ರೂಪುಗೊಳ್ಳುವ ವರುಷಗಳು—ನಿಮ್ಮ ಪರಮ ಪ್ರಯತ್ನ ಅತಿ ಹಚ್ಚು ಅಗತ್ಯವಾಗಿರುವ ಸಮಯ
ಮಕ್ಕಳು “ಯೆಹೋವನಿಂದ ಬಂದ ಸ್ವಾಸ್ತ್ಯ”ವೆಂದು ಹೇಳಲಾಗಿದೆ. “ಮಣೆಯ ಸುತ್ತಲೂ ಕೂತುಕೊಳ್ಳುವ ನಿನ್ನ ಮಕ್ಕಳು ಎಣ್ಣೇ ಮರದ ಸಸಿಗಳಂತಿರುವರು,” ಎಂದು ಹೇಳಲಾಗಿದೆ. (ಕೀರ್ತನೆ 127:3; 128:3) “ಅವರನ್ನು ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಬೆಳೆಯಿಸುತ್ತಾ ಹೋಗಿರಿ,” ಎಂದು ಹೆತ್ತವರಿಗೆ ಬೋಧಿಸಲಾಗಿದೆ.—ಎಫೆಸ 6:4, NW.
ಆಲಿವ್ ಮರಗಳು ಉತ್ತಮ ಫಲಕೊಡುವಂತೆ ನೀವು ರೂಪಿಸಬೇಕಾದರೆ, ಅದನ್ನು ಮಾಡುವ ಸಮಯವು, ‘ಅವರು ಮಣೆಯ ಸುತ್ತಲೂ ಸಸಿಗಳಾಗಿರುವಾಗಲೆ.’ ಎಳೆಯ ರೆಂಬೆ ಹೇಗೆ ರೂಪಿಸಲ್ಪಡುತ್ತದೊ ಹಾಗೆ ಮರವೂ ಬೆಳೆಯುತ್ತದೆ. ನಿಮ್ಮ ಮಕ್ಕಳು ದೇವರ ಮಾರ್ಗಗಳಿಗೆ ಹೊಂದಿಕೊಳ್ಳುವಂತೆ ನೀವು ತರಬೇತುಗೊಳಿಸುವವರಾದರೆ, ಅದನ್ನು ಮಾಡುವ ಅತ್ಯುತ್ತಮ ಸಮಯ ಶೈಶವ ಮೊದಲುಗೊಂಡೇ. “ನಡೆಯ ಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.” (ಜ್ಞಾನೋಕ್ತಿ 22:6; 2 ತಿಮೊಥೆಯ 3:15) ಶೈಶವದಲ್ಲಿ ಮಿದುಳು ಹೆಚ್ಚು ವೇಗದಿಂದ, ಇನ್ನು ಮುಂದೆ ಎಂದಿಗೂ ಮಾಡದಷ್ಟು ವೇಗದಲ್ಲಿ ಮಾಹಿತಿಯನ್ನು ಹೀರಿಕೊಳ್ಳುತ್ತದೆ. ನಿಮ್ಮ ಮಕ್ಕಳಿಗೆ ಅತ್ಯುತ್ತಮವಾದುದನ್ನು ಮಾಡಲು ಇದು ನಿಮಗಿರುವ ಅನುಕೂಲ ಸಮಯ.
ಸೋನಿ ಕಾರ್ಪೊರೇಷನ್ನ ಸ್ಥಾಪಕ ಮಾಸಾರೂ ಈಬುಕ, ಕಿಂಡರ್ಗಾರ್ಟನ್ ಈಸ್ ಟೂ ಲೇಟ್! ಎಂಬ ಪುಸ್ತಕವನ್ನು ಬರೆದರು. ಅದರ ರಕ್ಷಾವರಣದಲ್ಲಿ ಈ ಮಾತುಗಳು ತೋರಿಬಂದುವು: “ನಿಮ್ಮ ಮಗುವಿನ ಕಲಿಯುವ ಸಾಮರ್ಥ್ಯವು ಅದರ ಮೊದಲಿನ ಎರಡು ಯಾ ಮೂರು ವರ್ಷಗಳಲ್ಲಿ ಅತ್ಯಧಿಕ. ಆದುದರಿಂದ, ಕಾಯಬೇಡಿ. . . . ಕಿಂಡರ್ಗಾರ್ಟನ್ ಈಸ್ ಟೂ ಲೇಟ್!”
