ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g93 11/8 ಪು. 30-31
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1993
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮಾಟಗಾತಿ-ಬೇಟೆಯಾಡುವುದು ಇನ್ನೂ ಆಸ್ತಿತ್ವದಲ್ಲಿದೆ
  • ಮಹಿಳಾ ಪತ್ತೇದಾರಿಗಳು
  • ತಂದೆಗಳು ಕೂಡ ದೂಷಾರ್ಹರು
  • ಇನ್ನೊಂದು ಸರ್ವವ್ಯಾಪಿ ಫ್ಲೂ?
  • ಕಿವಿಯುಂಗುರಗಳನ್ನು ಹಂಚಿಕೊಳ್ಳುವುದು—ಒಂದು ಆರೋಗ್ಯ ಗಂಡಾಂತರ
  • ಸಾಕಷ್ಟು ಆಹಾರವಿದೆ, ಆದರೆ ನ್ಯೂನ ಪೋಷಣೆಯು ಮುಂದುವರಿಯುತ್ತಿದೆ
  • ಹಾನಿಕಾರಕ ಮನೋರಂಜನೆ
  • ನಾಣ್ಯ ಭಕ್ಷಕರು
  • ಕೆಫೀನ್‌ (ಸಸ್ಯಕ್ಷಾರ)ನ ಮೇಲೆ ಆರೋಪ ಹೊರಿಸುವುದು
  • ಕೊಲಂಬಿಯದಲ್ಲಿ ಗರ್ಭಪಾತಗಳು
  • ಜಗತ್ತನ್ನು ಗಮನಿಸುವುದು
    ಎಚ್ಚರ!—1994
  • ಹಿಂಸಾಚಾರ ಮನೆಗೆ ಹೊಡೆಯುವಾಗ
    ಎಚ್ಚರ!—1993
  • ಸ್ತ್ರೀಯರನ್ನು ಮತ್ತು ಅವರ ಕೆಲಸವನ್ನು ಗಣ್ಯಮಾಡುವುದು
    ಎಚ್ಚರ!—1998
  • ಜಗತ್ತನ್ನು ಗಮನಿಸುವುದು
    ಎಚ್ಚರ!—1995
ಇನ್ನಷ್ಟು
ಎಚ್ಚರ!—1993
g93 11/8 ಪು. 30-31

ಜಗತ್ತನ್ನು ಗಮನಿಸುವುದು

ಮಾಟಗಾತಿ-ಬೇಟೆಯಾಡುವುದು ಇನ್ನೂ ಆಸ್ತಿತ್ವದಲ್ಲಿದೆ

ಭಾರತದ ಹಿನ್ನಾಡುಗಳ ಬುಡಕಟ್ಟುಗಳಲ್ಲಿ, ಮಾಟಗಾತಿಯರೆಂದು ಕಳಂಕಿತರಾದ, ಡಜನ್ನಿಗಿಂತ ಹೆಚ್ಚು ಹೆಂಗಸರು ಭ್ರಮಾವೇಶದ ದೊಂಬಿಗಳ ಮೂಲಕ ಎರಡು ತಿಂಗಳುಗಳಾವಧಿಯಲ್ಲಿ ಕೊಲ್ಲಲ್ಪಟ್ಟರೆಂದು ಇಂಡಿಯಾ ಟುಡೇ ವರದಿಸುತ್ತದೆ. “ಹಲವು ಇತರ ಹೆಂಗಸರು ಹೊಡೆಯಲ್ಪಟ್ಟರು, ಹಿಂಸಿಸಲ್ಪಟ್ಟರು, ವಿವಸ್ತ್ರರಾಗಿಸಿ ಮೆರವಣಿಗೆ ನಡೆಸಲ್ಪಟ್ಟರು, ಅತೀ ಪಶುಪ್ರಾಯ ವಿಧದಲ್ಲಿ ಅಪಮಾನಕ್ಕೀಡುಮಾಡಲ್ಪಟ್ಟರು ಮತ್ತು ಅವರ ಹಳ್ಳಿಗಳಿಂದ ಹೊರಕ್ಕಟ್ಟಲ್ಪಟ್ಟರು.” ಹಳ್ಳಿಯಿಂದ ಹಳ್ಳಿಗೆ ಹೋದ ಧಾರ್ಮಿಕ ಮೆರವಣಿಗೆಗಳೊಂದಿಗೆ ಆ ಆವೇಶ ತಲೆದೋರಿತು. ಈ ಆಚರಣೆಯು ಸಮಾಜ ಸುಧಾರಣಾ ಚಳುವಳಿಗೆ ಮತ್ತು ಅಪರಾಧಗಳ ತಗ್ಗುವಿಕೆಗೆ ನಡೆಸಿತು. ಆದರೆ ಮೆರವಣಿಗೆಯಲ್ಲಿ ಭಾಗವಹಿಸಿದ ಕೆಲವು ಹೆಂಗಸರ ಮೇಲೆ “ದೆವ್ವ ಬಂತು” ಮತ್ತು ಸ್ಥಳಿಕ ಸಮಸ್ಯೆಗಳಿಗೆ ಜವಾಬ್ದಾರರಾದ ಮಾಟಗಾತಿಯರೆಂದು ಹಳ್ಳಿಯ ನಿರ್ದಿಷ್ಟ ಸ್ತ್ರೀಯರನ್ನು ಗುರುತಿಸಲಾರಂಭಿಸಿದರು. ಯಾರನ್ನಾದರೂ ಕೊಂದಿರುವ ಅಪರಾಧವಿರುವಲ್ಲಿ ಆ ವ್ಯಕ್ತಿಯನ್ನು ಪುನರುತ್ಥಾನಗೊಳಿಸುವಂತಹ ನಿರಪರಾಧದ “ಪರೀಕ್ಷೆ”ಯಲ್ಲಿ ಉತ್ತೀರ್ಣರಾಗಲು ತಪ್ಪುವುದು ಅಂದರೆ ತತ್‌ಕ್ಷಣದ ಪ್ರತೀಕಾರದ ಅರ್ಥದಲ್ಲಿತ್ತು. ಮಾಟಮಂತ್ರದಲ್ಲಿನ ನಂಬಿಕೆಯು ಮೂಲ ಕಾರಣವಾಗಿತ್ತೆಂದು ಹೇಳಲಾಗಿದೆ ಮತ್ತು, ಒಂದು ಮಾನವ ಶಾಸ್ತ್ರಜ್ಞನಿಗನುಸಾರ, “ಅದು ಅತಿಲೌಕಿಕವಾದುದನ್ನು ಹಿಡಿತದಲ್ಲಿಟ್ಟು ಬಳಸಲು, ಕೆಡುಕು ನೋಟದ ವಿರುದ್ಧ ಶಕ್ತಿ ಇರಲು, ಅವರ ಬಯಕೆಯ ಗುರಿಗಳನ್ನು ಪಡೆಯಲು ಶಕ್ತಿ ಮತ್ತು ಅವರ ಇಚ್ಛೆಯನ್ನು ಇತರರ ಮೇಲೆ ಬಲಾತ್ಕರಿಸಲು ಶಕ್ತಿಯನ್ನು ಹೊಂದಲು ಬುಡಕಟ್ಟು ಸಮಾಜಗಳಲ್ಲಿನ ಒಂದು ಪ್ರಚೋದನೆಯಿಂದ ಪರಿಣಮಿಸುತ್ತದೆ.” (g93 7/22)

