ಹೆತ್ತವರೇ ನಿಮ್ಮ ಮಗುವಿನ ಪಕ್ಷವಾದಿಗಳಾಗಿರು
ತಮ್ಮ ಗಂಡುಹೆಣ್ಣುಮಕ್ಕಳಿಗಾಗಿ ಅತ್ಯುತ್ತಮವಾದುದನ್ನು ಹೆತ್ತವರು ಬಯಸುತ್ತಾರೆ. ವಾಸ್ತವದಲ್ಲಿ, ತಮ್ಮ ಮಕ್ಕಳನ್ನು ದೇವರ ಶಿಸ್ತಿನಲ್ಲಿ ಬೆಳೆಸುವಂತೆ ಕ್ರೈಸ್ತ ಅಪೊಸ್ತಲನಾದ ಪೌಲನು ತಂದೆಗಳಿಗೆ ಉಪದೇಶಿಸಿದನು. (ಎಫೆಸ 6:4) ಪುರಾತನ ಅರಸ ಸೊಲೊಮೋನನು ಎಳೆಯರಿಗೆ ಸಲಹೆಕೊಟ್ಟದ್ದು: “ನಿನ್ನ ತಂದೆ ಮತ್ತು ತಾಯಿಯು ನಿನಗೆ ಹೇಳುವ ಮಾತುಗಳಿಗೆ ಗಮನಕೊಡು. ಅವರ ಬೋಧನೆಯು ನಿನ್ನ ವೈಲಕ್ಷಣ್ಯವನ್ನು ಪ್ರಗತಿಗೊಳಿಸುವುದು.”—ಜ್ಞಾನೋಕ್ತಿ 1:8, 9, ಟುಡೇಸ್ ಇಂಗ್ಲಿಷ್ ವರ್ಷನ್.
ಹಾಗಾದರೆ ಶಿಕ್ಷಣಕ್ಕಾಗಿರುವ ಹೆತ್ತವರ ಏರ್ಪಾಡುಗಳಲ್ಲಿ ಶಾಲೆಗಳು ಯಾವ ಕಾರ್ಯವನ್ನೆಸಗುತ್ತವೆ? ಮತ್ತು ಹೆತ್ತವರ ಹಾಗೂ ಶಾಲಾಶಿಕ್ಷಕರ ನಡುವಿನ ಸಂಬಂಧವು ಏನಾಗಿರಬೇಕು?
ಹೆತ್ತವರ ಮತ್ತು ಶಿಕ್ಷಕರ ಪಾತ್ರಗಳು
“ಹೆತ್ತವರು . . . ತಮ್ಮ ಸ್ವಂತ ಮಕ್ಕಳ ಅತ್ಯಂತ ಪ್ರಮುಖ ಶಿಕ್ಷಕರಾಗಿದ್ದಾರೆ” ಎಂದು ಮನೆಯ ಪರಿಸರದ ಮೇಲೆ ಶಾಲೆಯ ಪ್ರಭಾವದ ಕುರಿತಾದ ಅಧ್ಯಯನವೊಂದರ ಬರಹಗಾರ್ತಿ ಡೊರೀನ್ ಗ್ರಾಂಟ್ ಪ್ರತಿಪಾದಿಸುತ್ತಾರೆ. ಆದರೆ ಹೆತ್ತವರೋಪಾದಿ, ಆ ಕಲ್ಪನೆಯನ್ನು ಅಂಗೀಕರಿಸಲು ನೀವು ಕಷ್ಟವಾದದ್ದಾಗಿ ಕಂಡುಕೊಳ್ಳಬಹುದು.
ನೀವು ಶಾಲೆಗೆ ಹೋದಂದಿನಿಂದ ಬೋಧನಾ ವಿಧಾನಗಳು ಮಹತ್ತರವಾಗಿ ಬದಲಾಗಿವೆಯೆಂಬುದನ್ನು ನೀವು ಗಮನಿಸಿರುವುದು ಸಂಭವನೀಯ. ಮಾಧ್ಯಮ ಅಧ್ಯಯನ, ಆರೋಗ್ಯ ಶಿಕ್ಷಣ, ಮತ್ತು ಮೈಕ್ರೊಎಲೆಕ್ಟ್ರಾನಿಕ್ಸ್ಗಳಂತಹ ಈ ಹಿಂದೆ ಅಪರಿಚಿತವಾಗಿದ್ದ ವಿಷಯಗಳಿಗೆ ಇಂದು ಶಾಲೆಗಳು ಹೆಚ್ಚು ಪ್ರಾಧಾನ್ಯ ಕೊಡುತ್ತಿವೆ. ಇದು ಕೆಲವು ಹೆತ್ತವರನ್ನು ಶಾಲೆಯೊಂದಿಗೆ ತಮ್ಮ ಸಂಪರ್ಕವನ್ನು ಸಾಧ್ಯವಾದಷ್ಟು ಕಡಿಮೆಯಾಗಿ ಇಡುವಂತೆ ಮಾಡಿದೆ. “ತಮ್ಮ ಮಗುವಿನ ಶಿಕ್ಷಕರೊಂದಿಗೆ ಮಾತಾಡುವುದು, ಅತ್ಯಂತ ಸ್ವಾಭಿಮಾನಿಯಾದ ವಯಸ್ಕನಿಗೆ ಐದು ವರ್ಷ ಪ್ರಾಯದ ಮತ್ತು ನಾಲ್ಕು ಅಡಿ ಎತ್ತರದ ಅನಿಸಿಕೆಯುಂಟಾಗುವಂತೆ ಮಾಡಬಲ್ಲದು” ಎಂದು ಹೆಲ್ಪ್ ಯುವರ್ ಚೈಲ್ಡ್ ತ್ರೂ ಸ್ಕೂಲ್ನಲ್ಲಿ ಡಾ. ಡೇವಿಡ್ ಲೂವಿಸ್ ಬರೆಯುತ್ತಾರೆ. “ಇಬ್ಬರು ಬಲಿತ ವಯಸ್ಕರಂತೆ ತೊಂದರೆಗಳನ್ನು ಮತ್ತು ಚಿಂತೆಗಳನ್ನು ಶಿಕ್ಷಕರೊಂದಿಗೆ ಚರ್ಚಿಸುವ ಬದಲಾಗಿ, ಕೆಲವರು ಬಾಲಿಶ ನಡವಳಿಕೆಗೆ ಹಿಂದಿರುಗುತ್ತಾರೆ.”