ಮುನ್ನುಡಿಯಲ್ಲಿ, ದಿ ಇನ್ಸ್ಟಿಟ್ಯೂಟ್ಸ್ ಫಾರ್ ದಿ ಎಚೀವ್ಮೆಂಟ್ ಆಫ್ ಹ್ಯೂಮನ್ ಪೊಟೆನ್ಷಲ್ನ ಡೈರೆಕ್ಟರ್, ಗ್ಲೆನ್ ಡೋಮನ್ ಹೀಗೆ ಹೇಳುತ್ತಾರೆ: “ಶ್ರೀ ಈಬುಕ ಅವರ ಬೆರಗುಗೊಳಿಸುವ ಮತ್ತು ವಿನೀತ ಪುಸ್ತಕ ಭೂಮಿಯನ್ನು ಕಂಪಿಸುವ ಹೇಳಿಕೆಗಳನ್ನು ಮಾಡುವುದಿಲ್ಲ. ಪುಟ್ಟ ಮಕ್ಕಳಲ್ಲಿ, ಅವರು ಪುಟ್ಟವರಾಗಿರುವಾಗ ಕಾರ್ಯತಃ ಯಾವುದನ್ನೂ ಮಾಡುವ ಸಾಮರ್ಥ್ಯವಿದೆ ಎಂದು ಅವರು ಪ್ರಸ್ತಾಪಿಸುತ್ತಾರೆ. ಅವರು ಎರಡು, ಮೂರು, ಯಾ ನಾಲ್ಕು ವರ್ಷ ಪ್ರಾಯದಲ್ಲಿ ಯಾವ ಪ್ರಜ್ಞಾಪೂರ್ವಕವಾದ ಯತ್ನವಿಲ್ಲದೇ ಯಾವುದನ್ನು ಕಲಿಯಬಲ್ಲರೋ ಅದನ್ನು ತದನಂತರದ ಜೀವನದಲ್ಲಿ ಹೆಚ್ಚು ಪ್ರಯತ್ನದಿಂದ ಮಾತ್ರ ಕಲಿಯಸಾಧ್ಯವಿದೆ, ಎಂದೂ ಕಲಿಯದೇ ಇರಲೂಬಹುದು ಎಂದು. ವಯಸ್ಕರು ವೇದನೆಪಟ್ಟು ಕಲಿಯುವುದನ್ನು ಮಕ್ಕಳು ಸಂತೋಷದಿಂದ ಕಲಿಯುತ್ತಾರೆಂದು ಅವರು ಹೇಳಿಕೆ ಕೊಡುತ್ತಾರೆ. ವಯಸ್ಕರು ಅತಿ ನಿಧಾನವಾಗಿ ಕಲಿಯುವುದನ್ನು ಚಿಕ್ಕ ಮಕ್ಕಳು ಬಹುಮಟ್ಟಿಗೆ ವೇಗವಾಗಿ ಕಲಿಯುತ್ತಾರೆಂದು ಅವರು ಪ್ರಸ್ತಾಪಿಸುತ್ತಾರೆ. ವಯಸ್ಕರು ಕೆಲವು ಬಾರಿ ಕಲಿಯುವುದನ್ನು ತಪ್ಪಿಸುವಾಗ, ಚಿಕ್ಕ ಮಕ್ಕಳು ತಿನ್ನುವುದಕ್ಕಿಂತಲೂ ಕಲಿಯಲು ಹೆಚ್ಚು ಇಷ್ಟಪಡುವರೆಂದು ಅವರು ಹೇಳಿಕೆ ನೀಡುತ್ತಾರೆ.”
ಕಿಂಡರ್ಗಾರ್ಟನ್ ತನಕ ಕಾದರೆ ಹೊತ್ತು ಮೀರುತ್ತದೆ ಎಂದು ಈಬುಕ ಹೇಳಲು ಕಾರಣ, ಅಷ್ಟರೊಳಗೆ ಮಗುವಿಗೆ ಅದರ ಅತ್ಯುತ್ತಮ ಕಲಿಕೆಯ ವರ್ಷಗಳು ದಾಟಿಹೋಗಿ ಬಿಡುವುದೇ. ಆದರೆ ಇನ್ನೊಂದು ಕಾರಣವಿದೆ. ಈ ದಿನಗಳಲ್ಲಿ ನೈತಿಕ ಅಧಃಪತನ ಕಿಂಡರ್ಗಾರ್ಟನನ್ನೂ ತಲುಪಿದೆ, ಮತ್ತು ಮಗು ಅಲ್ಲಿಗೆ ಹೋಗುವ ಮೊದಲು ಮಾಲಿನ್ಯದಿಂದ ಅವನನ್ನು ರಕ್ಷಿಸಲು ಹೆತ್ತವರು ಮಗುವಿನಲ್ಲಿ ಬಲವಾದ ನೈತಿಕ ನ್ಯಾಯಸೂತ್ರವನ್ನು ಮನಸ್ಸಿನಲ್ಲಿ ಹತ್ತಿಸುವುದು ಅಗತ್ಯ.
