ಜಗತನ್ತು ಗಮನಿಸುವುದು
ಸ್ತ್ರೀಯರ ಪ್ರತಿಕೂಲ ಪರಿಸ್ಥಿತಿ
“ಬಡ ಗ್ರಾಮೀಣ ಸ್ತ್ರೀಯರು ಲೋಕದಲ್ಲಿ ಅತಿ ಹೆಚ್ಚು ಅಪಹರಣಕ್ಕೊಳಗಾದ ಜನರು” ಎನ್ನುತ್ತದೆ, ಯುನೊಯಿಟೆಡ್ ನೇಷನ್ಸ್ ಪ್ರಕಟನೆಯಾದ ಯು. ಎನ್. ಕ್ರಾನಿಕ್ಲ್. “ಅವರು ಹೆಚ್ಚು ವ್ಯಾಧಿಗ್ರಸ್ತರೂ ಪುರುಷರಿಗಿಂತ ಹೆಚ್ಚು ಅನಕ್ಷರಸ್ಥರೂ ಆಗಿದ್ದು, ತಮ್ಮನ್ನು ಸುಧಾರಿಸಿಕೊಳ್ಳಲು ಪುರುಷರಿಗಿರುವ ಸಂದರ್ಭಗಳು ಇಲ್ಲದವರಾಗಿದ್ದಾರೆ.” 1990ರಲ್ಲಿ ಎರಡು ಅಂತರಾಷ್ಟ್ರೀಯ ವಿಕಾಸ ಏಜನ್ಸಿಗಳಾದ, ಯುನೊಯಿಟೆಡ್ ನೇಷನ್ಸ್ ವಿಕಾಸ ಕಾರ್ಯಕ್ರಮ ಮತ್ತು ಲೋಕ ನಿಧಿ—ಇವು ಲೋಕ ದಾರಿದ್ರ್ಯದ ಕುರಿತು ಮಾಡಿದ ಎರಡು ಪ್ರೌಢ ಅಧ್ಯಯನಗಳು, ಇಂಥ ಅಪ್ರಸನ್ನ ತೀರ್ಮಾನಕ್ಕೆ ಬಂದಿವೆ. “ಸುಮಾರು ಐದು ಲಕ್ಷ ಸ್ತ್ರೀಯರು, ಇವರಲ್ಲಿ 99 ಪ್ರತಿಶತ ವಿಕಾಸ ಹೊಂದುತ್ತಿರುವ ದೇಶಗಳವರು, ಪ್ರತಿ ವರ್ಷ ಹೆರಿಗೆಯಾಗುವಾಗ ಸಾಯುತ್ತಾರೆ” ಎನ್ನುತ್ತದೆ, ಯು. ಎನ್. ಕ್ರಾನಿಕ್ಲ್. (g91 1/8)
ಪರಿಸರ ಪ್ರತಿಜ್ಞೆ
“ಮಾನವರಾಗಿರುವ ನಾವು ನಮಗೆ ನಾವೇ ಅಪಾಯಕಾರಿಗಳಾಗಿದ್ದೇವೆ. ಇದರ ವಿಷಯದಲ್ಲಿ ನಾವೀಗಲೆ ಕ್ರಮ ಕೈಕೊಳ್ಳತಕ್ಕದ್ದು.” ಆಫ್ರಿಕ, ಏಸ್ಯ, ಯೂರೋಪ್, ಮತ್ತು ಉತ್ತರ ಮತ್ತು ದಕ್ಷಿಣ ಅಮೆರಿಕದಲ್ಲಿರುವ 22 ದೇಶಗಳ ವಿಶ್ವವಿದ್ಯಾಲಯಗಳ ಅಧ್ಯಕ್ಷರುಗಳು ಮಾಡಿದ ಪರಿಸರ ಪ್ರತಿಜ್ಞೆಯ ಭಾಗವಾಗಿ ಈ ಮಾತುಗಳಿವೆ. ತಮ್ಮ ಶಾಲೆಗಳು ಪರಿಸರದ ವಿಷಯದಲ್ಲಿ ಮೊದಲಿಗಿಂತ ಹೆಚ್ಚು ಕಲಿಸಲು ಮತ್ತು ಪರಿಸರ ಸಂಶೋಧನೆಗೆ ಮೀಸಲಾಗಿಡುವ ಶಾಲಾಸಂಪತ್ತನ್ನು ಹೆಚ್ಚಿಸಲು ಅವರು