ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g92 8/8 ಪು. 22
  • “ಅತ್ಯಂತ ಮಹಾ ಕೊಡುಗೆ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಅತ್ಯಂತ ಮಹಾ ಕೊಡುಗೆ”
  • ಎಚ್ಚರ!—1992
  • ಅನುರೂಪ ಮಾಹಿತಿ
  • ಕೊಡುವಂತಹ ಮನೋವೃತ್ತಿ ನಿಮಗಿದೆಯೊ?
    ಕಾವಲಿನಬುರುಜು—1995
  • ದೈವಿಕ ದಾನಿಗಳಿಗೆ ನಿತ್ಯ ಸಂತೋಷವು ಕಾದಿದೆ
    ಕಾವಲಿನಬುರುಜು—1992
  • ಯೆಹೋವನ ಆಶೀರ್ವಾದವು ನಮ್ಮನ್ನು ಸಂಪದ್ಭರಿತರನ್ನಾಗಿ ಮಾಡುತ್ತದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
ಎಚ್ಚರ!—1992
g92 8/8 ಪು. 22

“ಅತ್ಯಂತ ಮಹಾ ಕೊಡುಗೆ”

ತಮ್ಮ ಮಕ್ಕಳು ಸಭ್ಯರೂ ನಿಯಮಾನುಸಾರಿಗಳೂ ದೇವಭಯವುಳ್ಳವರೂ ಆಗುವಂತೆ ಅವರನ್ನು ಬೆಳೆಸಲು ಶತಪ್ರಯತ್ನ ಮಾಡುವ ಹೆತ್ತವರು, ತಮ್ಮ ಮಕ್ಕಳು ತಮ್ಮ ಪ್ರಯತ್ನಕ್ಕೆ ಕೃತಜ್ಞತೆ ತೋರಿಸುವಾಗ ಅತ್ಯಾನಂದಿತರಾಗುತ್ತಾರೆ. ಇದು ವಿಶೇಷವಾಗಿ, ಯಾವ ಸಮಯಗಳ ಒಂದು ಸೂಚನೆ ‘ಹೆತ್ತವರಿಗೆ ಅವಿಧೇಯತೆ’ ಆಗಿದೆಯೊ ಆ “ಕಡೇ ದಿವಸಗಳು” ಆಗಿರುವ ಈಗ ಸತ್ಯವಾಗಿರುತ್ತದೆ.—2 ತಿಮೊಥಿ 3:1, 2.

ನ್ಯಾನ್ಸಿ ಎಂಬ 15 ವರ್ಷ ವಯಸ್ಸಿನ ಹೈ ಸ್ಕೂಲ್‌ ವಿದ್ಯಾರ್ಥಿನಿ, ಯೆಹೋವನ ಸಾಕ್ಷಿಗಳಾದ ಹೆತ್ತವರಿಂದ ಬೆಳೆಸಲ್ಪಟ್ಟವಳು. ಒಂದು ದಿನ ಅವಳ ಇಂಗ್ಲಿಷ್‌ ಕಲಿಸುವ ಟೀಚರ್‌, ಅವಳ ಕ್ಲಾಸಿಗೆ ಅವರಿಗೆ ದೊರೆತಿರುವ ಅತ್ಯಂತ ಮಹಾ ಕೊಡುಗೆಯ ವಿಷಯ ಒಂದು ಪ್ರಬಂಧ ಬರೆಯಲು ಹೇಳಿದರು. ಇದಕ್ಕೆ ಉತ್ತರವಾಗಿ, “ಅತ್ಯಂತ ಮಹಾ ಕೊಡುಗೆ” ಎಂಬ ಶೀರ್ಷಿಕೆಯ ಕೆಳಗೆ ನ್ಯಾನ್ಸಿ ಹೀಗೆ ಬರೆದಳು:

“ಅನೇಕ ವಿಧದ ಕೊಡುಗೆಗಳಿವೆ, ದಾನಿಗಳೂ ಇದ್ದಾರೆ. ಪ್ರೀತಿಯ, ಸ್ನೇಹಿತರ, ಮತ್ತು ಸಾಮರ್ಥ್ಯಗಳ ಕೊಡುಗೆಗಳಿವೆ. ಅಲ್ಲದೆ, ನಿಮಗೆ ಬೇಡವಾದ, ದ್ವೇಷ ಮತ್ತು ದಾರಿದ್ರ್ಯಗಳ ಕೊಡುಗೆಗಳೂ ಇವೆ. ಅನೇಕ ವಿಧದ ದಾನಿಗಳಿದ್ದಾರೆ. ಸ್ವಾರ್ಥದಿಂದ ಕೊಡುವವರು ಮತ್ತು ತಮಗೆ ಬೇಕಾಗಿರುವುದರಿಂದ ಕೊಡುವವರೂ ಇದ್ದಾರೆ. ನನಗೆ ದೊರೆತಿರುವ ಅತ್ಯಂತ ಮಹಾ ಕೊಡುಗೆ ನನ್ನ ತಂದೆಯಿಂದ ನಾನು ಪಡೆದ ಕೊಡುಗೆಯೆ. ದೇವರ ಜ್ಞಾನದ ಕೊಡುಗೆಯೇ ಇದು.

“ಈ ಕೊಡುಗೆ ಆಯುಷ್ಕಾಲ ಬಾಳುವ ಕೊಡುಗೆ, ಸವೆದ ಮೇಲೆ ಬಿಸಾಡುವಂಥ ಇತರ ಕೊಡುಗೆಗಳಂಥಲ್ಲ. ನಾನು ಕಲಿತಿರುವ ವಿಷಯಗಳು ನನ್ನ ಜೀವಮಾನಕಾಲದಲ್ಲೆಲ್ಲ ನನ್ನನ್ನು ಪ್ರಚೋದಿಸಿ, ನಾನು ಮಾಡುವ ಪ್ರತಿಯೊಂದು ವಿಷಯವನ್ನು ಪ್ರಭಾವಿಸುವುದು. ಬೈಬಲಿನ ದೇವರ ಕುರಿತು ಕಲಿಯುವುದರ ಮೂಲಕ ನಾನು ಆತನನ್ನು ಪ್ರಶಂಸಿಸಿ ಸನ್ಮಾನಿಸುವ ಗೆಳೆಯನಂತೆ ವ್ಯಕ್ತಿಪರವಾಗಿ ತಿಳಿದಿದ್ದೇನೆ.

“ಈ ವರ್ಷ ನನ್ನ ತಂದೆಯ ಮರಣದ ಪರ್ಯಂತ, ಮಾರ್ಗದರ್ಶನ ಬೇಕಾದಾಗ ನಾನು ಅವರಲ್ಲಿ ನೆಚ್ಚಿಕೆಯಿಡುತ್ತಿದ್ದೆ. ಇತರರೂ ಹಾಗೆಯೆ. ಅನೇಕ ವೇಳೆ ನನ್ನ ತಂದೆ ಕೆಲಸದಿಂದ ಮನೆಗೆ ಬಂದಾಗ ನಾನು ಅವರನ್ನು ನೋಡುತ್ತಿರಲಿಲ್ಲ, ಏಕೆಂದರೆ ಅವರು ಆಸ್ಪತ್ರೆಯಲ್ಲಿದ್ದವರನ್ನು ಭೇಟಿಯಾಗುತ್ತಾ ಅವರಿಗೆ ಬೆಂಬಲ ಕೊಡುವುದರಲ್ಲಿ ಕಾರ್ಯಮಗ್ನರಾಗಿರುತ್ತಿದ್ದರು. ಅವರು ತಮ್ಮ ಸಮಯವನ್ನು ಇತರರಿಗಾಗಿ ಕೊಡುವುದರಲ್ಲಿ ಎಷ್ಟು ಉದಾರಿಯಾಗಿದ್ದರೆಂದು ನನಗೆ ಈಗ ತಿಳಿದು ಬಂದಿದೆ. ಅವರು ನನಗೆ ಬೇಕಾಗುವ ಬೆಂಬಲ ಮತ್ತು ಮಾರ್ಗದರ್ಶನೆ ಕೊಡಲು ಈಗ ಇಲ್ಲವಾದರೂ, ನನ್ನ ಆಯುಷ್ಕಾಲದಲ್ಲೆಲ್ಲ ನನಗೆ ಬೇಕಾಗುವ ವಸ್ತುಗಳಿಗಾಗಿ ನನ್ನ ಸ್ವರ್ಗೀಯ ಪಿತನಲ್ಲಿ ನೆಚ್ಚಿಕೆಯಿಡಬಲ್ಲೆ.

