ಭಾಗ 5
ವಿಜ್ಞಾನ—ಸತ್ಯಕ್ಕಾಗಿ ಮಾನವ ಕುಲದ ಮುಂದುವರಿಯುತ್ತಿರುವ ತಲಾಷು
ಕಾರ್ಯಫಲದ 20ನೆಯ ಶತಮಾನದ “ಮಂತ್ರವಿದ್ಯೆ”
ಯಾವುದು 19ನೇ ಶತಮಾನದಲ್ಲಿ ಅಸಾಧ್ಯ “ಮಂತ್ರ”ವೆಂದು ತೋಚಿತೊ ಅದು 20ರಲ್ಲಿ ನಿಜತ್ವವಾಗಿರುತ್ತದೆ. ಒಂದೇ ಸಂತತಿಯೊಳಗೆ, ಜನರು ತಮ್ಮ ಸ್ವಂತ ಮಾಡೆಲ್ ಟೀ ಫೊರ್ಡ್ನ್ನು ಚಲಾಯಿಸುವುದರಿಂದ ಮಾನವರು ಚಂದ್ರನ ಮೇಲೆ ನಡೆದಾಡುವುದನ್ನು ವರ್ಣ ಟೀವೀಯಲ್ಲಿ ವೀಕ್ಷಿಸುವ ರೋಮಾಂಚನೆಯ ವರೆಗೆ ತೆರಳಿದರು. ಅಸಾಧಾರಣವೆಂದು ವೀಕ್ಷಿಸುವ ಬದಲಿಗೆ, ವೈಜ್ಞಾನಿಕವಾಗಿ ಉತ್ಪಾದಿಸಲಾದ “ಅದ್ಭುತಗಳು” ಇಂದು ಸಾಮಾನ್ಯವಾಗಿರುವವೆಂದು ಪರಿಗಣಿಸಲ್ಪಡುತ್ತವೆ.
“ಇಪ್ಪತ್ತನೇ ಶತಮಾನದ ಆರಂಭದ ವೈಜ್ಞಾನಿಕ ಸಾಧನೆಗಳನ್ನು ವಿವರಪಟ್ಟಿ ಮಾಡಲೂ ಅತೀ ಬೃಹದ್ಗಾತ್ರದವುಗಳಾಗಿವೆ,” ಎಂದು ದ ನ್ಯೂ ಎನ್ಸೈಕ್ಲೊಪೀಡಿಯಾ ಬ್ರಿಟ್ಯಾನಿಕ ಗಮನಿಸುತ್ತದೆ. “ಮುಂದುವರಿಯುವಿಕೆಯು ಸಾಮಾನ್ಯ ನಮೂನೆಗೆ” ಅದು ಸೂಚಿಸಿತ್ತಾದರೂ ಹೇಳುವುದೇನಂದರೆ, “ಪ್ರತಿಯೊಂದು ದೊಡ್ಡ ಕ್ಷೇತ್ರಗಳಲ್ಲಿ, 19ನೇ ಶತಮಾನದ ಯಶ್ವಸೀ ವಿವರಣಾತ್ಮಕ ಕೆಲಸದ ಮೇಲೆ ಪ್ರಗತಿಯು ಆಧರಿಸಿತ್ತು.” ವಿಜ್ಞಾನವು ಸತ್ಯಕ್ಕಾಗಿ ಮುಂದುವರಿಯುತ್ತಿರುವ ತಲಾಷಾಗಿರುತ್ತದೆಂಬ ನಿಜತ್ವವನ್ನು ಇದು ಒತ್ತಿ ಹೇಳುತ್ತದೆ.
ಗುಂಪುಗಳ ಮೂಲಕ ಸ್ಥಾನಪಲ್ಲಟಗೊಂಡಿತು
ಉಪಾಯಗಳನ್ನು ಮತ್ತು ಮಾಹಿತಿಯನ್ನು ವಿನಿಮಯ ಮಾಡಲು ಸಂಧಿಸಿದ ವಿಜ್ಞಾನಿಗಳ ಗುಂಪುಗಳು, ವೈಜ್ಞಾನಿಕ ಸಂಸ್ಥೆಗಳು, 17ನೇ ಶತಮಾನದ ಆರಂಭದಷ್ಟರ ಹಿಂದೆ ಯೂರೋಪಿನಲ್ಲಿ ರೂಪಿತಗೊಂಡವು. ಇತ್ತೀಚಿನ ಕಂಡುಹಿಡಿಯುವಿಕೆಗಳನ್ನು ತಿಳಿಯಪಡಿಸಲಾಗುವಂತೆ, ಈ ಸಂಸ್ಥೆಗಳು ತಮ್ಮದೇ ಸ್ವಂತ ಪತ್ರಿಕೆಗಳನ್ನು ಕೂಡ ಪ್ರಕಟಿಸಲಾರಂಭಿಸಿದವು. ಇದು ಮುಂದಿನ ವೈಜ್ಞಾನಿಕ ಪ್ರಗತಿಯು ಮಾಡಲ್ಪಡುವುದರ ಮೇಲೆ ಮೂಲವನ್ನು ಬಲಪಡಿಸುವಂತೆ ಸಹಾಯ ಮಾಡಿದ ಮಾಹಿತಿಯ ಒಂದು ವಿಸ್ತಾರವಾದ ವಿನಿಮಯಕ್ಕೆ ನಡಿಸಿತು.
