ಬೈಬಲಿನ ದೃಷ್ಟಿಕೋನ
“ದೇವರು ನನ್ನ ಮಗುವನ್ನು ಏಕೆ ಕೊಂಡೊಯ್ದನು?”
ಒಂದು ಮಗುವಿನ ಮರಣ ಯಾವ ಹೆತ್ತವರಿಗೂ ಧ್ವಂಸಕಾರಕ. ಕೇವಲ ಬಾಯಿಮಾತುಗಳಿಗೆ ಅಳಿಸಲು ಸಾಧ್ಯವಿಲ್ಲದ ಜಜ್ಜುವ ವಿಷಮ ಪರೀಕ್ಷೆಯದು. ಆದರೆ, ನಿಮಗೆ ಇಂಥ ನಷ್ಟ ಉಂಟಾಗಿರುವಲ್ಲಿ ಮತ್ತು ದೇವರು ನಿಮ್ಮ ಮಗುವನ್ನು ಏಕೆ ಕೊಂಡೊಯ್ದನೆಂದು ನೀವು ಪ್ರಶ್ನಿಸುವಲ್ಲಿ, ಇನ್ನೂ ಹೆಚ್ಚು ಸಂಕಟವನ್ನುಂಟುಮಾಡುವ ಒಂದು ತಪ್ಪು ಗ್ರಹಿಕೆ ನಿಮಗಿದೆ. ನಿಮಗೆ ಸತ್ಯವನ್ನು ತಿಳಿಯಬೇಕಾದ ಆವಶ್ಯಕತೆಯಿದೆ: ದೇವರು ನಿಮ್ಮ ಮಗುವನ್ನು ಕೊಂಡೊಯ್ಯಲಿಲ್ಲ.
ಆದರೂ ಅನೇಕರು ಇದಕ್ಕೆ ತೀರಾ ವ್ಯತಿರಿಕ್ತವಾದುದನ್ನು ನಂಬುತ್ತಾರೆ. ಒಬ್ಬ ಮಹಿಳೆ ತೆರೆದಿದ್ದ ಶವಪೆಟ್ಟಿಗೆಯನ್ನು ಸಂತಯಿಸಲಾಗದವಳಾಗಿ ದಿಟ್ಟಿಸು ನೋಡಿದಳು; ಅದರೊಳಗೆ, ಆಕೆಯ 17 ವರ್ಷ ವಯಸ್ಸಿನ ಮಗನನ್ನು ಮಲಗಿಸಲಾಗಿತ್ತು. ಅವನಿಗೆ ಕೊಡಲ್ಪಟ್ಟಿದ್ದ ಚಿಕಿತ್ಸೆಯು ಕ್ಯಾನ್ಸರನ್ನು ಗುಣಪಡಿಸದಿದ್ದರೂ ತಲೆಗೂದಲನ್ನು ತೆಳ್ಳಗೆ ಮಾಡಿತ್ತು. ಆಕೆ ಒಬ್ಬ ಭೇಟಿಕಾರನನ್ನು ನೋಡಿ ಆಕೆ, “ದೇವರಿಗೆ ಟಾಮಿ ತನ್ನೊಂದಿಗೆ ಸ್ವರ್ಗದಲ್ಲಿರುವ ಮನಸ್ಸಿತ್ತು” ಎಂದು ಹೇಳಿದಳು. ರೋಮನ್ ಕ್ಯಾಥಲಿಕಳಾಗಿದ್ದು ಅನೇಕ ವರ್ಷ ಚರ್ಚಿಗೆ ಹೋಗುತ್ತಿದ್ದ ಅವಳಿಗೆ ಇದನ್ನು ಕಲಿಸಲಾಗಿತ್ತು. ಪ್ರಾಟೆಸ್ಟಂಟರೂ ಮಕ್ಕಳ ಮರಣಕ್ಕೆ ದೇವರನ್ನು ದೀರ್ಘಕಾಲದಿಂದ ದೂರಿದ್ದಾರೆ. ಪ್ರಸಿದ್ಧ ಪ್ರಾಟೆಸ್ಟಂಟ್ ಸುಧಾರಕ ಜಾನ್ ಕ್ಯಾಲ್ವಿನ್, ಹುಟ್ಟಿ ಎರಡು ವಾರಗಳಲ್ಲಿ ತನ್ನ ಮಗನು ಸತ್ತಾಗ ಪ್ರಲಾಪಿಸಿದ್ದು: “ನಮ್ಮ ಕೂಸಿನ ಮರಣದಲ್ಲಿ ಕರ್ತನು ನಮಗೊಂದು ಕಟುವಾದ ಗಾಯವನ್ನು ಮಾಡಿದ್ದಾನೆ.”
