ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g92 9/8 ಪು. 28-29
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1992
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಇಟಲಿಯಲ್ಲಿ ರಕ್ತಪೂರಣಾಜ್ಞೆ
  • ಅಪಪ್ರಯೋಗಕ್ಕೊಳಗಾದ ಮಕ್ಕಳು
  • ಬೋಯಿಂಗ್‌ 737 ಜೆಟ್‌ನಷ್ಟು ಉದ್ದ
  • ಜಾತೀಯ ಕ್ರೂರತೆ
  • “ಜೀವನ ವಿಶ್ವವಿದ್ಯಾಲಯ”
  • ಏಷ್ಯಾದ ವನ್ಯಜೀವಿಗಳನ್ನು ಸಂರಕ್ಷಿಸುವುದು
  • ಯುದ್ಧ ಮತ್ತು ಆಟದ ಸಾಮಾನಿನ ಉದ್ಯಮ
  • ಪ್ರಾಣಿಗಳು ಅಪಾಯದಲ್ಲಿ
  • ಅಂತರಿಕ್ಷದಲ್ಲಿ ಕಚಡ
  • ಭಾರತದಲ್ಲಿ ವಿಹಾರ ಗೊತ್ತುಪಾಡು
  • ಶಿಶುಕಾಮಿ ಪಾದ್ರಿಗಳಿಗೆ ಮರೆ?
  • ಕ್ರೈಸ್ತರು ಮತ್ತು ಜಾತಿಪದ್ಧತಿ
    ಎಚ್ಚರ!—1998
  • ನಿಮ್ಮ ದೇಹಕ್ಕೆ ನಿದ್ರೆಯು ಅಗತ್ಯವಾಗಿರುವುದರ ಕಾರಣ
    ಎಚ್ಚರ!—1995
  • ರಕ್ತಪೂರಣಗಳು—ಅವೆಷ್ಟು ಅಪಾಯರಹಿತ?
    ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು ಬ್ರೋಷರ್‌
  • ನಿದ್ದೆ—ನಿಮ್ಮ ಎನರ್ಜಿ ಟಾನಿಕ್‌
    ಯುವಜನರ ಪ್ರಶ್ನೆಗಳು
ಇನ್ನಷ್ಟು
ಎಚ್ಚರ!—1992
g92 9/8 ಪು. 28-29

ಜಗತ್ತನ್ನು ಗಮನಿಸುವುದು

ಇಟಲಿಯಲ್ಲಿ ರಕ್ತಪೂರಣಾಜ್ಞೆ

ಇಟಲಿಯ ಶಾಸನದ ಪ್ರಕಾರ, ಒಬ್ಬನ ಇಷ್ಟಕ್ಕೆ ವಿರೋಧವಾಗಿ ಒಂದು ನಿರ್ದಿಷ್ಟ ವೈದಕೀಯ ಚಿಕಿತ್ಸೆಗೆ ಯಾರನ್ನೂ ಗುರಿಪಡಿಸಬಾರದು. ಇಟಲಿಯ ಆರೋಗ್ಯ ಖಾತೆಯ ಇತ್ತೀಚೆಗಿನ ಆಜ್ಞೆಯು ಸ್ಥಿರಪಡಿಸುತ್ತದೇನಂದರೆ, ಈ ಶಾಸನದ ವಿಧಿಯು ರಕ್ತಪೂರಕಗಳಿಗೆ ಕೂಡ ಅನ್ವಯಿಸುತ್ತದೆ. ನಿಜತ್ವದಲ್ಲಿ, ಜನವರಿ 15, 1991 ತಾರೀಕಿನ ಈ ಆಜ್ಞೆಯು ನಮೂದಿಸುವದೇನಂದರೆ, “ರಕ್ತಪೂರಣ, ರಕ್ತಾಂಶ, ಅಥವಾ ರಕ್ತದುತ್ಪನ್ನಗಳು, ಅಪಾಯಗಳಿಲ್ಲದ ಚಿಕಿತ್ಸಾ ರೀತಿಯಾಗಿರುವುದಿಲ್ಲ. ಆದ್ದರಿಂದ, ಪಡಕೊಳ್ಳುವವರ ತಿಳುವಳಿಕೆಯ ಒಪ್ಪಿಗೆ ಅದಕ್ಕೆ ಅಗತ್ಯವಾಗಿದೆ”. ಬೇರೆ ಮಾತುಗಳಲ್ಲಿ, ಅಪಾಯಗಳನ್ನು ತಿಳಿಯುವ ಮತ್ತು ರಕ್ತವನ್ನು ನಿರಾಕರಿಸುವ ಹಕ್ಕು ರೋಗಿಗಳಿಗೆ ಇದೆ. ಆಜ್ಞೆಯ ಒಂದು ಪರಿಶಿಷ್ಟವು ಒಪ್ಪಿಕೊಳ್ಳುವುದೇನೆಂದರೆ ರಕ್ತಪೂರಣವು “ಯಕೃತ್ತಿನ ಊತ ಮತ್ತು ಏಯ್ಡ್ಸ್‌ನಂಥ ಸಾಂಕ್ರಾಮಿಕ ರೋಗಗಳನ್ನು” ಹರಡಿಸಬಹುದು. ಮತ್ತು “ಇತ್ತೀಚೆಗೆ ಸೋಂಕು ಹತ್ತಿಸಿಕೊಂಡ ವ್ಯಕ್ತಿಗಳನ್ನು ಪ್ರಯೋಗ ಶಾಲೆಗಳ ಪರೀಕ್ಷೆಗಳು ಎಲ್ಲಾ ಸಮಯಗಳಲ್ಲಿ ಗುರುತಿಸಲು ಸಾಧ್ಯವಿರುವುದಿಲ್ಲ”. (g91 8/22)

