ಭಾಗ 6
ವಿಜ್ಞಾನ—ಸತ್ಯಕ್ಕಾಗಿ ಮಾನವ ಕುಲದ ಮುಂದುವರಿಯುತ್ತಿರುವ ತಲಾಷು
ಇಪ್ಪತ್ತೊಂದನೆಯ ಶತಮಾನದ ಪಂಥಾಹ್ವಾನಗಳನ್ನು ಎದುರಿಸುವುದು
ಒಂಬತ್ತು, ಎಂಟು, ಏಳು, ಮತ್ತು ಎಣಿಕೆಯನ್ನು ಮುಂದುವರಿಸುವುದು! ರಾಕೆಟ್ ಒಂದರ ಎಸೆತಕ್ಕಾಗಿ ಇಳಿಯೆಣಿಕೆಯೋ? ಇಲ್ಲ, ಬದಲಿಗೆ 21ನೆಯ ಶತಮಾನದ ಅನಿಶ್ಚಿತತೆಗಳೊಳಗೆ ಮಾನವಕುಲವನ್ನು ಹಾಕುವ ಮೊದಲು ಇನ್ನೂ ಉಳಿದಿರುವ ವರ್ಷಗಳ ಸಂಖ್ಯೆಗಾಗಿ ಎಣಿಕೆಯಾಗಿದೆ.a
ಹಿಂದಿನ ಶತಮಾನದ ವೈಜ್ಞಾನಿಕ ಸಾಧನೆಗಳನ್ನು ಆಧರಿಸಿ, 21ನೆಯ ಶತಮಾನವು ತರಬಹುದಾದ ಯಾವುದೇ ಪಂಥಾಹ್ವಾನದೊಂದಿಗೆ ವಿಜ್ಞಾನವು ನಿಭಾಯಿಸಬಲ್ಲದೆಂದು ಅನೇಕರು ಯಥಾರ್ಥವಾಗಿ ನಂಬಬಹುದು.b ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಒಬ್ಬ ಫ್ರೆಂಚ್ ಗ್ರಂಥಕರ್ತನಿಗೆ ಅನಿಸಿದಂತೆ ಅವರಿಗೆ ಅನಿಸಬಹುದು. “ಇಂದು ವಿಜ್ಞಾನವು ಲೋಕವನ್ನು ಆಳಲು ವಿಧಿಸಲ್ಪಟ್ಟಿದೆ,” ಎಂದು ಅವನು ಬರೆದನು. “ಈಗಿನಿಂದ ಲೋಕದ ಆಳಿಕ್ವೆಯು ದೇವರಿಗೆ ಸೇರಿದಲ್ಲ, ಆದರೆ ವಿಜ್ಞಾನಕ್ಕೆ, ಜನರ ಉಪಕಾರಿ ಮತ್ತು ಮಾನವಕುಲದ ವಿಮೋಚಕನಂತೆ—ವಿಜ್ಞಾನಕ್ಕೆ.”
ಈ ನಿರೀಕ್ಷಣಗಳನ್ನು ನೆರವೇರಿಸಲಿಕ್ಕಾಗಿ, ತಾನು ಸೃಷ್ಟಿಸಲು ಸಹಾಯ ಮಾಡಿದ ಅನೇಕ ಸಮಸ್ಯೆಗಳನ್ನು ವಿಜ್ಞಾನಕ್ಕೆ ಬಗೆಹರಿಸಬೇಕಾಗುವುದು.
ವಿಜ್ಞಾನವು ಹೊಣೆಯಾಗಿರುವ ಪರಿಸರದ ಧ್ವಂಸವು ಮಹತ್ತರವಾಗಿದೆ. 5000 ಡೇಸ್ ಟು ಸೇವ್ ದ ಪ್ಲಾನೆಟ್ ಎಂಬ ಪುಸ್ತಕವು ಒತ್ತಿಹೇಳುವುದು: “ಪರಿಸರದ ಶೋಷಣೆಯ ಪ್ರಚಲಿತ ಕ್ರಮವನ್ನು ನಾವು ಉಪಯೋಗಿಸುತ್ತಾ ಇರುವುದಾದರೆ, ಆಧುನಿಕ ಸಮಾಜವು ಮುಂದಿನ ಶತಮಾನವನ್ನು ಬದುಕಿ ಉಳಿಯುವುದೊ ಎಂಬುದು ಪ್ರಶ್ನೆಯಲ್ಲ, ಆದರೆ ಅದು ದಢಮ್ಮನೆಯ ಯಾ ಕುಂಯ್ಗುಡುವ ಶಬ್ದದಿಂದ ಮಾಯವಾಗುವುದೊ?”
ಇದೊಂದು ಸ್ವೀಕರಣೀಯವಾದ ಆಯ್ಕೆಯಂತೆ ತೋರುವುದಿಲ್ಲ.