“ನಾನೀ ಕೊಡುಗೆಯನ್ನು ತೀರಾ ಗಣ್ಯ ಮಾಡುತ್ತೇನೆ, ಮತ್ತು ಅಷ್ಟು ಬಲವುಳ್ಳ ನಂಬಿಗಸ್ತ ತಂದೆಯನ್ನು ನನಗೆ ಕೊಟ್ಟದ್ದಕ್ಕಾಗಿ ನಾನು ದೇವರಿಗೆ ಆಭಾರಿ. ಅವರ ಮಾದರಿ ನನ್ನ ಮೇಲೆ ಸದಾ ಪರಿಣಾಮವನ್ನು ಬೀಳಿಸುವುದು. ನಾನು ಬೆಳೆಯುವಾಗ ಮತ್ತು ನನಗಾಗಿ ನನ್ನ ತಂದೆ ಇಟ್ಟ ಮಾದರಿಯನ್ನು ಅನುಸರಿಸುವಾಗ, ನಾನು ಗಣ್ಯತೆ ತೋರಿಸಲು ಶಕ್ತಳಾಗುವೆನೆಂದು ನನ್ನ ಹಾರೈಕೆ.

“ದೇವರ ಜ್ಞಾನ ನನಗೆ ಈಗಲೂ ಸದಾಕಾಲವೂ ಅತ್ಯಧಿಕ ಅಮೂಲ್ಯದ ಕೊಡುಗೆ, ಮತ್ತು ನನಗೆ ಈ ಕೊಡುಗೆಯನ್ನು ಕೊಟ್ಟದ್ದಕ್ಕಾಗಿ ನಾನು ನನ್ನ ಹೆತ್ತವರಿಬ್ಬರಿಗೂ ಆಭಾರಿ. ಅವರ ನಂಬಿಗಸ್ತಿಕೆಯ ಮಹಾ ಮಾದರಿ ಸದಾ ನನ್ನಲ್ಲಿರುವುದು.”

ಈ ಪ್ರಬಂಧವನ್ನು, ತನ್ನ ಮನಮುಟ್ಟಿತೆಂದು ಹೇಳಿದ ಉಪಾಧ್ಯಾಯಿನಿ ಗಣ್ಯ ಮಾಡಿದರು. ಮತ್ತು ಅವರು ಅದನ್ನು ಕ್ಲಾಸಿಗೆ ಓದಿ ಹೇಳಿದರು. ಅವರು ಆ ಪ್ರಬಂಧವನ್ನು, ಒಳವಿಷಯಕ್ಕೆ ಒಂದು, ವ್ಯಾಕರಣ ಮತ್ತು ವಿರಾಮ ಚಿಹ್ನೆಗಳಿಗೆ ಇನ್ನೊಂದು, ಹೀಗೆ ಎರಡು ಎ (A) ಕೊಟ್ಟು ಮೌಲ್ಯಮಾಪನ ಮಾಡಿದರು.

ನ್ಯಾನ್ಸಿಯ ತಾಯಿ ಸಹ ಆ ಪ್ರಬಂಧವನ್ನು ಗಣ್ಯ ಮಾಡಿದರು. ಅವರಂದದ್ದು: “ನನಗೆ ತುಂಬ ಸಂತೋಷವಾಯಿತು. ನಿಜವಾಗಿಯೂ ಮಕ್ಕಳಿಗೆ ಹೇಗನಿಸುತ್ತದೆಂದು ಸದಾ ತಿಳಿಯದಿರುವ ನಮಗೆ, ನ್ಯಾನ್ಸಿ ಈಗ ಪ್ರಗತಿ ಹೊಂದುತ್ತಿದ್ದಾಳೆ ಮತ್ತು ತಂದೆಯ ಮರಣದ ಸಂಬಂಧದಲ್ಲಿ ತನಗೆ ಸಾಧ್ಯವಾಗುವಷ್ಟು ವಿಷಯಗಳನ್ನು ಅಂಗೀಕರಿಸುತ್ತಿದ್ದಾಳೆಂದು ನನಗೆ ತಿಳಿಯಲು ಸಹಾಯವಾಯಿತು.” (g91 8/8)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