ಅಪಪ್ರಯೋಗಕ್ಕೊಳಗಾದ ಮಕ್ಕಳು

ದಕ್ಷಿಣ ಆಫ್ರಿಕದ ಕೆಲವು ಭಾಗಗಳಲ್ಲಿ, ಮಕ್ಕಳ ಅಪಪ್ರಯೋಗಗಳು ಹೆಚ್ಚಾಗುತ್ತಾ ಇವೆ. ಅಪಪ್ರಯೋಗಕ್ಕೊಳಗಾದ ಮಕ್ಕಳ ಗಾಬರಿಗೊಳಪಡಿಸುವ ಸಂಖ್ಯೆಯು ಅತಿ ಎಳೆಯದ್ದೂ ಮತ್ತು ಸಹಾಯ ಹುಡುಕಲು ಅಶಕ್ಯವಾದುದೂ ಆಗಿದೆ. ಕೇಪ್‌ ಟೌನಿನ ವಾರ್ತಾಪತ್ರಿಕೆಯಾದ ಕೇಪ್‌ ಟೈಮ್ಸ್‌ಗನುಸಾರವಾಗಿ, ಅಪಪ್ರಯೋಗಕ್ಕಾಗಿ ಆಸ್ಪತ್ರೆಗೆ ಸೇರಿಸಲಾದ 350 ಮಕ್ಕಳ ಇತ್ತೀಚೆಗಿನ ಸಮೀಕ್ಷೆಯು “60 ಸೇಕಡ ಲೈಂಗಿಕವಾಗಿ ಮತ್ತು 40 ಸೇಕಡ ದೈಹಿಕವಾಗಿ ಅಪಪ್ರಯೋಗಕ್ಕೊಳಗಾಗಿದ್ದರು” ಎಂದು ತೋರಿಸಿಕೊಟ್ಟಿತು. ಕೇಪ್‌ ಟೈಮ್ಸ್‌ ಗಮನಿಸಿತೇನಂದರೆ, “60% ದೈಹಿಕವಾಗಿ ಅಪಪ್ರಯೋಗಕ್ಕೊಳಗಾದ ರೋಗಿಗಳು ಸರಾಸರಿ ಐದುವರೆ ವರ್ಷಗಳ ಪ್ರಾಯದ ಹುಡುಗರಾಗಿದ್ದು, 90% ಲೈಂಗಿಕ ಅಪಪ್ರಯೋಗಕ್ಕೆ ಬಲಿಯಾದವರು ಸರಾಸರಿ ಆರು ವರುಷ ಪ್ರಾಯದ ಹುಡುಗಿಯರಾಗಿದ್ದರು.” ರೆಡ್‌ ಕ್ರಾಸ್‌ ಮಕ್ಕಳ ಆಸ್ಪತ್ರೆಯಲ್ಲಿ, “ಕಳೆದ ಎರಡು ವರ್ಷಗಳಲ್ಲಿ ದೈಹಿಕವಾಗಿ (ಅಲೈಂಗಿಕ) ಅಪಪ್ರಯೋಗಕ್ಕೊಳಗಾದ (ಎಲ್ಲ ಕುಲಗಳ) ಎಲ್ಲ ಮಕ್ಕಳಲ್ಲಿ ಕಾಲು ಭಾಗವು ಒಂದು ವರುಷಕ್ಕಿಂತ ಕಡಿಮೆ ವಯಸ್ಸಿನದ್ದಾಗಿತ್ತು”. (g91 9⁄8)

