ಕುಲದ ಕುರಿತು ನಾವು ತಿಳಿದಿರುವ ವಿಷಯಗಳು
ಸುಮಾರು 500 ವರ್ಷಗಳ ಹಿಂದೆ ಯೂರೋಪಿಯನರು ಭೂಮಿಯ ಅನ್ವೇಷಣೆಯನ್ನು ಮಾಡಲು ನೌಕಾಯಾನ ಆರಂಭಿಸಿದಾಗ, ಯಾವ ರೀತಿಯ ಜನರನ್ನು ಅವರು ಭೇಟಿಯಾಗಲಿರುವರು ಎಂಬ ವಿಚಾರದಲ್ಲಿ ಕೌತುಕತೆಯುಳ್ಳವರಾಗಿದ್ದರು. ಸಾಗರಗಳನ್ನು ದಾಟುತ್ತಾ ಬರುವ ಮತ್ತು ಹಡಗುಗಳನ್ನು ಒಂದೇ ಹಸ್ತದಲ್ಲಿ ಪುಡಿಮಾಡುವ ದೈತ್ಯರ ಪುರಾಣಕಥೆಗಳಿದ್ದವು. ಜ್ವಾಲೆಯನ್ನು ಹೊರಸೂಸುವ ನಾಯಿ-ತಲೆಯ ಮನುಷ್ಯರಿದ್ದಾರೆ ಎಂಬ ಕಥೆಯಿತ್ತು. ಹಸೀ ಮಾಂಸವನ್ನು ತಿನ್ನುವ ಮತ್ತು ಸೂರ್ಯನಿಂದ ಅವರಿಗೆ ನೆರಳನ್ನೀಯುವ ದೊಡ್ಡ, ಹೊರಚಾಚಿರುವ ತುಟಿಗಳುಳ್ಳ ಕಲ್ಪಿತ ಕಥೆಗಳಲ್ಲಿರುವ “ಅಸಾಮಾಜಿಕ” ವ್ಯಕ್ತಿಗಳನ್ನು ಅವರು ಸಂದರ್ಶಿಸಲಿರುವರೋ? ಇಲ್ಲವೇ, ಬಾಯಿಗಳಿರದ, ಸೇಬುಹಣ್ಣುಗಳನ್ನು ಮೂಸುವದರಿಂದ ಜೀವಿಸುವ ಮನುಷ್ಯರನ್ನು ಅವರು ಕಾಣುವರೋ? ರೆಕ್ಕೆಗಳಾಗಿ ಉಪಯೋಗಿಸಬಹುದಾದಷ್ಟು ದೊಡ್ಡ ಕಿವಿಗಳಿರುವ ಯಾ ತಮ್ಮ ಒಂದು ದೊಡ್ಡ ಪಾದದ ಕೆಳಗಿನ ನೆರಳಿನಲ್ಲಿ ಬೆನ್ನ ಮೇಲೆ ಮಲಗುತ್ತಾರೆಂದು ಹೇಳಿರುವವರ ಕುರಿತಾಗಿ ಏನು?
ಮನುಷ್ಯರು ಸಮುದ್ರಗಳಲ್ಲಿ ಸಂಚರಿಸಿದರು, ಪರ್ವತಗಳನ್ನು ಏರಿದರು, ಅರಣ್ಯಗಳ ಮಧ್ಯೆ ತಮ್ಮ ದಾರಿಗಳನ್ನು ಕಡಿದರು, ಮರುಭೂಮಿಯ ಮೂಲಕ ನಡೆದರು, ಆದರೆ ಎಲ್ಲಿಯೂ ಅವರು ಅಂಥಹ ವಿಚಿತ್ರ ಜೀವಿಗಳನ್ನು ನೋಡಲಿಲ್ಲ. ಬದಲಿಗೆ, ಅನ್ವೇಷಕರು ತಮ್ಮಂತೆಯೇ ಇರುವ ಜನರನ್ನು ಕಂಡುಕೊಳ್ಳುವದರಲ್ಲಿ ಅಚ್ಚರಿಪಟ್ಟರು. ಕ್ರಿಸ್ಟೊಫರ್ ಕೊಲಂಬಸ್ ಬರೆದದ್ದು: “ಈ ದ್ವೀಪಗಳಲ್ಲಿ [ವೆಸ್ಟ್ ಇಂಡೀಸ್] ಅನೇಕರು ನಿರೀಕ್ಷಿಸಿದ್ದಂತೆ, ಯಾವುದೇ ಮಾನವ ವಿಕಾರತೆಗಳನ್ನು ನಾನು ಇಷ್ಟರ ತನಕ ಕಂಡುಕೊಳ್ಳಲಿಲ್ಲ, ಬದಲಿಗೆ, ಈ ಎಲ್ಲಾ ಜನರಲ್ಲಿ ಉತ್ತಮ ಮುಖಲಕ್ಷಣಗಳಿಗೆ ಮಾನ್ಯತೆಯಿತ್ತು. . . . ಆದಕಾರಣ ನಾನು ಕೇವಲ ಜನರನ್ನು ಹೊರತಾಗಿ . . . ಮಾನವ ಮಾಂಸವನ್ನು ತಿನ್ನುವ . . . ಯಾವುದೇ ವಿಕಾರತೆಯ ಜೀವಿಗಳನ್ನಾಗಲಿ ಯಾ ಅವುಗಳ ಯಾವುದೇ ವರದಿಗಳನ್ನಾಗಲಿ ಕೇಳಲಿಲ್ಲ. . . . ಇನ್ನಿತರರಿಗಿಂತ ಅವರು ಹೆಚ್ಚು ವೈರೂಪ್ಯತೆಯೇನೂ ಇದ್ದವರಾಗಿರಲಿಲ್ಲ.”