ಹತ್ತೊಂಬತ್ತನೆಯ ಶತಮಾನದಷ್ಟರೊಳಗೆ, ವಿಶ್ವವಿದ್ಯಾನಿಲಯಗಳು ವೈಜ್ಞಾನಿಕ ಸಂಶೋಧನೆಯಲ್ಲಿ ಆಳವಾಗಿ ಒಳಗೂಡಿದ್ದವು, ಮತ್ತು ಅನುಸರಿಸಿ ಬಂದ ವರುಷಗಳಲ್ಲಿ ಅವುಗಳ ಪ್ರಯೋಗ ಶಾಲೆಗಳು ಪ್ರಾಮುಖ್ಯ ಕಂಡುಹಿಡಿಯುವಿಕೆಗಳನ್ನು ಮಾಡಿದವು.a ಇಪ್ಪತ್ತನೆಯ ಶತಮಾನದ ಆರಂಭದೊಳಗೆ, ಸಮಯಾನಂತರ ಹೊಸ ಔಷಧಗಳನ್ನು, ಸಂಯೋಗ ತಯಾರಿಕೆಯ ವಸ್ತುಗಳನ್ನು (ಪ್ಲ್ಯಾಸ್ಟಿಕ್ಗಳನ್ನೂ ಸೇರಿಸಿ), ಮತ್ತು ಇತರ ಉತ್ಪನ್ನಗಳನ್ನು ಬೆಳೆಸಿದ, ವ್ಯಾಪಾರಿ ಸಂಸ್ಥೆಗಳು ಕೂಡ, ಸಂಶೋಧನಾ ಪ್ರಯೋಗ ಶಾಲೆಗಳನ್ನು ಸ್ಥಾಪಿಸಲಾರಂಭಿಸಿದವು. ಇವುಗಳಿಂದಾಗಿ ಸಾರ್ವಜನಿಕರು ಪ್ರಯೋಜನ ಪಡೆದಿರುತ್ತಾರೆ, ಮತ್ತು ಸಂಶೋಧನೆಯನ್ನು ನಡೆಸುವ ಸಂಸ್ಥೆಗಳು ಲಾಭಗಳಲ್ಲಿ ಲಕ್ಷಾಂತರ ಡಾಲರುಗಳನ್ನು ಗಳಿಸಿವೆ.
ಈ ಪ್ರಯೋಗಶಾಲೆಗಳ ಮತ್ತು ಸಂಶೋಧನಾ ಗುಂಪುಗಳ ಸ್ಥಾಪನೆಯು ವೈಯಕ್ತಿಕ ಪ್ರಯತ್ನದೊಂದಿಗೆ ವ್ಯತಿರಿಕತ್ತೆಯಲ್ಲಿ ಸಂಘಟಿತ ಸಂಶೋಧನೆಯ ಕಡೆಗೆ ಒಂದು ಪ್ರವೃತ್ತಿಯನ್ನು ಸೂಚಿಸಿತು. ಇದೊಂದು ಉತ್ತಮ ಗೋಚರವಾಗಿರಬಹುದೋ ಎಂದು ಕೆಲವು ವಿಜ್ಞಾನಿಗಳು ಕೌತುಕಗೊಂಡರು. ಇಸವಿ 1939ರಲ್ಲಿ, ಐರಿಷ್ ಭೌತ ವಿಜ್ಞಾನಿ ಮತ್ತು ಕ್ಷ-ಕಿರಣ ಸ್ಫಟಿಕ ಶಸ್ತ್ರಜ್ಞನಾದ ಜಾನ್ ಡಿ. ಬರ್ನಲ್, ಪ್ರಶ್ನೆಯನ್ನೊಡ್ಡಿದ್ದು: “ವಿಜ್ಞಾನವು, ಪ್ರತಿಯೊಬ್ಬನು ತನ್ನ ಸ್ವಂತ ತಿಳುವಳಿಕೆಯನ್ನನುಸರಿಸುವ, ದಾನವುಳ್ಳ ವ್ಯಕ್ತಿಗಳ ಕೆಲಸದ ಗೊತ್ತುಗುರಿಯಿಲ್ಲದ ಸುಸಂಘಟನೆಯ ಮೂಲಕ ಮುಂದುವರಿಯಬೇಕೋ, ಯಾ ಅನ್ಯೋನ್ಯತೆಯಿಂದ ಒಬ್ಬರಿಗೊಬ್ಬರು ಸಹಾಯ ಮಾಡುವ ಮತ್ತು ಕೆಲವು ಮೊದಲೇ ಭಾವಿಸಿರುವ, ಆದರೂ ಮಣಿಯುವ ಯೋಜನೆಗೆ ತಕ್ಕಂತೆ ಅವರ ಕೆಲಸವನ್ನು ಅನುಕಲನಗೊಳಿಸುವ ಗುಂಪುಗಳ ಯಾ ಕೆಲಸಗಾರರ ತಂಡಗಳ ಮೂಲಕ, ಮುಂದುವರಿಯಬೇಕೋ?”
ಸಂಶೋಧನೆಯ ಸಂಕೀರ್ಣತೆ ಮತ್ತು ಅಧಿಕ ಬೆಲೆಯ ಕಾರಣ, ಸಮಸ್ಯೆಯು ಕೇವಲ ಕಾರ್ಯಗಳನ್ನು ಹೇಗೆ ಯೋಗ್ಯವಾಗಿ ಸಂಘಟಿಸುವುದೆಂದಾಗಿತ್ತೆಂದು ಹೇಳುತ್ತಾ, ಬರ್ನಲನು ಗುಂಪುಗಳಾಗಿ ಕೆಲಸ ಮಾಡುವುದರ ಪರವಾಗಿ ವಾದಿಸಿದನು. ಅವನು ಮುಂತಿಳಿಸಿದ್ದು: “ತಂಡದೋಪಾದಿಯ ಕೆಲಸವು ವೈಜ್ಞಾನಿಕ ಸಂಶೋಧನೆಯ ಪದ್ಧತಿಯಾಗುವಲ್ಲಿ ಹೆಚ್ಚೆಚ್ಚಾಗಿ ಓಲುವುದು.” ಈಗ, ಅರ್ಧ ಶತಮಾನದ ಅನಂತರ, ಬರ್ನಲನು ಹೇಳಿದ್ದು ಸರಿಯಾಗಿತ್ತೆಂದು ವ್ಯಕ್ತವಾಗುತ್ತದೆ. ಇಪ್ಪತ್ತನೆಯ ಶತಮಾನದ ವೈಜ್ಞಾನಿಕ “ಮಂತ್ರ”ವನ್ನು ಸಾಧಿಸುವುದರ ಕಾರ್ಯಗತಿಯನ್ನು ರಭಸಗೊಳಿಸುತ್ತಾ, ಆ ಪ್ರವೃತ್ತಿಯು ಮುಂದುವರಿದಿದೆ.
“ದೇವರು ಆಗುವಂತೆ ಮಾಡಿದ ವಿಷಯ!”
