ಕಾಲ್ದೊಡಿಗೆಯ ಫ್ಯಾಷನ್ಗಳ ಕಡೆ ಒಂದು ಪ್ರಾಯೋಗಿಕ ನೋಟ
ನೀವು ಒಂದು ಪಾದರಕ್ಷೆಯ ಅಂಗಡಿಯ ಪ್ರದರ್ಶನ ಕಿಟಿಕಿಯ ಕಡೆ ದೃಷ್ಟಿ ಹಾಯಿಸಿದ್ದೀರೊ? ನಿಮಗೆ ಅದು ಮೆಚ್ಚಿಕೆಯಾಗಲಿ, ಆಗದಿರಲಿ, ಒಂದು ವಿಷಯ ನಿಶ್ಚಯ: ಷೂ ಫ್ಯಾಷನ್ಗಳಲ್ಲಿ ವೈವಿಧ್ಯತೆ, ವಿಶೇಷವಾಗಿ ಸ್ತ್ರೀಯರಿಗೆ, ಅಪಾರವೆಂದು ಕಾಣುತ್ತದೆ.
ಕೇವಲ ಅಮೆರಿಕದಲ್ಲಿಯೆ, ಪ್ರತಿ ವರ್ಷ, ಸುಮಾರು 2,00,000 ಹೊಸ ಪಾದರಕ್ಷೆಯ ಡಿಸೈನುಗಳನ್ನು ಉಂಟುಮಾಡಲಾಗುತ್ತದೆ. ಮತ್ತು ಹೆಚ್ಚಲ್ಲದಿದ್ದರೆ, ಈ ಮೇಲಿನ ಸಂಖ್ಯೆಯಷ್ಟಾದರೂ ಯೂರೋಪಿಯನ್ ಡಿಸೈನರುಗಳಿಂದ ತಯಾರಿಸಲಾಗುತ್ತದೆ. ಆದರೆ, ಮಾರುಕಟ್ಟೆಗೆ ತಲುಪುವ ಮೊದಲೇ, ಅವುಗಳಲ್ಲಿ ಸುಮಾರು ಅರ್ಧಾಂಶ ಅನರ್ಹವಾಗಿ ತಳ್ಳಿಹಾಕಲ್ಪಡುತ್ತವೆ. ಮತ್ತು ಉಳಿದ ಅರ್ಧಾಂಶದಲ್ಲಿ, ಕೇವಲ 25,000 ಲಾಭಕರವಾಗುತ್ತವೆ. ಆದರೂ ಇದು ಸಹ ಮನ ಬೆಚ್ಚಿಬೀಳಿಸುವ ಸಂಖ್ಯೆ. ಆದುದರಿಂದ, ಷೂ ಖರೀದಿಸುವಿಕೆಯು ಕೆಲವರಿಗೆ ಗೆಲವಾಗಿಸುವ ಅನುಭವವಾಗುವಾಗ, ಇನ್ನು ಕೆಲವರಿಗೆ ಆಯಾಸಕರ ಅನುಭವವಾಗಿರುವುದು ಆಶ್ಚರ್ಯವಲ್ಲ.
ಕೆಲವು ತಳಹದಿಯ ಪ್ರಧಾನ ಮಾದರಿಗಳಲ್ಲಿ ಭಿನ್ನತೆ
ಕಾಲ್ದೊಡಿಗೆಯ ಫ್ಯಾಷನ್ಗಳ ಅನಂತ ಪ್ರದರ್ಶನದ ಕುರಿತು ನಿಮಗೆ ಹೇಗೆಯೆ ಅನಿಸಲಿ, ಇರುವ ಸಾವಿರಾರು ಷೂ ಡಿಸೈನುಗಳು ನಿಜವಾಗಿ ಕೇವಲ ಕೆಲವೇ ಷೂ ಮೂಲರೂಪಗಳ ಭಿನ್ನತೆಯಾಗಿವೆಯೆಂದು ನೀವು ನಂಬುವಿರೊ?