ಮಾನವಕುಲವನ್ನು ವರ್ಗೀಕರಿಸುವದು
ಈ ರೀತಿಯಲ್ಲಿ, ಭೂಸಂಶೋಧನೆಯ ಜತೆಯಲ್ಲಿ, ಮಾನವ ವೈವಿಧ್ಯತೆಯನ್ನು ಕಟ್ಟು ಕಥೆ ಮತ್ತು ಮಿಥ್ಯ ಸಾಮ್ರಾಜ್ಯದಿಂದ ತೆಗೆಯಲ್ಪಟ್ಟಿತು. ಜನರನ್ನು ಅವಲೋಕಿಸಬಹುದಿತ್ತು ಮತ್ತು ಅಭ್ಯಾಸಿಸಬಹುದಿತ್ತು. ಸಮಯಾನಂತರ, ವಿಜ್ಞಾನಿಗಳು ಅವರನ್ನು ವರ್ಗೀಕರಿಸಲು ಆರಂಭಿಸಿದರು.
1735ರಲ್ಲಿ ಸಿಡ್ವೀಶ್ ಸಸ್ಯಶಾಸ್ತ್ರಜ್ಞ ಕರೊಲಸ್ ಲಿನ್ನಾಯುಸ್ ತನ್ನ ಸಿಸಮ್ಟಾ ನೆಟುರೈವನ್ನು ಪ್ರಕಾಶಿಸಿದನು. ಅದರಲ್ಲಿ ಮನುಷ್ಯನನ್ನು ಮನುಷ್ಯ ಪ್ರಾಣಿಜಾತಿ (ಹೋಮೊ ಸಪಿಯನ್ಸ್) ಎಂದು ಹೆಸರಿಸಿದನು, ಅಂದರೆ “ವಿವೇಕಿಯಾದ ಮನುಷ್ಯನು,” ಒಬ್ಬ ಲೇಖಕನಿಗನುಸಾರ, ಇದು ಯಾವುದೇ ಒಂದು ವರ್ಗೀಕೃತ ಜಾತಿಗಳಲ್ಲಿ ಎಂದೆಂದಿಗೂ ಕಳ್ಳತನದಿಂದ ಕೊಡಲ್ಪಟ್ಟ ದರ್ಪದ ಅರ್ಥನಿರೂಪಣೆ ಎಂದು ಹೇಳಿದ್ದಾನೆ! ಲಿನ್ನಾಯುಸ್ನು ಮಾನವಕುಲವನ್ನು ಐದು ಗುಂಪುಗಳಾಗಿ ವಿಂಗಡಿಸಿದನು, ಅವುಗಳನ್ನು ಈ ರೀತಿ ವಿವರಿಸಲಾಗಿದೆ:
ಆಫ್ರಿಕನ್: ಕಪ್ಪು, ಜಡ, ಕಟ್ಟುನಿಟ್ಟಿನಲ್ಲಿ ಸಡಿಲತೆ. ಕಪ್ಪು ಗುಂಗುರು ಕೂದಲು; ರೇಷ್ಮೆಯಂಥಹ ಚರ್ಮ; ಚಪ್ಪಟೆ ಮೂಗು; ಉಬ್ಬಿಕೊಂಡ ತುಟಿಗಳು; ಕುಟಿಲ, ಸೋಮಾರಿ, ನಿರ್ಲಕ್ಷ್ಯ; ತನ್ನನ್ನು ಕೊಬ್ಬಿನಿಂದ ಬಳಿಸಿಕೊಳ್ಳುವನು; ಮನಬಂದಂತೆ ವರ್ತಿಸುವವನು.
ಅಮೆರಿಕನ್: ತಾಮ್ರ-ವರ್ಣದವನು, ರೇಗುವ ಸ್ವಭಾವದವನು, ನೆಟ್ಟಗೆ ನಿಲ್ಲುವ; ಕಪ್ಪು, ನೇರ, ದಪ್ಪ ಕೂದಲು; ಮೂಗು ಹೊಳ್ಳೆಗಳು ಅಗಲ; ಮುಖವು ಕರ್ಕಶ; ವಿರಳ ಗಡ್ಡ; ಹಠಮಾರಿ, ಹೋರಾಟ ಮುಕ್ತನು; ನವಿರಾದ ಕೆಂಪು ಗೆರೆಗಳಿಂದ ತನ್ನನ್ನು ಬಣ್ಣಿಸಿಕೊಳ್ಳುವವನು; ಸಂಪ್ರದಾಯಗಳಿಂದ ನಿಯಂತ್ರಿಸಲ್ಪಟ್ಟವನು.