ಪ್ರತಿಜ್ಞೆ ಮಾಡಿದರು. ಕಳೆದ ಅಕ್ಟೋಬರಿನಲ್ಲಿ ಫ್ರಾನ್ಸಿನ ಟಾಲ್ವಾರ್ಸಿನಲ್ಲಿ ಸಭೆಯಾಗಿ ಸೇರಿದ ಈ ಅಧಿಕಾರಿಗಳು, “ಪರಿಸರೀಯವಾಗಿ ಪೋಷಕವಾದ ಭವಿಷ್ಯ”ಕ್ಕೆ ಸಾಮಾನ್ಯ ಗುರಿಗಳನ್ನೂ ಪ್ರಕಟಿಸಿದರು.” (g91 1/8)
ಸೇದುವವರಿಗೆ ದುರ್ವಾರ್ತೆ
ಸಪ್ಟಂಬರ್ 25, 1990ರಂದು ಅಮೆರಿಕದ ರೋಗ ನಿಯಂತ್ರಣ ಕೇಂದ್ರಗಳು, “ಸೇದುವುದನ್ನು ಬಿಡುವುದರಿಂದ ಬರುವ ಆರೋಗ್ಯ ಪ್ರಯೋಜನಗಳು: ಸರ್ಜನ್ ಜನರಲರ ವರದಿ, 1990” ಎಂಬ ವರದಿಯನ್ನು ಪ್ರಕಟಿಸಿದವು. ಕೆಲವು ಮುಖ್ಯ ತೀರ್ಮಾನಗಳು ಹೀಗಿವೆ: “1) ಸೇದುವುದನ್ನು ನಿಲ್ಲಿಸುವುದರಿಂದ ಎಲ್ಲಾ ವಯಸ್ಸಿನವರಿಗೆ ದೊಡ್ಡ ಮತ್ತು ಒಡನೆ ದೊರೆಯುವ ಆರೋಗ್ಯ ಪ್ರಯೋಜನಗಳಿವೆ. . . . ; 2) ಹಿಂದೆ ಸೇದಿ ಬಿಟ್ಟವರು, ಸೇದುತ್ತಾ ಮುಂದುವರಿಯುವವರಿಗಿಂತ ಹೆಚ್ಚು ಕಾಲ ಬದುಕುತ್ತಾರೆ; 3) ಸೇದುವುದನ್ನು ನಿಲ್ಲಿಸುವುದರಿಂದ ಶ್ವಾಸಕೋಶಗಳ ಮತ್ತು ಇತರ ಕ್ಯಾನ್ಸರ್‌ಗಳು, ಹೃದಯಾಘಾತ, ಪಾರ್ಶ್ವವಾಯು, ಮತ್ತು ಅಸ್ಥಿಗತ ಶ್ವಾಸಕೋಶ ರೋಗಗಳ ಅಪಾಯವು ಕಡಮೆಯಾಗುತ್ತದೆ.” (g91 1/8)
ಮಿದುಳಿಗೆ ನಿದ್ದೆ
ನಮಗೆ ನಿದ್ದೆ ಏಕೆ ಅವಶ್ಯ? ಫ್ರಾನ್ಸಿನ ಸಾಸ್ಟ್ರ್‌ಬರ್ಗಿನಲ್ಲಿ ಇತ್ತೀಚೆಗೆ ನಡೆದ ಒಂದು ಸಮ್ಮೇಳನದಲ್ಲಿ, ಒಂದು ವಿವಾದಾತ್ಮಕ ವಾದವನ್ನು ನೀಡಲಾಯಿತು. ನಿದ್ರೆಯು, ಯಾವುದು ತನ್ನ ದಿನದ ಪ್ರಯತ್ನಗಳಿಂದ ನಿದ್ರೆಯ ಮೂಲಕ ಚೇತರಿಸಿಕೊಳ್ಳುತ್ತದೋ ಆ ಮಿದುಳಿಗಿಂತ ದೇಹಕ್ಕೆ ಕಡಮೆ ಪ್ರಯೋಜನಕರವೆಂದು ಅಲ್ಲಿ ಹೇಳಲಾಯಿತು. “ಮಾನವ ಶರೀರದ ಕೆಲಸಗಳು ಅನೇಕ ದಿವಸ ನಿದ್ರೆಯಿಲ್ಲದಿದ್ದರೂ ಕಾರ್ಯಥಃ ದುರ್ಬಲಗೊಳ್ಳದೆ ಮುಂದುವರಿಯುತ್ತದೆ, ಆದರೆ ಮಿದುಳು ಹಾಗಲ್ಲ,” ಎಂದು ಪ್ರಯೋಗಗಳು ತೋರಿಸುತ್ತವೆ ಎಂದು ಡಾಯಿ ಸೈಟ್ ಪತ್ರಿಕೆ ವರದಿ ಮಾಡಿತು. ಪ್ರಯೋಗಗಳಲ್ಲಿ, ಜನರಿಗೆ ನಿದ್ರೆಯ ನಷ್ಟವಾದಾಗ ಅವರು “ಗಮನ ಮತ್ತು ಏಕಾಗ್ರತೆಯ ನಷ್ಟ, ದುರ್ಬಲ ಜ್ಞಾಪಕಶಕ್ತಿ, ಆಲೋಚನಾ ಕಾರ್ಯಗತಿಯ ನಿಧಾನ ಗತಿ, ಮತ್ತು ನೆಲೆ ನಿರ್ಧಾರ ಸಮಸ್ಯೆಗಳನ್ನು” ಅನುಭವಿಸಿದರು. (g91 1/8)
ಬಬಿಲೋನಿನ ಪುನರ್ನಿರ್ಮಾಣ ನಿಲ್ಲುತ್ತದೆ
ನೆಬೂಕದ್ನೆಚ್ಚರ ಅರಸನ ತೂಗುದೋಟಗಳಿದ್ದ ಪ್ರಸಿದ್ಧ ನಗರವಾದ ಪುರಾತನ ಬಬಿಲೋನು 2,500 ವರ್ಷಗಳಿಗೂ ಹಿಂದೆ ಗೆಲ್ಲಾಳುಗಳ ಆಕ್ರಮಣದಿಂದಾಗಿ ಕುಸಿದು ಬಿತ್ತು. ಗಾತ್ರದಲ್ಲಿ ಅದಕ್ಕಿಂತ ಎಷ್ಟೋ ಚಿಕ್ಕದಾದ ಒಂದು ಬಬಿಲೋನು ಸುಮಾರು ಸಾ.ಶ. ನಾಲ್ಕನೆಯ ಶತಮಾನದ ತನಕ ಉಳಿದು, ಆಗ ಪೂರ್ತಿ ಹಾಳು ಬಿತ್ತು. ಆಧುನಿಕ ಇರಾಕ್ ದೇಶ ಇತ್ತೀಚೆಗೆ, ಈ ಹಿಂದಿನ ದುರ್ಗವನ್ನು ಅದರ ಹಿಂದಿನ ಸಾಮ್ರಾಜ್ಯಾಧಿಕಾರದ ವೈಭವಕ್ಕೆ ಪುನಃಸ್ಥಾಪಿಸಲು ಯೋಜಿಸಿತು. (ಮಾರ್ಚ್ 8, 1988ರ ಅವೇಕ್! ಪತ್ರಿಕೆಯ 30ನೆಯ ಪುಟ ನೋಡಿ.) ಆದರೆ, ಮಧ್ಯಪೂರ್ವದಲ್ಲಿ ನಡೆದ ಇತ್ತೀಚಿನ ರಾಜಕೀಯ ಘಟನೆಗಳು ಇಂಥ ಪುನರ್ನಿರ್ಮಾಣಕ್ಕೆ ತಡೆಯನ್ನು ಹಾಕಿವೆ, ಎನ್ನುತ್ತದೆ ದ ನ್ಯೂ ಯಾರ್ಕ್ ಟೈಮ್ಸ್. ಯೆಶಾಯ 13:19, 20ರಲ್ಲಿ ಬಬಿಲೋನಿನ ನಾಶದ ಒಂದು ರಸಕರ ಪ್ರವಾದನೆಯಿದೆ. ಅದು, “ಎಂದಿಗೂ ನಿವಾಸಸ್ಥಳವಾಗದು, ತಲತಲಾಂತರಕ್ಕೂ ಅಲ್ಲಿ ಜನರು ಒಕ್ಕಲಿರರು” ಎಂದು ಅಲ್ಲಿ ಹೇಳಲಾಗಿದೆ. (g91 1/8)