ವಿಜ್ಞಾನದ ಇತಿಮಿತಿಗಳು
“ಹತ್ತೊಂಭತ್ತನೆಯ ಶತಮಾನದ ಅನೇಕ ವಿಜ್ಞಾನಿಗಳು . . . ಪೂರ್ಣ ಸತ್ಯವನ್ನು ಮತ್ತು ಅಂತಿಮ ತಿಳಿವಳಿಕೆಯನ್ನು ಅವರು ಒಂದು ದಿನ ಸಾಧಿಸುವರೆಂದು ಅನೇಕ ಬಾರಿ ಅನಿಸಿತು,” ಎಂಬುದಾಗಿ ದ ಸೈಎನ್ಟಿಸ್ಟ್ ಪುಸ್ತಕವು ಹೇಳುತ್ತದೆ. “ಅವರ ತರುವಾಯದವರು, ‘ಆಂಶಿಕ ತಿಳಿವಳಿಕೆಯನ್ನು’ ಮಾತ್ರ ತಲಪುವುದರ ಕುರಿತು, ಸತ್ಯವನ್ನು ನಿರಂತರವಾಗಿ ಸಮೀಪಿಸುವುದರ ಆದರೆ ಅದನ್ನು ಸಂಪೂರ್ಣವಾಗಿ ಎಂದೂ ಭದ್ರವಾಗಿ ಹಿಡಿದುಕೊಳ್ಳದೆ ಇರುವುದರ ಕುರಿತು ಮಾತಾಡುತ್ತಾರೆಂದು,” ಪುಸ್ತಕವು ಮುಂದುವರಿಸುತ್ತದೆ. ಪೂರ್ಣ ತಿಳಿವಳಿಕೆಯ ಈ ಕೊರತೆಯು, ವಿಜ್ಞಾನವು ಏನನ್ನು ಮಾಡಬಲ್ಲದೊ ಅದನ್ನು ಗಂಭೀರವಾಗಿ ಸೀಮಿತಗೊಳಿಸುತ್ತದೆ.
ವೈಜ್ಞಾನಿಕ ನಿಜತ್ವಗಳು ವರ್ಷಗಳ ಉದ್ದಕ್ಕೂ ಎಂದೂ ಬದಲಾಗದಿದ್ದರೂ ವೈಜ್ಞಾನಿಕ ಸಿದ್ಧಾಂತಗಳು ಬದಲಾಗಿವೆ—ಮತ್ತು ಸತತವಾಗಿ ಬದಲಾಗಿವೆ. ವಾಸ್ತವದಲ್ಲಿ, ಕೆಲವೊಮ್ಮೆ ಸಿದ್ಧಾಂತಗಳು ಒಂದು ಕೊನೆಯಿಂದ ಇನ್ನೊಂದಕ್ಕೆ ಹೊರಳಿವೆ. ಉದಾಹರಣೆಗೆ, ಗಂಭೀರವಾಗಿ ಅಸ್ವಸ್ಥನಾಗಿರುವ ಒಬ್ಬ ವ್ಯಕ್ತಿಯ ದೇಹದಿಂದ ರಕ್ತವನ್ನು ತೆಗೆಯುವುದು ವೈಜ್ಞಾನಿಕ ಸಂಗತಿಯಾಗಿತ್ತು ಎಂದು ವೈದ್ಯಕೀಯ ವಿಜ್ಞಾನಿಗಳು ಒಮ್ಮೆ ನೆನಸಿದ್ದರು. ತದನಂತರ ರಕ್ತವನ್ನು ಪೂರಣಮಾಡುವುದು ಪರಿಹಾರವೆಂದು ಅವರು ನೆನಸಿದರು. ಎರಡನ್ನೂ ಮಾಡದೆ ಇರುವ ಮತ್ತು ಕಡಮೆ ಅಪಾಯಕಾರಿಯಾದ ಬದಲಿ ಚಿಕಿತ್ಸೆಗಳನ್ನು ಹುಡುಕುವುದರ ಕುರಿತು ಇರುವ ವಿವೇಕವನ್ನು ಗುರುತಿಸಲು ಕೆಲವರು ಈಗ ಆರಂಭಿಸಿದ್ದಾರೆ.
ನಿಸ್ಸಂಶಯವಾಗಿ, ವಿಜ್ಞಾನಿಗಳಿಗೆ ಗೊತ್ತಿರುವ ವಿಷಯಗಳಿಗಿಂತ ಗೊತ್ತಿರದ ವಿಷಯಗಳೇ ಹೆಚ್ಚು. ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಗಮನಿಸುವುದು: “ದ್ಯುತಿಸಂಶೇಷ್ಲಣಾ ಕ್ರಿಯೆ ಹೇಗೆ ಕಾರ್ಯ ಮಾಡುತ್ತದೆ ಎಂದು ನಿಖರವಾಗಿ ಸಸ್ಯ ಶಾಸ್ತ್ರಜ್ಞರಿಗೆ ಇನ್ನೂ ತಿಳಿದಿಲ್ಲ. ಜೀವವು ಹೇಗೆ ಉದ್ಭವಿಸಿತು ಎಂಬ ಪ್ರಶ್ನೆಗೆ ಜೀವಶಾಸ್ತ್ರಜ್ಞರು ಮತ್ತು ಜೀವ ರಾಸಾಯನಿಕ ಶಾಸ್ತ್ರಜ್ಞರು ಉತ್ತರವನ್ನು ಇನ್ನೂ ಕಂಡುಕೊಂಡಿಲ್ಲ. ವಿಶ್ವದ ಮೂಲದ ಕುರಿತು ತೃಪ್ತಿಕರವಾದ ಒಂದು ವಿವರಣೆಯನ್ನು ಜ್ಯೋತಿಷ್ಕರು ಇನ್ನೂ ವಿಕಾಸಿಸಿಲ್ಲ. ಕ್ಯಾನ್ಸರ್ ರೋಗದ ಕಾರಣ ಮತ್ತು ಪರಿಹಾರದ ಕುರಿತು ಯಾ ವಿಭಿನ್ನ ಸಾಂಕ್ರಾಮಿಕ ವಿಷ ರೋಗಗಳ ಪರಿಹಾರ ಹೇಗೆ ಮಾಡುವುದೆಂದು ವೈದ್ಯಕೀಯ ವಿಜ್ಞಾನಿಗಳಿಗೆ ಮತ್ತು ಶರೀರ ವಿಜ್ಞಾನಿಗಳಿಗೆ ಗೊತ್ತಿಲ್ಲ. . . . ಮಾನಸಿಕ ಅನಾರೋಗ್ಯದ ಎಲ್ಲಾ ಕಾರಣಗಳನ್ನು ಮನಶಾಸ್ತ್ರಜ್ಞರು ಅರಿತಿರುವುದಿಲ್ಲ.”
