ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g92 3/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1992
  • ಅನುರೂಪ ಮಾಹಿತಿ
  • ನಮ್ಮ ವಾಚಕರಿಂದ
    ಎಚ್ಚರ!—1991
  • ಡೈನೋಸಾರ್‌ಗಳ ಬಗ್ಗೆ ಬೈಬಲ್‌ ಏನು ಹೇಳುತ್ತೆ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ನಮ್ಮ ವಾಚಕರಿಂದ
    ಎಚ್ಚರ!—1994
ಎಚ್ಚರ!—1992
g92 3/8 ಪು. 30

ನಮ್ಮ ವಾಚಕರಿಂದ

ವಿಪತ್ತುಗಳು ಬಿರುಗಾಳಿ ಮತ್ತು ಭೂಕಂಪ ವಿಪತ್ತುಗಳ ಲೇಖನವನ್ನು ಓದಿ ನಿಜವಾಗಿಯೂ ಉದ್ರೇಕಗೊಂಡೆ. (ಏಪ್ರಿಲ್‌ 8, 1991) ಲೂಟಿ ಮಾಡಿದ ಒಂದು ಸಂಭವವನ್ನು ತಕ್ಕೊಂಡು ಅದು “ಲೋಕ”ಕ್ಕೂ ಯೆಹೋವನ ಸಾಕ್ಷಿಗಳಿಗೂ ಇರುವ ವ್ಯತ್ಯಾಸದ ಮಾದರಿಯೆಂದು ನೀವು ಸೂಚಿಸಿದ್ದೀರಿ. ಕೇವಲ ಯೆಹೋವನ ಸಾಕ್ಷಿಗಳನ್ನು ಹೀಗೆ ಹೊಗಳಿ ಚಿತ್ರಿಸುವುದು ಹೀನ ರುಚಿಯ ಪರಮಾವಧಿ ಎಂದು ನನ್ನ ಅಭಿಪ್ರಾಯ.

ಜೆ. ಕೆ., ಯುನೊಯಿಟೆಡ್‌ ಸ್ಟೇಟ್ಸ್‌

ಆ ಲೇಖನವು ಇಂದು ಕ್ರೈಸ್ತರು, ಒಂದನೆಯ ಶತಕದಂತೆಯೆ, ಕ್ಲೇಶಕಾಲದಲ್ಲಿ ಒಬ್ಬರಿಗೊಬ್ಬರು ಹೇಗೆ ನಿಜಪ್ರೀತಿ ತೋರಿಸುತ್ತಾರೆಂದು ಪ್ರದರ್ಶಿಸಿತು. (2 ಕೊರಿಂಥ 8:1-4) ಕೆಲವು ನಕಾರಾತ್ಮಕ ಸಂಭವಗಳು ವರದಿಯಾಗಿವೆಯಾದರೂ, ಆ ಲೇಖನವು, “ಇಂಥ ನಿರ್ದಯ ಕೃತ್ಯಗಳನ್ನು” ಸಾಕ್ಷ್ಯೇತರರು ಮಾಡಿದ “ಅನೇಕ ಮಾನವೀಯ ದಯೆಯ ಕೃತ್ಯಗಳು ನಿಸೇಜ್ತವಾಗಿ ಮಾಡಿವೆ” ಎಂದೂ ಹೇಳಿತು.—ಸಂ.

(g90 7/8)

ಸೇದುವುದು ನನಗೆ ಒಂದು ಫೋನ್‌ ಬೂತಿನಲ್ಲಿ ಹೊಗೆಬತ್ತಿ ಸೇದುವ ಕುರಿತು ಎಚ್ಚರ! ಪತ್ರಿಕೆ ದೊರೆಯಿತು. (ಸಪ್ಟಂಬರ 8, 1991) ಮುಖಪುಟದಲ್ಲಿದ್ದ ತಲೆಬುರುಡೆ ಆಕರ್ಷಕವಾಗಿತ್ತು! ನಾನು ನಾಲ್ಕು ವರ್ಷಗಳ ಹಿಂದೆ ಸೇದುವುದನ್ನು ನಿಲ್ಲಿಸಿದ್ದೇನಾದರೂ ಸೇದುವ ಅಭ್ಯಾಸವಿರುವ ನನ್ನ ಮಗನಿಗೆ ಆ ಪತ್ರಿಕೆಯನ್ನು ಕೊಟ್ಟೆ. ಸೇದುವುದನ್ನು ನಿಲ್ಲಿಸಬೇಕಾದ ಇನ್ನು ಮೂವರು ಗಂಡುಮಕ್ಕಳೂ ನನಗೆ ಇದ್ದಾರೆ. ಆ ಲೇಖನ ಅತ್ಯಂತ ಬೋಧಪ್ರದವೂ ವಿಷಯಸೀಮಿತವೂ ಆಗಿತ್ತು. ನಾನು ನಿಮ್ಮ ವಿಶ್ವಾಸದವಳಲ್ಲವಾದರೂ ನಾನದನ್ನು ಮಾನ್ಯ ಮಾಡುತ್ತೇನೆ.