ಬೋಯಿಂಗ್‌ 737 ಜೆಟ್‌ನಷ್ಟು ಉದ್ದ

“ಅದು ಏನೇ ಆಗಿದ್ದರೂ, ಅದರ ಅವಶೇಷಗಳು ಅತಿ ದೊಡ್ಡದಾಗಿವೆ. ಒಂದೊಂದು ಕತ್ತಿನ ಸಂಧ್ಯಸ್ಥಿಗಳು ಅಡವ್ಡಾಗಿ 1.5 ಮೀಟರ್‌ ಇವೆ, ಮತ್ತು ಪಕ್ಕೆಲುಬುಗಳ ಅಳತೆಯು ಮೂರು ಮೀಟರ್‌ ಅಗಿರುತ್ತದೆ, ಪ್ರಸಿದ್ಧ ವಿಜ್ಞಾನಿಗಳು ಆ ಪ್ರಾಣಿಯ ಆದ್ಯಂತ ಉದ್ದವನ್ನು 27 ರಿಂದ 30 ಮೀಟರ್‌ ಎಂದು ಅಂದಾಜಿಸುತ್ತಾರೆ”, ಎಂದು ಕೆನಡದ ದಿ ವ್ಯಾಂಕೂವರ್‌ ಸನ್‌ ವರದಿ ಮಾಡುತ್ತದೆ. ಅದು ಬೋಯಿಂಗ್‌ 737 ಜೆಟ್‌ನಷ್ಟು ಉದ್ದವಾಗಿರುತ್ತದೆ! 1986ರಲ್ಲಿ ಕೆನಡ ಮತ್ತು ಚೀನಾ ದೇಶದ ವಿಜ್ಞಾನಿಗಳ ಒಂದು ತಂಡವು ಈ ಬೃಹದೇಹ್ದಿ ಮೃಗದ ಕಲ್ಲಾಗಿದ್ದ ಕತ್ತನ್ನು ಇನ್ನರ್‌ ಮೊಂಗೊಲಿಯದಲ್ಲಿನ ಒಂದು ಪ್ರದೇಶದಲ್ಲಿ ಅಗೆದು ಹೊರ ತೆಗೆಯಿತು. ನಾಲ್ಕು ವರುಷಗಳ ನಂತರ ಅದರ ಬಹು ದೊಡ್ಡ ತಲೆಬುರುಡೆಯನ್ನು ಅಗೆದು ತೆಗೆಯಲಾಯಿತು. “ತಲೆಬುರುಡೆಯನ್ನು ಕಂಡುಕೊಳ್ಳುವುದರ ನಿಜ ಮಹತ್ವವೇನೆಂದರೆ ಈ ಡೈನೊಸಾರ್‌ ಸರೀಸೃಪವು ಉತ್ತರ ಅಮೆರಿಕದಲ್ಲಿನ ಪ್ರಸಿದ್ಧ ಡೈನೊಸರ್‌ ಸರೀಸೃಪಗಳಿಗೆ ಸಂಬಂಧ ಉಳ್ಳವುಗಳೊ ಎಂಬುದನ್ನು ನಾವು ಮೊದಲ ಬಾರಿಗೆ ನಿರ್ಧರಿಸಶಕ್ತರಾಗುವೆವು”, ಎಂದು ಕೆನಡಾದ, ಆಲ್‌ಬರ್ಟದ, ಡ್ರಮ್ಹೆಲ್ಲರ್‌ನಲ್ಲಿನ ರಾಯಲ್‌ ಟೈರೆಲ್‌ ಮ್ಯೂಸಿಯಂ ಆಫ್‌ ಪೇಲಿಯೊಂಟಾಲೊಜಿಯ ಫಿಲಿಪ್‌ ಕರ್ರಿ ಹೇಳಿದರು. (g91 8/22)

ಜಾತೀಯ ಕ್ರೂರತೆ

ಮೂರು ಯುವಕರ ಇತ್ತೀಚೆಗಿನ ಬಹಿರಂಗ ಖೂನಿಯ ಹಿಂದೆ ಭಾರತದ ಜಾತಿ ಪದ್ಧತಿ ಇತ್ತು, ಎಂದು ಇಂಡಿಯಾ ಟುಡೇ ವರದಿಸುತ್ತದೆ. ಮೆಹರಾನವೆಂಬ ಸಣ್ಣ ಪಟ್ಟಣದಲ್ಲಿ, ಒಬ್ಬ ಜಾಟವ್‌ ಜಾತಿಯ 18 ವರ್ಷ ಪ್ರಾಯದ ಹುಡುಗನು ಶ್ರೀಮಂತ ಮತ್ತು ಹೆಚ್ಚಿನ ಬಲಶಾಲಿ ಜಾಟ್‌ ಜಾತಿಯ 16 ವರ್ಷ ಪ್ರಾಯದ ಹುಡುಗಿಯೊಂದಿಗೆ ಪ್ರಣಯದಲ್ಲಿ ಒಳಗೂಡಿದನು. ಹುಡುಗಿಯ ಹೆತ್ತವರೂ, ಬೇರೆ ಅನೇಕ ಜಾಟ್‌ ಜಾತಿಯವರೂ, ರೋಷಗೊಂಡರು. ಶ್ರೀಮಂತ ಜಾಟ್‌ಗಳ ಅಧೀನತೆಯಲ್ಲಿ ಇತ್ತೆನ್ನಲಾದ ಒಂದು ಸ್ಥಳೀಯ ಮಂಡಲಿಯಲ್ಲಿ, ಆ ಎರಡು ಯುವಕರಿಗೆ ಮತ್ತು ಅವರ ಮಧ್ಯವರ್ತಿಯಾಗಿ ವರ್ತಿಸಿದ ಇನ್ನೊಂದು ಜಾಟವ್‌ ಹುಡುಗನಿಗೆ ಮರಣದಂಡನೆಯನ್ನು ವಿಧಿಸಲಾಯಿತು. ಇಬ್ಬರು ಹುಡುಗರನ್ನು ತಾಸುಗಟ್ಟಲೆ ಕ್ರೂರವಾಗಿ ಹಿಂಸಿಸಲಾಯಿತು, ಅನಂತರ ಅವರ ತಂದೆಗಳು ಅವರ ಮಕ್ಕಳ ಕುತ್ತಿಗೆಗಳ ಸುತ್ತ ಉರುಲನ್ನು ಹಾಕುವಂತೆ ಬಲವಂತ ಮಾಡಲಾಯಿತು ಎಂದು ಆಪಾದಿಸಲಾಗಿದೆ. ಎಲ್ಲಾ ಮೂರು ಹದಿವಯಸ್ಕರನ್ನು ಊರಿನ ಚೌಕದಲ್ಲಿ ನೇತುಹಾಕಲಾಯಿತು. ಕೊಲೆಯಲ್ಲಿನ ಪ್ರಮುಖ ಅಪರಾಧಿಗಳು ಈಗ ಜೈಲಿನಲ್ಲಿದ್ದಾರೆಂದು ಇಂಡಿಯಾ ಟುಡೇ ವರದಿಸುತ್ತದೆ,ಆದರೆ ಅದು ಪ್ರಲಾಪಿಸುವದು: “ದೇಶದ ಹಳ್ಳಿಗಳು ಮಧ್ಯ ಯುಗಗಳ ಜಾತೀಯ ಭ್ರಾಂತಿಯಲ್ಲಿ ಮುಳುಗುತ್ತಾ ಮುಂದುವರಿದಿವೆ ಮತ್ತು ಇದನ್ನು ಎಷ್ಟೇ ‘ಆಧುನಿಕತೆಯೂ’ ಕೊರೆದು ತೆಗೆಯಲಾರದು ಎಂಬುದರ ದುಃಖಕರವಾದ ನೆನಪುಹುಟ್ಟಿಸುವಿಕೆ ಇದಾಗಿತ್ತು.” (g91 8/22)

