ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g92 8/8 ಪು. 23-25
  • ಅಸ್ತವ್ಯಸತ್ತೆ ಹತೋಟಿ ತಪ್ಪುವಾಗ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಸ್ತವ್ಯಸತ್ತೆ ಹತೋಟಿ ತಪ್ಪುವಾಗ
  • ಎಚ್ಚರ!—1992
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅವರು ಅದನ್ನು ಏಕೆ ಕೇವಲ ಬಿಸಾಡಿ ಬಿಡಬಾರದು?
  • ಆರಂಭಿಸುವ ಸ್ಥಳ
  • ಕಣ್ಣಿಗೆ ಮರೆ—ಕಪಾಟಿನೊಳಗೆ
  • ಸೊತ್ತುಗಳ ಸಮತೂಕದ ವೀಕ್ಷಣ
  • ನಮ್ಮ ವಾಚಕರಿಂದ
    ಎಚ್ಚರ!—1993
  • ಮನೆಯನ್ನು ಶುದ್ಧವಾಗಿ ಇಡುವುದರಲ್ಲಿ ನಾವೆಲ್ಲರು ವಹಿಸುವ ಪಾತ್ರ
    ಎಚ್ಚರ!—2005
  • ಹಾರಿಹೋಗುತ್ತಿರುವ ಸಮಯವನ್ನು ಹೇಗೆ ಬಿಗಿಹಿಡಿಯಲಿ?
    ಎಚ್ಚರ!—2009
  • ಬೋಧನಾ ರೀತಿ ಉತ್ತಮಗೊಳಿಸಲು ಮೂರು ಸಲಹೆ
    2012 ನಮ್ಮ ರಾಜ್ಯದ ಸೇವೆ
ಎಚ್ಚರ!—1992
g92 8/8 ಪು. 23-25

ಅಸ್ತವ್ಯಸತ್ತೆ ಹತೋಟಿ ತಪ್ಪುವಾಗ

ನಿಮ್ಮ ಮನೆಯ ಸುತ್ತ ನೋಡಿ. ಅಸ್ತವ್ಯಸತ್ತೆಯಿಂದ ಸ್ಥಳವೇ ಇಲ್ಲವೆ? ನಿಮ್ಮ ಕಪಾಟಿನೊಳಗೆ ಮಿತ್ರನು ಇಣಿಕಿ ನೋಡುವಲ್ಲಿ ನಿಮಗೆ ನಾಚಿಕೆ ಆದೀತೆ? ಶೇಖರಿಸಲ್ಪಟ್ಟಿರುವ ವಸ್ತುಗುಡ್ಡೆಯ ಕೆಳಗೆ ಎಲ್ಲಿಯೋ ಹುಗಿಯಲ್ಪಟ್ಟಿರುವ ಕಾರಣ ಒಂದು ನಿರ್ದಿಷ್ಟ ವಸ್ತುವನ್ನು ಕಂಡುಹಿಡಿಯುವುದು ನಿಮಗೆ ಕಷ್ಟವಾಗುತ್ತದೆಯೆ? ಹಾಗಿರುವಲ್ಲಿ ನೀವು ಒಂಟಿಗರಲ್ಲ.

“ನಾನು ಪಕ್ಕಾ ‘ಉಳಿಸುವವ’” ಎನ್ನುತ್ತಾನೆ ರಾಲ್ಫ್‌. ಲೀಯೊನ್‌ ಕೂಡಿಸಿ ಹೇಳುವುದು: “ನಾನು 15 ವರ್ಷಗಳಿಂದ, ಸಂಗ್ರಹಿಸುತ್ತಿದ್ದ ಬಟ್ಟೆಬರೆ, ವೃತ್ತ ಪತ್ರಿಕೆ, ಪುಸ್ತಕಗಳಿಂದ ಮುಳುಗುತ್ತಿದ್ದೆ.” “ಇದನ್ನು ಶುದ್ಧಗೊಳಿಸುವುದನ್ನು ನೆನಸುವಾಗ ಆರಂಭಿಸುವ ಮೊದಲೇ ಆಯಾಸವಾಗುತ್ತೆ,” ಎನ್ನುತ್ತಾನೆ ಇನ್ನೊಬ್ಬ ಅಸ್ತವ್ಯಸತ್ತೆಯ ಬಲಿ.