ಮೇ 24, 1844ರಂದು, ಮಾರ್ಸ್ ಸಂಕೇತದ ನಿರ್ಮಾಪಕರಾದ, ಸ್ಯಾಮೆಲ್ ಮಾರ್ಸ್ರಿಂದ, 50 ಕಿಲೊಮೀಟರ್ಗಳಿಗಿಂತಲೂ ಹೆಚ್ಚಿನ ದೂರದಿಂದ, ಈ ನಾಲ್ಕು ಶಬ್ದಗಳ ಉದ್ಗಾರವನ್ನು ಯಶಸ್ವಿಯಾಗಿ ದೂರಲೇಖನ ಮಾಡಲಾಯಿತು. ತರುವಾಯದ 20ನೇ ಶತಮಾನದ ದೂರಸಂಪರ್ಕಗಳ “ಮಂತ್ರ” ಹತ್ತೊಂಬತ್ತನೇ ಶತಮಾನದ ಬೇರುಗಳು ಈಗ ನೆಡಲ್ಪಟ್ಟವು.
ಸುಮಾರು 30 ವರುಷಗಳ ಅನಂತರ, 1876ರಲ್ಲಿ ಆ್ಯಲೆಗ್ಜಾಂಡರ್ ಗ್ರೆಹ್ಯಾಮ್ ಬೆಲ್, ಅವನ ಸಹಾಯಕ ತಾಮಸ್ ವಾಟ್ಸನ್ರೊಂದಿಗೆ ಒಂದು ಪ್ರೇಷಕವನ್ನು ಪರೀಕ್ಷಿಸಲು ತಯಾರಿಸುತ್ತಿದ್ದನು, ಆಗ ಬೆಲ್ ಸ್ವಲ್ಪ ಆಮ್ಲವನ್ನು ಚೆಲ್ಲಿದನು. “ಶ್ರೀಮಾನ್ ವಾಟ್ಸನ್, ಇಲ್ಲಿ ಬನ್ನಿ. ನಿಮ್ಮ ಅಗತ್ಯ ನನಗಿದೆ,” ಎಂಬ ಅವನ ಕೂಗು ಕೇವಲ ಸಹಾಯಕ್ಕಾಗಿರುವ ಕೂಗಿಗಿಂತ ಹೆಚ್ಚಿನದ್ದಾಗಿ ಪರಿಣಮಿಸಿತು. ಪ್ರತ್ಯೇಕ ಕೊಣೆಯಲ್ಲಿದ್ದ ವಾಟ್ಸನ್, ಆ ಸಂದೇಶವನ್ನು ಕೇಳಿದನು, ಅದನ್ನಾತನು ದೂರವಾಣಿಯ (ಟೆಲಿಫೋನ್) ಮೂಲಕ ರವಾನಿಸಲ್ಪಟ್ಟದ್ದರಲ್ಲಿಯೇ ಪೂರ್ಣ ಅರ್ಥ ಮಾಡಿಕೊಳ್ಳಬಹುದಾದ ಮೊದಲ ವಾಕ್ಯವೆಂದು ಅರಿತನು ಮತ್ತು ಅವಸರದಿಂದ ಓಡಿ ಬಂದನು. ಅಂದಿನಿಂದ ಮೊಳಗುವ ದೂರವಾಣಿಗಳನ್ನು ಉತ್ತರಿಸಲು ಜನರು ಅವಸರದಲ್ಲಿರುತ್ತಾರೆ.
ಕಳೆದ 93 ವರುಷಗಳಲ್ಲಿ, ವೈಜ್ಞಾನಿಕ ಜ್ಞಾನವು ಯಂತ್ರಕಲಾ ಜ್ಞಾನದೊಂದಿಗೆ ಜತೆಗೂಡಿ, ಹಿಂದೆಂದೂ ಸಾಧಿಸಲಾರದ ಜೀವನದ ಮಟ್ಟವನ್ನು ಜನರಿಗೆ ಅತಿ ದೊಡ್ಡ ಸಂಖ್ಯೆಯಲ್ಲಿ ಒದಗಿಸಿದೆ. ಲೋಕವು ನೆರೆಹೊರೆಯ ಗಾತ್ರಕ್ಕೆ ಇಳಿಸಲ್ಪಟ್ಟಿದೆ. “ಅಸಾಧ್ಯ” ವಿಷಯಗಳು ರೂಢಿಯ ಮಟ್ಟದ್ದಾಗಿವೆ. ನಿಜತ್ವದಲ್ಲಿ, ದೂರವಾಣಿ, ದೂರದರ್ಶನ, ಮೋಟರು ವಾಹನ, ಮತ್ತು ವಿಮಾನಗಳು—ಮತ್ತು ಎಷ್ಟೇ ಸಂಖ್ಯೆಯ ಇತರ 20ನೇ ಶತಮಾನದ “ಅದ್ಭುತಗಳು”—ಎಷ್ಟು ನಮ್ಮ ಲೋಕದ ಭಾಗವಾಗಿವೆ ಎಂದರೆ, ಮಾನವಕುಲವು ಅದರ ಆಸ್ತಿತ್ವದ ದೊಡ್ಡ ಭಾಗದಲ್ಲಿ ಅವುಗಳಿಲ್ಲದೇ ಮುಂದುವರಿದಿತ್ತು ಎಂಬುದನ್ನು ಮರೆಯುವ ಪ್ರವೃತ್ತಿಯವರಾಗಿರುತ್ತೇವೆ.
ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಗಮನಿಸುವುದು, ಈ ಶತಮಾನವು ಆರಂಭವಾದಾಗ, “ವಿಜ್ಞಾನದ ವಿಜಯಗಳು ಅತೀ ಹೇರಳತೆಯಲ್ಲಿ ಜ್ಞಾನ ಮತ್ತು ಶಕ್ತಿಯನ್ನು ವಾಗ್ದಾನಿಸುವಂತೆ ಕಂಡವು.” ಆದರೆ ಅದೇ ಸಮಯದಲ್ಲಿ ಮಾಡಲ್ಪಟ್ಟ ಯಂತ್ರಕಲಾ ಶಾಸ್ತ್ರದ ಅಭಿವೃದ್ಧಿಯು ಎಲ್ಲಾ ಕಡೆಗಳಲ್ಲಿ ಸಮಾನ ಅಳತೆಯ ಅನುಭವಿಸಲ್ಪಟ್ಟಿಲ್ಲ, ಯಾ ಅವುಗಳೆಲ್ಲವೂ ಸ್ಪಷ್ಟವಾಗಿಗಿ ಪ್ರಯೋಜನಕಾರಿ ಎಂದು ವರ್ಗೀಕರಿಸಲಾಗುವುದಿಲ್ಲ. ಅದು ಕೂಡಿಸುವುದು, “ಅವರ ಸಾಮಾಜಿಕ ಮತ್ತು ಸಹಜ ಪರಿಸರಕ್ಕೆ ಇದೇ ಯಶಸ್ಸುಗಳು ಸಮಸ್ಯೆಗಳನ್ನು ತರಬಲ್ಲವೆಂಬುದನ್ನು ಕೆಲವೇ ಪುರುಷರು ಮುನ್ನೋಡಶಕ್ತರಾಗಿದ್ದರು.”
ಸಮಸ್ಯೆಗಳಿಗೆ ಕಾರಣವಾದದ್ದು ಯಾವುದು?
ವಿಶ್ವವನ್ನು ಉತ್ತಮವಾಗಿ ತಿಳಿಯುವಂತೆ ನಮಗೆ ಸಹಾಯ ಮಾಡುವ ವೈಜ್ಞಾನಿಕ ನಿಜತ್ವಗಳೊಂದಿಗೂ ಯಾ ವ್ಯವಹಾರ್ಯ ವಿಧಾನದಲ್ಲಿ ಮಾನವಕುಲದ ಪ್ರಯೋಜನಕ್ಕಾಗಿ ವೈಜ್ಞಾನಿಕ ನಿಜತ್ವಗಳನ್ನು ಸಜ್ಜುಹಾಕುವ ಯಂತ್ರಕಲಾ ಶಾಸ್ತ್ರದೊಂದಿಗೂ ಯಾವುದೇ ತಪ್ಪು ಕಂಡುಕೊಳ್ಳಸಾಧ್ಯವಿಲ್ಲ.
ಈ ಎರಡೂ—ವಿಜ್ಞಾನ ಮತ್ತು ಯಂತ್ರಕಲಾ ಶಾಸ್ತ್ರ—ಬಹಳ ಹಿಂದಿನಿಂದಲೇ ಸಾಮ್ಯವನ್ನು ಹೊಂದಿರುತ್ತವೆ. ಆದರೆ ಸೈಎನ್ಸ್ ಆ್ಯಂಡ್ ದ ರೈಸ್ ಆಫ್ ಟೆಕ್ನಾಲೊಜಿ ಸಿನ್ಸ್ 1800 ಎಂಬ ಪುಸ್ತಕಕ್ಕನುಸಾರವಾಗಿ, “ಈಗ ಚೆನ್ನಾಗಿ ತಿಳಿದಿರುವ, ಅವುಗಳ ಆಪ್ತ ಸಂಬಂಧವು ಇತ್ತೀಚೆಗಿನ ವರೆಗೂ ಪೂರ್ಣವಾಗಿ ಸ್ಥಾಪಿತವಾಗಿರಲಿಲ್ಲ.” ಕೈಗಾರಿಕಾ ಕ್ರಾಂತಿಯ ಮೊದಲ ಭಾಗದಲ್ಲಿಯೂ, ಆ ಸಂಬಂಧವು ಆಪ್ತವಾಗಿರಲಿಲ್ಲವೆಂಬುದು ವ್ಯಕ್ತವಾಗುತ್ತದೆ. ಹೊಸದಾಗಿ ಗಳಿಸಿಕೊಂಡ ವೈಜ್ಞಾನಿಕ ಜ್ಞಾನವು ಹೊಸ ಉತ್ಪಾದನೆಗಳ ಬೆಳವಣಿಗೆಗೆ ಸಹಾಯಿಸುವಾಗ, ಅದರಂತೆಯೆ ಕಲಾನುಭವ, ಕೈಯ ಕೌಶಲ ಮತ್ತು ಯಂತ್ರಕಲಾ ಶಾಸ್ತ್ರದಲ್ಲಿ ಪ್ರವೀಣತೆಯೂ ಬೆಳವಣಿಗೆ ಹೊಂದಿತು.
ಆದಾಗ್ಯೂ ಕೈಗಾರಿಕಾ ಕ್ರಾಂತಿಯು ಆರಂಭವಾದ ಅನಂತರ, ವಿಸ್ತಾರವಾದ ತಳಹದಿಯನ್ನು ನಿರ್ಮಿಸುವ ಮೂಲಕ ಅದರ ಮೇಲೆ ಯಂತ್ರಕಲಾ ಶಾಸ್ತ್ರವು ಕಾರ್ಯನಡಿಸಬಲ್ಲದ್ದಾಗುವಂತೆ, ವೈಜ್ಞಾನಿಕ ಜ್ಞಾನದ ಶೇಖರಣೆಯ ವೇಗ ವೃದ್ಧಿ ಹೊಂದಿತು. ಯಂತ್ರಕಲಾ ಶಾಸ್ತ್ರವು ಹೊಸ ಜ್ಞಾನದಿಂದ ತುಂಬಿದ್ದಾಗಿ ದುಡಿಮೆ ಕಡಮೆ ಮಾಡುವ, ಆರೋಗ್ಯ ಉತ್ತಮಗೊಳಿಸುವ, ಮತ್ತು ಒಂದು ಉತ್ತಮ, ಸಂತೋಷದ ಲೋಕವನ್ನು ಪೋಷಿಸುವ ವಿಧಾನಗಳನ್ನು ನಿರ್ಮಿಸುವಂತೆ ಪ್ರಯತ್ನಿಸಲು ನಿರ್ಧರಿಸಿತು.
