ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g94 9/8 ಪು. 3-4
  • ಶಾಲೆಗೆ ವಾಪಸ್ಸು ಏಕೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಶಾಲೆಗೆ ವಾಪಸ್ಸು ಏಕೆ?
  • ಎಚ್ಚರ!—1994
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಈ ಸಮಸ್ಯೆ ಏಕೆ?
  • ಹೆಚ್ಚಿನ ಶಾಲಾ ಶಿಕ್ಷಣ ಬೇಕೊ ಬೇಡವೊ?
    ಎಚ್ಚರ!—1994
  • ಒಂದು ಉದ್ದೇಶವಿರುವ ವಿದ್ಯೆ
    ಕಾವಲಿನಬುರುಜು—1993
  • ಹೆತ್ತವರೇ, ನಿಮ್ಮ ಮಕ್ಕಳಿಗೆ ಎಂಥ ಭವಿಷ್ಯವಿರಬೇಕೆಂದು ಬಯಸುತ್ತೀರಿ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಬೈಬಲು ಶಿಕ್ಷಣವನ್ನು ನಿರುತ್ತೇಜಿಸುತ್ತದೊ?
    ಎಚ್ಚರ!—1998
ಇನ್ನಷ್ಟು
ಎಚ್ಚರ!—1994
g94 9/8 ಪು. 3-4

ಶಾಲೆಗೆ ವಾಪಸ್ಸು ಏಕೆ?

ರಾಬರ್ಟ್‌ಗೆ ಉದ್ಯೋಗ ಹುಡುಕುವಿಕೆಯು ಮೂರು ವರ್ಷ ದೀರ್ಘದ ಒಂದು ಹತಾಶೆಯ ಅನುಭವವಾಗಿತ್ತು. ಕೊನೆಗೆ, 21ನೆಯ ವಯಸ್ಸಿನಲ್ಲಿ ಅವನನ್ನು ಬೇಸಗೆ ಶಿಬಿರದ ಸಲಹೆಗಾರನಾಗಿ ಕೆಲಸಕ್ಕೆ ಗೊತ್ತುಮಾಡಲಾಯಿತು. ಈಗ ತುಸು ಉಪಶಮನ ಸಿಕ್ಕಿದರೂ, ಆ ಬೇಸರ ಹುಟ್ಟಿಸುವ ಕೆಲಸದ ಹುಡುಕುವಿಕೆಯಿಂದ ರಾಬರ್ಟ್‌ ಬಳಲಿದ್ದನು. “ನಮ್ಮ ಹೆತ್ತವರಿಗೆ ಗೊತ್ತೇ ಆಗುವುದಿಲ್ಲ,” ಎನ್ನುತ್ತಾನೆ ಅವನು. “ಈ ದಿನಗಳಲ್ಲಿ ಒಂದು ಕೆಲಸ ಕಂಡುಕೊಳ್ಳುವುದು ಎಷ್ಟೋ ಹೆಚ್ಚು ಕಷ್ಟಕರ.”

ರಾಬರ್ಟನಂತೆ ಶಾಲೆಯಿಂದ ಹೊರಬರುವ ಅಸಂಖ್ಯಾತ ಯುವ ಜನರು ಪ್ರತಿ ವರ್ಷ ಕೆಲಸಗಾರರ ದಳವನ್ನು ಸೇರುತ್ತಾರೆ. ಅವರಿಗೆ ನಿರೀಕ್ಷೆಗಳಿವೆ, ಯೋಜನೆಗಳಿವೆ. ಆದರೆ ತಾವು ಮುಂಭಾವಿಸಿದ ರೀತಿಯ ಉದ್ಯೋಗವು ತಮಗೆ ದೊರೆಯುತ್ತಿಲ್ಲವೆಂದು ಹೆಚ್ಚುತ್ತಿರುವ ಸಂಖ್ಯೆಯ ಜನರು ಕಂಡುಕೊಳ್ಳುತ್ತಿದ್ದಾರೆ.