ಪುರಾತನ ಕಾಲದ ಒಂದು ಯೆಹೂದಿ ಕಟ್ಟು ಕಥೆಗನುಸಾರ, ಒಬ್ಬ ರಬ್ಬಿಯ ಅವಳಿ ಪುತ್ರರು ಅವನು ಹೊರಗೆ ಹೋಗಿದ್ದಾಗ ಸತ್ತರು. ಅವನು ಹಿಂದಿರುಗಿದಾಗ ತನ್ನ ಮಕ್ಕಳು ಎಲ್ಲಿದ್ದಾರೆ ಎಂದು ಕೇಳಲಾಗಿ ಅವನ ಹೆಂಡತಿ, “ನಿನಗೆ ಎರಡು ಅಮೂಲ್ಯ ರತ್ನಗಳನ್ನು ಕಡವಾಗಿ ಯಾರೋ ಕೊಟ್ಟು ಅದು ನಿನ್ನೊಂದಿಗೆ ಇರುವ ತನಕ ಅದನ್ನು ನೀನು ಅನುಭವಿಸಬಹುದೆಂದು ಹೇಳಿ ಆ ಬಳಿಕ ಆ ಕಡ ಕೊಟ್ಟವನು ಅದನ್ನು ಹಿಂದೆ ಕೇಳುವಲ್ಲಿ ನೀನು ವಾದ ಮಾಡುವಿಯೊ?” ಎಂದು ಕೇಳಿದಳು. “ನಿಶ್ಚಯವಾಗಿಯೂ ಇಲ್ಲ!” ಎಂದು ಅವನು ಉತ್ತರ ಕೊಟ್ಟನು. ಆಗ ಅವಳು ಅವನಿಗೆ ತನ್ನ ಸತ್ತ ಪುತ್ರರನ್ನು ತೋರಿಸಿ, “ದೇವರಿಗೆ ಆತನ ರತ್ನಗಳು ಹಿಂದೆ ಬೇಕಾಗಿದ್ದವು” ಎಂದು ಹೇಳಿದಳು.
ದುಃಖಶಾಮಕವೂ ಅಲ್ಲ, ಬೈಬಲಿಗನುಸಾರವೂ ಅಲ್ಲ
ಸೃಷ್ಟಿಕರ್ತನು, ಹೆತ್ತವರ ಮನ ಮುರಿಯುತ್ತದೆ ಎಂದು ತಿಳಿದೂ, ಮಕ್ಕಳಿಗೆ ಮನ ಬಂದಂತೆ ಮರಣವನ್ನು ವಿಧಿಸುವಷ್ಟೂ ಕ್ರೂರನಾಗಿದ್ದಾನೊ? ಇಲ್ಲ, ಬೈಬಲಿನ ದೇವರು ಹಾಗಿಲ್ಲ; 1 ಯೋಹಾನ 4:8, NWಕ್ಕನುಸಾರ “ದೇವರು ಪ್ರೀತಿಯಾಗಿದ್ದಾನೆ.” ದೇವರಲ್ಲಿ ಪ್ರೀತಿ ಇದೆ ಎಂದಾಗಲಿ, ದೇವರು ಪ್ರೀತಿಸುವವನು ಎಂದಾಗಲಿ ಅದು ಹೇಳದೆ ಆತನು ಪ್ರೀತಿ ಆಗಿದ್ದಾನೆ ಎಂದು ಹೇಳುತ್ತದೆಂಬುದನ್ನು ಗಮನಿಸಿರಿ. ಆತನ ಪ್ರೀತಿ ಎಷ್ಟು ತೀವ್ರ, ಶುದ್ಧ, ಮತ್ತು ಪರಿಪೂರ್ಣವೆಂದರೆ, ಆತನ ವ್ಯಕ್ತಿತ್ವ ಮತ್ತು ಕ್ರಿಯೆಗಳನ್ನು ಅದು ಎಷ್ಟು ವ್ಯಾಪಿಸುತ್ತದೆಂದರೆ, ಆತನು ಪ್ರೀತಿಯ ವ್ಯಕ್ತೀಕರಣ ಎಂದು ಹೇಳಲ್ಪಟ್ಟಿರುವುದು ಸಮಂಜಸವಾಗಿದೆ. ‘ತನ್ನ ರತ್ನಗಳು ಹಿಂದೆ ಬೇಕಾಗಿರುವುದರಿಂದ’ ಮಕ್ಕಳನ್ನು ಕೊಲ್ಲುವ ದೇವರು ಇವನಲ್ಲ.