ಆದರೆ ಯಂತ್ರಕಲಾ ಶಾಸ್ತ್ರವು ಅದು ಆಧರಿಸಿರುವ ವೈಜ್ಞಾನಿಕ ಜ್ಞಾನಕ್ಕಿಂತ ಉತ್ತಮವಾಗಿರಲಾರದು. ವೈಜ್ಞಾನಿಕ ಜ್ಞಾನವು ತಪ್ಪಾಗಿರುವಲ್ಲಿ, ಅದರ ಮೇಲೆ ಆಧರಿಸಿದ ಯಾವುದೇ ಯಂತ್ರಕಲಾ ಶಾಸ್ತ್ರದ ಬೆಳವಣಿಗೆಗಳೂ ಅದರಂತೆಯೇ ದೋಷಯುಕ್ತವಾಗುವವು. ಅನೇಕಬಾರಿ, ಗಣನೀಯ ಕೆಡುಕನ್ನು ಮಾಡಿಯಾದ ಅನಂತರದಲ್ಲಿಯೇ ಪಕ್ಕ ಪರಿಣಾಮಗಳು ವ್ಯಕ್ತವಾಗುತ್ತವೆ. ಉದಾಹರಣೆಗಾಗಿ, ಕ್ಲೋರೊಫ್ಲೊರೊಕಾರ್ಬನ್ ಯಾ ಹೈಡ್ರೊಕಾರ್ಬನ್ಗಳನ್ನು ಬಳಸುವ ವಾಯುದ್ರವ ಎರಚುವಿಕೆಗಳ ಪರಿಚಯಿಸುವಿಕೆಯು ಒಂದು ದಿನ ಭೂಮಿಯ ರಕ್ಷಕ ಓಜೋನ್ ಪದರವನ್ನು ಅಪಾಯಕೊಡ್ಡುವುದೆಂದು ಯಾರು ಮುನ್ನೋಡಬಹುದಾಗಿತ್ತು?
ಇನ್ಯಾವುದೋ ವಿಷಯವು ಕೂಡ ಒಳಗೂಡಿರುತ್ತದೆ—ಹೇತು. ಒಬ್ಬ ಸಮರ್ಪಿತ ವಿಜ್ಞಾನಿಯು ಜ್ಞಾನವೆಂಬಂಥವುಗಳಲ್ಲಿ ಆಸಕ್ತನಿರಬಹುದು ಮತ್ತು ಅವನ ಜೀವನದ ದಶಕಗಳನ್ನು ವ್ಯಯಿಸಲು ಸಿದ್ಧನಿರಬಹುದು. ಆದರೆ ಜ್ಞಾನವನ್ನು ತತ್ಕ್ಷಣ ಬಳಕೆಗೆ ಹಾಕಲು ಉತ್ಸುಕನಾಗಿರುವ ಒಬ್ಬ ವ್ಯಾಪಾರಿಯು, ಲಾಭಗಳ ಬೆನ್ನಟ್ಟುವಿಕೆಯಲ್ಲಿ ಹೆಚ್ಚು ಆಸಕ್ತನಿರಬಹುದು. ಮತ್ತು ರಾಜಕೀಯಸ್ಥನು ಯಂತ್ರಕಲಾ ಶಾಸ್ತ್ರವನ್ನು ಒಮ್ಮೆಗೆ ಉಪಯೋಗಿಸುವಲ್ಲಿ ಅದು ಅವನಿಗೆ ರಾಜಕೀಯ ಪ್ರಭಾವವನ್ನು ಕೊಡಬಹುದೆಂದು ಅವನು ಆಲೋಚಿಸುತ್ತಾ ಅದನ್ನು ಉಪಯೋಗಿಸುವ ಮೊದಲು ತಾಳ್ಮೆಯಿಂದ ಕಾಯುವನೋ?
“ಅಣುವಿನ ಬಿಡುಗಡೆಗೊಳಿಸಿದ ಶಕ್ತಿಯು ನಮ್ಮ ಆಲೋಚನೆಯ ವಿಧಾನಗಳನ್ನು ಬಿಟ್ಟು ಎಲ್ಲವನ್ನು ಬದಲಾಯಿಸಿರುತ್ತದೆ ಮತ್ತು ಹೀಗಿರುವುದರಿಂದ ಸಾಟಿಯಿಲ್ಲದ ವಿನಾಶದ ಕಡೆಗೆ ನಾವು ತೇಲಿ ಹೋಗುತ್ತಿದ್ದೇವೆ,” ಎಂದು ಭೌತವಿಜ್ಞಾನಿ ಆಲ್ಬರ್ಟ್ ಐನ್ಸೀನ್ಟನು ಹೇಳಿದಾಗ ಅವನು ಸಮಸ್ಯೆಯನ್ನು ಗುರುತಿಸಿದನು. (ಓರೆ ಮುದ್ರಾಕ್ಷರಗಳು ನಮ್ಮವು.) ಹೌದು, ಇಪ್ಪತ್ತನೇ ಶತಮಾನದ “ಮಂತ್ರ”ವು ನಿರ್ಮಿಸಿದ ಅನೇಕ ಸಮಸ್ಯೆಗಳು ಎದ್ದಿರುವುದು ಕೇವಲ ದೋಷಯುಕ್ತ ವೈಜ್ಞಾನಿಕ ಜ್ಞಾನದ ಕಾರಣದಿಂದಾಗಿ ಅಲ್ಲ, ಆದರೆ ಸ್ವಾರ್ಥ ಅಭಿರುಚಿಗಳ ಮೂಲಕ ಪ್ರೇರಿತವಾದ ತ್ವರಿತ ಮತ್ತು ಅನಿಯಂತ್ರಿತ ಯಂತ್ರಕಲಾ ಶಾಸ್ತ್ರದ ಕಾರಣವೂ ಆಗಿರುತ್ತದೆ.
