ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g93 12/8 ಪು. 3-4
  • ಕುಲ ಅಂದರೇನು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕುಲ ಅಂದರೇನು?
  • ಎಚ್ಚರ!—1993
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮಾನವರನ್ನು ವರ್ಗೀಕರಿಸುವುದರಲ್ಲಿನ ಸಮಸ್ಯೆಗಳು
  • “ಮಾನವನ ಅತಿ ಅಪಾಯಕಾರಿ ಮಿಥ್ಯೆ”
  • ಎಲ್ಲ ಕುಲಗಳು ಒಟ್ಟಾಗಿ ಶಾಂತಿಯಲ್ಲಿ ಜೀವಿಸುವ ಸಮಯ
    ಎಚ್ಚರ!—1993
  • ಕುಲಸಂಬಂಧಿತ ಅಭಿಮಾನದ ಕುರಿತೇನು?
    ಎಚ್ಚರ!—1998
  • ಕುಲದ ಕುರಿತು ನಾವು ತಿಳಿದಿರುವ ವಿಷಯಗಳು
    ಎಚ್ಚರ!—1991
  • ನೀವು ಕಡೇ ವರೆಗೂ ತಾಳಿಕೊಳ್ಳಬಲ್ಲಿರಿ
    ಕಾವಲಿನಬುರುಜು—1999
ಇನ್ನಷ್ಟು
ಎಚ್ಚರ!—1993
g93 12/8 ಪು. 3-4

ಕುಲ ಅಂದರೇನು?

ಕುಲ! ಆ ಪದವು ನೀವು ಯಾವುದರ ಕುರಿತು ಯೋಚಿಸುವಂತೆ ಮಾಡುತ್ತದೆ? ಕೆಲವು ಜನರಿಗೆ ಅದು ಭೇದಭಾವ ಮತ್ತು ದಬ್ಬಾಳಿಕೆಯ ಅರ್ಥದಲ್ಲಿದೆ. ಇತರರಿಗೆ ಅದು ದ್ವೇಷ, ದೊಂಬಿಗಳು, ಮತ್ತು ಕೊಲೆಯ ಅರ್ಥವು ಸಹ ಆಗಿದೆ.

ಅಮೆರಿಕದಲ್ಲಿನ ಕುಲ ಸಂಬಂಧವಾದ ದೊಂಬಿಗಳಿಂದ ಹಿಡಿದು ದಕ್ಷಿಣ ಆಫ್ರಿಕದ ವರ್ಣಭೇದ ನೀತಿಯ ತನಕ, ಪೂರ್ವ ಯೂರೋಪ್‌ನಲ್ಲಿನ ಬುಡಕಟ್ಟಿನ ಗುಂಪುಗಳ ಯುದ್ಧಗಳಿಂದ ಹಿಡಿದು ಶ್ರೀ ಲಂಕ ಮತ್ತು ಪಾಕಿಸ್ತಾನಗಳಂತಹ ಸ್ಥಳಗಳಲ್ಲಿ ನಡೆಯುತ್ತಿರುವ ಹೋರಾಟಗಳ ತನಕ—ಅಪಾರವಾದ ಮಾನವ ಕಷ್ಟಾನುಭವಗಳಿಗೆ ಮತ್ತು ವಿನಾಶಕ್ಕೆ ಕುಲವು ಕೇಂದ್ರ ಬಿಂದುವಾಗಿ ಪರಿಣಮಿಸಿದೆ.

ಆದರೆ ಇದು ಹೀಗೆ ಯಾಕೆ? ಜನರು ಬಹುಮಟ್ಟಿಗೆ ಎಲ್ಲದರಲ್ಲಿಯೂ ಸಹಿಷ್ಣುಗಳಾಗಿ ಕಂಡುಬರುವ ದೇಶಗಳಲ್ಲಿ ಸಹ, ಕುಲವು ಯಾಕೆ ಅಂತಹ ಒಂದು ಸೂಕ್ಷ್ಮ ವಾದಾಂಶವಾಗಿದೆ? ಅಷ್ಟೊಂದು ಸಂಕ್ಷೋಭೆ ಮತ್ತು ಅನ್ಯಾಯವನ್ನು ಹೊತ್ತಿಸುವ ಸಿಡಿಮದ್ದನ್ನಾಗಿ ಕುಲವನ್ನು ಯಾವುದು ಮಾಡುತ್ತದೆ? ಸರಳವಾಗಿ ಹೇಳುವುದಾದರೆ, ವಿವಿಧ ಕುಲಗಳ ಜನರು ಒಟ್ಟಾಗಿ ಯಾಕೆ ಮುಂದುವರಿಯ ಸಾಧ್ಯವಿಲ್ಲ?