ಇಲ್ಲಿ ಕೊಟ್ಟಿರುವ ಚಿತ್ರಗಳು ಏಳು ಷೂ ಮೂಲರೂಪಗಳು ಯಾವುವು ಎಂಬುದರ ಸುಪರಿಚಿತಿಯನ್ನು ಕೊಡುವುವು: ಆಕ್ಸ್ಫರ್ಡ್, ಬೂಟ್, ಪಂಪ್, ಕ್ಲಾಗ್, ಮ್ಯೂಲ್, ಸ್ಯಾಂಡಲ್ ಮತ್ತು ಮಾಕಸಿನ್. ಪ್ರತಿ ವರುಷ, ಸಾವಿರಾರು ಹೊಸ ಡಿಸೈನುಗಳಿಂದ ನಾವು ಮುಳುಗಿಸಲ್ಪಡುವುದಾದರೂ—ಮತ್ತು ಫ್ಯಾಷನ್ ಪ್ರಜ್ಞೆಯುಳ್ಳವರು ಅತ್ಯಂತ ಆಧುನಿಕ ಡಿಸೈನನ್ನು ಕೊಳ್ಳುವುದರಲ್ಲಿ ಸ್ವಾಭಿಮಾನ ತೋರಿಸುತ್ತಾರೆ—ಸತ್ಯ ಸಂಗತಿಯೇನಂದರೆ, ಆಕ್ಸ್ಫರ್ಡಿನಿಂದ ಹಿಡಿದು ಕಳೆದ 350 ವರುಷಗಳಲ್ಲಿ ಒಂದೇ ಒಂದು ಹೊಸ ಮೂಲ ಷೂ ರೂಪ ಪರಿಚಯಿಸಲ್ಪಟ್ಟಿರುವುದಿಲ್ಲ. ಅತಿ ಹಳೆಯ ಮೂಲರೂಪಗಳಾದ ಸ್ಯಾಂಡಲ್ ಮತ್ತು ಮಾಕಸಿನ್ ಮುಂತಾದವುಗಳು ಸಾವಿರಾರು ವರ್ಷಗಳಷ್ಟು ಹಿಂದೆ ಹೋಗುತ್ತವೆ.
ಇಂದು, ಮಹಿಳೆಯರ ಪಾದರಕ್ಷೆಗಳು ವೈವಿಧ್ಯದಲ್ಲಿಯೂ ಸಂಖ್ಯೆಯಲ್ಲಿಯೂ ಪುರುಷರದ್ದಕ್ಕಿಂತ ಎಷ್ಟೋ ಹೆಚ್ಚು ಇವೆ. ಆದರೂ, ಆ ಏಳು ಮೂಲರೂಪಗಳೂ ಆದಿಯಲ್ಲಿ ಪುರುಷರಿಗಾಗಿ ಮತ್ತು ಪುರುಷರಿಂದ ರೂಪಿಸಲ್ಪಟ್ಟವು. ಆದರೆ ತೋರಿಕೆ, ಕಾರ್ಯಕೌಶಲ, ಮತ್ತು ಮೂಲವಸ್ತುವಿನಲ್ಲಿ, ಯುಗಗಳು ಕಳೆದಂತೆ ತುಂಬ ಬದಲಾವಣೆಯಾಗಿದೆ ನಿಜ, ಆದರೆ ಈ ಕೆಲವೇ ಮೂಲರೂಪಗಳಿಂದ, ಪ್ರತಿಯೊಂದು ರುಚಿ ಮತ್ತು ಜೀವನಶೈಲಿಗೆ ತಕ್ಕದಾದ ಫ್ಯಾಷನಿನ ಸಾವಿರಾರು ರೂಪಗಳು ವಿಕಾಸಗೊಂಡಿವೆ. ಆದರೆ ಈ ಏಳು ಮೂಲರೂಪಗಳು ಹೇಗೆ ಬಂದವು?
