ರಕ್ತ ಸ್ರಾವಕರಿಗೆ ಕೊಡಲ್ಪಟ್ಟ ಕಲುಷಿತ ರಕ್ತ
ರಕ್ತವು ವರ್ಷವೊಂದಕ್ಕೆ ಇನ್ನೂರು ಕೋಟಿ ಡಾಲರ್ ವ್ಯಾಪಾರವಾಗಿ ಪರಿಣಮಿಸಿದೆ. ಅದರ ಪ್ರಯೋಜನಗಳ ಬೆನ್ನಟ್ಟುವಿಕೆಯು ಫ್ರಾನ್ಸಿನಲ್ಲಿ ಒಂದು ವಿಪರೀತ ದೊಡ್ಡ ದುರಂತದಲ್ಲಿ ಫಲಿಸಿದೆ. ಏಯ್ಡ್ಸ್ ಸಂಬಂಧಿತ ಅಸ್ವಸ್ಥತೆಗಳಲ್ಲಿ ಏಚ್ಐವಿ-ಕಲುಷಿತಗೊಂಡ ರಕ್ತವು 250 ರಕ್ತ ಸ್ರಾವಕರ ಮರಣಕ್ಕೆ ಕಾರಣವಾಗಿದೆ, ಅದರೊಂದಿಗೆ ಹೆಚ್ಚಿನ ನೂರಾರು ಮಂದಿ ಸೋಂಕಿತರಾಗಿದ್ದಾರೆ.—ದ ಬಾಸ್ಟನ್ ಗ್ಲೋಬ್, ಅಕ್ಟೋಬರ 28, 1992, ಪುಟ 4.
ವೈದಕೀಯ ಅಲಕ್ಷ್ಯ ಮತ್ತು ವಾಣಿಜ್ಯ ಲೋಭದ “ಅಪವಿತ್ರ ಬಾಂಧವ್ಯ”ವು, ಸುಮಾರು 400 ಮಂದಿ ಜರ್ಮನ್ ರಕ್ತ ಸ್ರಾವಕರ ಮರಣಕ್ಕೆ ಮುನ್ನಡೆಸಿದೆ, ಹಾಗು ಕಡಿಮೆಪಕ್ಷ 2,000 ಹೆಚ್ಚಿನ ಜನರು ಏಚ್ಐವಿ-ಕಲುಷಿತ ರಕ್ತದಿಂದ ಸೋಂಕಿತರಾಗಿದ್ದಾರೆ.—ಗಾರ್ಡಿಯನ್ ವೀಕ್ಲಿ, ಆಗಸ್ಟ್ 22, 1993, ಪುಟ 7.
ಕೆನಡಕ್ಕೆ ತನ್ನ ಸ್ವಂತ ರಕ್ತ ಅಪನಿಂದೆಯಿದೆ. ಕೆನಡದ ರಕ್ತ ಸ್ರಾವಕರಲ್ಲಿ 700ಕ್ಕಿಂತಲೂ ಅಧಿಕ ಮಂದಿ ಏಚ್ಐವಿ-ಕಲುಷಿತ ರಕ್ತದಿಂದ ಚಿಕಿತ್ಸಿತರಾದರೆಂದು ಅಂದಾಜುಮಾಡಲ್ಪಟ್ಟಿದೆ. ಕೆನಡದ ರಕ್ತ ಸ್ರಾವಕರಿಗೆ ರೆಡ್ ಕ್ರಾಸ್ ಏಯ್ಡ್ಸ್-ಕಲುಷಿತ ರಕ್ತವನ್ನು ಹಂಚುತ್ತಿದೆಯೆಂದು ಜುಲೈ 1984ರಲ್ಲಿ ಸರಕಾರವು ಎಚ್ಚರಿಸಲ್ಪಟ್ಟಿತ್ತು, ಆದರೆ ತದನಂತರ ಒಂದು ವರ್ಷದ ವರೆಗೆ—ಆಗಸ್ಟ್ 1985—ಕಲುಷಿತಗೊಂಡ ರಕ್ತದ ಉತ್ಪನ್ನಗಳು ಮಾರುಕಟ್ಟೆಯಿಂದ ಹಿಂದೆಗೆದುಕೊಳ್ಳಲ್ಪಡಲಿಲ್ಲ.—ದ ಗ್ಲೋಬ್ ಆ್ಯಂಡ್ ಮೆಯಿಲ್, ಜುಲೈ 22, 1993, ಪುಟ A21, ಮತ್ತು ದ ಮೆಡಿಕಲ್ ಪೋಸ್ಟ್, ಮಾರ್ಚ್ 30, 1993, ಪುಟ 26.
ಸ್ಪೆಯಿನ್ನ ಮಡ್ರಿಡ್ನಿಂದ 1993, ಎಪ್ರಿಲ್ 21ರಂದು, ರೈಟರ್ಸ್ ಅಧಿಕೃತ ಸಮಾಚಾರವು ಹೇಳಿದ್ದೇನಂದರೆ, ಆರೋಗ್ಯ ಇಲಾಖೆಗನುಸಾರ 1980ಗಳಲ್ಲಿ ರಕ್ತ ಮತ್ತು ಪ್ಲಾಸ್ಮ ಪೂರಣಗಳ ಮೂಲಕವಾಗಿ ಏಯ್ಡ್ಸ್ ವೈರಸ್ನಿಂದ ಸೋಂಕಿತರಾಗಿರುವ 1,147 ರಕ್ತ ಸ್ರಾವಕರಿಗೆ ಸ್ಪೆಯಿನ್ ಪರಿಹಾರವನ್ನು ಪಾವತಿಮಾಡುತ್ತದೆ. ಈಗಾಗಲೆ 400ಕ್ಕಿಂತಲೂ ಅಧಿಕ ಮಂದಿ ಏಯ್ಡ್ಸ್ ರೋಗದಿಂದ ಬಾಧಿಸಲ್ಪಟ್ಟು ಸತ್ತಿದ್ದಾರೆ.—ದ ನ್ಯೂ ಯಾರ್ಕ್ ಟಯಿಮ್ಸ್, ಎಪ್ರಿಲ್ 22, 1993, ಪುಟ A13.
ಇಸವಿ 1982ರ ಅಂತ್ಯದೊಳಗೆ, ರಕ್ತ ಗೆಡ್ಡೆಕಟ್ಟಿಸುವ ಅಂಶ (ಫ್ಯಾಕ್ಟರ್)ವಾದ VIII—ಅದರ ಒಂದು ಪೂರಣವು 20,000 ರಕ್ತ ದಾನಿಗಳಿಂದ ಸಾಂದ್ರೀಕರಿಸಲ್ಪಟ್ಟಿರಬಹುದಾಗಿದ್ದು, ಅವರಲ್ಲಿ ಕೇವಲ ಒಬ್ಬನಿಗೆ ಏಯ್ಡ್ಸ್ ರೋಗವಿರುವುದು ಸೂಜಿಮದ್ದನ್ನು ಕಲುಷಿತಗೊಳಿಸಬಹುದು—ಅಪಾಯಗಳ ಕುರಿತು, ರೋಗ ನಿಯಂತ್ರಣ ಕೇಂದ್ರಗಳು NHF (ನ್ಯಾಷನಲ್ ಹೀಮೊಫಿಲಿಯ ಫೌಂಡೇಶನ್)ಅನ್ನು ಎಚ್ಚರಿಸಲು ಆರಂಭಿಸಿದವು. ಮಾರ್ಚ್ 1983ರಲ್ಲಿ ಹೆಚ್ಚು ಪ್ರಬಲವಾದ ಒಂದು ಎಚ್ಚರಿಕೆಯು ಕೊಡಲ್ಪಟ್ಟಿತು, ಆದರೆ ಆ ವರ್ಷದ ಮೇ ತಿಂಗಳಿನಲ್ಲಿ, “ಗೆಡ್ಡೆಕಟ್ಟಿಸುವ ಅಂಶದ ಉಪಯೋಗವನ್ನು ಕಾಪಾಡಿಕೊಳ್ಳುವಂತೆ ಎನ್ಏಚ್ಎಫ್ ಒತ್ತಾಯಿಸುತ್ತದೆ” ಎಂಬ ಶಿರೋನಾಮವಿರುವ ಒಂದು ಲಘು ವರದಿಯನ್ನು ಎನ್ಏಚ್ಎಫ್ ಕಳುಹಿಸಿತು. ಅಂದಿನಿಂದ ಸತ್ತವರ ಸಂಖ್ಯೆಯು ಏರುತ್ತಿತ್ತು, ಮತ್ತು ಸಾವಿರಾರು ಮಂದಿ ಇನ್ನೂ ಅಪಾಯದಲ್ಲಿ ಹಾಕಲ್ಪಡುತ್ತಿದ್ದರು. ರಕ್ತ ಸ್ರಾವಕರ ಬದುಕಿ ಉಳಿಯುವಿಕೆಗೆ ಈ ಗೆಡ್ಡೆಕಟ್ಟಿಸುವ ಅಂಶವು ಅಗತ್ಯವಾಗಿರಲಿಲ್ಲ; ಚಿಕಿತ್ಸೆಗಾಗಿ ಇತರ ಆಯ್ಕೆಗಳು ಇದ್ದವು. ಸಾವಿರಾರು ಜೀವಗಳು ರಕ್ಷಿಸಲ್ಪಡಸಾಧ್ಯವಿತ್ತು. ಅಂಶವನ್ನು ಕಾಯಿಸುವ ಮೂಲಕ ಅದನ್ನು ಸುರಕ್ಷಿತವಾದದ್ದಾಗಿ ಮಾಡುತ್ತದೆಂದು 1985ರೊಳಗೆ ಔಷಧ ಸಂಸ್ಥೆಗಳು ಕಂಡುಕೊಂಡವು. ಆಗಲೂ, ಕಾಯಿಸಿರದ ಅಂಶದ ತಪಶೀಲು ಪಟ್ಟಿಯಲ್ಲಿರುವ ಸಂಗ್ರಹಗಳು ಇನ್ನೂ ಮಾರಲ್ಪಡುತ್ತಿದ್ದವು.—ಡೇಟ್ಲೈನ್ ಎನ್ಬಿಸಿ, ದಶಂಬರ 14, 1993. (g94 5/22)
[ಪುಟ 31 ರಲ್ಲಿರುವ ಚಿತ್ರ ಕೃಪೆ]
CDC, Atlanta, Ga.