ಈ ಪ್ರಶ್ನೆಗಳನ್ನು ಉತ್ತರಿಸಲು, ಕುಲ ಎಂದರೇನು ಮತ್ತು ಯಾವ ವಿಧಗಳಲ್ಲಿ ಕುಲವು ವ್ಯತ್ಯಾಸವನ್ನು ಹೊಂದಿದೆ ಎಂಬುದಕ್ಕಿಂತಲೂ ಹೆಚ್ಚಿನದನ್ನು ನಾವು ತಿಳಿಯಬೇಕಾದ ಆವಶ್ಯಕತೆಯಿದೆ. ಪ್ರಚಲಿತ ಕುಲ ಸಂಬಂಧಗಳಲ್ಲಿ ಇತಿಹಾಸವು ವಹಿಸುವ ಪಾತ್ರವನ್ನು ಸಹ ನಾವು ತಿಳಿದುಕೊಳ್ಳಬೇಕು. ಆದರೂ, ಪ್ರಥಮವಾಗಿ, ವಿಷಯದ ಕುರಿತು ವಿಜ್ಞಾನವು ನಮಗೆ ಏನು ಹೇಳಬಲ್ಲದೋ ಅದರ ಕಡೆಗೆ ನಮ್ಮ ದೃಷ್ಟಿ ಹರಿಸೋಣ.

ಮಾನವರನ್ನು ವರ್ಗೀಕರಿಸುವುದರಲ್ಲಿನ ಸಮಸ್ಯೆಗಳು

ಲೋಕದ ಬೇರೆಬೇರೆ ಭಾಗಗಳಲ್ಲಿ ಜೀವಿಸುತ್ತಿರುವ ಜನರು ವೈವಿಧ್ಯಮಯವಾದ ಭೌತಿಕ ಗುಣಲಕ್ಷಣಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಚರ್ಮದ ವರ್ಣ, ಮುಖ ಭಾವಗಳ ಆಕಾರ, ಕೂದಲಿನ ರಚನೆ, ಮತ್ತು ಇತ್ಯಾದಿಗಳು ಒಳಗೊಂಡಿವೆ. ಅಂತಹ ಭೌತಿಕ ವ್ಯತ್ಯಾಸಗಳು ಒಂದು ಕುಲವನ್ನು ಇನ್ನೊಂದರಿಂದ ಪ್ರತ್ಯೇಕಿಸುತ್ತವೆ.

ಹೀಗೆ, ಚರ್ಮದ ವರ್ಣಕ್ಕೆ ಪ್ರಾಮುಖ್ಯತೆಯನ್ನು ಕೊಡುವ ಮೂಲಕ, ಜನರು ಸಾಮಾನ್ಯವಾಗಿ ಬಿಳಿಯರ ಮತ್ತು ಕರಿಯರ ಕುರಿತಾಗಿ ಮಾತಾಡುತ್ತಾರೆ. ಆದರೆ ಸ್ಪೆಯಿನ್‌ನವರು, ಏಷ್ಯಾದವರು, ಸ್ಕಾಂಡಿನೇವಿಯದವರು, ಯೆಹೂದ್ಯರು, ಮತ್ತು ರಷ್ಯನರ ಕುರಿತಾಗಿ ಕೂಡ ಜನರು ಮಾತಾಡುತ್ತಾರೆ. ಈ ಎರಡನೆಯ ಗುರುತಿಸುವಿಕೆಗಳು ಭೌಗೋಳಿಕ, ರಾಷ್ಟ್ರೀಯ, ಅಥವಾ ಸಾಂಸ್ಕೃತಿಕ ವ್ಯತ್ಯಾಸಗಳಿಗಿಂತಲೂ ಭೌತಿಕ ಗುಣಲಕ್ಷಣಗಳಿಗೆ ಕಡಿಮೆ ಅನ್ವಯಿಸುತ್ತವೆ. ಆದುದರಿಂದ ಅಧಿಕಾಂಶ ಜನರಿಗೆ ಕೇವಲ ಭೌತಿಕ ಲಕ್ಷಣಗಳಿಂದ ಮಾತ್ರವಲ್ಲ ಆದರೆ ಸಂಪ್ರದಾಯಗಳು, ಭಾಷೆ, ಸಂಸ್ಕೃತಿ, ಮತ್ತು ರಾಷ್ಟ್ರೀಯತೆಗಳಿಂದಲೂ ಕೂಡ ಕುಲವನ್ನು ನಿರ್ಧರಿಸಲಾಗುತ್ತಿದೆ.

