ ಬೋಧನೆಯನ್ನು ನಾವು ಅರ್ಥಮಾಡಿಕೊಳ್ಳಬೇಕು?
7. ರಕ್ತದ ಕುರಿತಾದ ಸಾಕ್ಷಿಗಳ ನಿಲುವು, ಜೀವಕ್ಕೆ ಗೌರವವನ್ನು ತೋರಿಸುತ್ತದೆ ಎಂದು ನಾವೇಕೆ ಹೇಳಸಾಧ್ಯವಿದೆ?
ಪುಟ 26
1, 2. ನಮ್ಮ ನಿತ್ಯ ಭವಿಷ್ಯತ್ತಿನಲ್ಲಿ ರಕ್ತವು ಹೇಗೆ ಒಳಗೂಡಿದೆ?