ಈ ಅವಶ್ಯವು, ಆಗ ತಾನೆ ಕಿಂಡರ್ಗಾರ್ಟನನ್ನು ಪ್ರವೇಶಿಸಿದ ಆರು ವಯಸ್ಸಿನ ಹುಡುಗನ ಹೆತ್ತವರ ವರದಿಯಿಂದ ತೋರಿಬರುತ್ತದೆ. “ಕಿಂಡರ್ಗಾರ್ಟನ್ನಲ್ಲಿ ಮೊದಲನೆಯ ವಾರವೇ, ಶಾಲಾ ಬಸ್ಸಿನಲ್ಲಿ ಪ್ರಯಾಣಿಸುವ 15 ನಿಮಿಷಗಳಲ್ಲಿ ಇನ್ನೊಬ್ಬ ಹುಡುಗ ಅವನೊಂದಿಗೆ ಲೈಂಗಿಕವಾಗಿ ಮಾತನಾಡಿಸಿದನು. ಇದು ಅನೇಕ ದಿನಗಳ ತನಕ ಮುಂದುವರಿಯಿತು. ಇದು ಮಕ್ಕಳಾಟ ಯಾ ವೈದ್ಯ ನಟನೆಯ ಆಟವಾಗಿರಲಿಲ್ಲ; ಸ್ವಭಾವ ವ್ಯತಿರಿಕ್ತವಾದ ಮುಚ್ಚುಮರೆಯಿಲ್ಲದ ವರ್ತನೆಯಾಗಿತ್ತು.
“ನಮ್ಮ ಮಗನ ಕ್ಲಾಸಿನಲ್ಲಿ ಅನೇಕ ಮಕ್ಕಳು, ಹೆತ್ತವರೊಂದಿಗೆ ನಿರ್ದಿಷ್ಟ ವಯಸ್ಸಿಗೆ ಮೇಲ್ಪಟ್ಟವರಿಗೆ ಅನುಮತಿಯಿರುವ R-rated ಚಲನ ಚಿತ್ರಗಳನ್ನು ನೋಡುತ್ತಾರೆ. ಹೆತ್ತವರು ಪ್ರಾಯಶಃ ಅವರನ್ನು ಕೂಸಾಡಿಸುವವರ ಸಂದೇಹಾಸ್ಪದ ಪರಾಮರಿಕೆಯಲ್ಲಿ ಬಿಟ್ಟುಹೋಗುವುದಕ್ಕಿಂತ ಜೊತೆಗೆ ಕರೆದುಕೊಂಡು ಹೋಗುವುದೇ ಲೇಸೆಂದು ನೆನಸಬಹುದು. ಮಕ್ಕಳಲ್ಲಿ ಕೆಲವರು ಕೇಬ್ಲ್ ಟೀವೀಯ ಮೂಲಕವಾಗಲಿ ಹೆತ್ತವರು ಮನೆಯಲ್ಲಿಟ್ಟಿರುವ ಚಲನ ಚಿತ್ರಗಳ ಮೂಲಕವಾಗಲಿ R-rated ಮತ್ತು ನಿರ್ದಿಷ್ಟ ವಯಸ್ಸಿಗಿಂತ ಕೆಳಗಿನವರಿಗೆ ಪ್ರವೇಶವಿಲ್ಲದ X-rated ಚಲನ ಚಿತ್ರಗಳನ್ನು ನೋಡುತ್ತಾರೆ.
“ನಮ್ಮ ಮಗನು ರೂಪುಗೊಳ್ಳುವ ವರ್ಷಗಳಲ್ಲಿ, ಅವನ ಶೈಶವ ಮೊದಲ್ಗೊಂಡು ನೈತಿಕ ಮೂಲಸೂತ್ರಗಳನ್ನು ಮನಸ್ಸಿಗೆ ಹತ್ತಿಸುವ ಮೌಲ್ಯವು ನಮ್ಮ ಸ್ವಂತ ಮನೆಯಲ್ಲಿ ನಡೆದ ತಲ್ಲಣಗೊಳಿಸುವ ಸಂಭವದಿಂದ ನಮಗೆ ಅಚ್ಚೊತ್ತಿಸಲ್ಪಟ್ಟಿತು. ಕೆಲವು ವಯಸ್ಕ ಅತಿಥಿಗಳೊಂದಿಗೆ ನಾಲ್ಕು ವಯಸ್ಸಿನ ಒಬ್ಬ ಹುಡುಗಿಯೂ ಹಾಜರಿದ್ದಳು. ಇವಳು ಮತ್ತು ಲೈಂಗಿಕ ಸಂಭೋಗವು ವೈವಾಹಿತ ಪ್ರಾಯಸ್ಥರಿಗೆ ಮಾತ್ರ ಸೇರಿದ್ದು ಎಂದು ಜಾಗ್ರತೆಯಿಂದ ಕಲಿಸಲ್ಪಟ್ಟಿದ್ದ ನಮ್ಮ ಮಗನು ಅವನ ಆಟದ ಕೋಣೆಯಲಿದ್ದರು. ಅವಳು ಪ್ರಣಯ ವಿಹಾರವನ್ನು ಆಡಬಯಸಿ ಅವನು ಮಲಗುವಂತೆ ಹೇಳಿದಳು. ಅವನು ಅರಿಯದೆ ಹಾಗೆ ಮಲಗಿದಾಗ, ಅವಳು ಅವನ ಮೇಲೆ ಮಲಗಿದಳು. ಅವನು ಗಾಬರಿಗೊಂಡು, ‘ಅದು ಮದುವೆಯಾದವರಿಗೆ ಮಾತ್ರ!’ವೆಂದು ಕೂಗಿದನು. ಅವನು ಹಿಡಿತವನ್ನು ಬಿಡಿಸಿ ಆಟದ ಕೋಣೆಯಿಂದ ಹೊರಗೆ ಓಡಿದಾಗ ಅವಳು, ‘ಯಾರಿಗೂ ಹೇಳಬೇಡ!’ ಎಂದು ಕೂಗಿ ಹೇಳಿದಳು.”—ಆದಿಕಾಂಡ 39:12, ಹೋಲಿಸಿ.