ಮೂಲರೂಪಗಳನ್ನು ತಿಳಿಯುವುದು
ಈ ಏಳು ರೂಪಗಳಲ್ಲಿ ಆಕ್ಸ್ಫರ್ಡ್ ಅತಿ ಇತ್ತೀಚಿನದು. ಯೋಗ್ಯವಾಗಿಯೇ, ಈ ಹೆಸರಿನ ಮೂಲ ಇಂಗ್ಲೆಂಡಿನ ಆಕ್ಸ್ಫರ್ಡ್. 1600 ಗಳ ಮಧ್ಯಭಾಗದಲ್ಲಿ, ಇಲ್ಲಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮಧ್ಯೆ ಈ ಲೇಸಿನ ಷೂ ಪ್ರಥಮವಾಗಿ ಜನಪ್ರಿಯವಾಯಿತು. ಈ ಆಕ್ಸ್ಫರ್ಡಿಗಿಂತ ಮೊದಲು ಬಳಕೆಗೆ ಬಂದಿದ್ದ ಬೂಟ್ ಎಂಬ ರೂಪವು ಕೆಳಗೆ ಷೂ ಮತ್ತು ಮೇಲೆ ಕಾಲುಕಾಪು ಎಂಬ ಎರಡು ತುಂಡುಗಳುಳ್ಳದ್ದಾಗಿತ್ತು. ಒಂದು ಊಹೆಯೇನಂದರೆ, ಅದು ಸುಮಾರಾಗಿ ತೊಟ್ಟಿಯಂತೆ ಕಂಡುಬಂದುದರಿಂದ, ಫ್ರೆಂಚರು ಅದನ್ನು ಬಟ್, ಅಂದರೆ “ನೀರಿನ ತೊಟ್ಟಿ” ಎಂದು ಕರೆದರು. ಆ ಶಬ್ದ ಕ್ರಮೇಣ ಬೂಟ್ (boute) ಆಗಿ ಪರಿಣಮಿಸಿ, ಇಂಗ್ಲಿಷರು ಆ ಶೈಲಿಯನ್ನು ನಾರ್ಮನರಿಂದ ಆಯ್ದುಕೊಂಡಾಗ ಅದನ್ನು ಬೂಟ್ ಎಂದು ಕರೆದರು.
ಇಂದಿನ ಪಂಪ್ ಎಂಬ ಪಾದರಕ್ಷೆ, ಶೈಲಿಯ, ಸಾದಾ ಕಾಲ್ಬೆರಳಿನ, ತಗ್ಗಾಗಿ ಕಡಿದಿರುವ, ತೆಳು ಅಟ್ಟೆ ಮತ್ತು ತಗ್ಗು ಹಿಮ್ಮಡಿಯಿರುವ ಪಾದರಕ್ಷೆ. ಇದು ಎಲೀಸಬೆತ್ ರಾಣಿಯ ಕಾಲದಲ್ಲಿ ಬಳಕೆಗೆ ಬಂತೆಂದು ವ್ಯಕ್ತವಾಗುತ್ತದೆ. ಈ ಪಂಪ್ ಕೆರಗಳನ್ನು ಮೊದಲಾಗಿ ಸವಾರಿಗಾಡಿಯ ಮೆಟ್ಟುಸನ್ನೆಯನ್ನು ತುಳಿಯುತ್ತಿದ್ದ ಕಾಲಾಳುಗಳು ಧರಿಸುತ್ತಿದ್ದರೆಂದು ಕೆಲವರು ಸೂಚಿಸುತ್ತಾರೆ. ಇದು ಕ್ರಮೇಣ ಮಹಿಳೆಯ ಮೆಟ್ಟಾಗಿ ವಿಕಾಸಗೊಂಡು, ಔಪಚಾರಿಕ, ಭವ್ಯ ಮತ್ತು ಪೂರ್ತಿ ಉಡುಪಿನ ಸಂದರ್ಭಗಳಲ್ಲಿ ಉಡುವ ಜನಪ್ರಿಯ ಫ್ಯಾಷನ್ ಆಗಿ ಪರಿಣಮಿಸಿತು. ಈ ಕಾರಣದಿಂದ, ಕೆಲವು ತಜ್ಞರು, ಇದರ ಹೆಸರು, “ಆಡಂಬರ, ಭವ್ಯತೆ, ಗಂಭೀರತೆ, ಶೋಭಾಯಮಾನತೆ, ಡಾಂಬಿಕ ಪ್ರದರ್ಶನ” ಎಂದು ಅರ್ಥ ಬರುವ ಫ್ರೆಂಚ್ ಪದವಾದ ಪಾಂಪ್ (pompe) ನಿಂದ ಬಂದದೆ ಎಂದು ಅಭಿಪ್ರಯಿಸುತ್ತಾರೆ.