ಕೆಲವು ಮಕ್ಕಳು ಅಸ್ತವ್ಯಸವ್ತಾದ ಸುತ್ತುಗಟ್ಟಿನಲ್ಲಿ ಬೆಳೆಯುತ್ತಾರೆ. ಇಂಥ ಒಬ್ಬ ವ್ಯಕ್ತಿ ಹೇಳುವುದು: “ನನಗೆ ಜ್ಞಾಪಕವಿರುವಷ್ಟು ಕಾಲದಿಂದ, ನಮ್ಮ ಮನೆಗೆ ಪ್ರಥಮ ಬಾರಿ ಬರುವವರಿಗೆ, ಅವರು ಏನು ನಿರೀಕ್ಷಿಸಬೇಕೆಂದು ನಾನು ಯಾವಾಗಲೂ ಎಚ್ಚರಿಸಿದ್ದೇನೆ. ಕುಳಿತುಕೊಳ್ಳಲು ಸ್ಥಳ ಬೇಕಾಗುವಾಗ ಅವರು ಯಾವುದನ್ನೂ ಅದರ ಸ್ಥಳದಿಂದ ಚಲಿಸಬಹುದೆಂದು ನಾನು ಹೇಳುತ್ತಿದ್ದೆ.” ಮನೆ ಅನಾಕರ್ಷಕವಾಗಿರುವುದರಿಂದ, ಕುಟುಂಬವಲ್ಲದೆ ಇನ್ನಾರನ್ನೂ ಆಮಂತ್ರಿಸಲು ವಯಸ್ಕರು ಸಹ ಹಿಂಜರಿಯಬಹುದು.

ತಾವು ಎಷ್ಟು ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದೇವೆಂದು ಅನೇಕ ವೇಳೆ ಜನರಿಗೆ ಆ ಮನೆ ಬಿಟ್ಟು ಹೊರಡಬೇಕಾಗುವ ಸಮಯದ ತನಕ ತಿಳಿಯುವುದಿಲ್ಲ. ಅಸ್ತವ್ಯಸತ್ತೆಯ ನಿಯಂತ್ರಣವನ್ನು ಒಬ್ಬನು ಕ್ರಮವಾಗಿ ಮಾಡದೆ ಇರುವಲ್ಲಿ, ಮನೆ ಬದಲಾಯಿಸುವುದು ಹೆಚ್ಚು ಸಮಯ ನಷ್ಟದ—ಮತ್ತು ಹೆಚ್ಚು ಖರ್ಚು ತಗಲುವ ಕೆಲಸ.

ಆದರೆ ಅನೇಕರಿಗೆ, ವಸ್ತುರಾಶಿಯನ್ನು ಶುಚಿಗೊಳಿಸುವುದು ಕೇವಲ ವಸ್ತುಗಳನ್ನು ಹೊರಗೆ ಎಸೆಯುವುದಕ್ಕಿಂತ ಹೆಚ್ಚಿನ ವಿಷಯ. ಪ್ರಥಮವಾಗಿ ಹಲವಾರು ತಡೆಗಳನ್ನು ಜಯಿಸುವುದು ಅವಶ್ಯ.

ಅವರು ಅದನ್ನು ಏಕೆ ಕೇವಲ ಬಿಸಾಡಿ ಬಿಡಬಾರದು?

ಕೆಲವು ಸಮಯಗಳಿಂದ, ಮನಶ್ಶಾಸ್ತ್ರಜ್ಞೆ ಲಿಂಡ ಡಬ್ಲ್ಯು. ವಾರನ್‌ ಮತ್ತು ರೋಗಶಯ್ಯೆಯ ಸಮಾಜ ಸೇವಿಕೆ ಜಾನೆ ಆಸ್ಟ್ರಮ್‌, ಎಲ್ಲ ಅಸ್ತವ್ಯಸ್ತ ವ್ಯಕ್ತಿಗಳು 1930ಗಳ ಆರ್ಥಿಕ ಕುಸಿತವನ್ನು ಬದುಕಿ ಉಳಿದಿದ್ದ ವೃದ್ಧರು ಎಂದು ಊಹಿಸಿದ್ದರು. ಅತ್ಯಧಿಕ ಸಂಗ್ರಹವು, “ವಿರಳವಾದರೂ ಹಾನಿಕರವಲ್ಲದ ಅಸಹಜ ಗುಣ” ಎಂದು ಅವರು ಯೋಚಿಸಿದ್ದರು. ಆದರೂ ಈ ವಿಷಯವನ್ನು ಅಭ್ಯಸಿಸಿದ ಬಳಿಕ ಅವರು ವರದಿ ಮಾಡಿದ್ದು: “1930ಗಳಿಗೆ ಎಷ್ಟೋ ಬಳಿಕ ಜನಿಸಿದ ಗಂಟಿಲಿಗಳ ಯುವ ಸಂತತಿಯನ್ನು ಕಂಡು ಹಿಡಿಯಲು ನಮಗೆ ಆಶ್ಚರ್ಯವಾಯಿತು. . . . ಇಂಥ ವರ್ತನೆ ಸಾಮಾನ್ಯವೆಂದು ಈಗ ನಮ್ಮ ನಂಬಿಕೆ, ಮತ್ತು, ವಿಶೇಷವಾಗಿ ಇದು ವಿಪರೀತವಾಗಿರುವಾಗ, ಇದು ಗಂಟಿಲಿಗಳಿಗೆ ಯಾ ಅವರ ಹತ್ತಿರವಿರುವವರಿಗೆ ಸಮಸ್ಯೆಗಳನ್ನು ಸೃಷ್ಟಿಸಬಹುದು.”a

