ವ್ಯಾಯಾಮವು ನಿಮಗೇನು ಮಾಡಬಲ್ಲದು?
ನಾಲ್ಕು ವರ್ಷಗಳ ಹಿಂದೆ ದ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಪತ್ರಿಕೆಯಲ್ಲಿ ವರ್ಣಿಸಿದ 17,000 ಹಾರ್ವರ್ಡ್ ವಿದ್ಯಾರ್ಥಿಗಳ ಒಂದು ಅಧ್ಯಯನ, ಬೇಗನೆ ಸಾಯುವ ಪಿತ್ರಾರ್ಜಿತ ಪ್ರವೃತ್ತಿಯನ್ನು ದೈಹಿಕ ವ್ಯಾಯಾಮ ಪ್ರತಿಕೂಲಿಸಬಲ್ಲದೆಂದು ತೋರಿಸಿತು. ಈ ಅಧ್ಯಯನದ ಡೈರೆಕ್ಟರ್, ಡಾ. ರಾಲ್ಫ್ ಎಸ್. ಪ್ಯಾಫನ್ಬಾರ್ಜರ್ ತೀರ್ಮಾನಿಸಿದ್ದು: “ಕ್ರಿಯಾಶೀಲರಾಗಿರುವುದರಿಂದಲೇ ನೀವು ಆರೋಗ್ಯವಂತರಾಗಿದ್ದೀರಿ.”
ಜೂನ್ 1989ರಲ್ಲಿ, ದ ಜರ್ನಲ್ ಆಫ್ ದಿ ಅಮೆರಿಕನ್ ಮೆಡಿಕಲ್ ಎಸೋಸಿಯೇಷನ್ ಹೇಳಿದ್ದು: “ಪರಿಧಮನಿಯ ಹೃದ್ರೋಗ (CHD), ಏರಿದ ರಕ್ತದೊತ್ತಡ, . . . ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳೇ ಮೊದಲಾದ ಅನೇಕಾನೇಕ ವೈದ್ಯಕೀಯ ರೋಗಾವಸ್ಥೆಗಳ ತಡೆ ಮತ್ತು ನಿಯಂತ್ರಣದಲ್ಲಿ ಶಾರೀರಿಕ ಚಟುವಟಿಕೆ ಜೊತೆಗೊಂಡಿದೆ.” ಅದು ಮುಂದುವರಿಸಿದ್ದು: “ಶಾರೀರಿಕವಾಗಿ ಸಕ್ರಿಯನಿಗಿಂತ ಶಾರೀರಿಕವಾಗಿ ನಿಷ್ಕ್ರಿಯನಲ್ಲಿ ಈ ಸಿಎಚ್ಡಿ ವಿಕಾಸಗೊಳ್ಳುವ ಸಂಭವವು 1.9 ಪಾಲು ಹೆಚ್ಚು. ಈ ಜೊತೆಗಾರಿಕೆ ಪರಿಣಾಮಕಾರಕ.”
ನವಂಬರ 1989ರಲ್ಲಿ ಇದೇ ವೈದ್ಯಕೀಯ ಪತ್ರಿಕೆ 13,344 ಮಂದಿಯನ್ನೊಳಗೊಂಡ ಒಂದು ಅಧ್ಯಯನವನ್ನು ಪ್ರಕಟಿಸಿತು, ಮತ್ತು ಅದು ವ್ಯಾಯಾಮದ ಪ್ರಯೋಜನವನ್ನು ಇನ್ನೂ ಹೆಚ್ಚಾಗಿ ತೋರಿಸಿತು. ಈ ವ್ಯಾಪಕವಾದ ಅಧ್ಯಯನವು, ಕನಿಷ್ಟ ಮಟ್ಟದ ವ್ಯಾಯಾಮವೂ—ದಿನಕ್ಕೊಮ್ಮೆ ಅರ್ಧ ಗಂಟೆ ಚುರುಕಾಗಿ ನಡೆಯುವುದು—ವ್ಯಾಪಕವಾದ ಕಾರಣಗಳಿಂದ ಒಬ್ಬನು ಸಾಯುವುದರಿಂದ ಗಮನಾರ್ಹವಾದ ಸುರಕ್ಷೆಯನ್ನು ಒದಗಿಸುತ್ತದೆ.
