ಒಂದು ಆಫ್ರಿಕನ್ ನಗರದಲ್ಲಿ ಬೆಳೆದು ಬರುವುದು
ಆಫ್ರಿಕದ ಉಪಸಹಾರಾ ದೇಶಗಳಲ್ಲಿ ಆಗುತ್ತಿರುವ ಜನಸಂಖ್ಯಾ ವೃದ್ಧಿ ಜಗತ್ತಿನ ಅತ್ಯುನ್ನತ ವೃದ್ಧಿಗಳ ಪೈಕಿ ಇದೆ. ಅಲ್ಲಿ, ಪ್ರತಿಯೊಬ್ಬ ಮಹಿಳೆ, ಸರಾಸರಿ, ಆರಕ್ಕೂ ಹೆಚ್ಚು ಮಕ್ಕಳನ್ನು ಹೆರುತ್ತಾಳೆ. ಬಡತನ, ಕೆಡುತ್ತಿರುವ ಪರಿಸರ, ಮತ್ತು ಸಂಪನ್ಮೂಲಗಳ ಅಭಾವ, ಈ ಕಷ್ಟ ದೆಸೆಯನ್ನು ಹೆಚ್ಚು ಕಠಿಣವಾಗಿ ಮಾಡುತ್ತದೆ. ಜಗತ್ತಿನ ಈ ಭಾಗದಲ್ಲಿ ಜೀವನ ಹೇಗಿದೆ ಎಂಬುದರ ನೇರವಾದ ವಿಷಯ ಕಥನ ಈ ಕೆಳಗಿದೆ.
ನಾನು ಇಲ್ಲಿ ಪಶ್ಚಿಮ ಆಫ್ರಿಕದ ಒಂದು ದೊಡ್ಡ ನಗರದಲ್ಲಿ ಬೆಳೆದೆ. ನಮ್ಮ ಕುಟುಂಬದಲ್ಲಿ ಏಳು ಮಂದಿ ಮಕ್ಕಳಿದ್ದರೂ ಅವರಲ್ಲಿ ಇಬ್ಬರು ಚಿಕ್ಕಂದಿನಲ್ಲೇ ಸತ್ತಿದ್ದರು. ಬಾಡಿಗೆಯ ಮಲಗುವ ಕೋಣೆ ಮತ್ತು ನಡುಕೋಣೆ ನಮ್ಮ ಮನೆಯಾಗಿತ್ತು. ತಾಯಿತಂದೆ ಮಲಗುವ ಕೋಣೆಯಲ್ಲಿ ಮಲಗುತ್ತಿದ್ದರು, ಮತ್ತು ಮಕ್ಕಳಾದ ನಾವು ನಡುಕೋಣೆಯ ನೆಲದಲ್ಲಿ ಚಾಪೆಯ ಮೇಲೆ, ಹುಡುಗರು ಒಂದು ಪಕ್ಕದಲ್ಲಿ ಮತ್ತು ಹುಡುಗಿಯರು ಇನ್ನೊಂದು ಪಕ್ಕದಲ್ಲಿ ಮಲಗುತ್ತಿದ್ದೆವು.
ನಮ್ಮ ನೆರೆಹೊರೆಯ ಹೆಚ್ಚಿನ ಜನರಂತೆ ನಮ್ಮಲ್ಲಿಯೂ ಹೆಚ್ಚು ಹಣವಿರಲಿಲ್ಲ, ಮತ್ತು ನಮಗೆ ಬೇಕಾದುದೆಲ್ಲ ಸದಾ ನಮಗಿರಲಿಲ್ಲ. ಕೆಲವು ಬಾರಿ, ಸಾಕಷ್ಟು ಆಹಾರವೂ ನಮಗಿರಲಿಲ್ಲ. ಬೆಳಿಗ್ಗೆ ತಿನ್ನಲು, ನಮಗೆ ಅನೇಕ ವೇಳೆ, ಹಿಂದಿನ ದಿನ ಉಳಿದಿದ್ದ, ಪುನಃ ಕಾಯಿಸಿದ ಅನ್ನವಲ್ಲದೆ ಇನ್ನೇನೂ ಇರಲಿಲ್ಲ. ಹಲವು ಬಾರಿ, ಅದರ ಕೊರತೆಯೂ ಇತ್ತು. ಹಣ ಗಳಿಸುವ ಗಂಡನಿಗೆ ಆಹಾರದಲ್ಲಿ ಹೆಚ್ಚಿನ ಭಾಗ, ಆ ಬಳಿಕ ಹೆಂಡತಿಗೆ, ಮತ್ತು ಉಳಿದದ್ದು ಮಕ್ಕಳಿಗೆ ಎಂದು ತರ್ಕಿಸುವ ಕೆಲವರಿಗೆ ಅಸದೃಶವಾಗಿ, ನಮ್ಮ ಹೆತ್ತವರು ತಾವೇ ಉಪವಾಸ ಬಿದ್ದು, ಇರುವ ಸ್ವಲ್ಪಾಹಾರವನ್ನು ಮಕ್ಕಳಾದ ನಾವು ಹಂಚಿಕೊಳ್ಳುವಂತೆ ಬಿಡುತ್ತಿದ್ದರು. ಅವರ ಈ ತ್ಯಾಗವನ್ನು ನಾನು ಗಣ್ಯ ಮಾಡಿದೆ.
ಶಾಲೆಗೆ ಹೋಗುವುದು
ಆಫ್ರಿಕದಲ್ಲಿ ಕೆಲವರು, ಹುಡುಗರು ಮಾತ್ರ ಶಾಲೆಗೆ ಹೋಗಬೇಕೆಂದು ಅಭಿಪ್ರಯಿಸುತ್ತಾರೆ. ಹುಡುಗಿಯರಿಗೆ ಇದು ಅಗತ್ಯವಿಲ್ಲ, ಏಕೆಂದರೆ ಅವರು ಮದುವೆಯಾದ ಮೇಲೆ ಅವರ ಗಂಡಂದಿರು ಅವರನ್ನು ಪರಾಮರಿಸುತ್ತಾರೆಂದು ಅವರ ಅನಿಸಿಕೆ. ಆದರೆ ನನ್ನ ಹೆತ್ತವರಿಗೆ ಈ ದೃಷ್ಟಿಕೋನವಿರಲಿಲ್ಲ. ನಮ್ಮಲ್ಲಿ ಐವರನ್ನೂ ಶಾಲೆಗೆ ಕಳುಹಿಸಲಾಯಿತು. ಆದರೆ ಇದು ನನ್ನ ಹೆತ್ತವರ ಮೇಲೆ ಆರ್ಥಿಕ ಹೊರೆಯಾಗಿತ್ತು. ಪೆನ್ಸಿಲ್, ಕಾಗದಗಳಂಥ ಸಂಗತಿಗಳು ಸಮಸ್ಯೆಯಾಗಿರದಿದ್ದರೂ ಪಠ್ಯ ಪುಸ್ತಕಗಳು ದುಬಾರಿಯಾಗಿದ್ದವು, ಮತ್ತು ಕಡ್ಡಾಯವಾಗಿದ್ದ ಶಾಲಾ ಸಮವಸ್ತ್ರಗಳಿಗೂ ಹೆಚ್ಚು ಖರ್ಚಾಗುತ್ತಿತ್ತು.