ಹೀಗೆ, ಅನೇಕರು ತಮ್ಮ ಶಾಲಾ ಶಿಕ್ಷಣವನ್ನು ಮುಂದುವರಿಸುತ್ತಾರೆ.a ಫಾರ್‌ಚ್ಯೂನ್‌ ಪತ್ರಿಕೆ ಹೇಳುವುದು: “ವಿದ್ಯಾಭ್ಯಾಸದ ಪ್ರಯೋಜನಗಳ ಕುರಿತು ಎಪ್ಪತ್ತುಗಳು ನಕಾರಾತ್ಮಕ ಮನೋಭಾವವನ್ನು ತಾಳಿದ್ದರೆ, ಎಂಬತ್ತುಗಳ ಮನೋಭಾವವು ಇನ್ನೊಂದು ಸೂಚನೆಯನ್ನು ಪ್ರೋತ್ಸಾಹಿಸಿತು: ಒಂದು ಡಿಗ್ರಿಯನ್ನು ಪಡೆದುಕೊ ಇಲ್ಲವೆ ಬರುವ ಫಲವನ್ನನುಭವಿಸು.”

ಈ ಸಮಸ್ಯೆ ಏಕೆ?

ಈ ಹೆಚ್ಚಿಗೆಯ ಶಿಕ್ಷಣವು ಅನೇಕ ವೇಳೆ ಏಕೆ ಅವಶ್ಯ ಬೀಳುತ್ತದೆ? ಒಂದನೆಯದಾಗಿ, ಇಂದಿನ ಕೆಲಸಗಳಲ್ಲಿ ಒಂದು ದೊಡ್ಡ ಸಂಖ್ಯೆಗೆ, ಹೆಚ್ಚು ಉಚ್ಚ ಮಟ್ಟದ ನೈಪುಣ್ಯ ಬೇಕಾಗುತ್ತದೆ. ಕೇವಲ ಠೇವಣಾತಿಗಳನ್ನು ತೆಗೆದುಕೊಳ್ಳುತ್ತಿದ್ದ ಕಾರಕೂನನನ್ನು ಸ್ವಯಂಚಾಲಿತ ಟೆಲ್‌ ಯಂತ್ರವು ತೆಗೆದುಹಾಕಿದೆ,” ಎನ್ನುತ್ತಾನೆ ಅಮೆರಿಕದ ಶ್ರಮಿಕ ಖಾತೆಯ ಒಬ್ಬ ಪ್ರತಿನಿಧಿ. “ಈಗ ಅವನು ನನಗೆ ಮೂರು ರೀತಿಯ ಹಣದ ಮಾರುಕಟ್ಟೆಯ ಕುರಿತು ಸಲಹೆಕೊಟ್ಟು, ನನಗೆ ಇದು ಅದಕ್ಕಿಂತ ಉತ್ತಮವೇಕೆ ಎಂದು ಹೇಳಬೇಕು.” ಹೌಸ್‌ ಎಡ್ಯುಕೇಷನ್‌ ಮತ್ತು ಲೇಬರ್‌ ಕಮಿಟಿಯ ಅಧ್ಯಕ್ಷ, ವಿಲ್ಯಮ್‌ ಡಿ. ಫೋರ್ಡ್‌ ಹೇಳುವುದು: “ಸರಳವಾಗಿದ್ದ ಕೆಲಸಗಳು ಇಲ್ಲದೆ ಹೋಗಿವೆ.”