ಇನ್ನೂ ಹೆಚ್ಚು ಕಾಲ ಹಿಂದೆ ಹೋಗುವ ಕ್ಲಾಗ್ ಪಾದರಕ್ಷೆ, ಅದರ ಹೆಸರನ್ನು “ಮರದ ತುಂಡು” ಎಂಬರ್ಥದ ಹಳೇ ಇಂಗ್ಲಿಷ್ ಪದದಿಂದ ಪಡೆಯುತ್ತದೆ. ಇದು ಮೊದಲಿನ ಕ್ಲಾಗ್ಗಳನ್ನು ಮರದಿಂದ ರೂಪಿಸಿರುವ ಕಾರಣದಿಂದಲೇ. ಇದನ್ನು ರೈತರು ಮತ್ತು ಕೆಲಸಗಾರರು, ಅದನ್ನು ಅಗ್ಗದಲ್ಲಿ ತಯಾರಿಸಲು ಸಾಧ್ಯವಾಗುತ್ತಿದ್ದುದರಿಂದ ಧರಿಸುತ್ತಿದ್ದರು. ಇಂದು ಅನೇಕರು, ಕೆಳಗೆ ಮರ, ಮೇಲೆ ಚರ್ಮ ಯಾ ಇತರ ವಸ್ತುವಿರುವ ಕ್ಲಾಗ್ಗಳನ್ನು ಧರಿಸಲು ಇಷ್ಟಪಡುತ್ತಾರೆ. ಕ್ಲಾಗ್ನಂತೆ ಹಿಂದಿನಿಂದ ಆಧಾರವಿಲ್ಲದಿರುವ, ಆದರೂ ಅದಕ್ಕಿಂತ ಹೆಚ್ಚು ನಾಜೂಕಾಗಿರುವ ಮ್ಯೂಲ್ ಎಂಬುದನ್ನು ಸಾಮಾನ್ಯವಾಗಿ ಮನೆಯೊಳಗೆ ಧರಿಸಲಾಗುತ್ತದೆ. ಇದರ ಡಿಸೈನು ಸುಮೇರಿಯದವರ ಮುಲು ಎಂಬ ಕಟ್ಟುಪಟ್ಟಿ ಇಲ್ಲದ, ಯಾ ಸಮತಲದ ಅಟ್ಟೆಯ ಮೆಟ್ಟಿನ ಒಂದು ರೂಪ ಎಂದು ಹೇಳಲಾಗಿದೆ. ಇದರ ಆಧುನಿಕ ರೂಪ ಹಿಮ್ಮಡಿಯುಳ್ಳದ್ದಾಗಿ ಬಹಳ ಶೈಲಿಯದ್ದಾಗಿ ಪರಿಣಮಿಸಿದೆ.
ಈ ಏಳು ಮೂಲರೂಪಗಳಲ್ಲಿ ಅತಿ ಹಳೆಯದ್ದು ಸ್ಯಾಂಡಲ್ ಮತ್ತು ಮಾಕಸಿನ್. ಇವೆರಡರಲ್ಲಿ ಸ್ಯಾಂಡಲ್ ಕೆರ ಹೆಚ್ಚು ವ್ಯಾಪಕವಾಗಿ ಉಪಯೋಗಿಸಡುತ್ತಿದ್ದು ಬೈಬಲ್ ಸಮಯಗಳ ಸಾಮಾನ್ಯ ಪಾದರಕ್ಷೆಯಾಗಿತ್ತು. ಇದು ಕೇವಲ ಮರದ ಯಾ ಚರ್ಮದ ತುಂಡಾಗಿದ್ದು ಅದನ್ನು ಪಟ್ಟಿಯಿಂದ ಪಾದಕ್ಕೆ ಬಿಗಿಯಲಾಗುತ್ತಿತ್ತು. ಆದರೆ, ಮಾಕಸಿನ್, ಇಂಡಿಯನರಿಂದ ಉತ್ತರ ಅಮೆರಿಕದಲ್ಲಿ ಪ್ರಸಿದ್ಧಿಗೆ ಬಂತು. ಅವರು ಅದಕ್ಕೆ, “ಪಾದ ಹೊದಿಕೆ” ಎಂಬರ್ಥದ ಹೆಸರನ್ನು ಕೊಟ್ಟರು.
