ಮಕ್ಕಳಿಗಾಗಿ ಒಂದು ಉಜ್ವಲ ಭವಿಷ್ಯತ್ತು
ಮಕ್ಕಳಿಗಾಗಿ ನಡೆಸಿದ ಜಾಗತಿಕ ಶೃಂಗ ಸಭೆಯಲ್ಲಿ, ಅನೇಕ ಲೋಕ ನಾಯಕರು ಭವಿಷ್ಯತ್ತಿನ ಕುರಿತು ಭರವಸೆಯಿಂದ ಮಾತಾಡಿದರು. ಅವರು ಮಕ್ಕಳಿಗಾಗಿ “ಒಂದು ಹೊಸ ಯುಗ,” “ಮಗುವಿನ ಆವಶ್ಯಕತೆಗಳಿಗಾಗಿ ಒಂದು ಹೊಸ ಅರ್ಪಣೆ”ಯನ್ನು ಮುಂತಿಳಿಸಿದರು. ಮಕ್ಕಳಿಗೆ ಸಹಾಯ ಮಾಡಲು “‘ಐಕ್ಯವುಳ್ಳ ಮತ್ತು ದೃಢತೆಯ ಲೋಕ ಒಕ್ಕೂಟಕ್ಕೆ ಜೀವ’ ಕೊಡುವ ‘ಒಂದು ಹೊಸ ಐಕಮತ್ಯ’”ದ ಕುರಿತು ಅವರು ಮಾತಾಡಿದರು.
ಇವು ಉದಾತ್ತ ಮಾತುಗಳು. ಆದರೆ ಅವುಗಳ ಗುರಿಗಳನ್ನು ಸಾಧಿಸಲು ರಾಷ್ಟ್ರಗಳು ಎಷ್ಟರ ಮಟ್ಟಿಗೆ ಪ್ರಯತ್ನಿಸುವವೊ ಎಂಬುದನ್ನು ನೋಡಲಿಕ್ಕಿದೆ. ಶೃಂಗ ಸಭೆ ಮುಗಿದು ಐದು ತಿಂಗಳುಗಳಲ್ಲಿ ರಾಷ್ಟ್ರಗಳು ಪರ್ಸಿಯನ್ ಕೊಲಿಯ್ಲಲ್ಲಿ ಅತಿ ಹೆಚ್ಚು ಖರ್ಚಿನದ್ದಾಗಿ ಪರಿಣಮಿಸಿದ—6,100 ಕೋಟಿ—ಮತ್ತು ಪರಿಸರೀಯವಾಗಿ ಹಿಂದೆಂದಿಗಿಂತಲೂ ಹೆಚ್ಚು ನಾಶಕಾರಕವಾದ ಒಂದು ಯುದ್ಧವನ್ನು ಹೂಡಿದುವು ಎಂಬುದನ್ನು ಗಮನಿಸುವುದು ಯೋಗ್ಯ. ಇದರ ಫಲಾಂತರದಲ್ಲಿ ಇರಾಕ್ ಮತ್ತು ಕುವೇಟ್ಗಳಲ್ಲಿ ನೂರಾರು ಸಾವಿರ ಜನರು ಸ್ಥಳಾಂತರಿತರಾದರು. ಸಾವಿರಾರು ಜನರು—ಒಂದು ಹಂತದಲ್ಲಿ ಪ್ರತಿ ದಿನ ನೂರಾರು ಜನರು—ಹೊಟ್ಟೆಗಿಲ್ಲದೆ, ಹವಾಮಾನಕ್ಕೆ ಬಲಿಯಾಗಿ, ನ್ಯೂನ ಪೋಷಣೆಯಿಂದಾಗಿ, ಮತ್ತು ರೋಗಗಳಿಂದ ಸತ್ತರು. ಇವರಲ್ಲಿ 10ರಲ್ಲಿ 8 ಜನ ಸ್ತ್ರೀಯರೂ ಮಕ್ಕಳೂ ಆಗಿದ್ದರು.
ಸಂಕಟಗಳು ಮುಂತಿಳಿಸಲ್ಪಟ್ಟದ್ದು
ಲೋಕದ ಮಕ್ಕಳಿಗೆ ತಟ್ಟಿರುವ ಸಮಸ್ಯೆಗಳು ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಮುಂತಿಳಿಸಲ್ಪಟ್ಟವೆಂದು ದೇವರ ವಾಕ್ಯದ ವಿದ್ಯಾರ್ಥಿಗಳು ತಿಳಿದಿದ್ದಾರೆ. ಬೈಬಲು ಈ “ಕಡೇ ದಿವಸ”ಗಳ ಕುರಿತು ಹೀಗೆ ಪ್ರವಾದಿಸಿದೆ:
▫ “ಅಂಟು ರೋಗಗಳಿರುವುವು.”—ಲೂಕ 21:11, NW.
▫ “ಅಲ್ಲಲ್ಲಿ ಬರಗಳು ಬರುವವು.”—ಮತ್ತಾಯ 24:7.
