ಯುವ ಜನರು ಪ್ರಶ್ನಿಸುವುದು . . .
ಗ್ಲೂ ಸೇದಿಕೆ ಅದು ನಿಜವಾಗಿಯೂ ನನ್ನನ್ನು ನೋಯಿಸಬಲ್ಲದೊ?
“ಅದು ಭಾರಿ ಚೆನ್ನಾಗಿದೆ—ವ್ಯಂಗ್ಯಚಿತ್ರಗಳನ್ನು ವೀಕ್ಷಿಸುವಂತೆಯೇ.” ಹಾಗೆಂದು ರಷ್ಯಾದ ಮಾಸ್ಕೋ ನಗರದ 13 ವರ್ಷ ಪ್ರಾಯದ ಹುಡುಗಿ ಸ್ಫೇಟಾ ಹೇಳುತ್ತಾಳೆ.a ಆದರೆ ಸ್ಫೇಟಾ ಇತ್ತೀಚೆಗಿನ ಚಲನಚಿತ್ರ ಯಾ ವಿಡಿಯೊ ಬಗ್ಗೆ ಕೊಂಡಾಡುತ್ತಿಲ್ಲ. ಲೋಕದ ಸುತ್ತಲೂ ಸಾವಿರಾರು ಯುವ ಜನರೊಳಗೆ ಜನಪ್ರಿಯವಾಗಿರುವ ಮಾದಕ ವಸ್ತುವಿನ ದುರುಪಯೋಗ—ಗ್ಲೂ ಸೇದಿಕೆ—ದಿಂದ ಆದ ಆಕೆಯ ಅನುಭವವನ್ನು ಅವಳು ವರ್ಣಿಸುತ್ತಿದ್ದಾಳೆ.
ಆದರೆ ಗ್ಲೂ, ಕೆಲವು ಯುವ ಜನರು ಸೇದುತ್ತಿರುವ ಅನೇಕ ಪದಾರ್ಥಗಳಲ್ಲಿ ಕೇವಲ ಒಂದಾಗಿದೆ. ಉದಾಹರಣೆಗೆ, ಯಂಗ್ ಪೀಪಲ್ ನೌ ಎಂಬ ಪತ್ರಿಕೆಗನುಸಾರ, ಬ್ರಿಟನಿನಲ್ಲಿ, ಏರ್ ಫ್ರೆಷ್ನ್ರ್ಸ್ (ಗಾಳಿಯನ್ನು ಹೊಸದಾಗಿಸುವ ರಾಸಾಯನಿಕ ತಯಾರಿಕೆ), ಲೈಟರ್ ಫ್ಯೂಯೆಲ್ (ಸಿಗರೇಟ್ ಲೈಟರಿನ ಇಂಧನ), ಮತ್ತು “20ರಿಂದ 30 ಇತರ ಸಾಮಾನ್ಯ ಮನೆವಾರ್ತೆಯ ಉತ್ಪನ್ನಗಳು . . ಅಪಪ್ರಯೋಗಿಸಲಾಗುತ್ತಿವೆ.” ಇದರಲ್ಲಿ “ನೋವು ಪರಿಹಾರ ಸ್ಪ್ರೇಗಳು, ಪೀಠೋಪಕರಣದ ಮೆರುಗು ಪದಾರ್ಥಗಳು, ಮತ್ತು ಪಂಕ್ಚರ್ ದುರಸ್ತಿ ಸಜ್ಜುಗಳು” ಸೇರಿವೆ. ಕೆಲವು ಯುವ ಜನರು ಬೆಂಕಿ ಶಮನಗೊಳಿಸುವ ಆವಿಗಳನ್ನು ಕೂಡ ಸೇದುತ್ತಾರೆ! ಆದುದರಿಂದ, ಆರೋಗ್ಯ ಕೆಡಿಸುವಂತಹ ಆದರೆ ಜನಪ್ರಿಯವಾಗಿರುವ ಈ ಚಟವನ್ನು ಕೆಲವು ಪರಿಣತರು ಕರೆಯುವಂತೆ “ದ್ರಾವಕ ಅಪಪ್ರಯೋಗ (ಸಾಲ್ವೆಂಟ್ ಅಬ್ಯೂಸ್)” ಯಾ “ಬಾಷ್ಪ ಗುಣವುಳ್ಳ ಪದಾರ್ಥಗಳ ಅಪಪ್ರಯೋಗ (ವಾಲೆಟೈಲ್ ಸಬ್ಸೆನ್ಟ್ಸ್ ಅಬ್ಯೂಸ್)”ವೆಂದು ಕರೆಯುವುದು ಹೆಚ್ಚು ನಿಷ್ಕೃಷ್ಟ.