ನೀವು ಇನ್ನೊಮ್ಮೆ ಪಾದರಕ್ಷೆಗಳನ್ನು ನೋಡುವಲ್ಲಿ, ಅದು ಏಳು ಮೂಲರೂಪಗಳಲ್ಲಿ ಯಾವುದೆಂದು ಗುರುತಿಸಬಲ್ಲಿರೋ? ಮೊದಲ ದೃಷ್ಟಿಹರಿಸುವಾಗ ಅದು ಅಷ್ಟು ಸುಲಭವೆಂದು ಕಾಣಲಿಕ್ಕಿಲ್ಲ. ಇದು ಏಕೆಂದರೆ, ವರ್ಷಗಳಿಂದ ಬದಲಾಗುತ್ತಿರುವ ರುಚಿ ಮತ್ತು ಶೈಲಿಗಳಿಗೆ ಹೊಂದಿಕೊಳ್ಳಲು ಈ ಮೂಲರೂಪಗಳನ್ನು ತಡೆಯಿಲ್ಲದೆ ಆಯ್ದುಕೊಳ್ಳಲಾಗಿದೆ. ಆದರೆ ನಿಕಟ ಅಧ್ಯಯನವು ಅದನ್ನು ಯೋಗ್ಯವಾಗಿ ಗುರುತಿಸುವಂತೆ ಸಹಾಯ ಮಾಡುವುದು. ಉದಾಹರಣೆಗೆ, ಜಾಗಿಂಗ್ ವ್ಯಾಯಾಮ ಓಟದ ಷೂ, ಏಳು ಮೂಲರೂಪಗಳಲ್ಲಿ ಯಾವುದರಂತೆಯೂ ಕಾಣದಿದ್ದರೂ, ಅವು ವಿವಿಧ ವಸ್ತುಗಳಿಂದ ಮಾಡಲ್ಪಟ್ಟ ಆಕ್ಸ್ಫರ್ಡುಗಳಲ್ಲದೆ ಇನ್ನಾವುದೂ ಅಲ್ಲ. ಒಬ್ಬ ಹೆಂಗಸಿನ ತೆರೆದ ಹಿಂಬದಿಯ ಷೂ ನಿಜವಾಗಿಯೂ ಪಟ್ಟಿ ಕೂಡಿಸಲ್ಪಟ್ಟ ಮ್ಯೂಲ್ ಆಗಿದೆ, ಮತ್ತು ಲೋಫರ್ ಷೂ ಮೂಲರೀತಿಯಲ್ಲಿ ಬಲವಾದ ಅಟೆಯ್ಟಿರುವ ಮಾಕಸಿನ್ ಆಗಿದೆ.
ಕಾಲ್ದೊಡಿಗೆಯ ಫ್ಯಾಷನ್ಗಳನ್ನು ಹೊರಡಿಸಲಾದ ವಿಧ
ನೂರಾರು ವರ್ಷಕಾಲ, ಕಾಲ್ದೊಡಿಗೆಯ ಫ್ಯಾಷನ್ಗಳು ಕಟ್ಟುನಿಟ್ಟಾಗಿ ಧನಿಕರ ಹಾಗೂ ಉತ್ತಮ ಕುಲದವರ ಅಧಿಕಾರಕ್ಷೇತ್ರವಾಗಿತ್ತು. ಜನಸಾಮಾನ್ಯರಿಗೆ ಪಾದರಕ್ಷೆಗಳು ಕೇವಲ ಪಾದರಕ್ಷೆ—ಪಾದಗಳ ಹೊದಿಕೆ ಮತ್ತು ರಕ್ಷೆ—ಆಗಿದ್ದವು. ಅವರಿಗೆ ಅವು ಮಾಡುವ ಕೆಲಸವೇ ಮುಖ್ಯವಾಗಿತ್ತು; ಅವುಗಳ ತೋರಿಕೆಗೆ ಹೆಚ್ಚು ಲಕ್ಷ ಕೊಡಲ್ಪಡಲಿಲ್ಲ. ನಾವಿಂದು ತಿಳಿದಿರುವ ಫ್ಯಾಷನ್ ಷೂಗಳ ಇಡೀ ವಿಚಾರ ಮತ್ತು ವ್ಯಾಪಾರ ಅತಿ ಇತ್ತೀಚೆಗಿನದ್ದು.
