ಜಗತ್ತನ್ನು ಗಮನಿಸುವುದು
ಇಲಿಗಳ ಆರಾಧನೆ?
ಪ್ರತಿ ದಿನ ಸುಮಾರು 1,000 ಆರಾಧಕರು ಮತ್ತು ಸುಮಾರು 70 ಯಾತ್ರಿಕರು, ಭಾರತದ, ದೇಶ್‌ನೋಕ್‌ನಲ್ಲಿರುವ ಕುರ್ನಿ ಮಾತಾ ದೇವಾಲಯವನ್ನು ಸಂದರ್ಶಿಸುತ್ತಾರೆ. ಯಾಕೆ? ಭಕ್ತರು ವಿಗ್ರಹಗಳಿಗೆ ತಮ್ಮ ನೈವೇದ್ಯಗಳನ್ನು ಅರ್ಪಿಸುತ್ತಿರುವಾಗ ಸುಮಾರು 300 ಇಲಿಗಳು ನಿರಾತಂಕವಾಗಿ ಆ ದೇವಾಲಯದಲ್ಲಿ ಅಡ್ಡಾಡುತ್ತವೆ. ಇಲಿಗಳನ್ನು “ಪೂಜ್ಯ ಭಾವನೆಯಿಂದ ನೋಡಲಾಗುತ್ತದೆ ಮತ್ತು ಅವುಗಳ ಪ್ರತಿಯೊಂದು ಆವಶ್ಯಕತೆಯೂ ಕೂಡ ಮೋಹತೋರಿಸುವ ಆರಾಧಕರಿಂದ ಪೂರೈಸಲ್ಪಡುತ್ತದೆ,” ಎಂದು ನ್ಯೂ ಜೀಲೆಂಡ್‌ನ ಈವ್ನಿಂಗ್ ಪೋಸ್ಟ್ ಹೇಳುತ್ತದೆ. ದೇವಾಲಯದ ಪುರೋಹಿತರು ಊಟಮಾಡುವ ಬಟ್ಟಲುಗಳಲ್ಲೇ ಇಲಿಗಳು ಊಟ ಮಾಡುತ್ತವೆ ಮತ್ತು ಅದೇ ನೀರನ್ನು ಕುಡಿಯುತ್ತವೆ. “ಇವುಗಳು ಇಲಿಗಳಲ್ಲ, ಇವುಗಳು ದೇವರಿಂದ ಕಳುಹಿಸಲ್ಪಟ್ಟ ದೂತರೂ, ದೇವತೆಯಿಂದ ನಮಗೆ ಕಳುಹಿಸಲ್ಪಟ್ಟ ಒಂದು ವರವೂ ಆಗಿವೆ,” ಎಂದು ಪುರೋಹಿತರಲ್ಲಿ ಒಬ್ಬರು ನಿರೂಪಿಸುತ್ತಾರೆ. ಪೋಸ್ಟ್‌ಗನುಸಾರ, ದೇವಾಲಯದ ಪುರೋಹಿತರು ಸತ್ತಾಗ, ಇಲಿಗಳಾಗಿ ಪುನರವತಾರ ಪಡೆಯುವ ಮೂಲಕ ಅವರಿಗೆ ರಕ್ಷಣೆಯು ದೊರೆಯುತ್ತದೆಂದು ಪುರೋಹಿತನು ಹೇಳಿದನು. ಅವನು ಕೂಡಿಸಿದ್ದು, ಇಲಿಗಳು ಸತ್ತಾಗ ಅವುಗಳು ಪುರೋಹಿತರಾಗಿ ಪುನರವತರಿಸುತ್ತಾರೆ. (g93 11/08)
ಎರಡು ಸಾವಿರಕ್ಕಿಂತಲೂ ಅಧಿಕ ಭಾಷೆಗಳಲ್ಲಿ ಬೈಬಲಿನ ಭಾಗಗಳು
ಬೈಬಲಿನ ಭಾಗಗಳನ್ನು ಇನ್ನೂ 31 ಅಧಿಕ ಭಾಷೆಗಳಲ್ಲಿ ಭಾಷಾಂತರಿಸಲಾಗಿದೆಯೆಂದು, 1992ರಲ್ಲಿ ದಿ ಯುನೈಟೆಡ್ ಬೈಬಲ್ ಸೊಸೈಟೀಸ್ (ಯುಬಿಎಸ್) ಪ್ರಕಟಿಸಿತು; ಆದುದರಿಂದ ಈಗ ಬೈಬಲಿನ ಕಡಿಮೆ ಪಕ್ಷ ಒಂದು ಪುಸ್ತಕವಾದರೂ ದೊರೆಯುತ್ತಿರುವ ಭಾಷೆಗಳ ಒಟ್ಟು ಸಂಖ್ಯೆಯು 2,009ನ್ನು ತಲಪಿದೆ. ಅತಿಬೇಗನೆ ಈ ಸಂಖ್ಯೆಯು ಇನ್ನೂ ವೃದ್ಧಿಯಾಗಲಿಕ್ಕಿದೆ ಯಾಕಂದರೆ ಬೈಬಲಿನ ಇತರ ಭಾಗಗಳನ್ನು ಇನ್ನೂ 419 ಅಧಿಕ ಭಾಷೆಗಳಲ್ಲಿ ಯುಬಿಎಸ್ ಭಾಷಾಂತರಿಸುತ್ತಿದೆ. ಈಗ 329 ಭಾಷೆಗಳಲ್ಲಿ ಸಂಪೂರ್ಣ ಬೈಬಲುಗಳು ಮತ್ತು “ಹೊಸ ಒಡಂಬಡಿಕೆ”ಯು ಇನ್ನಿತರ 770 ಭಾಷೆಗಳಲ್ಲಿ ದೊರಕುತ್ತಿವೆ. “ಪ್ರಪಂಚದಲ್ಲಿರುವ ಭಾಷೆಗಳ ಒಟ್ಟು ಸಂಖ್ಯೆಯ ಅಂದಾಜುಗಳು 5,000ದಿಂದ 6,500ರ ತನಕದ ಸಂಖ್ಯಾಶ್ರೇಣಿಯನ್ನು ಹೊಂದಿವೆ,” ಎಂದು ಈಕ್ಯುಮೆನಿಕಲ್ ಪ್ರೆಸ್ ಸರ್ವಿಸ್ ಬರೆಯುತ್ತದೆ. ಕುತೂಹಲಕರವಾಗಿಯೆ, 1993ರ ವರೆಗೆ ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇಂಕ್., ಇಂದ ಸಂಪೂರ್ಣವಾಗಿ ಅಥವಾ ಭಾಗಶಃ ತಯಾರಿಸಲಾದ ಬೈಬಲ್‌ಗಳ ಒಟ್ಟು ಸಂಖ್ಯೆಯು 8.3 ಕೋಟಿಗಿಂತಲೂ ಅಧಿಕವಾಗಿದೆ.
ಉಪಯೋಗವುಳ್ಳ ಹಳೆಯ ರಬ್ಬರ್ ಟೈರ್‌ಗಳು
ಬ್ರೆಜಿಲ್‌ನಲ್ಲಿ, ವಾರ್ಷಿಕವಾಗಿ 1.7 ಕೋಟಿ ಕಾರ್ ಟೈರ್‌ಗಳನ್ನು ಸ್ಥಾನಪಲ್ಲಟಗೊಳಿಸಬೇಕಾಗುತ್ತದೆ. ಆದರೂ, ಅಂತಹ ಹಳೆಯ ಟೈರ್‌ಗಳನ್ನು ಒಳ್ಳೆಯ ಉಪಯೋಗಕ್ಕೆ ಹಾಕಸಾಧ್ಯವಿದೆ, ಅಂದರೆ, ರಬ್ಬರನ್ನು ಪುನಃ ಆವರ್ತನಗೊಳಿಸಿ ಹೆದ್ದಾರಿಯ ಮೇಲ್ಮೈಯನ್ನು ದುರಸ್ತುಮಾಡಲು ಉಪಯೋಗಿಸಲಾಗುವ ಕಲ್ಲರಗಿನೊಂದಿಗೆ ಮಿಶ್ರಗೊಳಿಸಲಾಗುತ್ತದೆಂದು ಸೂಪರೀಂಟರಸಾಂಟೆ ಪತ್ರಿಕೆಯು ವರದಿಸುತ್ತದೆ. ರಬ್ಬರಿನ ಟೈರುಗಳು ಪುನಃ ಆವರ್ತನಗೊಳಿಸುವಿಕೆಯ ಕುರಿತಾದ ಕಲ್ಪನೆಯು ಹೊಸತಲ್ಲವಾದರೂ, ಕಲ್ಲರಗಿನಲ್ಲಿ ಟೈರ್‌ಗಳನ್ನು ಉಪಯೋಗಿಸುತ್ತಿರುವುದು ಹೊಸತಾಗಿದೆ. ಈ ಕಾರ್ಯವಿಧಾನವು “ಭೂಗ್ರಹದ ಮೇಲೆ ಶೇಖರವಾಗಿರುವ ಅತಿದೊಡ್ಡ ಪರ್ವತಗಳಂತಹ ಕಸದ ರಾಶಿಯನ್ನು ಕಡಿಮೆಮಾಡುವುದೆಂದು,” ನಂಬಲಾಗುತ್ತದೆ. (g93 10/22)
ಕಾಲರ ರೋಗವನ್ನು ತಪ್ಪಿಸಿಕೊಳ್ಳುವುದು
ಬ್ರೆಜಿಲ್‌ನ ಮಾನ್‌ಶೆಟಿ ಪತ್ರಿಕೆಗನುಸಾರ, ಕೆಂಪು ದ್ರಾಕ್ಷಾಮದ್ಯದ ಸಿರ್ಕ ಕಾಲರ ರೋಗದ ಹರಡುವಿಕೆಯನ್ನು ತಡೆಗಟ್ಟಬಲ್ಲದು. ಕಲುಷಿತಗೊಂಡ ತರಕಾರಿಗಳ ಸೋಂಕುನಿವಾರಿಸಲು ಉಪಯೋಗಿಸಲ್ಪಡುವ ರಾಸಾಯನಿಕ ಕ್ರಿಮಿನಾಶಕಕ್ಕಿಂತ ಕೆಂಪು ದ್ರಾಕ್ಷಾಮದ್ಯದ ಸಿರ್ಕ ನೂರುಪಟ್ಟು ಹೆಚ್ಚು ಪರಿಣಾಮಕಾರಿಯೆಂದು ಸಾವ್ ಪೌಲೊನ ವ್ಯವಸಾಯ ಮತ್ತು ಸರಬರಾಯಿ ಕಾರ್ಯದರ್ಶಿಯ ಆಹಾರ ಸಂಸ್ಥೆಯಿಂದ ನಿರ್ವಹಿಸಲ್ಪಟ್ಟ ಒಂದು ಪರೀಕ್ಷೆಯು ಪ್ರಕಟಪಡಿಸಿತು. ಲೆಟಿಸ್ ಸೊಪ್ಪಿನ ಮೇಲಿದ್ದ ಕಾಲರ ರೋಗದ ಬ್ಯಾಕ್ಟೀರಿಯವನ್ನು ಸಿರ್ಕ 10,000 ಪಟ್ಟು ಕಡಿಮೆಗೊಳಿಸುವಾಗ, ಕ್ಲೋರಿನ್ ಸೇರಿಸಲ್ಪಟ್ಟ ನೀರು ಕೇವಲ 100 ಪಟ್ಟು ಕಡಿಮೆಗೊಳಿಸಿತು ಎಂದು ಪತ್ರಿಕೆಯು ವರದಿಸುತ್ತದೆ. ಪ್ರತಿ ಒಂದು ಲೀಟರ್ ನೀರಿಗೆ ಐದು ಚಮಚದಷ್ಟು ಸಿರ್ಕ ಮಿಶ್ರಣವು ಶಿಫಾರಸ್ಸು ಮಾಡಲ್ಪಟ್ಟ ಪರಿಹಾರವಾಗಿದೆ. (g93 11/08)
ನಾಯಿ ಹುಚ್ಚು (ರೇಬೀಸ್) ರೋಗ ಹಿಮ್ಮರಳಿದೆ
ಒಮ್ಮೆ ದಕ್ಷಿಣ ಆಫ್ರಿಕದ ಸ್ಥಳೀಯ ಪ್ರಾಂತದಿಂದ ನಿರ್ಮೂಲ ಮಾಡಲ್ಪಟ್ಟ ರೇಬೀಸ್ ರೋಗವು, ಈಗ ವಿಸ್ತಾರವಾಗಿ ಹರಡುತ್ತಿದೆ. ಸ್ಥಳಿಕವಾಗಿ ಮತ್ತು ಸಮೀಪದ ಮೊಜಾಂಬೀಕ್‌ನಲ್ಲಿ, ಅನೇಕರು ಹಳ್ಳಿಗಳನ್ನು ಬಿಟ್ಟಿದ್ದಾರೆ ಮತ್ತು ನಗರ ಪ್ರದೇಶಗಳಿಗೆ ವಲಸೆಹೋಗಿದ್ದಾರೆ, ತಮ್ಮ ಮುದ್ದು ಪ್ರಾಣಿಗಳನ್ನು ತಮ್ಮೊಂದಿಗೆ ಕರೆತಂದಿದ್ದಾರೆ. ಲಸಿಕೆಹಾಕುವ ಕಾರ್ಯಕ್ರಮಗಳು ಈ ಸ್ಥಳಾಂತರಿಸಲ್ಪಟ್ಟ ಜನರೆಲ್ಲರನ್ನೂ ತಲಪಲು ಸಮರ್ಥವಾಗಿಲ್ಲ. ಇಸವಿ 1992ರಲ್ಲಿ ರೇಬೀಸ್ ರೋಗದ 300 ರೋಗಿಗಳು ಈ ಕ್ಷೇತ್ರದಲ್ಲಿ ವರದಿಮಾಡಲ್ಪಟ್ಟವು. ಫಲಿತಾಂಶವಾಗಿ ಸಂಭವಿಸಿದ 29 ಮರಣಗಳಲ್ಲಿ ಅಧಿಕಾಂಶ ಮಕ್ಕಳು ಒಳಗೊಂಡಿದ್ದರು. “ಅವ್ಯವಸ್ಥಿತ ವಸಾಹತುಗಳಲ್ಲಿ ವಾಸಿಸುತ್ತಿರುವ ಅನೇಕ ಜನರನ್ನು ತಲಪುವುದು ವಿಪರೀತ ಕಷ್ಟಕರವಾಗಿದೆ,” ಎಂದು ಪಶುವೈದ್ಯ ಇಲಾಖೆಗಳ ಪ್ರಾದೇಶಿಕ ನಿರ್ದೇಶಕರಾದ, ಪೌಲ್ ಕ್ಲುಕ್, ಖಿನ್ನರಾಗಿ ನುಡಿದರು. ಅವರನ್ನುವುದು: “ರಾಜಕೀಯ ದೌರ್ಜನ್ಯ, ಸಾಂಸ್ಕೃತಿಕ ಆಕ್ಷೇಪಣೆಗಳು ಮತ್ತು ನೆರವಿಗಳ ಭಯವು ನಮ್ಮ ಕಾರ್ಯಕ್ರಮಗಳನ್ನು ಪ್ರತಿಬಂಧಿಸುತ್ತವೆ.” (g93 10/22)
ಜಾಜ್‌ನೊಂದಿಗೆ ಬೌದ್ಧ ಮತ
ಒಂದು ವಿಲಕ್ಷಣ ಸಂಯೋಗದಲ್ಲಿ, ಜಪಾನಿನ ಎಲ್ಲಾ ಕಡೆಗಳಿಂದ ಬಂದ ಒಂದು ಸಾವಿರ ಮಂದಿ ಬೌದ್ಧಮತದ ಪುರೋಹಿತರು ಉಚ್ಚಮಟ್ಟದ ಜಾಜ್ ಸಂಗೀತಗಾರರೊಂದಿಗೆ ಶೋಮ್ಯೊ ಮತ್ತು ಜಾಜ್ ಕುರಿತ ಗಾನಗೋಷ್ಠಿಯೊಂದನ್ನು ನಡೆಸಲು ಟೋಕಿಯೊದ ಬಹುದೊಡ್ಡ ನೀಪ್ಪೋನ್ ಬೂಡೋಕನ್‌ನಲ್ಲಿ ಕೂಡಿಬಂದರು. ಮೂಲತಃ ಪಾಶ್ಚಾತ್ಯ ಸಂಗೀತಕ್ಕೆ ಸಂಬಂಧಿಸದ, ಭಾರತೀಯ ಶೈಲಿಯಲ್ಲಿ ಸೂತ್ರಗಳ ಅನುಗೊಳಿಸಲ್ಪಟ್ಟ ಹಾಡುವಿಕೆ ಅಥವಾ ಪಠಿಸುವಿಕೆಯೇ ಶೋಮ್ಯೊ ಆಗಿದೆ. ಬೇರೆ ಬೇರೆ ರೀತಿಯ ಸಂಗೀತ ವಿಧಾನಗಳಿರುವುದಾದರೂ, ಸೂತ್ರಗಳ ಪಠನದೊಂದಿಗೆ ತಮ್ಮ ಸಂಗೀತವನ್ನು ಐಕ್ಯಗೊಳಿಸುವಲ್ಲಿ, ಜಾಜ್ ಸಂಗೀತಗಾರರು ಯಾವುದೇ ತೊಂದರೆಯನ್ನು ಅನುಭವಿಸಲಿಲ್ಲ. “ಧರ್ಮದಲ್ಲಿ ಆತ್ಮಿಕ ಎಚ್ಚರಿಕೆಗೆ ಅನುಗೊಳಿಸುವಿಕೆಯು ಹೇಗೋ ನಿಕಟವಾಗಿ ಸಂಬಂಧಿಸಿದೆಯೆಂದು ನಾನು ಭಾವಿಸುತ್ತೇನೆ,” ಎಂದು ಒಬ್ಬ ಜನಪ್ರಿಯ ಜಾಜ್ ಪಿಯಾನೊ ವಾದ್ಯಗಾರನು ಹೇಳಿದನೆಂದು ದಿ ಡೆಯ್ಲಿ ಯೊಮಿಯುರಿ ಉಲ್ಲೇಖಿಸಿತ್ತು. ಅವನು ಕೂಡಿಸಿದ್ದು: “ನಾನು ಪಿಯಾನೊ ಬಾರಿಸುತ್ತಾ ಇಲ್ಲ ಆದರೆ ಬೇರೊಂದು ಲೋಕದ ಯಾವುದೋ ವಿಚಿತ್ರ ಶಕ್ತಿಯು ಅದನ್ನು ಮಾಡುತ್ತಿದೆ ಎಂದು ಕೆಲವೊಮ್ಮೆ ನನಗನಿಸುತ್ತದೆ.” (g93 10/22)
“ಲೋಕದ ಕೊಲೆ ರಾಜಧಾನಿ”
“ಲೋಕದ ಕೊಲೆ ರಾಜಧಾನಿಯೆಂಬ ಅನಿಶ್ಚಿತ ಅಂತಸ್ತನ್ನು ವಾಸ್ತವಿಕವಾಗಿ ಜೋಹಾನ್ಸ್‌ಬರ್ಗ್ ಸಾಧಿಸಿದೆ,” ಎಂದು ದಕ್ಷಿಣ ಆಫ್ರಿಕದ ಒಂದು ವಾರ್ತಾ ಪತ್ರಿಕೆ ದ ಸ್ಟಾರ್ ವಿವರಿಸುತ್ತದೆ. “ಪೊಲೀಸರ ಸಂಖ್ಯಾ ಸಂಗ್ರಹಣಕ್ಕನುಸಾರ, ಜೋಹಾನೆಸ್‌ಬರ್ಗ್ ಮತ್ತು ಸೊವೀಟೊದಲ್ಲಿ ಒಟ್ಟುಗೂಡಿ, 1992ರಲ್ಲಿ 3402 ಕೊಲೆಗಳು—ದಿನವೊಂದಕ್ಕೆ 9.3 ಕೊಲೆಗಳು, ಅಥವಾ ಪ್ರತಿ ಎರಡೂವರೆ ತಾಸುಗಳಿಗೆ ಒಂದು ಕೊಲೆ—ಆದವು.” ಇದು ಈ ಹಿಂದೆ “ಕೊಲೆ ರಾಜಧಾನಿ”ಯಾಗಿದ್ದ ರೀಯೋ ಡೆ ಜನೆರೊವನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿದೆ. ಕಳೆದ ದಶಮಾನದಲ್ಲಿ ರಿಯೋ ಪ್ರತಿವರ್ಷ ಸರಾಸರಿ 8,722 ಕೊಲೆಗಳನ್ನು ವರದಿಸಿತ್ತು. ಹಾಗಿದ್ದರೂ, ರಿಯೋದ ಜನಸಂಖ್ಯೆಯು 1 ಕೋಟಿಯಾಗಿದೆ, ಆದರೆ ಜೋಹಾನೆಸ್‌ಬರ್ಗ್ ಮತ್ತು ಸೊವೀಟೊದ ಒಟ್ಟು ಜನಸಂಖ್ಯೆಯು 22 ಲಕ್ಷವೆಂದು ಹೇಳಲಾಗಿದೆ. ಜನಸಂಖ್ಯೆಯಲ್ಲಿ ಜೋಹಾನೆಸ್‌ಬರ್ಗ್‌ಗೆ ಸುಮಾರು ಸರಿಸಮವಾಗಿರುವ ಪ್ಯಾರಿಸ್, ಪ್ರತಿ ವರ್ಷ ಸರಾಸರಿ 153 ಕೊಲೆಗಳನ್ನು ವರದಿಸುತ್ತದೆ. ಕೊಲೆಗಳು ಸಂಭವಿಸುತ್ತಿರುವುದರ ಸಂಭವನೀಯತೆಗಳು ಹೀಗೆ ಕೊಡಲ್ಪಟ್ಟಿವೆ: ಜೋಹಾನೆಸ್‌ಬರ್ಗ್‌ನಲ್ಲಿ 647ರಲ್ಲಿ 1; ರೀಯೋ ಡೆ ಜನೆರೊದಲ್ಲಿ 1,158ರಲ್ಲಿ 1; ಲಾಸ್ ಆ್ಯಂಜಲೀಸ್‌ನಲ್ಲಿ 3,196ರಲ್ಲಿ 1; ನ್ಯೂ ಯಾರ್ಕ್‌ನಲ್ಲಿ 4,303ರಲ್ಲಿ 1; ಮಆ್ಯಮಿಯಲ್ಲಿ 6,272ರಲ್ಲಿ 1; ಮಾಸ್ಕೋದಲ್ಲಿ 10,120ರಲ್ಲಿ 1; ಮತ್ತು ಪ್ಯಾರಿಸ್‌ನಲ್ಲಿ 14,065ರಲ್ಲಿ 1. (g93 11/08)
ನಾಪತ್ತೆಯಾಗುವ ಮಕ್ಕಳು
ಪ್ರತಿ ವರ್ಷ ಇಟೆಲಿಯಲ್ಲಿ ಯಾವುದೇ ಸುಳಿವು ಇಲ್ಲದೇ ನೂರಾರು ಮಕ್ಕಳು ಕಾಣೆಯಾಗುತ್ತಿದ್ದಾರೆ. ಅನೇಕರು ಬೆಳಗಿನ ವೇಳೆಯಲ್ಲಿ ಶಾಲೆಗೆ ಹೋಗಲು ಮನೆಬಿಡುತ್ತಾರೆ ಮತ್ತು ಎಂದಿಗೂ ಹಿಮ್ಮರುಳುವುದಿಲ್ಲ. ಇಸವಿ 1992ರಲ್ಲಿಯೇ, 734 ಮಂದಿ—ಕಳೆದ ವರ್ಷಕ್ಕಿಂತ 245 ಅಧಿಕ ಮಂದಿ—ಕಿರಿಯರು ಕಾಣೆಯಾದರು. ಇಟೆಲಿಯ ಒಳಾಡಳಿತದ ಕಚೇರಿಯ ಮೂಲಕ ಕೊಡಲ್ಪಟ್ಟ ಒಂದು ವರದಿಗನುಸಾರ, ಹೊಸದಾಗಿ ಕಾಣೆಯಾದ ವ್ಯಕ್ತಿಗಳ ಒಟ್ಟು ಸಂಖ್ಯೆ 3,063 ಆಗಿತ್ತು. ಹುಡುಗರಿಗಿಂತಲೂ ಹೆಚ್ಚಾಗಿ ಹುಡುಗಿಯರು ಕಾಣೆಯಾಗುತ್ತಾರೆ. (g93 10/22)
ನಿಮ್ಮನ್ನು ಯಾವುದು ಸಂತೋಷ ಪಡಿಸುತ್ತದೆ?
ಹೆಚ್ಚು ಹಣವನ್ನು ಹೊಂದಿರುವುದು ಜನರನ್ನು ಸಂತೋಷಿತರನ್ನಾಗಿ ಮಾಡುವುದಿಲ್ಲವೆಂಬುದು ಸ್ಪಷ್ಟ. “ಬಡತನದ ಮಟ್ಟಕ್ಕಿಂತ ಒಬ್ಬನ ಆದಾಯವು ಅಧಿಕವಾಗಿರುವಾಗ, ವಿಸ್ಮಯಕರವಾಗಿ ಆದಾಯದ ಅಭಿವೃದ್ಧಿಯು ವೈಯಕ್ತಿಕ ಸಂತೋಷದೊಂದಿಗೆ ಕಡಿಮೆ ಸಂಬಂಧವನ್ನು ಹೊಂದಿರುತ್ತದೆ.” ಎಂದು ಸೈಕಾಲಾಜಿ ಟುಡೇ ಪತ್ರಿಕೆಯು ಹೇಳುತ್ತದೆ. ಸಂತೋಷಕ್ಕೆ ಈ ಕೆಳಗಿನ ವಿಷಯಗಳು ಪ್ರಾಮುಖ್ಯವಾದವುಗಳೆಂದು ಹೇಳಲಾಗಿವೆ: ವಾಸ್ತವಿಕವಾದರೂ, ಪ್ರತೀಕ್ಷೆಯ ಮನೋಭಾವವುಳ್ಳವರಾಗಿರುವುದು; ಸ್ನೇಹಪರರಾಗಿರುವುದು ಮತ್ತು ಸ್ನೇಹಿತರನ್ನು ಮಾಡಿಕೊಳ್ಳುವುದು; ಒಬ್ಬನ ಜೀವಿತವನ್ನು ಹತೋಟಿಯಲ್ಲಿಟ್ಟುಕೊಳ್ಳುವುದು, ಅದರಲ್ಲಿ “ಒಬ್ಬನ ಸಮಯದ ಪರಿಣಾಮಕಾರಿ ಕಾರ್ಯನಿರ್ವಹಣೆಯೂ” ಒಳಗೂಡಿದೆ; ಮತ್ತು “ಕ್ರಿಯಾಶೀಲ ಧಾರ್ಮಿಕ ನಂಬಿಕೆಯನ್ನು,” ಹೊಂದಿರುವುದು.
ತ್ಯಜಿಸಲು ಎಂದಿಗೂ ಹೊತ್ತು ಮೀರಿಲ್ಲ
ಧೂಮಪಾನವನ್ನು ನೀವು ಒಡನೆಯೆ ತ್ಯಜಿಸುವುದಾದರೆ, ಶ್ವಾಸಕೋಶದ ಕ್ಯಾನ್ಸರ್‌ನಿಂದ ನೀವು ಸಾಯುವ ಸಂಭವನೀಯತೆಗಳು ಕಡಿಮೆ. ಅಮೆರಿಕದ 9,00,000 ಮಂದಿಯ ಕುರಿತಾದ ಅಧ್ಯಯನವೊಂದು ಇದನ್ನು ಪ್ರಕಟಪಡಿಸಿತೆಂದು, ದ ಲಾನ್‌ಸೆಟ್ ವರದಿಸಿತು. ಧೂಮಪಾನ ಮಾಡದ 1,00,000 ಜನರಲ್ಲಿ, 75ರ ಪ್ರಾಯಕ್ಕೆ ಮೊದಲು ಶ್ವಾಸಕೋಶದ ಕ್ಯಾನ್ಸರ್‌ನಿಂದ ಮರಣಪಟ್ಟವರ ಸಂಖ್ಯೆಯು 50ಕ್ಕಿಂತ ಕಡಮೆಯಾಗಿತ್ತು. ಧೂಮಪಾನ ಮಾಡುವುದನ್ನು ತಮ್ಮ 30ರ ಪ್ರಾಯದಲ್ಲಿ ನಿಲ್ಲಿಸಿದ ಒಟ್ಟು 1,00,000 ಜನರಲ್ಲಿ ಮರಣ ಪ್ರಮಾಣವು ಸುಮಾರು 100ಕ್ಕೆ ಏರಿತು. 60ಗಳಲ್ಲಿ ಧೂಮಪಾನವನ್ನು ತ್ಯಜಿಸಿಬಿಟ್ಟ ಒಟ್ಟು 1,00,000 ಮಂದಿಯಲ್ಲಿ ಮರಣಗಳು 550ಕ್ಕೆ ವೃದ್ಧಿಯಾದವು. ಧೂಮಪಾನವನ್ನು ಬಿಟ್ಟುಬಿಡದ ಒಟ್ಟು 1,00,000 ಧೂಮಪಾನಿಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನ ಮರಣಗಳ ಸಂಖ್ಯೆ 1,250 ಆಗಿತ್ತು. ಸ್ತ್ರೀಯರಲ್ಲಿ ಶ್ವಾಸಕೋಶ ಕ್ಯಾನ್ಸರ್‌ನ ಮರಣ ಪ್ರಮಾಣಗಳು ಕಡಿಮೆಯಾದರೂ ತದ್ರೀತಿಯ ಮಾದರಿಯನ್ನೇ ತೋರಿಸಿವೆ.