ಇದು ಎಷ್ಟು ವಿಪರೀತಕ್ಕೆ ಹೋಗಬಹುದು? “ಕಚಡದ ಕಾರಣ ವಿವಾಹಗಳು ಒಡೆಯುವುದನ್ನು ಆಸ್ಟ್ರಮ್‌ ನೋಡಿದ್ದಾರೆ,” ಎನ್ನುತ್ತದೆ ಹೆಲ್ತ್‌ ಪತ್ರಿಕೆ. ಕೆಲವರು ಸಹಾಯಕ್ಕಾಗಿ ಕಸಬುದಾರ ಸಲಹೆಗಾರರ ಕಡೆಗೆ ತಿರುಗುತ್ತಾರೆ. ವಾಸ್ತವವೇನಂದರೆ, ವ್ಯಕ್ತಿಪರ ವ್ಯವಸ್ಥಾಪನಾ ಸಲಹೆಯನ್ನು ಹೆಲ್ತ್‌ ಪತ್ರಿಕೆ, “ನಮ್ಮ ತಾಯಂದಿರು ಕೋಣೆಯನ್ನು ಶುಚಿಗೊಳಿಸಿ ಎಂದು ನಮ್ಮನ್ನು ಕಾಡಿಸುತ್ತಿದ್ದಷ್ಟೇ ಕೆಲಸಕ್ಕೆ ಈಗ ಸಲಹೆಗಾರರಿಗೆ 1,000 ಅಮೆರಿಕನ್‌ ಡಾಲರಿನಷ್ಟು ಬೆಲೆ ತೆರುವ ಬೆಳೆಯುತ್ತಿರುವ ಕ್ಷೇತ್ರವಾಗಿದೆ” ಎಂದು ಕರೆಯುತ್ತದೆ.

ಇಷ್ಟು ವಿಪರೀತ ಅಸ್ತವ್ಯಸತ್ತೆಯ ಸಮಸ್ಯೆ ನಿಮಗಿರಲಿಕ್ಕಿಲ್ಲ. ಆದರೂ, ಚರ್ಚಾವಸ್ತುಗಳು ಮತ್ತು ಕಸದ ಬುಟ್ಟಿಗಳ ಮಧ್ಯೆ ಇರುವ ಕೆಳಗಿನ ನಾಲ್ಕು ತಡೆಗಳನ್ನು ದಾಟಲು ನಿಮಗೆ ಕಷ್ಟವಾದೀತು:

▫ ಭಾವೀ ಆವಶ್ಯಕತೆಗಳಿರುವ ಸಾಧ್ಯತೆ. (“ಆ ಮೇಲೆ ಮರುಗುವುದಕ್ಕಿಂತ ಈಗ ಉಳಿಸುವುದು ಒಳ್ಳೆಯದು.”)

▫ ಭಾವಾತಿರೇಕದ ಮಮತೆ. (“ನನ್ನ ಚಿಕ್ಕಮ್ಮ ಕೊಟ್ಟ ವಸ್ತು ಇದು.”)

▫ ಮುಂದಕ್ಕೆ ಬೆಲೆಬಾಳುವ ಸಾಧ್ಯತೆ. (“ಯಾವುದೊ ಒಂದು ದಿನ ಇದಕ್ಕೆ ತುಂಬ ಬೆಲೆ ದೊರಕೀತು.”)

▫ ಹಳೆಯದೂ ಆಗಿಲ್ಲ, ಹಾಳೂ ಆಗಿಲ್ಲ. (“ಎಸೆಯುವಷ್ಟು ಕೆಟ್ಟಿರುವುದಿಲ್ಲ.”)

ಪರಿಣಾಮವೊ? ಸೈಖಾಲಜಿ ಟುಡೇ ಹೇಳುವುದು: “ವಸ್ತುಗಳು ರಾಶಿ ಬೀಳುತ್ತವೆ, ಮತ್ತು ಅದು ಹುಟ್ಟಿಸುವ ಸಮಸ್ಯೆಗಳೂ ಹೆಚ್ಚುತ್ತವೆ.”

