ಜಗತ್ತನ್ನು ಗಮನಿಸುವುದು
ಎಷ್ಟು ಗರ್ಭಪಾತಗಳು?
“ಜಗತ್ತಿನಲ್ಲಿ ಸುಮಾರು 3.3 ಕೋಟಿ ನ್ಯಾಯಬದ್ಧ ಗರ್ಭಪಾತಗಳು ವಾರ್ಷಿಕವಾಗಿ ಸಂಭವಿಸುತ್ತಿವೆ, ಮತ್ತು ಇದಕ್ಕೆ ನ್ಯಾಯಬಾಹಿರ ಗರ್ಭಪಾತಗಳನ್ನೆಲ್ಲ ಕೂಡಿಸಿದಲ್ಲಿ, ಮೊತ್ತವು 4 ಕೋಟಿ ಮತ್ತು 6 ಕೋಟಿ ಮಧ್ಯಕ್ಕೆ ಬರುವುದು” ಎಂದು ಹೇಳುತ್ತದೆ ಬ್ವೇನಸ್ ಆ್ಯರೀಸ್ ಮುಂಜಾನೆಯ ವಾರ್ತಾಪತ್ರ ಕ್ಲಾರೀನ್. “ಎಲ್ಲಿ ಪ್ರಚೋದಿತ ಗರ್ಭಪಾತವು ನ್ಯಾಯಬದ್ಧವೊ ಆ ದೇಶಗಳಲ್ಲಿ ಜಗತ್ತಿನ ಜನಸಂಖ್ಯೆಯ ಎಪ್ಪತ್ತಾರು ಪ್ರತಿಶತ ಜನರು ಜೀವಿಸುತ್ತಾರೆ.” ಗರ್ಭಪಾತದಿಂದ ಕೊನೆಗಾಣಿಸಲ್ಪಟ್ಟ ಜೀವಗಳ ಸಂಖ್ಯೆಯು ಆರ್ಜೆಂಟೀನದ ಜನಸಂಖ್ಯೆಗಿಂತ ಹೆಚ್ಚು ಮತ್ತು ಇಟಲಿ, ಈಜಿಪ್ಟ್, ಟರ್ಕಿ, ದಕ್ಷಿಣ ಆಫ್ರಿಕ, ಫ್ರಾನ್ಸ್, ಅಥವಾ ಬ್ರಿಟನ್‌ನಂತಹ ಒಂದು ದೇಶದ ಪೂರ ಜನಸಂಖ್ಯೆಯನ್ನು ಪ್ರತಿ ವರ್ಷ ಹತಿಸಿಬಿಡುವುದಕ್ಕೆ ತುಲನಾತ್ಮಕವಾಗಿದೆ. ಅದು ಎರಡನೆಯ ಜಾಗತಿಕ ಯುದ್ಧದ ಇಡೀ ಆರು ವರ್ಷಗಳಲ್ಲಿ ಸತ್ತರೆಂದು ಅಂದಾಜುಮಾಡಲಾದ ಸುಮಾರು ಐದು ಕೋಟಿ ಜನ ಬಲಿಪಶುಗಳಿಗೆ ಹೋಲಿಕೆಯಾಗುತ್ತದೆ. (g95 2/8)
ವಾಸಿಸಲಿಕ್ಕೆ ಅತಿ ಉತ್ತಮ ಸ್ಥಳವೊ?