ಮಹಿಳಾ ಪತ್ತೇದಾರಿಗಳು

“ಮುಂದಿನ ಶೆರ್ಲಾಕ್‌ ಹೋಮ್ಸ್‌ ಸ್ತ್ರೀಯಾಗಿರಬಹುದು,” ಎಂದು ಜಪಾನಿನ ಆಸಾಹಿ ಈವ್ನಿಂಗ್‌ ನ್ಯೂಸ್‌ ಹೇಳುತ್ತದೆ. ಟೊಕ್ಯೊದಲ್ಲಿನ ಒಂದು ಹೊಸ ಶಾಲೆಯಲ್ಲಿ, ಮುನ್ನೂರು ವಿದ್ಯಾರ್ಥಿಗಳು ಪತ್ತೇದಾರಿಗಳಾಗಲು ತರಬೇತಿ ಪಡೆಯುತ್ತಿದ್ದಾರೆ, ಮತ್ತು ಅವರಲ್ಲಿ ಮೂರರಲ್ಲಿ ಎರಡು ಪಾಲುಗಳಿಗಿಂತಲೂ ಹೆಚ್ಚಿನವರು, ಹೆಚ್ಚಾಗಿ ಅವರ 20ರುಗಳ ಆರಂಭದಿಂದ 40ರುಗಳ ಆರಂಭದ ವರೆಗಿನ ಪ್ರಾಯದ ಹೆಂಗಸರಾಗಿದ್ದಾರೆ. ಪತ್ತೇದಾರಿತನವು ಅವರಿಗೆ ವಿವಿಧ ಕಾರಣಗಳಿಗಾಗಿ ಇಷ್ಟವಾಗುತ್ತದೆ. ಒಬ್ಬಾಕೆ 46 ವರುಷ ಪ್ರಾಯದ ಗೃಹಿಣಿಯು ಶಾಲೆಯಲ್ಲಿ ಹೆಸರು ನೊಂದಾಯಿಸಿಕೊಂಡಳು ಯಾಕಂದರೆ “ಅವಳು ಹೂವುಗಳನ್ನು ಏರ್ಪಡಿಸುವುದು ಹೇಗೆ ಮತ್ತು ಸರಿಯಾಗಿ ಕಿಮೊನೊವನ್ನು ಧರಿಸುವುದು ಹೇಗೆ ಎಂದು ಕಲಿಸುವ ಸಾಂಪ್ರದಾಯಿಕ ಪಾಠಕ್ರಮಗಳೊಂದಿಗೆ ಸಂತೃಪ್ತಿಗೊಂಡಿರಲಿಲ್ಲ.” ಇತರರಿಗಾದರೊ, ಆ ಅಧ್ಯಯನವು ಹವ್ಯಾಸಕ್ಕಿಂತಲೂ ಹೆಚ್ಚಿನದ್ದಾಗಿದೆ. ಶಾಲೆಯಲ್ಲಿನ ಅರ್ಧಕ್ಕಿಂತಲೂ ಹೆಚ್ಚಿನ ಗೃಹಿಣಿಯರು ತಮ್ಮ ಗಂಡಂದಿರಿಗೆ ಹೇಳಿರುವುದಿಲ್ಲ. ಅವರಲ್ಲಿ ಕೆಲವರು ಅವರ ಅಪನಂಬಿಗಸ್ತ ಸಂಗಾತಿಗಳ ತನಿಖೆ ನಡೆಸಲು ಕೌಶಲಗಳನ್ನು ಗಳಿಸುತ್ತಿದ್ದಾರೆ. (g93 8/8)

