ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g94 2/8 ಪು. 24-27
  • ಸರ್ವನಾಶದ ದೃಶ್ಯ ಪುರಾವೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸರ್ವನಾಶದ ದೃಶ್ಯ ಪುರಾವೆ
  • ಎಚ್ಚರ!—1994
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಜ್ಞಾಪಕದಲ್ಲಿಟ್ಟುಕೊಳ್ಳುವಂತಹ ಒಂದು ಪ್ರವಾಸ
  • ಸುಶಿಕ್ಷೆ ಕೊಡಲಿಕ್ಕಾಗಿ ಒಂದು ವಸ್ತುಸಂಗ್ರಹಾಲಯ
  • ಸರ್ವನಾಶವನ್ನು ಪಾರಾದವರು
  • ವಸ್ತುಸಂಗ್ರಹಾಲಯದ ಮೌಲ್ಯ
  • ಸಾಮೂಹಿಕ ಹತ್ಯೆ ಯಾಕೆ ನಡಿತು? ದೇವರು ಯಾಕೆ ಅದನ್ನ ನಿಲ್ಲಿಸಲಿಲ್ಲ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ನಾಸಿ ಹಿಂಸೆಯ ಮೇಲೆ ಜಯಗಳಿಸಿದ ಧೀರ ಸಮಗ್ರತಾ ಪಾಲಕರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ನಾವು ಹಿಟ್ಲರನ ಯುದ್ಧವನ್ನು ಬೆಂಬಲಿಸಲಿಲ್ಲ
    ಎಚ್ಚರ!—1994
  • ಹತ್ಯಾಕಾಂಡದಲ್ಲಿ ಯೆಹೋವನ ಸಾಕ್ಷಿಗಳಿಗೆ ಏನಾಯಿತು?
    ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
ಎಚ್ಚರ!—1994
g94 2/8 ಪು. 24-27

ಸರ್ವನಾಶದ ದೃಶ್ಯ ಪುರಾವೆ

ಮಾನವತ್ವದ ಅತಿ ಹೀನಸ್ಥಿತಿಯನ್ನು ಪ್ರದರ್ಶಿಸುವ ಒಂದು ಸ್ಥಳವನ್ನು ನೀವು ಪ್ರವೇಶಿಸುವಾಗ, ಅದರ ಅತಿ ಹೀನ ಸ್ಥಿತಿಯಲ್ಲಿ ಪವಿತ್ರ ಬೈಬಲಿನಿಂದ ತೆಗೆದ “ನೀವು ನನ್ನ ಸಾಕ್ಷಿ” ಎಂಬ ಈ ಮಾತುಗಳನ್ನು ಕಲ್ಲಿನಲ್ಲಿ ಕೆತ್ತಿರುವುದನ್ನು ಕಾಣುವುದು ವಿಸ್ಮಯಕರವಾಗಿ ತೋರುತ್ತದೆ. ಆದರೂ, ಬಹುಶಃ ಬೈಬಲನ್ನು ಉದ್ಧರಿಸುವ, ಕಡಿಮೆ ಪಕ್ಷ ಆ ನಿರ್ದಿಷ್ಟ ವಚನವನ್ನು ಉದ್ಧರಿಸುವ ಸ್ಥಳ ಇದಾಗಿದೆ.—ಯೆಶಾಯ 43:10.

ಇಸವಿ 1993, ಎಪ್ರಿಲ್‌ 22ರಂದು ಉದ್ಘಾಟಿಸಲಾದ, ವಾಷಿಂಗ್‌ಟನ್‌, ಡಿ. ಸಿ.,ಯಲ್ಲಿರುವ ದ ಯುನೈಟೆಡ್‌ ಸ್ಟೇಟ್ಸ್‌ ಹಾಲೊಕಾಸ್ಟ್‌ ಮಿಮೋರಿಯಲ್‌ ಮ್ಯುಜೀಯಮ್‌, ನಿರ್ನೈತಿಕ ಜನನಾಯಕರುಗಳ ಮೂಲಕ ಮಾತಾಡಲಾಗದ ಮರಣ ಯಂತ್ರವಾಗಿ ತಿರುಚಲ್ಪಟ್ಟ ಯಂತ್ರಕಲಾ ಶಾಸ್ತ್ರದ ಒಂದು ಬಲವಾದ ಮತ್ತು ಸಿಮ್ತಿತ ಜ್ಞಾಪಕದೋಪಾದಿ ನಿಲ್ಲುತ್ತದೆ. ನಾಜಿ ನಿರಂಕುಶಾಧಿಕಾರದ ಮೂಲಕ ಕೊಲೆಮಾಡಲ್ಪಟ್ಟ ಅರಕ್ಷಿತ ಬಲಿಪಶುಗಳ ಪಟ್ಟಿ ಮನಸ್ಸನ್ನು ಜಡಗೊಳಿಸುತ್ತದೆ—ಸುಮಾರು 60 ಲಕ್ಷ ಯೆಹೂದ್ಯರು ಮತ್ತು ಪೋಲರು, ಸ್ಲಾವರು, ಯೆಹೋವನ ಸಾಕ್ಷಿಗಳು, ಜಿಪ್ಸಿಗಳು, ಸಲಿಂಗಕಾಮಿಗಳು, ಮತ್ತು ಅಂಗವಿಕಲರು ಸೇರಿದ, ಲಕ್ಷಂತರ ಬೇರೆ ಜನರು.