ನಿಮ್ಮ ಪುಟ್ಟ ಮಕ್ಕಳನ್ನು ಶೈಶವದಿಂದ ಮೊದಲ್ಗೊಂಡು ಯಾವುದರಿಂದ ರಕ್ಷಿಸಬೇಕಾಗಿದೆಯೋ ಅಂತಹ, ನಗರದ ಹಳೆಯ ವಿಭಾಗಗಳಲ್ಲಿ ಮತ್ತು ಉಪನಗರಗಳಲ್ಲಿ ನಡೆಯುತ್ತಿರುವ ಕೆಲವು ವಿಷಯಗಳು ಈ ಕೆಳಗಿವೆ.
ಇಬ್ಬರು ಏಳು ವಯಸ್ಸಿನ ಹುಡುಗರು ಒಂದು ಪಬ್ಲಿಕ್ ಶಾಲೆಯ ಶೌಚಾಲಯದಲ್ಲಿ ಒಬ್ಬ ಆರು ವಯಸ್ಸಿನ ಹುಡುಗಿಯನ್ನು ಬಲಾತ್ಕಾರದಿಂದ ಕೆಡಿಸಿದರು. ಆರು, ಏಳು ಮತ್ತು ಒಂಬತ್ತು ವಯಸ್ಸಿನ ಮೂವರು ಹುಡುಗರು ಆರು ವರ್ಷ ಪ್ರಾಯದ ಒಬ್ಬ ಹುಡುಗಿಯ ಮೇಲೆ ಲೈಂಗಿಕವಾಗಿ ಅತ್ಯಾಚಾರ ನಡೆಸಿದರು. ಎಂಟು ವಯಸ್ಸಿನ ಒಬ್ಬ ಹುಡುಗ ಕಿಂಡರ್ಗಾರ್ಟನ್ನ ಒಬ್ಬ ಹುಡುಗನ ಮೇಲೆ ಪುಂ ಮೈಥುನ ಮಾಡಿದನು. ಒಬ್ಬ 11-ವಯಸ್ಸಿನ ಹುಡುಗನ ಮೇಲೆ ಎರಡು ವಯಸ್ಸಿನ ಹುಡುಗಿಯನ್ನು ಬಲಾತ್ಕಾರವಾಗಿ ಕೆಡಿಸಿದ ಆರೋಪವನ್ನು ಹಾಕಲಾಯಿತು. ಕೆಲವು ಚಿಕಿತ್ಸಕರ ಅಭಿಪ್ರಾಯವೇನಂದರೆ, ಅನೇಕ ವೇಳೆ ಇಂಥ ಅಪರಾಧಿಗಳು ತೀರಾ ಚಿಕ್ಕವರಾಗಿದ್ದಾಗ ತಾವೇ ಲೈಂಗಿಕ ಅಪಪ್ರಯೋಗದ ಬಲಿಪಶುಗಳಾಗಿದ್ದರು.
ಒಬ್ಬ ಚಿಕ್ಕ ಹುಡುಗನ ದೃಷ್ಟಾಂತದಲ್ಲಿ ಇದು ದೃಢವಾಯಿತು. ಅವನು ಶಿಶುವಾಗಿದ್ದಾಗ, ಅವನ 20-ವಯಸ್ಸಿನ ಅತ್ತೆ ಅವನ ಮೇಲೆ ಬಾಯಿ ಮೈಥುನ ಮಾಡುವ ರೂಢಿಯನ್ನು ಇಟ್ಟುಕೊಂಡಿದ್ದಳು. 18 ತಿಂಗಳು ವಯಸ್ಸಿನಿಂದ 30 ತಿಂಗಳುಗಳ ತನಕ, ಇವನು ಈ ಲೈಂಗಿಕ ಅಪಪ್ರಯೋಗಕ್ಕೊಳಗಾದನು. ಎರಡು ಯಾ ಮೂರು ವರ್ಷಾನಂತರ, ಅವನು ಚಿಕ್ಕ ಹುಡುಗಿಯರನ್ನು ಲೈಂಗಿಕವಾಗಿ ಕಾಡಿಸುತ್ತಿದ್ದನು. ಅವನು ಶಾಲೆಯನ್ನು ಆರಂಭಿಸಿದಾಗ, ಇದೇ ಚಟುವಟಿಕೆಯನ್ನು ಮುಂದುವರಿಸಲಾಗಿ, ಒಂದನೆಯ ಕ್ಲಾಸಿನಲ್ಲಿ, ಮತ್ತು ಪುನಃ ಎರಡನೆಯ ಕ್ಲಾಸಿನಲ್ಲಿ ಅವನನ್ನು ಶಾಲೆಯಿಂದ ಹೊರಗೆ ಹಾಕಲಾಯಿತು.