ಹಾಗಾದರೆ ಅಸ್ತವ್ಯಸತ್ತೆಯನ್ನು ನೀವು ಹೇಗೆ ಹತೋಟಿಯೊಳಗೆ ತರಬಲ್ಲಿರಿ?

ಆರಂಭಿಸುವ ಸ್ಥಳ

ಒಂದು ಚಂಡಮಾರುತ ಹೊಡೆದಾಗ ಅದು ಕೆಲವೇ ವಸ್ತುಗಳನ್ನು ಬಿಟ್ಟು ಎಲ್ಲವನ್ನೂ ನಾಶಮಾಡುವಲ್ಲಿ ಹೇಗನಿಸೀತು ಎಂದು ಭಾವಿಸಲು ಒಬ್ಬ ಮಹಿಳೆಯನ್ನು ಕೇಳಲಾಗಿ ಅವಳಂದದ್ದು: “ಸರ್ವವನ್ನೂ ಕಳೆದುಕೊಳ್ಳುವ ಕಲ್ಪನೆಯಿಂದ ನನಗಾದುದು ತೀರಾ ಉಪಶಮನ—ನನ್ನ ಅಸ್ತವ್ಯಸತ್ತೆಯನ್ನು ಪ್ರತ್ಯೇಕಿಸಿ, ಕೆಲವನ್ನು ಬಿಸಾಡುವ ವ್ಯಾಕುಲದಿಂದ ನಾನು ಮುಕ್ತಳಾಗುತ್ತಿದ್ದೆ.” ವಸ್ತುಗಳನ್ನು ಪ್ರತ್ಯೇಕಿಸಿ ಕೆಲವನ್ನು ತ್ಯಜಿಸುವುದು ಪಂಥಾಹ್ವಾನವಾಗಬಲ್ಲದೆಂಬುದನ್ನು ಇದು ಸುವ್ಯಕ್ತವಾಗಿ ಚಿತ್ರಿಸುತ್ತದೆ.

“ಅಸ್ತವ್ಯಸ್ತರಿಗೆ ಎರಡು ಸಮಸ್ಯೆಗಳಿವೆ,” ಎನ್ನುತ್ತಾರೆ ಸಲಹೆಗಾರ್ತಿ ಡಾರಲಿ ಶೂಲ್ಮೆನ್‌. “ಆಗಲೆ ಮನೆಯಲ್ಲಿರುವ ವಸ್ತುಗಳು ಮತ್ತು ಮನೆಗೆ ಬರಲಿರುವ ವಸ್ತುಗಳು.” ಇವರ ಸೂಚನೆಯೇನಂದರೆ, ಶುಚಿಗೊಳಿಸುವುದರ ಬದಲಿಗೆ, ದಿವಸಕ್ಕೆ 15 ನಿಮಿಷಗಳಷ್ಟು ಕೊಂಚ ಸಮಯವನ್ನು ಒಮ್ಮೆಗೆ ಒಂದು ಸ್ಥಳವನ್ನು ಕ್ರಮಗೊಳಿಸಲು ವ್ಯಯಿಸಬೇಕು. ಇದು ನಿಮ್ಮ ಮನೆಯ ಅಸ್ತವ್ಯಸತ್ತೆಯನ್ನು ನಿಭಾಯಿಸಲು ಹೆಚ್ಚು ಕಾರ್ಯಸಾಧಕವಾದ ವಿಧ. ಆದರೆ “ಮನೆಗೆ ಬರಲಿರುವ ವಸ್ತುಗಳ” ವಿಷಯವೇನು?

ನಿಮ್ಮ ಮನೆಗೆ ಯಾವುದೇ ವಸ್ತುವನ್ನು ಖರೀದಿಸುವ ಮೊದಲು, ‘ಇದು ನನಗೆ ನಿಜವಾಗಿಯೂ ಅಗತ್ಯವೆ? ಅದನ್ನು ನಾನು ಇಡುವುದೆಲ್ಲಿ? ಅದನ್ನು ನಾನು ಉಪಯೋಗಿಸುವೆನೊ?’ ಎಂದು ಪ್ರಶ್ನಿಸಿಕೊಳ್ಳಿರಿ. ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳುವುದರಿಂದ, “ನೀವು ಮನೆಯೊಳಗೆ ತರಲಿದ್ದ ವಸ್ತುಗಳಲ್ಲಿ 75 ಪ್ರತಿಶತವನ್ನು ನೀವು ತರುವುದಿಲ್ಲ,” ಎನ್ನುತ್ತಾರೆ ಡಾರಲಿ ಶೂಲ್ಮೆನ್‌.