ಪ್ರಯೋಗಶಾಲೆಯಲ್ಲಿ ತಪ್ಪುಗಳು
ವೈದ್ಯಕೀಯ ಪ್ರಯೋಗಾಲಯಗಳಲ್ಲಿ ಮಾಡಲ್ಪಡುವ ತಪ್ಪುಗಳಿಂದಾಗಿ ಪ್ರತಿ ವರ್ಷ ಸಾವಿರಗಟ್ಟಲೆ ಜನರು ಮರಣ ಹೊಂದುತ್ತಾರೆ ಅಥವಾ ಗಂಭೀರವಾಗಿ ಅಸ್ವಸ್ಥರಾಗುತ್ತಾರೆಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸುತ್ತದೆ. ರೋಗವನ್ನು ಕಂಡುಹಿಡಿಯಲು ಮತ್ತು ದೃಢಪಡಿಸಲಿಕ್ಕಾಗಿ ಮಾನವ ರಕ್ತ ಮತ್ತು ಅಂಗಾಂಶವನ್ನು ಪರೀಕ್ಷಿಸುವುದರಲ್ಲಿ ಪ್ರಯೋಗಶಾಲೆಗಳು ಹೆಚ್ಚು ಮಹತ್ವದ ಪಾತ್ರವನ್ನು ವಹಿಸುತ್ತವೆ. ತಪ್ಪು ಪರೀಕ್ಷಾ ಫಲಿತಾಂಶಗಳು ತಪ್ಪಾದ ರೋಗನಿರ್ಣಯಕ್ಕೆ ಮತ್ತು ಚಿಕಿತ್ಸೆಗೆ ಮುನ್ನಡಿಸಸಾಧ್ಯವಿದೆ. ಸಮಸ್ಯೆಯ ಕುರಿತು ಚರ್ಚಿಸಲಿಕ್ಕಾಗಿ, ಎಪ್ರಿಲ್‌ನಲ್ಲಿ ಲೋಕದಾದ್ಯಂತದಿಂದ 90ಕ್ಕಿಂತಲೂ ಹೆಚ್ಚಿನ ಪರಿಣತರು ಸ್ವಿಟ್ಸರ್ಲೆಂಡ್‌ನ ಜಿನೆವಾದಲ್ಲಿ ಕೂಡಿಬಂದರು.
“ಬೃಹತ್ ನಗರಗಳು”
“ಈ ಶತಮಾನದ ಅಂತ್ಯದೊಳಗೆ, ಒಂದು ಕೋಟಿ ಅಥವಾ ಅದಕ್ಕಿಂತಲೂ ಅಧಿಕ ಜನಸಂಖ್ಯೆಗಳನ್ನು ಹೊಂದಿರುವ 21 ‘ಬೃಹತ್ ಪಟ್ಟಣಗಳು’ ಅಸ್ತಿತ್ವದಲ್ಲಿರುವುವು,” ಎಂದು ಟೈಮ್ ಪತ್ರಿಕೆಯು ಹೇಳುತ್ತದೆ. “ಇವುಗಳಲ್ಲಿ 18, ಪ್ರಪಂಚದ ಅತ್ಯಂತ ಬಡ ರಾಷ್ಟ್ರಗಳಲ್ಲಿ ಕೆಲವನ್ನು ಒಳಗೊಂಡು, ವಿಕಾಸಹೊಂದುತ್ತಿರುವ ದೇಶಗಳಿರುವವು.” ತಮ್ಮ ಮೆಟ್ರೊಪಾಲಿಟನ್ ಕ್ಷೇತ್ರಗಳಲ್ಲಿ ಒಂದು ಕೋಟಿ ಅಥವಾ ಅದಕ್ಕಿಂತಲೂ ಅಧಿಕ ಜನರನ್ನು ಹೊಂದಿರುವ ಹದಿಮೂರು ದೇಶಗಳು ಈಗಾಗಲೆ ಪಟ್ಟಿಯಲ್ಲಿವೆ. ಬಹುಮಟ್ಟಿಗೆ 2.6 ಕೋಟಿ ನಿವಾಸಿಗಳಿದ್ದು, ಟೋಕಿಯೋ ಅತ್ಯಧಿಕ ಜನಸಂಖ್ಯೆಯನ್ನು ಹೊಂದಿದೆ, ಅದನ್ನು ಹಿಂಬಾಲಿಸಿ ಸಾವ್ ಪೌಲೊ, ನ್ಯೂ ಯಾರ್ಕ್ ಪಟ್ಟಣ, ಮೆಕ್ಸಿಕೊ ಸಿಟಿ, ಶಾಂಘೈ, ಮುಂಬಯಿ, ಲಾಸ್ ಆ್ಯಂಜಲೀಸ್, ಬೇನ್ವೋಸ್ ಐರೆಸ್, ಸೋಲ್, ಬೇಜಂಗ್, ರೀಯೋ ಡೆ ಜನೆರೊ, ಕಲ್ಕತ್ತ, ಮತ್ತು ಜಕಾರ್ಟ. ಆಫ್ರಿಕದಲ್ಲಿ ಕೆಲವು ಪಟ್ಟಣಗಳು ವಾರ್ಷಿಕವಾಗಿ 10 ಪ್ರತಿಶತದಷ್ಟು—ನಾಗರಿಕತೆಯು ಎಂದೆಂದೂ ವರದಿಮಾಡಲ್ಪಡದ ಅತ್ಯಂತ ಕ್ಷಿಪ್ರ ಪ್ರಮಾಣ—ಅಭಿವೃದ್ಧಿಹೊಂದುತ್ತಿವೆ ಎಂದು ವಿಶ್ವಬ್ಯಾಂಕ್ ಹೇಳುತ್ತದೆ. ಅತಿದೊಡ್ಡ ಜನಸಂಖ್ಯೆಗಳೊಂದಿಗೆ ಅನೇಕವೇಳೆ ಹೆಚ್ಚಾದ ಮಾಲಿನ್ಯ ಮತ್ತು ರೋಗದ ಬೆದರಿಕೆಗಳಿರುತ್ತವೆ.