ಜಗತ್ತಿನಲ್ಲಿ ವಾಸಿಸಲಿಕ್ಕೆ ಉತ್ತಮ ಸ್ಥಳ ಕೆನಡ ಎಂದು ವಿಶ್ವ ಸಂಸ್ಥೆಯಿಂದ ತೀರ್ಮಾನಿಸಲ್ಪಟ್ಟಿದೆ. “ಸೂಚಿಕೆಯು ಸಂಕಲಿಸಲ್ಪಟ್ಟ ಐದು ವರ್ಷಗಳಲ್ಲಿ 173 ದೇಶಗಳ ಪಟ್ಟಿಯಲ್ಲಿ ಕೆನಡ ಅಗ್ರಸ್ಥಾನವನ್ನು ಪಡೆದದ್ದು ಇದು ಎರಡನೆಯ ಬಾರಿ” ಎಂದು ವರದಿಸುತ್ತದೆ ಟೊರಾಂಟೊ ಸ್ಟಾರ್. “ಆದರೂ ಕೆನಡ ದೇಶದವರು ಜಗತ್ತಿನಲ್ಲಿ ಉತ್ಕೃಷ್ಟ ಮಟ್ಟದ ಜೀವನವನ್ನು ಅನುಭವಿಸುತ್ತಾರೆಂದು [ಇದರ] ಅರ್ಥವಲ್ಲ” ಎಂದು ಅದು ಕೂಡಿಸುತ್ತದೆ. ಕೆನಡ ಉತ್ತಮ ಸ್ಥಳವಾಗಿ ಪರಿಗಣಿಸಲ್ಪಟ್ಟದ್ದೇಕೆ? ವಿಶ್ವ ಸಂಸ್ಥೆಯ ವಿಕಸನ ಕಾರ್ಯಕ್ರಮದಿಂದ ತಯಾರಿಸಲ್ಪಟ್ಟ ವರದಿಯು, ಮೂರು ಸಂಯುಕ್ತ ಕಾರಣಾಂಶಗಳಿಂದ ದೇಶಗಳನ್ನು ವರ್ಗೀಕರಿಸುತ್ತದೆ: ಸರಾಸರಿ ಆದಾಯ, ಶೈಕ್ಷಣಿಕ ಸಿದ್ಧಿ, ಮತ್ತು ಜೀವ ನಿರೀಕ್ಷಣೆ. ಕೆನಡ ದೇಶಸ್ಥರು ಸರಾಸರಿ 77.2 ವರ್ಷಗಳ ಸರಾಸರಿ ಜೀವಮಾನದೊಂದಿಗೆ, ದೀರ್ಘಾಯುಷ್ಯದಲ್ಲಿ ಆರನೆಯ ಸ್ಥಾನವನ್ನು ಹೊಂದಿದ್ದಾರೆ. ವಿದ್ಯಾಭ್ಯಾಸ ಮತ್ತು ಆರೋಗ್ಯ ಪರಿಪಾಲನೆಗಾಗಿ ವ್ಯಯಿಸಿದ ಹಣದಲ್ಲಿ ಹಾಗೂ ಟೆಲಿವಿಷನ್ ಸೆಟ್ಸ್ ಮತ್ತು ಮೋಟಾರುಗಾಡಿಗಳ ಒಡೆತನದ ಸಂಬಂಧದಲ್ಲಿ ಕೆನಡ ಅಗ್ರಸ್ಥಾನ ಹೊಂದುವುದಕ್ಕೆ ಹತ್ತಿರದಲ್ಲಿತ್ತು. (g95 2/8)
ಪ್ರಯಾಣಮಾಡುವಾಗ ಗಮನಕೊಡುವವರಾಗಿರಿ
ಪ್ರಯಾಣ ಮಾಡುವಾಗ ನಿಮ್ಮ ಸುತ್ತಲೂ ಸಂಭವಿಸುತ್ತಿರುವ ಸಂಗತಿಗಳಿಗೆ ಗಮನಕೊಡಿರಿ. “ಸಾಮಾನು ಕಳ್ಳರಿಗೆ ಮತ್ತು ಜೇಬುಗಳ್ಳರಿಗೆ ಶೂನ್ಯಮನಸ್ಕ ಪ್ರಯಾಣಿಕರೆಂದರೆ ತಡೆಯಲಾಗದ ಇಷ್ಟ” ಎಂದು ತಿಳಿಸುತ್ತದೆ ಬ್ರೆಜಿಲ್‌ನ ಕ್ಲಾಡೀಯ ಪತ್ರಿಕೆ. ತದ್ರೀತಿ, “ಯಾರಾದರೂ ನಿಮಗೆ ಡಿಕ್ಕಿಹೊಡೆದಲ್ಲಿ ಅಥವಾ ನಿಮ್ಮ ಉಡುಪುಗಳ ಮೇಲೆ ಏನನ್ನಾದರೂ ಚೆಲ್ಲಿದರೆ, ಎಚ್ಚರವಾಗಿರ್ರಿ. ನಿಮ್ಮ ಗಮನವನ್ನು ತಿರುಗಿಸಿಬಿಡಲು ಇವು ಕುಪ್ರಸಿದ್ಧ ತಂತ್ರಗಳಾಗಿವೆ.” ಅದಲ್ಲದೆ, ಯಾರಾದರೂ ಮಾಹಿತಿಗಾಗಿ ಇಲ್ಲವೆ ಸಹಾಯಕ್ಕಾಗಿ ಕೇಳುವಲ್ಲಿ ಎಚ್ಚರವಾಗಿರ್ರಿ. ತುಸು ಅಪಕರ್ಷಣೆಯು ನಿಮ್ಮ ಸಾಮಾನುಗಳ ನಷ್ಟಕ್ಕೆ ನಡಿಸಬಹುದು. ಸಾವ್ ಪೌಲೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎಡ್ರಿಯಾನೊ ಕಾಲೆರೊ ಅವರಿಗನುಸಾರ, ವಿಮಾನ ನಿಲ್ದಾಣದಲ್ಲಿ ನಿಮ್ಮ ಸ್ಯೂಟ್‌ಕೇಸುಗಳನ್ನು ಅಧೀನಪಡಿಸುವಾಗ, ಬಾಡಿಗೆಗೆ ಕಾರ್ ಪಡೆದುಕೊಳ್ಳುವ ಕೌಂಟರಲ್ಲಿ ಕಾಗದಪತ್ರಗಳಿಗೆ ಸಹಿಹಾಕುವಾಗ, ಹೋಟೇಲಲ್ಲಿ ಇಳಿದುಕೊಳ್ಳುವಾಗ ಅಥವಾ ಬಿಟ್ಟುಹೋಗುವಾಗ, ಮಕ್ಕಳನ್ನು ಟ್ಯಾಕ್ಸಿಯಲ್ಲಿ ಕುಳ್ಳಿರಿಸಲು ನೆರವಾಗುವಾಗ, ಅಂಗಡಿಯಲ್ಲಿ ಪ್ರದರ್ಶಿಸಲ್ಪಟ್ಟ ಸರಕುಗಳನ್ನು ನೋಡುವಾಗ, ಅಥವಾ ಅಂಗಡಿಯಲ್ಲಿ ಕಾಫಿ ಕುಡಿಯುವಾಗ ವಿಶೇಷ ಗಮನವು ಬೇಕಾಗಿದೆ. ನಿಮ್ಮ ಕೀಲಿ ಕೈಗಳು ಕದಿಯಲ್ಪಟ್ಟಲ್ಲಿ ಕೂಡಲೆ ಬೀಗಗಳನ್ನು ಬದಲಾಯಿಸುವಂತೆ ಪತ್ರಿಕೆಯು ಎಚ್ಚರಿಸುತ್ತದೆ. ನಿಮ್ಮ ಸಾಮಾನನ್ನು ಕಳ್ಳನು ತಾನು ಕಂಡುಕೊಂಡನೆಂದು ಹೇಳ್ಯಾನು ಮತ್ತು ಕಳೆದುಹೋದದ್ದೆಲ್ಲವನ್ನು ಹಿಂದೆ ಕೊಡಲೂಬಹುದು. ಆದರೆ ತರುವಾಯ ನಿಮ್ಮ ಮನೆಯೊಳಗೆ ನುಗ್ಗುವುದಕ್ಕಾಗಿ ಕೀಲಿಕೈಗಳ ಒಂದು ದುಪ್ರತಿಯನ್ನು ಮಾಡಿಕೊಂಡಿರಬಹುದು. (g95 2/8)
ಒಂದು ಸಫಲ ಶಸ್ತ್ರಕ್ರಿಯೆ
ಎಪ್ರಿಲ್‌ನಲ್ಲಿ IIನೆಯ ಪೋಪ್ ಜಾನ್ ಪೌಲರಿಗೆ ಶಸ್ತ್ರಕ್ರಿಯೆ ನಡಿಸಿದ ವೈದ್ಯಕೀಯ ತಂಡವು, ಅವರ ಟೊಂಕ ಶಸ್ತ್ರಕ್ರಿಯೆಯು “ಇದಕ್ಕಿಂತ ಹೆಚ್ಚು ಉತ್ತಮವಾಗಿದ್ದಿರಸಾಧ್ಯವಿಲ್ಲ” ಎಂದು ಹೇಳಿರುವುದು “ನ್ಯಾಯವಾಗಿ ಅರ್ಹವಾದ ಹೆಮ್ಮೆ”ಯಿಂದಲೆ ಎಂದು ಇಟಲಿಯ ವಾರ್ತಾಪತ್ರಿಕೆ ಲಾ ಸ್ಟಾಂಪಾ ಹೇಳುತ್ತದೆ. ಆದರೆ ಪ್ರಸ್ತುತ ಪೋಪರಿಗೆ ಮಾಡಿದ ಶಸ್ತ್ರಕ್ರಿಯೆಗಳಿಗೆ ಯಾವಾಗಲೂ ಉತ್ತಮ ಫಲಿತಾಂಶಗಳು ದೊರೆತಿಲ್ಲ. IIನೆಯ ಪೋಪ್ ಜಾನ್ ಪೌಲರ ಮೇಲೆ 1981ರಲ್ಲಾದ ಕೊಲೆಯ ಪ್ರಯತ್ನವನ್ನು ಹಿಂಬಾಲಿಸಿ ನಡೆದ ಶಸ್ತ್ರಕ್ರಿಯೆಯ ಸಮಯದಲ್ಲಿ, ರಕ್ತಪೂರಣಗಳಿಂದಾಗಿ ಉಂಟಾದ ಅತಿ ಗುರುತರವಾದ ಸೈಟೊಮೆಗಲೊವೈರಸ್ ರೋಗಸೋಂಕಿನ ಚಿಕಿತ್ಸೆಗಾಗಿ ಅವರಿಗೆ ಎರಡು ತಿಂಗಳು ಆಸ್ಪತ್ರೆಯಲ್ಲಿ ಉಳಿಯಬೇಕಾಗಿತ್ತು. ಹೀಗೆ, ಲಾ ಸ್ಟಾಂಪಾಕ್ಕೆ ಅನುಸಾರವಾಗಿ, “ರಕ್ತ ನಷ್ಟವು ಬಹಳವಾಗಿದ್ದಾಗ್ಯೂ,” ರಕ್ತಪೂರಣಗಳು ಈ ಸಾರಿ ನೀಡಲ್ಪಡಲಿಲವ್ಲೆಂಬದರಲ್ಲಿ ಆಶ್ಚರ್ಯವೇನಿಲ್ಲ. ಬದಲಾಗಿ, ವಾರ್ತಾಪತ್ರ ಗಮನಿಸುವುದು, “ಶಸ್ತ್ರಕ್ರಿಯೆಯ ಸಮಯದಲ್ಲಿ ಪೋಪರ ರಕ್ತವು ಪುನಃ ಸ್ವಸ್ಥೀಕರಿಸಲ್ಪಟ್ಟಿತು, ಕ್ರಿಮಿಶುದ್ಧೀಕರಣ ಮಾಡಲ್ಪಟ್ಟಿತು ಮತ್ತು ಶಸ್ತ್ರಕ್ರಿಯೆಯ ಸಮಯದಲ್ಲಿ ಪುನಃ ಪೂರಣ ಮಾಡಲ್ಪಟ್ಟಿತು.” (g95 2/8)
ಸುಶಿಕ್ಷಿತ ಕೊಳಲಜೋಗಿಗಳು
ಇಲಿ ಕೊಲ್ಲುವವರ ಹುದ್ದೆಗಾಗಿ 76 ಖಾಲಿ ಜಾಗಗಳನ್ನು ತುಂಬಲು ಜಾಹೀರಾತು ಮಾಡಿದ ಮುಂಬಯಿಯ ಪೌರ ಸಂಸ್ಥೆಯು ಒಂದು ಸಮಸ್ಯೆಯನ್ನು ಎದುರಿಸಿತು. “ಇಲಿ ಕೊಲ್ಲುವವನಿಗೆ ಬೇಕಾದ ತರಬೇತು ಕೇವಲ ಪ್ರಾಥಮಿಕ ಶಾಲಾ ಶಿಕ್ಷಣವಾಗಿದ್ದರೂ, ಸುಮಾರು 40,000 ಅರ್ಜಿದಾರರಲ್ಲಿ ಹೆಚ್ಚಿನವರು ಪದವೀಧರರು, ಮೆಟ್ರಿಕ್ ಪಾಸಾದವರು ಮತ್ತು ಕಾಲೇಜ್ ಬಿಟ್ಟವರಾಗಿದ್ದಾರೆ” ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡುತ್ತದೆ. “ಒಬ್ಬ ಪದವೀಧರನನ್ನು ಇಲಿ ಕೊಲ್ಲುವವನಾಗಿ ನಾವು ಹೇಗೆ ನೇಮಿಸಬಲ್ಲೆವು?” ಎಂದು