ತಾವು ಗ್ಲೂವನ್ನಾಗಲಿ ಯಾ ಪೀಠೋಪಕರಣದ ಮೆರುಗು ಪದಾರ್ಥವನ್ನಾಗಲಿ ಅಪಪ್ರಯೋಗಿಸುವಾಗ, ಸೇದುವವರು ಸಮನಾದ ಫಲಿತಾಂಶಗಳನ್ನು ಹುಡುಕುತ್ತಾರೆ. ಒಂದು ಮೂಲಕ್ಕನುಸಾರ, “ಮದ್ಯಪಾನದಿಂದ ಉಂಟಾಗುವ ಅಮಲಿನಂತೆ ‘ಸಂಭ್ರಮದಿಂದ ಕೂಡಿರಲು’ ಯಾ ‘ಅಮಲೇರಲು’” ಅವರು ಬಯಸುತ್ತಾರೆ. ದ್ರಾವಕಗಳು ಕೊಕೇನ್ನಂತಹ ಬಾಧಕ ಅಮಲೌಷಧಗಳಿಗಿಂತ ಅಗವ್ಗಾಗಿವೆ ಮತ್ತು ಹೆಚ್ಚು ಸುಲಭಲಭ್ಯವಾಗಿವೆ. ಬ್ರಿಟನ್ನ ನ್ಯೂ ಸೈಎನ್ಟಿಸ್ಟ್ ಪತ್ರಿಕೆಯು ಹೀಗೆ ವರದಿಸಿತು: “ದ್ರಾವಕಗಳು ಮತ್ತೊಮ್ಮೆ ಬಡವರ, ಯುವ ಜನರ ಮತ್ತು ಹೊರಹಾಕಲ್ಪಟ್ಟವರ ಅಮಲೌಷಧಗಳಾಗಿವೆ: ಗ್ವಾಟಮಾಲಾದ ದಿಕ್ಕಿಲ್ಲದ ಮಕ್ಕಳು ಮತ್ತು ಉತ್ತರ ಅಮೆರಿಕದಲ್ಲಿರುವ ಸ್ಧಳಜನ್ಯ ಅಮೆರಿಕನರು, ಅಷ್ಟೇ ಅಲ್ಲದೆ ಬ್ರಿಟನ್ನಲ್ಲಿರು ವಿದ್ಯಾರ್ಥಿ ನಿಲಯಗಳು ಮತ್ತು ರಾತ್ರಿಯ ಆಶ್ರಯ ಸ್ಥಾನಗಳಲ್ಲಿನ ಯುವ ಜನರು.” ಬ್ರಿಟನ್ನಲ್ಲಿ 10 ಹರೆಯದ ಹುಡುಗಿಯರು ಮತ್ತು ಹುಡುಗರಲ್ಲಿ ಒಬ್ಬರು ದ್ರಾವಕಗಳನ್ನು ಸೇದಿದ್ದಾರೆಂದು ಕೆಲವು ಅಧಿಕಾರಿಗಳು ನಂಬುತ್ತಾರೆ. ಮತ್ತು ಪರಿಣಾಮಗಳು ನಿಶ್ಚಯವಾಗಿಯೂ ಹಾನಿಕಾರಕವಲ್ಲದೆಯಿಲ್ಲ.
“ಸೇದಿಕೊಳ್ಳಲ್ಪಟ್ಟ ದ್ರಾವಕ ಆವಿಗಳು ಶ್ವಾಸಕೋಶಗಳ ಮೂಲಕ ಹೀರಿಕೊಳ್ಳಲ್ಪಡುತ್ತವೆ ಮತ್ತು ತೀವ್ರವಾಗಿ ಮಿದುಳನ್ನು ತಲಪುತ್ತವೆ” ಎಂದು ಅಮಲೌಷಧ ದುರುಪಯೋಗ (ಇಂಗ್ಲಿಷ್ನಲ್ಲಿ) ಎಂಬ ಪುಸ್ತಿಕೆಯು ವಿವರಿಸುತ್ತದೆ. ದ್ರಾವಕಗಳು ಕೇಂದ್ರ ನರ ವ್ಯೂಹವನ್ನು ಪ್ರಭಾವಿಸುತ್ತವೆ, ಮತ್ತು ಮದ್ಯಪಾನದಂತೆ, ಅವು ತಾತ್ಕಾಲಿಕವಾದ ಅಮಲಿನ ಸ್ಥಿತಿಯನ್ನು ತಯಾರಿಸಬಲ್ಲವು. ಕೆಲವು ಬಳಕೆದಾರರಲ್ಲಿ, ಅವು ಕ್ಷಣಿಕವಾದ ಭ್ರಮೆಗಳನ್ನು ಕೂಡ ಉತ್ಪಾದಿಸಬಲ್ಲವು—ಮತ್ತು