ಆರಂಭದ ತರಬೇತಿನ ಅಗತ್ಯ
ರೂಪುಗೊಳ್ಳುವ ವರ್ಷಗಳಲ್ಲಿ ಯೋಗ್ಯ ತರಬೇತನ್ನು ಕೊಡಲು ಹೆತ್ತವರು ತಪ್ಪುವುದು ಅಪರಾಧಗಳಿಗೆ ದಾರಿ ಮಾಡಿಕೊಟ್ಟು ವಿನಾಶಕತೆ, ಕನ್ನಗಳ್ಳತನ, ಮತ್ತು ಕೊಲೆಪಾತಕಗಳಂಥ ಹೆಚ್ಚು ಗುರುತರವಾದ, ಪಾತಕಗಳಿಗೆ ಬಾಗಿಲು ತೆರೆಯಬಹುದು. ಇಂಥ ವಿಷಯಗಳ ಕೆಲವು ನಮೂನೆಗಳು ಈ ಕೆಳಗಿವೆ.
ಮೂವರು ಆರು ವಯಸ್ಸಿನ ಹುಡುಗರು ತಮ್ಮ ಆಟದ ಒಡನಾಡಿಯ ಮನೆಯನ್ನು ಸೂರೆಮಾಡಿ, ಕಾರ್ಯತಃ ಅದರ ಪ್ರತಿಯೊಂದು ಕೋಣೆಯನ್ನು ನಾಶಮಾಡಿದರು. ಒಬ್ಬ ಒಂಬತ್ತು ವಯಸ್ಸಿನ ವಿನಾಶಕನ ಮೇಲೆ ನ್ಯಾಯವಿರುದ್ಧವಾಗಿ ಮಾಡಿದ ನಷ್ಟ, ಕಳ್ಳಗನ್ನತನ, ಇನ್ನೊಬ್ಬ ಹುಡುಗನನ್ನು ಚಾಕು ಹಿಡಿದು ಬೆದರಿಸಿದ್ದು, ಒಬ್ಬ ಹುಡುಗಿಯ ಕೂದಲಿಗೆ ಬೆಂಕಿಕೊಟ್ಟದ್ದು—ಈ ಆಪಾದನೆಗಳನ್ನು ಹೊರಿಸಲಾಯಿತು. ಇಬ್ಬರು 11-ವಯಸ್ಸಿನ ಹುಡುಗರು 10-ವಯಸ್ಸಿನ ಇನ್ನೊಬ್ಬನ ಬಾಯಿಗೆ ಒಂಭತ್ತು ಮಿಲಿಮೀಟರಿನ ಪಿಸ್ತೂಲನ್ನು ತುರುಕಿಸಿ, ಅವನ ವಾಚನ್ನು ಕದ್ದರು. ಒಬ್ಬ ಹತ್ತು ವರ್ಷ ಪ್ರಾಯದ ಹುಡುಗನು, ವಿಡಿಯೊ ಆಟದಲ್ಲಿ ಎದ್ದ ವಿವಾದದ ಕಾರಣ ಏಳು ವಯಸ್ಸಿನ ಹುಡುಗಿಯನ್ನು ಗುಂಡು ಹೊಡೆದು ಕೊಂದನು. ಇನ್ನೊಬ್ಬ ಹತ್ತು ವರ್ಷ ಪ್ರಾಯದ ಹುಡುಗನು ತನ್ನ ಆಟದ ಸಂಗಾತಿಗೆ ಗುಂಡು ಹೊಡೆದು ದೇಹವನ್ನು ಮನೆಯ ಕೆಳಗೆ ಅಡಗಿಸಿಟ್ಟನು. ಒಬ್ಬ ಐದು ವಯಸ್ಸಿನ ಹುಡುಗನು ಒಂದು ದಟ್ಟಡಿಯ ಮಗುವನ್ನು ಐದನೆಯ ಮಹಡಿಯ ಮೆಟ್ಟಲಸಾಲುಗುಂಡಿಯಿಂದ ಕೆಳಗೆ ದೊಬ್ಬಿದನು. ಒಬ್ಬ 13-ವರ್ಷ ಪ್ರಾಯದವನು ಇಬ್ಬರು ಯುವಕರ ಜೊತೆಗೂಡಿ, ಏಳು ವರ್ಷ ಪ್ರಾಯದ ಇನ್ನೊಬ್ಬನನ್ನು, ಅವನ ಕುಟುಂಬದಿಂದ ಹಣ ಪಡೆಯುವ ಉದ್ದೇಶದಿಂದ ಅಪಹರಣ ಮಾಡಿದರು, ಆದರೆ ಟೆಲಿಫೊನ್ ಮಾಡಿ ಕುಟುಂಬದಿಂದ ಹಣವನ್ನು ಕೇಳುವ ಮೊದಲೇ, ಅವರು ಅವನನ್ನು ಜೀವಸಹಿತ ಹುಗಿದರು.