ವಾಸ್ತವದಲ್ಲಿ, ಕೆಲವು ಹೆತ್ತವರು ಗಂಭೀರವಾದ ಸಮಸ್ಯೆಗಳು ಸಂಭವಿಸುವಾಗ ಮಾತ್ರ ತಮ್ಮ ಮಕ್ಕಳ ಶಿಕ್ಷಕರನ್ನು ಸಂಪರ್ಕಿಸುತ್ತಾರೆ. ಮತ್ತು ಆಗ ಅತಿ ಹೆಚ್ಚಾಗಿ ಸಂಪರ್ಕಿಸುವುದು ದೂರಲಿಕ್ಕಾಗಿ. ಆದಾಗ್ಯೂ, ಶಿಕ್ಷಕರೊಂದಿಗೆ ಸಹಕರಿಸುವ ಮೂಲಕ ತಮ್ಮ ಮಕ್ಕಳ ಶಿಕ್ಷಣಕ್ಕೆ ಗಮನಾರ್ಹವಾದ ಒಂದು ಒದಗಿಸುವಿಕೆಯನ್ನು ಅನೇಕ ಹೆತ್ತವರು ಮಾಡಬಲ್ಲರು ಮತ್ತು ಅನೇಕರು ಮಾಡುತ್ತಾರೆ.
ನಿಮ್ಮ ಮಗುವು ಶಾಲೆಯಲ್ಲಿ ಏನನ್ನು ಕಲಿಯುತ್ತದೆಂಬುದರಲ್ಲಿ ಆಸಕ್ತಿಯನ್ನು ತೆಗೆದುಕೊಳ್ಳುವುದನ್ನು ಮತ್ತು ಪರೀಕ್ಷಿಸುವುದನ್ನು ಹೆತ್ತವರ ಜವಾಬ್ದಾರಿಯು ಅಗತ್ಯಪಡಿಸುತ್ತದೆ. ಇದು ಏಕೆ? ಏಕೆಂದರೆ ಶಿಕ್ಷಕರು ವೃತ್ತಿಪರವಾಗಿ ನಿಮ್ಮ ನೈತಿಕ ನಿಯೋಗಿಗಳಾಗಿ ಕಾರ್ಯನಡಿಸುತ್ತಾರೆ. ಅವರು ಕಾಪಾಡಿಕೊಳ್ಳುವ ಮೌಲ್ಯತೆಗಳು ಅವರ ವಿದ್ಯಾರ್ಥಿಗಳನ್ನು ಪ್ರಭಾವಿಸುತ್ತವೆ, ಯಾಕಂದರೆ ಮಕ್ಕಳು ಶಿಕ್ಷಕರನ್ನು ಅನುಕರಣೆಗೆ ಅರ್ಹರಾದವರಾಗಿ ವೀಕ್ಷಿಸುತ್ತಾರೆ. ಅವರ ಮಟ್ಟಿಗೆ, ಅಧಿಕಾಂಶ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಹೆತ್ತವರ ಸಹಕಾರವನ್ನು ಸ್ವಾಗತಿಸುತ್ತಾರೆ.