ಎಲ್ಲವೂ ಪ್ರಾರಂಭದಲ್ಲಿ ಸ್ಫೇಟಾ ಮೂಲಕ ವರ್ಣಿಸಲಾದ ಅನುಭವದಂತೆ ಉಲ್ಲಾಸಕರವಾಗಿರುವುದಿಲ್ಲ. ಹದಿನಾಲ್ಕನೆಯ ಪ್ರಾಯದಲ್ಲಿ ಗ್ಲೂವನ್ನು ಸೇದಿದ ಡೇವಿಡ್ ಎಂಬ ಯುವಕ, “ನಾನು ಬಹಳಷ್ಟು ಇಲಿಗಳನ್ನು ನೋಡಿದೆ,” ಎಂದು ಹೇಳಿದ. “ಸಾವಿರಾರು ಇಲಿಗಳಿದ್ದವು—ದೊಡ್ಡವುಗಳಿಂದ ಸಣ್ಣ ಇಲಿಗಳು ಹೊರಬರುತ್ತಿದ್ದವು. ಅವು ನನ್ನ ಗೆಳೆಯನನ್ನು ತಿನ್ನುತ್ತಿದ್ದವೆಂದು ನಾನು ನೆನಸಿದೆ.” ಹದಿನೇಳರ ಪ್ರಾಯದಲ್ಲಿ ಗ್ಲೂವನ್ನು ಸೇದಿಕೊಳ್ಳಲು ಆರಂಭಿಸಿದ, ಕಾಜೂಹಿಕೊ ಎಂಬ ಒಬ್ಬ ಜಪಾನಿ ಯುವಕನು ಜ್ಞಾಪಿಸಿಕೊಳ್ಳುವುದು: “ನೆಲವು ಬಿರುಕು ಬಿಡುವುದನ್ನು ಮತ್ತು ಮೃಗಗಳು ನನ್ನನ್ನು ಆಕ್ರಮಿಸುವುದನ್ನು ನಾನು ನೋಡಿದೆ.”
ಹಾಗಾದರೆ, ದ್ರಾವಕ ಸೇದಿಕೆಯು ಕೆಲವು ಯುವ ಜನರಿಗೆ ಯಾಕೆ ಅಷ್ಟು ಆಕರ್ಷಣೀಯವಾಗಿದೆ? ತಾನು 13 ವರ್ಷದವನಾಗಿದ್ದಾಗ ಸೇದಲು ಆರಂಭಿಸಿದ ಲೀ, ಹೇಳುವುದು: “ಮೂಲಭೂತವಾಗಿ, ಜನರು ಅದನ್ನು ಮಾಡುವ ಕಾರಣವು, ನೈಜತೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವುದೇ ಆಗಿದೆ.” ಹೌದು, ಕೆಲವು ಯುವ ಜನರಿಗೆ, ದ್ರಾವಕಗಳ ಮೂಲಕ ಅಮಲೇರುವುದು ತೊಂದರೆಗಳನ್ನು ಮರೆಯುವ ಮಾರ್ಗವಾಗಿದೆ. ಇತರರು ಉತ್ತೇಜನಕ್ಕಾಗಿ ಹಾತೊರೆಯುತ್ತಾರೆ; ಭಯಹುಟ್ಟಿಸುವ ಭ್ರಮೆಯೊಂದು ಮನೋರಂಜನೆಪಡಿಸುವ ಭಯಂಕರ ಚಲನಚಿತ್ರದಂತಿದೆ ಎಂದು ಅವರು ನೆನಸುತ್ತಾರೆ. “ಇತರ ಕಾರಣಗಳು,” ಅಯರ್ಲೆಂಡಿನ ಆರೋಗ್ಯ ಖಾತೆಯು ಹೇಳುವುದು, “ಕುತೂಹಲ, ಸಮಾನಸ್ಕಂಧ ಗುಂಪಿನ ಒತ್ತಡಕ್ಕೆ ಪ್ರತಿಕ್ರಿಯೆ, ಸ್ಥಾನಮಾನವನ್ನು ಗಿಟ್ಟಿಸಿಕೊಳ್ಳುವ ಪ್ರಯತ್ನಗಳು, ಕೀಳರಿಮೆ ಮತ್ತು ಕೊರತೆಯ ಭಾವನೆಗಳನ್ನು ಸರಿದೂಗಿಸುವುದು ಆಗಿವೆ.”