ಇದಲ್ಲದೆ, ಕೊನೆಯ ಪರಿಗಣನೆಯಾಗಿ, ಬಂದೂಕುಸಜ್ಜಿತರಾಗಿ, ಕೊಳ್ಳೆ ಹೊಡೆಯಲು ಸುಳಿದಾಡುವ, ಗುಂಡು ಹಾರಿಸುವ ಬಂದೂಕು ಯುದ್ಧಗಳನ್ನು ಮಾಡುತ್ತಾ, ತಮ್ಮನ್ನು ಕೊಂದುಕೊಳ್ಳುವುದು ಮಾತ್ರವಲ್ಲ, ಅಡಹ್ಡಾಯುವ ಗುಂಡು ಹೊಡೆತದಿಂದಾಗಿ ನಿರಪರಾಧಿಗಳಾದ ಮಕ್ಕಳನ್ನೂ ಪ್ರಾಯಸ್ಥರನ್ನೂ ಕೊಲ್ಲುವ ಹದಿಪ್ರಾಯದವರ ತಂಡಗಳಿವೆ. ಅವರು ದೊಡ್ಡ ನಗರಗಳಲ್ಲಿ ಅನೇಕ ನೆರೆಹೊರೆಗಳನ್ನು ಭಯಪೀಡಿತರಾಗುವಂತೆ ಮಾಡುತ್ತಿದ್ದಾರೆ. ಲಾಸ್ ಆ್ಯಂಜಲೀಸ್ ಕೌಂಟಿಯೊಂದರಲ್ಲೇ, “ಗುರುತಿಸಬಹುದಾದ 800 ತಂಡ (ಗ್ಯಾಂಗ್)ಗಳ 1,00,000 ಸದಸ್ಯರಿದ್ದಾರೆ.” (ಸೆವೆಂಟೀನ್, ಆಗಸ್ಟ್ 1991) ಅನೇಕರು ಒಡೆದು ಹೋಗಿರುವ ಕುಟುಂಬಗಳವರು. ತಂಡವೇ ಅವರ ಕುಟುಂಬವಾಗುತ್ತದೆ. ಅನೇಕರು ಜೆಯ್ಲಿನಲ್ಲಿ ಬಂದು ಸೇರುತ್ತಾರೆ. ಅನೇಕರು ಸಾವಿನಲ್ಲಿ ಅಂತ್ಯಗೊಳ್ಳುತ್ತಾರೆ. ಜೆಯ್ಲಿನಿಂದ ಬರೆದಿರುವ ಈ ಕೆಳಗಿನ ಮೂರು ಪತ್ರಗಳ ಎತ್ತಿಕೆ ಪ್ರತಿನಿಧಿರೂಪದ್ದು.
ಮೊದಲನೆಯದ್ದು: ‘ಕಳ್ಳತನದ ಪ್ರಯತ್ನಕ್ಕಾಗಿ ನಾನು ಹುಡುಗ ಅಪರಾಧಿಗಳಿಗಾಗಿರುವ ಕ್ಯಾಂಪಿನಲ್ಲಿದ್ದೇನೆ. ನಾವು ನಾಲ್ಕು ಜನರಿದ್ದೆವು. ಆಗ ಪೊಲೀಸರು ಬಂದರು. ನನ್ನ ಬಳಗದ ಇಬ್ಬರು ಹುಡುಗರು ಒಂದು ದಿಕ್ಕಿಗೂ ನಾನು ಮತ್ತು ಇನ್ನೊಬ್ಬ ಆಪ್ತನು ಇನ್ನೊಂದು ದಿಕ್ಕಿಗೂ ಓಡಿದರೂ, ನಮ್ಮನ್ನು ಹಿಡಿದ ಜರ್ಮನ್ ಶೆಪರ್ಡ್ ನಾಯಿಗಳಿಗಿಂತ ವೇಗವಾಗಿ ನಮಗೆ ಓಡಲಾಗಲಿಲ್ಲ. ನಾನು ಇಲ್ಲಿಂದ ಹೊರಗೆ ಬಂದಾಗ, ಎಂದಾದರೊಮ್ಮೆ ಒಬ್ಬ ಗಣ್ಯವ್ಯಕ್ತಿಯಾಗಲು ನಿರೀಕ್ಷಿಸುತ್ತೇನೆ. ಶಾಲೆಗೆ ಹೋಗಿ ಉತ್ತಮ ಶ್ರೇಣಿಗಳನ್ನು ಪಡೆಯುವುದು ನನಗೆ ಸದಾ ತೀರಾ ಕಠಿಣವಾಗುತ್ತಿತ್ತು. ಆದರೆ, ಅಣ್ಣಾ, ಜೆಯ್ಲಿನಲ್ಲಿ ಕಾಲ ಕಳೆಯುವುದಕ್ಕಿಂತ ಹೆಚ್ಚು ಕಷ್ಟಕರವಾದದ್ದನ್ನು ನೀನೆಂದೂ ನೋಡಿಲ್ಲ!’
