ಯುವ ಜನರು ಪ್ರಶ್ನಿಸುವುದು . . .
ನನಗೆ ಚಟಹಿಡಿದದೆ! ನಾನು ಜೂಜಾಡುವುದನ್ನು ಹೇಗೆ ನಿಲಿಸಬಲ್ಲೆ?
“ನಾನು 13 ವರ್ಷದವನಾಗಿದ್ದಾಗ ಸೀಳುಗಂಡಿ ಯಂತ್ರಗಳೊಂದಿಗೆ ಆಟವಾಡಲು ಆರಂಭಿಸಿದೆನು,” ಎಂದು ಡೇವಿಡ್ ಒಪ್ಪಿಕೊಳ್ಳುತ್ತಾನೆ. “ಸೀಳುಗಂಡಿ ಯಂತ್ರದಲ್ಲಿ ಜೂಜಾಟವನ್ನು ಆಡದೇ ವಿನೋದಬೀದಿಯನ್ನು ದಾಟಲಾಗದ ಸ್ಥಿತಿಗೆ ನಾನು ತಲುಪಿದೆನು.” ಹಿಂದೆ ಜೂಜುಗಾರನಾಗಿದ್ದ ತೋಮಸ್ ಎಂಬ ಹೆಸರಿನ ಇನ್ನೊಬ್ಬನು ಹೇಳುವುದು: “ನನ್ನ ಹವ್ಯಾಸವನ್ನು ಬೆಂಬಲಿಸಲಿಕ್ಕಾಗಿ ಸ್ನೇಹಿತರಿಂದ, ಕುಟುಂಬದಿಂದ, ಮತ್ತು ಜೊತೆಕೆಲಸಗಾರರಿಂದಲೂ ಸಹ ಕಳ್ಳತನಮಾಡಿದೆ. ಯಾವುದರ ಮೇಲಾದರೂ ನಾನು ಜೂಜಾಡಿದೆ.”
ಡೇವಿಡ್ ಮತ್ತು ತೋಮಸ್ ಇಬ್ಬರೂ ಕ್ರೈಸ್ತರೋಪಾದಿ ಬೆಳೆಸಲ್ಪಟ್ಟವರು. ಒಂದು ಮಾರಕ ಒತ್ತಾಯದ ಪಾಶಕ್ಕೆ ಸಿಲುಕಿ—ಇಬ್ಬರೂ ಜೂಜಾಟದಲ್ಲಿ ಸಿಕ್ಕಿಕೊಂಡರು. ಯುವಜನರನ್ನು ಜೂಜಾಟಕ್ಕೆ ಆಕರ್ಷಿಸುವ ಕುಯುಕ್ತಿಯುಳ್ಳ ಮನಶ್ಶಾಸ್ತ್ರಾನುಗುಣವಾದ ಯೋಜನೆಗಳಿಗೆ ಗಾಬರಿಗೊಳಿಸುವ ಸಂಖ್ಯೆಗಳಲ್ಲಿ ಯೌವನಸ್ಥರು ಬಲಿಯಾಗಿದ್ದಾರೆಂದು ಸಂಶೋಧಕರು ಹೇಳುತ್ತಾರೆ. “ಜೂಜಾಟದ ಸಂಶೋಧಕರು ಹೇಳುವುದೇನಂದರೆ, ಅಮೆರಿಕದಲ್ಲಿ ಅಂದಾಜುಮಾಡಲ್ಪಟ್ಟ 80 ಲಕ್ಷ ಒತ್ತಾಯಕ್ಕೆ ಒಳಗಾದ ಜೂಜುಗಾರರಲ್ಲಿ ಪೂರ್ತಿ 10 ಲಕ್ಷ ಜೂಜುಗಾರರು ಹದಿವಯಸ್ಕರಾಗಿದ್ದಾರೆ,” ಎಂದು ಟೈಮ್ ಪತ್ರಿಕೆ ಹೇಳುತ್ತದೆ. ಅಮೆರಿಕದ ಎಲ್ಲಾ ಹದಿವಯಸ್ಕರಲ್ಲಿ 4ರಿಂದ 6 ಪ್ರತಿಶತ ಒತ್ತಾಯಕ್ಕೆ ಒಳಗಾದ ಜೂಜುಗಾರರೆಂದು ಕೆಲವರು ನಂಬುತ್ತಾರೆ.
ಈ ದುರ್ಗುಣದ ಅನೇಕ ಭಿನ್ನ ರೀತಿಗಳನ್ನು ಯೌವನಸ್ಥರು ಬೆನ್ನಟ್ಟುತ್ತಾರೆ. ಜಪಾನಿನಲ್ಲಿ, ಅಪ್ರಾಪ್ತ ವಯಸ್ಕರು ಪಂಥಕಟ್ಟುವುದನ್ನು ನಿಷೇಧಿಸುವ ಕಠಿನ ನಿಯಮಗಳಿದ್ದಾಗ್ಯೂ, ಮೈನಿಚಿ ಡೈಲಿ ನ್ಯೂಸ್ಗನುಸಾರ ಯೌವನಸ್ಥರು “ಪಣದ ವ್ಯವಸ್ಥಾಪನೆಗಳ ಕುದುರೆ ಜೂಜಿನ ಪಥದಲ್ಲಿ ಮತ್ತು ಹೊರಗೆ ಎರಡೂ ಕಡೆಗಳಲ್ಲಿ, ಜೂಜುಗಾರರೋಪಾದಿ ಅವರ ವರ್ಧಿಸುತ್ತಿರುವ ಹಾಜರಿಯಿಂದಾಗಿ ಬೆಳೆಯುತ್ತಿರುವ, ಮನಕಲುಕುವ ಒಂದು ಪ್ರವೃತ್ತಿಯಲ್ಲಿ ಸ್ಪಷಗ್ಟೋಚರರಾಗುತ್ತಿದ್ದಾರೆ.” ಲಾಟರಿಯನ್ನಾಡುವುದು, ಕ್ರೀಡೆಗಳ ಘಟನೆಗಳ ಮೇಲೆ ಪಣಕಟ್ಟುವುದು, ಮತ್ತು ಇಸ್ಪೀಟು ಆಡುವುದು ಕೂಡ ಪಣಕಟ್ಟುವ ಒತ್ತಾಯಕ್ಕೆ ಅಧೀನರಾಗುವ ಯೌವನಸ್ಥರ ನಡುವೆ ಇರುವ ಜನಪ್ರಿಯ ವಿಧಾನಗಳಾಗಿವೆ.
ಜೂಜಾಟದ ಚಟ—ಅದರ ಪರಿಣಾಮಗಳು
ಗ್ಯಾಂಬರ್ಲ್ಸ್ ಅನಾನಿಮಸ್ನ ಗಾರ್ಡನ್ ಮೂಡಿ, ಹೇಳುವುದು: “ಆರಂಭದಲ್ಲಿ, ಪ್ರೀತಿಯಲ್ಲಿ ಅನುರಕ್ತನಾಗುವಂತೆ ಅಥವಾ ಒಂದು ಮಹತ್ತಾದ ಆವಿಷ್ಕಾರವನ್ನು ಮಾಡುವಂತೆ, [ಜೂಜಾಟವು] ಒಂದು ಆಶ್ಚರ್ಯಕರವಾದ ಹೊಸ ಅನುಭವವಾಗಿರುತ್ತದೆ. . . . ಅದೃಷದ್ಟೊಂದಿಗೆ ಆಟವಾಡುವುದು ಉಲ್ಲಾಸಕರವಾದದ್ದೂ ಮತ್ತು ಮನಸೆಳೆಯುವಂಥದ್ದೂ ಆಗಿದೆ.” (ಕಿಟ್ವ್ ಕಂಪಲ್ಸಿವ್ ಗ್ಯಾಂಬ್ಲಿಂಗ್) ಹೌದು, ಒಂದು ಗೆಲುವಿನ ಎಳೆಯನ್ನು ಮತ್ತು ಜೊತೆಗೂಡಿಸುವ ಅಡ್ರೆನಲಿನ್ನ ರಭಸದ ಹರಿಯುವಿಕೆಯನ್ನು ಅನುಭವಿಸುವುದು ಅನೇಕ ಜನರಿಗೆ ಉದ್ರೇಕಿಸುವಂಥದ್ದಾಗಿದೆ. ಆದರೆ ನೀವು ಸದಾ ಅದೃಷಗ್ಟಳ ವಿರುದ್ಧವಾಗಿ ಗೆಲ್ಲಲು ಸಾಧ್ಯವಿಲ್ಲ. ಕಟ್ಟಕಡೆಗೆ, ಜೂಜುಗಾರನು ನಷ್ಟ ಹೊಂದುತ್ತಾನೆ. ಮತ್ತು ಸಾಲ ಹಾಗೂ ಆರ್ಥಿಕ ವಿನಾಶಗಳು ಅವನ ಸಮಸ್ಯೆಗಳ ಕೇವಲ ಆರಂಭವಾಗಿವೆ.
