ಸಾಮಾನ್ಯ ಕಚಡವಲ್ಲ!
ಶುಕ್ರವಾರ, ಮಾರ್ಚ್ 24, 1989ರಂದು ಎಕ್ಸಾನ್ ವಾಲೀಸ್ಡ್ ಎಂಬ ತೈಲಜಹಜು ಅಲಾಸ್ಕದ ಪ್ರಿನ್ಸ್ ವಿಲ್ಯಮ್ ಸೌಂಡ್‌ನಲ್ಲಿ ಬಂಡೆಗಳ ಸಾಲಿಗೆ ಬಡಿಯಿತು. ಇದರ ಪರಿಣಾಮವಾಗಿ, 4.2 ಕೋಟಿ ಲಿಟರ್ ಕಚ್ಚಾ ಎಣ್ಣೆ ನೀರಿಗೆ ಸುರಿಯಿತು. ಈ ಅಪಘಾತ ಸ್ಥಳೀಕ ಬೆಸ್ತರ ಜೀವನೋಪಾಯಕ್ಕೆ ಅಪಾಯ ತಂದು, ನೂರಾರು ಕಿಲೊಮೀಟರ್ ಸಮುದ್ರತೀರವನ್ನು ಮಲಿನಗೊಳಿಸಿ, ಸಾವಿರಾರು ಪಕ್ಷಿಗಳನ್ನು ಮತ್ತು ಕಡಲ ಸಸ್ತನಿಗಳನ್ನು ನಾಶಗೊಳಿಸಿತು.
ಈ ಎಕ್ಸಾನ್ ವಾಲೀಸ್ಡ್ ಘಟನೆ ಪರಿಸರೀಯವಾಗಿ ಚಿಂತೆಗೊಳಗಾಗಿರುವ ಜನರ ಭಾವಾವೇಶವನ್ನು ಉದ್ರೇಕಿಸುತ್ತಾ ಮುಂದುವರಿಯುತ್ತದೆ. ಆದರೂ ಹೆಚ್ಚು ಅಗೋಚರವಾದ ಇನ್ನೊಂದು “ತೈಲ ಸುರಿತ” ಪ್ರತಿ ದಿನ ಸಂಭವಿಸುತ್ತಾ ಇದೆ. ಮತ್ತು ಇದು ನಿಮ್ಮ ಸ್ವಂತ ನೆರೆಹೊರೆಯಲ್ಲಿ ನಡೆಯುತ್ತಿರುವುದು ಸಂಭಾವ್ಯ!
ಕನ್ಸೂಮರ್ ರಿಪೋರ್ಟ್ಸ್ ವರದಿಗನುಸಾರ ತಮ್ಮ ವಾಹನಗಳ ಎಂಜಿನ್ ಎಣ್ಣೆಯನ್ನು ವ್ಯಕ್ತಿಪರವಾಗಿ ಬದಲಾಯಿಸುವವರು ಪ್ರತಿ ವರ್ಷ 75ರಿಂದ 150 ಕೋಟಿ ಲೀಟರ್ ತ್ಯಾಜ್ಯ ಎಣ್ಣೆಯನ್ನು ತ್ಯಜಿಸುತ್ತಾರೆ. “ಇದರಲ್ಲಿ 10ರಿಂದ 14 ಪ್ರತಿಶತ ಎಣ್ಣೆಯನ್ನು ಯೋಗ್ಯ ರೀತಿಯಲ್ಲಿ ತ್ಯಜಿಸಲಾಗುತ್ತದೆ” ಎಂದು ವರದಿಸಲಾಗಿದೆ. ಈ ಚಿಕ್ಕ ಪ್ರಮಾಣದ ತ್ಯಾಜ್ಯ ತೈಲ, ಅದರಿಂದ ಇತರ ಉಪಯುಕ್ತ ವಸ್ತುಗಳನ್ನು ಮಾಡಸಾಧ್ಯವಿರುವುದರಿಂದ, ಪರಿವರ್ತಿಸಲ್ಪಡುತ್ತದೆ. ಆದರೆ ಮಿಕ್ಕ ತೈಲಕ್ಕೆ ಏನಾಗುತ್ತದೆ? ಅದನ್ನು ವಾಹನದ ಒಡೆಯರು ಸಾಮಾನ್ಯ ಕಚಡದಂತೆ ಎಸೆದು ಬಿಡುವುದು ಸಂಭಾವ್ಯ.
ಪ್ರತಿ ವರ್ಷ ಲಕ್ಷಗಟ್ಟಲೆ ಲೀಟರ್ ತ್ಯಾಜ್ಯ ತೈಲವು ನೆಲ, ತೊರೆ, ಯಾ ಒಳ ಚರಂಡಿಗಳ ಪಾಲಾಗುತ್ತದೆ. ಇಷ್ಟು ಗಾತ್ರದ ಎಣ್ಣೆಯನ್ನು ಉತ್ಪಾದಿಸಲು ಕಡಮೆ ಪಕ್ಷ 25 ಎಕ್ಸಾನ್ ವಾಲೀಸ್‌ಳ ತೈಲ ಸುರಿತವಾದರೂ ಬೇಕು! ಆದರೆ ಉಪಯೋಗಿಸಲ್ಪಟ್ಟ ಎಣ್ಣೆ ಮತ್ತು ಆ್ಯಂಟಿಫ್ರೀಸ್, ಬ್ರೇಕ್ ಎಣ್ಣೆ, ಮತ್ತು ಟ್ರಾನ್ಸ್‌ಮಿಷನ್ ಎಣ್ಣೆ—ಇವುಗಳು ಸಾಮಾನ್ಯ ಕಚಡವಲ್ಲ. ಇವು ಹೆಚ್ಚು ಕೀಳಾಗಿರುವ ಕಚಡ.
ಕನ್ಸೂಮರ್ ರಿಪೋರ್ಟ್ಸ್ ಗಮನಿಸುವುದೇನಂದರೆ, ಈ ಎಣ್ಣೆ “ಕುಡಿಯುವ ನೀರಲ್ಲಿ ಸೇರುವುದಾದರೆ ಪರಿಣಾಮ ಗುರುತರವಾಗಬಲ್ಲದು: ಒಂದು ಲೀಟರ್ ತ್ಯಾಜ್ಯ ಎಣ್ಣೆ, 10 ಲಕ್ಷ ಲೀಟರ್ ಸೀನೀರನ್ನು ಕುಡಿಯಲು ಅಯೋಗ್ಯವಾಗಿ ಮಾಡಬಲ್ಲದು. ಮತ್ತು ಅರ್ಧ ಲೀಟರ್ ಎಣ್ಣೆ ಒಂದು ಎಕ್ರೆ ನೀರನ್ನು ಆವರಿಸುವ ತೈಲ ಲೇಪವನ್ನು ಉಂಟುಮಾಡಬಲ್ಲದು.” (g92 9/22)