ವಾಚ್‌ಟವರ್‌ ಸೊಸೈಟಿಯ ಪ್ರಧಾನ ಕಾರ್ಯಾಲಯ ಹಾಗೂ ಬ್ರಾಂಚ್‌ ಆಫೀಸುಗಳಲ್ಲಿ, ನಿವಾಸಿಗಳು ತಮ್ಮ ಕೋಣೆಗಳನ್ನು ವಸ್ತುರಾಶಿಮುಕ್ತ ಇಡಬೇಕೆಂದೂ ಪ್ರತಿ ಪೀಠೋಪಕರಣದ ಮೇಲೆ ಯಾ ಬೀರಿನ ಮೇಲೆ ಅಲಂಕಾರ ವಸ್ತುಗಳನ್ನು ಎರಡು ಯಾ ಮೂರಕ್ಕೆ ಮಿತಿಗೊಳಿಸಬೇಕೆಂದೂ ಅಪೇಕ್ಷಿಸಲಾಗುತ್ತದೆ. ಇದು ಶುಚಿ ಮಾಡುವುದನ್ನು ಸರಳಗೊಳಿಸುವುದಲ್ಲದೆ ದೃಷ್ಟಿಗೂ ಹೆಚ್ಚು ರುಚಿಕರವಾಗಿದೆ. ವೃತ್ತಪತ್ರ, ಪತ್ರಿಕೆ, ಪುಸ್ತಕ, ಪುಸ್ತಕದ ಚೀಲ, ಸಂಗೀತ ಉಪಕರಣ, ಕ್ರೀಡಾ ಸಲಕರಣೆಗಳು, ಬಟ್ಟೆಬರೆ, ಬಟ್ಟಲುಗಳು—ಇವು ಅಲ್ಲಿಲ್ಲಿ ಬಿದ್ದುಕೊಂಡಿರುವಂತೆ ಬಿಡಬಾರದು. ವಾಸ್ತವವೇನಂದರೆ, ಪೀಠೋಪಕರಣಗಳಲ್ಲದೆ ಇನ್ನಾವುದೂ ನೆಲದ ಮೇಲಿರಬಾರದು. ವಸ್ತುರಾಶಿಮುಕ್ತ ಸುತ್ತುಗಟ್ಟನ್ನು ಬೆಳೆಸುವ ಮನಸ್ಸುಳ್ಳವನಿಗೆ ಇದು ನಿಶ್ಚಯವಾಗಿಯೂ ಒಂದು ಮಾದರಿ.

ಕಣ್ಣಿಗೆ ಮರೆ—ಕಪಾಟಿನೊಳಗೆ

“ಒಂದು ದಿನದ ಎಚ್ಚರಿಕೆ ಕೊಡುವಲ್ಲಿ, ನಾನು ನನ್ನ ವಾಸದ ಮಹಡಿಯನ್ನು ಚೊಕ್ಕಟವಾಗಿರಿಸಬಲ್ಲಿ. ಆದರೆ ಕಪಾಟು ಸದಾ ಸಂಪೂರ್ಣ ಸೋಲು,” ಎನ್ನುತ್ತಾಳೆ ಜೋನ್‌. ಕೆಲವರು ಕಪಾಟನ್ನು ಬಿಸಾಡುವ ಸ್ಥಳದಂತೆ ನೋಡಿ, ವಸ್ತುಗಳನ್ನು ಅವು ಕಾಣದಿರುವಂತೆ ಅಲ್ಲಿಗೆ ರವಾನಿಸುತ್ತಾರೆ. ಇದರಿಂದ ಸಮಸ್ಯೆ ಕೆಡುತ್ತದೆ, ಏಕೆಂದರೆ ಹೆಚ್ಚೆಚ್ಚು ವಸ್ತುಗಳು ಯಾವುದು ಒಂದೇ ಗಾತ್ರದ್ದಾಗಿ ಉಳಿಯುತ್ತದೊ ಆ ಸ್ಥಳದಲ್ಲಿ ಹಾಕಲ್ಪಡುತ್ತವೆ.