ಡ್ಯಾಲಸಿನಲ್ಲಿರುವ ಟೆಕ್ಸಸ್ ವಿಶ್ವವಿದ್ಯಾಲಯದ ಸೌತ್ವೆಸ್ಟರ್ನ್ ಮೆಡಿಕಲ್ ಸ್ಕೂಲಿನ ಏರಿದ ರಕ್ತದೊತಡದ ತಜ್ಞ ಡಾ. ನಾರ್ಮನ್ ಎಮ್. ಕ್ಯಾಪನ್ಲ್, ಏರಿದ ರಕ್ತದೊತ್ತಡದ ಚಿಕಿತ್ಸೆಯಲ್ಲಿ ತಾನೀಗ ವ್ಯಾಯಾಮದ ಮೌಲ್ಯದ ಸಂಬಂಧದಲ್ಲಿ ಮನಸ್ಸನ್ನು ಬದಲಾಯಿಸಿದ್ದೇನೆಂದು ಹೇಳುತ್ತಾರೆ. “ಕಳೆದ ಮೂರು ಯಾ ನಾಲ್ಕು ವರ್ಷಗಳಲ್ಲಿ ರುಜುವಾತು ಹೆಚ್ಚಾಗುವುದನ್ನು ನೋಡಿರುವ ನಾನು ವ್ಯಾಯಾಮದ ಕುರಿತು ಜನರಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತೇನೆ.”
ಈಗ ಡಾ. ಕ್ಯಾಪನ್ಲ್ ಏರಿದ ರಕ್ತದೊತ್ತಡದ ರೋಗಿಗಳಿಗೆ ಏರೋಬಿಕ್ ವ್ಯಾಯಾಮವನ್ನು ಶಿಫಾರಸು ಮಾಡುತ್ತಾರೆ. ಅವರು ಹೇಳುವುದು: “ನಾಡಿಯ ವೇಗವನ್ನು ಹೆಚ್ಚಿಸಿರಿ, ಎಂದು ನಾನು ನನ್ನ ರೋಗಿಗಳಿಗೆ ಹೇಳುತ್ತೇನೆ. ಅವರು ನಿಧಾನ ಆರಂಭಿಸಬೇಕೆಂದೂ, ಒಡನೆ ಅಧಿಕ ವ್ಯಾಯಾಮ ಮಾಡಬಾರದೆಂದೂ ನಾನು ಹೇಳುತ್ತೇನೆ. ನಡೆಯುತ್ತಾ, ನಿಧಾನವಾಗಿ ಓಡುತ್ತಾ ಆರಂಭಿಸಿ, ಬಳಿಕ ಅದನ್ನು ಹೆಚ್ಚಿಸಿ. ಸಮಸ್ಯೆ ಏಳುವಲ್ಲಿ, ಅದನ್ನು ನಿಲ್ಲಿಸಿರಿ.” ವ್ಯಾಯಾಮವು ಆರೋಗ್ಯಕ್ಕೆ ನಿಜ ಪ್ರಯೋಜನಕಾರಿಯಾಗಬೇಕಾದರೆ, ಅದನ್ನು ಕ್ರಮವಾಗಿ ಮಾಡತಕ್ಕದ್ದು. ಪ್ರತಿ ಬಾರಿ, 20ರಿಂದ 30 ಯಾ ಹೆಚ್ಚು ನಿಮಿಷಗಳ ತನಕ, ವಾರಕ್ಕೆ ಮೂರು ಯಾ ನಾಲ್ಕು ಬಾರಿ ಮಾಡುವುದು ಹೆಚ್ಚು ಇಷ್ಟಕರ. (g90 10/22)