ಅನಿರೀಕ್ಷಿತ ಮರಣ
ಅದರ ಆಕರ್ಷಣೆ ಏನೇ ಆಗಿರಲಿ, ದ್ರಾವಕ ಸೇದಿಕೆಯು ಮಾರಕವಾದ ಒಂದು ಅಭ್ಯಾಸ! ಅದು ಬ್ರಿಟನ್ನಲ್ಲಿ 1990ರಲ್ಲಿ 149 ಹಾನಿಗಳಿಗೆ ಕಾರಣವಾಗಿತ್ತು, ಮತ್ತು ಅದು ಕೆಲವೊಮ್ಮೆ ನಿಮಿಷಗಳಲ್ಲಿ ಒಬ್ಬನನ್ನು ಕೊಲ್ಲುತ್ತದೆ. ಅದನ್ನು “ಅನಿರೀಕ್ಷಿತ ಸೇದಿಕೆಯ ಮರಣ” ಎಂದು ಕರೆಯಲಾಗುತ್ತದೆ. ಉದಾಹರಣೆಗೆ ರೇಚಲ್, ಟೈಪ್ ತಿದ್ದುಪಡಿ ದ್ರವವನ್ನು ತನ್ನ ಉಡುಪಿನ ತೋಳುಗಳ ಮೇಲೆ ಸುರಿದುಕೊಂಡು, ಅದನ್ನು ಶಾಲೆಯಲ್ಲಿ ಸೇದುತ್ತಿದ್ದಳು. ಒಂದು ದಿನ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ಅವಳು ಅದನ್ನು ಸೇದಿದಳು. ಅವಳು ಬಸ್ಸಿನಿಂದ ಕೆಳಗಿಳಿದು ಬಿದ್ದುಬಿಟ್ಟಳು. ಅವಳು ಒಂದು ಕ್ಷಣಕ್ಕಾಗಿ ಎದಳ್ದು ಮತ್ತು ಪುನಃ ಕುಸಿದು—ಸತ್ತುಬಿದ್ದಳು! ರೇಚಲ್ 15 ವರ್ಷದವಳಾಗಿದ್ದಳು.
ದ್ರಾವಕಗಳು ನೀವು ಅವುಗಳನ್ನು ದುರುಪಯೋಗಿಸಿದ ಪ್ರಥಮ ಬಾರಿಗೆ ನಿಮ್ಮನ್ನು ಕೊಲ್ಲಬಲ್ಲವೆಂಬ ನಿಜತ್ವವು ವಿಶೇಷವಾಗಿ ಭಯಹುಟ್ಟಿಸುವಂಥದ್ದಾಗಿದೆ! “ಇಸವಿ 1971 ಮತ್ತು 1989ರ ಮಧ್ಯೆ ಸಂಭವಿಸಿದ ಎಲ್ಲ ದ್ರಾವಕ ದುರುಪಯೋಗದ ಮರಣಗಳಲ್ಲಿ 18%ವು ಪ್ರಥಮ ಬಾರಿಯ ‘ಸೇದುಗರಾಗಿದ್ದರೆಂದು’” ದ್ರಾವಕ ದುರುಪಯೋಗದ ವಿರುದ್ಧ ಹೋರಾಡಲು ಸ್ಥಾಪಿಸಲ್ಪಟ್ಟ ಒಂದು ಬ್ರಿಟಿಷ್ ದಾನಸಂಸ್ಥೆಯಾದ ರಿಸಾಲ್ವ್ ವರದಿಸುತ್ತದೆ. ಸಾಯುವವರಲ್ಲಿ ಅತಿ ಎಳೆಯ ವ್ಯಕ್ತಿ ಕೇವಲ ಒಂಬತ್ತು ವರ್ಷ ಪ್ರಾಯದವನಾಗಿದ್ದನು. ಮದ್ಯಪಾನದ ದುರುಪಯೋಗದಂತೆ, ದ್ರಾವಕ ದುರುಪಯೋಗವು ‘ಹಾವಿನಂತೆ ಕಚ್ಚುತ್ತದೆ, ಹೌದು, ನಾಗದ ಹಾಗೆ ಕಡಿಯುತ್ತದೆ,’ ಎಂದು ಹೇಳಸಾಧ್ಯವಿದೆ.—ಜ್ಞಾನೋಕ್ತಿ 23:32.
ತಾವು ದ್ರಾವಕಗಳ ಪ್ರಭಾವದ ಕೆಳಗಿರುವಾಗ ಸಂಭವಿಸುವ ಅಪಘಾತಗಳಿಂದಲೂ ಕೂಡ ಸೇದುಗರು ಸಾಯಬಲ್ಲರು. ಕೆಲವರು ಕಟ್ಟಡಗಳಿಂದ ಬಿದ್ದಿದ್ದಾರೆ ಅಥವಾ ಮುಳುಗಿ ಸತ್ತಿದ್ದಾರೆ. ಇತರರು ಪ್ರಜ್ಞೆತಪ್ಪಿ ತಮ್ಮ ಸ್ವಂತ ವಾಂತಿಯಿಂದ ಶ್ವಾಸಬಂಧಿತರಾಗಿದ್ದಾರೆ. ತಮ್ಮ ತಲೆಗಳ ಮೇಲಿಂದ ಒಂದು ಪ್ಲಾಸ್ಟಿಕ್ ಚೀಲವನ್ನು ಹಾಕಿ ಸೇದುವುದರಿಂದ ಕೆಲವರು ಸತ್ತಿದ್ದಾರೆ; ಚೀಲವನ್ನು ತೆಗೆಯಲು ಅಸಾಧ್ಯವಾಗುವಷ್ಟು ಅವರು ಅಮಲೇರಿ ಶ್ವಾಸಬಂಧಿತರಾದರು. ಇನ್ನೂ ಇತರರು ದ್ರಾವಕಗಳಿಗೆ ಬೆಂಕಿ ಹಿಡಿದಾಗ ಸುಡಲ್ಪಟ್ಟು ಸತ್ತಿದ್ದಾರೆ.
ಶಾರೀರಿಕ ಮಲಿನತೆ ಮತ್ತು ಇತರ ಅಪಾಯಗಳು
ಇಂತಹ ತೀವ್ರವಾದ ಪರಿಣಾಮಗಳು ಎಲ್ಲರಿಂದ ಅನುಭವಿಸಲ್ಪಡದಿದ್ದರೂ, ಒಬ್ಬ ಪರಿಣತನು ಬರೆಯುವುದು: “ಕ್ರಮವಾದ ದುರುಪಯೋಗಿಗೆ ತಾನು ತನ್ನ ವ್ಯವಸ್ಥೆಯನ್ನು ‘ಮಲಿನಗೊಳಿಸುತ್ತಿದ್ದೇನೆಂದು’ ತಿಳಿದಿರುತ್ತದೆ ಮತ್ತು ತಾನು ವಿರಳವಾಗಿ ಒಪ್ಪಿಕೊಂಡಿರುವ ಎದೆ ನೋವು, ಸಮತೂಕದ ನಷ್ಟ, ತಲೆನೋವು, ಜ್ಞಾಪಕಶಕ್ತಿಯ ಕೊರತೆ ಮತ್ತು ಇತರ ಚಿಹ್ನೆಗಳನ್ನು ಅವನು ಅನುಭವಿಸುತ್ತಾನೆ.” (ಮುಂಚೆ ನಮೂದಿಸಲಾದ) ಲೀ ಜ್ಞಾಪಿಸಿಕೊಳ್ಳುವುದು: “ನನ್ನ ಜೀವನದಲ್ಲಿ ಎಂದಿಗೂ ಅನುಭವಿಸಿದಿರ್ದದ ಅತಿ ಕೆಟ್ಟ ತಲೆನೋವನ್ನು ನಾನು ಅನುಭವಿಸಿದೆ.” ದ್ರಾವಕಗಳನ್ನು ಸೇದುವುದು ಮೂತ್ರಜನಕಾಂಗಗಳನ್ನು ಮತ್ತು ಪಿತ್ತಜನಕಾಂಗವನ್ನು ನಾಶಮಾಡಬಲ್ಲದು, ಮಾನಸಿಕ ದುರ್ಬಲತೆಯನ್ನು ತರಬಲ್ಲದು, ಮತ್ತು ಖಿನ್ನತೆಯನ್ನು ಕೂಡ ಉಂಟುಮಾಡಬಲ್ಲದೆಂದು ರಿಸಾಲ್ವ್ ಎಂಬ ಸಂಸ್ಥೆಯು ಹೇಳುತ್ತದೆ.
ಆಮೇಲೆ ನೈತಿಕ ಅಪಾಯಗಳೂ ಇವೆ. ತಮ್ಮ ಹವ್ಯಾಸವನ್ನು ಬೆಂಬಲಿಸಲು ಕೆಲವು ಸೇದುಗರು ಕಳ್ಳರಾಗಿದ್ದಾರೆ. ಅಥವಾ ಜಪಾನಿನ ಡೇಲಿ ಯೊಮಿಯುರಿಯಲ್ಲಿ ವರದಿಸಲಾದ ವಿಷಯವನ್ನು ಪರಿಗಣಿಸಿರಿ: “ಒಬ್ಬ ಹದಿವಯಸ್ಕ ಹುಡುಗಿಯ ಕೊಲೆಗಾಗಿ ಆಪಾದಿಸಲ್ಪಟ್ಟ ಮೂವರು ಯುವಕರಲ್ಲಿ ಒಬ್ಬನು, [ದ್ರಾವಕಗಳ] ಪ್ರಭಾವದ ಕೆಳಗೆ ತಾನು ಇದ್ದುದರಿಂದ ಹುಡುಗಿಯನ್ನು ಕೊಲ್ಲುವಾಗ ಅವನಿಗೆ ಅಪರಾಧಿ ಪ್ರಜ್ಞೆಯೆ ಇರಲಿಲ್ಲವೆಂದು ಅವನು [ಹೇಳಿದನು].”