ಎರಡನೆಯದ್ದು: ‘ನಾನು ಮೊದಲು ಮೆಕ್ಸಿಕೋದಿಂದ ಬಂದಾಗ ಕೇವಲ ಎಂಟು ವರ್ಷ ಪ್ರಾಯದವನಾಗಿದ್ದೆ. ನನಗೆ 12 ವರ್ಷವಾದಾಗ, ಒಂದು ತಂಡದಲ್ಲಿದ್ದೆ. ನನಗೆ 15 ವಯಸ್ಸಾದಾಗ ಅದರಲ್ಲಿ ತೀರಾ ಸೇರಿಕೊಂಡಿದ್ದೆ. ನಾನು ಕಾರು ನಡೆಸುತ್ತಾ ಗುಂಡು ಹೊಡೆಯುವ ತುಂಬ ಕೆಲಸಗಳನ್ನು ಮಾಡುತ್ತಿದ್ದೆ. ನನ್ನ ಬಂದೂಕು ಸದಾ ನನ್ನ ಪಕ್ಕದಲ್ಲಿರುತ್ತಿತ್ತು. ನನಗೆ 16 ವರ್ಷ ಪ್ರಾಯವಾದಾಗ, ನನಗೆ ಗುಂಡಿನ ಏಟು ತಗಲಲಾಗಿ ಬಹುಮಟ್ಟಿಗೆ ಸಾಯುವ ಸ್ಥಿತಿಗೆ ಬಂದೆ. ಕರ್ತನಿಗೆ ನಾನಿನ್ನೂ ಬೇಕಾಗಿದ್ದಿಲ್ಲದ್ದಕ್ಕಾಗಿ ಅವನಿಗೆ ಉಪಕಾರ ಹೇಳುತ್ತೇನೆ, ಏಕೆಂದರೆ ನಾನು ಅವನೊಂದಿಗೆ ಹೋಗಲು ಸಿದ್ಧನಾಗಿರಲಿಲ್ಲ. ಈಗ ನನ್ನ ಕಾಲುಗಳಲ್ಲಿ ಗುಂಡಿನ ತೂತುಗಳಿವೆ. ಆದುದರಿಂದ ತಂಡದ ಸದಸ್ಯರಾಗಬೇಡಿರೆಂದೇ ನನ್ನ ಸಲಹೆ!!! ಏಕೆಂದರೆ ಆಗುವುದಾದರೆ ನೀವು ನನ್ನಂತೆ ಒಂಟಿಗರಾಗಿ ಕುಂಟು ಸ್ಥಿತಿಯಲ್ಲಿ ಜೆಯ್ಲಿನಲ್ಲಿರುವಿರಿ!’
ಮೂರನೆಯದ್ದು: ‘ನಾನು 11ನೆಯ ವಯಸ್ಸಿನಿಂದ ತಂಡದ ಪ್ರಮುಖ ಸದಸ್ಯ. ನಾನು ನಾಲ್ಕು ಬಾರಿ ತಿವಿಯಲ್ಪಟ್ಟಿದ್ದೇನೆ, ಮೂರು ಬಾರಿ ಗುಂಡಿನೇಟಿಗೊಳಗಾಗಿದ್ದೇನೆ, ಮತ್ತು ಎಷ್ಟು ಬಾರಿ ಜೆಯ್ಲಿಗೆ ಹೋಗಿ ಹೊಡೆತಗಳನ್ನು ಪಡೆದಿದ್ದೇನೆಂದರೆ, ಅದನ್ನು ಎಣಿಕೆ ಮಾಡುವುದೇ ಕಷ್ಟ. ನನಗೆ ಬಾಕಿ ಉಳಿದಿರುವುದು ಸಾವು ಮಾತ್ರ, ಮತ್ತು ಇದಕ್ಕೆ ನಾನು 13 ವರ್ಷ ಪ್ರಾಯದಿಂದ ಹಿಡಿದು ಪ್ರತಿ ದಿವಸ ಸಿದ್ಧನಾಗಿದ್ದೆ, ಮತ್ತು ಈಗ ನನಗೆ ಹದಿನಾರು ವರ್ಷ. ನಾನು ಈಗ ಎಂಟು ತಿಂಗಳುಗಳ ಸಜೆಯಲ್ಲಿದ್ದೇನೆ, ಮತ್ತು ಇನ್ನು ಕೆಲವು ವರ್ಷಗಳಲ್ಲಿ ಸತ್ತು ಹೋಗುತ್ತೇನೆ. ಆದರೆ ತಂಡದ ಸದಸ್ಯರಾಗದೆ ಇರುವಲ್ಲಿ ನೀವು ಇವೆಲ್ಲವುಗಳಿಂದ ತಪ್ಪಬಲ್ಲಿರಿ.’