“ಜೀವನ ವಿಶ್ವವಿದ್ಯಾಲಯ”

ನೊವೆಂಬರ್‌ 1990ರಲ್ಲಿ ಪ್ರಧಾನ ಮಂತ್ರಿಯಾಗುವ ಮೊದಲು ಜಾನ್‌ ಮೇಜರ್‌ ಬ್ರಿಟನಿನ ಅರ್ಥ ಮಂತ್ರಿಯಾಗಿದ್ದರು. ಅವರು 16ನೆಯ ವಯಸ್ಸಿನಲ್ಲಿ ಶಾಲೆ ಬಿಟ್ಟರೂ, ಅವರು ತಾನೇ ಒಪ್ಪಿಕೊಂಡಂತೆ, ಅವರ ವಿದ್ಯಾಭ್ಯಾಸ “ಜೀವನ ವಿಶ್ವವಿದ್ಯಾಲಯದಿಂದ” ಬಂತು. ಅವರು ಹೇಳಿದ್ದು: “ಕೈತುಂಬ ಪಾಂಡಿತ್ಯದ ಅರ್ಹತೆಯುಳ್ಳ ಅನೇಕ ಜನರ ಪರಿಚಯ ನನಗಿದೆ. ಮತ್ತು . . . ಅವರಲ್ಲಿ ಹೆಚ್ಚಿನವರು ಏನೂ ಪ್ರಯೋಜನವಿಲ್ಲದವರು. ಅವರಿಗೆ ಸಾಮಾನ್ಯ ಪರಿಜ್ಞಾನವಿಲ್ಲ. ಜನರು ನಿಜವಾಗಿಯೂ ವಿಷಯಗಳನ್ನು ಸಾಧಿಸಬೇಕಾದರೆ ಅವರಿಗೆ ಬುದ್ಧಿಶಕ್ತಿ ಮತ್ತು ಸಾಮಾನ್ಯ ಪರಿಜ್ಞಾನ ಇವೆರಡೂ ಬೇಕು, ಮತ್ತು ಅನೇಕ ವೇಳೆ, ಸಾಮಾನ್ಯ ಪರಿಜ್ಞಾನ ಹೆಚ್ಚು ಪ್ರಾಮುಖ್ಯ.” ಅವರ ಈ ಅವಲೋಕನಕ್ಕೆ ಅನೇಕರು ಆಕ್ಷೇಪವೆತ್ತಿದರೂ, ಲಂಡನಿನ ದ ಟೈಮ್ಸ್‌ ಪತ್ರಿಕೆ, ಮಾಜಿ ಮುಖ್ಯೋಪಾಧ್ಯಾಯ ಜಾನ್‌ ರೇ ಹೀಗೆ ಒಪ್ಪಿಕೊಂಡರೆಂದು ತಿಳಿಸಿತು: “ಶಿಕ್ಷಣ ಯೋಗ್ಯತೆಯ ಒಂದೇ ಅರ್ಥ ಆ ವ್ಯಕ್ತಿ ಒಂದು ನಿರ್ದಿಷ್ಟ ಪಾಠದಲ್ಲಿ ಅರ್ಹನೆಂದು ತೋರಿಸುತ್ತದೆ, ಅಷ್ಟೆ. ಕೆಲವು ಪಂಡಿತರು, ವಿಶೇಷವಾಗಿ ವಿಶ್ವವಿದ್ಯಾಲಯಗಳಲ್ಲಿ ವಾಸ್ತವ ಲೋಕದೊಂದಿಗೆ ಸಂಪರ್ಕದಲ್ಲಿಲ್ಲ. . . . ಪಾಂಡಿತ್ಯವಿಲ್ಲದವರು ಅನೇಕ ವೇಳೆ, ಎಷ್ಟೊ ಹೆಚ್ಚು ಸಮರ್ಥರಾಗಿರುವುದನ್ನು ನಾನು ನೋಡಿದ್ದೇನೆ.” (g91 9/8)