ರಾಶಿ ಬಿದ್ದಿರುವ ವಸ್ತುಗಳಿಂದ ನಿಮ್ಮ ಕಪಾಟಿಗೆ ತುಸು ಉಪಶಮನ ಬೇಕೆ? ಗುಡ್‌ ಹೌಸ್‌ಕೀಪಿಂಗ್‌ ಪತ್ರಿಕೆ ಸೂಚಿಸುವುದು: “ಕಪಾಟು ಕ್ರಮೀಕರಣ ಏರ್ಪಾಡುಗಳು ವಿಭಿನ್ನ ಸರಕು ಮತ್ತು ಸಾಮಗ್ರಿಗಳುಳ್ಳವುಗಳಾಗಿ, ಯಾವ ಸ್ಥಳವನ್ನೂ ತುಂಬುವಂತೆ ದೊರೆಯುತ್ತವೆ. ನಿಮ್ಮ ಮನೆಯ ಸಂಗ್ರಹ ಸಮಸ್ಯೆಯನ್ನು ಹೋಗಲಾಡಿಸಲು ಇದರಲ್ಲಿ ಒಂದನ್ನು ಉಪಯೋಗಿಸಿರಿ.” ಹಾಗಾದರೆ ಕಪಾಟನ್ನು ಕಚಡದ ಆಶ್ರಯ ಸ್ಥಾನವಾಗಿ ಮಾಡಬೇಡಿರಿ. ಅದನ್ನು ಚೊಕ್ಕಟವಾಗಿಯೂ ಕ್ರಮವುಳ್ಳದ್ದಾಗಿಯೂ ಇಡಿರಿ.

ಸೊತ್ತುಗಳ ಸಮತೂಕದ ವೀಕ್ಷಣ

“ನನ್ನ ಸೊತ್ತುಗಳು ನನ್ನ ಪ್ರತಿಬಿಂಬ, ಅವು ನಾನು ಯಾರೆಂಬುದರ ಭಾಗ,” ಎಂದಳು ಒಬ್ಬ ಮಹಿಳೆ. “ನನ್ನ ಆಭರಣ ನನಗೆ ತುಂಬ ನೆಮ್ಮದಿ ಕೊಡುತ್ತದೆ. ನನ್ನ ಉಂಗುರ ಮತ್ತು ಹಾರಗಳ ಮೇಲೆ ನನಗೆ ಬಲು ಪ್ರೀತಿ,” ಎನ್ನುತ್ತಾಳೆ ಇನ್ನೊಬ್ಬಳು. ಆದರೂ ಇನ್ನೊಬ್ಬ ಸ್ತ್ರೀ ಇದನ್ನು ಪ್ರತಿಭಟಿಸುತ್ತಾ, “ಇದು ನಾನು—ನನ್ನ ವೈಯಕ್ತಿಕ ಅಭಿರುಚಿ, ಮತ್ತು ಇದನ್ನು ನೀವು ಹೊರಗೆ ಬಿಸಾಡಸಾಧ್ಯವಿಲ್ಲ,” ಎನ್ನುತ್ತಾಳೆ.

ಇದಕ್ಕೆ ವ್ಯತ್ಯಾಸವಾಗಿ, ಯೇಸು ಕ್ರಿಸ್ತನು ಹೇಳಿದ್ದು: “ಒಬ್ಬ ಮನುಷ್ಯನ ಜೀವಿತ, ಅವನು ಯಾವುದರ ಒಡೆಯನಾಗಿರುತ್ತಾನೋ ಅದರಿಂದ, ಆವಶ್ಯಕವಾಗಿರುವುದಕ್ಕಿಂತ ಹೆಚ್ಚು ಅವನಲ್ಲಿದ್ದರೂ ಭದ್ರ ಮಾಡಲ್ಪಡುವುದಿಲ್ಲ.”—ಲೂಕ 12:15, ದ ಜೆರೂಸಲೇಮ್‌ ಬೈಬಲ್‌.

ಹೀಗೆ, ಬೈಬಲು ಒಬ್ಬನ ಸೊತ್ತುಗಳ ವಿಷಯದಲ್ಲಿ ಸಮತೆಯ ವೀಕ್ಷಣವನ್ನು ಪ್ರೋತ್ಸಾಹಿಸುತ್ತದೆ. ಅದು ಸುವ್ಯವಸ್ಥಿತತೆಯನ್ನೂ ಬೆಳೆಸಿ, ಇದನ್ನು ಸಭೆಯಲ್ಲಿ ಹಿರಿಯರಾಗಿ ಸೇವೆ ಮಾಡುವವರಿಗೆ ಒಂದು ಆವಶ್ಯಕತೆಯನ್ನಾಗಿ ಮಾಡುತ್ತದೆ.—1 ತಿಮೊಥಿ 3:2.