ಎರಡನೆಯದಾಗಿ, ಶಾಲೆಗಳು ವಿದ್ಯಾರ್ಥಿಗಳಿಗೆ ಯೋಗ್ಯ ಶಿಕ್ಷಣವನ್ನು ಕೊಡುತ್ತಿಲ್ಲವೆಂದು ಕೆಲವರು ಅಭಿಪ್ರಯಿಸುತ್ತಾರೆ. ಮಾದಕ ಪದಾರ್ಥಗಳ ದುರುಪಯೋಗ, ಏಡ್ಸ್‌ ಮತ್ತು ಗರ್ಭನಿರೋಧಗಳೆಂಬ ವಿಷಯಗಳ ಒತ್ತಿಹೇಳುಏಕೆಯು ಓದು, ಬರಹ, ಮತ್ತು ಗಣಿತದ ಶಿಕ್ಷಣವನ್ನು ಮಬ್ಬುಗವಿಸಿದೆಯೆಂದು ಅವರನ್ನುತ್ತಾರೆ. ಇಪ್ಪತ್ತೇಳು ವರ್ಷ ಉಪಾಧ್ಯಾಯರಾಗಿರುವ ಡಾ. ರಾಬರ್ಟ್‌ ಆ್ಯಪ್‌ಲ್‌ಟನ್‌, ಶಾಲಾ ಪದ್ಧತಿಯು “ಶಾಲಾಭಾಗವೆಂದು ಪರಿಗಣಿಸಲ್ಪಟ್ಟಿರದ ಸಮಸ್ಯೆಗಳನ್ನು ನಿಭಾಯಿಸುವ” ಹೊರೆಯಿರುವ ಒಂದು “ಸಮಾಜ ಸೇವಾ ಸಂಘ”ವಾಗಿದೆಯೆಂದು ಪ್ರಲಾಪಿಸುತ್ತಾರೆ.

ಅಗತ್ಯವಿರುವ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವರೆ ಯಾವುದೊ ಶಾಲೆಯು ತಪ್ಪಿರುವ ಕಾರಣ, ಅನೇಕ ಹೈ ಸ್ಕೂಲ್‌ ಪದವೀಧರರಿಗೆ ತಮ್ಮನ್ನು ಬೆಂಬಲಿಸಿಕೊಳ್ಳುವುದು ಅಸಾಧ್ಯವಾಗುತ್ತದೆ. ಫ್ಲಾರಿಡದ ಉದ್ಯೋಗ ಸೇವೆಯ ಒಂದು ಆಫೀಸಿನ ಮ್ಯಾನೆಜರ್‌, ಜೋಸೆಫ್‌ ಡಬ್ಲ್ಯೂ. ಶ್ರೋಡರ್‌ ಹೇಳುವುದು: “ಕೆಲಸ ಮಾಡಲು ಅವರಿಗೆ ಕಲಿಸಲ್ಪಟ್ಟಿರುವುದಿಲ್ಲ. ಯುವ ಜನರೊಂದಿಗೆ ವ್ಯವಹರಿಸುವಾಗ ಧಣಿಗಳು ನನಗೆ ಸತತವಾಗಿ ಹೇಳುವ ಸಮಸ್ಯೆಯು, ಅವರಿಗೆ ಚೆನ್ನಾಗಿ ಓದಲು ಮತ್ತು ಬರೆಯಲು ಬರುವುದಿಲ್ಲವೆಂದೇ. ಅವರಿಗೆ ಒಂದು ಕೆಲಸದ ಅರ್ಜಿಯನ್ನು ತುಂಬಿಸಲಿಕ್ಕೆ ಬರುವುದಿಲ್ಲ.”

ಹೆಚ್ಚಿಗೆಯ ಶಿಕ್ಷಣವು ಅಗತ್ಯವಿರಬಹುದಾದ ಮೂರನೆಯ ಕಾರಣವು, ಅನೇಕ ದೇಶಗಳಲ್ಲಿ ಕಾಲೆಜ್‌ ಪದವೀಧರರ ಆಧಿಕ್ಯವು ಕೆಲಸದ ಮಾರುಕಟ್ಟೆಯನ್ನು ಪ್ರವಹಿಸುವುದೇ. ದ ನ್ಯೂ ಯಾರ್ಕ್‌ ಟೈಮ್ಸ್‌ ಹೇಳುವುದು: “ಅವರ ಕೌಶಲಕ್ಕೆ ಬೇಕಾಗುವುದಕ್ಕಿಂತಲೂ ಹೆಚ್ಚು ಕಾಲೆಜ್‌ ಪದವೀಧರರಿದ್ದಾರೆ. ಈ ಅಧಿಕ ಪೂರೈಕೆಯಿರುವುದರಿಂದ ಧಣಿಗಳು ಹೈ ಸ್ಕೂಲ್‌ ಪದವೀಧರರನ್ನು ಕೆಲಸಕ್ಕೆ ಹಿಡಿಯುವ ಸಾಹಸಕ್ಕೆ ಕೈಹಾಕಲು ಹಿಂಜರಿಯತ್ತಾರೆ,” ಎಂದು ವರದಿಯು ಕೂಡಿಸುತ್ತದೆ.

