ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g92 1/8 ಪು. 30
  • ಜಗತ್ತು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತು ಗಮನಿಸುವುದು
  • ಎಚ್ಚರ!—1992
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ದೀರ್ಘಾಯುಸ್ಸಿನ ರಹಸ್ಯ
  • ಕ್ಲಾಂಗ್‌ಗಳನ್ನು ಶುದ್ಧ ಮಾಡಿರಿ
  • ವಿಮಾನ ಅಪಘಾತಗಳು
  • ಕೆಲಸಗಾರರ ಕಳ್ಳತನ
  • ಐಶ್ವರ್ಯವನ್ನು ರಕ್ಷಿಸಲು ಬುದ್ಧರು
  • ಜಿರಳೆ ನಿಯಂತ್ರಣ
  • “ಕಷ್ಟ ಸುಖಗಳೆರಡರಲ್ಲಿಯೂ”
  • ಮೆಡಿಟರೇನಿಯನ್‌ ಮಂಕ್‌ ಸೀಲ್‌ಗಳು ಅವು ಪಾರಾಗಿ ಉಳಿಯುವವೋ?
    ಎಚ್ಚರ!—2001
  • ಸಾಗರಗಳು ಅಮೂಲ್ಯವಾದ ಸಂಪತ್ತೋ ಅಥವಾ ಜಾಗತಿಕ ಚರಂಡಿಯೋ?
    ಎಚ್ಚರ!—1990
  • ಭಯ—ಈಗ ಸಾಮಾನ್ಯ ಆದರೆ ಸದಾಕಾಲಕ್ಕಲ್ಲ!
    ಕಾವಲಿನಬುರುಜು—1995
ಎಚ್ಚರ!—1992
g92 1/8 ಪು. 30

ಜಗತ್ತು ಗಮನಿಸುವುದು

ದೀರ್ಘಾಯುಸ್ಸಿನ ರಹಸ್ಯ

ಸ್ತ್ರೀಯರ ಸರಾಸರಿ ಆಯುಸ್ಸು ನಿರೀಕ್ಷಣೆ 81.77 ವರ್ಷಗಳು ಮತ್ತು ಪುರುಷರದ್ದು 75.91 ವರ್ಷಗಳು—ಇವನ್ನು ತಲುಪುತ್ತಾ ಜಪಾನೀಯರು ಒಂದು ಹೊಸ ಲೋಕ ದಾಖಲೆಯನ್ನು ಮಾಡಿದ್ದಾರೆ. ಇದನ್ನು ಪರಿಣತರು, “ಶಿಶು ಮತ್ತು ಮಧ್ಯ ವಯಸ್ಕರ ಮರಣಗಳಲ್ಲಿ ಕೆಳಗಿಳಿತ” ಕ್ಕೆ ಸಂಬಂಧಿಸಿದ್ದಾರೆಂದು ಮೈನಿಚಿ ಡೆಯ್ಲಿ ನ್ಯೂಸ್‌ ವರದಿ ಮಾಡಿತು. ಜಪಾನಿನಲ್ಲಿ ಅತಿ ವೃದ್ಧೆ ಮತ್ತು ದೇಶದ 3,298 ಜನ ಶತಾಯುಷಿಗಳಲ್ಲಿ ಒಬ್ಬಳಾದ 112 ವಯಸ್ಸಿನ ವಾಕ ಶಿರಹಾಮ, ತನ್ನ ದೀರ್ಘಾಯುಸ್ಸಿನ ಗುಟ್ಟು, “ಶೃದ್ಧೆಯ, ನಿಯಂತ್ರಣದ ಮತ್ತು ಪ್ರಾಮಾಣಿಕತೆಯ ಜೀವನವನ್ನು ನಡೆಸುವುದೇ” ಎಂದು ಹೇಳಿದಳೆಂದು ದ ಡೆಯ್ಲಿ ಯೀಮಿಯುರಿ ಹೇಳಿತು. ಇನ್ನೊಂದು ವಾರ್ತಾಭೇಟಿಯಲ್ಲಿ ಅವಳು ಹೇಳಿದ್ದು: “ಎಲ್ಲಾ ವಿಧದ ಆಹಾರವನ್ನು ಇಷ್ಟ, ಅನಿಷ್ಟವಿಲ್ಲದೆ ತಿನ್ನಿರಿ, ತುಂಬ ನಿದ್ದೆ ಪಡೆಯಿರಿ, ಮತ್ತು ನಸುನಗೆ ಬೀರುತ್ತಾ ಇರಲು ಮರೆಯಬೇಡಿ.” (g90 12/22)