ದಕ್ಷಿಣ ಜರ್ಮನಿಯಲ್ಲಿ ಮುಖ್ಯೋಪಾಧ್ಯಾಯರೊಬ್ಬರು ಹೆತ್ತವರಿಗೆ ಬರೆದದ್ದು: “ನಮ್ಮ ವಿದ್ಯಾರ್ಥಿಗಳ ಸಂಪೂರ್ಣ ಕ್ಷೇತ್ರವು, ವಿಶೇಷವಾಗಿ ಶಾಲೆಯನ್ನು ಆರಂಭಿಸುವವರು [ಜರ್ಮನಿಯಲ್ಲಿ, ಆರು ವರ್ಷ ಪ್ರಾಯದಲ್ಲಿ] ಸಹ ಈಗ ಹೆಚ್ಚು ಸಹಾನುಭೂತಿಯಿಲ್ಲದವರು ಮತ್ತು ಸೂಕ್ಷ್ಮತೆಯಿಲ್ಲದವರು, ಸಂಪೂರ್ಣ ಅಶಿಕ್ಷಿತರೂ ಆಗಿದ್ದಾರೆಂದು ಕಳೆದ ಯಾವುದೇ ವರ್ಷಕ್ಕಿಂತಲೂ ಹೆಚ್ಚಾಗಿ ಇಂದು ನಮಗೆ—ಶಿಕ್ಷಕರಿಗೆ—ಸ್ಪಷ್ಟವಾಗಿಗಿ ಕಂಡುಬಂದಿದೆ. ಎಲ್ಲಿ ಸೀಮಾರೇಖೆ ಕಲ್ಪಿಸಬೇಕೆಂಬುದನ್ನು ಅರಿಯದೆ ಅನೇಕರು ಸಂಪೂರ್ಣವಾಗಿ ಅನಿರ್ಬಂಧಿತರಾಗಿದ್ದಾರೆ; ದೋಷದ ಪರಿಜ್ಞಾನವು ಅವರಿಗಿಲ್ಲ; ವಿಪರೀತ ಸ್ವಾರ್ಥಮಗ್ನರು, ಸಮಾಜ ವಿರೋಧಿಗಳೂ ಆಗಿದ್ದಾರೆ; ಮತ್ತು ಸ್ಪಷ್ಟವಾಗಿದ ಕಾರಣವಿಲ್ಲದೆ ಆಕ್ರಮಣಶೀಲರೂ, ಕುತ್ತಿಗೆ ಹಿಸುಕುವವರೂ ಮತ್ತು [ಇತರರನ್ನು] ಒದೆಯುವವರೂ ಆಗುತ್ತಾರೆ.”
ಈ ಶಿಕ್ಷಕರು ಮುಂದುವರಿಸಿದ್ದು: “ಫಲಿತಾಂಶವಾಗಿ ಶಿಕ್ಷಕರಾದ ನಮಗೆ ತೀರ ಹೆಚ್ಚು ತೊಂದರೆ ಇದ್ದಾಗ್ಯೂ, ನಾವು ದೂರಲು ಬಯಸುವುದಿಲ್ಲ. ಆದರೆ ಎಲ್ಲಾ ಪ್ರಯತ್ನಗಳನ್ನು ಮಾಡಿದರೂ, ಶಾಲೆಯು ಸ್ವತಃ ಮಕ್ಕಳನ್ನು ಬೆಳೆಸಲು ಮತ್ತು ಶಿಕ್ಷಣಕೊಡಲು ಸಾಧ್ಯವಿಲ್ಲ ಎಂಬುದನ್ನು ನಾವು ಗ್ರಹಿಸಬೇಕು. ನಿಮ್ಮ ಮಕ್ಕಳ ಶಿಕ್ಷಣದಲ್ಲಿ ಸ್ವತಃ ನೀವು ಹೆಚ್ಚನ್ನು ಮಾಡಲು ನಿರ್ಧಾರಕ ಕಾರ್ಯವನ್ನು ಕೈಗೊಳ್ಳುವಂತೆ ನಾವು ಆತ್ಮೀಯ ಹೆತ್ತವರಾದ ನಿಮ್ಮನ್ನು ಉತ್ತೇಜಿಸಲು ಬಯಸುತ್ತೇವೆ. ಮತ್ತು ಅವರ ವ್ಯಕ್ತಿತ್ವದ ವಿಕಸನಕ್ಕಾಗಿರುವ [ಜವಾಬ್ದಾರಿಯಲ್ಲಿ] ವಾಸ್ತವವಾಗಿ ಯಾವುದು ನಿಮ್ಮ ಸ್ವಂತ ಪಾಲಾಗಿದೆಯೊ—ನಡವಳಿಕೆಯ ಮಟ್ಟಗಳನ್ನು ಅವರಿಗೆ ಬೋಧಿಸುವುದು—ಅದನ್ನು ಟೆಲಿವಿಷನ್ ಅಥವಾ ಪರಿಸರದ ಪ್ರಭಾವಗಳು ವಶಪಡಿಸಿಕೊಳ್ಳುವಂತೆ ಬಿಡಬೇಡಿರಿ.”—ಓರೆಅಕ್ಷರಗಳು ನಮ್ಮವು.