ಏಷ್ಯಾದ ವನ್ಯಜೀವಿಗಳನ್ನು ಸಂರಕ್ಷಿಸುವುದು

ಈ ಪಂಥಾಹ್ವಾನ ಏಷ್ಯಾದ ಥಾಯ್ಲೆಂಡಿನಂಥ ದೇಶಗಳನ್ನು ಎದುರಿಸುತ್ತಿದೆ. ಏಷ್ಯಾವೀಕ್‌ ಪತ್ರಿಕೆಗನುಸಾರ, ವರ್ಲ್ಡ್‌ ವೈಡ್‌ ಫಂಡ್‌ ಫಾರ್‌ ನೇಚರ್‌, ಅಪಾಯಕ್ಕೊಳಗಾಗಿರುವ ವನ್ಯಜೀವಿಗಳ ಅಕ್ರಮ ವ್ಯಾಪಾರದಲ್ಲಿ ಥಾಯ್ಲೆಂಡನ್ನು ಪ್ರತ್ಯೇಕಿಸಿ, ಆ ದೇಶವನ್ನು “ಜಗತ್ತಿನ ವನ್ಯಜೀವಿಗಳ ಸೂಪರ್‌ಮಾರ್ಕೆಟ್‌” ಎಂದು ಕರೆಯಿತು. ದೇಶಜನ್ಯವಲ್ಲದಿರುವಲ್ಲಿ, ಥಯಿ ಶಾಸನ ವನ್ಯಪ್ರಾಣಿಗಳನ್ನು ಸಂರಕ್ಷಿಸುವುದಿಲ್ಲವೆಂದು ವ್ಯಕ್ತವಾಗುತ್ತದೆ; ಹೀಗೆ ಥ್ಯಾಲೆಂಡ್‌ ಸುತ್ತಮುತ್ತಲಿನ ದೇಶಗಳ ಅಪಾಯಕ್ಕೊಳಗಾಗಿರುವ ಪ್ರಾಣಿಗಳ ವ್ಯಾಪಾರಕ್ಕೆ ಹೆಚ್ಚು ಇಷ್ಟದ ಹಾದಿಯಾಗಿದೆ. ಅಲ್ಲಿ ವಿಚಿತ್ರ ಪ್ರಾಣಿ ಮತ್ತು ಪಕ್ಷಿಗಳ ಮಾರುಕಟ್ಟೆಗಳಿವೆ; ಕೆಲವು ಭೋಜನಾಲಯಗಳ ಭಕ್ಷ್ಯ ಪಟ್ಟಿಯಲ್ಲಿ, ಅಪಾಯಕ್ಕೊಳಗಾಗಿರುವ ಮೊಸಳೆ, ಬೊಗಳು ಜಿಂಕೆ, ಮತ್ತು ಕಾಡು ಹಂದಿ ಸೇರಿರುವ ಪ್ರಾಣಿಗಳ ಮಾಂಸವಿರುವ ‘ಜಂಗ್‌ಲ್‌ ಆಹಾರ’ವೂ ಸೇರಿದೆ. (g91 8/22)