ಕ್ಲಾಂಗ್‌ಗಳನ್ನು ಶುದ್ಧ ಮಾಡಿರಿ

ಮುಟ್ಟುಗೋಲುಗಳ ಮೇಲೆ ಮನೆಗಳಿರುವ ಬ್ಯಾಂಕಾಕಿನ ಆಕರ್ಷಕ, ಗದ್ದಲದ ಕ್ಲಾಂಗ್‌ಗಳು ಥಾಯ್ಲೆಂಡಿನ ರಾಜಧಾನಿಯನ್ನು ಪ್ರಸಿದ್ಧವಾಗಿ ಮಾಡಿವೆ. ಆದರೆ, ಏಸ್ಯವೀಕ್‌ ಪತ್ರಿಕೆ, “ಅದರ ಕೆಲವು ಜಲಮಾರ್ಗಗಳು ಕಚಡ ಮತ್ತು ರೊಚ್ಚಿನಿಂದ ತಿಳಿನೀರಿನ ಕೊಳೆತ ಚರಂಡಿಯಾಗಿವೆ” ಎಂದು ಗಮನಿಸಿತು. ಕ್ಲಾಂಗ್‌ಗಳ ಬದಿಯಲ್ಲಿರುವ ಅಧಿಕಾಂಶ ಮನೆಗಳು ಬ್ಯಾಂಕಾಕಿನ ಚರಂಡಿ ವ್ಯವಸ್ಥೆಯೊಳಗೆ ಬಂದಿರುವುದಿಲ್ಲ ಮತ್ತು ಕಚಡದ ಟ್ರಕ್ಕುಗಳು ಅವುಗಳನ್ನು ತಲುಪಲಾರವು. ಪರಿಣಾಮ: ಪ್ರತಿದಿನ, 140 ಟನ್ನು ರೊಚ್ಚೆ ಮತ್ತು ಕಚಡ ಥಾಯ್ಲೆಂಡಿನ ಕ್ಲಾಂಗ್‌ಗಳನ್ನು ಪೋಷಿಸುವ ಮಹಾ ಚಾವ್‌ ಪ್ರಾಯ ನದಿಯೊಳಗೆ ಹೋಗುತ್ತದೆ. ಕಚಡದಿಂದ ತುಂಬಿ ಜೀವದಾಯಕವಾದ ಆಮ್ಲ ಜನಕ ಕಡಮೆಯಾಗಿರುವ ಕೆಲವು ಕ್ಲಾಂಗ್‌ಗಳು, ನದಿಯ ಬಳಿ ವಾಸಿಸುವ ಜನರಿಗೆ ತಡೆಯಲಾಗದ ದುರ್ವಾಸನೆಯನ್ನು ಹೊರಡಿಸುತ್ತವೆ. ಹೀಗೆ, ಕ್ಲಾಂಗ್‌ಗಳನ್ನು ಶುಚಿಗೊಳಿಸಲು ಒಂದು ಚಳವಳಿಯನ್ನು ಆರಂಭಿಸಲಾಗಿದೆ. “ಈ ಚಳವಳಿಗೆ ಸ್ವಯಂಸೇವಕರುಗಳ ದಂಡುಗಳು ಓಗೊಟ್ಟಿವೆ” ಎಂದು ಏಸ್ಯವೀಕ್‌ ಗಮನಿಸಿತು. (g90 12/22)