ಏಷಿಯಾಟಿಕ್: ಖಿನ್ನ ಮನಸ್ಕ, ಬಿರುಸು; ಕಪ್ಪು ಕೂದಲು; ಕರಿಯ ಕಣ್ಣುಗಳು; ನಿಷ್ಠುರ, ದರ್ಪದವನು, ದುರಾಶೆಯವನು; ಸಡಿಲ ವಸ್ತ್ರಗಳನ್ನು ಧರಿಸುವವನು; ಅಭಿಪ್ರಾಯಗಳಿಂದ ನಿಯಂತ್ರಿಸಲ್ಪಡುವವನು.
ಯೂರೋಪಿಯನ್: ನಸು ಹೊಂಬಣ್ಣ, ಆಶಾವಾದಿ, ತುಂಬಿದ ಮೈ; ಪೀತವರ್ಣದ, ಕಂದುಬಣ್ಣದ, ನಿರರ್ಗಳವಾದ ಕೂದಲು; ನೀಲಿಕಣ್ಣುಗಳು; ಸೌಮ್ಯ, ಚುರುಕು, ಹೊಸತರ ನಿರ್ಮಾಪಕ; ಒತ್ತುಗೂಡಿರುವ ಉಡುಪುಗಳನ್ನು ಧರಿಸುವವನು; ನಿಯಮಗಳಿಂದ ನಡಿಸಲ್ಪಡುವವನು.
ಕಾಡು ಮನುಷ್ಯ: ನಾಲ್ಕು ಕಾಲುಗಳುಳ್ಳ, ಮೂಕ, ತುಂಬಾ ಕೂದಲುಗಳುಳ್ಳವನು.
ಲಿನ್ನಾಯುಸ್ನು ಮಾನವಕುಲದ ಗುಂಪುಗಳನ್ನು ತಳಿಶಾಸ್ತ್ರಕ್ಕನುಸಾರ ಪಡೆದುಕೊಂಡ ಸ್ವಭಾವಗಳಿಗನುಸಾರ (ಚರ್ಮದ ಬಣ್ಣ, ಕೂದಲಿನ ಎಳೆಗಳ ರಚನೆ, ಮತ್ತು ಇತ್ಯಾದಿ) ಮಾಡಿರುವದಾದರೂ, ಅವನು ವ್ಯಕ್ತಿಸ್ವಭಾವದ ಬಗ್ಗೆ ಎಣಿಸುವಾಗ ವಕ್ರಭಾವದಿಂದ ಮಾಡಿರುತ್ತಾನೆಂಬುದನ್ನು ಗಮನಿಸಿರಿ. ಯೂರೋಪಿಯನರು “ಸೌಮ್ಯ, ಚುರುಕು, ಹೊಸತರ ನಿರ್ಮಾಪಕ” ಎಂದು ಸಮರ್ಥಿಸುವಾಗ, ಏಷಿಯಾಟಿಕ್ರು “ನಿಷ್ಠುರ, ದರ್ಪದವನು, ದುರಾಶೆಯವನು” ಎಂದೂ ಮತ್ತು ಆಫ್ರಿಕನ್ರು “ಕುಟಿಲ, ಸೋಮಾರಿ, ನಿರ್ಲಕ್ಷ್ಯ”ರೆಂದೂ ಲಿನ್ನಾಯುಸ್ನು ಚಿತ್ರಿಸಿರುತ್ತಾನೆ!
ಆದರೆ ಲಿನ್ನಾಯುಸ್ನು ತಪ್ಪುಮಾಡಿದ್ದಾನೆ. ಅಂಥಹ ವ್ಯಕ್ತಿಗತ ಸ್ವಭಾವಗಳು ಆಧುನಿಕ ಕುಲ ವರ್ಗೀಕರಣದಲ್ಲಿ ಯಾವುದೇ ಸ್ಥಾನವನ್ನು ಪಡೆದಿಲ್ಲ, ಯಾಕಂದರೆ ಪ್ರತಿಯೊಂದು ಜನತೆಯಲ್ಲಿ, ಅದೇ ಮನೋಧರ್ಮಗಳಿರುವ ಮತ್ತು ತದ್ರೀತಿಯ ಬುದ್ಧಿಶಕ್ತಿಯ ಶ್ರೇಣಿಯಿರುವವರನ್ನು ಸಂಶೋಧನೆಯು ತೋರಿಸಿದೆ. ಬೇರೊಂದು ಮಾತುಗಳಲ್ಲಿ, ಪ್ರತಿಯೊಂದು ಕುಲದ ಜನರಲ್ಲಿ ಅದೇ ರೀತಿಯ ನಿಶ್ಚಯಾತ್ಮಕ ಮತ್ತು ನಕಾರತ್ಮಕ ಗುಣಗಳನ್ನು ನಾವು ಕಾಣುತ್ತೇವೆ.