ವಿಷಯದ ಒಂದು ಘಟನೆಯಾಗಿ, ಶಬ್ದ ಮತ್ತು ದರ್ಶನವನ್ನು—ದೂರದರ್ಶನ—ದೂರ ಪ್ರದೇಶಗಳಿಗೆ ರವಾನಿಸ ಸಾಧ್ಯವಿದೆ ಎಂದು ವಿಜ್ಞಾನವು ಕಂಡುಹಿಡಿಯಿತು. ಯಂತ್ರಕಲಾ ಶಾಸ್ತ್ರವು ಹಾಗೆ ಮಾಡುವುದು ಹೇಗೆಂಬ ಆವಶ್ಯಕತೆಯನ್ನು ವಿಕಸಿಸಿತು. ಆದರೆ ಲೋಭಿ ವಾಣಿಜ್ಯ ಮತ್ತು ತಗಾದೆ ಮಾಡುವ ಗ್ರಾಹಕರ ವಿಷಯದಲ್ಲಿ ತಪ್ಪು ಕ್ರಮದ ಆಲೋಚನೆಯು, ವಿಷಯಲಂಪಟ ಚಿತ್ರಗಳನ್ನು ಮತ್ತು ರಕ್ತ ಹೆಪ್ಪುಗಟ್ಟಿಸುವ ಹಿಂಸಾತ್ಮಕ ದೃಶ್ಯಗಳನ್ನು ಶಾಂತಿಕರ ವಾಸದ ಕೋಣೆಗಳೊಳಗೆ ರವಾನಿಸುವಲ್ಲಿ ಈ ಗುರುತರ ಜ್ಞಾನವನ್ನು ಮತ್ತು ಯಂತ್ರಕಲಾ ಶಾಸ್ತ್ರವನ್ನು ಬಳಕೆಯಲ್ಲಿ ಹಾಕಿತು.
ಅದೇ ರೀತಿಯಲ್ಲಿ, ಭೌತ ದ್ರವ್ಯವನ್ನು ಶಕ್ತಿಯಾಗಿ ಬದಲಾಯಿಸಬಹುದಾದದ್ದನ್ನು ವಿಜ್ಞಾನವು ಕಂಡುಹಿಡಿಯಿತು. ಯಂತ್ರಕಲಾ ಶಾಸ್ತ್ರವು ಅಗತ್ಯವಾದ, ಮಾಡುವ ವಿಧಾನವನ್ನು ವಿಕಸಿಸಿತು. ಆದರೆ ಲೋಕ ಸಮಾಜದ ತಲೆಯ ಮೇಲೆ ಇನ್ನೂ ಕೂದಲೆಳೆಯಿಂದ ತೂಗಿರುವ ಕತ್ತಿಯಂತೆ, ಅಣು ಬಾಂಬ್ಗಳನ್ನು ಕಟ್ಟುವುದರಲ್ಲಿ ಈ ಜ್ಞಾನ ಮತ್ತು ಯಂತ್ರಕಲಾ ಶಾಸ್ತ್ರವನ್ನು ಬಳಕೆಗೆ ಹಾಕಿದ್ದು ರಾಷ್ಟ್ರೀಯತೆಯ ರಾಜಕೀಯ ಭಾಗದ ಆಲೋಚನೆಯ ಒಂದು ತಪ್ಪು ಕ್ರಮವಾಗಿತ್ತು.
ವಿಜ್ಞಾನವನ್ನು ಅದರ ಸ್ಥಾನದಲ್ಲಿ ಇಡುವುದು
ಗುಲಾಮರಂತೆ ರಚಿಸಲಾದ ಉಪಕರಣಗಳನ್ನು ಧನಿಗಳಾಗಲು ವಿಕಸಿಸುವಂತೆ ಜನರು ಅನುಮತಿಸುವಲ್ಲಿ ಆಲೋಚನೆಯ ಇನ್ನೂ ತಪ್ಪಾದ ಕ್ರಮವನ್ನು ಅದು ಹೊರಗೆಡಹುತ್ತದೆ. ಯಥಾಪ್ರಕಾರದಂತೆ ವರ್ಷದ ಪುರುಷನನ್ನಲ್ಲ, ಆದರೆ “ವರ್ಷದ ಯಂತ್ರ,” ಕಂಪ್ಯೂಟರನ್ನು 1983ರಲ್ಲಿ ಟಯಿಮ್ ಪತ್ರಿಕೆಯು ಆರಿಸಿದಾಗ ಅದು ಈ ಅಪಾಯದ ಕುರಿತು ಎಚ್ಚರಿಸಿತು.
ಟಯಿಮ್ ವಿವೇಚಿಸಿದ್ದು: “ಅವರ ತಲೆಯೊಳಗೆ ಅವರು ಮಾಡುತ್ತಿದ್ದ ವಿಷಯಗಳನ್ನು ಕಂಪ್ಯೂಟರ್ಗಳು ಮಾಡುವಂತೆ ಜನರು ಆತುಕೊಳ್ಳುವಾಗ, ಅವರ ತಲೆಗಳಿಗೆ ಏನಾಗುತ್ತದೆ? . . . ಕಂಪ್ಯೂಟರಿನ ಸ್ಮರಣೆಯಲ್ಲಿ ತುಂಬಿಸಿಟ್ಟ ಒಂದು ನಿಘಂಟು ಯಾವುದೇ ಅಕ್ಷರ ಜೋಡಣೆಯ ತಪ್ಪುಗಳನ್ನು ಸುಲಭವಾಗಿ ಸರಿಪಡಿಸಬಹುದಾದರೆ, ಅಕ್ಷರ ಸಂಯೋಜನೆಯನ್ನು ಕಲಿಯುವುದರಲ್ಲಿ ಯಾವ ಅರ್ಥವಿದೆ? ಮತ್ತು ತಿಳಿವಳಿಕೆಯ ರೂಢಿಯಿಂದ ಮನಸ್ಸು ಸ್ವತಂತ್ರವಾಗುವಲ್ಲಿ, ಅದು ಪ್ರಾಮುಖ್ಯ ಉಪಾಯಗಳ ಬೆನ್ನಟ್ಟುವಿಕೆಯಲ್ಲಿ ಪೂರ್ಣ ವೇಗದಲ್ಲಿ ಓಡುವುದೋ, ಯಾ ಆಲಸಿಯಾಗಿ ಅದರ ಸಮಯವನ್ನು ಹೆಚ್ಚಿನ ವಿಡಿಯೊ ಆಟಗಳಲ್ಲಿ ಕಳೆಯುವುದೋ? . . . ಕಂಪ್ಯೂಟರ್ ನಿಜಕ್ಕೂ ಮಿದುಳಿನ ಕ್ರಿಯೆಗಳನ್ನು ಉತ್ತೇಜಿಸುತ್ತದೋ, ಯಾ ಅದರ ಅಷ್ಟೊಂದು ಕೆಲಸವನ್ನು ಮಾಡುವುದರ ಮೂಲಕ, ಮಂದವಾಗುವಂತೆ ಮಿದುಳಿಗೆ ಅನುಮತಿಸುತ್ತದೋ?”