ನಾನು ಶಾಲೆಗೆ ಹೋಗಲಾರಂಭಿಸಿದಾಗ ನನಗೆ ಷೂ ಜೋಡು ಇರಲಿಲ್ಲ. ನನಗೆ ಜೋಡನ್ನು ಕೊಳ್ಳಲು ನನ್ನ ಹೆತ್ತವರಿಗೆ ಸಾಧ್ಯವಾದದ್ದು ನಾನು 14 ವರ್ಷ ಪ್ರಾಯದವನಾಗಿ ಮಾಧ್ಯಮಿಕ ಶಾಲೆಯಲ್ಲಿ ಎರಡನೆಯ ವರ್ಷದ ವಿದ್ಯಾರ್ಥಿಯಾಗಿದ್ದಾಗಲೇ. ಅಂದರೆ, ನನಗೆ ಜೋಡೇ ಇರಲಿಲ್ಲವೆಂದು ಇದರ ಅರ್ಥವಲವ್ಲೆಂಬುದು ತಿಳಿದಿರಲಿ. ನನಗಿದ್ದ ಜೋಡು ಚರ್ಚಿಗೆ ಹೋಗುವ ಉಪಯೋಗಕ್ಕಾಗಿತ್ತು. ಶಾಲೆ ಅಥವಾ ಇತರ ಸ್ಥಳಗಳಿಗೆ ಹೋಗುವಾಗ ಅದನ್ನು ಹಾಕಲು ಅನುಮತಿಯಿರಲಿಲ್ಲ. ನಾನು ಬರಿಯ ಕಾಲಿನಲ್ಲಿ ಹೋಗಬೇಕಾಗಿತ್ತು. ಕೆಲವು ಬಾರಿ ನನ್ನ ತಂದೆಗೆ ಬಸ್ ಟಿಕೆಟ್ ಕೊಳ್ಳುವಷ್ಟು ಶಕಿಯ್ತಿತ್ತು; ಆದರೆ ಹಣವಿಲ್ಲದ್ದಿದಾಗಿ ನಾವು ಶಾಲೆಗೆ ಮತ್ತು ಶಾಲೆಯಿಂದ ನಡೆದು ಹೋಗಿ ಬರಬೇಕಾಗಿತ್ತು. ಹೋಗುವ ಮತ್ತು ಬರುವ ದೂರ ಸುಮಾರು ಮೂರು ಮೂರು ಕಿಲೊಮೀಟರ್.
ಬಟ್ಟೆ ಒಗೆಯುವ ದಿನ ಮತ್ತು ನೀರು ತರುವುದು
ನಾವು ಒಂದು ತೋಡಿನಲ್ಲಿ ಬಟ್ಟೆ ಒಗೆಯುತ್ತಿದೆವ್ದು. ಒಂದು ತೊಟ್ಟಿ, ಒಂದು ತುಂಡು ಸಾಬೂನು ಮತ್ತು ಬಟ್ಟೆಗೆಳನ್ನು ಹೊತ್ತುಕೊಂಡಿದ್ದ ತಾಯಿಯ ಜೊತೆಗೆ ನಾನು ಹೋಗುತ್ತಿದ್ದದ್ದು ನನಗೆ ನೆನಪಿದೆ. ತೋಡಿನಲ್ಲಿ, ತಾಯಿ ತೊಟ್ಟಿಯಲ್ಲಿ ನೀರು ತುಂಬಿಸಿ, ಬಟ್ಟೆಗೆಳನ್ನು ಅದರಲ್ಲಿ ಹಾಕಿ ಸಾಬೂನನ್ನು ಅದಕ್ಕೆ ತಿಕ್ಕುತ್ತಿದ್ದರು. ಬಳಿಕ ಅವರು ನುಣುಪಾದ ಬಂಡೆಗೆದುರಾಗಿ ಬಟ್ಟೆಗೆಳನ್ನು ಬಡಿದು ತೋಡಿನಲ್ಲಿ ತೊಳೆಯುತ್ತಿದ್ದರು. ಮತ್ತು ಅವುಗಳನ್ನು ಒದೆಯ್ದಾಗಿಯೇ ಮನೆಗೆ ಹೊತ್ತುಕೊಂಡು ಹೋಗುವುದು ಹೆಚ್ಚು ಭಾರದ ಕೆಲಸವಾಗಿದ್ದುದರಿಂದ, ತಾಯಿ ಅವನ್ನು ಒಣಗಿಸಲು ಇತರ ಬಂಡೆಗಳ ಮೇಲೆ ಹಾಸುತ್ತಿದ್ದರು. ನಾನು ಆಗ ಚಿಕ್ಕವನಾಗಿದ್ದೆ, ಆದುದರಿಂದ ಯಾರೂ ಅವನ್ನು ಕದಿಯದಂತೆ ಒಣಗುತ್ತಿರುವ ಬಟ್ಟೆಗೆಳನ್ನು ಕಾಯಲು ನನ್ನನ್ನು ನೇಮಿಸಲಾಗುತ್ತಿತ್ತು. ಕೆಲಸದಲ್ಲಿ ಹೆಚ್ಚಿನದ್ದನ್ನು ತಾಯಿ ಮಾಡಿದರು.