ಚಟದ ಕಾಲಕ್ಷೇಪವು, ಚಟದ ಒಂದು ವಸ್ತುವಿನಂತೆ, ಎಣಿಸಲಾಗದಷ್ಟು ಆತ್ಮಿಕ, ಭಾವನಾತ್ಮಕ, ಮತ್ತು ನೈತಿಕ ನಷ್ಟವನ್ನು ಮಾಡಸಾಧ್ಯವಿದೆ. ಯಾವುದು “ಕಟ್ಟಕಡೆಗೆ ನಿಮ್ಮನ್ನು ಒಬ್ಬ ಗುಲಾಮನನ್ನಾಗಿ ಮಾಡುವ ಕೃತ್ರಿಮತೆ” ಎಂದು ಗಾರ್ಡನ್ ಮೂಡಿ ಕರೆದನೋ ಅದನ್ನು ನಿಮ್ಮಲ್ಲಿಯೂ ಅದು ವರ್ಧಿಸಬಲ್ಲದು. ನಾವೆಲ್ಲರೂ ಅಪೊಸ್ತಲ ಪೌಲನ ಮಾತುಗಳಿಂದ ಜ್ಞಾಪಿಸಲ್ಪಟ್ಟಿದ್ದೇವೆ: “ನೀವು ಯಾವನಿಗೆ ದಾಸರಂತೆ ವಿಧೇಯರಾಗುತ್ತೇವೆಂದು ನಿಮ್ಮನ್ನು ಒಪ್ಪಿಸಿಕೊಡುತ್ತೀರೋ ಆ ಯಜಮಾನನಿಗೆ ದಾಸರಾಗಿಯೇ ಇರುವಿರೆಂಬದು ನಿಮಗೆ ಗೊತ್ತಿಲ್ಲವೋ?” (ರೋಮಾಪುರ 6:16) ಜೆ. ಬಿ. ಪಿಲಿಪ್ಸ್ರ ಭಾಷಾಂತರವು ವಚನವನ್ನು ಈ ರೀತಿಯಲ್ಲಿ ನಿರೂಪಿಸುತ್ತದೆ: “ನೀವು ವಿಧೇಯರಾಗಲು ಆಯ್ದುಕೊಂಡ ಪ್ರಭಾವಕ್ಕೆ ಸೇರಿದವರಾಗಿದ್ದೀರಿ.” ನೀವು ನಿಯಂತ್ರಿಸಲು ಸಾಧ್ಯವಿಲ್ಲದ ಒಂದು ಹವ್ಯಾಸದ ನಿರಂಕುಶತ್ವದ ಕೆಳಗಿರುವುದನ್ನು ಊಹಿಸಿಕೊಳ್ಳಿರಿ!
ತನ್ನ ಹವ್ಯಾಸವನ್ನು ಬೆಂಬಲಿಸಲಿಕ್ಕಾಗಿ ಯೌವನಸ್ಥನೊಬ್ಬನು ಆಗಾಗ್ಗೆ ಸುಳ್ಳಾಡುವಿಕೆ, ಕೃತ್ರಿಮತೆ, ಮತ್ತು ಕಳ್ಳತನವನ್ನು ಅವಲಂಬಿಸುವ ಕಾರಣದಿಂದ ಆತನ ಕುಟುಂಬ ಸಂಬಂಧಗಳು ಸಹ ಬಾಧಿಸಲ್ಪಡುವುದು ನಿಶ್ಚಯ. ಬ್ರಿಟಿಷ್ ಪತ್ರಿಕೆ ಯಂಗ್ ಪೀಪಲ್ ನೌ ಅವಲೋಕಿಸುವುದು: “ನೀವು ಪ್ರೀತಿಸುವ ಜನರಿಗೆ ಮತ್ತು ನಿಮ್ಮನ್ನು ಪ್ರೀತಿಸುವವರಿಗೆ, ನೀವು ಒಬ್ಬ ಕಳ್ಳನು, ಒಬ್ಬ ಸುಳ್ಳುಗಾರನು ಮತ್ತು ಒಂದು ಹೊರೆಯಾಗಿ ಪರಿಣಮಿಸಿದ್ದೀರೆಂದು ನೀವು ಗ್ರಹಿಸುವಾಗ, ನಿಮ್ಮ ಆತ್ಮಾಭಿಮಾನವು ಕುಸಿಯುತ್ತದೆ.” ಒತ್ತಾಯಕ್ಕೆ ಒಳಗಾದ ಜೂಜುಗಾರರು, “ವಿಪರೀತ ಖಿನ್ನತೆ, ಮಾನಸಿಕ ಅಸ್ತವ್ಯಸ್ತತೆಗಳಿಗೆ,” ಮತ್ತು “ಜೀರ್ಣಕಾರಿ ಸಮಸ್ಯೆಗಳು, ನಿರ್ನಿದ್ರತೆ, ತಲೆನೋವು, ಮಾನಸಿಕ ಉದ್ವೇಗ, ಅಸ್ತಮಾ, ಬೆನ್ನುನೋವು, ಮತ್ತು ಎದೆನೋವು,”ಗಳಂತಹ ಶಾರೀರಿಕ ತೊಂದರೆಗಳಿಗೆ ಬಲಿಯಾಗುವ ಒಲವುಳ್ಳವರಾಗಿರುತ್ತಾರೆ, ಎಂದು ದ ಹಾರ್ವರ್ಡ್ ಮೆಂಟಲ್ ಹೆಲ್ತ್ ಲೆಟರ್ ವರದಿಮಾಡುವುದು ಆಶ್ಚರ್ಯಕರವೇನೂ ಅಲ್ಲ.