ಆಧುನಿಕ ವ್ಯವಸ್ಥೆಯ ಕೆಲವೊಮ್ಮೆ ಮಾನವರನ್ನು ಕಟ್ಟುನಿಟ್ಟಾಗಿ ಶಾರೀರಿಕ ಭಿನ್ನತೆಗಳ ಆಧಾರದ ಮೇಲೆ ಮೂರು ಗುಂಪುಗಳನ್ನಾಗಿ ವರ್ಗೀಕರಿಸುತ್ತದೆ: (1) ಕಾಕಸೊಯ್ಡ್ಸ್, ಸೊಗಸಾದ ಚರ್ಮ ಮತ್ತು ನೇರ ಯಾ ಅಲೆಯಂತಿರುವ ಕೂದಲುಗಳು; (2) ಮೊಂಗಲಾಯ್ಡ್ಸ್, ಹಳದಿವರ್ಣದ ಚರ್ಮ ಮತ್ತು ಕಣ್ಣಿನ ಸುತ್ತಲೂ ಒಳಮುಖವಾಗಿ ನೇತ್ರಪೊರೆಯುಳ್ಳವರು; ಮತ್ತು (3) ನೀಗ್ರೊಯ್ಡ್ಸ್, ಕಪ್ಪು ಚರ್ಮದ ಮತ್ತು ಉಣ್ಣೆ ಕೂದಲುಗಳುಳ್ಳವರು. ಆದರೆ ಪ್ರತಿಯೊಬ್ಬನು ನಿಖರವಾಗಿ ಈ ವರ್ಗೀಕರಣಗಳಲ್ಲಿ ಸೇರಿಕೊಳ್ಳುವದಿಲ್ಲ.
ಉದಾಹರಣೆಗೆ, ದಕ್ಷಿಣ ಆಫ್ರಿಕದ ಸಾನ್ ಮತ್ತು ಖೊಯ್ಖೊಯ್ಯಲ್ಲಿ ತಾಮ್ರ ವರ್ಣದ ಚರ್ಮ, ಉಣ್ಣೆಯಂತಹ ಕೂದಲು, ಮತ್ತು ಮೊಂಗಲಾಯ್ಡ್ ಮುಖಚರ್ಯೆಯುಳ್ಳವರು ಇದ್ದಾರೆ. ಕೆಲವು ಇಂಡಿಯನ್ ಜನರಿಗೆ ಕಪ್ಪು ಚರ್ಮ ಇದೆ ಆದರೆ ಕಾಕಸೊಯ್ಡ್ ಮುಖಚರ್ಯೆಗಳಿವೆ. ಆಷ್ಟ್ರೇಲಿಯನ್ ಮೂಲನಿವಾಸಿಗಳಿಗೆ ಕಪ್ಪು ಚರ್ಮವಿದೆ, ಆದರೆ ಅವರ ಉಣ್ಣೆಯಂತಹ ಕೂದಲುಗಳು ಕೆಲವೊಮ್ಮೆ ನಸು ಹೊಂಬಣ್ಣದ್ದಾಗಿರುತ್ತದೆ. ಕೆಲವು ಮಂಗೋಲಿಯನರಿಗೆ ಕಾಕಸೊಯ್ಡ್ ಕಣ್ಣುಗಳಿವೆ. ಒಂದು ವಿಭಾಗಿಸುವ ಸ್ಪಷ್ಟವಾಗಿದ ರೇಖೆಯೊಂದು ಅಸ್ತಿತ್ವದಲ್ಲಿಲ್ಲ.
ಈ ಸಮಸ್ಯೆಗಳು ಅನೇಕ ಮಾನವ ಶಾಸ್ತ್ರಜ್ಞರು “ಕುಲ” ಎಂಬ ಪದಕ್ಕೆ ಯಾವುದೇ ವೈಜ್ಞಾನಿಕ ಅರ್ಥ ಯಾ ಮೌಲ್ಯವಿಲ್ಲವೆಂದು ಪ್ರತಿಪಾದಿಸುತ್ತಾ, ಮಾನವಕುಲವನ್ನು ವರ್ಗೀಕರಿಸುವ ಪ್ರಯತ್ನಗಳನ್ನು ತೊರೆಯುವಂತೆ ಅವರನ್ನು ಮಾಡಿದೆ.