ಇದಕ್ಕೆ ವ್ಯತಿರಿಕ್ತವಾಗಿ, ದೇವರು ಮಕ್ಕಳನ್ನು ಕಡುವಾಗಿ ಮತ್ತು ನಿಸ್ವಾರ್ಥತೆಯಿಂದ ಪ್ರೀತಿಸುತ್ತಾನೆ. ಯಾರ ಪ್ರತಿಯೊಂದು ಮಾತು ಮತ್ತು ವರ್ತನೆ ತನ್ನ ಸ್ವರ್ಗೀಯ ಪಿತನ ವ್ಯಕ್ತಿತ್ವವನ್ನು ಪ್ರತಿಬಿಂಬಿಸಿತೋ ಆ ಯೇಸು ಕ್ರಿಸ್ತನು ಮಕ್ಕಳಲ್ಲಿ ವಾತ್ಸಲ್ಯದ ವ್ಯಕ್ತಿಪರ ಆಸಕ್ತಿಯನ್ನು ತೋರಿಸಿದನು. ಒಮ್ಮೆ ಅವನು ಒಂದು ಚಿಕ್ಕ ಮಗುವನ್ನು ತನ್ನ ತೋಳಲ್ಲಿ ಅಪ್ಪಿಕೊಂಡು ತನ್ನ ಶಿಷ್ಯರಿಗೂ ಮಗುವಿನ ನಿಷ್ಕಾಪಟ್ಯ ಮತ್ತು ನಮ್ರತೆ ಇರಬೇಕೆಂದು ಕಲಿಸಿದನು. (ಮತ್ತಾಯ 18:1-4; ಮಾರ್ಕ 9:36) ಶತಮಾನಗಳ ಹಿಂದೆ, ಯೆಹೋವನು ತನ್ನ ಜನರಿಗೆ ಅವರು ತಮ್ಮ ಮಕ್ಕಳನ್ನು ಅಮೂಲ್ಯರೆಂದು ಕಂಡು, ಅವರನ್ನು ತರಬೇತುಗೊಳಿಸಿ, ಅವರಿಗೆ ಕಲಿಸಿ, ಅವರನ್ನು ಪರಾಮರಿಸುವಂತೆ ಕಲಿಸಿದನು. (ಧರ್ಮೋಪದೇಶಕಾಂಡ 6:6, 7; ಕೀರ್ತನೆ 127:3-5) ಕುಟುಂಬಗಳು ಜೀವದಲ್ಲಿ ಐಕ್ಯವಾಗಿರಬೇಕೆಂಬುದು ಆತನ ಅಪೇಕ್ಷೆಯಾಗಿದೆಯೇ ಹೊರತು ಮರಣದಲ್ಲಿ ವಿಂಗಡವಾಗಬೇಕೆಂದಲ್ಲ.
“ಹಾಗಾದರೆ ನನ್ನ ಮಗು ಸತ್ತದೇಕ್ದೆ?”