ಪಿ. ಟಿ., ಯುನೊಯಿಟೆಡ್‌ ಸ್ಟೇಟ್ಸ್‌

ನನ್ನ ಟೀಚರ್‌ ತುಂಬ ಸೇದುವವರು, ಮತ್ತು ಅವರು ನನ್ನೊಂದಿಗೆ ಮಾತಾಡಿದಾಗೆಲ್ಲ ಸಿಗರೇಟಿನ ವಾಸನೆ ಬರುತ್ತಿತ್ತು. ಸೇದುವುದನ್ನು ನಿಲ್ಲಿಸುವ ಹತ್ತು ವಿಧಗಳಿದ್ದ ಲೇಖನ ನನಗೆ ನೆನಪಾಯಿತು. ನಾನು ಟೀಚರಿಗೆ ಒಂದು ಪ್ರತಿ ಕೊಟ್ಟು ಮೂರು ತಿಂಗಳ ಬಳಿಕ, ಸೇದುವುದನ್ನು ನಿಲ್ಲಿಸಿದ್ದೀರಾ ಎಂದು ಕೇಳಿದೆ. ಪತ್ರಿಕೆಯ ಸಹಾಯದಿಂದ ಮತ್ತು ತನ್ನ ಸ್ವಪ್ರಯತ್ನದಿಂದ ತಾನು ನಿಲ್ಲಿಸಿದ್ದೇನೆಂದು ಅವರು ಹೇಳಿದರು. ಅವರು 25 ವರ್ಷಕಾಲ ಸೇದುತ್ತಿದ್ದರು.

ಬಿ. ಓ., ಯುನೊಯಿಟೆಡ್‌ ಸ್ಟೇಟ್ಸ್‌

(g90 12/8)

ಜ್ಯಾಗ್ವಾರ್‌ಗಳು “ಮಾಯಾರೂಪದ ಜಂಗಲಿ ಬೆಕ್ಕು” ಎಂಬ ಲೇಖನ (ಫೆಬ್ರವರಿ 8, 1992) ಓದಿ ತುಂಬ ಸಂತೋಷಿಸಿದೆ. ಅವು ಅಷ್ಟು ಆಶ್ಚರ್ಯಕರವಾದ ಪ್ರಾಣಿಗಳೆಂದು ನಾನು ಎಂದೂ ನೆನಸಿರಲಿಲ್ಲ. ಅವು ನಿಶ್ಚಯವಾಗಿಯೂ ದೇವರಿಗೆ ಮಹಿಮೆ ತರುವ ಸುಂದರ ಮೃಗಗಳು.

ಎಲ್‌. ಎಫ್‌., ಯುನೊಯಿಟೆಡ್‌ ಸ್ಟೇಟ್ಸ್‌

(g90 12/8)

ಭೌಗೋಳಿಕ ಸಹೋದರತ್ವ ನವಂಬರದ ಆದಿಯಲ್ಲಿ ನನ್ನ ಟೀಚರ್‌, “ಒಂದು ನಾಗರಿಕತೆಯು ಇನ್ನೊಂದಕ್ಕಿಂತ ಶ್ರೇಷ್ಠವೆಂದು ತೀರ್ಪುಮಾಡಬೇಕೊ?” ಎಂಬ ವಿಷಯದಲ್ಲಿ ಒಂದು ಪ್ರಬಂಧವನ್ನು ಬರೆಯಬೇಕೆಂದು ನಮಗೆ ಹೇಳಿದರು. ಭೌಗೋಳಿಕ ಸಹೋದರತ್ವದ ಲೇಖನಗಳು (ಡಿಸೆಂಬರ್‌ 8, 1991) ಸುಸಮಯದಲ್ಲಿ ಬಂದವು! ನನಗೆ ಈ ಮಾಹಿತಿ ಎಲ್ಲಿ ದೊರೆಯಿತೆಂದು ನನ್ನ ಟೀಚರ್‌ ಕೇಳಲಾಗಿ ನಾನು ಅವರಿಗೆ ಎಚ್ಚರ!ದ ಲೇಖನಗಳನ್ನು ಕೊಟ್ಟೆ. ಈ ಪ್ರಬಂಧ ಲೇಖನಕ್ಕೆ ನನಗೆ (20 ರಲ್ಲಿ) 18 ಅಂಕಗಳು ದೊರೆತವು.

ಎಲ್‌. ಕ್ಯೂ., ಫ್ರಾನ್ಸ್‌.