ಶಿಶು ಹಂತಕರು
ವಿಕಾಸಹೊಂದುತ್ತಿರುವ ಲೋಕದಲ್ಲಿ ಪ್ರತಿ ವರ್ಷ ಮಕ್ಕಳ ನಡುವೆ ಸಂಭವಿಸುವ 1.3 ಕೋಟಿ ಮರಣಗಳಲ್ಲಿ ಸುಮಾರು ಮೂರರಲ್ಲಿ ಎರಡು ಭಾಗದಷ್ಟು ಮರಣಗಳನ್ನು ಮೂರು ರೋಗಗಳು ಉಂಟುಮಾಡುತ್ತವೆ ಎಂದು ಆಫ್ರಿಕದ ವಾರ್ತಾ ಪತ್ರಿಕೆ ಲೆಸೊತೊ ಟುಡೇ ದಾಖಲಿಸಿತು. ಇವುಗಳು ನ್ಯೂಮೋನಿಯ, ಅತಿಭೇದಿ, ಮತ್ತು ದಡಾರ ರೋಗಗಳಾಗಿವೆ. ಲಭ್ಯವಿರುವ ಮತ್ತು ಸಮರ್ಥವಾದ ಸಾಧನಗಳ ಮೂಲಕ ಅಂತಹ ರೋಗಗಳಿಗೆ ಚಿಕಿತ್ಸೆ ನಡೆಸಲು ಅಥವಾ ತಡೆಗಟ್ಟಲು ಸಾಧ್ಯವಿದೆಯೆಂದು ವರದಿಯು ಕೂಡಿಸುತ್ತದೆ. ಉದಾಹರಣೆಗೆ, ಅತ್ಯಂತ ದೊಡ್ಡ ಶಿಶು ಹಂತಕವಾದ, ನ್ಯೂಮೋನಿಯ, ಒಂದು ವರ್ಷದಲ್ಲಿ 35 ಲಕ್ಷ ಮಕ್ಕಳ ಮರಣಗಳಿಗೆ ಕಾರಣವಾಗಿದೆ. ಅಧಿಕಾಂಶ ರೋಗಿಗಳಲ್ಲಿ ಸಮಸ್ಯೆಯು ಬ್ಯಾಕ್ಟೀರಿಯಾಗಳಿಗೆ ಸಂಬಂಧಿಸಿದ್ದಾಗಿದೆ ಮತ್ತು 25 ಸೆಂಟ್‌ಗಳಷ್ಟು ಬೆಲೆಯುಳ್ಳ ಮತ್ತು ಐದು ದಿನಗಳ ತನಕ ಉಳಿಯುವ ಪ್ರತಿ ಜೀವಕಗಳ ಅನುಕ್ರಮದ ಮೂಲಕ ನಿಯಂತ್ರಿಸಸಾಧ್ಯವಿದೆ. ಅತಿಭೇದಿಯು ವರ್ಷಕ್ಕೆ ಮೂವತ್ತು ಲಕ್ಷ ಎಳೆಯ ಜೀವಗಳನ್ನು ಘಾಸಿಗೊಳಿಸುತ್ತದೆ. ಅಲ್ಪವ್ಯಯದ ಮೌಖಿಕ ಪುನರ್ಜಲ ಸಂಯೋಗ ಚಿಕಿತ್ಸೆಯನ್ನು ಹೆತ್ತವರು ಉಪಯೋಗಿಸುವುದಾದರೆ, ಇವುಗಳಲ್ಲಿ ಸುಮಾರು ಅರ್ಧದಷ್ಟು ಮರಣಗಳನ್ನು ತಡೆಗಟ್ಟಬಹುದಾಗಿದೆ. ದಡಾರವು ಪ್ರತಿ ವರ್ಷ 8,00,000 ಮಕ್ಕಳಿಗೆ ಮರಣವನ್ನುಂಟುಮಾಡುತ್ತದೆ. ಇದನ್ನು ಲಸಿಕೆ ಹಾಕುವಿಕೆಯ ಮೂಲಕ ತಡೆಗಟ್ಟಬಹುದೆಂದು ವರದಿಯು ಸೂಚಿಸುತ್ತದೆ. ದಡಾರದ ಲಸಿಕೆಯು 50 ಸೆಂಟ್‌ಗಿಂತಲೂ ಕಡಿಮೆ ಬೆಲೆಯದ್ದಾಗಿದೆ. (g93 11/08)