ದೇವರು ಸರ್ವಶಕ್ತನಾಗಿರುವುದರಿಂದ, ಈ ಲೋಕದಲ್ಲಿ ನಡೆಯುವ ಪ್ರತಿ ವಿಷಯವನ್ನೂ—ಮಕ್ಕಳ ಮರಣ ಸೇರಿ—ಆತನು ಹಿಂದಿನಿಂದ ನಿಯಂತ್ರಿಸುತ್ತಾನೆಂದು ಅನೇಕರ ಅನಿಸಿಕೆ. ಆದರೆ ಹಾಗಿರಬೇಕೆಂದಿಲ್ಲ. ಯೋಬನು ಒಂದೇ ವಿಪತ್ತಿನಲ್ಲಿ ಅವನ ಹತ್ತು ಮಕ್ಕಳನ್ನು ಕಳೆದುಕೊಂಡಾಗ, ಆ ಭಯಂಕರ ವಿಪತ್ತನ್ನು ಯೆಹೋವನೇ ತಂದನೆಂದು ನೆನಸಿದನು. ನಮಗೆ ಬೈಬಲು ತಿಳಿಸುವ ವಿಷಯವು, ಅಂದರೆ ಆ ಸಂದರ್ಭದಲ್ಲಿ ವಿಷಯಗಳ ಹಿಂದುಗಡೆ ಸೈತಾನನೆಂಬ, ದೇವರ ಮನುಷ್ಯಾತೀತ ವಿರೋಧಿ, ಯೋಬನು ತನ್ನ ಸೃಷ್ಟಿಕರ್ತನಲ್ಲಿ ನಂಬಿಕೆಯನ್ನು ತ್ಯಜಿಸುವಂತೆ ಅವನನ್ನು ಯಾತನೆಗೊಳಪಡಿಸ ಪ್ರಯತ್ನಿಸಿದನೆಂದು ಯೋಬನಿಗೆ ತಿಳಿದಿರಲಿಲ್ಲ.—ಯೋಬ 1:6-12.
ತದ್ರೀತಿ, ಇಂದು ಅಧಿಕಾಂಶ ಜನರಿಗೆ ಲೋಕದಲ್ಲಿ ಸೈತಾನನಿಗಿರುವ ಪ್ರಭಾವದ ವೈಶಾಲ್ಯ ಎಷ್ಟಿದೆಯೆಂದು ತಿಳಿದಿರುವುದಿಲ್ಲ. ಈ ಭ್ರಷ್ಟ ವಿಷಯ ವ್ಯವಸ್ಥೆಯ ಅಧಿಪತಿ ಯೆಹೋವನಲ್ಲ, ಸೈತಾನನೆಂದು ಬೈಬಲು ತಿಳಿಸುತ್ತದೆ. 1 ಯೋಹಾನ 5:19 ಹೇಳುವುದು: “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದಿದ್ದೆ.” ಲೋಕದ ದುರಂತಗಳಿಗೆಲ್ಲ ದೇವರು ಕಾರಣನಲ್ಲ. ಆತನು ನಿಮ್ಮ ಮಗುವನ್ನು ಕೊಂಡೊಯ್ಯಲಿಲ್ಲ.
ಹಾಗಾದರೆ ನಿಮ್ಮ ಮಗುವನ್ನು ಸೈತಾನನು ತೆಗೆದುಕೊಂಡು ಹೋದನೆಂದು ಅರ್ಥವೊ? ನೇರವಾಗಿ ಅಲ್ಲ. ಏದೆನಿನಲ್ಲಿ, ಮನುಷ್ಯನು ದೇವರ ವಿರುದ್ಧ ದಂಗೆಯೆದ್ದಾಗ, ಅವನು ತನ್ನನ್ನು ಸೈತಾನನ ಆಳಿಕೆಯ ಕೆಳಗೆ ಇಟ್ಟುಕೊಂಡನು. ಹೀಗೆ ಅವನು ತನಗೂ ತನ್ನ ಮಕ್ಕಳಿಗೂ ಶಾಶ್ವತವಾದ, ಆರೋಗ್ಯಕರವಾದ ಜೀವನದ ಕೊಡುಗೆಯನ್ನು ನಷ್ಟಪಡಿಸಿಕೊಂಡನು. (ರೋಮಾಪುರ 5:12) ಇದರ ಪರಿಣಾಮವಾಗಿ, ನಾವು ದೇವರಿಂದ ದೂರವಾಗಿರುವ, “ಕಾಲವೂ ಪ್ರಾಪ್ತಿಯೂ” ನಮ್ಮೆದುರಿಗಿರುತ್ತದೆಂದು ಬೈಬಲು ಹೇಳುವ ಲೋಕ ವ್ಯವಸ್ಥೆಯಲ್ಲಿ ಜೀವಿಸುತ್ತೇವೆ. (ಪ್ರಸಂಗಿ 9:11) ಸೈತಾನನು “ಭೂಲೋಕದವರನ್ನೆಲ್ಲಾ ಮರುಳು”ಗೊಳಿಸುತ್ತಿದ್ದಾನೆ. (ಪ್ರಕಟನೆ 12:9) ಅವನ ಮುಖ್ಯ ಆಸಕ್ತಿಯು ದೇವರಿಂದ ಜನರನ್ನು ದೂರ ತೊಲಗಿಸುವುದೇ. ಈ ಕಾರಣದಿಂದ ಅವನು ದೇವರ ವಿಷಯ ಅಸಹ್ಯವಾದ ಸುಳ್ಳುಗಳನ್ನು ಹರಡಿಸುತ್ತಾನೆ. ಇಂಥ ಒಂದು ಸುಳ್ಳು, ದೇವರು ಮರಣವನ್ನು ಉಪಯೋಗಿಸಿ ಹೆತ್ತವರಿಂದ ಮಕ್ಕಳನ್ನು ಬಲಾತ್ಕಾರವಾಗಿ ಕೀಳುತ್ತಾನೆ ಎಂಬುದೇ.
“ನನ್ನ ಮಗುವಿಗಿರುವ ನಿರೀಕ್ಷೆ ಏನು?”
ದೇವರನ್ನು ದೂರುವ ಬದಲಾಗಿ ವಿಯೋಗ ನಷ್ಟ ಹೊಂದಿರುವ ಹೆತ್ತವರು ದೇವರು ಬೈಬಲಲ್ಲಿ ನೀಡುವ ದುಃಖೋಪಶಮನಕ್ಕಾಗಿ ನೋಡಬೇಕು. ಸುಳ್ಳು ಧರ್ಮವು ಅನೇಕರನ್ನು, ಅವರ ಮೃತರಾದ ಮಕ್ಕಳು ಎಲ್ಲಿದ್ದಾರೆ ಮತ್ತು ಅವರ ಸ್ಥಿತಿಯೇನು ಎಂಬ ವಿಷಯದಲ್ಲಿ ಗಲಿಬಿಲಿಗೊಳಿಸಿದೆ. ಸ್ವರ್ಗ, ನರಕ, ಪರ್ಗೆಟರಿ, ಲಿಂಬೊ—ಈ ಇತರ ಗಮ್ಯ ಸ್ಥಾನಗಳು ಅಸಂವೇದ್ಯದಿಂದ ಹಿಡಿದು ತೀರಾ ಭಯಂಕರ ಸ್ಥಾನಗಳ ವರೆಗೆ ವ್ಯಾಪಿಸಿವೆ. ಬೈಬಲಾದರೋ, ಮೃತರು ಪ್ರಜ್ಞಾಹೀನರೆಂದೂ, ಹೆಚ್ಚೆಂದರೆ ನಿದ್ರೆಗೆ ಸಮಾನವಾದ ಸ್ಥಿತಿಯಲ್ಲಿದ್ದಾರೆಂದೂ ಹೇಳುತ್ತದೆ. (ಪ್ರಸಂಗಿ 9:5, 10; ಯೋಹಾನ 11:11-14) ಹೀಗೆ, ಮರಣಾನಂತರ ತಮ್ಮ ಮಕ್ಕಳಿಗೆ ಏನಾಗುತ್ತದೆಂಬ ವಿಷಯದಲ್ಲಿ, ಮಕ್ಕಳು ಗಾಢ ನಿದ್ರೆ ಮಾಡುತ್ತಿರುವಾಗ ಹೆತ್ತವರು ಹೇಗೆ ಚಿಂತಿಸುವುದಿಲ್ಲವೋ ಹಾಗೆಯೇ ಚಿಂತಿಸುವ ಅವಶ್ಯವಿಲ್ಲ. “ಸಮಾಧಿಗಳಲ್ಲಿರುವವರೆಲ್ಲರು” ಪ್ರಮೋದವನವಾದ ಭೂಮಿಯ ಮೇಲೆ ನವೀಕರಿಸಿದ ಜೀವನಕ್ಕಾಗಿ “ಹೊರಗೆ ಬರುವ” ಕಾಲದ ಕುರಿತು ಯೇಸು ಮಾತಾಡಿದನು.—ಯೋಹಾನ 5:28, 29; ಲೂಕ 23:43.
