ಶ್ರೀ ಲಂಕಾದಲ್ಲಿನ ನಾಗರಹಾವುಗಳು ಶಬ್ದವನ್ನು ಕೇಳುತ್ತವೆ
“ಜಾಣತನದಿಂದ ಹಾವಾಡಿಗರ ನಾಗಸ್ವರಕ್ಕೂ ಮರುಳಾಗದೆ ಕಿವಿಗೊಡದ ಕಳ್ಳಹಾವಿನಂತೆ ಇರುತ್ತಾರೆ.”—ಕೀರ್ತನೆ 58:4, 5.
ಜನವರಿ 10, 1954ರ ದ ನ್ಯೂ ಯಾರ್ಕ್ ಟೈಮ್ಸ್ನಲ್ಲಿ “ಹಾವುಗಳು ಸಂಗೀತದಿಂದ ‘ಮನಸೆಳೆ’ಯಲ್ಪಡುತ್ತವೋ?” ಎಂಬ ಶೀರ್ಷಿಕೆಯ ಕೆಳಗೆ ಕೀರ್ತನೆ 58:4, 5ರ ಮೇಲೆ ಈ ಕೆಳಗಿನ ವರದಿಯನ್ನು ಕಂಡುಕೊಳ್ಳಲಾಯಿತು: “[ಅಮೆರಿಕದ] ಬಾಲಿಮ್ಟೋರ್ನ ಮೌಂಟ್ ಸಿನೊಯಿ ಆಸ್ಪತ್ರೆಯ ಔಷಧವಸ್ತು ಸಂಶೋಧಕ ಶಾಸ್ತ್ರಜ್ಞರಾದ ಡಾ. ಡೇವಿಡ್ ಐ. ಮಾಕ್ಟ್, ನಾಗರಹಾವಿನ ವಿಷದ ಕುರಿತಾದ ಪ್ರಪಂಚದ ಮುಂದಾಳುತ್ವ ವಹಿಸುವ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ. (ಉದಾಹರಣೆಗಾಗಿ ರಕ್ತ ರೋಗಗಳಲ್ಲಿ, ನಾಗರಹಾವಿನ ವಿಷವು ಒಂದು ಸ್ವೀಕೃತ ವೈದ್ಯಕಿಯ ಚಿಕಿತ್ಸೆಯಾಗಿದೆ.) ನಾಗರಹಾವುಗಳು ಮತ್ತು ನಾಗರಹಾವಿನ ವಿಷದೊಂದಿಗೆ ಕೆಲಸಮಾಡುವಾಗ ಅವರು ಸುಶಿಕ್ಷಿತರಾದ, ಮತ್ತು ಭಾರತದ ವಿವಿಧ ಭಾಗಗಳಿಂದ ಬಂದ ಅನೇಕ ಹಿಂದು ವೈದ್ಯರೊಂದಿಗೆ ಪರಿಚಯಸ್ಥರಾದರು ಎಂದು ಡಾ. ಮಾಕ್ಟ್ ವರದಿಮಾಡಿದರು. ನಾಗರಹಾವುಗಳು ಪುಂಗಿಯಿಂದ ಹೊರಡುವ ಕೆಲವು ಸಂಗೀತ ಸರ್ವಗಳಿಗೆ ಪ್ರತಿಕ್ರಿಯೆ ತೋರಿಸುತ್ತವೆಂಬುದನ್ನು ಎಲ್ಲರೂ ಒಪ್ಪಿಕೊಂಡರು. ಬೇರೆ ವಿಧಗಳಿಗಿಂತಲೂ ಕೆಲವು ರೀತಿಯ ಸಂಗೀತಗಳು ಪ್ರಾಣಿಗಳನ್ನು ಹೆಚ್ಚು ಉದ್ರೇಕಿಸುತ್ತವೆಂದು ವೈದ್ಯರು ವರದಿಮಾಡಿದರು. ಭಾರತದ ಮಕ್ಕಳು, ಗ್ರಾಮಾಂತರ ಪ್ರದೇಶದಲ್ಲಿ ಸೂರ್ಯನು ಅಸ್ತಮಿಸಿದ ಅನಂತರ ಆಟವಾಡುವಾಗ, ಅವರ ಶಬ್ದಗಳು ನಾಗರಹಾವುಗಳನ್ನು ಆಕರ್ಷಿಸದಂತೆ ತಡೆಯಲಿಕ್ಕಾಗಿ ಹಾಡದಂತೆ ಸಹ ಎಚ್ಚರಿಸಲ್ಪಟ್ಟಿದ್ದಾರೆ ಎಂದು ಅವರು ಹೇಳಿದರು. ಹಾವುಗಳು ಕಿವುಡೆಂದು ಪುನಃ ಪುನಃ ನಿರ್ದೇಶಿಸಿದ ಷೇಕ್ಸ್ಪಿಯರ್ . . . ಕೇವಲ ಒಂದು ಸಾಮಾನ್ಯವಾದ ತಪ್ಪು ಗ್ರಹಿಕೆಯನ್ನು ಪುನರಾವೃತ್ತಿಸಿದರ್ದೆಂದು ಡಾ. ಮಾಕ್ಟ್ ಹೇಳಿಕೆ ನೀಡಿದರು. ಇನ್ನೊಂದು ಸಂದರ್ಭದಲ್ಲಿ ಡಾ. ಮಾಕ್ಟ್ ಅಂದದ್ದು, ಹಾವುಗಳು ಆಲಿಸಬಲ್ಲವು ಎಂದು ಕೀರ್ತನೆ 58, ವಚನ 5ರಲ್ಲಿ ಕೀರ್ತನೆಗಾರನು ಕೊಟ್ಟ ವಿಪರ್ಯಯವಾದ ನಿಜಾಭಿಪ್ರಾಯವು ಸರಿಯಾಗಿದೆ.”
