“ಎಂದಿಗೂ ಬಿಟ್ಟುಕೊಡದಿರು”
ಹುಟ್ಟುವಾಗಲೇ, ವಿಲ್ಮ ರೂಡೊಲ್ಫ್ ಪುಟ್ಟದಾಗಿಯೂ ಮತ್ತು ನಿಸೇಜ್ತವಾಗಿಯೂ ಇದ್ದಳು. ಅವಳು ನಡೆಯಲಾರಂಭಿಸುವಾಗ, ನಾಲ್ಕು ವರುಷದವಳಾಗಿದ್ದಳು. ನಂತರ ಕೆಂಜ್ವರ ಮತ್ತು ನ್ಯೂಮೋನಿಯದಿಂದ ಗುರುತರವಾಗಿ ಅಸ್ವಸ್ತಳಾದಳು. ಬದುಕಿಕೊಂಡರೂ, ಅವಳ ಎಡ ಕಾಲು ಪಾರ್ಶ್ವವಾಯುವಿಗೆ ಗುರಿಯಾಯಿತು. ವಿಲ್ಮ ನಡೆಯುವಳು ಎಂದು ನಿರ್ಧರಿಸಿ, ಆಕೆಯ ತಾಯಿಯು ಆಕೆಯ ಕ್ಷಯಿಸಲ್ಪಟ್ಟ ಕಾಲನ್ನು ನೀವುತ್ತಿದ್ದಳು ಮತ್ತು ಆಕೆಯ ಮೂವರು ಹಿರಿಯ ಮಕ್ಕಳು ಅದನ್ನೆ ಮಾಡುವಂತೆ ಕಲಿಸಿದಳು. ಹೀಗೆ ದಿನನಿತ್ಯ “ವಿಲ್ಮಳನ್ನು ತೀಡುವ” ನಾಲ್ಕು ಸರದಿಗಳಿದ್ದವು.
ವಿಲ್ಮ ಎಂಟು ವರುಷದವಳಾದಾಗ, ಆಕೆ ಕಾಲಿನ ಬಿಗಿಪಟ್ಟಿಯೊಂದಿಗೆ ನಡೆಯಶಕ್ತಳಾದಳು. ಬೇಗನೆ ಅವಳು ಓಡುತ್ತಿದ್ದಳು ಮತ್ತು ಆಡುತ್ತಿದ್ದಳು. ತನ್ನ ಕುಂದನ್ನು ಜಯಿಸಲು ಆಕೆ ದೃಢನಿರ್ಧಾರ ಮಾಡಿದಳು. ವ್ಯಾಯಾಮ ಮತ್ತು “ಎಂದಿಗೂ ಬಿಟ್ಟುಕೊಡಬೇಡ” ಎಂಬ ತಾಯಿಯ ಸಲಹೆಯೂ ಆಕೆಗೆ ಸಹಾಯ ಮಾಡಿತು.
ವಿಲ್ಮ ಬಿಟ್ಟುಕೊಡಲಿಲ್ಲ. ಮತ್ತು 1960ರಲ್ಲಿ, ಇಟಲಿಯ, ರೋಮಿನ ಒಲಿಂಪಿಕ್ಸ್ನಲ್ಲಿ, ಮೂರು ಸ್ವರ್ಣ ಪದಕಗಳನ್ನು ಪಡಕೊಂಡಳು. 100 ಮತ್ತು 200 ಮೀಟರ್ ಓಟದ ಪಂದ್ಯಗಳನ್ನು ಆಕೆ ಗೆದ್ದಳು ಮತ್ತು 400 ಮೀಟರ್ ರಿಲೇ ಓಟದ ಪಂದ್ಯದ ಅಂತಿಮ ಮಜಲಿಯಲ್ಲಿ ಪ್ರಥಮ ಬಂದಳು.
ಮೊದಲ ಲೋಕ ಯುದ್ಧದ ಸಮಯಾವಧಿಯಲ್ಲಿ, ಆತನು ಏಳು ವರುಷದ ಹುಡುಗನಾಗಿದ್ದಾಗ, ಗ್ಲೆನ್ ಕನ್ನಿಂಗ್ಹ್ಯಾಮನ ಕಾಲುಗಳು ಜೀವಕ್ಕೆ ಕೇಡನ್ನೊಡ್ಡುವ ಸುಟ್ಟ ಗಾಯಗಳಿಗೀಡಾದವು. ಆತನು ತಿಂಗಳುಗಟ್ಟಲೆ ಹಾಸಿಗೆಯಲ್ಲಿ ಕಳೆದನು ಮತ್ತು ಅವನು ಇನ್ನೆಂದಿಗೂ ನಡೆಯಲಾರನೆಂದು ಹೇಳಲಾಗಿತ್ತು. ಆತನ ತಾಯಿಯು ದಿನನಿತ್ಯವು ಆತನ ಹಾನಿಗೊಂಡ ಸ್ನಾಯುಗಳನ್ನು ನಾದುತಿದಳ್ದು ಮತ್ತು ಅವನನ್ನು ನಡೆಯಲು, ನಂತರ ಓಡಲು ಒತ್ತಾಯಿಸಿದಳು. ಗ್ಲೆನ್ ಬಿಟ್ಟುಕೊಡಲಿಲ್ಲ. ವಾಸ್ತವದಲ್ಲಿ, ಕಟ್ಟಕಡೆಗೆ ಮ್ಯಾಡಿಸನ್ ಸ್ಕ್ಯೇರ್ ಗಾರ್ಡನ್ನಿನ ಇಂಡೋರ್ ಪಥದ ಮೈಲು ಓಟದ 31 ಪಂದ್ಯಗಳಲ್ಲಿ 21ನ್ನು ಜಯಿಸಿದನು. ಮತ್ತು, 1934ರಲ್ಲಿ, ಮೈಲು ಓಟದಲ್ಲಿ ಆತನು ವಿಶ್ವ ದಾಖಲೆಯನ್ನಿಟ್ಟನು.
ಕೆಲವೊಮ್ಮೆ ಜೀವನದಲ್ಲಿ ನಾವೆಲ್ಲರೂ ಓಂದಲ್ಲ ಒಂದು ತಡೆಗಟ್ಟುಗಳನ್ನು ಎದುರಿಸುತ್ತೇವೆ. ಅನೇಕ ಬಾರಿ ಆರೋಗ್ಯ ಸಮಸ್ಯೆಗಳು ಅವಾಗಿರುತ್ತವೆ. ಪರಾಜಯಕ್ಕೆ ಬಿಟ್ಟುಕೊಡುವದರ ಬದಲಿಗೆ, ಬಿಟ್ಟುಕೊಡದೇ ಇರಲು ನಿರ್ಧರಿಸುವುದು ಎಷ್ಟೊಂದು ಒಳ್ಳೆಯದು! “ನಾವು ಧೈರ್ಯಗೆಡುವದಿಲ್ಲ,” ಎಂದು ಆತ್ಮಿಕ ಪ್ರಯತ್ನಗಳ ಸಂಬಂಧದಲ್ಲಿ ಅಪೊಸ್ತಲ ಪೌಲನು ಬರೆದನು. “ನಮ್ಮ [ಶಾರೀರಿಕ] ದೇಹವು ನಾಶವಾಗುತ್ತಾ ಇದ್ದರೂ ನಮ್ಮ ಆಂತರ್ಯವು ದಿನೇ ದಿನೇ ಹೊಸದಾಗುತ್ತಾ [ಯಾ ನವೀನ ಬಲ ಹೊಂದುತ್ತಾ] ಬರುವದು.”—2 ಕೊರಿಂಥ 4:16. (g91 8/22)
[ಪುಟ 31 ರಲ್ಲಿರುವ ಚಿತ್ರ ಕೃಪೆ]
UPI/Bettmann Newsphotos