ಆದರೂ, ಆಸಕ್ತಿಕರವಾಗಿಯೇ, ಕೆಲವು ಬರಹಗಾರರು ಎಷ್ಟುಮಾತ್ರಕ್ಕೂ ವಿಷಯದ ಮೇಲೆ “ಕುಲ” ಎಂಬ ಪದವನ್ನು ಉಪಯೋಗಿಸಲು ಹಿಂಜರಿಯುತ್ತಾರೆ; ಪ್ರತಿಯೊಂದು ಬಾರಿ ಅದು ಗೋಚರಿಸುವಾಗಲೂ ಅವರು ಆ ಪದವನ್ನು ಉದ್ಧರಣ ಚಿಹ್ನೆಗಳಲ್ಲಿ ಇಡುತ್ತಾರೆ. ಇತರರು ಆ ಪದವನ್ನು ಸಂಪೂರ್ಣವಾಗಿ ತ್ಯಜಿಸುತ್ತಾರೆ ಮತ್ತು ಅದಕ್ಕೆ ಬದಲಾಗಿ “ಕುಲ ಸಂಬಂಧವಾದ ತತ್ವ,” “ಗುಂಪುಗಳು,” “ಜನಸಂಖ್ಯೆಗಳು,” ಮತ್ತು “ವೈವಿಧ್ಯತೆಗಳು” ಇಂತಹ ಪದ ವಿನ್ಯಾಸಗಳನ್ನು ಉಪಯೋಗಿಸುತ್ತಾರೆ. ಯಾಕೆ? ಯಾಕಂದರೆ “ಕುಲ” ಎಂಬ ಪದವು ಸಾಮಾನ್ಯವಾಗಿ ಗ್ರಹಿಸಲ್ಪಟ್ಟಿರುವಂತೆ, ಅನುಸ್ವರ ಮತ್ತು ದೋಷಾರೋಪಣೆಗಳೊಂದಿಗೆ ಎಷ್ಟೊಂದು ಭಾರವಾಗಿದೆಯೆಂದರೆ ಅದರ ಉಪಯೋಗವು, ಯೋಗ್ಯವಾದ ಸ್ಪಷ್ಟೀಕರಣವಿಲ್ಲದೆ, ಚರ್ಚೆಯ ಅಂಶವನ್ನು ಅನೇಕವೇಳೆ ಅಸೃಷ್ಟಗೊಳಿಸುತ್ತದೆ.

ಜೀವಶಾಸ್ತ್ರಜ್ಞರಿಗೆ ಮತ್ತು ಮಾನವಶಾಸ್ತ್ರಜ್ಞರಿಗೆ, ಒಂದು ಕುಲವು “ಒಂದು ವರ್ಗೀಕರಣದ ಜಾತಿಯ ಪುನರ್ವಿಭಾಗವಾಗಿದ್ದು ಅದು ಭೌತಿಕ ಗುಣಲಕ್ಷಣಗಳನ್ನು ವಂಶಾನುಕ್ರಮವಾಗಿ ಪಡೆದು ಅದನ್ನು ಇತರ ಜಾತಿಯ ಜನಸಂಖ್ಯೆಯಿಂದ ಬೇರ್ಪಡಿಸುತ್ತದೆ,” ಎಂದು ಆಗಾಗ್ಗೆ ವಿವರಿಸಲಾಗಿದೆ. ಹಾಗಿದ್ದರೂ, ಪ್ರಶ್ನೆಯೇನಂದರೆ, ಮಾನವ ಜಾತಿಗಳಲ್ಲಿರುವ ಬೇರೆಬೇರೆ ಗುಂಪುಗಳನ್ನು ವಿವರಿಸಲು ಯಾವ ಗುಣಲಕ್ಷಣಗಳನ್ನು ಉಪಯೋಗಿಸ ಸಾಧ್ಯವಿದೆ?