ತಮ್ಮನ್ನು ಯೋಗ್ಯ ರೀತಿಯಲ್ಲಿ ಆಧಾರಿಸಿಕೊಳ್ಳಲು ಅಗತ್ಯವಿರುವ ರೀತಿಯ ಉದ್ಯೋಗಗಳಿಗೆ ಅರ್ಹರಾಗುವ ಕಾರಣದಿಂದ ಅನೇಕರು ಶಾಲೆಗೆ ವಾಪಸ್ಸು ಹೋಗುತ್ತಿದ್ದಾರೆ. ಅಮೆರಿಕದಲ್ಲಿ 59 ಪ್ರತಿಶತ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು, ಹೈ ಸ್ಕೂಲನ್ನು ಮುಗಿಸಿದ ಮೇಲೆ ಮುಂದುವರಿಸುತ್ತಾರೆ. ಇದು ಅನೇಕ ದಶಕಗಳ ವರೆಗೆ ಹಾಗೆಯೆ ನಿಂತಿದ್ದ 50 ಪ್ರತಿಶತ ಸಂಖ್ಯೆಗಿಂತ ಗಮನಾರ್ಹವಾದ ಅಭಿವೃದ್ಧಿಯನ್ನು ಪ್ರತಿನಿಧೀಕರಿಸುತ್ತದೆ.

ಇದೇ ರೀತಿಯ ಪ್ರವೃತ್ತಿಯನ್ನು ಇತರ ದೇಶಗಳಲ್ಲಿಯೂ ಗಮನಿಸಲಾಗುತ್ತದೆ. ದೃಷ್ಟಾಂತಕ್ಕೆ, 1960ಗಳಿಂದ ಬ್ರಿಟನ್‌, ಕಡ್ಡಾಯದ ಮಿತಿಯನ್ನು ಮೀರಿ ಶಿಕ್ಷಣಪಡೆಯುವ ವಿದ್ಯಾರ್ಥಿಗಳ ಪ್ರಮಾಣದಲ್ಲಿ ಗಮನಾರ್ಹವಾದ ಅಭಿವೃದ್ಧಿಯನ್ನು ಅನುಭವಿಸಿದೆ. ಇತ್ತೀಚಿನ ಒಂದು ವರ್ಷದಲ್ಲಿ ಹೈ ಸ್ಕೂಲ್‌ ಮುಗಿಸಿದವರಲ್ಲಿ 85 ಪ್ರತಿಶತ ವಿವಿಧ ಯೂನಿವರ್ಸಿಟಿ ಮತ್ತು ಕಾಲೆಜ್‌ಗಳಿಗೆ ಅರ್ಜಿ ಹಾಕಿದರೆಂದು ಆಸ್ಟ್ರೇಲಿಯ ಕಂಡುಹಿಡಿಯಿತು. ಜಪಾನಿನ ವಿದ್ಯಾರ್ಥಿಗಳಲ್ಲಿ 95 ಪ್ರತಿಶತ ಮೂರು ವರ್ಷ ಹೆಚ್ಚಿನ ಶಿಕ್ಷಣವನ್ನು ಪಡೆಯಲು ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ. ಅಲ್ಲಿ ಅವರನ್ನು ಒಂದೋ ಕೆಲಸಕ್ಕೆ ಇಲ್ಲವೆ ಕಾಲೆಜಿಗೆ ತಯಾರಿಸಲಾಗುತ್ತದೆ.

ಆದರೂ, ಹೆಚ್ಚಿಗೆಯ ಶಿಕ್ಷಣವು ಯಾವಾಗಲೂ ಅಪೇಕ್ಷಿತ ಪ್ರಯೋಜನಗಳನ್ನು ