ನಮ್ಮ ವಾಚಕರಿಂದ
“ಏವೇಕ್!” ಕಾಲೇಜಿಗೆ ಹೋಗುತ್ತದೆ ನಾನು ಒಬ್ಬ ಇಂಗ್ಲಿಷ್ ಪ್ರೊಫೆಸರ್‌ನಾಗಿದ್ದೇನೆ, ಮತ್ತು ಕಳೆದ ಏಳು ವರ್ಷಗಳಿಂದ, ನನ್ನ ಕಾಲೇಜಿನ ಪ್ರಬಂಧ ರಚನೆಯ ಪಾಠಕ್ರಮದಲ್ಲಿ ಏವೇಕ್!ನ್ನು ನಾನು ಬಳಸುತ್ತಾ ಇದ್ದೇನೆ. . . . ಏವೇಕ್!ನಲ್ಲಿರುವ ಲೇಖನಗಳು ವಿನೋದಕರ ಹಾಗೂ ಸವಿವರಣೆಯದ್ದಾಗಿರುವದು ಮಾತ್ರವಲ್ಲ, ವ್ಯಾಕರಣದ ಗುಣಮಟ್ಟದಲ್ಲಿ ಅತ್ಯಂತ ಉನ್ನತ ಹಂತದ್ದಾಗಿರುತ್ತದೆ. ವಿರಾಮ ಚಿಹ್ನೆ ಹಾಕುವ ಯೋಗ್ಯ ಪ್ರಯೋಗ, ನುಡಿಗಟ್ಟಿನ ವ್ಯಕ್ತಪಡಿಸುವಿಕೆಗಳು, ಲಾಕ್ಷಣಿಕ ಭಾಷೆ ಮತ್ತು ಪದವಿನ್ಯಾಸಗಳನ್ನು ಉಲ್ಲೇಖಿಸಲು ನಾನು ಅದನ್ನು ಬಳಸುತ್ತೇನೆ.
ಜೆ. ಡಿ. ಜಿ., ಅಮೆರಿಕ (g91 2/22)
ಜಗಳವಾಡುವ ಹೆತ್ತವರು “ಯುವ ಜನರು ಪ್ರಶ್ನಿಸುವದು . . . ನನ್ನ ಹೆತ್ತವರು ಜಗಳವಾಡಿದರೆ ನಾನೇನು ಮಾಡಬೇಕು?” (ಆಗಸ್ಟ್ 8, 1991) ಎಂಬ ನಿಮ್ಮ ಲೇಖನದಲ್ಲಿ, ಹೆತ್ತವರು ಜಗಳವಾಡುವಾಗ ತನ್ನನ್ನು ಕ್ಷಮಿಸುವಂತೆ ಯಾಚಿಸಿ, ಎಳೆಯನೊಬ್ಬನು ತನ್ನ ಕೋಣೆಗೆ ತೆರಳಬೇಕೆಂದು ನೀವು ಸೂಚಿಸಿದ್ದೀರಿ. ಇದು ಬಹಳ ಗಂಡಾಂತರದ್ದು ಮತ್ತು ಅಪಾಯಕರವೆಂದು ನಾನು ಕಾಣುತ್ತೇನೆ. ಜಗಳವಾಡುವ ಸ್ಥಳವನ್ನು ನಾನು ಖಾಲಿಮಾಡಿದರೆ, ನನ್ನ ಆಕ್ರಮಿಸುವ ತಂದೆಯು ನನ್ನ ತಾಯಿಯನ್ನು ಕೊಲ್ಲಬಲ್ಲನು! ಅವರು ಜಗಳವಾಡುವಾಗ ಅವರನ್ನು ಬೇರ್ಪಡಿಸಲು ಹಾಜರಿರುವದು ಯಾವಾಗಲೂ ಅತಿ ಮೌಲ್ಯತೆಯದ್ದು ಎಂದು ನಾನು ಕಾಣುತ್ತೇನೆ.
ಪಿ. ಎಂ. ಇ. ನೈಜೀರಿಯ
ಲೇಖನದ ಪಾದಟಿಪ್ಪಣಿಯೊಂದು ಹೇಳಿದ್ದು: “ಹಿಂಸಾಚಾರದಿಂದ ಕುಟುಂಬದ ಸದಸ್ಯರನ್ನು ಬೆದರಿಸುವ ದೂಷಣೀಯ ತಂದೆಗಳ ಸನ್ನಿವೇಶಗಳಿಗೆ ನಾವು ಸೂಚಿಸುವದಿಲ್ಲ.” ಸನ್ನಿವೇಶಗಳು ವಿವಿಧತೆಯದ್ದಾಗಿರುತ್ತವೆ, ಮತ್ತು ಅವನ ಹೆತ್ತವರಲ್ಲೊಬ್ಬನ ಸುರಕ್ಷತೆಗಾಗಿ ಯುವಕನೊಬ್ಬನಿಗೆ ಕ್ರಮಬದ್ಧವಾಗಿರುವ ಚಿಂತೆ ಇರಬಹುದು. ಈ ರೀತಿಯಲ್ಲಿ ಪಾದ ಟಿಪ್ಪಣಿಯು ಕೂಡಿಸಿದ್ದು: “ಅಂಥಹ ಸಂದರ್ಭಗಳಲ್ಲಿ, ದೈಹಿಕ ಹಾನಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹೊರಗಣ ಸಹಾಯವನ್ನು ಪಡೆದುಕೊಳ್ಳುವಂತೆ ಕುಟುಂಬ ಸದಸ್ಯರು ಬಲಾತ್ಕರಿಸಲ್ಪಡಬಹುದು.”—ಸಂಪಾ. (g90 8/22)
“ಯಂಗ್ ಪಿಪಲ್ ಆಸ್ಕ್” ಪುಸ್ತಕ “ಯಂಗ್ ಪಿಪಲ್ ಆಸ್ಕ್ ಎಂಬ ಪುಸ್ತಕಕ್ಕೆ ವಾಚಕರ ಪ್ರತಿಕ್ರಿಯೆ” (ಸಪ್ಟಂಬರ 8, 1991) ಲೇಖನವನ್ನು ನಾನು ಬಹಳ ಆಸಕ್ತಿಯಿಂದ ಓದಿದೆನು. ಈ ಸಂಚಿಕೆಯನ್ನು ಪಡೆಯುವ ಸ್ವಲ್ಪ ಮುಂಚೆ, ಒಬ್ಬ ವಯಸ್ಸಾದ ಬೈಬಲ್ ವಿದ್ಯಾರ್ಥಿಗೆ ನಾನು ಪುಸ್ತಕವನ್ನು ಹಸ್ತಾಂತರಿಸಿದ್ದೆನು, ಅವಳು ಅದನ್ನು ಅವಳ ಮೊಮ್ಮಗಳಿಗೆ ಕೊಡಲು ಸೂಚಿಸಿದ್ದೆನು. ಆದಾಗ್ಯೂ, ನಾನವಳನ್ನು ಮುಂದಿನ ಸಾರಿ ಭೇಟಿಯಾದಾಗ, ಈ ವಯಸ್ಸಾದ ಸ್ತ್ರೀಯು ಸ್ವತಃ ಅದನ್ನು ಪೂರ್ತಿಯಾಗಿ ಓದಿದ್ದಳು. ನಾನು “74 ವರ್ಷ ಎಳೆಯ” ಸ್ತ್ರೀಯೊಬ್ಬಳು ಅದನ್ನು ಓದಿ ಪ್ರಯೋಜನ ಪಡೆದ ಕುರಿತು ಲೇಖನದಲ್ಲಿರುವದನ್ನು ತೋರಿಸಿದೆನು. ಅವಳು ಅದನ್ನು ಓದಿದಾಗ ಅವಳಂದದ್ದು: “ನಾನು ಇದನ್ನು ಒಪ್ಪುತ್ತೇನೆ. ನನ್ನ ಮೊಮ್ಮಗುವಿಗೆ ನಾನದನ್ನು ಕೊಡುವ ಮೊದಲು ಪುಸ್ತಕದಲ್ಲಿ ಏನಿದೆ ಎಂದು ನಾನು ಗೊತ್ತುಮಾಡ ಬೇಕು ಎಂದು ನಾನೆಣಿಸಿದೆನು, ಆದರೆ ನಾನು ಅದನ್ನು ಪೂರ್ಣವಾಗಿ ಓದುವದರಲ್ಲಿ ತಲ್ಲೀನಳಾದೆನು.’ ಆಕಸ್ಮಿಕತೆಯೋ ಎಂಬಂತೆ, ಅವಳು 80 ವರ್ಷ ಪ್ರಾಯದ “ಎಳೆಯ”ಳಾಗಿದ್ದಾಳೆ!
ಕೆ. ಏಚ್., ಜಪಾನ್ (g90 12/22)
ಯುವಜನರು—1990ರ ಪಂಥಾಹ್ವಾನ ನಾನು 13 ವರ್ಷ ಪ್ರಾಯದ ಹುಡುಗಿ, ಮತ್ತು ಯುವಜನರ ಕುರಿತಾದ ಲೇಖನವನ್ನು ನಾನು ನಿಜವಾಗಿ ಆನಂದಿಸಿದೆನು ಎಂದು ನಿಮಗೆ ಹೇಳಲು ನಾನು ಬಯಸುತ್ತೇನೆ. ನನಗೆ ಏವೇಕ್!ನ ಚಂದಾ ಇದೆ. ಆದರೆ ಅಂಚೆಯ ಮೂಲಕ ನಾನದನ್ನು ಪಡೆದಾಗ, ಅದನ್ನು ನಾನು ದೂರವಿಡುತ್ತಿದ್ದೆನು. ಆದರೆ ಇದು ನನ್ನ ಗಮನವನ್ನು ಆಕರ್ಷಿಸಿತು, ಆದುದರಿಂದ ನಾನದನ್ನು ಓದಿದೆನು, ಮತ್ತು ನಿಜವಾಗಿಯೂ ಆನಂದಿಸಿದೆನು. ಅನಂತರ ನಾನು ನನ್ನ ಹಿಂದಿನ ಏವೇಕ್!ನ ಇತರ ಪ್ರತಿಗಳನ್ನು ತೆಗೆದು ಕೆಲವು ಲೇಖನಗಳನ್ನು ಓದಿದೆನು. ಈಗ ನನ್ನೊಡನೆ ಬೈಬಲ್ ಅಧ್ಯಯನ ನಡಿಸುವಂತೆ ನನ್ನ ತಾಯಿಗೆ ಕೇಳಿಕೊಂಡಿದ್ದೇನೆ.
ಎ. ಪಿ., ಅಮೆರಿಕ (g91 1/8)
ಅತಿರೇಕ ಕಸ ಏವೇಕ್!ನ ಕೊಡುಗೆ ಚಂದಾವನ್ನು ನನ್ನ ಮಿತ್ರನೊಬ್ಬನು ನನಗೆ ಕಳುಹಿಸಿದನು, ಮತ್ತು ನಾನು ಅದರಲ್ಲಿರುವ ವಿಚಾರಗಳು ವೈವಿಧ್ಯತೆಯವುಗಳೂ, ಆಸಕ್ತಕರವಾದವುಗಳೂ ಆಗಿ ಇರುವದನ್ನು ಕಂಡೆನು. ಅತಿರೇಕ ಕಸದ ಕುರಿತಾದ ಲೇಖನವನ್ನು ಓದಿದಾಗ ನಾನು ಬೇಸರಗೊಂಡೆನು (ನವಂಬರ 8, 1991) ಯಾಕಂದರೆ ಈ ಸಮಸ್ಯೆಯು ಇಷ್ಟೊಂದು ಕ್ಲಿಷ್ಟತೆಯದ್ದು ಎಂದು ನಾನು ಎಣಿಸಿರಲಿಲ್ಲ! ನಾನೊಬ್ಬ ಯೆಹೋವನ ಸಾಕ್ಷಿಯಲ್ಲದ್ದಿದರೂ, ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗುವ ಅತ್ಯುತ್ಕೃಷ್ಟ ವಿಷಯಗಳನ್ನು ನಾನು ಮೆಚ್ಚುತ್ತೇನೆ.
ಎಲ್. ಆರ್. ಎ., ಬ್ರಾಜಿಲ್ (g91 2/22)
ರಕ್ತ ವಿಕ್ರಯ “ರಕ್ತ ವಿಕ್ರಯ—ದೊಡ್ಡ ವ್ಯಾಪಾರ”ದ ಮೇಲಿನ ಲೇಖನಗಳು (ಅಕ್ಟೋಬರ 8, 1991) ನನಗೆ ವಿಶೇಷ ಆಸಕ್ತಿಯದ್ದಾಗಿದ್ದವು, ಯಾಕಂದರೆ ಒಂದು ರಕ್ತನಿಧಿಗಾಗಿ ರಕ್ತವನ್ನು ತೆಗೆಯುವ ಒಳ್ಳೆಯ ಸಂಬಳ ಕೊಡುವ ಒಂದು ಕೆಲಸವು ನನಗೆ ನೀಡಲ್ಪಟ್ಟಿತ್ತು. ಅದರಲ್ಲಿರುವ ಸಮಾಚಾರವನ್ನು ಓದಿದ ನಂತರ, ಇದು ತಪ್ಪೆಂದು ನನಗೆ ಮನವರಿಕೆಯಾಯಿತು. ನಾನು ಆ ಹಣವನ್ನು ಉಪಯೋಗಿಸಬಹುದಾಗಿತ್ತಾದರೂ, ರಕ್ತದ ಹಾನಿಕಾರಕ ಪರಿಣಾಮಗಳನ್ನು ನಾನು ಪರಿಗಣಿಸಿದೆನು ಮತ್ತು ಆ ಉದ್ಯೋಗವನ್ನು ನಿರಾಕರಿಸಿದೆನು.
ಆರ್. ಎಮ್., ಅಮೆರಿಕ (g91 2/22)
ಮನೆಯಲ್ಲಿ ರಜಾಕಾಲ ನಿಮ್ಮ ಲೇಖನವು (ಸಪ್ಟಂಬರ 8, 1991) ನನಗೋಸ್ಕರವೇ ಬರೆದಂತೆ ನನಗೆ ಭಾಸವಾಯಿತು. ಎಲ್ಲಾ ಶಿಫಾರಸುಗಳು, ಇತರರಿಗಾಗಿ ಕೆಲಸ ಮಾಡುವದು, ಮನೆಯ ಕೆಲಸವನ್ನು ಮಾಡುವದು, ನನ್ನ ಕೋಣೆಯನ್ನು ಅಂದಗೊಳಿಸುವದು, ಸ್ಥಳೀಯ ಆಕರ್ಷಕ ಕೇಂದ್ರಗಳಿಗೆ ಭೇಟಿ ನೀಡುವದು, ಮತ್ತು ಬೈಬಲ್ ಓದುವಿಕೆ ಮಾಡುವದು, ಎಷ್ಟೋ ಉತ್ತಮವಾಗಿದ್ದವು. ನಿಮ್ಮ ಸಹಾಯಕ್ಕಾಗಿ ತುಂಬಾ ಉಪಕಾರಗಳು, ನಾನು ಈ ಸಮಯವನ್ನು ಹೆಚ್ಚು ವಿವೇಕಯುಕ್ತವಾಗಿ ಬಳಸುವೆನು.
ಎಂ. ಕೆ., ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ (g90 10/22)