ಆದುದರಿಂದ, ಈ ಮೇಲಿನ ಸೂಚನೆಗಳಲ್ಲಿ ಕೆಲವನ್ನು, ನಿಮ್ಮ ಮನೆಯಲ್ಲಿ ವಸ್ತುರಾಶಿಯಿರುವ ಒಂದು ಸ್ಥಳದಲ್ಲಿ ಏಕೆ ಪ್ರಯೋಗಿಸಿ ನೋಡಬಾರದು? ದೈನಂದಿನ ಪ್ರಯತ್ನ ಮತ್ತು ನಿಮ್ಮ ಸೊತ್ತುಗಳ ವಿಷಯದಲ್ಲಿ ಸಮತೆಯ ವೀಕ್ಷಣವಿರುವಲ್ಲಿ, ಅಸ್ತವ್ಯಸತ್ತೆ ಹಿಡಿತದೊಳಗೆ ಬರಬಲ್ಲದು. (g91 8/8)

[ಅಧ್ಯಯನ ಪ್ರಶ್ನೆಗಳು]

a “ಗಂಟಿಲಿ” ಎಂದರೆ ಅಗತ್ಯವಿಲ್ಲದ ವಸ್ತುಗಳನ್ನು ಶೇಖರಿಸಿಡುವವನು. ಅವನ ಹೆಸರು ಪೊದೆಗೂದಲಿನ ಬಾಲ, ಒಳ್ಳೆಯದಾಗಿ ಬೆಳೆದಿರುವ ಮತ್ತು ಆಹಾರ ಮತ್ತು ಇತರ ಚಿಲ್ಲರ ವಸ್ತುಗಳನ್ನು ಶೇಖರಿಸುವ ಗಲ್ಲಚೀಲಗಳಿರುವ ಇಲಿ (ಕಾಡಿಲಿಯೆಂದೂ ಹೆಸರಿದೆ) ಯಿಂದ ಬಂದಿದೆ. ವಸ್ತು ಶೇಖರಿಸುವವನು ವಿಶೇಷವಾಗಿ, ಒಂದೋ ಕೆಲವೋ ವ್ಯವಸ್ಥಿತ ವಸ್ತುಗಳನ್ನು ಶೇಖರಿಸುವಾಗ ಗಂಟಿಲಿ ಎಲ್ಲ ರೀತಿಯ ವಸ್ತುಗಳನ್ನು ಶೇಖರಿಸುತ್ತದಾದರೂ ಅವನ್ನು ಉಪಯೋಗಿಸುವುದು ವಿರಳ.

[ಪುಟ 24,25 ರಲ್ಲಿರುವ ಚಿತ್ರ ಕೃಪೆ]

ಪ್ರತ್ಯೇಕಿಸುವುದು ಮತ್ತು ಬಿಸಾಕುವುದು

ನೀವು ಜಾಗ್ರತೆ ಮಾಡದಿರುವಲ್ಲಿ ನಿಮ್ಮ ಮನೆಯಲ್ಲಿ ಸುಲಭವಾಗಿ ಅಸ್ತವ್ಯಸವ್ತಾಗಿ ಬೀಳಬಹುದಾದ ಕೆಲವು ನಿರ್ದಿಷ್ಟ ವಸ್ತುಗಳ ಸಂಬಂಧದಲ್ಲಿ ಕೆಲವು ಸಹಾಯಕರ ಸೂಚನೆಗಳು ಈ ಕೆಳಗಿವೆ:

ಓದುವ ವಸ್ತುಗಳು: ಹಳೆಯ ಪತ್ರಿಕೆ ಮತ್ತು ವೃತ್ತಪತ್ರಗಳನ್ನು ಬಿಸಾಕುವುದು ನಿಮಗೆ ಕಷ್ಟವಾಗುತ್ತದೆಯೆ? ಒಂದು ಶೀರ್ಷಿಕೆ ಸುಲಭವಾಗಿ ಕಣ್ಣಿಗೆ ಬೀಳುವುದರಿಂದ, ‘ನಾನು ಯಾವುದೋ ಒಂದು ದಿನ ಇದನ್ನು ಓದಿ ನೋಡುತ್ತೇನೆ,’ ಎಂದು ನೀವು ಹೇಳುವುದುಂಟೆ? ಇಡೀ ಪತ್ರಿಕೆಯನ್ನು ಯಾ ಪತ್ರವನ್ನು ಉಳಿಸುವುದರ ಬದಲು, ಆಸಕ್ತಿಯದ್ದೆಂದು ಕಾಣುವ ಲೇಖನವನ್ನು ತೆಗೆದು “ಓದಲಿಕ್ಕೆ” ಎಂಬ ಫೋಲರ್ಡಿನೊಳಗೆ ಇಡಿರಿ. ಒಂದು ನ್ಯಾಯಸಮ್ಮತವಾಗಿರುವ ಸಮಯದೊಳಗೆ—ಪ್ರಾಯಶಃ ಕೆಲವು ವಾರಗಳು—ಅದನ್ನು ಓದದಿರುವಲ್ಲಿ, ಹೊರಗೆ ಎಸೆಯಿರಿ.