ಅನುಕೂಲ ಸಮಯವನ್ನು ಸ್ವಾಧೀನ ಮಾಡಿಕೊಳ್ಳಿ
ರೂಪುಗೊಳ್ಳುವ ವರುಷಗಳಲ್ಲಿ ಮಕ್ಕಳನ್ನು ತರಬೇತು ಮಾಡಲು ತಪ್ಪುವುದು ಈ ಭಯಂಕರ ಪಾತಕಗಳನ್ನು ಫಲಿಸುವುದೆಂದು ಈ ಹೇಳಿಕೆಗಳ ಅರ್ಥವಲ್ಲ. ಆದರೆ ಇದಕ್ಕೆ ತಪ್ಪುವಲ್ಲಿ, ಅದು ಒಡಕು ನಡತೆಗೆ ನಡೆಸ ಬಲ್ಲದು. ಇದು ಅಪರಾಧಗಳಿಗೆ ಮುಟ್ಟಿ, ಮತ್ತು ತಡೆಯದೆ ಹಾಗೆಯೇ ಮುನ್ನಡೆಯಲು ಬಿಡುವಲ್ಲಿ, ಅಪರಾಧಗಳು ಪಾತಕ ವರ್ತನೆ, ಜೆಯ್ಲು ಮತ್ತು ಸಾವಿಗೆ ನಡೆಸಸಾಧ್ಯವಿದೆ.
ಮತ್ತು ನಿಮ್ಮ ಮಕ್ಕಳಲ್ಲಿ ಈ ರೀತಿಯ ಪ್ರವೃತ್ತಿಗಳಿವೆಯೊ ಎಂಬುದನ್ನು ಪರೀಕ್ಷಿಸುವುದು, ಅವರು ಹದಿಪ್ರಾಯವನ್ನು ತಲುಪುವ ತನಕ ಕಾಯುವುದರ ಬದಲು ಹದಿಪ್ರಾಯಕ್ಕೆ ಮೊದಲೇ ಮಾಡುವುದು ಎಷ್ಟೋ ಸುಲಭ. ವಾಸ್ತವವೇನಂದರೆ, ಇದನ್ನು ಪ್ರಾರಂಭಿಸುವ ಸಮಯ ಕಿಂಡರ್ಗಾರ್ಟನ್ನ ಮೊದಲೇ. ಏಕೆಂದರೆ ಆ ರೂಪುಗೊಳ್ಳುವ ವರ್ಷಗಳಲ್ಲಿ, ಹೊರಗಣ ಪ್ರಭಾವಗಳು ಅವರ ಗಮನಕ್ಕಾಗಿ ಸ್ಪರ್ಧಿಸುವ ಮೊದಲು, ಅವರ ಹೆಚ್ಚಿನ ಸಮಯ ಹೆತ್ತವರಾದ ನಿಮ್ಮ ಜೊತೆಯಲ್ಲಿ ಕಳೆಯಲ್ಪಡುತ್ತದೆ. ಅವರ ಶೈಶವದಲ್ಲಿ ನೀವು ಅವರಿಗೆ ಆಪ್ತರಾಗಿ ಇಲ್ಲದವರಾಗುವಲ್ಲಿ, ಅವರು ತಮ್ಮ ಹದಿಪ್ರಾಯದಲ್ಲಿ ನೀವು ಅವರಿಗೆ ಆಪ್ತರಾಗುವಂತೆವಂತೆ ಬಿಡಲಿಕ್ಕಿಲ್ಲ. ಅವರ ಸಮಾನವಯಸ್ಸಿನವರು ಆಗ ನಿಮ್ಮ ಸ್ಥಾನವನ್ನು ಭರ್ತಿಮಾಡಿರುವರೆಂದು ನೀವು ಕಂಡುಹಿಡಿಯಬಹುದು. ಆದುದರಿಂದ, ಹೆತ್ತವರಿಗಿರುವ ಸಲಹೆಯು, ಈ ರೂಪುಗೊಳ್ಳುವ ವರುಷಗಳಲ್ಲಿ, ನೀವು ಅವರಿಗಾಗಿ ಮಾಡುವ ಪರಮ ಪ್ರಯತ್ನವು, ನಿಮ್ಮ ಹಾಗೂ ಅವರ ಆಶೀರ್ವಾದಕ್ಕಾಗಿ ಅತ್ಯುತ್ತಮ ಫಲವನ್ನು ತರುವ ಸಮಯದಲ್ಲಿ, ನಿಮ್ಮ ಮಕ್ಕಳನ್ನು ಅಸಡ್ಡೆ ಮಾಡಬೇಡಿರಿ.—ಮತ್ತಾಯ 7:16-20 ಹೋಲಿಸಿ. (g92 9/22)