ಕೇಳಿದನು ಒಬ್ಬ ಅಧಿಕಾರಿ. ಇಲಿಗಳನ್ನು ರಾತ್ರಿಯಲ್ಲಿ ಹುಡುಕಿತೆಗೆದು ಅವನ್ನು ಒಂದು ದೊಣ್ಣೆಯಿಂದ ಕೊಲಲ್ಲಾಗುತ್ತದೆ. ಹೊಸತಾಗಿ ಕೊಂದ ಪ್ರತಿ 25 ಇಲಿಗಳಿಗಾಗಿ 100 ರೂಪಾಯಿಗಳ ವೇತನ. ಪೌರ ಸಂಸ್ಥೆಯು ಒಂದು “ಹೊಸ ನೇಮಕ ಯೋಜನೆ”ಗಾಗಿ ಹುಡುಕುತ್ತಿದೆ. ಆದರೆ ಪೌರ ಅಧಿಕಾರಿಗಳು ಎದುರಿಸುತ್ತಿರುವ ಸಮಸ್ಯೆಯು ಇದೊಂದೆ ಅಲ್ಲ. ಒಂದು ಧಾರ್ಮಿಕ ಸಮಸ್ಯೆಯೂ ಅವರಿಗಿದೆ. ಜೈನ ಧರ್ಮದ ಸದಸ್ಯರು ಹಾಗೂ ಯಾರ ಧಾರ್ಮಿಕ ನಂಬಿಕೆಗಳು ಪಶುಹತ್ಯೆಯನ್ನು ಖಂಡಿಸುತ್ತವೊ ಆ ಇತರರು, ಇಲಿಗಳನ್ನು ಅನುಕಂಪದ ಆಧಾರದ ಮೇಲೆ ಬದುಕಿ ಉಳಿಸಲಿಕ್ಕಾಗಿ ಕೆಲಸಗಾರರಿಗೆ ಲಂಚಕೊಡುತ್ತಿದ್ದಾರೆ. (g95 2/8)
ಫಿಲಿಪ್ಪೀನ್ಸ್‌ನಲ್ಲಿ ಅರಕ್ಷಿತ ರಕ್ತ
ಫಿಲಿಪ್ಪೀನ್ಸ್‌ನಲ್ಲಿ ರಕ್ತಪೂರಣ ಉಪಚಾರಗಳು “ಅರಕ್ಷಿತ, ಅಯೋಗ್ಯ ಮತ್ತು ದುಂದುಯುಕ್ತ” ಎಂದು ಫಿಲಿಪ್ಪಿನೊ ಡಾಕ್ಟರುಗಳ ಒಂದು ತಂಡದ ಹೊಸ ಅಧ್ಯಯನವು ತೀರ್ಮಾನಿಸುತ್ತದೆ. ದೇಶದ ಆರೋಗ್ಯ ಸಚಿವರಾದ ಕ್ವಾನ್ ಫ್ಲಾವ್‌ಯೇರ್ “ಅತ್ಯಂತ ಭಯಸೂಚಕ”ವೆಂದು ಹೆಸರಿಸಿದ ಈ ಸಂಶೋಧನೆಗಳಲ್ಲಿ, ದೇಶದ ಬ್ಲಡ್ ಬ್ಯಾಂಕ್‌ಗಳಲ್ಲಿ ಅರ್ಧಕ್ಕಿಂತಲೂ ಕಡಿಮೆ ಬ್ಯಾಂಕ್‌ಗಳಲ್ಲಿ ಏಯ್ಡ್ಸ್, ಉಪದಂಶ, ಹೆಪಟೈಟಸ್ ಬಿ (ಯಕೃತಿನ ಊತ) ಮತ್ತು ಮಲೇರಿಯ ರೋಗ ತಪಾಸಣೆಗಳನ್ನು ನಡಿಸಲು ಯೋಗ್ಯತೆಪಡೆದ ಸಿಬ್ಬಂದಿಗಳಿದ್ದಾರೆ. ಅಷ್ಟಲ್ಲದೆ, ಅಧ್ಯಯನವು ಬ್ಲಡ್ ಬ್ಯಾಂಕ್‌ಗಳಿಂದ 136 ರಕ್ತ ನಮೂನೆಗಳನ್ನು ತಪಾಸಣೆಮಾಡಿತು ಮತ್ತು ರೋಗಪರೀಕ್ಷೆಗೊಳಗಾದ ರಕ್ತದಲ್ಲಿ ಸಹ ಸುಮಾರು 4 ಪ್ರತಿಶತ ರಕ್ತವು ಕಲುಷಿತವಾಗಿರುವುದನ್ನು ಕಂಡುಕೊಂಡಿತು. (g95 1/22)
ವ್ರಣಗಳಿಗೆ ಜೇನುತುಪ್ಪವೊ?