ತಂದೆಗಳು ಕೂಡ ದೂಷಾರ್ಹರು

ಸ್ವಲ್ಪ ಸಮಯದ ಹಿಂದೆ, ತಾಯಂದಿರಾಗುವವರು ಮದ್ಯ ಮತ್ತು ಧೂಮಪಾನದಂಥ, ಜನ್ಮ ನ್ಯೂನತೆಗಳನ್ನುಂಟು ಮಾಡಬಹುದಾದ ವಸ್ತುಗಳನ್ನು ತಡೆಯುವಂತೆ ಮತ್ತು ಪೋಷಣೆಯ ಆಹಾರವನ್ನು ತಿನ್ನುವಂತೆ ಎಚ್ಚರಿಸಲ್ಪಟ್ಟಿದ್ದರು. “ಈಗ, ಅದೇ ರೀತಿಯ ಮುಂಜಾಗ್ರತೆಗಳನ್ನು ತಂದೆಗಳಾಗಲಿರುವವರಿಗೂ ಒತ್ತಾಯಿಸಲಾಗಿವೆ” ಎಂದು ಯು.ಎಸ್‌.ನ್ಯೂಸ್‌ ಆ್ಯಂಡ್‌ ವರ್ಲ್ಡ್‌ ರಿಪೋರ್ಟ್‌ ಹೇಳುತ್ತದೆ. “ರಾಸಾಯನಕ್ಕೆ ಪುರುಷನ ಒಡ್ಡುವಿಕೆಯು ಒಂದು ಮಗುವಿನ ತಂದೆಯಾಗುವ ಅವನ ಸಾಮರ್ಥ್ಯದ ಮೇಲೆ ಮಾತ್ರವಲ್ಲದೆ ಅವನ ಮಕ್ಕಳ ಭವಿಷ್ಯತ್ತಿನ ಆರೋಗ್ಯದ ಮೇಲೆಯೂ ಪ್ರಭಾವ ಬೀರುತ್ತದೆ ಎಂದು ಹೊಸ ಸಂಶೋಧನೆಯು ಸೂಚಿಸುತ್ತದೆ.” ಪುರುಷರು “ಹಿಂದೆ ತಿಳುಕೊಂಡಿದ್ದಕ್ಕಿಂತಲೂ ಅತಿ ಹೆಚ್ಚಾಗಿ ಅವರ ಹೆಂಡತಿಯರಲ್ಲಿ ಗರ್ಭಸ್ರಾವ ಮತ್ತೂ ವಿವಿಧ ವಿಕಾರ ರಚನೆಗಳಿಗೆ, ಕ್ಯಾನ್ಸರ್‌ಗಳಿಗೆ ಮತ್ತು ಅವರ ಮಕ್ಕಳಲ್ಲಿನ ಬೆಳವಣಿಗೆ ಕುಂಠಿತಗಳಿಗೆ ಸಹಾಯಿಸುತ್ತಾರೆ,” ಎಂದು ರುಜುವಾತು ತೋರಿಸಿಕೊಡುತ್ತದೆ. ಅಮಲೌಷಧಗಳು ಮತ್ತು ಇತರ ರಾಸಾಯನಿಕ ಪದಾರ್ಥಗಳು (ಸಿಗರೇಟನ್ನು ಸೇದುವುದರ ಉಪ ಪದಾರ್ಥಗಳನ್ನು ಸೇರಿಸಿ), ಜೀವಸ್ವತ ಸಿಯಲ್ಲಿ ಸಮೃದ್ಧ ತಕ್ಕಷ್ಟು ತರಕಾರಿ ಮತ್ತು ಹಣ್ಣುಹಂಪಲುಗಳ ಕೊರತೆಯ ಆಹಾರಕ್ರಮವು ಕೂಡ, ವೀರ್ಯವನ್ನು ಕೆಡಿಸುತ್ತದೆ. “ಅತಿ ದೀರ್ಘ ಕಾಲದಿಂದ ನಾವು ಕೇವಲ ತಾಯಂದಿರ ಮೇಲೆ ಕೇಂದ್ರೀಕರಿಸಿದ್ದೆವು. ಆರೋಗ್ಯಕರ ಶಿಶುಗಳನ್ನು ಮಾಡುವುದರಲ್ಲಿ ತಂದೆಯ ಪ್ರಾಮುಖ್ಯತೆಯು ಕಡಮೆ ಗಣ್ಯ ಮಾಡಲ್ಪಡುತ್ತಿತ್ತು,” ಎಂದು ವಿಷ ಶಾಸ್ತ್ರಜ್ಞೆ ಡೆವ್ರ ಲೀ ಡೇವಿಸ್‌ ಹೇಳುತ್ತಾಳೆ. (g93 7/22)

ಇನ್ನೊಂದು ಸರ್ವವ್ಯಾಪಿ ಫ್ಲೂ?