ಈ ಪಾದರಕ್ಷೆಯ ವ್ಯಾಪಾರ ವಿಕಾಸಗೊಳ್ಳುವುದನ್ನು ತಡೆದಿರುವ ಒಂದು ಸಂಗತಿಯು ಯಾವುದೆಂದರೆ, ಶತಮಾನಗಳಲ್ಲಿ ಪಾದರಕ್ಷೆಗಳು ಕೈಕೆಲಸದ ಉತ್ಪನ್ನವಾಗಿದ್ದವು. ಅವನ್ನು ತಯಾರಿಸಲು ಸಮಯ ಹಿಡಿಯುತ್ತಿತ್ತು, ಮತ್ತು ಅವುಗಳ ಬೆಲೆ ಜಾಸ್ತಿಯಾಗಿತ್ತು. ತಮಗೆ ಮನಸ್ಸು ಬಂದಾಗ ಹೊಸ ಪಾದರಕ್ಷೆಗಳನ್ನು ಕೊಳ್ಳಲು ಅಧಿಕಾಂಶ ಜನರಿಗೆ ಸಾಧ್ಯವಿರಲಿಲ್ಲ. ಇವೆಲ್ಲವನ್ನು ಬದಲಾಯಿಸಿದ್ದು ಯಾವದೆಂದರೆ, 1800ಗಳ ಮಧ್ಯಭಾಗದಲ್ಲಿ ಅಮೆರಿಕದಲ್ಲಿ ಆಚರಣೆಗೆ ಬಂದ ಪಾದರಕ್ಷೆಗಳನ್ನು ಮಾಡುವ ಯಂತ್ರವೇ. ತುಸು ಸಮಯದೊಳಗೆ ಕಸಬು ಉದ್ಯಮವಾಗಿ ಪರಿಣಮಿಸಿತು. ಪಾದರಕ್ಷೆಗಳು ವ್ಯಾಪಕವಾಗಿ ದೊರಕಿದ್ದು ಮಾತ್ರವಲ್ಲ, ಅವನ್ನು ಸುಲಭ ಬೆಲೆಗೆ ಖರೀದಿಸಲು ಸಾಧ್ಯವಾಯಿತು. ಆದರೂ, ಷೂ ಫ್ಯಾಷನ್ಗಳು ಪ್ರಗತಿ ಹೊಂದಲು ಇನ್ನೆರಡು ಸಂಭವಗಳ ಅಗತ್ಯವಿತ್ತು: 1919 ರ ವಾಲ್ಸ್ಟೆಡ್ ಮಸೂದೆ (ಪ್ರೊಹಿಬಿಷನ್ ಮಸೂದೆಯೆಂದೂ ಪ್ರಸಿದ್ಧವಾಗಿದೆ)ಯ ಅಂಗೀಕಾರ ಮತ್ತು 1920 ರಲ್ಲಿ ಸ್ತ್ರೀಯ ಮತ ಹಾಕುವ ಹಕ್ಕನ್ನು ಖಾತರಿ ಮಾಡಿದ ಸಾಂವಿಧಾನಿಕ ತಿದ್ದುಪಡಿಯ ಸ್ಥಿರೀಕರಣ.
ಈ ಘಟನೆಗಳು ಅಮೆರಿಕನ್ ಸಮಾಜದಲ್ಲಿ ಅಗಾಧ ಬದಲಾವಣೆಗಳನ್ನು ಮಾಡಿದವು. ಮದ್ಯಪಾನ ನಿರೋಧವು ಹೊಸ ಮನೋರಂಜನೆಯ ವಿಧಗಳಾದ ಡಾನ್ಸಿಂಗ್ ಮತ್ತು ಸಂಗೀತವನ್ನು ಜಾರಿಗೆ ತಂದವು. ಮಹಿಳೆಯರು ತಮ್ಮ ಹೊಸದಾಗಿ ಪಡೆದ ಸ್ವಾತಂತ್ರ್ಯದಲ್ಲಿ ಈ ಆತ್ಮ ವಿಮೋಚನೆಯ ಚಟುವಟಿಕೆಗಳೆಂದು ಕರೆಯಲ್ಪಟ್ಟ ಚಟುವಟಿಕೆಗಳಲ್ಲಿ ಲೋಲುಪರಾಗಿ, ಹೊಸದೂ ಭಿನ್ನವೂ ಆದ ಪ್ರತಿಯೊಂದು ವಿಷಯಗಳನ್ನು ಬೆನ್ನಟ್ಟಿದರು. ಕಾಂತಿವರ್ಧಕ ವಸ್ತುಗಳು, ಉದಕ್ದಿರಿದಾದ ಲಂಗಗಳು ಮತ್ತು ಹೊಸ ಕೇಶಾಲಂಕಾರಗಳೊಂದಿಗೆ ಷೂ ಫ್ಯಾಷನ್ಗಳ ಮೋಹಕತೆಯೂ ಬಂತು. ಪ್ರತಿಭಟನೆಯ “ಬಡಿತ ಯುಗ” (“flapper age”) ವೆಂಬುದು ತನ್ನ ಹೆಸರನ್ನು ತಮ್ಮ ಷೂಗಳನ್ನು ಬೇಕೆಂದು ಅವುಗಳ ಚಿಲುಕು ಕಟ್ಟದೆ ಬಿಟ್ಟ ಯುವತಿಯರಿಂದ ಪಡೆಯಿತು. ಅವರು ನಡೆದಾಗ, ಅವರ ಷೂಗಳು ಗಟ್ಟಿಯಾಗಿ “ಬಡಿದಾಟ” ಮಾಡುತ್ತಾ, ಆ ಮಹಿಳೆಯರ ಮತ್ತು ಅವರ ಚಳವಳಿಗೆ ಗಮನ ಸೆಳೆದವು.
ಇವೆಲ್ಲ ಲಾವಣ್ಯದ ಹಾಗೂ ಅಗದ್ಗ ಪಾದರಕ್ಷೆಗಳಿಗೆ ಮಹಾ ಗಿರಾಕಿಯನ್ನು ಉಂಟುಮಾಡಿತು. ಇದು, ಷೂ ತಯಾರಿಯ ಹೊಸ ಕಾರ್ಯವಿಧಾನ ಮತ್ತು ಮೂಲವಸ್ತುಗಳೊಂದಿಗೆ ಕಾಲ್ದೊಡಿಗೆಯ ಫಾಷನ್ಗಳನ್ನು ಅದು ಇಂದಿರುವ ಸ್ಥಿತಿಗೆ ಹಾರಿಸಿದೆ. ಈಗ, ಇತಿಹಾಸದಲ್ಲಿ ಪ್ರಥಮ ಬಾರಿ, ಶೈಲಿಯ ಪಾದರಕ್ಷೆಗಳು ಧನಿಕರ ಮತ್ತು ಬಲಶಾಲಿಗಳ ವಿಶೇಷ ಹಕ್ಕಾಗಿರದೆ ಸಾಮಾನ್ಯವಾಗಿ ಸಕಲರೂ ಪಡೆಯಲು ಸಾಧ್ಯವಾಗಿರುವ ವಸ್ತುವಾಗಿದೆ.