ಅದನ್ನು ಬೆನ್ನಟ್ಟುವ ಜನರಿಗಿಂತ ಅದು ಉತ್ತಮವಾಗಿರ ಸಾಧ್ಯವಿಲ್ಲ ಎಂಬ ಅರ್ಥದಲ್ಲಿ ಕೂಡ ವಿಜ್ಞಾನವು ಸೀಮಿತವಾಗಿದೆ. ಬೇರೆ ಮಾತುಗಳಲ್ಲಿ, ಒಬ್ಬ ವಿಜ್ಞಾನಿಯ ಜ್ಞಾನದ ಕೊರತೆಯು ಅವನ ಅಸಂಪೂರ್ಣತೆಯೊಂದಿಗೆ ಸಂಯುಕ್ತವಾಗಿದೆ. 5000 ಡೇಸ್ ಟು ಸೇವ್ ದ ಪ್ಲಾನೆಟ್ ಎಂಬ ಪುಸ್ತಕದ ಗ್ರಂಥಕರ್ತರು, “ಅನೇಕ ಸಲ . . . ವಿಶೇಷ ಉದ್ದೇಶದ ಸಂಸ್ಥೆಗಳು ಸಂಶೋಧನೆಯನ್ನು ಯುಕ್ತಿಯಿಂದ ನಿಭಾಯಿಸಿದ್ದಾರೆ, ವೆಚ್ಚ ಲಾಭದ ವಿಶೇಷ್ಲಣಗಳನ್ನು ವಿರೂಪಗೊಳಿಸಿದ್ದಾರೆ ಮತ್ತು ಹಾನಿಕಾರಕ ಉತ್ಪಾದನೆಗಳನ್ನು ಮಾರಲು ಯಾ ಪರಿಸರಕ್ಕೆ ನಷ್ಟಕರವಾದ ಚಟುವಟಿಕೆಗಳನ್ನು ಮುಂದುವರಿಸಲು ಮಾಹಿತಿಯನ್ನು ಅಡಗಿಸಿಟ್ಟಿದ್ದಾರೆ” ಎಂಬುದನ್ನು ಕಂಡುಹಿಡಿದರು.
ವಿಜ್ಞಾನಿಗಳಲ್ಲಿ ಹೆಚ್ಚಿನವರು ಪ್ರಾಮಾಣಿಕರಾಗಿದ್ದರೂ ಕೂಡ, ಅವರನ್ನು ಯಾ ಅವರ ಚಟುವಟಿಕೆಯನ್ನು ಒಂದು ಉಚ್ಚಸ್ಥಾನದಲ್ಲಿಡುವ ಕಾರಣ ಇದಾಗಿರುವುದಿಲ್ಲ. “ಬೇರೆ ಎಲ್ಲರಂತೆಯೇ ಅವರು ಇದ್ದಾರೆಂದು,” ಸ್ವತಃ ಒಬ್ಬ ವಿಜ್ಞಾನಿಯಾಗಿರುವ ಬ್ರಿಟನ್ನಲ್ಲಿ ಹುಟ್ಟಿದ ಎಡ್ವರ್ಡ್ ಬೊವನ್ ವಾದಿಸುತ್ತಾರೆ. “ಅವರೆಲ್ಲರಿಗೂ ಅವರ ಕುಂದುಗಳಿವೆ. ಕೆಲವರು ಸಮರ್ಪಿತರು, ಕೆಲವರು ನೀತಿ ನಿಷ್ಠೆಗಳಿಲ್ಲದವರು, ಕೆಲವರು ತುಂಬಾ ಬುದ್ಧಿವಂತರು, ಇತರರು ಮಾನಸಿಕವಾಗಿ ಮಂದವಾಗಿದವ್ದರು. ವಿಜ್ಞಾನದ ಕೆಲವೊಂದು ಮಹಾ ಹೆಸರುಗಳು—ಲೋಕಕ್ಕಾಗಿ ಮಹತ್ತರವಾದ ಒಳ್ಳೆಯದನ್ನು ಮಾಡಿದ ಪುರುಷರ ಕುರಿತು ನಾನು ಅರಿತಿದ್ದೇನೆ. ಮತ್ತು ಸೆರೆಮನೆಯಲ್ಲಿರುವ ಯಾವ ವಿಜ್ಞಾನಿಯ ಕುರಿತು ನಾನು ಅರಿತಿಲ್ಲವಾದರೂ, ಅದರಲ್ಲಿ ಇರಲು ಬಹಳ ಅರ್ಹರಾಗಿದ್ದ ಕೆಲವರನ್ನು ನಾನು ಅರಿತಿದ್ದೇನೆ.”
ಸ್ಪಷ್ಟವಾಗಿಗಿ, ಅದರ ಅನೇಕ ಇತಿಮಿತಿಗಳಿಂದಾಗಿ, ಆಧುನಿಕ ದಿನದ ವಿಜ್ಞಾನಕ್ಕೆ 21ನೆಯ ಶತಮಾನದ ಪಂಥಾಹ್ವಾನಗಳನ್ನು ಎದುರಿಸಲು ಆಗುತ್ತಿಲ್ಲ. ಪರಿಸರವನ್ನು ರಕ್ಷಿಸುವುದರಲ್ಲಿ ಅದು ವಿಶೇಷವಾಗಿ ತಪ್ಪಿಹೋಗಿದೆ, ಮತ್ತು ಭೂಮಿಯನ್ನು ಯುದ್ಧದಿಂದ ಬಿಡಿಸಲು ಸಹಾಯ ಮಾಡುವ ಬದಲು, ಸಾಮೂಹಿಕ ಹತ್ಯೆಮಾಡುವ ಆಯುಧಗಳನ್ನು ಸೃಷ್ಟಿಸುವುದರಲ್ಲಿ ನೆರವಾಗಿದೆ.