“ಸರ್ವಸಾಮಾನ್ಯವಾಗಿ ಸಂಶಯವಿಲ್ಲದೆ, ಪ್ರಾಯಶಃ ಮುಂದಿನ ಅನೇಕ ವರುಷಗಳಲ್ಲಿ, ಸರ್ವವ್ಯಾಪಿ ಫ್ಲೂ ಬಿಡುಗಡೆ ಹೊಂದುವಾಗ ಒಂದು ದೊಡ್ಡ ವ್ಯಾಧಿಯಾಗುವುದು,” ಎಂದು ದ ನ್ಯೂ ಯಾರ್ಕ್‌ ಟೈಮ್ಸ್‌ ಮ್ಯಾಗಜಿನ್‌ ಹೇಳುತ್ತದೆ. ವಿಜ್ಞಾನಿಗಳಿಗನುಸಾರ, ಇಸವಿ 1918ರಲ್ಲಿ 2 ಕೋಟಿಯಿಂದ 4 ಕೋಟಿ ಜನರನ್ನು ಕೊಂದಂತಹದ್ದೇ ಫ್ಲೂವಿನ ಸಾಂಕ್ರಾಮಿಕ ರೋಗಕ್ಕೆ ಸಮಯವು ಪಕ್ವವಾಗಿದೆ. “ಒಮ್ಮೆ ಸಂಭವಿಸಿದಲ್ಲಿ, ಇನ್ನೊಮ್ಮೆ ಸಂಭವಿಸುವ ಪ್ರತಿಯೊಂದು ನಿರೀಕ್ಷಣೆಗಳು ಇವೆ,” ಎಂದು ಮೇರಿಲ್ಯಾಂಡ್‌ನ, ಬೆತ್ಡೆಸಾದಲ್ಲಿನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆ್ಯಲರ್ಜಿ ಆ್ಯಂಡ್‌ ಇನ್‌ಫೆಕ್‌ಷಸ್‌ ಡಿಜೀಜಸ್‌ನ ಸಾಂಕ್ರಾಮಿಕ ರೋಗಗಳ ಮುಖ್ಯಸ್ಥ ಜಾನ್‌ ಆರ್‌. ಲ ಮಾನ್ಟೆಗ್ನೇ ಹೇಳುತ್ತಾರೆ. ಆದಾಗ್ಯೂ, ಇನ್‌ಫ್ಲುಯೆನ್ಸದ ಸರ್ವವ್ಯಾಪಿ ಒತ್ತಡಗಳನ್ನು ರಚಿಸುವ ವಿಷಾಣು ಬದಲಾವಣೆಗಳು ವಿರಳವಾಗಿವೆ. ಅವು ಈ ಶತಮಾನದಲ್ಲಿ ಕೇವಲ ಮೂರು ಬಾರಿ ಸಂಭವಿಸಿವೆ: ಸ್ಪ್ಯಾನಿಷ್‌ ಫ್ಲೂ ಎಂದು ಕರೆಯಲ್ಪಡುವಂಥಾದ್ದು 1918ರಲ್ಲಿ, ಏಶಿಯನ್‌ ಫ್ಲೂ 1957ರಲ್ಲಿ, ಮತ್ತು ಹಾಂಗ್‌ ಕಾಂಗ್‌ ಫ್ಲೂ 1968ರಲ್ಲಿ; ಮತ್ತು ಕೊನೆಯ ಎರಡು ಫ್ಲೂಗಳು ಸಾಪೇಕ್ಷತೆಯಲ್ಲಿ ತೀವ್ರವಾದವುಗಳಾಗಿರಲಿಲ್ಲ. ಇನ್‌ಫ್ಲುಯೆನ್ಸದ ವಿಷಾಣುಗಳು ಪದೇ ಪದೇ ಮತ್ತು ಅನಿರೀಕ್ಷಿತವಾಗಿ ಬದಲಾಗುವುದರಿಂದ, ನಿಷ್ಕೃಷ್ಟ ಲಸಿಕೆಯನ್ನು ವಿಕಸಿಸಬಹುದಾಗುವ ಮುಂಚೆ ಒಂದು ಮಾರಕ ತಲೆದೋರುವಿಕೆಯು ಸಂಭವಿಸಬಹುದು. ಆ ಲೇಖನವು ತೀರ್ಮಾನಿಸುವುದು: “ಇತಿಹಾಸವು ಮಾರ್ಗದರ್ಶಿಯಾಗಿರುವಲ್ಲಿ, ಈ ಶತಮಾನವು ಮುಗಿಯುವುದರೊಳಗೆ ಆ ಪ್ರತಿವಿಷಜನಕಗಳ—ತೀವ್ರ ಫ್ಲೂವಿನ ಲೋಕ ವ್ಯಾಪಕ ತಲೆದೋರುವಿಕೆಗೆ ನಡೆಸುವಷ್ಟು ದೊಡ್ಡದಾಗಿರುವ—ಮಾರ್ಪಾಟನ್ನು ಪ್ರಾಯಶಃ ನಾವು ನಿರೀಕ್ಷಿಸಬಹುದು.” (g93 7/22)

ಕಿವಿಯುಂಗುರಗಳನ್ನು ಹಂಚಿಕೊಳ್ಳುವುದು—ಒಂದು ಆರೋಗ್ಯ ಗಂಡಾಂತರ

“ರಕ್ತದೊಂದಿಗೆ ಕಲುಷಿತ ಕಿವಿಯುಂಗುರಗಳು ಯಕೃತುದ್ರೇಕ [ಹೆಪಟೈಟಿಸ್‌] ಬಿ ಮತ್ತು ಮಾನವ ಸೋಂಕುರಕ್ಷಾವನತಿಯ ವಿಷಾಣುವನ್ನು ಸೇರಿಸಿ ಅನೇಕ ಜೀವಾಣುಗಳೊಂದಿಗೆ ಸೋಂಕಿನ ಸಾಮರ್ಥ್ಯವುಳ್ಳ ಮೂಲಗಳಾಗಿವೆ” ಎಂದು ಒಹೈಯೊ ಸ್ಟೇಟ್‌ ಯೂನಿವರ್ಸಿಟಿ ಆ್ಯಂಡ್‌ ಚಿಲ್ಡ್ರನ್ಸ್‌ ಹಾಸ್ಪಿಟಲ್‌ನಲ್ಲಿ ವೈದ್ಯರಾಗಿರುವ, ಫಿಲಿಪ್‌ ಡಿ. ವಾಲ್ಸನ್‌ ಮತ್ತು ಮೈಕಲ್‌ ಟಿ. ಬ್ರ್ಯಾಡಿ ಹೇಳುತ್ತಾರೆ. ಅಮೆರಿಕದ ವೈದ್ಯಕೀಯ ಪತ್ರಿಕೆ ಪೆಡಿಯಾಟ್ರಿಕ್ಸ್‌ನಲ್ಲಿ ಪ್ರಕಟಿಸಲಾದ ಜಂಟಿ ಪತ್ರದಲ್ಲಿ, ಕ್ರಿಮಿಶುದ್ಧಿಮಾಡಲಾಗದ ಕಿವಿಯುಂಗುರಗಳನ್ನು ಹಂಚಿಕೊಳ್ಳುವ ಬಹು ವ್ಯಾಪಕವಾಗಿ ಕಂಡುಬರುವ ಆಚರಣೆಯ ಮೇಲೆ ಚಿಂತೆಯನ್ನು ವ್ಯಕ್ತಪಡಿಸಲಾಯಿತು. ಕಿವಿಯುಂಗುರಗಳನ್ನು ಹಂಚಿಕೊಳ್ಳುವ ಪ್ರಾಯಸ್ಥರು ಮತ್ತು ಯುವ ವಯಸ್ಕರು ಲೈಂಗಿಕ ಚಟುವಟಿಕೆ ಮತ್ತು ಸೂಜಿಗಳನ್ನು ಹಂಚಿಕೊಳ್ಳುವಿಕೆಯೊಂದಿಗೆ ಸಂಬಂಧಿತ ಆರೋಗ್ಯ ಗಂಡಾಂತರಗಳನ್ನು ಅರಿತವರಾಗಿರಬಹುದು—ಆದರೆ ಈ ಆಚರಣೆಯೊಂದಿಗಿನ ಗಂಡಾಂತರಗಳ ಬಗ್ಗೆ ಅವರಿಗೆ ತಿಳಿದಿಲ್ಲ. ಅದಕ್ಕೆ “ರಕ್ತವಾಹಕ ರೋಗಗಳ ಹರಡುವಿಕೆಗೆ ಸಾಮರ್ಥ್ಯವುಂಟು,” ಎಂದು ಇಬ್ಬರೂ ವೈದ್ಯರು ಹೇಳುತ್ತಾರೆ. ವೈದ್ಯರು “ಅವರ ರೋಗಿಗಳಿಗೆ ಈ ಆಚರಣೆಯನ್ನು ಬಿಡಲು ಪ್ರೇರಿಸುವಂತೆ” ಅವರು ಶಿಫಾರಸ್ಸು ಮಾಡುತ್ತಾರೆ. (g93 8/8)