ಮನೆಯಲ್ಲಿ ನೀರಿನ ಕೊಳವೆ ಕೆಲವರಿಗೆ ಮಾತ್ರ ಇದ್ದುದರಿಂದ, ನನ್ನ ಕೆಲಸಗಳಲ್ಲಿ ಒಂದು, ಸ್ಟ್ಯಾಂಡ್ಪೈಪ್ ಎಂದು ಕರೆಯಲ್ಪಡುವ ಹೊರಗಿನ ಸುರಿಗೊಳವೆಯಿಂದ ತೊಟ್ಟಿಯಲ್ಲಿ ನೀರು ತರುವುದೇ. ಆದರೆ ಒಣಋತುವಿನಲ್ಲಿ ನೀರನ್ನು ಉಳಿಸಲು ಅನೇಕ ಸ್ಟ್ಯಾಂಡ್ಪೈಪ್ಗಳನ್ನು ಬೀಗಹಾಕಿ ಮುಚ್ಚುತ್ತಿದ್ದಾಗ ಸಮಸ್ಯೆ ಏಳುತ್ತಿತ್ತು. ಒಂದು ಸಂದರ್ಭದಲ್ಲಿ ಕುಡಿಯಲು ನೀರಿಲ್ಲದೆ ನಾವು ಒಂದು ಇಡಿಯ ದಿನ ಕಳೆದದ್ದುಂಟು. ಒಂದೇ ಒಂದು ತೊಟ್ಟು ನೀರಿರಲಿಲ್ಲ! ಕೆಲವು ಸಲ ಒಂದು ಬಕೆಟ್ಟು ನೀರನ್ನು ಹುಡುಕುತ್ತಾ ನನಗೆ ಅನೇಕ ಮೈಲು ನಡೆಯಬೇಕಾಗುತ್ತಿತ್ತು. ಅಷ್ಟು ದೂರ ನೀರನ್ನು ಹೊತ್ತುಕೊಂಡು ನಡೆಯುತ್ತಿದ್ದ ಕಾರಣ ಆ ತೊಟ್ಟಿ ತಲೆಯ ಮೇಲೆ ಎಲ್ಲಿ ಕುಳಿತಿತ್ತೊ ಆ ಕ್ಷೇತ್ರದಲ್ಲಿ ಕೂದಲನ್ನೂ ಸವೆಯಿಸಿತ್ತು. ಹತ್ತು ವರ್ಷ ಪ್ರಾಯದಲ್ಲಿ ನನ್ನ ತಲೆಯಲ್ಲಿ ಒಂದು ಭಾಗ ಬೋಳಾಗಿತ್ತು! ಆ ತಲೆಗೂದಲು ಮತ್ತೆ ಬೆಳೆಯ ತೊಡಗಿತೆಂದು ಹೇಳಲು ನನಗೆ ಸಂತೋಷವಾಗುತ್ತದೆ.