ಆದರೂ, ಇವುಗಳಲ್ಲಿ ಅತ್ಯಂತ ಹೆಚ್ಚು ವಿನಾಶಕಾರಿ ಪರಿಣಾಮವು, ಒಬ್ಬನ ಆತ್ಮಿಕತೆಯ ಹಾನಿಯೇ ಆಗಿದೆ. ಲೋಭ ಮತ್ತು ಹಣದಾಸೆಯನ್ನು ಬೈಬಲು ಖಂಡಿಸುತ್ತದೆ. (1 ಕೊರಿಂಥ 5:10, 11; 1 ತಿಮೊಥೆಯ 6:10) ಯಾವುದೇ ಚಟದಂತೆ, ಒತ್ತಾಯಕ್ಕೆ ಒಳಗಾದ ಪಣಕಟ್ಟುವಿಕೆಯು “ಶರೀರಾತ್ಮಗಳ ಕಲ್ಮಶ”ವಾಗಿದೆ. (2 ಕೊರಿಂಥ 7:1) ನೀವು ಎಷ್ಟು ಹೆಚ್ಚಾಗಿ ಪಣಕಟ್ಟುತ್ತೀರೋ, ಅಷ್ಟೇ ಹೆಚ್ಚಾಗಿ, ದೇವರೊಂದಿಗಿನ ನಿಮ್ಮ ಸಂಬಂಧ ಮತ್ತು ನಿಮ್ಮ ಮನಸ್ಸಾಕ್ಷಿಯನ್ನು ನೀವು ಹಾಳುಮಾಡುತ್ತೀರಿ.—ಹೋಲಿಸಿ 1 ತಿಮೊಥೆಯ 4:2.
ತ್ಯಜಿಸಿಬಿಡಬೇಕೆಂಬ ಇಚ್ಛೆ
ಈ ಹವ್ಯಾಸದ ತಿರುಡಿಯಂತಹ (ವೈಸ್) ಹಿಡಿತವನ್ನು ನೀವು ಹೇಗೆ ಮುರಿಯಬಲ್ಲಿರಿ? ಪ್ರಥಮವಾಗಿ, ಬಿಟ್ಟುಬಿಡಲು ನೀವು ನಿಜವಾಗಿಯೂ ಬಯಸಬೇಕು. “ವ್ಯಸನಿಯು ವಾಸ್ತವವಾಗಿ ಬದಲಾವಣೆಮಾಡಲು ಅಪೇಕ್ಷಿಸದ ಹೊರತು ಯಾವುದೇ ಚಟವು ಎಂದಿಗೂ ಜಯಿಸಲು ಸಾಧ್ಯವಿಲ್ಲ” ಎಂದು ಅಡಿಕ್ಷನ್ ಎಂಬ ಅವರ ಪುಸ್ತಕದಲ್ಲಿ ಲಿಜ್ ಹಾಜ್ಕಿನ್ಸೆನ್ ಹೇಳುತ್ತಾರೆ. ಜೂಜಾಟವನ್ನು ಹೇಸಲು, “ಕೆಟ್ಟದ್ದನ್ನು ಹಗೆ” ಮಾಡಲು ಕಲಿಯುವುದು ಎಂದಿದರ ಅರ್ಥವಾಗಿದೆ. (ಕೀರ್ತನೆ 97:10) ಹೇಗೆ? ಅದರ ಸುಖಾನುಭವಗಳನ್ನಲ್ಲ, ಬದಲಾಗಿ ಅದರ ಪರಿಣಾಮಗಳ ಕುರಿತು ಆಲೋಚಿಸುವ ಮೂಲಕವೇ. “ಸ್ವಲ್ಪಕಾಲ ಪಾಪಭೋಗಗಳನ್ನನುಭವಿಸುವುದು”—ಕೆಲವು ಕ್ರೀಡೆಗಳನ್ನು ಗೆಲ್ಲುವ ಪುಳಕವು—ನಿತ್ಯಜೀವವನ್ನು ಕಳೆದುಕೊಳ್ಳುವುದಕ್ಕಿಂತಲೂ ಬೆಲೆಯುಳ್ಳದ್ದಾಗಿದೆಯೋ? (ಇಬ್ರಿಯ 11:25) ಈ ರೀತಿಗಳಲ್ಲಿ ಪರ್ಯಾಲೋಚಿಸುವುದು ತ್ಯಜಿಸುವ ನಿರ್ಧಾರವನ್ನು ವರ್ಧಿಸುವಂತೆ ನಿಮಗೆ ಸಹಾಯಮಾಡಬಲ್ಲದು.
ಆದಾಗ್ಯೂ, ಸಂಶೋಧಕಿ ಲಿಜ್ ಹಾಜ್ಕಿನ್ಸೆನ್ ಗಮನಿಸುವುದು: “ಯಾವುದೇ ರೀತಿಯ ಚಟಗಳು ಎಷ್ಟೊಂದು ಆಳವಾಗಿ ಬೇರೂರಿರುತ್ತವೆಂದರೆ ಅವುಗಳನ್ನು ತೆಗೆದುಹಾಕುವುದು ಒಂದು ಅಂಗವನ್ನು ಹರಿದುಹಾಕುವಂತೆ ಇದೆ.” ಆದರೆ ಯೇಸು ಹೇಳಿದ್ದು: “ನಿನ್ನ ಬಲಗೈ ನಿನ್ನನ್ನು ಪಾಪದಲ್ಲಿ ಸಿಕ್ಕಿಸುವದಾದರೆ ಅದನ್ನು ಕಡಿದು ಬಿಸಾಟುಬಿಡು; ನಿನ್ನ ದೇಹವೆಲ್ಲಾ ನರಕದಲ್ಲಿ ಬೀಳುವುದಕ್ಕಿಂತ ಅವಯವಗಳಲ್ಲಿ ಒಂದು ಹೋಗುವುದು ನಿನಗೆ ಹಿತವಲ್ಲವೇ.” (ಮತ್ತಾಯ 5:29) ದೇವರೊಂದಿಗಿನ ನಿಮ್ಮ ಸಂಬಂಧವನ್ನು ಅಪಾಯಕ್ಕೆ ಸಿಕ್ಕಿಸುವ ಯಾವುದನ್ನಾದರೂ ನಿಮ್ಮ ಜೀವಿತದಿಂದ ತೆಗೆದುಹಾಕಲ್ಪಡಬೇಕು!
ಇದರ ಅರ್ಥ ಆತ್ಮ ಸಂಯಮವನ್ನು ಬೆಳೆಸಿಕೊಳ್ಳುವುದೆಂದಾಗಿದೆ. ಅಪೊಸ್ತಲ ಪೌಲನಿಗಿದ್ದ ಮರುಕೊಳಿಸುವ ಅಪೇಕ್ಷೆಗಳು ಆತನನ್ನು ಪೂರ್ತಿ ಮುಳುಗಿಸುವಂತೆ ಅವನು ಅನುಮತಿಸ ಸಾಧ್ಯವಿತ್ತು, ಆದರೆ ಆತನ ಅಪೇಕ್ಷೆಗಳಿಗೆ ಒಬ್ಬ ದಾಸನಾಗಿರಲು ಅವನು ನಿರಾಕರಿಸಿದನು. ಅವನಂದದ್ದು, “ನನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳುತ್ತೇನೆ.” (1 ಕೊರಿಂಥ 9:27) ನೀವು ಸಹ ನಿಮ್ಮ ಅಪೇಕ್ಷೆಗಳು ನಿಮ್ಮನ್ನು ನಿಯಂತ್ರಿಸಲು ಬಿಟ್ಟುಕೊಡದಂತೆ, ನಿಮ್ಮನ್ನು ದೃಢಪಡಿಸಿಕೊಳ್ಳಲು ಕಲಿಯಬೇಕು.
ಸಮಸ್ಯೆಯ ಮೂಲಕ್ಕೆ ಹೋಗುವುದು
ಆದರೂ, ಈ ಹೋರಾಟವನ್ನು ಜಯಿಸುವುದು, ಸಂಕಲ್ಪಶಕ್ತಿಗಿಂತಲೂ ಹೆಚ್ಚಿನದನ್ನು ಅಪೇಕ್ಷಿಸುತ್ತದೆ. ಚಟಗಳು ಆಗಾಗ್ಗೆ ಇನ್ನೂ ಆಳವಾದ ಸಮಸ್ಯೆಗಳನ್ನು ಪ್ರತಿಬಿಂಬಿಸುತ್ತವೆ. ಡಿಕ್ ಎಂಬ ಹೆಸರಿನ ಒತ್ತಾಯಕ್ಕೆ ಒಳಗಾದ ಒಬ್ಬ ಜೂಜುಗಾರನು ಹೇಳುವುದು: “ನನ್ನ ಬಾಲ್ಯಾವಸ್ಥೆಯು ತುಂಬಾ ವಿಚಿತ್ರವಾಗಿತ್ತು. ನನ್ನ ಕುಟುಂಬದಲ್ಲಿ ಯಾವುದೇ ಪ್ರೀತಿಯಿರಲಿಲ್ಲ. . . . ನಾನು ಯಾವಾಗಲೂ ಅವಮಾನಿಸಲ್ಪಡುತ್ತಿದ್ದೆ. ಸ್ವತಃ ನನ್ನ ಕುರಿತು ತೀರಾ ಕೀಳ್ಮಟ್ಟದ ಅಭಿಪ್ರಾಯ ನನ್ನಲ್ಲಿತ್ತು.” ಅಂತಹ ಒತ್ತಡದ ಪರಿಣಾಮವಾಗಿ, ಜೂಜಾಟವು ಅವನ ಹೊರಗಂಡಿಯಾಗಿತ್ತು.