ಸಾಕಷ್ಟು ಆಹಾರವಿದೆ, ಆದರೆ ನ್ಯೂನ ಪೋಷಣೆಯು ಮುಂದುವರಿಯುತ್ತಿದೆ

ಲೋಕದ ಜನಸಂಖ್ಯೆಯು ಗಣನೀಯವಾಗಿ ಅಭಿವೃದ್ಧಿಯಾಗಿರುವುದಾದರೂ, 20 ವರ್ಷಗಳಿಗಿಂತಲೂ ಹಿಂದೆ ಇದ್ದುದಕ್ಕಿಂತಲೂ ಈಗ ಬಡ ದೇಶಗಳಲ್ಲಿ 15 ಕೋಟಿಗಿಂತಲೂ ಕಡಿಮೆ ನ್ಯೂನ ಪೋಷಿತ ಜನರು ಅಲ್ಲಿದ್ದಾರೆ. “ಜನಸಂಖ್ಯೆಯ ಬೆಳವಣಿಗೆಯಷ್ಟೇ ಪ್ರಮಾಣದಲ್ಲಿ ರೈತರು ಆಹಾರದ ಉತ್ಪಾದನೆಯನ್ನು ಹೆಚ್ಚಿಸಿದ್ದಾರೆ ಮತ್ತು ಅದನ್ನೂ ಮೀರಿಸಿದ್ದಾರೆ” ಎಂದು ಯುಎನ್‌ನ ಆಹಾರ ಮತ್ತು ವ್ಯವಸಾಯ ಇಲಾಖೆಯ ನಿರ್ದೇಶಕರಾದ ಜಾನ್‌ ಲೂಪ್‌ಎನ್‌ ಹೇಳುತ್ತಾರೆ. “ವಾಸ್ತವದಲ್ಲಿ ಅದರ ಆವಶ್ಯಕತೆಯಿರುವ ಜನರಿಗೆ ಅದು ತಲಪುವುದಾದರೆ, ಈಗಾಗಲೇ ಪ್ರತಿಯೊಬ್ಬರಿಗೆ ಉಣಿಸುವಷ್ಟು ಆಹಾರವು ಅಲ್ಲಿದೆ.” ವಿಷಾದಕರವಾಗಿ, ದ ಈಕೊನಾಮಿಸ್ಟ್‌ ವರದಿಮಾಡುವುದು, “ಬಡ ದೇಶಗಳಲ್ಲಿ ಸುಮಾರು 78 ಕೋಟಿ ಜನರು, ಅವರ ಜನಸಂಖ್ಯೆಯ ಐವರಲ್ಲಿ ಒಬ್ಬರು ತಿನ್ನಲು ಸಾಕಾಗುವಷ್ಟು ಆಹಾರವನ್ನೂ ಹೊಂದಿರುವುದಿಲ್ಲ. ಸುಮಾರು 2,000 ಕೋಟಿ ಜನರು ಅವರಿಗೆ ಅಗತ್ಯವಿರುವ ಜೀವಸ್ವತಗಳು ಮತ್ತು ಖನಿಜ ಪದಾರ್ಥಗಳ ಕೊರತೆಯಿರುವ ಆದರೂ, ಹಸಿವೆಯನ್ನು ನೀಗಿಸುವುದಕ್ಕೆ ಸಾಕಾಗುವಷ್ಟು ಆಹಾರವನ್ನು ಪಡೆಯುತ್ತಿದ್ದಾರೆ. . . . ಸ್ವಲ್ಪ ಮಟ್ಟಿಗೆ ನ್ಯೂನ ಪೋಷಣೆಯು ಎಲ್ಲಾ ರೀತಿಯ ರೋಗಕ್ಕೆ ಅವರು ಈಡಾಗುವಂತೆ ಮಾಡುವ ಕಾರಣದಿಂದ ಪ್ರತಿ ದಿನ 40,000ದಷ್ಟು ಎಳೆಯ ಮಕ್ಕಳು ಸಾಯುತ್ತಾರೆ.” ಇನ್ನೊಂದು ಕಡೆಯಲ್ಲಿ, ಅಧಿಕ ಪುಷ್ಟಿಕರವಾದ ಆಹಾರವು ಕೂಡ, ಹೃದ್ರೋಗ ಮತ್ತು ಸಮಾಜದ ಶ್ರೀಮಂತ ವರ್ಗಗಳವರಲ್ಲಿಯೂ ಕ್ಯಾನ್ಸರ್‌ನಂತಹ ನಿರ್ದಿಷ್ಟ ವ್ಯಾಧಿಗಳನ್ನೊಳಗೊಂಡು ಹಾನಿಕಾರಕ ಪರಿಣಾಮಗಳನ್ನುಂಟುಮಾಡುತ್ತಾ ಇದೆ. (g93 7/22)