ಕೊನೆಯದಾಗಿ, ದ್ರಾವಕ ದುರುಪಯೋಗವು ದ್ರಾವಕಗಳ ಮೇಲೆ ಭಾವನಾತ್ಮಕ ಅವಲಂಬನೆಯನ್ನು—ವ್ಯಸನವನ್ನು ಫಲಿಸಬಲ್ಲದು. “ದ್ರಾವಕಗಳನ್ನು ದುರುಪಯೋಗಿಸಿದವರಲ್ಲಿ ಸುಮಾರು 10% ವ್ಯಕ್ತಿಗಳು ರೂಢಿಯ ಸೇದುಗರಾದರು,” ಎಂದು ಸ್ಕಾಟ್ಲೆಂಡ್ನ ಗ್ಲಾಸ್ಕೊ ಹೆರಾಲ್ಡ್ ಹೇಳುತ್ತದೆ. ಇದು ಒಬ್ಬನ ಭಾವನಾತ್ಮಕ ಮತ್ತು ಆತ್ಮಿಕ ಬೆಳವಣಿಗೆಯನ್ನು ತಡೆಯಬಲ್ಲದು. ಒಂದನೆಯ ಕೊರಿಂಥ 14:20ರಲ್ಲಿರುವ ಬೈಬಲಿನ ಮಾತುಗಳನ್ನು ಪರಿಗಣಿಸಿರಿ: “ಕೆಟ್ಟತನದ ವಿಷಯದಲ್ಲಿ ಶಿಶುಗಳಾಗಿಯೇ ಇದ್ದು ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥ”ರಾಗಿರ್ರಿ. ಈ ವಿಷಯದಲ್ಲಿ ಒಬ್ಬನು ಹೇಗೆ ಬೆಳೆಯುತ್ತಾನೆ? ಇಬ್ರಿಯ 5:14ರಲ್ಲಿ ಬೈಬಲ್ ವಿವರಿಸುವುದು: “ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೋಸ್ಕರ ಅಂದರೆ ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರಿಗೋಸ್ಕರವಾಗಿದೆ.” ವ್ಯಸನಿಯು ತನ್ನ ಜ್ಞಾನೇಂದ್ರಿಯಗಳನ್ನು ಬೆಳೆಸಿಕೊಳ್ಳಲು ತಪ್ಪಿಹೋಗುತ್ತಾನೆ. ಸಮಸ್ಯೆಗಳನ್ನು ಎದುರಿಸುವ ಬದಲು, ಅಮಲೌಷಧದಿಂದ ಉಂಟಾಗುವ ಮಂಪರವನ್ನು ಅನುಭವಿಸುವ ಮೂಲಕ ಅವುಗಳನ್ನು ತಪ್ಪಿಸಲು ಅವನು ಪ್ರಯತ್ನಿಸುತ್ತಾನೆ. ನಿರಂತರವಾಗಿ ಸೇದುವವರು “ಹದಿವಯಸ್ಕರಂತೆ ಸಿಲುಕಿಕೊಂಡು—ಪ್ರೌಢಾವಸ್ಥೆಯನ್ನು ಪ್ರವೇಶಿಸಲು ಅಶಕ್ತರಾಗುತ್ತಾರೆಂದು,” ಯಂಗ್ ಪೀಪಲ್ ನೌ (ಇಂಗ್ಲಿಷ್ನಲ್ಲಿ) ಎಂಬ ಪತ್ರಿಕೆಯು ಹೇಳಿತು.
ಅದನ್ನು ಪರೀಕ್ಷಿಸಿನೋಡಬೇಡಿ!
ದ್ರಾವಕ ಸೇದಿಕೆಯನ್ನು ಪ್ರಯೋಗಿಸಿರುವ ಕೆಲವು ಸಮಾನಸ್ಕಂಧರ ಪರಿಚಯ ನಿಮಗಿರಬಹುದು, ಮತ್ತು ನೀವು ಕುತೂಹಲಿಗಳಾಗಿರುವುದು ಕೇವಲ ಸ್ವಾಭಾವಿಕ. ಆದರೆ ಬೈಬಲ್ ಹೇಳುವುದು: “ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತವ್ವನ್ನು ಸಿದ್ಧಿಗೆ ತರುವದಕ್ಕೆ ಪ್ರಯತ್ನಿಸೋಣ.” (2 ಕೊರಿಂಥ 7:1) ನಿಮ್ಮ ಶರೀರವನ್ನು ಕಲುಷಿತಗೊಳಿಸುವ ಅಥವಾ ನಿಮ್ಮ ಮನಸ್ಸಿನ ನಿಯಂತ್ರಣವನ್ನು—ತಾತ್ಕಾಲಿಕವಾಗಿಯೂ ಕೂಡ—ಕಳೆದುಕೊಳ್ಳುವಂತೆ ಮಾಡುವ ಯಾವುದೊ ವಿಷಯವನ್ನು ಪ್ರಯೋಗ ಮಾಡುವುದೇಕೆ? ದೇವರ ವಾಕ್ಯದ ಸಲಹೆಯು ನಾವು “ಸ್ವಸ್ಥಚಿತ್ತರಾಗಿರೋಣ” ಎಂಬುದಾಗಿದೆ. (1 ಥೆಸಲೊನೀಕ 5:6) ಈ ಪದಗುಚ್ಛವು ಅಕ್ಷರಾರ್ಥಕವಾಗಿ “ಸಂಯಮವುಳ್ಳವರಾಗಿರೋಣ” ಎಂಬುದನ್ನು ಅರ್ಥೈಸುತ್ತದೆ. ತನ್ನ ಅಮೂಲ್ಯ ಯೋಚನಾ ಸಾಮರ್ಥ್ಯಗಳನ್ನು ಮಲಿನಗೊಳಿಸುವ ಬದಲು, ಕ್ರೈಸ್ತನೊಬ್ಬನು ಅವುಗಳನ್ನು ವಿವೇಕದಿಂದ ಸಂರಕ್ಷಿಸುತ್ತಾನೆ.—ಜ್ಞಾನೋಕ್ತಿ 2:11; 5:2.
ಕಾಜೂಹಿಕೊ ಹೇಳುವುದು: “ಈ ಅಭ್ಯಾಸವನ್ನು ಆರಂಭಿಸಿದ್ದಕ್ಕೇ ನಾನು ದುಃಖಿಸುತ್ತೇನೆ.” ಲೀ ಒಪ್ಪುತ್ತಾ ಹೇಳುವುದು, “ಅದು ಬಹಳ ಮೂರ್ಖತನ. ಮಾಡಲಿಕ್ಕೆ ಅದು ಬಹಳ, ಬಹಳ ಅಪಾಯಕರ ಸಂಗತಿಯಾಗಿದೆ.” ಬಹಳಷ್ಟು ವೇದನೆ ಮತ್ತು ದುಃಖವನ್ನು ನಿಮ್ಮಿಂದ ದೂರವಿಡಿ, ಮತ್ತು ದ್ರಾವಕ ಸೇದಿಕೆಯ ಅಭ್ಯಾಸವನ್ನು ಆರಂಭಿಸಲು ಸಹ ಪ್ರಯತ್ನಿಸಬೇಡಿ. ಬೈಬಲ್ ಹೇಳುವಂತೆ ಕಾರ್ಯನಡಿಸಿರಿ: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.”—ಜ್ಞಾನೋಕ್ತಿ 22:3.
ಈ ಬುದ್ಧಿವಾದವನ್ನು ಅನ್ವಯಿಸುವುದು ಸರಳವಾಗಿರಲಾರದು. ಯುವ ಜನರಿಗೆ ದ್ರಾವಕ ದುರುಪಯೋಗದಲ್ಲಿ ಸಿಕ್ಕಿಕೊಳ್ಳಲು “ಸಮಾನಸ್ಕಂಧ ಗುಂಪಿನ ಒತ್ತಡ”ವು ಅತ್ಯಂತ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. “ನನ್ನ ಅಣ್ಣ ಗ್ಲೂ ಸೇದಿಕೆಯಲ್ಲಿ ನಾನು ಆಸಕ್ತನಾಗುವಂತೆ ಮಾಡಿದನು,” ಎಂದು ಎಳೆಯ ಡೇವಿಡ್ ಹೇಳುತ್ತಾನೆ. “ನನ್ನ ಗೆಳೆಯರು ನನ್ನನ್ನು ಇದಕ್ಕೆ ಪರಿಚಯಿಸಿದರು,” ಎಂದು ಕಾಜೊಹಿಕೊ ಕೂಡಿಸುತ್ತಾನೆ. ಹೌದು, 1 ಕೊರಿಂಥ 15:33 ಹೇಳುವಂತೆ, “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.” ನಿಮ್ಮ ಜೀವನವನ್ನು ನಾಶಮಾಡುವಂತೆ ಸಮಾನಸ್ಕಂಧರನ್ನು ಯಾಕೆ ಬಿಡಬೇಕು? ನಮ್ಮ ಸ್ವರ್ಗೀಯ ತಂದೆಯಾದ ಯೆಹೋವ ದೇವರು, ಉತ್ತೇಜಿಸುವುದು: “ಮಗನೇ, ಪಾಪಿಗಳು ದುಷ್ಪ್ರೇರಣೆಯನ್ನು ಮಾಡಿದರೆ ನೀನು ಒಪ್ಪಲೇಬೇಡ.”—ಜ್ಞಾನೋಕ್ತಿ 1:10.