ಆ ಜ್ವಲಿಸುವ ನಿರೀಕ್ಷೆಯು ಮರಣದ ಸಕಲ ದುರಂತವನ್ನೂ ನಿವಾರಿಸುವುದಿಲ್ಲವೆಂಬುದು ನಿಜ. ಯೇಸು ತಾನೆ ತನ್ನ ಮಿತ್ರ ಲಾಜರನ ಮರಣದಲ್ಲಿ—ಅದೂ ಅವನನ್ನು ಪುನರುತ್ಥಾನ ಮಾಡುವುದಕ್ಕೆ ಕೆಲವೇ ನಿಮಿಷಗಳಿಗೆ ಮೊದಲು—ಮನ ಮುರಿದವನಾಗಿ ಅತನ್ತು! ಹಾಗಾದರೆ, ಕಡಮೆ ಪಕ್ಷ ಮರಣ ಯಾವಾಗಲೂ ಕಟ್ಟಕಡೆಯ ಸ್ಥಿತಿ ಎಂದಾಗುವುದಿಲ್ಲ. ಯೇಸು ಮತ್ತು ಅವನ ತಂದೆಯಾದ ಯೆಹೋವನು—ಇವರಿಬ್ಬರೂ ಮರಣವನ್ನು ದ್ವೇಷಿಸುತ್ತಾರೆ. ಬೈಬಲು ಮರಣವನ್ನು “ಕಡೇ ಶತ್ರು”ವೆಂದು ಕರೆದು ಅದು “ನಿವೃತ್ತಿಯಾಗುವದು” ಎಂದು ಹೇಳುತ್ತದೆ. (1ಕೊರಿಂಥ 15:26) ಬರಲಿರುವ ಪ್ರಮೋದವನದಲ್ಲಿ, ಸೈತಾನನ ಆಳಿಕೆ ಗತ ಸಂಗತಿಯಾಗಿರುವಾಗ ಮರಣವು ಸದಾಕಾಲಕ್ಕೂ ಗತಿಸಿರುವುದು. ಅದರ ನಿರ್ದೋಷಿಗಳಾದ ಬಲಿಗಳು ಪುನರುತ್ಥಾನದ ಮೂಲಕ ಉದ್ಧಾರ ಹೊಂದುವರು. ಆಗ, ಹೆತ್ತವರು ಮರಣ ನಷ್ಟಕ್ಕೊಳಗಾದ ತಮ್ಮ ಮಕ್ಕಳೊಂದಿಗೆ ಪುನರ್ಮಿಲನಗೊಳ್ಳುವಾಗ ನಾವು ಅಂತಿಮವಾಗಿ, “ಮರಣವೇ, ನಿನ್ನ ಜಯವೆಲ್ಲಿ?” ಎಂದು ಕೇಳಸಾಧ್ಯವಾಗುವುದು.—ಹೊಶೇಯ 13:14. (g91 2/8)