ಜಠರದ ವ್ರಣಗಳಿಂದ ಬಾಧಿತರಾದವರಿಗೆ, ಆಗಿಂದಾಗ್ಗೆ ತೀವ್ರ ಶಸ್ತ್ರಕ್ರಿಯೆಗೆ ತೊಡಗುತ್ತಿದ್ದ ಡಾಕ್ಟರುಗಳು ಕಳೆದ ದಶಕಗಳಲ್ಲಿ ಮಾಡಶಕ್ತರಾಗಿರುವುದಕ್ಕಿಂತಲೂ ಹೆಚ್ಚನ್ನು ಒಂದು ಅಲ್ಪ ಜೇನುನೊಣವು ಮಾಡಬಹುದು ಎಂದು ಡಾ. ಬೇಸಿಲ್ ಜೆ. ಎಸ್. ಗ್ರೊಗೋನೊ, ಕೆನಡದ ಮೆಡಿಕಲ್ ಪೋಸ್ಟ್‌ನಲ್ಲಿ ಬರೆಯುತ್ತಾ, ವಾದಿಸುತ್ತಾರೆ. ಹೆಲಿಕೊಬ್ಯಾಕರ್ಟ್ ಪೈಲೋರಿ ಎಂಬ ಅತಿ ಚಿಕ್ಕ ರೋಗಾಣು ಜಠರದ ಹುಣ್ಣುಗಳಲ್ಲಿ ನಡಿಸುವ ಪಾತ್ರವನ್ನು ಅಧಿಕ ಪರಿಣತರು ಒಪ್ಪತೊಡಗಿದ್ದಾರೆ ಎಂದು ಅವರು ಗಮನಿಸುತ್ತಾರೆ. ಈ ಸೂಕ್ಷ್ಮ ರೋಗಾಣುವನ್ನು ಹೋರಾಡಲು ಔಷಧಗಳ ಉಪಯೋಗವನ್ನು ಕೆಲವರು ಶಿಫಾರಸ್ಸು ಮಾಡಿರುತ್ತಾರಾದರೂ, ಈ ಔಷಧಗಳಿಗೆ ಅಹಿತಕರವಾದ ಅಡಪ್ಡರಿಣಾಮಗಳಿವೆಯೆಂದೂ ಮತ್ತು ರೋಗಾಣುಗಳು ಅವಕ್ಕೆ ನಿರೋಧಕವನ್ನು ವಿಕಸಿಸಬಹುದೆಂದೂ ಗ್ರೊಗೋನೊ ಅಭಿಪ್ರಯಿಸುತ್ತಾರೆ. ಇನ್ನೊಂದು ಕಡೆ, ಯಾವುದರಲ್ಲಿ ಜೇನು ತುಪ್ಪದ ಏಕಾಣುನಿರೋಧಕ ಯೋಗ್ಯತೆಗಳನ್ನು ಪರೀಕ್ಷಿಸಲಾಯಿತೊ ಆ ಇತ್ತೀಚಿನ ಒಂದು ಅಧ್ಯಯನವು, ಜರ್ನಲ್ ಆಫ ದ ರಾಯಲ್ ಸೊಸೈಟಿ ಆಫ್ ಮೆಡಿಸಿನ್‌ನಲ್ಲಿ ಪ್ರಕಾಶಿತವಾದುದನ್ನು ಅವರು ಉದಾಹರಿಸುತ್ತಾರೆ. ಮಾನಕ ಎಂಬ ಸಸ್ಯವನ್ನು ತಿನ್ನಿಸಿದ ನ್ಯೂಜಿಲ್ಯಾಂಡ್‌ನ ಜೇನುನೊಣಗಳಿಂದ ದೊರೆತ ಒಂದು ಬಗೆಯ ಜೇನು, ವ್ರಣವನ್ನುಂಟುಮಾಡುವ ರೋಗಾಣುವನ್ನು ಹೋರಾಡುವುದರಲ್ಲಿ ಪರಿಣಾಮಕಾರಿಯಾಯಿತು. (g95 1/22)
ಜಾಣ ರೈತರು, ಚತುರ ಕಾಗೆಗಳು
ಜಪಾನಿನಲ್ಲಿ ಹೊಲದ ಬೆಳೆಯು ಯಾರಿಗೆ ಕೊಯ್ಯಲಿಕ್ಕೆ ಸಿಗುತ್ತದೆಂಬದರ ಮೇಲೆ ಒಂದು ಹೋರಾಟವೆ ನಡಿಯುತ್ತಲಿದೆ. ರೈತರು ಹೂಡುವ ತಂತ್ರಗಳನ್ನು ಕುಯುಕ್ತಿಯ ಕಾಗೆಗಳು ಅರ್ಥಮಾಡಿಕೊಳ್ಳುತ್ತಾ—ಕಾಗೆಗಳು ಮತ್ತು ರೈತರು ಒಂದು ಸತತವಾದ ಸಮರದಲ್ಲಿ ಭಾಗವಹಿಸುತ್ತಾರೆ. ಈಗಲಾದರೊ ನಾಗಾನೊ ಪ್ರಾಂತದ ಚೂಟಿಬುದ್ಧಿಯ ರೈತರು ಪಕ್ಷಿಗಳನ್ನು ಹಿಡಿಯಲು ಅವುಗಳ ನಿಕೃಷ್ಟ ಸಹಜ ಪ್ರವೃತ್ತಿಗಳನ್ನು ಬಳಸುತ್ತಿದ್ದಾರೆ, ಎಂದು ಹೇಳುತ್ತದೆ ಅಸಾಹಿ ಈವ್ನಿಂಗ್ ನ್ಯೂಸ್. ತಮ್ಮ ಪೈರುಗಳ ಸಮೀಪ ಅವರು ಒಂಬತ್ತು ಮೀಟರ್ ಚೌಕದ ಮತ್ತು ಮೂರು ಮೀಟರ್ ಎತ್ತರದ ಒಂದು ಪಂಜರವನ್ನು ನಿರ್ಮಿಸಿ, ಇನೊದು ಕ್ಷೇತ್ರದ ಕಾಗೆಗಳನ್ನು ಅದರಲ್ಲಿಟ್ಟರು. ಸ್ಥಳೀಕ ತಿಂಡಿಬಾಕ ಕಾಗೆಗಳು, ತಮ್ಮ ಕ್ಷೇತ್ರದ ಈ ಆಕ್ರಮಣಗಾರರ ಮೇಲೆ ಕೆರಳಿ, ಆ “ವಿದೇಶೀ” ಕಾಗೆಗಳನ್ನು ಕುಕ್ಕಲು ಪಂಜರದೊಳಗೆ ಹಾರುತ್ತಾ, ತಾವೇ ಅದರೊಳಗೆ ಸಿಕ್ಕಿಬೀಳುತ್ತವೆ. ಕಟ್ಟಕಡೆಗೆ ಸಾಫಲ್ಯವೊ? ರೈತರಲ್ಲೊಬ್ಬನು ಹೇಳುವುದು: “ವಾಸ್ತವಿಕವಾಗಿ, ಪಂಜರದಿಂದ ಮೋಸಹೋಗುವ ಕಾಗೆಗಳಲ್ಲಿ ಹೆಚ್ಚಿನವು ಅಲೆಮಾರಿಗಳು. ಸ್ಥಳೀಕ ಆಸಾಮಿಗಳಾದರೊ ಈಗ ನಮ್ಮನ್ನೆ ಮರುಳುಮಾಡಿ ಹಾರಿಹೋಗುವಷ್ಟು ಚತುರವಾಗಿವೆ.” ಹೀಗೆ ಹೋರಾಟವು ಮುಂದರಿಯುತ್ತಲಿದೆ. (g95 1/22)
ಒಂದು ಟಿವಿ-ಮುಕ್ತ ದ್ವೀಪದ ಮಕ್ಕಳು
ಪಶ್ಚಿಮ ಆಫ್ರಿಕದಿಂದ ದಕ್ಷಿಣ ಅಮೆರಿಕಕ್ಕೆ ಸುಮಾರು ಮೂರನೆಯ ಒಂದಂಶ ದೂರದಲ್ಲಿರುವ ಒಂದು ಚಿಕ್ಕ ದ್ವೀಪವಾದ ಸೆಂಟ್ ಹೆಲೀನ, “ಜಗತ್ತಿನಲ್ಲೆ ಅತ್ಯಂತ ಸಮತೋಲನೆಯುಳ್ಳ” ಮಕ್ಕಳನ್ನು ಹೊಂದಿರುವ ದೇಶಗಳಲ್ಲಿ ಒಂದೆಂದು ಹೆಮ್ಮೆಪಡುತ್ತದೆ ಎಂದು ಲಂಡನಿನ ದ ಟೈಮ್ಸ್ ಹೇಳುತ್ತದೆ, ಒಂದು ಮುಖ್ಯ ಶೈಕ್ಷಣಿಕ ಪತ್ರಿಕೆಯಾದ ಸಪೋರ್ಟ್ ಫಾರ್ ಲರ್ನಿಂಗ್‌ನ ಒಂದು ವರದಿಯನ್ನು ಉದಾಹರಿಸುತ್ತಾ ಹೇಳುತ್ತದೆ. ದ್ವೀಪದ 9 ರಿಂದ 12 ವರ್ಷ ಪ್ರಾಯದವರಲ್ಲಿ ಕೇವಲ 3.4 ಪ್ರತಿಶತ ಮಕ್ಕಳಿಗೆ ಮಾತ್ರ ಗುರುತರವಾದ ವರ್ತನಾ ಸಮಸ್ಯೆಗಳಿದ್ದವು ಎಂದು ವರದಿಯ ಕತೃವಾದ ಡಾ. ಟೋನಿ ಚಾರ್ಲ್‌ಟನ್ ಕಂಡರು. ಈ ಪ್ರಮಾಣವು “ಜಗತ್ತಿನಲ್ಲೆಲ್ಲೂ ಯಾವುದೆ ಪ್ರಾಯದವರ ಸಾಲಿಗೆ ದಾಖಲೆಯಾದವುಗಳಲ್ಲಿ ಅತ್ಯಂತ ಕನಿಷ್ಠ” ಎಂದು ದ ಟೈಮ್ಸ್ ಗಮನಿಸುತ್ತದೆ. ಒಳ್ಳೆ-ಸಮತೋಲನೆಯ ಮಕ್ಕಳಿಗೆ ಕಾರಣ? ಒಂದು ಸಾಧ್ಯತೆಯು ಮಕ್ಕಳ ಶಿಕ್ಷಣದ ಉಚ್ಚ ದರ್ಜೆ ಮತ್ತು ಸುಲಭ ಲಭ್ಯತೆಯಾಗಿದೆ. ಆದರೆ ಚಾರ್ಲ್‌ಟನ್ ಇನ್ನೊಂದು ಶಕ್ಯ ಕಾರಣಾಂಶವನ್ನು ಶೋಧಿಸಲು ಯೋಜಿಸುತ್ತಾರೆ. ಇತ್ತೀಚೆಗೆ ಒಂದು ಸಂಪರ್ಕ ಉಪಗ್ರಹವು ಸ್ಥಾಪಿಸಲ್ಪಡುವ ತನಕ, ದ್ವೀಪದಲ್ಲಿ ಎಂದೂ ಟಿವಿ ಪ್ರಸಾರವು ಇದ್ದಿರಲಿಲ್ಲ. ಇನ್ನು ಮೂರು ವರ್ಷದೊಳಗೆ ದ್ವೀಪದ 1,500 ಮನೆವಾರ್ತೆಗಳಲ್ಲಿ 1,300 ಒಂದು ಟೆಲಿವಿಷನನ್ನು ಹೊಂದಲಿವೆಯೆಂದು ನಿರೀಕ್ಷಿಸಲಾಗಿದೆ. ದ್ವೀಪದ ಮಕ್ಕಳಲ್ಲಿ ತರುವಾಯದ ಯಾವುದೆ ಬದಲಾವಣೆಗಳ ಒಂದು ಅಧ್ಯಯನವನ್ನು ಚಾರ್ಲ್‌ಟನ್ ಬೇಗನೆ ಮಾಡಲಿರುವರು. (g95 1/22)
ಮಾತಿನ ನಿರಪಾಯಕರ ಅಡಚಣೆಗಳು
ಜರ್ಮನಿಯ ಡಾರ್ಮ್ಸ್‌ಸ್ಟ್ಯಾಚ್ ಅಧಿವೇಶನವೊಂದರಲ್ಲಿ, ತೊದಲುನುಡಿ ಚಿಕಿತ್ಸಾತಂತ್ರದ ಶಿಸ್ಟಿಪಾಲನ ಸಂಸ್ಥೆಯ ಸದಸ್ಯರು ಹೆತ್ತವರನ್ನು, ತಮ್ಮ ಎಳೆಯ ಮಕ್ಕಳ ನಿರಪಾಯಕರ ಉಕ್ತಿ ಅಡಚಣೆಗಳ ಬಗೆಗೆ ಅತಿರೇಕ ವ್ಯಾಕುಲಗೊಳ್ಳುವ ವಿರುದ್ಧ ಎಚ್ಚರಿಸಿದ್ದಾರೆ. “ನಾಲ್ಕು ಮತ್ತು ಆರು ವರ್ಷಗಳ ಪ್ರಾಯದ ನಡುವಣ ಪ್ರತಿ ಐದು ಮಕ್ಕಳಲ್ಲಿ ನಾಲ್ವರಿಗೆ, ತೊದಲುತ್ತಿರುವಂತೆಯೆ ಕೇಳುವ ಅಲ್ಪ ಉಕ್ತಿ ಅಡಚಣೆಗಳಿರುತ್ತವೆಯಾದರೂ ಅವು ಸಾಮಾನ್ಯವಾಗಿ ತಾವಾಗಿಯೆ ಮಾಯವಾಗಿ ಹೋಗುತ್ತವೆ” ಎಂದು ವಾರ್ತಾಪತ್ರ ಸ್ಯೂಟ್‌ಡೈಚೆ ಟ್ವೈಟುಂಗ್ ವರದಿಸುತ್ತದೆ. ಒಂದು ಚಿಕ್ಕ ಮಗುವು ಮಾತುಗಳಲ್ಲಿ ತೊದಲುವಾಗ ಹೆತ್ತವರು ಹೇಗೆ ಪ್ರತಿಕ್ರಿಯಿಸಬೇಕು? “ಮಗುವಿನ ಮಾತಿನ ಸಹಜವಾದ ನಿಸ್ಸಂಕೋಚತೆಯನ್ನು ಅಪಹರಿಸದಂತೆ ಹೆತ್ತವರು ಮಗುವಿನ ಮೇಲೆ ಒತ್ತಡ ಹಾಕುವುದನ್ನು ವರ್ಜಿಸಬೇಕು, ತುಂಬಾ ಸಮಯವನ್ನು ಅದಕ್ಕೆ ಕೊಡಬೇಕು, ಮತ್ತು ಅದರ ಆತ್ಮವಿಶ್ವಾಸವನ್ನು ಕಟ್ಟಬೇಕು” ಎಂದು ಹೇಳುತ್ತದೆ ವಾರ್ತಾಪತ್ರ. (g95 1/22)