‘ನಮಗೆ ಪ್ರಾಮಾಣಿಕ ಜನರು ಬೇಕು’
ಇಂದಿನ ಲೋಕದಲ್ಲಿ ಪ್ರಾಮಾಣಿಕತೆಯು ವಿರಳವಾಗಿದೆ. ಆದರೂ, ಅದು ಕ್ರೈಸ್ತರಿಗೆ ಒಂದು ಮೂಲಭೂತ ಆವಶ್ಯಕತೆಯಾಗಿದೆ. ಪೌಲನು ಬರೆದದ್ದು: “ನಾವು ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ [“ಪ್ರಾಮಾಣಿಕರಾಗಿ,” Nw] ನಡೆದುಕೊಳ್ಳಬೇಕೆಂದು ಅಪೇಕ್ಷಿಸು”ತ್ತೇನೆ. (ಇಬ್ರಿಯ 13:18) ಇಟಲಿಯ ಫಾಏನ್ಸ್ನಲ್ಲಿನ ಒಬ್ಬ ಯೆಹೋವನ ಸಾಕ್ಷಿಯಾದ ವೀಲ್ಮಳು ಮಾಡಬಯಸಿದ್ದು ಇದನ್ನೇ.
ಈಲ್ ರೆಸ್ಟೋ ಡೆಲ್ ಕಾರ್ಲೀನೋ, ಎಂಬ ವಾರ್ತಾಪತ್ರಿಕೆಯು ತಿಳಿಸುವುದು, ಅವಳು, ತನ್ನ ನಗರದ ಒಂದು ಸೂಪರ್ ಮಾರ್ಕೆಟಿನ ಹೊರಗೆ, ದೊಡ್ಡ ಮೊತ್ತದ ಹಣವಿದ್ದ ಒಂದು ಹಣದ ಚೀಲವನ್ನು ಕಂಡುಕೊಂಡಳು. ಅದರ ಯಜಮಾನನಿಗೆ ಹಿಂದಿರುಗಿಸಸಾಧ್ಯವಾಗುವಂತೆ ಅವಳು ಅದನ್ನು “ಹಿಂಜರಿಯದೆ” ಪೊಲೀಸರಿಗೆ ಒಪ್ಪಿಸಿದಳು.
ಇದರ ಕುರಿತು ಪೌರ ಸಭಾಧ್ಯಕ್ಷನು ಕೇಳಿಸಿಕೊಂಡಾಗ, ಅವನು ಕೂಡಲೆ ವೀಲ್ಮಗೆ ಒಂದು ಸಂಕ್ಷಿಪ್ತ ಕೃತಜ್ಞತಾ ಪತ್ರವನ್ನು ಕಳುಹಿಸಿದನು. “ನಗರದ ಹೆಸರಿನಲ್ಲಿ, ನಾನು ನಿನ್ನ ಅತ್ಯುತ್ತಮವಾದ ಕೃತ್ಯಕ್ಕಾಗಿ ಹೃತ್ಪೂರ್ವಕ ಉಪಕಾರ ಹೇಳುತ್ತೇನೆ. ನಮ್ಮ ಉದಾತ್ತ ಫಾಏನ್ಸ್ ನಗರಕ್ಕೆ, ಒಳ್ಳೆಯ ಹಾಗೂ ಪ್ರಾಮಾಣಿಕ ಜನರು ಬೇಕು,” ಎಂದು ಅವನು ಬರೆದನು.
ಒಳ್ಳೆಯ ಕೃತ್ಯಗಳು ಪ್ರಸಿದ್ಧವಾಗಲಿ ಆಗದಿರಲಿ, ನಾವು ಯಾವಾಗಲೂ ಪ್ರಾಮಾಣಿಕರಾಗಿರಲು ಶ್ರಮಿಸಬೇಕು. ಪವಿತ್ರ ಶಾಸ್ತ್ರಗಳು ಪ್ರಚೋದಿಸುವಂತೆ, “ದೇವರ ದೃಷ್ಟಿಯಲ್ಲಿ ಮಾತ್ರವಲ್ಲದೆ ಮನುಷ್ಯರ ದೃಷ್ಟಿಯಲ್ಲಿಯೂ ಸರಿಯಾದದ್ದನ್ನು ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ.”—2 ಕೊರಿಂಥ 8:21, ದ ಜೆರೂಸಲೆಮ್ ಬೈಬಲ್.