ಯುದ್ಧ ಮತ್ತು ಆಟದ ಸಾಮಾನಿನ ಉದ್ಯಮ

ಪರ್ಸಿಯನ್‌ ಕೊಲ್ಲಿ ಯುದ್ಧದ ಟೆಲಿವಿಷನ್‌ ಸುದ್ದಿ ವ್ಯಾಪಕತೆಯ ಉತ್ತೇಜನದಿಂದಾಗಿ ಯುದ್ಧಸಂಬಂಧವಾದ ಆಟದ ಸಾಮಾನುಗಳ ವ್ಯಾಪಾರ ಜಪಾನಿನಲ್ಲಿ ಮೂರು ಪಾಲು ಮತ್ತು ನಾಲ್ಕು ಪಾಲು ಕೂಡ ವೃದ್ಧಿಯಾಗಿದೆ. ದ ಡೆಯ್ಲಿ ಯೊಮಿಉರಿ ಹೇಳುವುದು: “ಕೊಲ್ಲಿ ಯುದ್ಧದ ವಾರ್ತೆಯ ವ್ಯಾಪನೆ ಮಕ್ಕಳನ್ನು ಮತ್ತು ಹೃದಯದಲ್ಲಿ ಎಳೆಯರಾಗಿರುವ ವಯಸ್ಕರನ್ನು, ಮಿತ್ರ ಸೈನ್ಯಗಳು ಇರಾಕಿನ ವಿರುದ್ಧ ಉಪಯೋಗಿಸಿದ ವಿಮಾನ ಮತ್ತು ಟ್ಯಾಂಕ್‌ಗಳ ಪ್ಲ್ಯಾಸ್ಟಿಕ್‌ ನಮೂನೆಗಳನ್ನು ಕೊಳ್ಳಲು ಅಂಗಡಿಗಳಿಗೆ ಕಳುಹಿಸಿದೆ.” ಅತಿ ಜನಪ್ರಿಯ ಯುದ್ಧದಾಟ ಸಾಮಾನುಗಳು, ರೇಡರ್‌ ತಪ್ಪಿಸಿಕೊಳ್ಳುವ ಸ್ಟೆಲ್ತ್‌ ಬಾಂಬರ್‌, ಎಫ್‌-15 ಈಗ್‌ಲ್‌ ಫೈಟರ್‌, ಎಮ್‌-1 ಏಬ್ರಮ್ಸ್‌ ಟ್ಯಾಂಕ್‌, ಮತ್ತು ಅಪಾಚಿ ಹೆಲಿಕಾಪ್ಟರ್‌. ಈ ಆಟದ ಸಾಮಾನಿನ ವ್ಯಾಪಾರದಲ್ಲಿರುವ ಕೆಲವರು, ಇದರ ಹೆಚ್ಚಿರುವ ವ್ಯಾಪಾರ ಉದ್ಯಮಕ್ಕೆ “ಯುದ್ಧ ಹರಡಿಸುವ ನಕಾರಾತ್ಮಕ ಆಕಾರವನ್ನು” ಕೊಡುವುದೆಂದು ಭಯ ಪಡುತ್ತಾರೆ. (g91 9/8)

ಪ್ರಾಣಿಗಳು ಅಪಾಯದಲ್ಲಿ

ಚೈನದ ಸ್ಟೇಟ್‌ ಕೌನ್ಸಿಲಿನ ಪರಿಸರ ಕಮಿಟಿ ಇತ್ತೀಚೆಗೆ ತಿಳಿಸಿದ್ದೇನಂದರೆ, “ನಿರ್ಲಕ್ಷ್ಯದ ಬೇಟೆಯ ಕಾರಣ ವನ್ಯ ಮೃಗಗಳ ಸಂಖ್ಯೆ ಚೈನದಲ್ಲಿ ಚಿಕ್ಕದಾಗುತ್ತಿದೆ, ಮತ್ತು ಅನೇಕ ವಿರಳ ಪ್ರಾಣಿಗಳು ನಿರ್ನಾಮವಾಗುತ್ತಿವೆ.” ಕ್ವಾಂಗ್‌ಟಂಗ್‌ ಪ್ರಾಂತ್ಯದಲ್ಲಿ ಅನೇಕ ಭೋಜನಾಲಯ, ಮಾರುಕಟ್ಟೆ, ಬಂದರು, ಮತ್ತು ಖಾಸಗಿ ವ್ಯಾಪಾರಗಳನ್ನು ಪರೀಕ್ಷಿಸಿದಾಗ, ವಿರಳ ಪ್ರಾಣಿಗಳನ್ನು ಕೊಂದು ಅಲ್ಲಿ ಇನ್ನೂ ಮಾರಲಾಗುತ್ತದೆ ಎಂದು ಇನ್‌ಸ್ಪೆಕ್ಟರುಗಳ ಒಂದು ಗುಂಪು ಇತ್ತೀಚೆಗೆ ಕಂಡುಹಿಡಿಯಿತು. ಚೈನ ಟುಡೇ ಪತ್ರಿಕೆಗನುಸಾರ, “ದೈತ್ಯಾಕಾರದ ಓತಿ, ಪ್ಯಾಂಗೊಲಿನ್‌, ದೊಡ್ಡ ಬೆಂಕಿಮೊಸಳೆ, ಕೋತಿ ಮತ್ತು ಪುನಗಿನ ಬೆಕ್ಕು, ಮುಂತಾದ 1,286 ವಿರಳ ಪ್ರಾಣಿಗಳನ್ನು ಪ್ರಾಂತ್ಯದಲ್ಲಿ 11 ನಗರಗಳಿಗೆ ಮಾರಲಾಗಿದೆ ಅಥವಾ ಕಳ್ಳ ಸಾಗಾಣಿಕೆ ಮಾಡಲಾಗಿದೆ.” ಚೈನ ಎನ್‌ವೈರನ್‌ವೆಂಟಲ್‌ ನ್ಯೂಸ್‌ ಗಮನಿಸುವುದೇನಂದರೆ ‘ಹಲವು ಅಧಿಕಾರಿಗಳು ಸೇರಿರುವ ಕೆಲವು ಜನರು ವನ್ಯಮೃಗ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಪೂರ್ಣವಾಗಿ ತಿಳಿದಿರುವುದಿಲ್ಲ. ಅವರ ವೀಕ್ಷಣದಲ್ಲಿ ವನ್ಯ ಮೃಗಗಳನ್ನು ಯಾರೂ ಬೇಟೆಯಾಡಬಹುದು, ಏಕೆಂದರೆ ಅವು ಯಾರ ಸೊತ್ತೂ ಅಲ್ಲ.’ (g91 9/8)