ಯುನೆಸ್ಕೊ ಘೋಷಣೆಗಳು
ಪ್ರಾಯಶಃ ಯುನೆಸ್ಕೊದಿಂದ (ಸಂಯುಕ್ತ ರಾಷ್ಟ್ರಗಳ ಸಂಘದ ಶೈಕ್ಷಣಿಕ, ವೈಜ್ಞಾನಿಕ, ಮತ್ತು ಸಾಂಸ್ಕೃತಿಕ ಸಂಸ್ಥೆ) ಒಟ್ಟುಗೂಡಿಸಲ್ಪಟ್ಟ ತಜ್ಞರ ಒಂದು ತಂಡವು ಕುಲದ ಕುರಿತು ಮಾಡಿರುವಂತಹದ್ದು ಅಧಿಕೃತ ವೈಜ್ಞಾನಿಕ ಘೋಷಣೆಗಳಾಗಿದ್ದಿರಬಹುದು. 1950, 1951, 1964, ಮತ್ತು 1967ರಲ್ಲಿ ಜರುಗಿಸಲ್ಪಟ್ಟ ಕೂಟಗಳಲ್ಲಿ, ಮಾನವ ಶಾಸ್ತ್ರಜ್ಞರ, ಪ್ರಾಣಿ ಶಾಸ್ತ್ರಜ್ಞರ, ವೈದ್ಯರುಗಳ, ಶರೀರರಚನಾಶಾಸ್ತ್ರಜ್ಞರ, ಮತ್ತು ಇತರರ ಒಂದು ಅಂತರ್ರಾಷ್ಟ್ರೀಯ ತಂಡವು ಕುಲದ ಮೇಲೆ ನಾಲ್ಕು ಹೇಳಿಕೆಗಳನ್ನು ಒಟ್ಟಿಗೆ ಹೊರಡಿಸಿತು. ಕೊನೆಯ ಹೇಳಿಕೆಯು ಈ ಕೆಳಗಿನ ಮೂರು ವಿಷಯಗಳನ್ನು ಒತ್ತಿಹೇಳಿತು:
ಅ “ಎಲ್ಲಾ ಮನುಷ್ಯರು ಅದೇ ಮಾನವ ವಂಶಕ್ಕೆ ಸೇರಿವೆ ಮತ್ತು ಅದೇ ಬುಡಕಟ್ಟಿನಿಂದ ಬಂದಿವೆ.” ಈ ವಿಷಯವನ್ನು ಇನ್ನೊಬ್ಬ ಹೆಚ್ಚು ಹಿರಿಮೆಯ ಅಧಿಕಾರಿಯಿಂದ ಪುಷ್ಟೀಕರಿಸಲ್ಪಟ್ಟಿದೆ. ಬೈಬಲ್ ಹೇಳುವದು: “[ದೇವರು] ಒಬ್ಬ ಮನುಷ್ಯ [ಆದಾಮ] ನಿಂದಲೇ ಎಲ್ಲಾ ಜನಾಂಗದ ಜನರನ್ನು, ಭೂಮಂಡಲದ ಮೇಲೆ ವಾಸಮಾಡಲು ಉಂಟುಮಾಡಿದ್ದಾನೆ.”—ಅ.ಕೃತ್ಯಗಳು 17:26, NW.
ಯುನೆಸ್ಕೊದ ಹೇಳಿಕೆಯು ಮುಂದರಿಯುವದು:
ಆ “‘ಕುಲಗಳಾಗಿ’ ಮಾನವ ವಂಶಗಳ ವರ್ಗೀಕರಣವು ಆಂಶಿಕವಾಗಿ ಸಾಂಪ್ರದಾಯಿಕವು ಮತ್ತು ಆಂಶಿಕವಾಗಿ ಅವಿಚಾರಕವು ಆಗಿದ್ದು, ಇದರಲ್ಲಿ ಯಾವುದೇ ಕ್ರಮಬದ್ಧ ಶ್ರೇಣಿಯು ಸೂಚಿಸುವದಿಲ್ಲ. . . .
ಇ “ಪ್ರಚಲಿತ ಶರೀರಶಾಸ್ತ್ರದ ಜ್ಞಾನವು ಸಾಂಸ್ಕೃತಿಕ ಸಾಧನೆಗಳನ್ನು ತಳಿಶಾಸ್ತ್ರದ ಸಾಮರ್ಥ್ಯತೆಯಲ್ಲಿರುವ ಭಿನ್ನತೆಗಳಿಗೆ ಜೋಡಿಸುತ್ತದೆ ಎಂದು ಹೇಳಲು ನಮಗೆ ಅನುಮತಿಸುವದಿಲ್ಲ. ಭಿನ್ನ ಜನರ ಸಾಧನೆಗಳಲ್ಲಿರುವ ವ್ಯತ್ಯಾಸಗಳು ಅವರ ಸಾಂಸ್ಕೃತಿಕ ಇತಿಹಾಸಕ್ಕೆ ಏಕಮಾತ್ರವಾಗಿ ಸೇರಿಸಬೇಕು. ಇಂದು ಲೋಕದ ಜನರು ಯಾವುದೇ ಮಟ್ಟದ ನಾಗರೀಕತೆಯನ್ನು ಹೊಂದಲು ಸರಿಸಮಾನವಾದ ಜೀವವಿಜ್ಞಾನದ ಸಾಮರ್ಥ್ಯಗಳನ್ನು ಪಡೆದಿದ್ದಾರೆ ಎಂದು ತೋರುತ್ತದೆ.”