ತದ್ರೀತಿ, ಜಿಮ್ಕ್ಸ್ ಟಿರ್ ಸಿಲ್ಮನ್ಸ್ ಟಿರ್ವೆಲ್ಟ್ (ಜಿಮ್ಕ್ಸ್ ಆ್ಯನಿಮಲ್, ಸಿಲ್ಮನ್ಸ್ ಆ್ಯನಿಮಲ್ ವರ್ಲ್ಡ್) ಎಂಬ ಜರ್ಮನಿಯ ಪ್ರಾಣಿ ವಿಜ್ಞಾನಕ್ಕೆ ಸಂಬಂಧಿಸಿದ ಪತ್ರಿಕೆಯ ಜುಲೈ 1981, ಪುಟಗಳು 34 ಮತ್ತು 35ರಲ್ಲಿ ಪ್ರಕಾಶಿಸಲ್ಪಟ್ಟ ಲೇಖನದಲ್ಲಿ ಲೇಖಕರು ಶ್ರೀ ಲಂಕಾದಲ್ಲಿ ಅವರ ಎಸೇಟ್ಟಿನಲ್ಲಿ ಒಂದು ಗೆದ್ದಲ ಗೂಡಿನಲ್ಲಿ [ಹುತ್ತ] ವಾಸಿಸುತ್ತಿದ್ದ ಒಂದು ನಾಗರಹಾವಿನ ಕುರಿತು ಹೇಳುತ್ತಾರೆ. ಅವರು ಈ ಕಾಡು ಹಾವನ್ನು ಹಿಡಿಯಲು ಮತ್ತು ಆಡಿಸುವಂತೆ ಒಬ್ಬ ಹಾವಾಡಿಗನಿಗೆ ಕೇಳಿಕೊಂಡರು. ಲೇಖಕರು ವರದಿಮಾಡುವುದು: “ಒಂದು ನಾಗರಹಾವು ನಿಜವಾಗಿಯೂ ಅಲ್ಲಿ ವಾಸಿಸುತ್ತಿದೆಯೆಂದು ನನ್ನ ಅತಿಥಿಗೆ ನಾನು ಮನವರಿಕೆಮಾಡಿದ ಅನಂತರ, ಅವನು ಗೆದ್ದಲ ಗೂಡಿನ ಮುಂದೆ ಕುಳಿತುಕೊಂಡನು ಮತ್ತು ಅವನ ಪುಂಗಿಯನ್ನೂದಲು ಆರಂಭಿಸಿದನು. ಬಹಳ ದೀರ್ಘ ಸಮಯದ ಅನಂತರ—ಇನ್ನುಮೇಲೆ ಏನೂ ಸಂಭವಿಸುವುದಿಲ್ಲವೆಂದು ನಾನು ಎಣಿಸಿದಾಗ—ನಾಗರ ಹಾವು ಹುತ್ತದಿಂದ ಅದರ ಹೆಡೆಯನ್ನು ಅನೇಕ ಸೆಂಟಿಮೀಟರ್ಗಳಷ್ಟು ಮೇಲಕ್ಕೆತಿತ್ತು. ಹಾವು ಅದರ ಬಾಯಿಯನ್ನು ತೆರೆಯುವುದಕ್ಕೆ ಮೊದಲು ಹಾವಾಡಿಗನು ಅತ್ಯಾತುರದಿಂದ ಮುನ್ನುಗ್ಗಿದನು ಮತ್ತು ಅದರ ತಲೆಯನ್ನು ಅವನ ಹೆಬ್ಬೆರಳು ಮತ್ತು ಎರಡು ಬೆರಳುಗಳಿಂದ ಭದ್ರವಾಗಿ ಹಿಡಿದುಕೊಂಡನು.” ಆಮೇಲೆ ಆ ಭಾರತೀಯನು ಹಾವನ್ನು ನಿಜವಾಗಿಯೂ ಆಡಿಸಿದನು.
ಆದುದರಿಂದ, ನಾಗರಹಾವುಗಳು “ಹಾವಾಡಿಗರ ನಾಗಸ್ವರಕ್ಕೆ ಕಿವಿಗೊಡುತ್ತವೆ” ಎಂಬದಕ್ಕೆ ಸ್ಪಷ್ಟವಾಗಿದ ನಿದರ್ಶನವಿದೆ.—ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದಿ ಹೋಲಿ ಸ್ಕ್ರಿಪ್ಚರ್ಸ್—ವಿತ್ ರೆಫರೆನ್ಸಸ್, ಪರಿಶಿಷ್ಟ 7ಎ, ಪುಟ 1583. (g93 7/22)