ಅಂತರಿಕ್ಷದಲ್ಲಿ ಕಚಡ

ಮಾನವ ನಿರ್ಮಿತ ಅವಶೇಷಗಳು ಹೆಚ್ಚುತ್ತಿರುವ ಗಾತ್ರದಲ್ಲಿ ಭೂಮಿಯನ್ನು ಸುತ್ತುವುದರ ಕುರಿತು ವಿಜ್ಞಾನಿಗಳು ಚಿಂತಿತರಾಗಿದ್ದಾರೆ. ಅಂತರಿಕ್ಷ ನಾವೆಗೆ ಇಂಥ ಅವಶೇಷಗಳು ಡಿಕ್ಕಿ ಹೊಡೆಯುವಲ್ಲಿ ಬಾಹ್ಯಾಕಾಶಗಾಮಿಗಳಿಗೆ ಮರಣ ಸಂಭವಿಸಬಹುದು ಅಥವಾ ಬಾಹ್ಯಾಕಾಶ ಯೋಜನೆಗಳಿಗೆ ಅಪಾಯ ಬರಬಹುದು. ಸಂಶೋಧಕರ ಅಂದಾಜೇನಂದರೆ, ಟೆನಿಸ್‌ ಚೆಂಡಿಗಿಂತ ದೊಡ್ಡದಾದ ಸುಮಾರು 7,000 ವಸ್ತುಗಳು ಮತ್ತು 35 ಲಕ್ಷ ಚಿಕ್ಕ ವಸ್ತುಗಳು ಬಾಹ್ಯಾಕಾಶದಲ್ಲಿ ತೇಲಾಡುತ್ತಿವೆ. ಮ್ಯೂನಿಕ್‌ ವೃತ್ತಪತ್ರಕೆ ಸುಡ್ಯೂಚ ಸೈಟುಂಗ್‌ನಿಂದ ಅನುವಾದಿಸಿದ ಲೇಖನದಲ್ಲಿ ದ ಜರ್ಮನ್‌ ಟ್ರಿಬ್ಯೂನ್‌ ಪತ್ರಿಕೆ ಗಮನಿಸುವುದು: “ಪೆಯಿಂಟಿನ ಚೂರುಗಳು ಸಹ, ಅವು ತಾಸಿಗೆ 60,000 ಕಿಲೊಮೀಟರ್‌ ವೇಗದಲ್ಲಿ ಹೋಗುವಾಗ ಹಾನಿಮಾಡಬಲ್ಲವು.” ಮಾನವ ನಿರ್ಮಿತ ಅವಶೇಷಗಳು ಹೆಚ್ಚುತ್ತಿರುವ ಸಂಖ್ಯೆಯಲ್ಲಿ ಭೂಮಿಯ ಮೇಲೆ ಸುತ್ತಿ ಪರಸ್ಪರ ಡಿಕ್ಕಿ ಹೊಡೆಯುವಲ್ಲಿ, “ಶನಿ ಗೃಹದ ವಲಯಗಳಂತೆ ಭೂಮಿಯ ಸುತ್ತಲೂ ಕಾಸ್ಮಿಕ್‌ ದೂಳಿನ ವಲಯವನ್ನು” ರಚಿಸಸಾಧ್ಯವಿದೆ. (g91 9/8)