ಜರೂರಾದ ಕ್ರಿಯೆ ಬೇಕಾಗಿದೆ
ಬೇಗನೆ ಏನನ್ನಾದರೂ ಮಾಡಬೇಕೆಂದು ಎಲ್ಲರೂ ಒಪ್ಪುತ್ತಾರೆ. ಕಳೆದ ನವಂಬರದಲ್ಲಿ, 99 ನೋಬಲ್ ಪಾರಿತೋಷಕ ವಿಜೇತರನ್ನು ಸೇರಿಸಿ, 1,575 ವಿಜ್ಞಾನಿಗಳ ಒಂದು ಗುಂಪು, “ಮಾನವಕುಲಕ್ಕೆ ಲೋಕ ವಿಜ್ಞಾನಿಗಳ ಎಚ್ಚರಿಕೆ” ಎಂಬ ಶೀರ್ಷಿಕೆಯುಳ್ಳ ಹೇಳಿಕೆಯನ್ನು ಪ್ರಕಟಿಸಿತು. ಅದರಲ್ಲಿ ಅವರು ಬರೆದದ್ದು: “ನಾವು ಎದುರಿಸುವ ಬೆದರಿಕೆಗಳನ್ನು ತೊಲಗಿಸಲಿರುವ ಅವಕಾಶವು ನಷ್ಟವಾಗುವ ಮೊದಲು ಒಂದು ಯಾ ಕೆಲವು ದಶಕಗಳಿಗಿಂತ ಹೆಚ್ಚು ಸಮಯ ಉಳಿದಿರುವುದಿಲ್ಲ ಮತ್ತು ಮಾನವಕುಲಕ್ಕಾಗಿ ಪ್ರತೀಕ್ಷೆಗಳು ವಿಪರೀತವಾಗಿ ಕುಗ್ಗಿಸಲ್ಪಟ್ಟಿವೆ.” ಅವರು ಒತ್ತಿಹೇಳಿದ್ದು: “ಮಾನವ ಜೀವಿಗಳು ಮತ್ತು ಸ್ವಾಭಾವಿಕ ಲೋಕವು ಢಿಕ್ಕಿಹೊಡೆಯುವ ಮಾರ್ಗದಲ್ಲಿವೆ.”
ತದ್ರೀತಿಯ ಎಚ್ಚರಿಕೆಗಳು ಈ ಮುಂಚೆಯೂ ಧ್ವನಿಸಲ್ಪಟ್ಟಿವೆ. ವಾಸ್ತವದಲ್ಲಿ, 20ನೆಯ ಶತಮಾನದ ಬ್ರಿಟಿಷ್ ತತ್ವಜ್ಞಾನಿ ಮತ್ತು ಸ್ವತಃ ವಿಜ್ಞಾನದ ಒಬ್ಬ ಪ್ರವರ್ತಕನಾದ ಬರ್ಟ್ರೆಂಡ್ ರಸಲ್, 1952ರಲ್ಲಿ ಹೇಳಿದ್ದು: “ಮಾನವ ಜೀವವು ವಿಜ್ಞಾನದ ಹೊರತೂ ಜೀವಿಸಬೇಕಾದಲ್ಲಿ, ಪೂರ್ವದಲ್ಲಿ ಅವಶ್ಯಕವಾಗಿರದ ಭಾವನೆಗಳ ಶಿಕ್ಷಣವೊಂದನ್ನು ಮಾನವಕುಲವು ಕಲಿಯಬೇಕಾಗುವುದು. ನಿಯಮವು ಅನ್ಯಾಯವಾಗಿಯೂ, ಅಪ್ರಾಮಾಣಿಕವಾಗಿಯೂ ಇದೆ ಎಂದು ಅವರು ನೆನಸಿದರೂ ಕೂಡ, ನಿಯಮಕ್ಕೆ ಮನುಷ್ಯರು ಅಧೀನರಾಗಬೇಕಾಗುವುದು. . . . ಅದು ಸಂಭವಿಸದಿದ್ದಲ್ಲಿ ಮಾನವ ಕುಲವು ನಾಶವಾಗುವುದು, ಮತ್ತು ವಿಜ್ಞಾನದ ಫಲಿತಾಂಶವಾಗಿ ನಾಶವಾಗುವುದು. ಐವತ್ತು ವರ್ಷಗಳೊಳಗೆ ಸ್ಪಷ್ಟವಾಗಿದ ಒಂದು ಆಯ್ಕೆಯನ್ನು—ವಿವೇಚನೆ ಮತ್ತು ಮರಣದ ನಡುವೆ ಆಯ್ಕೆಯನ್ನು—ಮಾಡಬೇಕು. ‘ವಿವೇಚನೆ’ ಎನ್ನುವಾಗ, ಒಂದು ಅಂತಾರಾಷ್ಟ್ರೀಯ ಅಧಿಕಾರದ ಮೂಲಕ ಘೋಷಿಸಲಾದಂತೆ ನಿಯಮಕ್ಕೆ ಅಧೀನವಾಗಲು ಸ್ವಇಷ್ವವನ್ನು ನಾನು ಅರ್ಥೈಸುತ್ತೇನೆ. ಮಾನವಕುಲವು ಮರಣವನ್ನು ಆರಿಸಬಹುದೆಂದು ನಾನು ಹೆದರುತ್ತೇನೆ. ನಾನು ತಪ್ಪು ಅಭಿಪ್ರಾಯವನ್ನು ಹೊಂದಿದ್ದೇನೆಂದು ನಾನು ನಿರೀಕ್ಷಿಸುತ್ತೇನೆ.”