ಚರ್ಮದ ವರ್ಣ, ಕೂದಲಿನ ವರ್ಣ ಮತ್ತು ವಿನ್ಯಾಸ, ಕಣ್ಣುಗಳು ಮತ್ತು ಮೂಗಿನ ಆಕಾರ, ಮೆದುಳಿನ ಗಾತ್ರ, ಮತ್ತು ರಕ್ತದ ಮಾದರಿಗಳಂಥ ಅಂಶಗಳು ಸೂಚಿಸಲ್ಪಟ್ಟಿವೆ, ಆದರೆ ಮಾನವ ಕುಲದ ಪ್ರಭೇದಗಳ ಒಂದು ವರ್ಗೀಕರಣದೋಪಾದಿ ಇವುಗಳಲ್ಲಿ ಒಂದಾದರೂ ಸಂಪೂರ್ಣವಾಗಿ ತೃಪ್ತಿಕರವಾದುದೆಂದು ರುಜುವಾಗಿಲ್ಲ. ಇದು ಯಾಕಂದರೆ ಅಂಥ ವೈಲಕ್ಷಣ್ಯಗಳಲ್ಲಿ ಎಲ್ಲಾ ಸದಸ್ಯರೂ ಏಕಪ್ರಕಾರವಾಗಿ ಒಂದೇ ರೀತಿಯಲ್ಲಿರುವಂಥ ಸ್ವಾಭಾವಿಕವಾಗಿ ಸಂಭವಿಸುವ ಜನರ ಗುಂಪು ಇಲ್ಲದಿರುವದರಿಂದಲೇ.

ಚರ್ಮದ ವರ್ಣವನ್ನು ಪರಿಗಣಿಸಿ. ಅಧಿಕಾಂಶ ಜನರು ನಂಬುತ್ತಾರೇನಂದರೆ ಚರ್ಮದ ವರ್ಣದ ಮೂಲಕ ಮಾನವ ಕುಲವನ್ನು ಐದು ಕುಲಗಳನ್ನಾಗಿ ಸುಲಭವಾಗಿ ವಿಭಾಗಿಸ ಸಾಧ್ಯವಿದೆ: ಬಿಳಿ, ಕಪ್ಪು, ಕಂದು, ಪೀತ, ಮತ್ತು ಕೆಂಪು. ಬಿಳಿಯ ವರ್ಣೀಯರು ಸಾಮಾನ್ಯವಾಗಿ ಬಿಳಿ ಚರ್ಮ, ನಸು ವರ್ಣದ ಕೂದಲು, ಮತ್ತು ನೀಲ ಕಣ್ಣುಗಳುಳ್ಳವರೆಂದು ಗ್ರಹಿಸಲಾಗಿದೆ. ಆದರೂ, ವಾಸ್ತವದಲ್ಲಿ, ಬಿಳಿಯ ವರ್ಣೀಯರೆಂದು ಕರೆಯಲ್ಪಟ್ಟಿರುವ ಸದಸ್ಯರುಗಳಲ್ಲಿ ಕೂದಲಿನ ವರ್ಣ, ನೇತ್ರ ವರ್ಣ, ಮತ್ತು ಚರ್ಮ ವರ್ಣಗಳಲ್ಲಿ ಮಹತ್ತಾದ ವಿವಿಧತೆಗಳಿವೆ. ಮಾನವ ಜಾತಿಗಳು [ದ ಹ್ಯೂಮನ್‌ ಸ್ಪೀಷೀಸ್‌] ಎಂಬ ಪುಸ್ತಕವು ವರದಿಸುವುದು: “ಅಧಿಕಾಂಶ ಸದಸ್ಯರು ಒಂದೇ ರೀತಿಯನ್ನು ಅನುಸರಿಸುವ ಯಾವ ಜನಸಂಖ್ಯೆಯೂ ಇಂದು ಯೂರೋಪ್‌ನಲ್ಲಿಲ್ಲ ಮಾತ್ರವಲ್ಲ; ಅಂತಹ ಜನಸಂಖ್ಯೆಗಳು ಅಲ್ಲಿರಲೇ ಇಲ್ಲ.”