ಹಾನಿಕಾರಕ ಮನೋರಂಜನೆ

“ಧರ್ಮನಿಂದೆ, ನಗ್ನತೆ, ಲೈಂಗಿಕತೆ, ಬಲಾತ್ಕಾರ ಮತ್ತು ಕೊಲೆಗಳ ಕೊನೆಯಿಲ್ಲದ ಪ್ರವಾಹದಿಂದ ಚಿತ್ರಗಳು ತುಂಬಿರುವುದರಿಂದ ಚಲನಚಿತ್ರದ ಉದ್ಯಮವು ತಲೆ ತಗ್ಗಿಸಬೇಕಾಗಿದೆ.” ಈ ಹೇಳಿಕೆಯು ಅಮೆರಿಕದ ಟುಡೇ ವಾರ್ತಾಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಾಶಿಸಲ್ಪಟ್ಟ ಒಂದು ಸಂಪೂರ್ಣ ಪುಟದ ಜಾಹೀರಾತಿನ ಭಾಗವಾಗಿತ್ತು. ಜಾಹೀರಾತಿಗನುಸಾರ, ಒಂದು ಪ್ರಧಾನವಾದ ಟೀವೀ ನೆಟ್‌ವರ್ಕ್‌ ಒಂದು ಕಾರ್ಯಕ್ರಮವನ್ನು ಅನುಮೋದಿಸಿದ್ದು ಅದು “ಮುಷ್ಟಿಮೈಥುನದ ಕುರಿತಾದ ವಿಡಂಬನೆಗಳನ್ನು ಹೆಚ್ಚಿಸುವಂತಹ, ಶವ ಸಂಸ್ಕಾರ ವ್ಯವಸ್ಥಾಪಕರುಗಳು ಮೃತ ಜನರೊಂದಿಗೆ ಲೈಂಗಿಕತೆಯನ್ನು ಹೊಂದುತ್ತಿರುವಂಥದ್ದಾಗಿದ್ದು ಯುವಜನರಿಗೆ ಅಚ್ಚುಮೆಚ್ಚಿನದ್ದಾಗಿತ್ತು,” ಮತ್ತು ಇತರ ಆಕ್ಷೇಪಣೀಯ ವಿಚಾರಗಳಿಂದ ಒಳಗೂಡಿದ್ದಾಗಿತ್ತು. ಟೀವೀ ಕಾರ್ಯಕ್ರಮಗಳನ್ನು ವೀಕ್ಷಿಸುವುದರಿಂದ, “2,00,000ಕ್ಕಿಂತಲೂ ಹೆಚ್ಚಿನ ಬಲಾತ್ಕಾರ ಕೃತ್ಯಗಳು ಮತ್ತು 33,000 ಕೊಲೆಗಳನ್ನು ಸಾಮಾನ್ಯವಾಗಿ 16 ವರ್ಷ ಪ್ರಾಯದ ಸರಾಸರಿ ಮಗುವು ಕಂಡಿದೆ,” ಎಂದು ಜಾಹೀರಾತು ಗಮನಿಸಿತು. (g93 8/8)