ಸತ್ಯವೇನಂದರೆ, ನೀತಿಯ ಮಟ್ಟಗಳಿಗನುಸಾರ ಜೀವಿಸಲು ಇಷ್ಟಪಡುವ ಜನರು ಈ ದಿನಗಳಲ್ಲಿ ಕೊಂಚವಾಗಿದ್ದಾರೆ. ನಾಗರಿಕ ಹಕ್ಕುಗಳ ಮಾಜಿ ನಾಯಕನಾದ ಮಾರ್ಟಿನ್ ಲೂಥರ್ ಕಿಂಗ್ ಸರಿಯಾಗಿಯೇ ಗಮನಿಸಿದ್ದು: “ನಮ್ಮ ವೈಜ್ಞಾನಿಕ ಶಕ್ತಿಯು ನಮ್ಮ ಆತ್ಮಿಕ ಶಕ್ತಿಯನ್ನು ಮೀರಿದೆ. ನಾವು ಕ್ಷಿಪಣಿಗಳನ್ನು ಮಾರ್ಗದರ್ಶಿಸಿ, ಮನುಷ್ಯರನ್ನು ತಪ್ಪುದಾರಿಗೆ ನಡಿಸಿದ್ದೇವೆ.” ಆದರೂ, “ಒಂದು ಅಂತಾರಾಷ್ಟ್ರೀಯ ಅಧಿಕಾರದ ಮೂಲಕ ಘೋಷಿಸಲಾದಂತೆ ನಿಯಮಕ್ಕೆ ಮಾನವಕುಲವು ಅಧೀನವಾಗಬೇಕಾಗುವುದು” ಎಂದು ಅವರು ಹೇಳಿದಾಗ, ರಸಲ್ರು ಅರಿಯದೆ ಲೋಕದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿದರು.
ಸಮಸ್ಯೆಯನ್ನು ಯಾರು ಬಗೆಹರಿಸಬಲ್ಲರು?
ಒಂದು ಅಂತಾರಾಷ್ಟ್ರೀಯ ಅಧಿಕಾರದಿಂದ ಘೋಷಿಸಲಾದ ನಿಯಮದ ಕುರಿತು ಅವರು ಮಾತಾಡುವಾಗ, ಬರ್ಟ್ರೆಂಡ್ ರಸಲ್ರು ಒಂದು ದೈವಿಕ ಅಧಿಕಾರವನ್ನು ಸೂಚಿಸತ್ತಿರಲಿಲ್ಲ ಎಂಬುದು ನಿಜ. ಆದರೂ, ಅಂಥ ಒಂದು ಅಧಿಕಾರದ ನಿಯಮಗಳಿಗೆ ವಿಧೇಯತೆಯು ಖಂಡಿತವಾಗಿ ಅಗತ್ಯವಾಗಿರುವ ಸಂಗತಿಯಾಗಿದೆ. ಮಾನವ ನಿಯಮಗಳು ಮತ್ತು ಮಾನವ ಅಧಿಕಾರಿಗಳು ನಿಶ್ಚಯವಾಗಿಯೂ ಪರಿಹಾರವಾಗಿಲ್ಲ. ಅವರು ಎಂದೂ ಲೋಕವನ್ನು ಬದಲಾಯಿಸಿ, ಹೀಗೆ ದುರಂತವನ್ನು ತಡೆಯಶಕ್ತರಲ್ಲ. ಮಾನವರಿಗೆ ದೈವಿಕ ಆಳಿಕೆಯು ಅಗತ್ಯವೆಂಬುದನ್ನು ಇತಿಹಾಸದ ವಿಷಾದಕರ ದಾಖಲೆಯು ರುಜುಪಡಿಸುತ್ತದೆ.c
ನಿಶ್ಚಯವಾಗಿಯೂ, 21ನೆಯ ಶತಮಾನದ ಪಂಥಾಹ್ವಾನಗಳನ್ನು ಎದುರಿಸಲಿಕ್ಕೆ, ಯೆಹೋವನೆಂಬ ಹೆಸರುಳ್ಳ ಸರ್ವಶಕ್ತ ದೇವರು ಮಾತ್ರ, ಶಕ್ತಿ ಮತ್ತು ಸಾಮರ್ಥ್ಯದೊಂದಿಗೆ ಒಂದು ಅಂತಾರಾಷ್ಟ್ರೀಯ ಅಧಿಕಾರವನ್ನು ಒದಗಿಸ ಶಕ್ತನು. (ಕೀರ್ತನೆ 83:18) ಜೀವವನ್ನು ಅವರು ಪಡೆಯಬೇಕಾದರೆ ಎಲ್ಲರು ಅಧೀನರಾಗಬೇಕಾದ ಅಧಿಕಾರವು, ಸೃಷ್ಟಿಕರ್ತನಾದ ಯೆಹೋವ ದೇವರಿಂದ ಸ್ಥಾಪಿಸಲಾದ ಸ್ವರ್ಗೀಯ ಲೋಕ ಸರಕಾರವಾಗಿರುವ ದೇವರ ರಾಜ್ಯವೇ ಆಗಿದೆ.