ನಿಶ್ಚಯವಾಗಿ, ಮಾನವ ಕುಲದ ವಿಧಗಳು [ದ ಕೈಂಡ್ಸ್‌ ಆಫ್‌ ಮ್ಯಾನ್‌ಕೈಂಡ್‌] ಎಂಬ ಪುಸ್ತಕವು ಗಮನಿಸುವಂತೆ ಮಾನವ ಜಾತಿಯನ್ನು ವರ್ಗೀಕರಿಸುವುದು ಕಷ್ಟಕರವಾದುದಾಗಿದೆ: “ನಾವೆಲ್ಲರೂ ಇದನ್ನು ಹೇಳಶಕ್ತರಿರುವಂತೆ ತೋರುತ್ತದೆ: ಎಲ್ಲಾ ಮಾನವ ಜೀವಿಗಳು ಇತರ ಎಲ್ಲಾ ಮಾನವ ಜೀವಿಗಳಂತೆ ಕಾಣುವುದಿಲ್ಲವಾದರೂ, ಮತ್ತು ಜನರು ಬೇರೆಯಾಗಿ ಕಾಣುವಂತಹ ಅನೇಕ ವಿಧಾನಗಳನ್ನು ನಾವು ಸ್ಪಷ್ಟವಾಗಿಗಿ ನೋಡಬಲ್ಲೆವಾದರೂ, ಮಾನವ ಕುಲದಲ್ಲಿ ಎಷ್ಟೊಂದು ರೀತಿಯ ವರ್ಗಗಳಿವೆ ಎಂಬ ವಿಷಯದ ಮೇಲೆ ಇನ್ನೂ ಕೂಡ ವಿಜ್ಞಾನಿಗಳು ನಿಷ್ಕೃಷ್ಟವಾಗಿ ಸಹಮತದಲ್ಲಿಲ್ಲ. ಜನರನ್ನು ಒಂದರಿಂದ ಇನ್ನೊಂದು ಕುಲಕ್ಕೆ ನಿಷ್ಕರ್ಷಿಸಲು ಯಾವ ಒರೆಗಲ್ಲನ್ನು (ಗುಣ ವಿಮರ್ಶೆ) ನಾವು ಉಪಯೋಗಿಸಬಲ್ಲೆವು ಎಂಬುದನ್ನು ಅವರಿನ್ನೂ ನಿರ್ಧರಿಸಿಲ್ಲ. ಕೆಲವು ವಿಜ್ಞಾನಿಗಳು ಸಂಶೋಧನೆಯನ್ನು ತ್ಯಜಿಸಲು ಬಯಸುತ್ತಾರೆ ಮತ್ತು ಪರಿಹಾರವು ಇಲ್ಲದಿರುವುದರಿಂದ, ಸಮಸ್ಯೆಯು ತೀರಾ ಕಷ್ಟಕರವಾದದ್ದು ಎಂದನ್ನುತ್ತಾರೆ!”

ಇದೆಲ್ಲವೂ ಒಗಟಾಗಿ ಕಾಣಬಹುದು. ಪ್ರಾಣಿಗಳನ್ನು ಮತ್ತು ಸಸ್ಯಗಳನ್ನು ವರ್ಗ, ಜಾತಿ, ಮತ್ತು ಉಪ ಜಾತಿಗಳನ್ನಾಗಿ ವರ್ಗೀಕರಿಸುವುದರಲ್ಲಿ ಸ್ಪಷ್ಟವಾಗಿಗಿಯೇ ವಿಜ್ಞಾನಿಗಳಿಗೆ ಸ್ಪಲ್ಪವೇ ಕಷ್ಟವಿರುವುದಾದರೂ, ಮಾನವಜಾತಿಯನ್ನು ಕುಲಗಳನ್ನಾಗಿ ವಿಂಗಡಿಸುವುದರಲ್ಲಿ ಅಂತಹ ಒಂದು ಸಮಸ್ಯೆಯನ್ನು ಅವರು ಯಾಕೆ ಹೊಂದಿದ್ದಾರೆ?

“ಮಾನವನ ಅತಿ ಅಪಾಯಕಾರಿ ಮಿಥ್ಯೆ”

ಮಾನವಶಾಸ್ತ್ರಜ್ಞ ಆಶ್ಲೆ ಮಾಂಟಗು ಅವರಿಗನುಸಾರ, ಅನೇಕ ಜನರು ನಂಬುತ್ತಾರೇನಂದರೆ “ಭೌತಿಕ ಮತ್ತು ಮಾನಸಿಕ ಗುಣಗಳು ಒಂದಕ್ಕೊಂದು ಹೊಂದಿಕೊಂಡಿರುವುದರಿಂದ, ಭೌತಿಕ ವ್ಯತ್ಯಾಸಗಳು ಮಾನಸಿಕ ಸಾಮರ್ಥ್ಯಗಳಲ್ಲಿ ತಕ್ಕಮಟ್ಟಿಗೆ ವಿಧ್ಯುಕ್ತವಾಗಿ ಹೇಳಲ್ಪಟ್ಟ ವ್ಯತ್ಯಾಸಗಳೊಂದಿಗೆ ಸೇರಿಕೊಂಡಿವೆ, ಮತ್ತು ಬುದ್ಧಿಶಕ್ತಿಯ ಭಾಗಲಬ್ದ (IQ) ಪರೀಕೆಗ್ಷಳಿಂದ ಮತ್ತು ಈ ಜನಸಂಖ್ಯೆಗಳ ಸಾಂಸ್ಕೃತಿಕ ಸಾಧನೆಗಳಿಂದ ಈ ವ್ಯತ್ಯಾಸಗಳನ್ನು ಅಳೆಯಸಾಧ್ಯವಿದೆ.”