(g91 6/8)

ಮೆಕ್ಸಿಕೊ ಸಿಟಿ “ಮೆಕ್ಸಿಕೊ ಸಿಟಿ—ಬೆಳೆಯುತ್ತಿರುವ ದೈತ್ಯನೆ?” ಎಂಬ ಲೇಖನದಲ್ಲಿ (ಫೆಬ್ರವರಿ 8, 1992) ತಪ್ಪಿದೆಯೆಂದು ನನಗೆ ಕಂಡುಬಂತು. ದೊಡ್ಡ ಕುಟುಂಬಗಳಿರುವುದು ಸಾಂಸ್ಕೃತಿಕ ಪರಂಪರೆಯೆಂದು ನೀವು ಹೇಳುತ್ತೀರಿ. ಆದರೆ, ಈ ಸಂಗತಿ ದೇಶದ ಕೆಲವೇ ಭಾಗಗಳಲ್ಲಿ ನಡೆಯುತ್ತದೆ, ಮೆಕ್ಸಿಕೊ ಸಿಟಿಯಲ್ಲಲ್ಲ.

ಎಸ್‌. ಸಿ., ಮೆಕ್ಸಿಕೊ

ಲೇಖನವು ತಪ್ಪು ತಿಳಿವಳಿಕೆಗೆ ಕಾರಣವಾದುದಕ್ಕೆ ನಾವು ವಿಷಾದಿಸುತ್ತೇವೆ. ಆದರೆ ಈ ಲೇಖನವನ್ನು ಇಡೀ ಮೆಕ್ಸಿಕೊ ದೇಶವನ್ನು ಸೂಚಿಸಿ ಬರೆಯಲಾಗಿತ್ತು, ಕೇವಲ ಮೆಕ್ಸಿಕೊ ಸಿಟಿಯನ್ನು ಸೂಚಿಸಿಯಲ್ಲ.—ಸಂ.

(g91 7/8)

ದೇವರು ಕಷ್ಟಾನುಭವವನ್ನು ಅನುಮತಿಸುವ ಕಾರಣ ನಾನು 1985ರಿಂದ ಎಚ್ಚರ!ವನ್ನು ಆದಿಯಿಂದ ಕೊನೆಯ ತನಕ ಓದುತ್ತಾ ಬಂದಿದ್ದೇನೆ. ಆದರೆ ನಿಮ್ಮ ಆಗಸ್ಟ್‌ 8, 1990 ರ ಸಂಚಿಕೆ ಕೊಟ್ಟಷ್ಟು ಜ್ಞಾನೋದಯವನ್ನುಂಟುಮಾಡುವ ಉತ್ತರವನ್ನು ನಾನು ಈ ಹಿಂದೆ ನೋಡಿರಲಿಲ್ಲ. ಈ ತಪ್ಪಿಲ್ಲದೆ ಬರೆದಿರುವ ಲೇಖನಗಳನ್ನು ಓದುವುದರಿಂದ ಯಾವ ವಿಚಾರಶೀಲ ವ್ಯಕ್ತಿಯೂ ಸ್ಪಷ್ಟವಾಗಿದ ಉತ್ತರಗಳನ್ನು ಪಡೆಯಬಲ್ಲನು.

ಇ. ಟಿ. ವಿ., ಬ್ರೆಸೀಲ್‌

(g91 3/22)

ಪೂರ್ವ ಯೂರೋಪ್‌ ಪೂರ್ವ ಯೂರೋಪಿನಲ್ಲಿ ಇತ್ತೀಚಿನ ಬದಲಾವಣೆಗಳು ಆರಂಭವಾದಂದಿನಿಂದ, ಆ ಭಾಗದಲ್ಲಿ ಜೀವಿಸುತ್ತಿರುವ ಯೆಹೋವನ ಸಾಕ್ಷಿಗಳ ಸಂಬಂಧದಲ್ಲಿ ನಾನು ಕುತೂಹಲವುಳ್ಳವನಾಗಿದ್ದೆ. ನಮ್ಮ ಸಾಹಿತ್ಯಗಳಲ್ಲಿ ಅವರ ಕುರಿತು ಹೆಚ್ಚು ಮಾಹಿತಿ ದೊರೆಯುತ್ತಿರಲಿಲ್ಲ. ಹೀಗಿರುವಾಗ, “ಪೂರ್ವ ಯೂರೋಪಿನಲ್ಲಿ ಯೆಹೋವನ ಸಾಕ್ಷಿಗಳು” ಎಂಬ ಲೇಖನದ (ಜುಲೈ 8, 1991) ಸಂಚಿಕೆಯನ್ನು ನಾನು ಓದಿದಾಗ ನನಗೆಷ್ಟು ತೃಪ್ತಿಯಾಗಿರಬಹುದೆಂದು ನೀವು ಭಾವಿಸಬಹುದು. ಲೋಕದ ಆ ಭಾಗದಲ್ಲಿ ನಡೆಯುವ ಸಾರುವ ಕೆಲಸದ ಪ್ರಗತಿಯನ್ನು ನಮಗೆ ತಿಳಿಸುತ್ತಾ ಇರುವಿರೆಂದು ನನ್ನ ಹಾರೈಕೆ.

ಇ. ಎಸ್‌. ಎಲ್‌., ಬ್ರೆಸೀಲ್‌

(g91 5/22)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