ಆಶ್ಚರ್ಯಕರವಾಗಿ, ಗತ ಶತಮಾನಗಳ ಕಾಲ್ದೊಡಿಗೆಗಳ ಶೈಲಿ ಮತ್ತು ರಚನೆಯ ವಿಷಯದಲ್ಲಿ ಸಕಲ ಕೂಗಾಟಗಳ ಎದುರಿನಲ್ಲೂ ಆ ಏಳು ಮೂಲರೂಪಗಳು ವಿಶಿಷ್ಟವಾಗಿ ಬದಲಾವಣೆ ಹೊಂದದೆ ನಿಂತಿವೆ. ಆದರೂ ಷೂಗಳ ಅನಂತ ವೈವಿಧ್ಯ ಮತ್ತು ಸಾವಿರಾರು ರೀತಿಯ ರಚನೆ ಮತ್ತು ತೋರಿಕೆಗಳು ಆ ವ್ಯಾಪಾರದಲ್ಲಿರುವವರ ಕಲ್ಪನಾ ಚಾತುರ್ಯವನ್ನು ರುಜುಪಡಿಸುತ್ತವೆ. ಇದರ ವ್ಯಾಪಕವಾದ ವೈವಿಧ್ಯವು, ರುಚಿ ಮತ್ತು ಶೈಲಿಗಳು ಎಷ್ಟು ಕಣ್ಷಿಕೋತ್ಸಾಹದ್ದೆಂದರೆ ಇವುಗಳ ಗತಿಯನ್ನು ಏರ್ಪಡಿಸುವವರ ಹುಚ್ಚಾಟಕ್ಕೆ ಬಲಿ ಬೀಳುವುದು ಸುಲಭವೆಂದೂ ತೋರಿಸುತ್ತದೆ. (g90 12/8)
[ಪುಟ 24ರಲ್ಲಿರುವಚೌಕ]
ಹಳೆಯ ಕೆರ ಕಥೆಗಳು
◻ ತಲೆನೋವಿನ ಶಮನಕ್ಕೆ, ಪುರಾತನ ಕಾಲದ ಈಜಿಪ್ಟಿನವರು ಒಂದು ಕೆರವನ್ನು ಸುಟ್ಟು ಅದರ ಹೊಗೆಯನ್ನು ಶ್ವಾಸವಾಡುತ್ತಿದ್ದರು.
◻ ಹೊಟ್ಟೆನೋವನ್ನು ಗುಣಪಡಿಸಲು, ಅಮೆರಿಕದ ಕೆಲವು ಆದಿ ನೆಲಸಿಗರು ಮಲಗಿ ತಮ್ಮ ಹೊಟ್ಟೆಯ ಮೇಲೆ ಭಾರವುಳ್ಳ ಬೂಟಿನ ಜೊತೆಯನ್ನು ಇಡುತ್ತಿದ್ದರು.
◻ ಒಂದು ಕಾಲದಲ್ಲಿ, ಒಬ್ಬ ಅರಬಿ ಪುರುಷನು ಕೇವಲ ತನ್ನ ಹೆಂಡತಿಯ ಪಾದರಕ್ಷೆಗಳನ್ನು, ಸವೆದ ಕೆರಗಳ ಜೋಡಿಯನ್ನು ಹೊರಗೆಸೆಯುವಂತೆ, ಬಾಗಲಿಂದ ಹೊರಗೆಸೆಯುವ ಮೂಲಕ ಅವಳನ್ನು ವಿವಾಹ ವಿಚ್ಛೇದಿಸಸಾಧ್ಯವಿತ್ತು.
◻ ಸಿಂಡರೆಲ್ಲಳ ಕಥೆ, ಕೆರ ಕಥೆಗಳಲ್ಲಿ ಅತ್ಯಂತ ಪ್ರಖ್ಯಾತ. ಈ ಕಥೆಯ ನೂರಾರು ಕಥನಾಂತರಗಳು ಜನರಿಂದ ಲೋಕವ್ಯಾಪಕವಾಗಿ ಹೇಳಲ್ಪಡುತ್ತವೆ, ಮುದ್ರಿಸಲ್ಪಟ್ಟಿರುವುದರಲ್ಲಿ ಅತಿ ಹಳೆಯ ಕಥೆ ಚೈನಾದವರದ್ದು. ಜನಪ್ರಿಯ ಪಾಶ್ಚಾತ್ಯ ಕಥನಾಂತರಕ್ಕೆ ಸುಮಾರು 800 ವರ್ಷಗಳ ಹಿಂದೆ, ಒಂಭತನ್ತೆಯ ಶತಕದಲ್ಲಿ ಅದು ಬರೆಯಲ್ಪಟ್ಟಿತು.
[ಪುಟ 24 ರಲ್ಲಿರುವಚಿತ್ರಗಳು]
ಸ್ಯಾಂಡಲ್
ಪಂಪ್
ಬೂಟ್
ಆಕ್ಸ್ಫರ್ಡ್
ಕ್ಲಾಗ್
ಮ್ಯೂಲ್
ಮಾಕಸಿನ್