▫ “[ಜನರು] ಭೂಮಿಯನ್ನು ಹಾಳು” ಮಾಡುವರು.—ಪ್ರಕಟನೆ 11:18, NW.
▫ “ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವುವು.”—ಮಾರ್ಕ 13:8, NW.
▫ “ನಿಭಾಯಿಸಲು ಕಠಿಣವಾದ ಕಾಲಗಳು ಇಲ್ಲಿರುವುವು . . . ಏಕೆಂದರೆ ಮನುಷ್ಯರು ಸ್ವಪ್ರೇಮಿಗಳೂ . . . ಸ್ವಭಾವ ಸಿದ್ಧವಾದ ಒಲುಮೆ ಇಲ್ಲದವರೂ . . . ಆಗಿರುವರು.”—2 ತಿಮೊಥೆಯ 3:1-3, NW.
ರಾಷ್ಟ್ರಗಳು, ತಾವು ಮಾನವಕುಲದ ಸಮಸ್ಯೆಗಳ ಮೇಲೆ ತೇಪೆ ಹಾಕಲು ಸಾಕಷ್ಟು ಮುಂದುವರಿದಿದ್ದೇವೆ ಎಂದು ನೆನಸಿ, “ಶಾಂತಿ ಮತ್ತು ಭದ್ರತೆ”ಯನ್ನು ಘೋಷಿಸುವ ಸಮಯವು ಬೇಗನೆ ಬರಲಿದೆ ಎಂದು ಸಹ ಬೈಬಲು ಮುಂತಿಳಿಸಿತು.—1 ಥೆಸಲೊನೀಕ 5:3, NW.
ಉಜ್ವಲ ಭವಿಷ್ಯ
ಆದರೂ, ಆ ಘೋಷಣೆ ವಾಸ್ತವಿಕವಾಗಿ ಮಾನವ ವಿಚಾರಗಳಲ್ಲಿ ದೇವರ ಕೈಹಾಕುವಿಕೆಯ ಸಮಯಕ್ಕೆ ಸನ್ನೆ ಕೊಡುತ್ತದೆ. ದೇವರು ತನ್ನ ಸ್ವರ್ಗೀಯ ರಾಜ್ಯದ ಮುಖೇನ ಈಗಿನ ವಿಷಯ ವ್ಯವಸ್ಥೆಯನ್ನು ತೊಲಗಿಸಿ, ಮಕ್ಕಳಿಗಾಗಿಯೂ ಪ್ರಾಪ್ತ ವಯಸ್ಕರಿಗಾಗಿಯೂ ನಿಜ ಶಾಂತಿ ಮತ್ತು ಬಾಳುವ ಭದ್ರತೆಯಿರುವ ಒಂದು ಹೊಸ ಜಗತ್ತನ್ನು ಒಳತರುವನು.—ಜ್ಞಾನೋಕ್ತಿ 2:21, 22; ದಾನಿಯೇಲ 2:44; ಮತ್ತಾಯ 6:10.
ದೇವರ ಉಜ್ವಲವಾದ ರಾಜ್ಯ ಏರ್ಪಾಡಿನ ಕೆಳಗೆ, “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” (ಯೆಶಾಯ 33:24) ನ್ಯೂನ ಪೋಷಣೆಯು ಗತ ವಿಷಯವಾಗಿರುವುದು: “ಹೇರಳ ಧಾನ್ಯವು ಭೂಮಿಯ ಮೇಲಿರುವುದು; ಬೆಟ್ಟಗಳ ಮೇಲೆ ಸಮೃದ್ಧಿ ಇರುವುದು.” (ಕೀರ್ತನೆ 72:16, NW) ಯುದ್ಧವು ಸಹ ಇಲ್ಲದೆ ಹೋಗುವುದು, ಏಕೆಂದರೆ ಬೈಬಲು ವಾಗ್ದಾನಿಸುವುದು: “[ಯೆಹೋವನು] ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿ ಬಿಟ್ಟಿದ್ದಾನೆ.”—ಕೀರ್ತನೆ 46:9.
ಆದರೆ ನ್ಯೂನ ಪೋಷಣೆ, ರೋಗ, ಯಾ ಇತರ ಕಾರಣಗಳಿಂದ ಆಗಲೆ ಸತ್ತಿರುವ ಮಕ್ಕಳ—ಮತಿತ್ತರರ—ಕುರಿತೇನು? ದೇವರ ಪ್ರೇರಿತ ವಾಕ್ಯ ಘೋಷಿಸುವುದು: “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದು.”—ಅ. ಕೃತ್ಯಗಳು 24:15.