ಸಹಕಾರಕ್ಕಾಗಿ ಶಿಕ್ಷಕರು ಅಂತಹ ಒಂದು ಹೇಳಿಕೆಯನ್ನು ಮಾಡುವಾಗಲೂ, ಅನೇಕ ಹೆತ್ತವರು ಸಹಾಯ ಮಾಡಲು ಇನ್ನೂ ಮನಸ್ಸಿಲ್ಲದವರಾಗಿದ್ದಾರೆ. “ಅವರು ಅಲಕ್ಷ್ಯಮಾಡುತ್ತಿದ್ದಾರೆ, ತೀರ ಕಾರ್ಯಮಗ್ನರಿದ್ದಾರೆ ಅಥವಾ ವಿಶ್ವಾಸದ ಕೊರತೆಯಿಂದಿದ್ದಾರೆಂಬ ಕಾರಣದಿಂದಲ್ಲ, ಬದಲಿಗೆ ಒಂದು ಮಗುವು ತರಗತಿಯ ಅಧ್ಯಯನದಲ್ಲಿ ಎಷ್ಟು ಉತ್ತಮವಾಗಿ ಅಥವಾ ದೋಷಯುತವಾಗಿ ಮಾಡಿದೆಯೆಂಬುದು ಪಾಲನೆಯೊಡನೆ ಸಂಬಂಧವನ್ನು ಹೊಂದಿಲ್ಲ ಮತ್ತು ಎಲ್ಲವೂ ವಂಶವಾಹಿಗಳಿಂದ ನಿರ್ಧರಿಸಲ್ಪಡುತ್ತದೆ ಎಂಬ ಅವರ ದೃಢ ನಂಬಿಕೆಯ ಕಾರಣವೇ” ಎಂದು ಡೇವಿಡ್ ಲೂವಿಸ್ ಪ್ರತಿಪಾದಿಸುತ್ತಾರೆ. ಆದರೆ ಈ ಕಲ್ಪನೆಯು ಸ್ಪಷ್ಟವಾಗಿಗಿ ಸತ್ಯವಲ್ಲ.
ಮನೆಯಲ್ಲಿ ಸಮಸ್ಯೆಗಳು ಅನೇಕವೇಳೆ ಒಂದು ಮಗುವಿನ ತರಗತಿಯ ಅಧ್ಯಯನದಲ್ಲಿ ಪರಿಣಾಮ ಬೀರುವಂತೆಯೇ, ಒಂದು ಒಳ್ಳೆಯ ಮನೆಯ ಜೀವಿತವು ಶಾಲೆಯಿಂದ ಅಧಿಕ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಒಂದು ಮಗುವಿಗೆ ಸಹಾಯ ಮಾಡಬಲ್ಲದು. “ಶಾಲೆಗಿಂತಲೂ ಹೆಚ್ಚಾಗಿ ಕುಟುಂಬ ಪರಿಸರವು ಶಿಕ್ಷಣದ ಯಶಸ್ವಿಗೆ ಮತ್ತು ಅಪಜಯಕ್ಕೆ ಕಾರಣವಾಗಿದೆ” ಎಂದು ಒಂದು ಶಿಕ್ಷಣದ ಸಮೀಕ್ಷೆಯು ಮುಕ್ತಾಯಗೊಳಿಸುತ್ತದೆ. ಹೌ ಟು ಹೆಲ್ಪ್ ಯುವರ್ ಚೈಲ್ಡ್ ತ್ರೂ ಸ್ಕೂಲ್ ಎಂಬ ಪುಸ್ತಕವು ಒಪ್ಪಿಕೊಳ್ಳುವುದು: “ತಮ್ಮ ಮನೋಭಾವವು—ಅವರು ತೋರಿಸುವ ಆಸಕ್ತಿ ಮತ್ತು ಪ್ರೋತ್ಸಾಹ, ಮತ್ತು ಅವರು ಶಾರೀರಿಕವಾಗಿ ಮಗುವಿನೊಂದಿಗೆ ಇಲ್ಲದಿರುವಾಗಲೂ ಅವರು ಕೊಡುವ ಬೆಂಬಲ—ಮಕ್ಕಳ ಪ್ರಗತಿಗೆ ನಿರ್ಣಾಯಕವಾಗಿರಸಾಧ್ಯವಿದೆ ಎಂಬುದನ್ನು ತೀರ ಹೆಚ್ಚು ಕಾರ್ಯಮಗ್ನರಾಗಿರುವ ಹೆತ್ತವರು ಸಹ ಗ್ರಹಿಸಬೇಕು.”
ಹಾಗಾದರೆ, ನಿಮ್ಮ ಮಗುವಿನ ಶಿಕ್ಷಕರೊಂದಿಗೆ ಒಳ್ಳೆಯ ಸಹಕಾರವನ್ನು ನೀವು ಹೇಗೆ ಸಾಧಿಸಬಲ್ಲಿರಿ?
ನಿಮ್ಮ ಮಗುವಿನ ಪಕ್ಷವಾದಿಗಳಾಗಿರು
(1) ನಿಮ್ಮ ಮಗುವು ಶಾಲೆಯಲ್ಲಿ ಕಲಿಯುವ ವಿಷಯದಲ್ಲಿ ಕ್ರಿಯಾಶೀಲ ಆಸಕ್ತಿಯನ್ನು ತೆಗೆದುಕೊಳ್ಳಿರಿ. ನಿಮ್ಮ ಮಗುವು ಶಾಲೆಗೆ ಹಾಜರಾಗಲು ಆರಂಭಿಸುವಾಗ ಪ್ರಾರಂಭಿಸುವುದು ಅತ್ಯುತ್ತಮ ಸಮಯವಾಗಿದೆ. ಹರೆಯದವರಿಗಿಂತ ಹೆಚ್ಚು ಉತ್ತಮವಾಗಿ ಎಳೆಯ ಮಕ್ಕಳು ಸಾಮಾನ್ಯವಾಗಿ ಹೆತ್ತವರ ಸಹಾಯವನ್ನು ಅಂಗೀಕರಿಸುತ್ತಾರೆ.
