ಬೂದಿಬಣ್ಣದ ಕುದುರೆಯು ಸವಾರಿಗೈಯುತ್ತಾ ಇದೆ
ಮೃತ್ಯುವಿನಿಂದ ಸವಾರಿಮಾಡುತ್ತಿರುವ ಬೂದಿಬಣ್ಣದ ಕುದುರೆಯು ರಭಸದಿಂದ ಮುನ್ನುಗ್ಗುವಂತಹ ರೀತಿಯಲ್ಲಿ, ಇಡೀ ಪ್ರಥ್ವಿಯ ಸುತ್ತಲೂ ಸಾಂಕ್ರಮಿಕ ರೋಗಗಳು ತಡೆಯಿಲ್ಲದೇ ಏರುತ್ತಿರುವ ಒಂದು ಸಮಯಾವಧಿಯ ಕುರಿತು ಮುನ್ನುಡಿಯಲು ಪ್ರವಾದಿ ಯೋಹಾನನು ದೇವರಿಂದ ಪ್ರೇರಿಸಲ್ಪಟ್ಟನು. (ಪ್ರಕಟನೆ 6:8) ನಾವು ಆ ಸಮಯಾವಧಿಯಲ್ಲಿ ಜೀವಿಸುತ್ತಾ ಇದ್ದೇವೆ ಎಂಬದಕ್ಕೆ ತಲ್ಲಣಗೊಳಿಸುವ ವಿಧದಲ್ಲಿ ಘೋರವಾಗಿ ಹಬ್ಬುತ್ತಿರುವ ಏಯ್ಡ್ಸ್ ಒಂದು ರುಜುವಾತಾಗಿದೆ. ವಾಸ್ತವದಲ್ಲಿ ಏಯ್ಡ್ಸ್ನ ಆರಂಭಿಕ ಬೆಳವಣಿಗೆಯು “ಬರಲಿರುವ ಸಾಂಕ್ರಾಮಿಕ ರೋಗ” ಎಂದು ನ್ಯೂಯೋರ್ಕ್ ನಗರದ ಆರೋಗ್ಯ ಅಧಿಕಾರಿಗಳು ವಿವರಿಸುತ್ತಾರೆ.
ಥೈಲಾಂಡಿನಲ್ಲಿ, ಅದರ 73 ಪ್ರಾಂತ್ಯಗಳಲ್ಲಿ 70ರಲ್ಲಿ ಏಯ್ಡ್ಸ್ನ ರೋಗಾಣುಗಳು ಅಸ್ತಿತ್ವದಲ್ಲಿವೆ. 1987ರಲ್ಲಿ ಬೆಂಗ್ಕೊಕ್ನ ಮಾದಕೌಷಧ ತೆಗೆದುಕೊಳ್ಳುವವರಲ್ಲಿ ಶೇಕಡಾ 1 ಏಯ್ಡ್ಸ್ ಹೊಂದಿದ್ದರು, ಆದರೆ 1989ರ ಮಧ್ಯಭಾಗದಲ್ಲಿ ಶೇಕಡಾ 40 ಮಂದಿಗಿಂತಲೂ ಹೆಚ್ಚು ಮಂದಿಗೆ ಇದೆ. ಬ್ರೆಝೀಲಿನಲ್ಲಿ ಪರೀಕ್ಷಿಸಲ್ಪಟ್ಟವರಲ್ಲಿ 15 ಲಕ್ಷ ಮಂದಿಗೆ ಏಯ್ಡ್ಸ್ ಇದೆ, ಇನ್ನು ಮೂರು ವರ್ಷಗಳಲ್ಲಿ 75,000 ಮಂದಿಗೆ ಬರುವ ನಿರೀಕ್ಷೆಯಿದೆ. ಬ್ರೆಝೀಲಿನ 1,200 ರಕ್ತ ಸಂಚಯನಿಧಿಗಳಲ್ಲಿ, 1988ರಲ್ಲಿ ಕೇವಲ ಶೇಕಡಾ 20 ಮಾತ್ರ ಅವರ ರಕ್ತ ಪೂರೈಸುವಿಕೆಯನ್ನು ಪರೀಕ್ಷಿಸಿದ್ದಾರೆ ಮತ್ತು ಏಯ್ಡ್ಸ್ನ ಭಾಧಿತರಲ್ಲಿ ಶೇಕಡಾ 14 ಮಂದಿಗೆ ಅಶುದ್ಧ ರಕ್ತದಿಂದ ಈ ರೋಗ ಬಂದಿದೆ. ರಿಯೊ ಡಿ ಜನೈರೊದಲ್ಲಿ ಮತ್ತು ಸಾವೊ ಪೌಲ್ನಲ್ಲಿ ಶೇಕಡಾ 75ರಷ್ಟು ಮಂದಿ ಹೆಮಿಯೊಫಿಲಿಕ್ಸ್ನಿಂದ ರೋಗಪೀಡಿತರಾಗಿದ್ದಾರೆ. ಕೊಟೆ ಡಿ ಐವರಿಯಲ್ಲಿ ಗರ್ಭಿಣಿಯರಲ್ಲಿ ಶೇಕಡಾ 10ರಷ್ಟು ಮತ್ತು ರಕ್ತದಾನಿಗಳಲ್ಲಿ ಶೇಕಡಾ 10 ರಷ್ಟು ಮಂದಿಗಳಿಗೆ ಏಯ್ಡ್ಸ್ ಇದೆ.