ಕುಲವರ್ಣದ ಶಾಪ
ಆದುದರಿಂದ ಯಾವುದೇ ಒಂದು ಕುಲವು ವಂಶಾನುಕ್ರಮವಾಗಿ ಹೆಚ್ಚು ಉತ್ತಮ ಇಲ್ಲವೇ ಇನ್ನೊಬ್ಬರ ಮೇಲೆ ಪ್ರಭುತ್ವ ನಡಿಸಲು ಹಕ್ಕು ಪಡೆದಿದೆ ಎಂದು ನಂಬಲು ಯಾವುದೇ ಆಧಾರವಿಲ್ಲ. ಆದರೆ ಜನರು ಯಾವಾಗಲೂ ವಾಸ್ತವಾಂಶಗಳ ಸಹಮತದಲ್ಲಿ ವರ್ತಿಸಿಲ್ಲ. ಉದಾಹರಣೆಗೆ, ಆಫ್ರಿಕನ್ ಗುಲಾಮರ ವ್ಯಾಪಾರವನ್ನು ಗಮನಿಸಿರಿ.
ಯೂರೋಪಿಯನ್ ರಾಷ್ಟ್ರಗಳು ವಸಾಹತು ಸಾಮ್ರಾಜ್ಯಗಳನ್ನು ಕಟ್ಟಲು ಆರಂಭಿಸಿದಾಗ, ಸ್ಥಳಜನ್ಯ ಜನರನ್ನು ಸ್ವಪ್ರಯೇಜನಕ್ಕೆ ದುಡಿಸಿಕೊಳ್ಳುವದು ಆರ್ಥಿಕವಾಗಿ ಅವರಿಗೆ ಲಾಭಕರವಾಗಿತ್ತು. ಆದರೆ ಇಲ್ಲಿ ಒಂದು ವಿರೋಧೋಕ್ತಿ ಇತ್ತು. ಲಕ್ಷಾಂತರ ಆಫ್ರಿಕಾನರು ಅವರ ಮನೆಗಳಿಂದ ಹೊರಗೆ ಎಳೆಯಲ್ಪಟ್ಟರು, ಅವರ ಪ್ರಿಯರ ಸಂಪರ್ಕದಿಂದ ಕಡಿಯಲ್ಪಟ್ಟರು, ಸರಪಳಿಯಿಂದ ಬಂಧಿಸಲ್ಪಟ್ಟರು, ಕೊರಡೆಗಳಿಂದ ಹೊಡೆಯಲ್ಪಟ್ಟರು, ಕಾದ ಕಬ್ಬಿಣದಿಂದ ಮುದ್ರೆ ಹಾಕಲ್ಪಟ್ಟರು, ಪ್ರಾಣಿಗಳಂತೆ ಮಾರಲ್ಪಟ್ಟರು, ಮತ್ತು ಅವರು ಸಾಯುವ ದಿನದ ತನಕ ಯಾವುದೇ ಸಂಬಳವನ್ನು ಕೊಡದೇ ದುಡಿಯುವಂತೆ ಬಲಾತ್ಕರಿಸಲ್ಪಟ್ಟರು. ಕ್ರೈಸ್ತರೆಂದು ಹೇಳಿಕೊಳ್ಳುವ ರಾಷ್ಟ್ರಗಳು ಮತ್ತು ಅವರಂತೆಯೇ ಅವರ ನೆರೆಯವರನ್ನು ಪ್ರೀತಿಸಬೇಕಾದವರು ಇದನ್ನು ಹೇಗೆ ನೈತಿಕವಾಗಿ ಸಮರ್ಥಿಸಿಕೊಳ್ಳಶಕ್ತರು?—ಲೂಕ 10:27.
ಅವರ ಬಲಿಪಶುಗಳನ್ನು ಅಮಾನವೀಯರನ್ನಾಗಿ ಮಾಡಲು ಅವರು ಆರಿಸಿದ ಪರಿಹಾರವಾಗಿತ್ತು. ಇದು 1840ರ ದಶಕಗಳಲ್ಲಿ ಒಬ್ಬ ಮಾನವ ಶಾಸ್ತ್ರಜ್ಞನ ಒಂದು ತರ್ಕಸರಣಿಯಾಗಿತ್ತು:
“ನೀಗ್ರೊ ಮತ್ತು ಆಷ್ಟ್ರೇಲಿಯನ್ರು ನಮ್ಮ ಸಹ ಸೃಷ್ಟಿ ಮತ್ತು ನಮ್ಮಂತೆ ಒಂದು ಕುಟುಂಬದವರಲ್ಲದಿದ್ದರೆ, ಬದಲಿಗೆ ಕೆಳದರ್ಜೆಯ ಜೀವಿಗಳಾಗಿದ್ದರೆ, ಮತ್ತು . . . ಕ್ರೈಸ್ತ ಪ್ರಪಂಚದ ನೈತಿಕತೆಯು ನೆಲಸಿರುತ್ತದೋ ಅದರಲ್ಲಿ ಅವರ ಕಡೆಗೆ ನಮ್ಮ ಕರ್ತವ್ಯಗಳ ಕುರಿತು ಯಾವುದೇ ನಿಶ್ಚಯಾತ್ಮಕ ಅಪ್ಪಣೆಗಳು ದೈವಧ್ಯಾನಪರವಾಗಿ ಇಲ್ಲದಿದ್ದರೆ, ಈ ಬುಡಕಟ್ಟುಗಳ ಕಡೆಗಿನ ನಮ್ಮ ಸಂಬಂಧವು ನಮ್ಮಿಂದ ಮತ್ತು ಕಾಡುಮನುಷ್ಯರ ಒಂದು ಕುಲದ ನಡುವೆ ಇರುವ ಹೊಟ್ಟೆಹೊರೆದುಕೊಳ್ಳುವವರು ಎಂದು ಊಹಿಸಿಕೊಳ್ಳುವದರಿಂದ ಹೆಚ್ಚೇನೂ ಭಿನ್ನವಾಗಿರುವದಿಲ್ಲ.”