ಮಾನಸಿಕ ಆರೋಗ್ಯದ ಕ್ಷೇತ್ರದಲ್ಲಿರುವ ಅನೇಕರು ಇಂದು ಅನೇಕ ವಿಧದ ಚಟಗಳನ್ನು ಮಕ್ಕಳ ಅಪಪ್ರಯೋಗ ಮತ್ತು ಅಸಡ್ಡೆಯ ಭಾವನಾತ್ಮಕ ರೋಗಾವಸ್ಥೆಗೆ ಸಂಬಂಧಿಸುತ್ತಾರೆ. ವಿಷಯವು ಏನೇ ಇರಲಿ, ಸಮಸ್ಯೆಯ ಮೂಲಕ್ಕೆ ಹೋಗುವುದು ಅದನ್ನು ಜಯಿಸುವಂತೆ ನಿಮಗೆ ಸಹಾಯ ಮಾಡಬಹುದು. ಕೀರ್ತನೆಗಾರನು ಪ್ರಾರ್ಥಿಸಿದ್ದು: “ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗೊತ್ತುಮಾಡು. ನಾನು ಕೇಡಿನ ಮಾರ್ಗದಲ್ಲಿರುತ್ತೇನೋ ಏನೋ ನೋಡಿ ಸನಾತನಮಾರ್ಗದಲ್ಲಿ ನನ್ನನ್ನು ನಡಿಸು.” (ಕೀರ್ತನೆ 139:23, 24) ವ್ಯಾಕುಲಗೊಳಿಸುವ ನಿಮ್ಮ ಆಲೋಚನೆಗಳನ್ನು ಒಬ್ಬ ಬಲಿತ ಕ್ರೈಸ್ತನೊಂದಿಗೆ, ಬಹುಶಃ ಸಭೆಯ ಒಬ್ಬ ಹಿರಿಯರೊಂದಿಗೆ ಚರ್ಚಿಸುವುದು, ಯಾಕೆ ನೀವು ಜೂಜಾಡುತ್ತೀರಿ ಮತ್ತು ನಿಮ್ಮ ಯೋಚನೆಗಳನ್ನು ಮತ್ತು ನಡವಳಿಕೆಯ ರೀತಿಗಳನ್ನು ಬದಲಾಯಿಸಲು ನೀವೇನು ಮಾಡಬೇಕು ಎಂಬದನ್ನು ನೀವು ತಿಳಿಯುವಂತೆ ಸಹಾಯಮಾಡಲು ಹೆಚ್ಚನ್ನು ಮಾಡಬಹುದು.a
“ಕೊಂಚ ಮಟ್ಟಿಗೆ ಉತ್ತಮವಾದದ್ದು”
ಕಿಟ್ವ್ ಕಂಪಲ್ಸಿವ್ ಗ್ಯಾಂಬ್ಲಿಂಗ್ ಎಂಬ ಪುಸ್ತಕಕ್ಕೆ ಅನುಗುಣವಾಗಿ, ತ್ಯಜಿಸುವುದು “ಸಮಸ್ಯೆಯ ವಿರುದ್ಧ ಹೋರಾಟದಲ್ಲಿ ಕೇವಲ ಪ್ರಥಮ [ಹೆಜ್ಜೆ]ಯಾಗಿದೆ.” ನಿಮ್ಮ ಜೀವನ ಶೈಲಿಯಲ್ಲಿ ಸಹ ತೀವ್ರವಾದ ಬದಲಾವಣೆಗಳು ಮಾಡಲ್ಪಡಬೇಕು. ಒಂದು ತಪ್ಪುದಾರಿಗೆ ಮತ್ತೆ ಇಳಿಯುವುದನ್ನು ತಡೆಯಲಿಕ್ಕಾಗಿ, ನೀವು ಹಿಂದಿನ ಜೂಜಾಟದ ಜೊತೆಗಾರರನ್ನು ತೊರೆಯಬೇಕು ಮತ್ತು ಇಸ್ಪೀಟಾಟ, ಮೋಜು ಮಂದಿರ, ಮತ್ತು ಇನ್ನು ಮುಂತಾದವುಗಳಂಥ ಹಳೆಯ ಜೂಜಾಟದ ಕಟ್ಟುಗಳಿಂದ ದೂರವಿರಬೇಕು. (ಜ್ಞಾನೋಕ್ತಿ 13:20) ಸ್ವತಃ ನಿಮ್ಮನ್ನೇ ಬೇರ್ಪಡಿಸಿಕೊಳ್ಳುವುದು ಎಂದು ಇದರ ಅರ್ಥವಲ್ಲ. (ಜ್ಞಾನೋಕ್ತಿ 18:1) ಕ್ರೈಸ್ತ ಸಭೆಯೊಳಗೆ ಆರೋಗ್ಯಕರವಾದ, ಬೆಂಬಲಕೊಡುವ ಗೆಳೆತನಗಳನ್ನು ಬೆಳೆಸಿಕೊಳ್ಳುವುದಕ್ಕೆ ಕ್ರಿಯೆಗೈಯಿರಿ. ಉತ್ಪನ್ನಕಾರಕ ಕೆಲಸ, ಆತ್ಮಿಕ ಚಟುವಟಿಕೆಗಳು, ಮತ್ತು ಹಿತಕರವಾದ ಮನೋರಂಜನೆಯೊಂದಿಗೆ ನಿಮ್ಮನ್ನು ಕಾರ್ಯಮಗ್ನರಾಗಿರಿಸಿಕೊಳ್ಳಿ.