ನಾಣ್ಯ ಭಕ್ಷಕರು

ಪ್ರತಿ ವರ್ಷ ಸಾವಿರಗಟ್ಟಲೆ ಎಳೆಯ ಮಕ್ಕಳು ನಾಣ್ಯಗಳನ್ನು ನುಂಗಿದ ಅನಂತರ ದುಬಾರಿಯಾದ ಎಕ್ಸ್‌ರೇಗಳಿಗಾಗಿ ಆಸ್ಪತ್ರೆಯ ತುರ್ತುಚಿಕಿತ್ಸೆಯ ಕೊಠಡಿಗಳಿಗೆ ಕರೆದೊಯ್ಯಲ್ಪಡುತ್ತಾರೆ. ಈ ಅಧಿಕಾಂಶ ನಾಣ್ಯಗಳು ದೇಹದ ಮೂಲಕ ಸುರಕ್ಷಿತವಾಗಿ ಹೊರಬರುತ್ತವೆ, ಆದರೆ ಕೆಲವೊಮ್ಮೆ ಒಂದು ನಾಣ್ಯವು ಅನ್ನನಾಳದಲ್ಲಿ ಸಿಕ್ಕಿಕೊಳ್ಳುತ್ತದೆ, ಮತ್ತು ಆಂತರಿಕ ರಕ್ತಸ್ರಾವ, ಸಾಂಕ್ರಾಮಿಕ ರೋಗ, ಮತ್ತು ಅನ್ನನಾಳವನ್ನು ಅದು ರಂಧ್ರಮಾಡುವಾಗ ಕೆಲವೊಮ್ಮೆ ಮರಣಕ್ಕೆ ಕೂಡ ಕಾರಣವಾಗುತ್ತದೆ. ವಿಮಾನ ನಿಲ್ದಾಣದಲ್ಲಿ ರಕ್ಷಣಾದಳದಿಂದ ಕೆಲವೊಮ್ಮೆ ಉಪಯೋಗಿಸಲ್ಪಡುವ ತರಹದ ಒಂದು ಸರಳ ಮತ್ತು ಹಿಡಿದುಕೊಳ್ಳುವುದಕ್ಕೆ ಕೈಯಾಸರೆ ಇರುವ ಸಂಪೂರ್ಣ ಸುರಕ್ಷಿತವಾಗಿರುವ ಲೋಹದ ಸಾಧನವು, ಆ ನುಂಗಲ್ಪಟ್ಟ ನಾಣ್ಯವು ಎಲ್ಲಿದೆ ಎಂಬುದನ್ನು ಮಕ್ಕಳ ವೈದ್ಯಕೀಯ ತಜ್ಞರು ಪತ್ತೆಹಚ್ಚಲು ಸಾಧ್ಯವಾಗುವಂತೆ ಅದನ್ನು ರಚಿಸಲಾಗಿದೆ. ಯಂತ್ರತಂತ್ರಜ್ಞರ ಅಭಿವರ್ಧಕರಲ್ಲಿ ಒಬ್ಬರಾದ ಮತ್ತು ಇಲಿನೋಇಜ್‌ನ ಮಕ್ಕಳ ವೈದ್ಯಕೀಯ ಉಪಚಾರದ ತುರ್ತುಚಿಕಿತ್ಸೆಯ ಔಷಧದ ಒಬ್ಬ ನಿರ್ದೇಶಕರೂ ಆದ ಡಾ. ಸೈಮನ್‌ ರಸ್‌, “300 ಡಾಲರುಗಳಿಗಿಂತಲೂ ಹೆಚ್ಚು ಅಧಿಕ ಬೆಲೆಯನ್ನು ಎಲ್ಲಿ ಪತ್ತೆ ಹಚ್ಚುವಿಕೆಯು ಕೇಳಿಕೊಳ್ಳಬಲ್ಲದೊ” ಅಂತಹ ತುರ್ತುಚಿಕಿತ್ಸೆಯ ಕೊಠಡಿಗೆ ಒಂದು ಭೇಟಿಯನ್ನು ಈ ಉಪಕರಣವು ವರ್ಜಿಸಬಹುದು ಎನ್ನುತ್ತಾರೆ. ಈ ತಂತ್ರಕೌಶಲ್ಯವು, ಜರ್ನಲ್‌ ಆಫ್‌ ಪೆಡಿಯಾಟ್ರಿಕ್ಸ್‌ ಆ್ಯಂಡ್‌ ಪೆಡಿಯಾಟ್ರಿಕ್‌ ಎಮರ್ಜೆನ್ಸಿ ಕೇರ್‌ನಲ್ಲಿ ವರದಿಮಾಡಲ್ಪಟ್ಟಿತ್ತು, ಅದು ಬಹುಶಃ ಅದರ ಕಾರ್ಯ ಸಮರ್ಥತೆ ಮತ್ತು ಕಡಿಮೆ ಬೆಲೆಯದ್ದಾಗಿರುವುದರಿಂದ ಅತಿಬೇಗನೆ ವ್ಯಾಪಕವಾಗಿ ಉಪಯೋಗಿಸಲ್ಪಡಲಿದೆ. (g93 8/8)