ಆದರೂ, ಕೆಲವು ಜನರು ವಿಜ್ಞಾನದ ಸಾಧನೆಗಳಿಂದ ಎಷ್ಟೊಂದು ಪ್ರಭಾವಿಸಲ್ಪಟ್ಟಿದ್ದಾರೆಂದರೆ ಅವರು ವಿಜ್ಞಾನವನ್ನು ದೇವತ್ವದ ಶ್ರೇಷ್ಠತೆಗೆ ಎತ್ತುತ್ತಾರೆ. ವಿಜ್ಞಾನಿ ಆ್ಯನನ್ತಿ ಸ್ಟ್ಯಾನನ್ಡ್ ಇದನ್ನು ಸೈಎನ್ಸ್ ಇಸ್ ಎ ಸೇಕ್ರೆಡ್ ಕೌ ಎಂಬ ಆತನ 1950ರ ಪುಸ್ತಕದಲ್ಲಿ ಚರ್ಚಿಸಿದನು. ಅತಿಶಯೋಕ್ತಿಯ ಸಾಧ್ಯತೆಗೆ ನಾವು ಅನುಮತಿಸುವಲ್ಲಿ, ಸ್ಟ್ಯಾನನ್ಡ್ ಏನನ್ನು ಹೇಳುತ್ತಾನೋ ಅದನ್ನು ಗಮನಿಸುವುದು ಅರ್ಹವಾಗಿದೆ: “ಒಬ್ಬ ಬಿಳೀ ವಸ್ತ್ರಧಾರಿ ವಿಜ್ಞಾನಿಯು . . . ಸಾಮಾನ್ಯ ಸಾರ್ವಜನಿಕರಿಗಾಗಿ ಕೆಲವು ಹೇಳಿಕೆಗಳನ್ನು ಮಾಡುವಾಗ, ಅವನನ್ನುವುದನ್ನು ತಿಳಿದುಕೊಳ್ಳಲು ಕಷ್ಟವಾಗಬಹುದು, ಆದರೆ ಕನಿಷ್ಠ ಪಕ್ಷ ಅವನನ್ನು ನಿಶ್ಚಯವಾಗಿಯೂ ನಂಬಬಹುದು. . . . ರಾಜ್ಯ ನೀತಿಜ್ಞರು, ಉದ್ಯಮಿಗಳು, ಧಾರ್ಮಿಕ ಶುಶ್ರೂಷಕರು, ಪ್ರಜಾ ಮುಂದಾಳುಗಳು, ತತ್ವಜ್ಞಾನಿಗಳು, ಎಲ್ಲರು ಪ್ರಶ್ನಿಸಲ್ಪಡುತ್ತಾರೆ ಮತ್ತು ಟೀಕಿಸಲ್ಪಡುತ್ತಾರೆ, ಆದರೆ ವಿಜ್ಞಾನಿಗಳು—ಎಂದಿಗೂ ಪ್ರಶ್ನಿಸಲ್ಪಡುವುದಿಲ್ಲ. ವಿಜ್ಞಾನಿಗಳು, ಜನಪ್ರಿಯ ಪ್ರತಿಷ್ಠೆಯ ಅತಿ ತುತ್ತತುದಿಯ ಪರಾಕಾಷ್ಠೆಯಲ್ಲಿ ನಿಂತಿರುವ, ಉನ್ನತೆಗೇರಿಸಲ್ಪಟ್ಟ ಜೀವಿಗಳು, ಯಾಕಂದರೆ ಭಿನ್ನಾಭಿಪ್ರಾಯದ ಎಲ್ಲ ಸಾಧ್ಯತೆಗಳನ್ನು ತೊಡೆದು ಹಾಕುವಂತೆ ತೋರುವ, ‘ಇದು ವೈಜ್ಞಾನಿಕವಾಗಿ ರುಜುವಾಗಿರುತ್ತದೆ . . . ’ ಎಂಬ ತ್ತತ್ವವಾಕ್ಯದ ಏಕಸ್ವಾಮ್ಯ ಅವರಲ್ಲುಂಟು.”
ಈ ತಪ್ಪು ಕ್ರಮದ ಆಲೋಚನೆಯಿಂದಾಗಿ, ಕೆಲವು ಜನರು ವಿಜ್ಞಾನ ಮತ್ತು ಬೈಬಲಿನ ನಡುವಿನ ವಿರೋಧೋಕ್ತಿಗಳು ಎಂದು ತೋರುವಂಥವುಗಳನ್ನು ಧಾರ್ಮಿಕ “ಮೂಢ ನಂಬಿಕೆ”ಯೊಂದಿಗೆ ವ್ಯತಿರಿಕ್ತವಾಗಿರುವ ವಿಜ್ಞಾನದ “ವಿವೇಕ” ರುಜುವಾತು ಎಂಬಂತೆ ತವಕದಿಂದ ಹಿಡಿದುಕೊಳ್ಳುತ್ತಾರೆ. ಈ ವಿರೋಧೋಕ್ತಿಗಳೆಂದು ಕರೆಯಲ್ಪಡುವವುಗಳಲ್ಲಿ ದೇವರ ಅಸ್ತಿತ್ವವಿಲ್ಲದಿರುವಿಕೆಯ ರುಜುವಾತನ್ನು ಕೂಡ ಕೆಲವರು ಕಾಣುತ್ತಾರೆ. ಆದಾಗ್ಯೂ, ನಿಜತ್ವದಲ್ಲಿ ದೇವರಿಗೆ ಆಸ್ತಿತ್ವವಿಲ್ಲದಿರುವಂಥದ್ದು ಆತನ ವಾಕ್ಯಕ್ಕೆ ತಪ್ಪರ್ಥ ಕೊಡುವ ಮೂಲಕ ವೈದಿಕರು ರಚಿಸಿರುವ ಕಾಲ್ಪನಿಕ ವಿರೋಧೋಕ್ತಿಗಳಾಗಿವೆ. ಅವರು ಅದರಿಂದ ಬೈಬಲಿನ ದಿವ್ಯ ಗ್ರಂಥಕರ್ತನಿಗೆ ಅಪಮಾನ ಮಾಡುತ್ತಾರೆ ಮತ್ತು ಅದೇ ಸಮಯದಲ್ಲಿ ವೈಜ್ಞಾನಿಕ ಸತ್ಯಕ್ಕಾಗಿ ಮಾನವ ಕುಲದ ಮುಂದುವರಿಯುತ್ತಿರುವ ತಲಾಷಿಗೆ ಅಪಸೇವೆಯನ್ನು ಸಲ್ಲಿಸುತ್ತಾರೆ.