ನಿಮ್ಮ ಮಗುವಿನೊಂದಿಗೆ ಪುಸ್ತಕಗಳನ್ನು ಓದಿರಿ. ಡೇವಿಡ್ ಲೂವಿಸರಿಗನುಸಾರ, “ಸುಮಾರು 75 ಪ್ರತಿಶತ ಔಪಚಾರಿಕ ಕಲಿಯುವಿಕೆಯು ಓದುವಿಕೆಯ ಮೂಲಕ ಸಂಭವಿಸುತ್ತದೆ.” ಹೀಗೆ ನೀವು ಓದುವಿಕೆಯಲ್ಲಿ ನಿಮ್ಮ ಮಗುವಿನ ನಿರರ್ಗಳತೆಯನ್ನು ವರ್ಧಿಸುವುದರಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸಬಲ್ಲಿರಿ. ಮನೆಯಲ್ಲಿ ಓದಲು ಸಹಾಯಿಸಲ್ಪಟ್ಟಿರುವ ಮಕ್ಕಳ ಪ್ರಗತಿಯು ಅನೇಕವೇಳೆ, ಶಾಲೆಯಲ್ಲಿ ಓದುವಿಕೆಯ ನೈಪುಣ್ಯಗಳನ್ನು ಬೋಧಿಸುವುದರಲ್ಲಿ ವಿಶೇಷ ಜ್ಞಾನ ಪಡೆದಿರುವ ಶಿಕ್ಷಕರಿಂದ ಸಹಾಯವನ್ನು ಪಡೆಯುವ ಎಳೆಯರನ್ನೂ ಮೀರುತ್ತದೆ ಎಂದು ಸಂಶೋಧನೆಯು ಸೂಚಿಸುತ್ತದೆ.
ತದ್ರೀತಿಯಲ್ಲಿ, ಬರವಣಿಗೆಯೊಂದಿಗೆ ಹೌದು, ಅಂಕಗಣಿತದೊಂದಿಗೆ ನೀವು ನಿಮ್ಮ ಮಗುವಿಗೆ ಸಹಾಯಮಾಡಬಲ್ಲಿರಿ. “ಮೂಲ ಗಣಿತ ಶಾಸ್ತ್ರದೊಂದಿಗೆ ಸಹಾಯಿಸಲಿಕ್ಕಾಗಿ ನೀವು ಗಣಿತ ಶಾಸ್ತ್ರದ ಅಸಾಧಾರಣ ಪ್ರತಿಭೆಯುಳ್ಳವರಾಗಿರಬೇಕಾದ ಅಗತ್ಯವಿಲ್ಲ” ಎಂದು ಶಿಕ್ಷಕರಾದ ಟೆಡ್ ರ್ಯಾಗ್ ಹೇಳಿಕೆ ನೀಡುತ್ತಾರೆ. ನಿಶ್ಚಯವಾಗಿ ಈ ಕ್ಷೇತ್ರಗಳಲ್ಲಿ ನಿಮಗೆ ಸ್ವತಃ ಸಹಾಯದ ಅಗತ್ಯವಿರುವಲ್ಲಿ, ನಿಮ್ಮ ಮಗುವು ಕಲಿಯುತ್ತಿರುವ ವಿಷಯದಲ್ಲಿ ನೈಜವಾದ ಆಸಕ್ತಿಯನ್ನು ನೀವು ತೆಗೆದುಕೊಳ್ಳುವುದರಿಂದ ನೈಪುಣ್ಯದ ಯಾವುದೇ ಕೊರತೆಯು ನಿಮ್ಮನ್ನು ತಡೆಗಟ್ಟುವಂತೆ ಬಿಡಬೇಡಿ.
(2) ಪಠ್ಯಕ್ರಮದ ಕುರಿತು ನಿಮ್ಮ ಮಗುವಿನ ಶಿಕ್ಷಕರನ್ನು ಸಂಪರ್ಕಿಸಿರಿ. ಶಾಲೆಯ ವಿವರಣಪತ್ರವನ್ನು ಓದುವ ಮೂಲಕ, ನಿಮ್ಮ ಮಗುವಿಗೆ ಏನು ಕಲಿಸಲ್ಪಡುತ್ತದೆ ಎಂಬುದನ್ನು ಕಂಡುಕೊಳ್ಳಿರಿ. ಶಾಲೆಯ ಕಾಲಾವಧಿಯು ಆರಂಭಿಸುವುದಕ್ಕೆ ಮೊದಲು ಹಾಗೆ ಮಾಡುವುದು ಸಮಸ್ಯೆಗಳ ಕ್ಷೇತ್ರಗಳ ಕುರಿತು ನಿಮ್ಮನ್ನು ಎಚ್ಚರಿಸುವುದು. ಬಳಿಕ, ನಿಮ್ಮ ಹೆತ್ತವರ ಅಪೇಕ್ಷೆಗಳು ಹೇಗೆ ಗೌರವಿಸಲ್ಪಡಸಾಧ್ಯವಿದೆ ಎಂಬುದರ ಕುರಿತು ಚರ್ಚಿಸಲಿಕ್ಕಾಗಿ ಶಿಕ್ಷಕರಿಗೆ ಒಂದು ಭೇಟಿ ನೀಡುವುದು, ಒಳ್ಳೆಯ ಸಹಕಾರಕ್ಕೆ ಸಿದ್ಧತೆಯೋಪಾದಿ ಕಾರ್ಯನಡಿಸುವುದು. ಶಿಕ್ಷಕರು ಹೆತ್ತವರೊಂದಿಗೆ ಪರಿಚಯ ಮಾಡಿಕೊಳ್ಳಲು ಶಾಲೆಯು ವ್ಯವಸ್ಥಾಪಿಸುವ ಕೂಟಗಳ ಒಳ್ಳೆಯ ಉಪಯೋಗವನ್ನು ಮಾಡಿರಿ. ವಿಶೇಷ ದಿನಗಳಲ್ಲಿ ಶಾಲೆಯನ್ನು ಸಂದರ್ಶಿಸಿರಿ, ಮತ್ತು ನಿಮ್ಮ ಮಗುವಿನ ಶಿಕ್ಷಕರೊಂದಿಗೆ ಮಾತಾಡಿರಿ. ಅಂತಹ ಸಂಪರ್ಕಗಳು ವಿಶೇಷವಾಗಿ ಸಮಸ್ಯೆಗಳು ಉದ್ಭವಿಸುವಾಗ, ಅಮೂಲ್ಯವಾಗಿ ಪರಿಣಮಿಸುತ್ತವೆ.
(3) ತನ್ನ ಆಯ್ಕೆಗಳನ್ನು ಮಾಡುವಂತೆ ನಿಮ್ಮ ಮಗುವಿಗೆ ಸಹಾಯಮಾಡಿರಿ. ನಿಮ್ಮ ಮಗುವಿಗೆ ಇಷ್ಟವಾದ ಮತ್ತು ಇಷ್ಟವಿಲ್ಲದ ವಿಷಯಗಳ ಕುರಿತು ತಿಳಿಯಿರಿ. ಪ್ರಯೋಜನಕರ ಗುರಿಗಳ ಕುರಿತು ಮಾತಾಡಿರಿ. ಸಾಧ್ಯವಿರುವ ಎಲ್ಲಾ ಆಯ್ಕೆಗಳನ್ನು ಕಂಡುಕೊಳ್ಳಲು ಶಿಕ್ಷಕರನ್ನು ಸಂಪರ್ಕಿಸಿರಿ. ವಿಷಯಗಳ ಆಯ್ಕೆಯ ಕುರಿತು ಅವರು ಸಲಹೆ ನೀಡಲು ಶಕ್ತರಾಗಿರುವರು.
ಸ್ಪಷ್ಟವಾಗಿದ ಸಂಸರ್ಗದ ಮೂಲಕ ಕೆಟ್ಟ ಭಾವನೆಗಳನ್ನು ದೂರಮಾಡಸಾಧ್ಯವಿದೆ. ಅನೇಕ ಶಾಲೆಗಳು ಬುದ್ಧಿವಂತ ವಿದ್ಯಾರ್ಥಿಗಳಿಗೆ ಹೆಚ್ಚು ಉನ್ನತವಾದ ಶಿಕ್ಷಣವನ್ನು ಬೆನ್ನಟ್ಟುವಂತೆ ಒತ್ತಡವನ್ನು ಹಾಕುತ್ತವೆ. ಆದರೆ ಕ್ರೈಸ್ತ ಶುಶ್ರೂಷೆಯನ್ನು ತಮ್ಮ ವೃತ್ತಿಯೋಪಾದಿ ಆರಿಸುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ದೀರ್ಘವಾದ ವಿಶ್ವವಿದ್ಯಾನಿಲಯದ ಶಿಕ್ಷಣವನ್ನು ನಿರ್ವಹಿಸುವುದನ್ನು ತೊರೆಯುತ್ತಾರೆ. ಅದಕ್ಕೆ ಬದಲಾಗಿ, ಅವರು ಸಪ್ಲಿಮೆಂಟರಿ ಶಿಕ್ಷಣವನ್ನು ಆಯ್ದುಕೊಳ್ಳುವುದಾದರೆ, ತಮ್ಮನ್ನು ಸಂರಕ್ಷಿಸಿಕೊಳ್ಳಲು ಅವರನ್ನು ಸಜ್ಜುಗೊಳಿಸುವ ವಿಷಯಗಳನ್ನು