ಜ್ಞಾಪಕದಲ್ಲಿಟ್ಟುಕೊಳ್ಳುವಂತಹ ಒಂದು ಪ್ರವಾಸ

ನಿಮ್ಮನ್ನು ಮೊದಲನೆಯ ಮಹಡಿಯ ಸಾಕ್ಷ್ಯ ಮಂದಿರದಿಂದ ನಾಲ್ಕನೆಯ ಮಹಡಿಗೆ ಕೊಂಡೊಯ್ಯುವ ಒಂದು ತಣ್ಣಗಿರುವ, ಬೂದು ಬಣ್ಣದ ಉಕ್ಕಿನ ಲಿಫ್ಟ್‌ನಲ್ಲಿ ಸಂಚಾರವು ಪ್ರಾರಂಭವಾಗುತ್ತದೆ. ಅಲ್ಲಿಂದ, ಸಂದರ್ಶಕರು ಕೆಳಕ್ಕೆ ಹೋದಂತೆ, ಅವರು ಸರ್ವನಾಶದ ಎಲ್ಲಾ ಹಂತಗಳ—ನಾಜಿ ಪ್ರಚಾರ ಕಾರ್ಯದಿಂದ ಅಧಿಕಾರಕ್ಕೆ ಹಿಟ್ಲರನ ಆರೋಹಣ, ಬಲಿಪಶುಗಳ ಒಟ್ಟುಗೂಡಿಸುವಿಕೆಯಿಂದ ಮರಣ ಶಿಬಿರಗಳ ಬಿಡುಗಡೆಯ—ಪ್ರದರ್ಶನಗಳನ್ನು ದಾಟಿ ಮುಂದೆ ಹೋಗುತ್ತಾರೆ. ಅನಂತ ಜ್ವಾಲೆಯು ಉರಿಯುವ ಸ್ಮರಣೆಯ ಮಂದಿರದಲ್ಲಿ ಸಂಚಾರವು ಕೊನೆಗೊಳ್ಳುತ್ತದೆ. ಪ್ರತ್ಯಕ್ಷ ಸಾಕ್ಷಿಗಳ ರುಜುವಾತುಗಳು, ಚಲಿಸದ ಮತ್ತು ಚಲಿಸುವ ಚಿತ್ರಗಳು, ಸಂಗೀತ ಮತ್ತು ಕಲಾಕೃತಿ—ಈ ಭಯಂಕರ ಕಥೆಯನ್ನು ಹೇಳುವಂತೆ ಸಹಾಯ ಮಾಡಲು ಇವೆಲ್ಲವುಗಳನ್ನು ಉಪಯೋಗಿಸಲಾಗಿದೆ.

ತಡೆಯಿಲ್ಲದೆ ಕಣ್ಣೀರು ಬರಿಸುವ ಮತ್ತು ಪೂರ್ತಿ ಕಂಗೆಡಿಸುವ ಶಾಶ್ವತ ಪ್ರದರ್ಶನದ ಮೂರು ಮಟ್ಟಗಳನ್ನು ಸಂದರ್ಶಕರು ನೋಡುತ್ತಾರೆ. ಹೆಚ್ಚು ಘೋರವಾದ ಪ್ರದರ್ಶಕಗಳು—ಅದರ ಮೇಲಿಂದ ಮಕ್ಕಳು ನೋಡಲಿಕ್ಕಾಗದಂತಹ ಅತಿ ಎತ್ತರವಾಗಿರುವ 1.2 ಮೀಟರ್‌ ಎತ್ತರದ ಗೋಪ್ಯ ಗೊಡೆಗಳ ಹಿಂದೆ ಅಡಗಿಕೊಂಡಿವೆ.

ಸುಶಿಕ್ಷೆ ಕೊಡಲಿಕ್ಕಾಗಿ ಒಂದು ವಸ್ತುಸಂಗ್ರಹಾಲಯ

ವಸ್ತುಸಂಗ್ರಹಾಲಯದ ಸರ್ವನಾಶ ಸಂಶೋಧನಾ ಸಂಸ್ಥೆಯು ವ್ಯಾಪಕವಾದ ಒಂದು ಪುಸ್ತಕಾಲಯ ಮತ್ತು ದಫ್ತರಖಾನೆಯನ್ನು ಒಳಗೊಂಡಿದೆ. ಅದು ಸರ್ವನಾಶದ ವಿದತ್ವಿಗ್ತಾಗಿ ಅಂತಾರಾಷ್ಟ್ರೀಯ ಕೇಂದ್ರವಾಗಿ ಕೂಡ ಕಾರ್ಯಮಾಡುವುದು. “ಸಾರ್ವಜನಿಕರ ಬೋಧನೆ ಮತ್ತು ಶಿಕ್ಷಣಕ್ಕೆ ನಾವು ಸಮರ್ಪಿತರಾಗಿದ್ದೇವೆ,” ಎಂದು ವಸ್ತುಸಂಗ್ರಹಾಲಯ ಗ್ರಂಥಾಲಯದ ನಿರ್ದೇಶಕರಾದ, ಡಾ. ಎಲಿಜಬೆತ್‌ ಕೋನೀಗ್‌ ಹೇಳುತ್ತಾರೆ. ಸೆರೆಶಿಬಿರಗಳಲ್ಲಿದ್ದ ಅಲ್ಪ ಸಂಖ್ಯಾತ ಗುಂಪುಗಳಲ್ಲಿ ಕೆಲವೊಂದರ ಮೇಲೆ ಮಾಹಿತಿಯು ಪುಸ್ತಕಾಲಯದಲ್ಲಿರುವುದು. “ಯೆಹೋವನ ಸಾಕ್ಷಿಗಳ ಕುರಿತು ಈಗಾಗಲೇ ನಮ್ಮಲ್ಲಿ ಬಹಳಷ್ಟು ಮಾಹಿತಿ ಇದೆ,” ಎಂದು ಅವರು ಹೇಳುತ್ತಾರೆ.