ಯೇಸು ಕ್ರಿಸ್ತನು ಭೂಮಿಯಲ್ಲಿದ್ದಾಗ, ದೇವರ ನೂತನ ಲೋಕದಲ್ಲಿ ಭೂಮಿಯ ಮೇಲೆ ನಡೆಯುವ ಪುನರುತ್ಥಾನದಲ್ಲಿ ಎಳೆಯರು ಸೇರಿರುವರು ಎಂದು ತೋರಿಸಿದನು. ಉದಾಹರಣೆಗೆ, ಸುಮಾರು 12 ವಯಸ್ಸಿನ ಒಬ್ಬ ಹುಡುಗಿ ಸತ್ತಾಗ “ಎಲ್ಲರು ಅಳುತ್ತಾ ಆಕೆಗೋಸ್ಕರ ಎದೆಬಡುಕೊಳ್ಳುತ್ತಾ ಇದ್ದರು.” ಆದರೆ ಯೇಸು ಆ ಹುಡುಗಿಯ ಕೈ ಹಿಡಿದು “ಅಮ್ಮಣ್ಣೀ, ಏಳು” ಎಂದು ಹೇಳಿದನು. ಈ ಐತಿಹಾಸಿಕ ವೃತ್ತಾಂತ ತಿಳಿಸುವುದು: “ತಕ್ಷಣವೇ ಆಕೆ ಎದಳ್ದು. ತರುವಾಯ ಆತನು—ಈಕೆಗೆ ಊಟ ಮಾಡಿಸಿರಿ ಎಂದು ಅಪ್ಪಣೆ ಕೊಟ್ಟನು.” ಆಕೆಯ ಹೆತ್ತವರ ಪ್ರತಿವರ್ತನೆ ಏನಾಗಿತ್ತು? ಬೈಬಲು ವರದಿ ಮಾಡುವುದು: “ಅವರು ಅತ್ಯಾನಂದಪರವಶರಾದರು.”—ಲೂಕ 8:40-42, 49-56, NW; ಮಾರ್ಕ 5:42.
ಇನ್ನೊಂದು ಸಂದರ್ಭದಲ್ಲಿ, ಯಾರ ಏಕಜಾತ ಪುತ್ರನು ಸತ್ತಿದ್ದನೊ ಆ ವಿಧವೆಯನ್ನೊಳಗೊಂಡಿದ್ದ ಒಂದು ಶ್ಮಶಾನ ಯಾತ್ರೆಯನ್ನು ಯೇಸು ಸಂಧಿಸಿದನು. ಯೇಸು “ಚಟ್ಟದ ಹತ್ತಿರ ಹೋಗಿ ಅದನ್ನು ಮುಟ್ಟಲು ಹೊತ್ತುಕೊಂಡವರು ನಿಂತರು. ಆಗ ಆತನು—ಯೌವನಸ್ಥನೇ, ಏಳು ಎಂದು ನಿನಗೆ ಹೇಳುತ್ತೇನೆ ಅಂದನು. ಅನ್ನುತ್ತಲೇ ಸತ್ತಿದ್ದವನು ಎದ್ದು ಕೂತುಕೊಂಡು ಮಾತಾಡುವದಕ್ಕೆ ತೊಡಗಿದನು. ಯೇಸು ಅವನನ್ನು ಅವನ ತಾಯಿಗೆ ಕೊಟ್ಟನು.” ಹತ್ತಿರವಿದ್ದವರು, “ದೇವರನ್ನು ಕೊಂಡಾಡುವವರಾದರು.”—ಲೂಕ 7:11-16.
ಹೀಗೆ, ದೇವರ ರಾಜ್ಯ ಸರಕಾರದ ನೀತಿಯ ಆಳಿಕೆಯಲ್ಲಿ, ಪುನರುತ್ಥಾನಗೊಳ್ಳುವವರ ಸಮೇತ, ಮಕ್ಕಳಿಗೆ ಅತ್ಯಂತ ಭವ್ಯವಾದ ಭವಿಷ್ಯವಿರುವುದು. ಅವರು ನೀತಿ ಮತ್ತು ಶಾಂತಿಯ ಎಷ್ಟೊಂದು ಸುಂದರವಾದ, ಸುಭದ್ರವಾದ, ಸುಸಮೃದ್ಧವಾದ ಲೋಕದಲ್ಲಿ ಬೆಳೆಯಶಕ್ತರಾಗುವರೆಂದರೆ, ಯೇಸು ಅದನ್ನು ಯೋಗ್ಯವಾಗಿಯೇ “ಪರದೈಸ್” (ಪ್ರಮೋದವನ) ಎಂದು ಕರೆಯುತ್ತಾನೆ.—ಲೂಕ 23:43. (g92 12/8)
[ಪುಟ 9 ರಲ್ಲಿರುವ ಚಿತ್ರ]
ದೇವರ ನೂತನ ಜಗತ್ತಿನಲ್ಲಿ, ಮಕ್ಕಳು ಭದ್ರರಾಗಿ, ಆರೋಗ್ಯವುಳ್ಳವರಾಗಿ ಮತ್ತು ಸಂತೋಷದಿಂದ ಬೆಳೆಯುವರು