ಅಭ್ಯಸಿಸಲು ಅವರು ಇಷ್ಟಪಡುತ್ತಾರೆ. ತಾವು ಬೋಧಿಸಲು ಪ್ರಯತ್ನಿಸಿದ ಎಲ್ಲಾ ವಿಷಯಗಳ ಒಂದು ನಿರಾಕರಣೆಯೋಪಾದಿ ನ್ಯಾಯನಿಷ್ಠ ಶಿಕ್ಷಕರು ಕೆಲವೊಮ್ಮೆ ಇದನ್ನು ತಪ್ಪಾಗಿ ವೀಕ್ಷಿಸುತ್ತಾರೆ. ಶಿಕ್ಷಕರಿಗೆ, ನಿಮ್ಮ ಮಗುವಿನ ಆಯ್ಕೆಯ ಕ್ಷೇತ್ರದಲ್ಲಿ ನಿಮ್ಮ ಮಗುವಿಗಾಗಿ ವಿಸ್ತರಿಸಲ್ಪಟ್ಟಿರುವ ಹೆಚ್ಚಿನ ಶಿಕ್ಷಣದ ಸಂಭವನೀಯತೆಗಳ ಕುರಿತಾದ ನಿಮ್ಮ ತಾಳ್ಮೆಯ ವಿವರಣೆಯು, ಕ್ರೈಸ್ತ ಹೆತ್ತವರು ತಮ್ಮ ಮಕ್ಕಳು ಕಲಿಯುವುದನ್ನು ಮುಂದುವರಿಸುವಂತೆ ಬಯಸುತ್ತಾರೆಂಬುದನ್ನು ಶಿಕ್ಷಕರಿಗೆ ಪುನಃ ಖಾತ್ರಿಪಡಿಸುವುದು.a
ಯೋಗ್ಯವಾದ ಸಮೀಪಿಸುವಿಕೆ
ಯಶಸ್ವಿ ಸಹಭಾಗಿತ್ವಗಳು ಒಳ್ಳೆಯ ಸಂಸರ್ಗದ ಮೇಲೆ ಆಧಾರಿಸಿವೆ ಎಂಬುದನ್ನು ಜ್ಞಾಪಿಸಿಕೊಳ್ಳುವ ಮೂಲಕ, ನಿಮ್ಮ ಮಗುವಿನ ಶಿಕ್ಷಣದ ಕುರಿತಾದ ಹೆಚ್ಚಿನ ಚಿಂತೆ ಮತ್ತು ಮನೋವ್ಯಥೆಯನ್ನು ನೀವು ತೊರೆಯಬಲ್ಲಿರಿ.—ದಯವಿಟ್ಟು “ಹೆತ್ತವರ-ಶಿಕ್ಷಕರ ಒಳ್ಳೆಯ ಸಂಸರ್ಗಕ್ಕೆ ಸೂಕ್ತ ಕ್ರಮಗಳು” ಎಂಬ ಶಿರೋನಾಮವುಳ್ಳ ಪೆಟ್ಟಿಗೆಯನ್ನು ನೋಡಿ.
ದೂರುವುದರ ಅಥವಾ ಟೀಕಿಸುವುದರ ಬದಲಾಗಿ, ಶಿಕ್ಷಕರೊಂದಿಗೆ ಸಮಾಲೋಚನೆ ಮತ್ತು ಸಹಕಾರದ ಮೂಲಕ ನಿಮ್ಮ ಮಗುವಿನ ಪಕ್ಷವಾದಿಗಳಾಗಿರು. ಹೀಗೆ ಮಾಡುವುದರ ಮೂಲಕ, ನಿಮ್ಮ ಮಗುವು ಶಾಲೆಯಿಂದ ಅತ್ಯುತ್ತಮ ಪ್ರಯೋಜನವನ್ನು ಪಡೆಯುವಂತೆ ನೀವು ಸಹಾಯ ಮಾಡುವಿರಿ.
[ಅಧ್ಯಯನ ಪ್ರಶ್ನೆಗಳು]
a ಕ್ರೈಸ್ತ ಶುಶ್ರೂಷೆಯನ್ನು ತಮ್ಮ ಜೀವನ ಮಾರ್ಗವಾಗಿ ಆರಿಸಿಕೊಳ್ಳುವ ಮತ್ತು ಪೂರ್ಣ ಸಮಯದ ಶುಶ್ರೂಷಕರಾಗಿ ಸೇವೆಮಾಡುವ ಯೆಹೋವನ ಸಾಕ್ಷಿಗಳಿಗೆ, ಪಯನೀಯರ್ ಸೇವಾ ಶಾಲೆಯಲ್ಲಿ ಎರಡು ವಾರಗಳ ಕೋರ್ಸನ್ನು ಹಾಜರಾಗುವ ಅವಕಾಶವಿದೆ. ಅವರನ್ನು ಮಿಷನೆರಿಗಳಾಗಿ ಸನ್ನದ್ಧಗೊಳಿಸಲಿಕ್ಕಾಗಿ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾಡ್ನಿಂದ ನಡೆಸಲ್ಪಡುವ ಮಿಷನೆರಿ ತರಬೇತಿಯ ಐದು ತಿಂಗಳುಗಳ ಕೋರ್ಸಿನಲ್ಲಿ ಸೇರಲಿಕ್ಕಾಗಿ ಕೆಲವರು ಅನಂತರ ಅರ್ಹರಾಗುತ್ತಾರೆ.
[ಪುಟ 10 ರಲ್ಲಿರುವ ಚೌಕ]
ಹೆತ್ತವರ-ಶಿಕ್ಷಕರ ಒಳ್ಳೆಯ ಸಂಸರ್ಗಕ್ಕೆ ಸೂಕ್ತ ಕ್ರಮಗಳು
1. ನಿಮ್ಮ ಮಗುವಿನ ಶಿಕ್ಷಕರೊಂದಿಗೆ ಪರಿಚಿತರಾಗಿರಿ.