ಈ ಸರಕಾರದ ಕುರಿತು ಬೈಬಲ್ ಬಹಳ ಕಾಲದ ಹಿಂದೆ ಮುಂತಿಳಿಸಿತ್ತು: “ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಸರಕಾರವು ಅವನ ಬಾಹುವಿನ ಮೇಲಿರುವದು; ಅವನ ಹೆಸರು . . . ಸಮಾಧಾನದ ಪ್ರಭು ಎಂಬದಾಗಿ ಕರೆಯಲ್ಪಡುವುದು. ಅವನ ಸರಕಾರದ ಅಭಿವೃದ್ಧಿ ಮತ್ತು ಶಾಂತಿಗೆ ಅಂತ್ಯವಿರದು.” (ಯೆಶಾಯ 9:6, 7, ಕಿಂಗ್ ಜೇಮ್ಸ್ ವರ್ಷನ್) ಕನ್ನಿಕೆಯಾದ ಮರಿಯಳ ಮೂಲಕ ಅದ್ಭುತಕರವಾಗಿ ಗರ್ಭತಾಳಿ, ಯೂದಾಯದ ಬೇತ್ಲೆಹೇಮ್ನಲ್ಲಿ, ಈ ಮುಂತಿಳಿಸಲಾದ ಮಗು ಯೇಸು ಕ್ರಿಸ್ತನು ಹುಟ್ಟಿದನು.—ಲೂಕ 1:30-33.
“ಆದದರಿಂದ ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು— . . . ‘ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ,’” ಎಂದವನು ಹೇಳಿದಾಗ, ದೇವರ ಸರಕಾರದ ಕುರಿತು ಪ್ರಾರ್ಥಿಸುವಂತೆ ಯೇಸು ಭೂಮಿಯಲ್ಲಿದ್ದಾಗ ತನ್ನ ಹಿಂಬಾಲಕರಿಗೆ ಕಲಿಸಿದನು. (ಮತ್ತಾಯ 6:9, 10) ಯೆಹೋವ ದೇವರ ಶಕ್ತಿಶಾಲಿ ಪವಿತ್ರಾತ್ಮವು ಯಾ ಕಾರ್ಯಕಾರಿ ಶಕ್ತಿಯು ಮಾತ್ರ, ಆತನ ಸರಕಾರದ ನೀತಿಯುಳ್ಳ ನಿಯಮದ ಹೊಂದಿಕೆಯಲ್ಲಿ ತಮ್ಮ ಜೀವಿತಗಳಲ್ಲಿ ಬೇಕಾದ ಬದಲಾವಣೆಗಳನ್ನು ಮಾಡಲು ಮನಸ್ಸಿರುವ ಜನರಿಗೆ ಸಹಾಯ ಮಾಡಬಲ್ಲದು. ವಿಜ್ಞಾನವು ಅದನ್ನು ಮಾಡಸಾಧ್ಯವಿಲ್ಲ. ಸಾವಿರಾರು ವರ್ಷಗಳ ಅಸಾಂಗತ್ಯ ಮತ್ತು ಅಸ್ತವ್ಯಸ್ತತೆಯು ಅದಕ್ಕೆ ಮಾಡಲುಸಾಧ್ಯವಿಲ್ಲ ಎಂಬುದರ ರುಜುವಾತಾಗಿದೆ.
ನಿಷ್ಕೃಷ್ಟವಾದ ವೈಜ್ಞಾನಿಕ ಜ್ಞಾನದಲ್ಲಿ ಅಸೀಮಿತವಾಗಿರುವ ಯೆಹೋವ ದೇವರು, ಆತನು ಮೊದಲ ಮಾನವ ಜೋಡಿಯನ್ನು ಸೃಷ್ಟಿಸಿದಾಗ, ಏದೆನ್ ತೋಟದಲ್ಲಿ ಪರಿಸ್ಥಿತಿಗಳು ಇದ್ದಂತೆಯೇ ಪರದೈಸ ಪರಿಸ್ಥಿತಿಗಳನ್ನು ಭೂಮಿಯು ಅನುಭವಿಸುವಂತೆ ನೋಡಲಿರುವನು. ಆ ಸಮಯದಲ್ಲಿ ಆತನು ಅವರನ್ನು ಹೀಗೆ ಉಪದೇಶಿಸಿದನು: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ.” (ಆದಿಕಾಂಡ 1:28) ಅವರು ವಿಧೇಯರಾಗಲು ಮತ್ತು ಆ ನೇಮಕವನ್ನು ನಿರ್ವಹಿಸಲು ತಪ್ಪಿಹೋದರೂ, ಈ ಭೂಮಿಯು ಪರದೈಸವಾಗಿರಲು ಇದ್ದ ಆತನ ಮೂಲ ಉದ್ದೇಶವು ನೆರವೇರುವಂತೆ ಯೆಹೋವ ದೇವರು ನೋಡಲಿರುವನು. “ನಾನು ನುಡಿದಿದ್ದೇನೆ, ಈಡೇರಿಸುವೆನು,” ಎಂದು ಆತನು ಹೇಳುತ್ತಾನೆ. (ಯೆಶಾಯ 46:11) ಆದರೆ ಭೂಮಿಗಾಗಿರುವ ದೇವರ ಮೂಲ ಉದ್ದೇಶವು ಯಾವಾಗ ನೆರವೇರಲಿದೆ?