ವಿಮಾನ ಅಪಘಾತಗಳು

ದೊಡ್ಡ ವಿಮಾನ ತಯಾರಕ ಬೋಯಿಂಗ್‌ ಕಂಪೆನಿ, ವಿಮಾನ ಅಪಘಾತಗಳ ಆವೃತ್ತಿ ಸಂಖ್ಯೆ ಮತ್ತು ಕಾರಣಗಳನ್ನು ಅಧ್ಯಯನ ಮಾಡಿಯದೆ. ದ ವಾಲ್‌ ಸ್ಟ್ರೀಟ್‌ ಜರ್ನಲ್‌ ಹೇಳುವುದೇನಂದರೆ, 1950 ಗಳ ಕಡೆಯ ಭಾಗದಿಂದ ಹಿಡಿದು ಸಂಭವಿಸಿದ ಸುಮಾರು 850 ದೊಡ್ಡ ಅಪಘಾತಗಳನ್ನು ಈ ಕಂಪೆನಿ ಪರೀಕ್ಷಿಸಿದೆ. “ವಿಮಾನ ಸಿಬ್ಬಂದಿಗಳು ಮಾಡುವ ತಪ್ಪುಗಳು ಕಳೆದ ಹತ್ತು ವರ್ಷಗಳಲ್ಲಿ ನಡೆದ 72 ಪ್ರತಿಶತ ಅಪಘಾತಗಳಿಗೆ ಕಾರಣ” ಎಂದು ಬೋಯಿಂಗ್‌ ವಾದಿಸುತ್ತದೆ. ವಿಮಾನ ಹಾರಾಟಗಳು ಇಂದಿನ ವೇಗದಲ್ಲಿ ಹೆಚ್ಚುವುದಾದರೆ ಮತ್ತು ಅಪಘಾತಗಳು ಜಾಸ್ತಿ ವೇಗದಲ್ಲಿ ಕಡಮೆಯಾಗದಿದ್ದರೆ, ಮುಂದಿನ ದಶಕದ ಮಧ್ಯ ಭಾಗದೊಳಗೆ, ಮೊತ್ತದ ಪರಿಣಾಮವು “ಸರ್ವ ವಿಧದ ವಿಮಾನಗಳು ವರ್ಷಕ್ಕೆ 20 ದೊಡ್ಡ ರೀತಿಯ ಅಪಘಾತಗಳನ್ನುಂಟು ಮಾಡುವುವು. . . . ಇದು ಈಗ ನಡೆಯುವ 15 ಕ್ಕಿಂತ ಹೆಚ್ಚು.” (g90 12/22)

ಕೆಲಸಗಾರರ ಕಳ್ಳತನ

ಪಾತಕಗಳು ಬ್ರಿಟಿಷ್‌ ಉದ್ಯಮಕ್ಕೆ ಸುಮಾರು 22,500 ಕೋಟಿ ರೂಪಾಯಿಗಳನ್ನು ನಷ್ಟ ಮಾಡಿವೆಯೆಂದು ಬ್ರಿಟಿಷ್‌ ಉದ್ಯಮ ಸಂಘದ ಜನರಲ್‌ ಡೈರೆಕ್ಟರ್‌ ಜಾನ್‌ ಬ್ಯಾನಮ್‌ ಹೇಳುತ್ತಾರೆ. ಈ ಮೊತ್ತದಲ್ಲಿ, ನಾಲ್ಕು ಸಾವಿರದಿಂದ ಆರು ಸಾವಿರ ಕೋಟಿ ರೂಪಾಯಿ ಕೆಲಸಗಾರರ ಕಳ್ಳತನದಿಂದ ನಷ್ಟವಾಗುತ್ತದೆ. ಇತ್ತೀಚಿನ ಒಂದು ಸರ್ವೇಯ ಪರಿಣಾಮವನ್ನು ತಿಳಿಸುತ್ತಾ ಲಂಡನಿನ ಡೆಯ್ಲಿ ಟೆಲಿಗ್ರಾಫ್‌ ಹೇಳುವುದೇನಂದರೆ ಕೇಳಲ್ಪಟ್ಟವರಲ್ಲಿ 85 ಪ್ರತಿಶತ ಕೆಲಸಗಾರರು ಜೊತೆ ಕಾರ್ಮಿಕರು ಕದ್ದದ್ದನ್ನು ಅಧಿಕಾರಿಗಳಿಗೆ ತಿಳಿಸಲಿಲ್ಲ. ಇತರ ಅಪ್ರಾಮಾಣಿಕ ವರ್ತನೆಗಳಲ್ಲಿ ಮನೋಭಾವ ವಯಸ್ಸಿಗನುಸಾರ ಬದಲಾವಣೆಯಾಯಿತೆಂದು ಸರ್ವೇ ಗಮನಿಸಿತು. 45 ಕ್ಕೆ ಹೆಚ್ಚು ವಯಸ್ಸಿನ ಕಾರ್ಮಿಕರಲ್ಲಿ ಅರ್ಧಾಂಶಕ್ಕೂ ಹೆಚ್ಚು ಮಂದಿ ತಮ್ಮ ಕಂಪೆನಿಯ ಟೆಲಿಫೋನನ್ನು ಖಾಸಗಿ ಕೆಲಸಗಳಿಗೆ ಉಪಯೋಗಿಸಲು ಬಯಸದೆ ಇರುವಾಗ 16 ರಿಂದ 24 ವಯಸ್ಸಿನವರಲ್ಲಿ ನಾಲ್ಕರಲ್ಲಿ ಒಂದಕ್ಕೂ ಕಡಮೆ ಮಂದಿ ಇದಕ್ಕೆ ಅಸಮ್ಮತಿ ತೋರಿಸಿದರು. ಅಲ್ಲದೇ, ಈ ಚಿಕ್ಕವರ ಗುಂಪಿನಲ್ಲಿ ಕೇವಲ 19 ಪ್ರತಿಶತ, ಕೆಲಸದ ಸಮಯದಲ್ಲಿ ಕಂಪೆನಿಗೆ ಸಂಬಂಧ ಪಡದ ಮಾತುಗಳನ್ನಾಡುವುದು “ಸಮಯ ಕಳವು” ಎಂದೆಣಿಸಿದರು.” (g90 11/22)

ಐಶ್ವರ್ಯವನ್ನು ರಕ್ಷಿಸಲು ಬುದ್ಧರು

ಜಪಾನಿನ ಚಿನ್ನ ವರ್ತಕರು ತಮ್ಮಲ್ಲಿ ಅತ್ಯುತ್ತಮವಾಗಿ ಮಾರಿ ಹೋಗುವ ವಸ್ತು ಬುದ್ಧನ ಚಿನ್ನದ ಪ್ರತಿಮೆಗಳೆಂದು ಇದ್ದಕ್ಕಿದ್ದ ಹಾಗೆಯೇ ಕಂಡುಹಿಡಿದಿದ್ದಾರೆ. ಇದೇಕೆ? ಹೊಸ ತೆರಿಗೆಯ ಏರ್ಪಾಡು ಬಂದಂದಿನಿಂದ ಚಿನ್ನ ಅಗವ್ಗಾಗಿರುವುದರಿಂದಲೇ. ಅಲ್ಲದೆ, ಈ ಧಾರ್ಮಿಕ ಮೂರ್ತಿಗಳಿಗೆ ಪಿತ್ರಾರ್ಜಿತ ಸಂಪತ್ತಿನ ತೆರಿಗೆಯಿಂದ ವಿನಾಯಿತಿ ಇದೆ ಎಂಬ ಜನಪ್ರಿಯ ಅಭಿಪ್ರಾಯವೂ ಇದೆ. ಆದರೆ ತೆರಿಗೆ ಇಲಾಖೆಯು ನಿಯಮದಿಂದ ತಪ್ಪಿಸಿಕೊಳ್ಳಲಿಕ್ಕಾಗಿ—ಧಾರ್ಮಿಕ ಮಹತ್ವ ಮತ್ತು ಉಪಯೋಗಕ್ಕಾಗಿ ಅಲ್ಲ— ಖರೀದಿಸಿರುವ ಬುದ್ಧನ ಪ್ರತಿಮೆಗಳಿಗೆ ತೆರಿಗೆ ಹಾಕುವುದಾಗಿ ಬೆದರಿಸಿದೆ. ಬುದ್ಧನ ರಚನೆಯಲ್ಲಿ ಸೇರಿರುವ ಕೂಲಿ, ಚಿನ್ನದ ಬೆಲೆಗಿಂತ 75 ಪ್ರತಿಶತ ಹೆಚ್ಚು ತಗಲುವುದರಿಂದಲೂ ಈ ಖರ್ಚು ಅವಿವೇಕದ್ದಾಗುತ್ತದೆಂದು ಚಿನ್ನ ವರ್ತಕರು ಸೂಚಿಸುತ್ತಾರೆ. (g90 11/22)