ಇಸವಿ 1933ರಲ್ಲಿ, ಯೆಹೋವನ ಸಾಕ್ಷಿಗಳನ್ನು ನಿರ್ನಾಮ ಮಾಡಲು ಹಿಟ್ಲರನು ಒಂದು ಚಳುವಳಿಯನ್ನು ಆರಂಭಿಸಿದನು. ಜರ್ಮನಿ, ಆಸ್ಟ್ರಿಯ, ಪೋಲೆಂಡ್‌, ಹಿಂದಿನ ಚೆಕೊಸ್ಲೊವಾಕಿಯ, ನೆದರ್ಲೆಂಡ್ಸ್‌, ಫ್ರಾನ್ಸ್‌, ಮತ್ತು ಇತರ ದೇಶಗಳಿಂದ ಸಾವಿರಾರು ಸಾಕ್ಷಿಗಳನ್ನು ಸೆರೆಶಿಬಿರಗಳಿಗೆ ಸಾಗಿಸಲಾಯಿತು. ಅವರನ್ನು ಧಾರ್ಮಿಕ ಕಾರಣಗಳಿಗಾಗಿ ಮಾತ್ರ ಹಿಂಸಿಸಲಾಯಿತು. ಶಿಬಿರಗಳಲ್ಲಿ ಪಾರಾಗಿ ಉಳಿದವರಲ್ಲಿ ಇಬ್ಬರನ್ನು ವಸ್ತುಸಂಗ್ರಹಾಲಯದ ಪ್ರಾರಂಭೋತ್ಸವಕ್ಕೆ ಆಮಂತ್ರಿಸಲಾಯಿತು.

ಸರ್ವನಾಶವನ್ನು ಪಾರಾದವರು

ಪಾರಾದವರಲ್ಲಿ ಒಬ್ಬರಾದ, 73 ವರ್ಷ ವಯಸ್ಸಿನ ಫ್ರಾನ್ಸ್‌ ವೋಲ್‌ಫಾರ್ಟ್‌, ತಾವು ಸಾಕ್ಷಿಗಳಾಗಿದ್ದ ಕಾರಣ ತನ್ನ ಅತಿ ಸಮೀಪದ ಕುಟುಂಬ ಮತ್ತು ಸಂಬಂಧಿಕರಲ್ಲಿ ಒಟ್ಟು 15 ಸದಸ್ಯರು ಸೆರೆ ಹಿಡಿಯಲ್ಪಟ್ಟದ್ದನ್ನು ಕಂಡರು. “ಅವರಲ್ಲಿ ಏಳು ಜನರು ಕೊಲ್ಲಲ್ಪಟ್ಟರು, ಅಧಿಕಾಂಶ ಮಂದಿ ಶಿರಶ್ಛೇದಕದ ಮೂಲಕ, ಒಬ್ಬರು ಅನಿಲ ಕೋಣೆಯಲ್ಲಿ ಕೊಲ್ಲಲ್ಪಟ್ಟರು, ಮತ್ತು ಇತರರು ಸೆರೆಶಿಬಿರಗಳಲ್ಲಿ ಹಾಗೂ ಗೆಸ್ಟಪೊ ಸೆರೆಮನೆಗಳಲ್ಲಿ ಮಡಿದರು,” ಎಂಬುದಾಗಿ ಅವರು ಹೇಳುತ್ತಾರೆ.

ಸೆರೆಶಿಬಿರಗಳಿಂದ ಅವರು ಎಂದಾದರೂ ಪಾರಾಗುವರೆಂದು ಯೋಚಿಸಿದ್ದರೊ? “ನನಗೆ ನಿಜವಾದ ಸಂದೇಹಗಳಿದ್ದವು,” ಫ್ರಾನ್ಸ್‌ ಹೇಳುತ್ತಾರೆ. “ಜರ್ಮನ್‌ ದೇಶವು ಯುದ್ಧದಲ್ಲಿ ಸೋತರೂ, ನನ್ನನ್ನು ವಧಿಸಲು ಸಾಕಷ್ಟು ಮದ್ದುಗುಂಡು ಅವರಲ್ಲಿ ಇನ್ನೂ ಇರುವುದೆಂದು ಸೈನಿಕರ ಮೂಲಕ ನಾನು ಬಹುಮಟ್ಟಿಗೆ ಪ್ರತಿದಿನ ಜ್ಞಾಪಿಸಲ್ಪಡುತ್ತಿದ್ದೆ.”

ತನ್ನ ಧಾರ್ಮಿಕ ನಂಬಿಕೆಗಳಿಂದಾಗಿ ಒಬ್ಬ ಬಂದಿಯಾಗಿದ್ದುದ್ದಕ್ಕೆ ಅವರು ವಿಷಾದಿಸುತ್ತಾರೊ? ಅವರ ದೃಢ ಸಂಕಲ್ಪಕ್ಕೆ ಆ ಯೋಚನೆಯು ಒಂದು ಅಪಮಾನವೊ ಎಂಬಂತೆ, “ಇಲ್ಲ! ಇಲ್ಲವೇ ಇಲ್ಲ!” ಎಂದು ಫ್ರಾನ್ಸ್‌ ಹೇಳುತ್ತಾರೆ. “ನಾವು ಯಾವಾಗಲು ಸಂತಸದ ಸ್ಥಿತಿಯಲ್ಲಿ ಇರುತ್ತಿದೆವ್ದು. ‘ಈ ಎಲ್ಲಾ ಸಂಕಟದ ಮಧ್ಯೆ, ನಿನ್ನ ಮುಖದ ಮೇಲೆ ಇನ್ನೂ ಒಂದು ಕಿರುನಗೆ ಇದೆಯೆ? ನಿನ್ನಲ್ಲಿ ಏನು ದೋಷವಿದೆ?’ ಎಂಬುದಾಗಿ ಕೇಳುವ ಸೈನಿಕರಿಂದ ನಾನು ಅನೇಕ ಬಾರಿ ತಡೆದು ನಿಲ್ಲಿಸಲ್ಪಟ್ಟೆ. ಆಗ ನಾನು ಹೀಗೆ ಹೇಳುತ್ತಿದ್ದೆ: ‘ನಗಲು ನನಗೆ ಕಾರಣವಿದೆ ಯಾಕಂದರೆ ಈ ಕಠಿನ ಸಮಯವನ್ನು ಮೀರಿ ಇರುವ ಒಂದು ನಿರೀಕ್ಷೆ—ಇಂದು ನಾವು ಅನುಭವಿಸ ಬೇಕಾದ ವಿಷಯಗಳಿಗಾಗಿ ಎಲ್ಲವೂ ಒಳ್ಳೆಯದಾಗಿ ಮಾಡಲ್ಪಡುವ ಮತ್ತು ಎಲ್ಲವೂ ಪುನಃಸ್ಥಾಪಿಸಲ್ಪಡುವ ದೇವರ ರಾಜ್ಯದಲ್ಲಿ ನಿರೀಕ್ಷೆ ನಮಗಿದೆ.’”

ಇಸವಿ 1910ರಲ್ಲಿ ಜನಿಸಿದ ಯೋಸೆಫ್‌ ಶೋನ್‌, ಅವರನ್ನು 1940ರಲ್ಲಿ ಗೆಸ್ಟಪೊ ಸೆರೆಹಿಡಿಯುವ ತನಕ, ಯಾವಾಗಲೂ ಅವರಿಂದ ತಪ್ಪಿಸಿಕೊಳ್ಳಲು ಶಕ್ತರಾಗುತ್ತಾ, ಆಸ್ಟ್ರಿಯದಲ್ಲಿ ಬೈಬಲ್‌ ಸಾಹಿತ್ಯದ ಮುದ್ರಣ ಮತ್ತು ಹಂಚುವಿಕೆಯ ಭೂಗತ ಕಾರ್ಯದಲ್ಲಿ ಕಾರ್ಯಮಗ್ನರಾಗಿದ್ದರು. ಇಸವಿ 1943ರಿಂದ 1945ರ ವರೆಗೆ, ಅವರು ಮರಣದ ಸಂತತವಾದ ಬೆದರಿಕೆಯ ಕೆಳಗಿದ್ದರು. ಇಸವಿ 1943ರಲ್ಲಿ, ಸೆರೆಶಿಬಿರದ ನಾಯಕ, ನೆರೆದು ಬಂದಿದ್ದ ಎಲ್ಲಾ ಸಿಬ್ಬಂದಿ ವರ್ಗದ ಮುಂದೆ, ಯೋಸೆಫ್‌ನ ಮೇಲೆ ಗಮನವನ್ನು ಕೇಂದ್ರೀಕರಿಸಿ ಅಬ್ಬರಿಸಿದ್ದು, “ನೀನಿನ್ನೂ ಯೆಹೋವ ದೇವರಿಗೆ ಅಂಟಿಕೊಂಡಿರುವಿಯೊ?”

“ಹೌದು, ನಾನು ಅಂಟಿಕೊಂಡಿರುವೆ,” ಎಂಬುದಾಗಿ ಯೋಸೆಫ್‌ ಉತ್ತರಿಸಿದರು.

“ಹಾಗಾದರೆ ನಿನ್ನ ಶಿರಶ್ಛೇದನ ಮಾಡಲಾಗುವುದು!”

ಇಸವಿ 1945ರಲ್ಲಿ ಡಾಕಾವ್‌ನ ಕಡೆಗಿನ ಮರಣದ ಸಾಲುನಡೆಯಲ್ಲಿ ಯೋಸೆಫ್‌ ಇದ್ದರು. “ಶಾರೀರಿಕ ದೃಷ್ಟಿಯಿಂದ, ನಾನು ಭಗ್ನನಾಗಿದ್ದೆ,” ಎಂದು ಅವರು ಜ್ಞಾಪಿಸಿಕೊಳ್ಳುತ್ತಾರೆ. “ಆದರೂ ಆ ಸಾಲುನಡೆಯಲ್ಲಿ ನಾನು ಇದ್ದಾಗ, ನನ್ನ ನಂಬಿಕೆಯಲ್ಲಿ ಹಿಂದೆಂದೂ ಇದ್ದಿರದಷ್ಟು ಬಲವಾಗಿ ನಾನಿದ್ದೆ.”