ಎಲ್ಲಾ ಮಾನವ ಸರಕಾರಗಳನ್ನು ದೇವರ ರಾಜ್ಯವು ಸ್ಥಾನಪಲ್ಲಟ ಮಾಡುವ ಸ್ಪಲ್ಪವೇ ಮುಂಚೆ, “ಕಡೇ ದಿವಸಗಳಲ್ಲಿ” ಭೂಮಿಯ ಮೇಲೆ ಅಸ್ತಿತ್ವದಲ್ಲಿರಬಹುದಾದ ಪರಿಸ್ಥಿತಿಗಳನ್ನು ಯೇಸು ಕ್ರಿಸ್ತನು ಮತ್ತು ಅವನ ಅಪೊಸ್ತಲರು ವರ್ಣಿಸಿದರು. (2 ತಿಮೊಥೆಯ 3:1-5; ಮತ್ತಾಯ 24:3-14, 37-39; 2 ಪೇತ್ರ 3:3, 4) ಇಲ್ಲಿ ಉದ್ಧರಿಸಲಾದ ಬೈಬಲ್ ಪ್ರವಾದನೆಗಳನ್ನು ಒಬ್ಬನು ಓದಿ ಅವುಗಳನ್ನು ಲೋಕದ ಘಟನೆಗಳೊಂದಿಗೆ ಹೋಲಿಸುವಾಗ, ಬೈಬಲಿನಲ್ಲಿ ದಾನಿಯೇಲ 2:44ರಲ್ಲಿ ವರ್ಣಿಸಲಾದ ಕ್ರಿಯೆಯನ್ನು ದೇವರ ರಾಜ್ಯವು ತೆಗೆದುಕೊಳ್ಳುವ ಸಮಯದಲ್ಲಿ ನಾವು ಜೀವಿಸುತ್ತಾ ಇದ್ದೇವೆಂಬುದು ಸ್ಪಷ್ಟವಾಗಿಗುತ್ತದೆ. “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವುದು.”
ಹತ್ತಿರದ ಭವಿಷ್ಯತ್ತಿನಲ್ಲಿ ಜೀವನ
ಹತ್ತಿರದ ಭವಿಷ್ಯತ್ತಿಗಾಗಿ ಅದು ಏನನ್ನು ಅರ್ಥೈಸುವುದೆಂದು ಕೇವಲ ಕಲ್ಪಿಸಿಕೊಳ್ಳಿರಿ! ಬರುವ ಶತಮಾನದಲ್ಲಿ, ಇಲ್ಲವೆ ಅದಕ್ಕಿಂತ ಮುಂಚೆಯೂ ಕೂಡ, ಮಾನವವರ್ಗಕ್ಕಾಗಿ ಎಂಥ ಅದ್ಭುತಕರ ವಿಷಯಗಳು ಅಡಕವಾಗಿವೆ! ಸಾವಿರಾರು ವರ್ಷಗಳ ಅಪರಿಪೂರ್ಣ ಮಾನವ ಆಳಿಕೆ, ಕಪಟವಾದ ಧರ್ಮ, ಅತ್ಯಾಶೆಯ ವಾಣಿಜ್ಯ, ಮತ್ತು ಈ ಲೋಕದ ವಿಜ್ಞಾನದ ಕೆಟ್ಟ ಪ್ರಭಾವಗಳು ದೈವಿಕ ಆಳಿಕೆಯ ಮೂಲಕ ಸ್ಥಾನಪಲ್ಲಟವಾಗಿ, ಮಾನವರನ್ನು ಅವರ ಅತ್ಯಂತ ಮಹಾ ನಿರೀಕ್ಷಣೆಗಳನ್ನು ಮೀರಿ ಆಶೀರ್ವದಿಸುವುದು.
ದೇವರ ನೀತಿಯ ಹೊಸ ಲೋಕದಲ್ಲಿ ನಿಶ್ಚಯವಾಗಿ ಸಂಭವಿಸಲಿಕ್ಕಿರುವ ಘಟನೆಗಳನ್ನು ಬೈಬಲ್ ಹೀಗೆ ವರ್ಣಿಸುತ್ತದೆ: “ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:3, 4.
ಆದುದರಿಂದ, ಲೋಕದ ಶಕ್ತಿಶಾಲಿಯಾದ ಅದೃಶ್ಯ ಅರಸ, ಪಿಶಾಚನಾದ ಸೈತಾನನ ನಿಯಂತ್ರಣದ ಕೆಳಗೆ ಇರುವ ಈ ಲೋಕ ವ್ಯವಸ್ಥೆಯ ನಾಶನದಲ್ಲಿ ಬೇಗನೆ ಕೊನೆಗೊಳ್ಳುವ ಇಳಿಯೆಣಿಕೆಯ ಕುರಿತು ಎಚ್ಚರವಾಗಿರುವುದು ನಿಮಗೆ ಬಹಳ ಪ್ರಾಮುಖ್ಯವಾದ ವಿಷಯವಾಗಿದೆ. (ಯೋಹಾನ 12:31; 2 ಕೊರಿಂಥ 4:3, 4) ದೇವರ ಚಿತ್ತವನ್ನು ನೀವು ಕಲಿತು ಅದನ್ನು ಮಾಡುವುದು ಪ್ರಾಮುಖ್ಯವಾಗಿದೆ, ಯಾಕಂದರೆ ಬೈಬಲ್ ಹೀಗೆ ಭರವಸೆ ನೀಡುತ್ತದೆ: “ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”—1 ಯೋಹಾನ 2:17.