ಅಮಲೌಷಧಗಳನ್ನು ಉಪಯೋಗಿಸುವಂತೆ ಇತರರು ನಿಮ್ಮನ್ನು ಒತ್ತಾಯಿಸುವುದಾದರೆ, ವಿವೇಕವುಳ್ಳವರಾಗಿ ನಿಮ್ಮ ಹೆತ್ತವರಿಗೆ ತಿಳಿಸಿ. ಇಲ್ಲವೆಂದು ಹೇಳುವ ನಿಮ್ಮ ತೀರ್ಮಾನವನ್ನು ಬಲಪಡಿಸಲು ಅವರು ಸಹಾಯಮಾಡಬಲ್ಲರು. ಇನ್ನೊಂದು ಕಡೆಯಲ್ಲಿ, ನಿಮಗಿರುವ ಸಮಸ್ಯೆಗಳ ಒತ್ತಡ ಯಾ ಆಧಿಕ್ಯದ ಕಾರಣ ನೀವು ದ್ರಾವಕ ಸೇದಿಕೆಯನ್ನು ಪರೀಕ್ಷಿಸುವಂತೆ ಶೋಧಿಸಲ್ಪಡುತ್ತೀರಿ. ಒತ್ತಡಕ್ಕಾಗಿರುವ ಹೆಚ್ಚು ಉತ್ತಮ ಪರಿಹಾರವು, ನಿಮ್ಮ ಸಮಸ್ಯೆಗಳನ್ನು ನಿಮ್ಮ ಹೆತ್ತವರೊಂದಿಗೆ ಯಾ ಯಾರಾದರೂ ಪ್ರೌಢ, ಅನುಭೂತಿಯುಳ್ಳ ವಯಸ್ಕರೊಂದಿಗೆ ಮಾತಾಡುವುದಾಗಿದೆ. ನಿಮಗೆ ಮಾರ್ಗದರ್ಶನೆ ಬೇಕಾಗಿದೆ, ಅಮಲೌಷಧದಿಂದ ಉಂಟಾಗುವ ತಪ್ಪಿಸಿಕೊಳ್ಳುವಿಕೆಯಲ್ಲ. ನಿಭಾಯಿಸಲು ನಿಮಗೆ ಸಹಾಯಮಾಡುವಂತೆ ಪ್ರಾರ್ಥನೆಯ ಒದಗಿಸುವಿಕೆಯ ಲಾಭವನ್ನು ಕೂಡ ನೀವು ತೆಗೆದುಕೊಳ್ಳಬಲ್ಲಿರಿ. “ಯಾವಾಗಲೂ ಆತನನ್ನೇ [ದೇವರು] ನಂಬಿ,” ಎನ್ನುತ್ತಾನೆ ಕೀರ್ತನೆಗಾರನು. “ನಿಮ್ಮ ಹೃದಯವನ್ನು ಆತನ ಮುಂದೆ ಬಿಚ್ಚಿರಿ.”—ಕೀರ್ತನೆ 62:8.
ದ್ರಾವಕ ಸೇದಿಕೆ ಉತ್ತೇಜನದಾಯಕವಾಗಿ ತೋರಬಲ್ಲದು, ಆದರೆ ಅದು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲಾರದು. ನಿಶ್ಚಯವಾಗಿಯೂ, ಅದು ನಿಮ್ಮ ಜೀವಿತವನ್ನು ಹಾಳುಮಾಡಬಲ್ಲದು. ಬುದ್ಧಿವಂತರಾಗಿರ್ರಿ. ಅದನ್ನು ಎಂದಿಗೂ ಪರೀಕ್ಷಿಸಲು ಪ್ರಯತ್ನಿಸಬೇಡಿ.
[ಅಧ್ಯಯನ ಪ್ರಶ್ನೆಗಳು]
a ಹೆಸರುಗಳಲ್ಲಿ ಕೆಲವು ಬದಲಾಯಿಸಲ್ಪಟ್ಟಿವೆ.
[ಪುಟ 13 ರಲ್ಲಿರುವ ಚಿತ್ರ]
ಸಮಾನಸ್ಕಂಧರ ಒತ್ತಡವು ನಿಮ್ಮನ್ನು ಮಾರಕವಾದೊಂದು ಅಭ್ಯಾಸಕ್ಕೆ ಸೆಳೆಯುವಂತೆ ಬಿಡಬೇಡಿರಿ