ಆದಾಗ್ಯೂ, ಹಾಜ್ಕಿನ್ಸೆನ್ ನಮಗೆ ಜ್ಞಾಪಿಸುವುದೇನಂದರೆ, ವ್ಯಸನಿಯು “ಅಲ್ಲಿರುವದಕ್ಕಿಂತಲೂ ತುಸು ಉತ್ತಮವಾದದ್ದು—ಚಟವನ್ನು ತೃಪ್ತಿಪಡಿಸಲು ಪ್ರಯತ್ನಿಸುವುದಕ್ಕಿಂತಲೂ ಹೆಚ್ಚಿನ ಉದ್ದೇಶವು ಜೀವಿತಕ್ಕೆ ಇದೆ ಎಂದು ಅವನು ಗ್ರಹಿಸುವಾಗ” ಮಾತ್ರ ತನ್ನ ಹೋರಾಟದಲ್ಲಿ ಗೆಲ್ಲುತ್ತಾನೆ. ಬೈಬಲು ಒದಗಿಸುವ ನಿರೀಕ್ಷೆಗಿಂತಲೂ ಹೆಚ್ಚು ಉತ್ತಮವಾದದ್ದು ಯಾವುದಾಗಿರಬಲ್ಲದು?
ರಾಡಿ ಎಂಬ ಹೆಸರಿನ ಒಬ್ಬ ವ್ಯಕ್ತಿಯು ಇದನ್ನು ಸತ್ಯವಾದದ್ದಾಗಿ ಕಂಡುಕೊಂಡನು. ಅವನು ಒಬ್ಬ ಹದಿ ವಯಸ್ಕನಾಗಿದ್ದಾಗಿನಿಂದ ಆರಂಭಿಸಿ 25 ವರ್ಷಗಳ ವರೆಗೆ “ಸಂಪೂರ್ಣವಾಗಿ ಜೂಜಾಟದ ವ್ಯಸನಿ”ಯಾಗಿದ್ದನೆಂದು ಅವನು ತಾನೇ ವಿವರಿಸುತ್ತಾನೆ. ಕುದುರೆ ಜೂಜುಗಳು, ನಾಯಿ ಜೂಜುಗಳು, ಫುಟ್ ಬಾಲ್ ಸ್ಪರ್ಧೆ ಫಲಿತಾಂಶದ ಕುರಿತ ಜೂಜುಗಳು, ಇಸ್ಪೀಟಾಟ ಜೂಜುಗಳು—ಎಲ್ಲಾ ವಿಧದ ಜೂಜಾಟವನ್ನು ರಾಡಿಯು ಪ್ರಯತ್ನಿಸಿದ್ದನು. ಆದರೆ ಅನಂತರ ಯೆಹೋವನ ಸಾಕ್ಷಿಗಳಿಂದ ಅವನು ಕಲಿತ ದೇವರ ವಾಕ್ಯದಲ್ಲಿರುವ ಸತ್ಯಗಳನ್ನು ಅನ್ವಯಿಸಿಕೊಳ್ಳಲು ಅವನು ಪ್ರಾರಂಭಿಸಿದನು. ರಾಡಿ ಹೇಳುವುದು: “ಕೇವಲ ಮೂರು ತಿಂಗಳುಗಳಲ್ಲಿ, ಒಂದು ಗಮನಾರ್ಹವಾದ ರೂಪಾಂತರವು ಸಂಭವಿಸಿತು.” ಅವನು ಜೂಜಾಟವನ್ನು ತ್ಯಜಿಸಿದನು, ಮತ್ತು ಇಂದು ಅವನು ಕ್ರೈಸ್ತ ಸಭೆಯಲ್ಲಿ ಒಬ್ಬ ಹಿರಿಯನೋಪಾದಿ ಸೇವೆಮಾಡುತ್ತಿದ್ದಾನೆ.
ಆದರೂ, ಪ್ರಾಯಶಃ, ಬೈಬಲಿನ ಬೋಧನೆಗಳ ಕುರಿತಾದ ಸ್ಪಲ್ಪ ಜ್ಞಾನವನ್ನು ನೀವು ಈಗಾಗಲೇ ಹೊಂದಿರಬಹುದು. ಪ್ರಾರಂಭದಲಿಯ್ಲೆ ಪ್ರಸ್ತಾಪಿಸಲ್ಪಟ್ಟ ಡೇವಿಡ್ ಮತ್ತು ತೋಮಸ್ರಂತೆ, ಇಂದಿನ ತನಕ ಬೈಬಲಿನ ಸತ್ಯಗಳನ್ನು ನಿಮ್ಮದಾಗಿ ಮಾಡಿಕೊಳ್ಳಲು ನೀವು ಸೋತಿರಬಹುದು. ಹಾಗಿರುವುದಾದರೆ, ಬೈಬಲಿನ ಒಂದು ಗಂಭೀರವಾದ ಅಭ್ಯಾಸವನ್ನು ಮಾಡುವ ಮೂಲಕ ‘ದೇವರ ಚಿತ್ತಕ್ಕನುಸಾರವಾಗಿ ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದಾಗಿ ನಿಮ್ಮನ್ನು’ ಯಾಕೆ ರುಜುಪಡಿಸಿಕೊಳ್ಳಬಾರದು? (ರೋಮಾಪುರ 12:2) ಒಮ್ಮೆ ಡೇವಿಡ್ ಮತ್ತು ತೋಮಸ್ ಅವರೇನನ್ನು ಕಲಿತಿದ್ದರೋ ಅದನ್ನು ಅನ್ವಯಿಸಲಾರಂಭಿಸಿದಾಗ ಮತ್ತು ನಿಜ ನಂಬಿಕೆಯನ್ನು ಮತ್ತು ನಿಶಿತ್ಚಾಭಿಪ್ರಾಯವನ್ನು ಬೆಳೆಸಿಕೊಂಡಾಗ, ಒತ್ತಡಕ್ಕೆ ಒಳಗಾದ ಜೂಜಾಟವನ್ನು ಜಯಿಸಲು ಅವರು ಶಕ್ತರಾದರು. ನೀವು ಕೂಡ ಜಯಿಸಸಾಧ್ಯವಿದೆ!