ಆದುದರಿಂದ, ಸಮಯವು ಅನುಮತಿಸುವ ತನಕ, ಪಾರಾಗಲಿಕ್ಕೆ ಯೆಹೋವನ ಒದಗಿಸುವಿಕೆಗಳ ಲಾಭವನ್ನು ನೀವು ವಿವೇಕಪೂರ್ಣವಾಗಿ ತೆಗೆದುಕೊಳ್ಳುವಂತಾಗಲಿ. ಆಗ ನೀವು ಭವಿಷ್ಯತ್ತಿನಲ್ಲಿ, ಹೌದು, ಮುಂಬರುವ 21ನೆಯ ಶತಮಾನದಲ್ಲಿ—ಅಷ್ಟೇ ಅಲ್ಲದೆ 22ನೆಯ, 23ನೆಯ, ಮತ್ತು ಎಣಿಸಲಾರದಂತಹ ಅನಂತರದ ಶತಮಾನಗಳಲ್ಲಿ ಜೀವನವನ್ನು ಆನಂದಿಸಲು ಸುಯೋಗವುಳ್ಳವರಾಗುವಿರಿ. (g93 6/22)
[ಅಧ್ಯಯನ ಪ್ರಶ್ನೆಗಳು]
a ತಾಂತ್ರಿಕವಾಗಿ ಮಾತಾಡುವುದಾದರೆ, 21ನೆಯ ಶತಮಾನವು ಜನವರಿ 1, 2001ರಂದು ಪ್ರಾರಂಭವಾಗುವುದು. ಜನಪ್ರಿಯ ಉಪಯೋಗವಾದರೊ, ಒಂದನೆಯ ಶತಮಾನವನ್ನು ವರ್ಷ ಒಂದರಿಂದ 99ರ ತನಕ (ಸೊನ್ನೆ ವರ್ಷ ಇರಲಿಲ್ಲ); 2ನೆಯ ಶತಮಾನ, ವರ್ಷ 100ರಿಂದ 199ರ ತನಕ; ಮತ್ತು ಅದರಂತೆಯೇ, 21ನೆಯ ಶತಮಾನ, ವರ್ಷ 2000ದಿಂದ 2099ರ ತನಕ ಇರುವಂತೆ ವೀಕ್ಷಿಸುತ್ತದೆ.
b ವಿಜ್ಞಾನದ ಮೇಲೆ ಎಚ್ಚರ! ಪತ್ರಿಕೆಯ ಆರು ಭಾಗದ ಶ್ರೇಣಿಯಲ್ಲಿ ಇದು ಕೊನೆಯದಾಗಿದೆ.
c “ತಕ್ಕಡಿಗಳಲ್ಲಿ ತೂಗಲ್ಪಟ್ಟ ಮಾನವ ಆಳಿಕೆ” ಎಂಬ ಶೀರ್ಷಿಕೆಯುಳ್ಳ ಹತ್ತು ಭಾಗದ ಎಚ್ಚರ!ದ (ಫೆಬ್ರವರಿ 8ರಿಂದ ನವಂಬರ 8, 1992) ಶ್ರೇಣಿಯಲ್ಲಿ, ಮಾನವ ಸರಕಾರಗಳ ನಿಷ್ಫಲತೆಯನ್ನು ಎತ್ತಿತೋರಿಸಲಾಗಿತ್ತು.
[ಪುಟ 27 ರಲ್ಲಿರುವ ಚೌಕ]
ಕೆಟ್ಟ ಸಮಾಚಾರದ ಮಧ್ಯದಲ್ಲಿ ಸುಸಮಾಚಾರ
ವೈಜ್ಞಾನಿಕ ಪ್ರಗತಿಯ ಹೊರತೂ, ಹೊಟ್ಟೆಗಿಲ್ಲದ ಬಹುಸಂಖ್ಯಾತ ಮಕ್ಕಳು ಮತ್ತು ಕ್ಷಯಿಸಲ್ಪಟ್ಟ ವಯಸ್ಕರು ಇನ್ನೂ ಇದ್ದಾರೆ. ಆದರೆ ಬೇಗನೆ ದೇವರ ಮೆಸ್ಸೀಯನ ರಾಜ್ಯದ ಕೆಳಗೆ, “ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಿಯಾಗಿರುವದು.”—ಕೀರ್ತನೆ 72:16.
ವೈಜ್ಞಾನಿಕ ಪ್ರಗತಿಯ ಹೊರತೂ, ಪೀಡನೆ ಮತ್ತು ಹಿಂಸೆ ಇನ್ನೂ ಲಕ್ಷಾಂತರ ಜನರ ಪರಿಸ್ಥಿತಿಯಾಗಿದೆ. ಆದರೆ ಬೇಗನೆ ದೇವರ ಮೆಸ್ಸೀಯನ ರಾಜ್ಯದ ರಾಜನು “ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. . . . ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು.”—ಕೀರ್ತನೆ 72:12-14.
ವೈಜ್ಞಾನಿಕ ಪ್ರಗತಿಯ ಹೊರತೂ, ಬೀದಿ ಜನರ—ಮನೆ ಮತ್ತು ಸಾಕಷ್ಟು ಆಹಾರದ ವಿಯೋಗಹೊಂದಿದ ಜನರ ಸಂಖ್ಯೆಯು ಲೋಕವ್ಯಾಪಕವಾಗಿ ಬೆಳೆಯುತ್ತಾ ಮುಂದುವರಿದಿದೆ. ಆದರೆ ಬೇಗನೆ ದೇವರ ಮೆಸ್ಸೀಯನ ರಾಜ್ಯದ ಕೆಳಗೆ, ಜನರು “ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು . . . ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು.”—ಯೆಶಾಯ 65:21, 22.
ವೈದ್ಯಕೀಯ ಪ್ರಗತಿಯ ಹೊರತೂ, ತಡೆಯಬಹುದಾದ ರೋಗಗಳು ಲಕ್ಷಾಂತರ ಜನರನ್ನು ಕೊಲ್ಲುವುದನ್ನು ಮುಂದುವರಿಸಿವೆ. ಆದರೆ ಬೇಗನೆ ದೇವರ ಮೆಸ್ಸೀಯನ ರಾಜ್ಯದ ಕೆಳಗೆ, “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.”—ಯೆಶಾಯ 33:24.
[ಪುಟ 28 ರಲ್ಲಿರುವ ಚಿತ್ರ]
ಭೂಮಿಯ ಎಲ್ಲೆಡೆಯೂ ಜೀವನವು ಒಂದು ಹರ್ಷವಾಗಲಿರುವುದು
[ಕೃಪೆ]
Courtesy Hartebeespoortdam Snake and Animal Park