ಮಕ್ಕಳು ಭದ್ರತೆಯಾಗಿ
ಹಿಂದೆ ನೋಡುವಾಗ, ನಮ್ಮ ಜೀವನ ಸಾಮಾನ್ಯ ರೀತಿಯದ್ದಾಗಿತ್ತು ಎಂದು ನಾನು ಹೇಳಬಲ್ಲೆ, ಪ್ರಾಯಶಃ ಆಫ್ರಿಕದ ನಮ್ಮ ಭಾಗದ ಸಂಬಂಧದಲ್ಲಿ ಅದು ಸಾಮಾನ್ಯಕ್ಕಿಂತ ಉತ್ತಮವೂ ಆಗಿದ್ದಿರಬಹುದು. ಇತರ ಅನೇಕ ಕುಟುಂಬಗಳ ಜೀವನ ಮಟ್ಟ ನಮ್ಮದಕ್ಕಿಂತ ಎಷ್ಟೋ ಕೀಳಾಗಿದ್ದುದು ನನಗೆ ಗೊತ್ತು. ಶಾಲೆಯ ನನ್ನ ಅನೇಕ ಗೆಳೆಯರು ಶಾಲೆಗೆ ಮೊದಲು ಮತ್ತು ಆ ಬಳಿಕ ಮಾರುಕಟ್ಟೆಯಲ್ಲಿ ಪದಾರ್ಥಗಳನ್ನು ಮಾರಿ ತಮ್ಮ ಕುಟುಂಬಗಳಿಗೆ ಹಣವನ್ನು ತಕ್ಕೊಂಡು ಹೋಗಬೇಕಾಗಿತ್ತು. ಇತರರಿಗೆ ಬೆಳಿಗ್ಗೆ ಶಾಲೆಗೆ ಮೊದಲು ಏನೂ ತಿನ್ನುವ ಸಾಮರ್ಥ್ಯವಿರಲಿಲ್ಲ, ಮತ್ತು ಅವರು ಏನೂ ತಿನ್ನದೆ ಮನೆಬಿಟ್ಟು ಇಡೀ ದಿನ ಆಹಾರವಿಲ್ಲದೆ ಶಾಲೆಯಲ್ಲಿರುತ್ತಿದ್ದರು. ನಾನು ಶಾಲೆಯಲ್ಲಿ ರೊಟ್ಟಿ ತಿನ್ನುತ್ತಿದ್ದಾಗ ಈ ಮಕ್ಕಳಲ್ಲಿ ಒಬ್ಬನು ಬಂದು ಆಹಾರಕ್ಕಾಗಿ ಬೇಡಿದ ಅನೇಕ ಸಂದರ್ಭಗಳನ್ನು ನಾನು ಜ್ಞಾಪಿಸಿಕೊಳ್ಳಬಲ್ಲೆ. ಆಗ ನಾನು ಅದರಲ್ಲಿ ಒಂದು ತುಂಡು ಮುರಿದು ಅವನೊಂದಿಗೆ ಭಾಗಿಯಾಗುತ್ತಿದ್ದೆ.
ಇಂಥ ಕಷ್ಟ, ಕ್ಲೇಶಗಳ ಎದುರಿನಲ್ಲೂ, ಅನೇಕರು ಇನ್ನೂ ದೊಡ್ಡ ಕುಟುಂಬಗಳನ್ನು ಬಯಸುತ್ತಾರೆ. ಇಲ್ಲಿ ಅನೇಕರನ್ನುವುದು: “ಒಂದು ಮಗು ಮಗುವಲ್ಲ. ಇಬ್ಬರು ಮಕ್ಕಳೆಂದರೆ ಒಂದು ಮಗು, ನಾಲ್ಕು ಮಕ್ಕಳೆಂದರೆ ಇಬ್ಬರು.” ಇದು ಏಕೆಂದರೆ, ಇಲ್ಲಿಯ ಶಿಶು ಮರಣದ ಪ್ರಮಾಣವು ಜಗತ್ತಿನ ಅತ್ಯುನ್ನತ ಪ್ರಮಾಣಗಳ ಪೈಕಿ ಇದೆ. ತಮ್ಮ ಮಕ್ಕಳಲ್ಲಿ ಕೆಲವರು ಸಾಯುವುದಾದರೂ, ಇನ್ನು ಕೆಲವರು ಬದುಕಿ ಉಳಿದು, ಬೆಳೆದು, ಉದ್ಯೋಗಕ್ಕೆ ಸೇರಿ, ಮನೆಗೆ ಹಣವನ್ನು ತರುವರೆಂದು ಹೆತ್ತವರಿಗೆ ಗೊತ್ತು. ಆಗ ಅವರು ವೃದ್ಧರಾಗಿರುವ ತಮ್ಮ ಹೆತ್ತವರನ್ನು ಪರಾಮರಿಸ ಶಕ್ತರಾಗುವರು. ಯಾವ ಸಮಾಜ ಭದ್ರತೆಯ ಪ್ರಯೋಜನಗಳೂ ಇಲ್ಲದ ದೇಶದಲ್ಲಿ ಇದು ಅತಿ ಪ್ರಾಮುಖ್ಯ.—ಡಾನಲ್ಡ್ ವಿನ್ಸೆಂಟ್ ಹೇಳಿರುವಂತೆ. (g91 11/8)