ಬಟ್ಟೆಬರೆ: ನಿಮ್ಮ ಬಟ್ಟೆಯಿಡುವ ಕಪಾಟು ಪ್ರತಿ ವರ್ಷ ದೊಡ್ಡದಾಗುವುದಾದರೂ, ನಿಮ್ಮಲ್ಲಿರುವ ಬಟ್ಟೆಗೆಳಲ್ಲಿ ಅರ್ಧವನ್ನೂ ನೀವು ಧರಿಸುವುದಿಲವ್ಲೆ? ಕೆಲವರು ತಮ್ಮೊಳಗೆ ಹೀಗಂದುಕೊಳ್ಳುತ್ತಾರೆ: “ಇದು ನನ್ನ ಮೇಲೆ ಒಳ್ಳೆಯದಾಗಿ ಕಾಣುತ್ತದೆ—ನಾನು ಹತ್ತು ಪೌಂಡು ಭಾರ ಕಳೆದುಕೊಳ್ಳುವಾಗ.” ಇದರಿಂದ ಕಪಾಟಿನಲ್ಲಿ ಯಾವುದನ್ನೂ, ಎಲ್ಲವನ್ನೂ ಇಟ್ಟುಕೊಳ್ಳಲು ಲೈಸನ್ಸ್‌ ಪಡೆದಂತಾಗುತ್ತದೆ. ಇಂಥ ಬಟ್ಟೆಗುಡ್ಡೆಯನ್ನು ನಿಯಂತ್ರಿಸಲು, ಒಂದು ವರ್ಷದ ತನಕ ನೀವು ಒಂದು ಬಟ್ಟೆಯನ್ನು ಉಡದಿರುವಲ್ಲಿ ಅದನ್ನು “ಅನಿರ್ಧಾರ” ಎಂದು ಬರೆದಿರುವ ಪೆಟ್ಟಿಗೆಯಲ್ಲಿ ಹಾಕಿರಿ. ಆ ಬಳಿಕ, ಸ್ವಲ್ಪ ಸಮಯದೊಳಗೆ ಅದನ್ನು ಇನ್ನೂ ಉಡದಿರುವಲ್ಲಿ, ಅದನ್ನು ಒಂದೋ ಕೊಟ್ಟು ಬಿಡಿರಿ ಯಾ ಹೊರಗೆಸೆಯಿರಿ.

ಕಾಗದ ಪತ್ರಗಳು: ಪತ್ರಗಳನ್ನು ದಿನೇ ದಿನೇ ತೊಲಗಿಸಿರಿ. ವ್ಯಕ್ತಿಪರ ಪತ್ರ ಮತ್ತು ಇತರ ಪತ್ರ ವ್ಯವಹಾರಗಳನ್ನು ಒಂದು ನಿರ್ದಿಷ್ಟ ಸ್ಥಳದಲ್ಲಿ ಫೈಲ್‌ ಮಾಡಬೇಕು. ಪ್ರತಿ ತಿಂಗಳ ಪತ್ರಗಳಿಗೆ ಒಂದೊಂದು ಫೋಲರ್ಡನ್ನು ಇಟ್ಟು, ಒಂದು ವರ್ಷದ ಮೇಲೆ, ಮೊದಲನೆಯದನ್ನು ಖಾಲಿ ಮಾಡಿ ಹೊಸ ತಿಂಗಳಿನ ಪತ್ರಗಳಿಗೆ ಸ್ಥಳ ಮಾಡಿರಿ. ಮೂಲಸೂತ್ರವು ಜೋಡಿಕೆ, ಪೇರಿಕೆ ಅಲ್ಲ. ಜಾಹೀರಾತಿನ ಕಾಗದಗಳು ತುಂಬ ಬರುವಲ್ಲಿ, ಅದು ನಿಮಗೆ ಬೇಕೇ ಎಂದು ಒಡನೆ ನಿರ್ಣಯಿಸಿರಿ. ಬೇಡವಿರುವಲ್ಲಿ ಬಿಸಾಕಿರಿ. ಅನಿರ್ಣಯವಿರುವಲ್ಲಿ, ಒಂದು ವಾರಕ್ಕಾಗಿ “ಅನಿರ್ಧಾರ” ಪೆಟ್ಟಿಗೆಯೊಳಗೆ ಹಾಕಿರಿ. ಆಗಲೂ ಇತ್ಯರ್ಥವಾಗದಿರುವಲ್ಲಿ, ಹೊರಗೆ ಎಸೆಯಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