ಹೀಗೆ, ಕುಲಗಳು ವಿವಿಧ ಭೌತಿಕ ಗುಣಲಕ್ಷಣಗಳನ್ನು ಪಡೆದಿರುವುದರಿಂದ, ನಿರ್ದಿಷ್ಟ ಕುಲಗಳು ಬುದ್ಧಿಶಕ್ತಿಯಲ್ಲಿ ಉತ್ಕೃಷ್ಟರೂ ಮತ್ತು ಇತರರು ಕೀಳಾದವರೂ ಎಂದು ಅನೇಕರು ನಂಬುತ್ತಾರೆ. ಹಾಗಿದ್ದರೂ, ಮಾಂಟಗು ಅಂತಹ ಆಲೋಚನೆಯನ್ನು “ಮಾನವ”ನ ಅತಿ ಅಪಾಯಕಾರಿ ಮಿಥ್ಯೆ ಎಂದು ಕರೆಯುತ್ತಾರೆ. ಇತರ ತಜ್ಞರೂ ಇದನ್ನು ಒಪ್ಪುತ್ತಾರೆ.

ಮಾರ್ಟನ್‌ ಕ್ಲಾಸ್‌ ಮತ್ತು ಹಾಲ್‌ ಹೆಲ್‌ಮನ್‌, ದ ಕೈಂಡ್ಸ್‌ ಆಫ್‌ ಮ್ಯಾನ್‌ಕೈಂಡ್‌ನಲ್ಲಿ ವಿವರಿಸುವುದು: “ವ್ಯಕ್ತಿಗಳು ಭಿನ್ನವಾಗಿದ್ದಾರೆ; ಎಲ್ಲಾ ಜನಸಂಖ್ಯೆಗಳಲ್ಲಿ, ಅಸಾಧಾರಣ ಪ್ರತಿಭಾಶಾಲಿಗಳೂ, ಹುಟ್ಟುಹೆಡ್ಡರೂ ಇದ್ದಾರೆ. ಆದರೆ, ಎಲ್ಲಾ ಸಂಶೋಧನೆ ಮಾಡಿದ ಅನಂತರ, ಜವಾಬ್ದಾರರಾದ ಪಂಡಿತರು ಜನಸಂಖ್ಯೆಗಳ ನಡುವಿನ ಸಾಮರ್ಥ್ಯ ಅಥವಾ ಬುದ್ಧಿಶಕ್ತಿಗೆ ಸಂಬಂಧಿಸಿರುವ ತಳಿಶಾಸ್ತ್ರದ ವ್ಯತ್ಯಾಸಗಳನ್ನು—ಅವರು ಅಂಗೀಕರಿಸಬಲ್ಲ ರುಜುವಾತನ್ನು—ಕಂಡಿರುವುದಿಲ್ಲ.”

ಆದರೂ, ಬಾಹ್ಯ ತೋರಿಕೆಯ ಭೌತಿಕ ವ್ಯತ್ಯಾಸಗಳು ಕುಲಗಳು ಮೂಲಭೂತವಾಗಿಯೇ ಬೇರೆಬೇರೆಯಾಗಿವೆಯೆಂದು ಅರ್ಥೈಸುತ್ತವೆಂದು ಅನೇಕರು ನಂಬುವುದನ್ನು ಯಾಕೆ ಮುಂದುವರಿಸುತ್ತಾರೆ? ನಿಜವಾಗಿಯೂ, ಯಾವ ವಿಧದಲ್ಲಿ ಕುಲವು ಅಂತಹ ಒಂದು ವಿವಾದಾಂಶವಾಗಿ ಪರಿಣಮಿಸಿತು? ಮುಂದಿನ ಲೇಖನದಲ್ಲಿ ಈ ವಿಚಾರಗಳನ್ನು ನಾವು ಪರಿಗಣಿಸುವೆವು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