2. ಯಾವುದೇ ಆಪಾದನೆಗಳನ್ನು ಮಾಡುವ ಮೊದಲು ನಿಮ್ಮ ಸತ್ಯಾಂಶಗಳನ್ನು ಎರಡು ಸಾರಿ ಪರೀಕ್ಷಿಸಿ.
3. ಕ್ಷೋಭೆಗೊಂಡಿದ್ದರೆ ಅಥವಾ ಕೋಪಗೊಂಡಿದ್ದರೆ, ಶಿಕ್ಷಕರೊಂದಿಗೆ ಮಾತಾಡುವುದಕ್ಕೆ ಮೊದಲು ಯಾವಾಗಲೂ ಶಾಂತರಾಗಿ.
4. ಶಿಕ್ಷಕರನ್ನು ಭೇಟಿ ಮಾಡುವುದಕ್ಕೆ ಮೊದಲು, ನೀವು ಕೇಳಲು ಬಯಸುವ ಪ್ರಶ್ನೆಗಳನ್ನು ಬರೆದುಕೊಳ್ಳಿ ಮತ್ತು ನೀವು ಸಾಧಿಸಲು ನಿರೀಕ್ಷಿಸುವ ಗುರಿಗಳ ಪಟ್ಟಿಮಾಡಿರಿ.
5. ನಿಮ್ಮ ಸ್ಥಾನವನ್ನು ದೃಢವಾಗಿ ಮತ್ತು ಸ್ಪಷ್ಟವಾಗಿಗಿ ತಿಳಿಸಿರಿ, ಮತ್ತು ಯಾವುದೇ ಸಮಸ್ಯೆಗಳನ್ನು ಜಯಿಸಲಿಕ್ಕಾಗಿ ಯಾವ ಪ್ರಾಯೋಗಿಕ ಹೆಜ್ಜೆಗಳನ್ನು ತೆಗೆದುಕೊಳ್ಳಸಾಧ್ಯವಿದೆಯೆಂಬುದನ್ನು ನೋಡಲಿಕ್ಕಾಗಿ ಶಿಕ್ಷಕರೊಂದಿಗೆ ಸಹಕರಿಸಿರಿ.
6. ನಿಮ್ಮನ್ನು ಸ್ವತಃ ಶಿಕ್ಷಕರ ಸ್ಥಾನದಲ್ಲಿರಿಸಿಕೊಳ್ಳಿರಿ. ಅವನ ಸನ್ನಿವೇಶದಲ್ಲಿ ನೀವೇನು ಮಾಡುವಿರೆಂದು ನಿಮ್ಮನ್ನು ಕೇಳಿಕೊಳ್ಳಿ. ಇದು ಒಂದು ಸಂತೃಪ್ತಿಕರವಾದ ಪರಿಣಾಮವನ್ನು ಪ್ರಸ್ತಾವಿಸುವಂತೆ ನಿಮಗೆ ಸಹಾಯಮಾಡುವುದು.
7. ಆಲಿಸಿರಿ ಹಾಗೂ ಮಾತಾಡಿರಿ. ನಿಮಗೆ ಏನಾದರೂ ಅರ್ಥವಾಗದಿದ್ದಲ್ಲಿ ಪ್ರಶ್ನೆಗಳನ್ನು ಕೇಳಲು ಹೆದರಬೇಡಿರಿ. ಹೇಳಲ್ಪಟ್ಟ ವಿಷಯದ ಕುರಿತು ನೀವು ಒಪ್ಪದಿರುವಲ್ಲಿ, ಇಲ್ಲವೆಂದು ಹೇಳಿರಿ, ಮತ್ತು ಅದರ ಕಾರಣವನ್ನು ಸೌಜನ್ಯದಿಂದ ವಿವರಿಸಿರಿ.
—ಡಾ. ಡೇವಿಡ್ ಲೂವಿಸ್ರ ಹೆಲ್ಪ್ ಯುವರ್ ಚೈಲ್ಡ್ ತ್ರೂ ಸ್ಕೂಲ್ ಮೇಲಾಧಾರಿತ.
[ಪುಟ 9 ರಲ್ಲಿರುವ ಚಿತ್ರ]
ನಿಮ್ಮ ಮಗುವಿನೊಂದಿಗೆ ಓದಿರಿ
[ಪುಟ 9 ರಲ್ಲಿರುವ ಚಿತ್ರ]
ಶಾಲೆಯ ಪಠ್ಯಕ್ರಮವನ್ನು ಚರ್ಚಿಸಲಿಕ್ಕಾಗಿ ಶಿಕ್ಷಕರನ್ನು ಸಂದರ್ಶಿಸಿರಿ
[ಪುಟ 9 ರಲ್ಲಿರುವ ಚಿತ್ರ]
ಆಯ್ಕೆಗಳನ್ನು ಆರಿಸುವಂತೆ ನಿಮ್ಮ ಮಗುವಿಗೆ ಸಹಾಯಮಾಡಿರಿ