ಈಗ, ವಸ್ತುಸಂಗ್ರಹಾಲಯವನ್ನು ಸಂಚರಿಸುತ್ತಾ, ಮತ್ತು ಅವರ ಸೆರೆಮನೆವಾಸದ ದಿನಗಳ ಕುರಿತು ಜ್ಞಾಪಿಸಿಕೊಳ್ಳುತ್ತಾ, ಅವರು ಹೇಳುವುದು: “ನಾನು ಆಗ ಭಯ ಪಟ್ಟಿರಲೇ ಇಲ್ಲ. ನಿಮಗೆ ಅದರ ಆವಶ್ಯಕತೆ ಇದ್ದ ಸಮಯದಲ್ಲಿ, ಯೆಹೋವನು ನಿಮಗೆ ಬೇಕಾದದ್ದನ್ನು ಕೊಡುತ್ತಾನೆ. ಯೆಹೋವನ ಮೇಲೆ ಹೇಗೆ ಆತುಕೊಳ್ಳಬೇಕೆಂಬುದನ್ನು ನೀವು ಕಲಿಯಬೇಕು ಮತ್ತು ಸನ್ನಿವೇಶವು ಅತಿ ಹೀನವಾದಾಗ ಆತನೆಷ್ಟು ನೈಜವಾಗಿದ್ದಾನೆ ಎಂಬುದನ್ನು ನೋಡಬೇಕು. ಎಲ್ಲಾ ಕೀರ್ತಿಯು ಆತನಿಗೆ ಸಲ್ಲತಕ್ಕದ್ದು. ನಮ್ಮಲ್ಲಿ ಯಾರೂ ವೀರ ಪುರುಷರಾಗಿರಲಿಲ್ಲ. ನಾವು ಕೇವಲ ಯೆಹೋವನ ಮೇಲೆ ಆತುಕೊಂಡೆವು.”

ವಸ್ತುಸಂಗ್ರಹಾಲಯದ ಮೌಲ್ಯ

“ಈ ವಸ್ತುಸಂಗ್ರಹಾಲಯಕ್ಕೆ ಪ್ರಚಂಡ ಮೊತ್ತದ ಮಹತ್ವವಿದೆ ಎಂದು ನಾನು ನೆನಸುತ್ತೇನೆ,” ಎಂಬುದಾಗಿ ಇಂಗ್ಲೆಂಡ್‌ನ ಸ್ಟ್ಯಾಫೋರ್ಡ್‌ಶರ್‌ ವಿಶ್ವವಿದ್ಯಾನಿಲಯದ ಬದಲಿ ಉಪಾಧ್ಯಕ್ಷರಾದ ಇತಿಹಾಸಗಾರ್ತಿ ಡಾ. ಕ್ರಿಸ್‌ಟೀನ್‌ ಎಲಿಜಬೆತ್‌ ಕಿಂಗ್‌ ಹೇಳುತ್ತಾರೆ. “ಪ್ರಥಮವಾಗಿ, ಇದು ಏನು ಸಂಭವಿಸಿತೊ ಅದರ ದಾಖಲೆಯಾಗಿದೆ. ‘ಇದು ಎಂದೂ ಸಂಭವಿಸಲಿಲ್ಲ’ ಎಂಬುದಾಗಿ ಹೇಳುವವರ ವಿರುದ್ಧ ವಾದಿಸಲು ಇದು ಇಲ್ಲಿದೆ. ಎಷ್ಟೋ ಪ್ರಮಾಣವಿದೆ, ಅಷ್ಟೇ ಅಲ್ಲದೆ ಸರ್ವನಾಶವನ್ನು ಪಾರಾದ ಜೀವಂತ ಸಾಕ್ಷಿಗಳೂ ಇದ್ದಾರೆ. ಎರಡನೆಯದಾಗಿ, ವಸ್ತುಸಂಗ್ರಹಾಲಯವು ಅತ್ಯುತ್ತಮವಾದ ಶೈಕ್ಷಣಿಕ ಸಾಧನವಾಗಿದೆ.”

“ಮತ್ತು ಯೆಹೋವನ ಸಾಕ್ಷಿಗಳಿಗೆ,” ಅವರು ಮುಂದುವರಿಸುತ್ತಾರೆ, “ಕಷ್ಟಾನುಭವಿಸಿದ ಮತ್ತು ಮರಣ ಹೊಂದಿದ ಹಾಗೂ ಅವರ ಜೀವಿತಗಳನ್ನು ಅರ್ಪಿಸಿದ ತಮ್ಮ ಸಹೋದರ ಮತ್ತು ಸಹೋದರಿಯರನ್ನು ನೋಡಲು ಶಕ್ತರಾಗುವುದು ಬಹಳ ಪ್ರಾಮುಖ್ಯವಾದ ವಿಷಯವಾಗಿದೆ. ದಾಖಲು ಮಾಡಲ್ಪಟ್ಟ ಅದನ್ನು ನೋಡುವುದು ಬಹಳ ವಿಶೇಷವಾದದ್ದು.” (g93 11/08)

[ಪುಟ 26 ರಲ್ಲಿರುವ ಚೌಕ]

ಸ್ತಂಭದ ಮೇಲಿರುವ ವಿಷಯವು ಹೀಗಿದೆ:

“ಯೆಹೋವನ ಸಾಕ್ಷಿಗಳು”

“ಯೆಹೋವನ ಸಾಕ್ಷಿಗಳ ವಿರುದ್ಧ ನಾಜಿ ಕಿರುಕುಳವು 1933ರಲ್ಲಿ ಆರಂಭಗೊಂಡಿತು. ಸಾಕ್ಷಿಗಳು ಸೈನಿಕ ಸೇವೆಯನ್ನು ನಿರಾಕರಿಸಿ, ಆಡಳಿತಕ್ಕೆ ಸ್ವಾಮಿನಿಷ್ಠೆಯ ಪ್ರತಿಜ್ಞೆ ಮಾಡದೆ ಇದ್ದ ಕಾರಣ, ರಾಜ್ಯದ ವಿರುದ್ಧ ಗೂಢಚಾರತನ ಮತ್ತು ಒಳಸಂಚಿನ ಆಪಾದನೆಯಿಂದ ಅವರು ಅನೇಕ ವೇಳೆ ಆಪಾದಿಸಲ್ಪಟ್ಟರು. ನಾಜಿಗಳು, ಭವಿಷ್ಯತ್ತಿನ ಅರಾಜಕತೆಯ ಕುರಿತು ಸಾಕ್ಷಿಗಳ ಭವಿಷ್ಯ ನುಡಿಯನ್ನು ಕ್ರಾಂತಿಕಾರಿ ಬೆದರಿಕೆಗಳಂತೆ ಮತ್ತು ಪ್ಯಾಲೆಸ್ಟೈನ್‌ಗೆ ಯೆಹೂದ್ಯರ ಹಿಂದಿರುಗುವಿಕೆಯ ಕುರಿತಾದ ಪ್ರವಾದನೆಗಳನ್ನು ಯೆಹೂದ್ಯ ಸ್ವಾಸ್ಥ್ಯವಾದಿ ಹೇಳಿಕೆಗಳಂತೆ ಅರ್ಥವಿವರಣೆ ನೀಡಿದರು.

“ಆದರೂ, ಸಾಕ್ಷಿಗಳು ಒಟ್ಟುಗೂಡುವುದನ್ನು, ಸಾರುವುದನ್ನು ಮತ್ತು ಸಾಹಿತ್ಯ ಹಂಚುವುದನ್ನು ಮುಂದುವರಿಸಿದರು. ಅವರು ತಮ್ಮ ಕೆಲಸಗಳನ್ನು, ವಿಶ್ರಾಂತಿ ವೇತನಗಳನ್ನು, ಮತ್ತು ಎಲ್ಲಾ ನಾಗರಿಕ ಹಕ್ಕುಗಳನ್ನು ಕಳೆದುಕೊಂಡರು, ಮತ್ತು 1937ರಲ್ಲಿ ಆರಂಭಿಸುತ್ತಾ, ಅವರು ಸೆರೆಶಿಬಿರಗಳಿಗೆ ಕಳುಹಿಸಲ್ಪಟ್ಟರು. ಅಲ್ಲಿ, ನಾಜಿಗಳು ಅವರನ್ನು ‘ಸ್ವಪ್ರೇರಣೆಯ ಕೈದಿಗಳು’ ಎಂಬುದಾಗಿ ಹೆಸರಿಸಿದರು: ತಮ್ಮ ನಂಬಿಕೆಗಳನ್ನು ನಿರಾಕರಿಸಿದ ಯೆಹೋವನ ಸಾಕ್ಷಿಗಳು ಬಿಡುಗಡೆ ಹೊಂದಬಲ್ಲರು. ಅವರಲ್ಲಿ ಒಬ್ಬರೂ ನಂಬಿಕೆಯನ್ನು ತ್ಯಜಿಸಲಿಲ್ಲ.”

[ಪುಟ 27 ರಲ್ಲಿರುವ ಚೌಕ]

“ಹೇಳಲು ಒಂದು ಪ್ರಾಮುಖ್ಯವಾದ ಕಥೆ ಇದಾಗಿದೆ”

“ಯೆಹೋವನ ಸಾಕ್ಷಿಗಳು ಅತ್ಯಂತ ಅಸಾಧಾರಣವಾದ ಕಥೆಗಳಲ್ಲಿ ಒಂದಾಗಿದ್ದಾರೆ. ಅವರ ಧಾರ್ಮಿಕ ನಂಬಿಕೆಗಳ ಕಾರಣ, 1933ರಲ್ಲಿ ನಾಜಿ ಜರ್ಮನ್‌ ಸರಕಾರದ ಮೂಲಕ . . . ನಿಷೇಧಿಸಲಾದ ಧರ್ಮಗಳಲ್ಲಿ ಅವರು ಪ್ರಥಮರು. ತಮ್ಮ ಮನ್ನಣೆ ಮತ್ತು ತಮ್ಮ ಒಪ್ಪಂದವನ್ನು ಅವರು ಒಂದು ಉನ್ನತ ನಿಯಮಕ್ಕೆ—ದೇವರ ನಿಯಮಕ್ಕೆ ತೋರಿಸಿದಕ್ಕಾಗಿ ಅದು ಹಾಗಾಗಿತ್ತು. ಇದರ ಫಲಸ್ವರೂಪವಾಗಿ, ಯೆಹೂದ್ಯರು ಮತ್ತು ಜಿಪ್ಸಿಗಳಂತೆ ಅವರು ನಿಷ್ಕರುಣೆಯಿಂದ ಹಿಂಸಿಸಲ್ಪಟ್ಟರು ಮತ್ತು ಅವರಲ್ಲಿ ಅನೇಕರು ಸೆರೆಶಿಬಿರಗಳಲ್ಲಿ ಹಾಕಲ್ಪಟ್ಟು ತಮ್ಮ ಜೀವಗಳನ್ನು ಅಲ್ಲಿ ಕಳೆದುಕೊಂಡರು.

“ಹೇಳಲು ಒಂದು ಪ್ರಾಮುಖ್ಯವಾದ ಕಥೆ ಇದಾಗಿದೆ. ಬಹುಶಃ ಇದರ ಅತ್ಯಂತ ದುಃಖಕರ ಭಾಗವು ಯೆಹೋವನ ಸಾಕ್ಷಿಗಳ ಮಕ್ಕಳದ್ದಾಗಿತ್ತು. ಅವರ ತಂದೆಯು ಶಿಬಿರವೊಂದಕ್ಕೆ ಕರೆದೊಯ್ಯಲ್ಪಡುವಾಗ, ಮತ್ತು ಅವರ ತಾಯಿಯು ಸೆರೆಯಲ್ಲಿ ಇಡಲ್ಪಟ್ಟಾಗ, ಅವರನ್ನು ಯೆಹೂದಿ ಮತ್ತು ಜಿಪ್ಸಿ ಮಕ್ಕಳೊಂದಿಗೆ ಒಟ್ಟಾಗಿ ಶಾಲೆಯ ಹಿಂದಿನ ಸಾಲಿನಲ್ಲಿ ಇರಿಸಲಾಗುತ್ತಿತ್ತು. ‘ಹೈಲ್‌ ಹಿಟ್ಲರ್‌!’ ಎಂಬ ವಂದನೆಯನ್ನು ಉಪಯೋಗಿಸಲು ಯಾ ನಾಜಿ ರಾಜ್ಯಕ್ಕೆ ಬೇರೆ ಯಾವುದೇ ರೀತಿಯ ಪ್ರಣಾಮವನ್ನು ಮಾಡಲು ಮಕ್ಕಳು ಇಷ್ಟಪಡದಿದ್ದರೆ, ಅವರ ನಂಬಿಕೆಗಳ ಕಾರಣದಿಂದಲೇ ಹೊರತಾಗಿ ಬೇರೆ ಯಾವುದೇ ಕಾರಣಕ್ಕಲ್ಲದೆ ಅವರನ್ನು ಬಾಲಾಪರಾಧಿಗಳೆಂದು ವರ್ಗೀಕರಿಸಲಾಗುತ್ತಿತ್ತು. ಮತ್ತು ಈ ಮಕ್ಕಳು, ನಿಸ್ಸಂದೇಹವಾಗಿ, ಮನಸ್ಸಾಕ್ಷಿಯ ಅಪರಾಧಗಳಾಗಿದ್ದ ಅವರ ಹೆತ್ತವರ ತೋರಿಕೆಯ ಮತ್ತು ಆಪಾದಿತ ಅಪರಾಧಗಳಿಗೆ ಬೆಲೆಯನ್ನು ತೆತ್ತರು ಮಾತ್ರವಲ್ಲ ಅವರ ಮಕ್ಕಳಾಗಿದ್ದ ನಿಜತ್ವಕ್ಕಾಗಿಯೂ ಕೂಡ ಅವರು ಬೆಲೆಯನ್ನು ತೆತ್ತರು.”—ಡಾ. ಸಿಬೆಲ್‌ ಮಿಲ್ಟನ್‌, ವಸ್ತುಸಂಗ್ರಹಾಲಯದ ಮುಖ್ಯ ಇತಿಹಾಸಗಾರ್ತಿ. (g93 11/08)

[ಪುಟ 24 ರಲ್ಲಿರುವ ಚಿತ್ರ]

ನೇರಳೆ ಬಣ್ಣದ ತ್ರಿಕೋನ ಚಿಹ್ನೆಯಿರುವ ಸೆರೆಶಿಬಿರದ ಕೋಟುಗಳು ಯೆಹೋವನ ಸಾಕ್ಷಿಗಳನ್ನು ಗುರುತಿಸಿದವು

[ಪುಟ 25 ರಲ್ಲಿರುವ ಚಿತ್ರ]

ಸರ್ವನಾಶದಿಂದ ಬದುಕಿ ಉಳಿದ ಫ್ರಾನ್ಸ್‌ ವೋಲ್‌ಫಾರ್ಟ್‌ (ಎಡಕ್ಕೆ) ಮತ್ತು ಯೋಸೆಫ್‌ ಶೋನ್‌ ಇತಿಹಾಸಗಾರ್ತಿ ಡಾ. ಕ್ರಿಸ್‌ಟೀನ್‌ ಕಿಂಗ್‌ನೊಂದಿಗೆ “ಬಲಿಪಶುಗಳು” ಎಂಬ ಪ್ರದರ್ಶಕದ ಬಳಿಯಲ್ಲಿ

[ಪುಟ 25 ರಲ್ಲಿರುವ ಚಿತ್ರ]

ಇದಕ್ಕೆ ಸಮಾನವಾಗಿರುವ ಬಾಕ್ಸ್‌ಕಾರ್‌ಗಳ ಮೂಲಕ ವೋಲ್‌ಫಾರ್ಟ್‌ ಮತ್ತು ಶೋನ್‌ ಸೆರೆಶಿಬಿರಕ್ಕೆ ಸಾಗಿಸಲ್ಪಟ್ಟರು

[ಪುಟ 26 ರಲ್ಲಿರುವ ಚಿತ್ರ]

ಮೇಲೆ: ಪಾರಾದ ವೋಲ್‌ಫಾರ್ಟ್‌ (ಎಡಕ್ಕೆ) ಮತ್ತು ಶೋನ್‌, ಯೆಹೋವನ ಸಾಕ್ಷಿಗಳನ್ನು ಒಳಗೊಂಡಿರುವ “ರಾಜ್ಯದ ವೈರಿಗಳು” ಎಂಬ ವಿಡಿಯೋದ ಇತಿಹಾಸ ಪ್ರದರ್ಶನದಲ್ಲಿ

[ಪುಟ 26 ರಲ್ಲಿರುವ ಚಿತ್ರ]

ಕೆಳಗೆ: ಮಾರೀಯಾಳ ಸಹೋದರನಾದ ಯೋಹಾನ್‌ ಶ್ಟಾಸೀರ್‌ನ ಬೈಬಲನ್ನು ಒಳಗೊಂಡಿರುವ ಪ್ರದರ್ಶಕದ ಬಳಿಯಲ್ಲಿ ಮಾರೀಯಾ ಮತ್ತು ಫ್ರಾನ್ಸ್‌ ವೋಲ್‌ಫಾರ್ಟ್‌. “ಅದನ್ನು ಕಂಡುಹಿಡಿಯುವ ತನಕ, ಸ್ವಲ್ಪ ಸಮಯಕ್ಕಾಗಿ ಯೋಹಾನ್‌ ಅದನ್ನು ಹೇಗೊ ಅಡಗಿಸಿಟ್ಟಿದ್ದನು,” ಎಂದು ಫ್ರಾನ್ಸ್‌ ಹೇಳುತ್ತಾರೆ. “ಅವನ ಮರಣದ ಅನಂತರ ಅವನ ತಾಯಿಗೆ ಹಿಂದೆ ಕಳುಹಿಸಲ್ಪಟ್ಟ ಏಕಮಾತ್ರ ಸ್ವತ್ತು ಬೈಬಲ್‌ ಆಗಿತ್ತು”

[ಪುಟ 26 ರಲ್ಲಿರುವ ಚಿತ್ರ]

ಪ್ರದರ್ಶಿಸಲ್ಪಟ್ಟ ಬೈಬಲಿನ ಪಕ್ಕದಲ್ಲಿ, ಹೀಗೆ ಬರೆಯಲಾಗಿದೆ: “ಈ ಬೈಬಲ್‌ ಜಾಕ್‌ಸೆನ್‌ಹೌಜೆನ್‌ ಸೆರೆಶಿಬಿರದಲ್ಲಿ ಸೆರೆಯಾಗಿದ್ದ ಒಬ್ಬ ಯೆಹೋವನ ಸಾಕ್ಷಿ, ಯೋಹಾನ್‌ ಶ್ಟಾಸೀರ್‌ಗೆ ಸೇರಿತ್ತು. ಸೋವಿಯೆಟ್‌ ಸೈನ್ಯವು ಶಿಬಿರವನ್ನು ಸ್ವತಂತ್ರಗೊಳಿಸಿದ ಸ್ವಲ್ಪ ಮುಂಚೆ ಶ್ಟಾಸೀರ್‌ ತೀರಿಹೋದನು”

[ಪುಟ 27 ರಲ್ಲಿರುವ ಚಿತ್ರ]

“ನಾಗರಿಕತೆಯ ರಕ್ಷಣೆಯು ಎಷ್ಟು ಶಿಥಿಲವಾಗಿದೆ,” ಎಂದು ವಸ್ತುಸಂಗ್ರಹಾಲಯದ ಪ್ರಾರಂಭೋತ್ಸವದ ಸಮಯದಲ್ಲಿ ಅಮೆರಿಕದ ಅಧ್ಯಕ್ಷರಾದ ಕ್ಲಿಂಟನ್‌ ಹೇಳಿದರು. “ಮೌಲ್ಯಗಳಿಂದ ಪ್ರತ್ಯೇಕಿಸಲ್ಪಟ್ಟ ಜ್ಞಾನ, ಹೃದಯವಿಲ್ಲದ ತಲೆ ಮಾನವೀಯತೆ ಅಲ್ಲ ಎಂಬ ಮಾನವ ಘೋರ ಸ್ವಪ್ನವನ್ನು ಗಾಢವಾಗಿಸಲು ಮಾತ್ರ ಕಾರ್ಯಮಾಡಬಲ್ಲದು ಎಂಬುದಾಗಿ ಸರ್ವನಾಶವು ನಮಗೆ ಅನಂತವಾಗಿ ಜ್ಞಾಪಿಸುತ್ತದೆ”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