ಭಾರತದಲ್ಲಿ ವಿಹಾರ ಗೊತ್ತುಪಾಡು

ಭಾರತದಲ್ಲಿ ವಿಹಾರ ಗೊತ್ತುಪಾಡು ಹೆಚ್ಚು ಜನಪ್ರಿಯವಾಗುತ್ತಾ ಇದೆ, ಮತ್ತು ಕೆಲವರು ಇದನ್ನು ಈಗ ಜೀವನದ ವಸ್ತುಸ್ಥಿತಿಯಾಗಿ ಅಂಗೀಕರಿಸುವಂತೆ ಕಾಣುತ್ತದೆ. ಇಂಡಿಯ ಟುಡೇ ಪತ್ರಿಕೆ ಅವಲೋಕಿಸುವುದೇನಂದರೆ, ಹತ್ತು ವರ್ಷಗಳ ಹಿಂದೆ ಕೈ ಹಿಡಿದುಕೊಂಡು ನಡೆಯುವ ಗಂಡುಹೆಣ್ಣು ಜೊತೆಯನ್ನು ನೋಡುವುದು “ವಿರಳ ಪಕ್ಷಿಯನ್ನು ನೋಡಿದಂತೆ ಇತ್ತು. ಆದರೆ ಈ ದಿನಗಳಲ್ಲಿ ಅವರು ಗುಬ್ಬಚ್ಚಿಯಷ್ಟೆ ಸಾಮಾನ್ಯ.” ಇಂಥ ವಿಹಾರ ಗೊತ್ತುಪಾಡು ಮಾಡಿರುವ ಜೊತೆಗಳನ್ನು ಸಾರ್ವಜನಿಕ ಸಮುದ್ರ ತೀರಗಳಲ್ಲಿ, ಪಾರ್ಕುಗಳಲ್ಲಿ, ಚಲನಚಿತ್ರಾಲಯಗಳಲ್ಲಿ ಮತ್ತು ಫಾಸ್ಟ್‌ ಫುಡ್‌ ಅಂಗಡಿಗಳಲ್ಲಿ ನೋಡಬಹುದು. ಆಪತ್ತೆಯ ಬಹಿರಂಗ ಪ್ರದರ್ಶನಗಳು ಹೆಚ್ಚು ಸಾಮಾನ್ಯ. ಭಾರತದ ಸಮಾಜದಲ್ಲಿ ಈ ಬದಲಾವಣೆಗೆ ಕಾರಣ ಶಾಲೆ ಮತ್ತು ಕಾಲೇಜುಗಳಲ್ಲಿ ಸಮಾನಸ್ಥರಿಂದ ಬರುವ ಒತ್ತಡ ಮತ್ತು ಲೈಂಗಿಕವಾಗಿ ವಿಶದವಾದ ಚಲನ ಚಿತ್ರ ಮತ್ತು ಟೆಲಿವಿಷನ್‌ ಕಾರ್ಯಕ್ರಮಗಳೆಂದು ಕೆಲವರ ಹೇಳಿಕೆ. (g91 9/8)

ಶಿಶುಕಾಮಿ ಪಾದ್ರಿಗಳಿಗೆ ಮರೆ?

ಅಮೆರಿಕದ ವೃತ್ತಪತ್ರ ನ್ಯಾಷನಲ್‌ ಕ್ಯಾಥೊಲಿಕ್‌ ರಿಪೋರ್ಟರ್‌ ತನ್ನ ಇತ್ತೀಚಿನ ಶೀರ್ಷಿಕೆಯಲ್ಲಿ, “ಕೆಲವು ಡಯೊಸೀಸುಗಳು ಶಿಶುಕಾಮದ ಅಪವಾದವಿರುವ ಪಾದ್ರಿಗಳನ್ನು ಇನ್ನೂ ರಕ್ಷಿಸುತ್ತವೆ,” ಎಂದು ಹೇಳಿತು. ಈ ವೃತ್ತಪತ್ರಕೆ, ಲೈಂಗಿಕ ಅಪಪ್ರಯೋಗದ ಕೇಸುಗಳ ಪರಿಣತ ಲಾಯರ್‌, ಜೆಫ್ರಿ ಆ್ಯಂಡರ್ಸನ್‌ರನ್ನು ಭೇಟಿ ಮಾಡಿತು. ಅವರ ಅಂದಾಜೇನಂದರೆ, ಪಾದ್ರಿಗಳ ಶಿಶುಕಾಮ ಸಾರ್ವಜನಿಕರ ಪರೀಕೆಯ್ಷೊಳಗೆ ಬಂದ ವರ್ಷವಾದ 1985ರಿಂದ, ಪಾದ್ರಿಗಳು ಮಕ್ಕಳನ್ನು ಅಪಪ್ರಯೋಗಿಸಿರುವ ಒಂದು ಸಾವಿರಕ್ಕೂ ಹೆಚ್ಚು ಕೇಸುಗಳು ನಡೆದಿವೆ. ಈ ಮುಂದುವರಿಯುತ್ತಿರುವ ವಿಪತ್ತಿನ ಕಡೆಗೆ ಚರ್ಚ್‌ ತೋರಿಸುವ ಪ್ರತಿವರ್ತನೆಗೆ ಆ್ಯಂಡರ್ಸನ್‌ ಕೆಲವು ಕಠಿಣ ಮಾತುಗಳನ್ನಾಡುತ್ತಾರೆ. “ಇದು ಜವಾಬ್ದಾರಿಯಿಂದ ತಪ್ಪಿಸುವ ಮುಂದುವರಿಯುತ್ತಿರುವ ಕಥೆ,” ಎಂದು ಅವರು ಅಪವಾದಿತ ಪಾದ್ರಿಗಳನ್ನು ರಕ್ಷಿಸುವ ಚರ್ಚಿನ ಮುಖ್ಯನೋಟವನ್ನು ದೂಷಿಸುತ್ತಾರೆ. “ಸಾಮಾನ್ಯ ನಿಯಮವಾಗಿ, ಚರ್ಚಿನ ಸಾಂಘಿಕ ಪ್ರತ್ಯುತ್ತರವು, ಆಹುತಿಗಳ ಪಾಲನೆ ಮತ್ತು ಅಪಾಯಗಳನ್ನು ನಿಭಾಯಿಸುವುದು—ಇವೆರಡು ವಿಷಯಗಳಲ್ಲಿಯೂ ಉದ್ದೇಶಪೂರ್ವಕವಾಗಿ ಕೊರತೆಯುಳ್ಳದ್ದಾಗಿದೆ.” (g91 8/22)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