ಇನ್ನೂ ಕೂಡಿಸಿ, ದೇವರ ಆತ್ಮದ ಫಲಗಳನ್ನು ಅವರ ಚರ್ಚಿಗರು ಅಭ್ಯಾಸಿಸುವಂತೆ ತರಬೇತಿಗೊಳಿಸುವುದರಲ್ಲಿ ತಪ್ಪುವುದರ ಮೂಲಕ, ಜನರ ವೈಯಕ್ತಿಕ ನೆಮ್ಮದಿ ಮತ್ತು ಅನುಕೂಲತೆಗಾಗಿ ಅವರ ಸ್ವಂತ ಆಶೆಗಳ ಕುರಿತು ಆಲೋಚಿಸುವಂತೆ ಮಾಡುವ ಸ್ವಾರ್ಥದ ಒಂದು ಪರಿಸರವನ್ನು ಈ ಧಾರ್ಮಿಕ ಮುಖಂಡರು ಪೋಷಿಸುತ್ತಾರೆ. ಜೊತೆ ಮಾನವರನ್ನು ಸಂಹಾರ ಮಾಡಲು ವೈಜ್ಞಾನಿಕ ಜ್ಞಾನವನ್ನು ದುರುಪಯೋಗಪಡಿಸುವಷ್ಟರ ಮಟ್ಟಿಗೂ, ಅನೇಕ ಬಾರಿ ಇದು ಇತರರ ವೆಚ್ಚದಲ್ಲಿ ಕೂಡ.—ಗಲಾತ್ಯ 5:19-23.
ಸುಳ್ಳು ಧರ್ಮ, ಅಪರಿಪೂರ್ಣ ಮಾನವ ರಾಜಕೀಯ, ಮತ್ತು ಲೋಭಿ ವಾಣಿಜ್ಯವು ಜನರನ್ನು ಇಂದು ಅವರು ಏನಾಗಿರುವರೋ ಆ “ಸ್ವಾರ್ಥಚಿಂತಕರು, . . . ಉಪಕಾರನೆನಸದವರು, . . . ದಮೆಯಿಲ್ಲದವರು,” ಆಲೋಚನೆಯ ತಪ್ಪಾದ ಕ್ರಮದ ಮೂಲಕ ಆತ್ಮ ದುರಭಿಮಾನದವರಾಗುವಂತೆ ರೂಪಿಸಿರುತ್ತದೆ.—2 ತಿಮೊಥೆಯ 3:1-3.
ವಿಜ್ಞಾನವು ಈಗ ಸಂಧಿಸುವಂತೆ ಕರೆಯಲ್ಪಟ್ಟಿರುವ 21ನೆಯ ಶತಮಾನದ ಪಂಥಾಹ್ವಾನಗಳನ್ನು ಸೃಷ್ಟಿಸಿದ ಜನರು ಮತ್ತು ಸಂಸ್ಥೆಗಳು ಇವುಗಳಾಗಿರುತ್ತವೆ. ಅದು ಯಶಸ್ವಿಯಾಗುವುದೋ? ನಮ್ಮ ಮುಂದಿನ ಸಂಚಿಕೆಯಲ್ಲಿ ಈ ಶ್ರೇಣಿಯ ಅಂತಿಮ ಕಂತಿನಲ್ಲಿ ಉತ್ತರವನ್ನು ಓದಿರಿ. (g93 6/8)
[ಅಧ್ಯಯನ ಪ್ರಶ್ನೆಗಳು]
a ಉದಾಹರಣೆಗಾಗಿ, ಮ್ಯಾನ್ಹೆಟ್ಟಾನ್ ಯೋಜನೆಗಾಗಿ—ಅಣು ಬಾಂಬನ್ನು ವಿಕಸಿಸಿದ ಅಮೆರಿಕದ ರಭಸದ ಕಾರ್ಯಕ್ರಮ—ಹೆಚ್ಚಿನ ಸಂಶೋಧನೆಯು, ಯೂನಿವರ್ಸಿಟಿ ಆಫ್ ಶಿಕಾಗೊ ಮತ್ತು ಬರ್ಕ್ಲೆಯಲ್ಲಿನ ಯೂನಿವರ್ಸಿಟಿ ಆಫ್ ಕ್ಯಾಲಿಫೊರ್ನೀಯದ ಸಂಶೋಧನಾ ಪ್ರಯೋಗ ಶಾಲೆಗಳಲ್ಲಿ ಮಾಡಲಾಗಿತ್ತು.
[ಪುಟ 13 ರಲ್ಲಿರುವ ಸಂಕ್ಷಿಪ್ತ ವಿವರಣೆ]
ವೈಜ್ಞಾನಿಕ ಜ್ಞಾನವು ತಪ್ಪಿನದ್ದಾಗಿರುವಲ್ಲಿ, ಅದರ ಮೇಲೆ ಆಧರಿಸಿದ ಬೆಳವಣಿಗೆಗಳು ದೋಷಪೂರ್ಣವಾಗಿರುವವು
[ಪುಟ 15 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಎಲ್ಲಾ ವೈಜ್ಞಾನಿಕ ಕಾರ್ಯಸಿದ್ಧಿಗಳು ಪ್ರಯೋಜನಕಾರಿಯಾದವುಗಳಲ್ಲ
[ಪುಟ 12 ರಲ್ಲಿರುವ ಚಿತ್ರ ಕೃಪೆ]
From the Collections of Henry Ford Museum & Greenfield Village
NASA photo