ಕೆಫೀನ್‌ (ಸಸ್ಯಕ್ಷಾರ)ನ ಮೇಲೆ ಆರೋಪ ಹೊರಿಸುವುದು

ಕಾಫಿಯನ್ನು ಅತಿಯಾಗಿ ಕುಡಿಯುತ್ತಿದ್ದ, ಆದರೆ ಅದನ್ನು ಹಠಾತ್ತಾಗಿ ತ್ಯಜಿಸಿಬಿಟ್ಟಿರುವವರು, ತಲೆನೋವು, ಖಿನ್ನತೆ, ಆಯಾಸ, ವ್ಯಾಕುಲತೆ, ಮತ್ತು ಸ್ನಾಯು ಬಾಧೆ, ಪಿತ್ತೋದ್ರೇಕ, ಮತ್ತು ವಾಂತಿಗಳ ಕುರಿತಾಗಿಯೂ ಆಗಾಗ್ಗೆ ದೂರುತ್ತಾರೆ. ಈಗ, ಜಾನ್ಸ್‌ ಹಾಪ್‌ಕಿನ್ಸ್‌ ಯೂನಿವರ್ಸಿಟಿಯ ಸಂಶೋಧಕರುಗಳು, ದಿನನಿತ್ಯವೂ ಕೇವಲ ಒಂದು ಅಥವಾ ಎರಡು ಕಪ್‌ ಕಾಫಿ ಅಥವಾ ಟೀಯನ್ನು ಕುಡಿಯುವವರಲ್ಲಿ, ಅಥವಾ ಕೆಫೀನ್‌ ಒಳಗೊಂಡಿರುವ ಒಂದು ಜೊತೆ ಕ್ಯಾನ್‌ಗಳಷ್ಟು ತಂಪು ಪಾನೀಯವನ್ನು ಕುಡಿಯುವವರಲ್ಲಿ, ಮತ್ತು ಅದಿಲ್ಲದೆ ಎರಡು ದಿನಗಳನ್ನು ಕಳೆಯಲು ಅಸಮರ್ಥರಾದವರಲ್ಲಿ ಸಹ ಈ ರೋಗಲಕ್ಷಣಗಳು ಸಂಭವಿಸಸಾಧ್ಯವಿದೆ ಎಂದು ಕಂಡುಕೊಂಡಿದ್ದಾರೆ. ಹಿಂದೆಗೆದುಕೊಳ್ಳುವುದರ ಪರಿಣಾಮಗಳು ಬಹುಶಃ ಎಷ್ಟೊಂದು ಗಂಭೀರವಾದವುಗಳೆಂದರೆ ಅವರು ಒಬ್ಬ ವೈದ್ಯನನ್ನು ಭೇಟಿ ಮಾಡಲೇಬೇಕು ಎಂಬ ಅನಿಸಿಕೆ ಅವರಿಗಾಗಬಹುದು. ವಾರಾಂತ್ಯಗಳಲ್ಲಿ ಉದ್ಯೋಗದ ಒಂದು ಸ್ಥಳದಲ್ಲಿ ಉಪಯೋಗಿಸಲ್ಪಡುವ ಕಾಫಿಯನ್ನು ತಯಾರಿಸುವ ಸಲಕರಣೆಯಿರುವ ಕಚೇರಿಯಿಂದ ದೂರವಿರುವವರು, ಕೆಫೀನ್‌ ಕಡಿಮೆ ಇರುವ ಸೋಡಾಗಳಿಗೆ ಅಂಟಿಕೊಂಡಿರುವ ಜನರು, ಅಥವಾ ಚಿಕಿತ್ಸೆಗೆ ಮೊದಲು ಆಹಾರವನ್ನು ವರ್ಜಿಸಿರುವ ರೋಗಿಗಳು ಇದರ ಬಲಿಪಶುಗಳಾಗಿರಲು ಸಾಧ್ಯವಿದೆ. ಕೆಫೀನ್‌ ಹಿಂದೆಗೆದುಕೊಳ್ಳುವಿಕೆಯ ಪರಿಣಾಮಗಳನ್ನು ಅನುಭವಿಸುತ್ತಿರುವ ಯಾರಾದರೊಬ್ಬರ ರೋಗಲಕ್ಷಣಗಳಿಗೆ ಸರಿಹೊಂದುವ ತಲೆನೋವು ಮತ್ತು ಇತರ ರೋಗಲಕ್ಷಣಗಳನ್ನು ಆಪಾದಿಸುವ ರೋಗಿಗಳ ಕುರಿತು ಕೆಫೀನ್‌ ತೆಗೆದುಕೊಂಡವರ ಒಂದು ಇತಿಹಾಸವನ್ನು ದಾಖಲಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಕೆಫೀನ್‌ ಸೇವನೆಯನ್ನು ಕಡಿಮೆಮಾಡಲು ಅಪೇಕ್ಷಿಸುವವರು ಅದನ್ನು ನಿಧಾನವಾಗಿ ಕಡಿಮೆ ಮಾಡುವಂತೆ ಸಲಹೆ ನೀಡಲ್ಪಟ್ಟಿದೆ. ಆದುದರಿಂದಲೇ ಅದರ ಅಭ್ಯಾಸವು ಕಾಫಿ ಅಥವಾ ಕೆಫೀನ್‌, ಒಂದು ಶಾರೀರಿಕವಾಗಿ ಚಟಹಿಡಿಸುವ ಅಮಲೌಷಧವಾಗಿ ವರ್ಗೀಕರಿಸಬಹುದೋ ಎಂಬ ಪ್ರಶ್ನೆಯನ್ನು ಸಹ ಎಬ್ಬಿಸಿದೆ. (g93 7/22)

ಕೊಲಂಬಿಯದಲ್ಲಿ ಗರ್ಭಪಾತಗಳು

ಕೊಲಂಬಿಯದಲ್ಲಿ, ಸುಮಾರು ಒಂದೂವರೆ ಕೋಟಿಯಷ್ಟು ಸ್ತ್ರೀಯರು ಕಡಿಮೆಪಕ್ಷ ಒಂದು ಗರ್ಭಪಾತವನ್ನಾದರೂ ಮಾಡಿಸಿಕೊಂಡಿದ್ದಾರೆ. ಆ ದೇಶದಲ್ಲಿ ಗರ್ಭಧರಿಸಬಲ್ಲ ಪ್ರಾಯದ ಎಲ್ಲಾ ಸ್ತ್ರೀಯರಲ್ಲಿ ಅದು ಸುಮಾರು 20 ಪ್ರತಿಶತವನ್ನು ಸಮೀಪಿಸುತ್ತದೆ. ಗರ್ಭಪಾತಕ್ಕೆ ಸಂಬಂಧಿಸಿದ ಜಟಿಲತೆಗಳ ಫಲಿತಾಂಶವಾಗಿ ಅನೇಕ ಸ್ತ್ರೀಯರು ಸಾಯುತ್ತಾರೆ. “ಬಗೋಟಾದ ಮಟರ್ನಲ್‌-ಇನ್‌ಫಂಟೈಲ್‌ ಇನ್‌ಸ್ಟಿಟ್ಯೂಟ್‌ನಲ್ಲಿ, ಹೆಚ್ಚಿನ ಸಂಖ್ಯೆಯ ತಾಯ್ತನದ ಮರಣಗಳನ್ನು ಗರ್ಭಪಾತಗಳು ಉಂಟುಮಾಡುತ್ತವೆ,” ಎಂದು ಸೆಮಾನ ಎಂಬ ಕೊಲಂಬಿಯದ ಪತ್ರಿಕೆಯು ವರದಿ ಮಾಡುತ್ತದೆ. ಪ್ರತಿ ವರ್ಷ ಕೊಲಂಬಿಯದಲ್ಲಿ ಸುಮಾರು 4,00,000 ಗರ್ಭಪಾತಗಳು ನಡೆಸಲ್ಪಡುತ್ತವೆಂದು ಅಂದಾಜು ಮಾಡಲಾಗಿದೆ. ಅದರ ಸರಾಸರಿಯು ಪ್ರತಿ ತಾಸಿಗೆ ಸುಮಾರು 45 ಗರ್ಭಪಾತಗಳಾಗಿವೆ. (g93 8/8)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