ಬಿಳಿಯರಲ್ಲದ ಜನರು ಮನುಷ್ಯ ಜಾತಿಗಿಂತ ಕೆಳಗಿನವರು ಎಂಬ ಕಲ್ಪನೆಗೆ ಬೆಂಬಲವನ್ನು ಹುಡುಕುತ್ತಾ ಇದ್ದವರು, ಡಾರ್ವಿನನ ವಿಕಾಸವಾದವನ್ನು ಹಿಡಿದುಕೊಂಡರು. ನೆಲಸುನಾಡಿನ ಜನರು ಬಿಳಿಯರಿಗಿಂತ ವಿಕಾಸವಾದದ ಏಣಿಯಲ್ಲಿ ಕೆಳಸ್ತರದಲ್ಲಿರುವವರು ಎಂದವರು ವಾದಿಸಿದರು. ಬಿಳಿಯರಲ್ಲದವರು ಒಂದು ಭಿನ್ನವಾದ ವಿಕಾಸದ ಪರಿಕ್ರಮದ ಫಲಿತಾಂಶವಾಗಿ ಬಂದವರು ಮತ್ತು ಅವರು ಪೂರ್ಣ ಮಾನವರಲ್ಲ ಎಂದು ಇನ್ನಿತರರು ವಾದಿಸಿದರು. ಅವರ ಕುಲವರ್ಣೀಯ ದೃಷ್ಟಿಕೋನವನ್ನು ಬೆಂಬಲಿಸಲು ಶಾಸ್ತ್ರವಚನಗಳಿಗೆ ತಪ್ಪಾದ ಅರ್ಥವನ್ನು ಕೊಟ್ಟು, ಬೈಬಲಿನಿಂದ ಉಲ್ಲೇಖ ಮಾಡಿದರು.
ಆದರೆ ಅನೇಕ ಜನರು ಈ ಆಲೋಚನೆಯನ್ನು ಸ್ವೀಕರಿಸಲಿಲ್ಲ ಎಂಬುದು ಸತ್ಯ. ಲೋಕದ ಅನೇಕ ರಾಷ್ಟ್ರಗಳಿಂದ ಗುಲಾಮಗಿರಿಯು ಕಿತ್ತೆಸೆಯಲ್ಪಟ್ಟಿದೆ. ಆದರೆ ಪಕ್ಷಪಾತ, ಪೂರ್ವಕಲ್ಪಿತ ವಿಚಾರ, ಮತ್ತು ಕುಲವರ್ಣೀಯತೆಗಳು ಇಂದು ಸಜೀವವಾಗಿರುತ್ತವೆ ಮತ್ತು ಜನರ ಊಹನೆಯಲ್ಲಿ ಕೇವಲ ಕುಲಗಳೇ ಇಂದು ಮತಪಂಗಡಗಳಾಗಿ ಹುಟ್ಟಿ ಬಂದಿವೆ. ಪ್ರಾಣಿಶಾಸ್ತ್ರದ ಒಬ್ಬ ಪ್ರಾಚಾರ್ಯನು ಹೇಳಿದ್ದು: “ಅವನ ಯೋಚನೆಗೆ ಸರಿಹೊಂದುವ ಕುಲವೊಂದನ್ನು ಸೃಷ್ಟಿಸಲು ಯಾರೇ ಒಬ್ಬನು ಅರ್ಹನಾಗಿರುತ್ತಾನೆ ಎಂದು ತೋರುವದರಿಂದ, ರಾಜಕೀಯಸ್ಥರು, ವಿಶೇಷ ಪ್ರತಿಪಾದಕರು ಮತ್ತು ಸರಳ ಸಾಹಸಿಗರು ಕುಲ ವರ್ಗೀಕರಣಗಳಲ್ಲಿ ತೊಡಗಿರುತ್ತಾರೆ. ಅವರ ಮುದ್ದಿನ ಕಲ್ಪನೆಗಳಿಗೆ ಮತ್ತು ಪೂರ್ವಾಗ್ರಹಗಳಿಗೆ ‘ವೈಜ್ಞಾನಿಕ’ ಮಾನ್ಯತೆಯ ಪ್ರಭಾಮಂಡಲವನ್ನು ನೀಡಲು ಅವರು ವ್ಯಾಪಕವಾದ ಕುಲವರ್ಣೀಯ ಹೆಸರುಪಟ್ಟಿಗಳನ್ನು ನಿರ್ಮಿಸಿರುತ್ತಾರೆ.”
ನಾಝೀ ಜರ್ಮನಿಯ ಕುಲವರ್ಣೀಯ ಧೋರಣೆಗಳು ಒಂದು ಪ್ರಧಾನ ಉದಾಹರಣೆಯಾಗಿ ನಿಲ್ಲುತ್ತವೆ. ಆಡಲ್ಫ್ ಹಿಟ್ಲರನು ಆರ್ಯನ್ ಕುಲವನ್ನು ಶ್ಲಾಘಿಸಿರುವದಾದರೂ, ಶರೀರಶಾಸ್ತ್ರಕ್ಕನುಸಾರ ಅಂಥಹ ಸಂಗತಿಯೊಂದು ಇರುವದಿಲ್ಲ. ಅಂಥಹದ್ದು ಒಂದು ಎಂದಿಗೂ ಇರಲೂ ಇಲ್ಲ. ಹೊಂಬಣ್ಣದ, ನೀಲಿ ಕಣ್ಣಿನ ಯೆಹೂದ್ಯರು ಸ್ವೀಡನ್ನಲ್ಲಿ ಇದ್ದಾರೆ, ಇಥಿಯೋಪ್ಯದಲ್ಲಿ ಕಪ್ಪು ಯೆಹೂದ್ಯರು ಇದ್ದಾರೆ, ಮತ್ತು ಚೈನಾದಲ್ಲಿ ಮೊಂಗಲಾಯ್ಡ್ ಯೆಹೂದ್ಯರು ಇದ್ದಾರೆ. ಆದಾಗ್ಯೂ, ಯೆಹೂದ್ಯರು ಮತ್ತು ಇತರರು, ಕುಲವರ್ಣೀಯ ಧೋರಣೆಯೊಂದರ ಬಲಿಪಶುಗಳಾಗಿದ್ದರು. ಆ ಧೋರಣೆಯು 60 ಲಕ್ಷ ಯೆಹೂದ್ಯರನ್ನು, ಮತ್ತು ಪೊಲೇಂಡಿನ ಮತ್ತು ಸೊವಿಯೆಟ್ ಯೂನಿಯನ್ನ ಸ್ಲ್ಯಾವಿಕ್ ಜನರಂಥಹ ಅನೇಕರನ್ನು ಕೂಟಶಿಬಿರ ಕೇಂದ್ರಗಳಿಗೆ, ಗ್ಯಾಸ್ ಕೋಣೆಗಳಿಗೆ, ಮತ್ತು ಹತ್ಯೆಗೆ ನಡಿಸಿದೆ. (g90 12/8)
[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]
ಪ್ರತಿಯೊಂದು ಮಾನವ ಜನಸಂಖ್ಯೆಯೊಳಗೆ, ಬುದ್ಧಿಶಕ್ತಿಯಲ್ಲಿ ಅದೇ ರೀತಿಯ ವೈವಿಧ್ಯತೆಯು ಇದೆ ಎಂದು ವೈಜ್ಞಾನಿಕ ಸಂಶೋಧನೆಯು ತೋರಿಸಿದೆ
[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]
‘ರಾಜಕೀಯಸ್ಥರು, ವಿಶೇಷ ಪ್ರತಿಪಾದಕರು ಮತ್ತು ಸರಳ ಸಾಹಸಿಗರು, ಅವರ ಮುದ್ದಿನ ಕಲ್ಪನೆಗಳಿಗೆ ಮತ್ತು ಪೂರ್ವಾಗ್ರಹಗಳಿಗೆ “ವೈಜ್ಞಾನಿಕ” ಮಾನ್ಯತೆಯ ಪ್ರಭಾಮಂಡಲವನ್ನು ನೀಡಲು, ವ್ಯಾಪಕವಾದ ಕುಲವರ್ಣೀಯ ಹೆಸರುಪಟ್ಟಿಗಳನ್ನು ನಿರ್ಮಿಸಿರುತ್ತಾರೆ”
[ಪುಟ 7ರಲ್ಲಿರುವ ಸಂಕ್ಷಿಪ್ತ ವಿವರಣೆ]
ಈ ಪ್ರಕಟನಪತ್ರಗಳು ತೋರಿಸುವಂತೆ, ಆಫ್ರಿಕಾನರು ಜಾನುವಾರುಗಳೋ ಎಂಬಂತೆ, ಜಾಹೀರಾತು ಮಾಡಲ್ಪಟ್ಟು, ಮಾರಲ್ಪಡುತ್ತಿದ್ದರು