ಒಂದು ಬೈಬಲಭ್ಯಾಸಕ್ಕೆ ನಿಮ್ಮನ್ನು ಅನ್ವಯಿಸಿಕೊಳ್ಳುವುದು—ಜೂಜಾಟಕ್ಕಿಂತಲೂ ಉತ್ತಮವಾದ ಏನನ್ನಾದರೂ—ಭವಿಷ್ಯತ್ತಿಗಾಗಿರುವ ಬೈಬಲಿನ ನಿರೀಕ್ಷೆಯನ್ನು ನಿಮಗೆ ಹೆಚ್ಚು ವಾಸ್ತವವಾದದ್ದಾಗಿ ಮಾಡುವುದು. ಅದೇ ಸಮಯದಲ್ಲಿ, ದೇವರೊಂದಿಗೆ ಒಂದು ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳುವಂತೆ ಅದು ನಿಮಗೆ ಸಹಾಯಮಾಡುವುದು. ಹೀಗೆ ನಿಮ್ಮ ಮನೋಭಾವಗಳನ್ನು ಆತನು ಗ್ರಹಿಸುತ್ತಾನೆಂಬ ಭರವಸೆಯಿಂದ, ಸಹಾಯಕ್ಕಾಗಿ ಆತನಲ್ಲಿ “ಎಡೆಬಿಡದೆ ಪ್ರಾರ್ಥನೆಮಾಡುವ” ಸ್ವತಂತ್ರವಾದ ಅನಿಸಿಕೆ ನಿಮಗಾಗುವುದು. (1 ಥೆಸಲೊನೀಕ 5:17; ಕೀರ್ತನೆ 103:14) ಒತ್ತಾಯಕ್ಕೆ ಒಳಗಾದ ಜೂಜಾಟದ ವಿರುದ್ಧ ಹೋರಾಟದಲ್ಲಿ ಜಯಗಳಿಸಲಿಕ್ಕಾಗಿ ಅಗತ್ಯವಿರುವ ಬಲವನ್ನು ನಿಮಗೆ ಕೊಡುವ ಮೂಲಕ ನಿಮ್ಮ ದೃಢಪ್ರಯತ್ನಗಳಿಗೆ ಆತನು ಪ್ರತಿಫಲಕೊಡುವನು.—ಗಲಾತ್ಯ 6:9; ಫಿಲಿಪ್ಪಿ 4: 13. (g93 8/8)
[ಅಧ್ಯಯನ ಪ್ರಶ್ನೆಗಳು]
a ಚಟದ ನಡವಳಿಕೆಯ ಹಿಡಿತವನ್ನು ಮುರಿಯಲು ವೃತ್ತಿಪರ ಸಲಹೆ ಆವಶ್ಯಕವಾಗಿದೆ ಎಂದು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿರುವ ಅನೇಕರು ನಂಬುತ್ತಾರೆ. ಕ್ರೈಸ್ತನೊಬ್ಬನು ಆಯ್ದುಕೊಳ್ಳುವ ಚಿಕಿತ್ಸೆಯು ಬೈಬಲಿನ ನಿಯಮಗಳೊಂದಿಗೆ ಅಸಂಗತವಾಗಿರದೆ ಇರುವುದಾದರೆ, ಇದೊಂದು ಕಟ್ಟುನಿಟ್ಟಿನ ವೈಯಕ್ತಿಕ ನಿರ್ಣಯವಾಗಿದೆ.
[ಪುಟ 17 ರಲ್ಲಿರುವ ಚಿತ್ರ]
ಅವರ ಜೂಜಾಟದ ಹವ್ಯಾಸವನ್ನು ಬೆಂಬಲಿಸಲಿಕ್ಕಾಗಿ ಸುಳ್ಳಾಡುವಿಕೆಯನ್ನು ಮತ್ತು ಕಳ್ಳತನವನ್ನು ಜೂಜುಕೋರರು ಆಗಾಗ್ಗೆ ಆಶ್ರಯಿಸುತ್ತಾರೆ