ಅಮೆರಿಕದ ವೈದ್ಯಕೀಯ ಅಧಿಕಾರಿ 87 ರಾಷ್ಟ್ರಗಳ ಒಂದು ಕೂಟದಲ್ಲಿ ಏಯ್ಡ್ಸ್ನ ಕುರಿತು ಹೇಳಿದ್ದು: “HIV (ಏಯ್ಡ್ಸ್ನ ರೋಗಾಣು)ನ ಸಾಂಕ್ರಮಿಕ ಜಾಡ್ಯವು ಅಮೆರಿಕದಲ್ಲಿ ಮತ್ತು ಜಗವ್ಯಾಪಕವಾಗಿ ಹತೋಟಿ ಮೀರಿದೆ.” ಅಮೆರಿಕದ ರೋಗ ಹತೋಟಿಯ ಕೇಂದ್ರಗಳು ಅಂದಾಜಿಸಿವೇನಂದರೆ 1988ರಲ್ಲಿ 10 ಲಕ್ಷ ಅಮೆರಿಕನರು ಪೂರ್ಣ ಅರಳಿದ ರೋಗವನ್ನು ಹೊಂದುವರು ಮತ್ತು ಹಲವಾರು ಮಂದಿ ಅದರ ರೋಗಾಣುವನ್ನು ಪಡೆಯುವರು. ರೋಗಾಣುವನ್ನು ಹೊಂದಿದವರ ಸಂಖ್ಯೆಯ ಅಂದಾಜನ್ನು ಇತ್ತೀಚೆಗೆ ಪರಿಶೀಲಿಸಿದಾಗ ಇದರ ಸಂಖ್ಯೆ ಅಧಿಕತಮ ಏರಿರುತ್ತದೆ. ನ್ಯೂಯೋರ್ಕ್ ನಗರದಲ್ಲಿ ಹೃದಯದ ರೋಗ ಮತ್ತು ಕ್ಯಾನ್ಸರನ್ನು ಬಿಟ್ಟರೆ ಏಯ್ಡ್ಸ್ ಮೂರನೆಯ ಸ್ಥಾನದಲ್ಲಿ ಇದೆ.
ರಕ್ತ ಸಂಯೋಜನೆಗಾಗಿ ಏಯ್ಡ್ಸ್-ಮಾಲಿನ್ಯಕರ ರಕ್ತವನ್ನು ರಕ್ತ ಸಂಚಯನಿಧಿಗಳು ಸರಬರಾಜು ಮಾಡಿದ್ದಕ್ಕಾಗಿ ಅವರ ಮೇಲೆ ವಾದ ಹೂಡಲಾಗಿದೆ. ಅನೇಕ ಸಂಚಯನಿಧಿಗಳಿಗೆ ನಷ್ಟ ತುಂಬಿಸಿ ಕೊಡಲು ಹೇಳಲಾಗಿದೆ. ಅವುಗಳು ಇನ್ನೂ ಅನೇಕ ಮೊಕದ್ದಮೆಗಳನ್ನು ಎದುರಿಸಲಿಕ್ಕಿರಬಹುದು. ರಕ್ತ ಸಂಚಯನಿಧಿಗಳ ಅಮೆರಿಕದ ಸಂಘದ ಮುಖ್ಯ ಸಲಹೆಗಾರನು ಪ್ರಲಾಪಿಸಿದ್ದು: “ಭವಿಷ್ಯವು ಏನನ್ನು ಕಾದಿರಿಸಿದೆ? ನನಗೆ ತಿಳಿದಿಲ್ಲ. ಅತೀ ಕೇಡಿನ ನೋಟವೆಂದರೆ ರಕ್ತ ಕೇಂದ್ರಗಳು ಇಲ್ಲದೇ ಹೋಗುವುದು.”
ಶೀಘ್ರದಲ್ಲಿಯೇ, ಎಲ್ಲಾ ರಕ್ತ ಸಂಚಯನಿಧಿಗಳು ಖಂಡಿತವಾಗಿಯೂ ಅಂತ್ಯಗೊಳ್ಳುವವು ಯಾಕಂದರೆ ಏಯ್ಡ್ಸ್ ಇಲ್ಲದ ಒಂದು ಲೋಕ, ಆಸ್ಪತ್ರೆಗಳಿಲ್ಲದ, ರೋಗ, ಯಾ ಮರಣವಿಲ್ಲದ ಒಂದು ಲೋಕವನ್ನು ಕಾಣುವ ಸಮಯಕ್ಕೆ ನಾವು ಸಮೀಪಿಸುತ್ತಾ ಇದ್ದೇವೆ. ಬೂದಿ ಬಣ್ಣದ ಕುದುರೆಯ ಸವಾರಿಯನ್ನು ನೋಡಿದ ಯೋಹಾನನು ಮಾನವ ಕುಲವು ರೋಗದ ಪೀಡೆಯಿಂದ ಮುಕ್ತವಾಗುವ “ಒಂದು ನೂತನ ಭೂಮಿಯ” ದೇವರ ವಾಗ್ದಾನವನ್ನು ಕೂಡಾ ದಾಖಲಿಸಿದ್ದಾನೆ. (ಪ್ರಕಟಣೆ 21:1-4) ಈಗಲೇ ಆ ವಾಗ್ದಾನದ ಮೌಲ್ಯಮಾಪನ ಮಾಡಿ ಕೊಳ್ಳುವುದು ಜರೂರಿಯದ್ದಾಗಿದೆ ಯಾಕಂದರೆ ಬೂದಿಬಣ್ಣದ ಕುದುರೆಯು ತನ್ಮಧ್ಯೆ ಸವಾರಿಗೈಯುತ್ತಾ ಇದೆ. (g89 12/8)