ಜಿರಳೆ ನಿಯಂತ್ರಣ

“ಜಿರಳೆಗಳು ಮನುಷ್ಯರಿಗಿಂತ ಹೆಚ್ಚಿನ ವಿದ್ಯುತ್‌ ವಿಕಿರಣನ್ನು ತಡೆಯಬಲ್ಲವು” ಎನ್ನುತ್ತಾರೆ ಅಮೆರಿಕದ ವ್ಯವಸಾಯ ಸಂಶೋಧನ ಸಂಘದ ರಿಚರ್ಡ್‌ ಬ್ರೆನರ್‌. “ಆದರೆ ಅವು ಕಾವನ್ನು ಹೊಂದಿಸಿಕೊಳ್ಳಲಾರವು, ಮತ್ತು ಈ ಕಾರಣದಿಂದ, ನಮಗೆ ತಡೆಯಶಕ್ತವಾಗುವ ಶಾಖ—ನಮ್ಮ ದೇಹದ ಶಾಖವನ್ನು ಕೆಳಗಿಳಿಸಲು ನಾವು ಬೆವರುತ್ತೇವೆ—ಅವುಗಳನ್ನು ಕೊಲ್ಲುತ್ತದೆ.” ಈಗ ಕ್ಯಾಲಿಫೋರ್ನಿಯದ ಕೀಟ ನಿರೋಧ ಕಂಪೆನಿಯೊಂದು ಮನೆಯ ಜಿರಳೆ ಮತ್ತು ಇತರ ಕೀಟಗಳನ್ನು ನಿವಾರಿಸಲು ಈ ನಿಜತ್ವವನ್ನು ಉಪಯೋಗಿಸುತ್ತದೆ. ಕೀಟಗಳಿರುವ ಮನೆಯನ್ನು ಕ್ಯಾನ್ವಸ್‌ ಡೇರೆಯಿಂದ ಮುಚ್ಚಲಾಗುತ್ತದೆ. ಒಳಗಣ ಶಾಖವನ್ನು ಪ್ರೊಪೇನ್‌ ಬರ್ನರ್‌ ಮತ್ತು ಫ್ಯಾನನ್ನು ಉಪಯೋಗಿಸಿ 150 ಡಿಗ್ರಿ ಫ್ಯಾರನ್‌ಹೈಟ್‌ [66 ಡಿಗ್ರಿ ಸೆಂಟಿಗ್ರೇಡ್‌] ಗೆ ಏರಿಸಲಾಗುತ್ತದೆ. “ಆ ತಾಪಮಾನದಲ್ಲಿ ನಾಲ್ಕು ತಾಸುಗಳೊಳಗೆ ಕಟ್ಟಡದ ಪ್ರತಿಯೊಂದು ಭಾಗ 50°C [122°F.], ಗೆ ಏರುತ್ತದೆ. ಇದು ಜಿರಳೆ, ಇರುವೆ, ನೊಣ, ಉಣ್ಣಿ, ಹಾರುಕೀಟ ಮತ್ತು ಗೆದ್ದಲನ್ನು ಸಹ ಕೊಲ್ಲಲು ಸಾಕು,” ಎನ್ನುತ್ತದೆ ನ್ಯೂ ಸೈಂಟಿಸ್ಟ್‌. (g90 11/22)

“ಕಷ್ಟ ಸುಖಗಳೆರಡರಲ್ಲಿಯೂ”

“ವಿವಾಹಗಳು ಏರ್ಪಡಿಸಲ್ಪಡುವುದು ಸ್ವರ್ಗದಲ್ಲಿ ಎನ್ನಲಾಗುತ್ತದೆ” ಎನ್ನುತ್ತದೆ ಇಂಡಿಯ ಟುಡೇ. “ಆದರೆ ಪಾಟನ್‌ ಹಳ್ಳಿಯ ಈ ಎರಡು ದಂಪತಿಗಳಿಗೆ ವಿವಾಹವು ಭೂಮಿಯಲ್ಲಿ ಅನಿರ್ಣಯಿಸಲ್ಪಡುವಂತೆ ಕಂಡಿತು.” ಎರಡು ವಿಭಿನ್ನ ವಿವಾಹ ದಿಬ್ಬಣಗಳು ಒಂದೇ ಸಮಯದಲ್ಲಿ ಬಂದು ಮುಟ್ಟಿದಾಗ ಇದು ನಡೆಯಿತು. ಎರಡು ಗುಂಪುಗಳೂ ಅವಸರದಿಂದಿದ್ದುದರಿಂದ ಕರ್ಮಾಚರಣೆಗಳು ಬೇಗನೆ ನಡೆದವು. ಆದರೆ ವಧುಗಳ ಮುಖ ಮುಚ್ಚಿದ್ದ ಉದ್ದದ ಮುಸುಕು ತೆಗೆಯಲ್ಪಟ್ಟಾಗ ಧಕ್ಕೆ ಬಡಿಯಿತು. ವಧುಗಳಲ್ಲಿ ಬದಲಾವಣೆಯಾಗಿದೆ ಎಂದು ಆಗ ತಿಳಿದು ಬಂತು. “ಈ ವಿನಿಮಯದಿಂದ ವಧುಗಳಿಗೆ ದಿಗಿಲು ಬಿದ್ದರೂ ಸಂಬಂಧಿಗಳು, ಆಗಿ ಹೋದ ಸಂಗತಿಯನ್ನು ಬದಲಾಯಿಸ ಸಾಧ್ಯವಿಲ್ಲವೆಂದು ಪಟ್ಟು ಹಿಡಿದರು,” ಎಂದಿತು ಇಂಡಿಯ ಟುಡೇ. “ಹೀಗೆ, ಈಗ ಮರಣ ಅವರನ್ನು ಅಗಲಿಸುವ ವರೆಗೆ ಕಷ್ಟ ಸುಖಗಳೆರಡರಲ್ಲಿಯೂ ಈ ದಂಪತಿಗಳು ಒಟ್ಟಿಗಿರಲೇ ಬೇಕು.” (g90 11/22)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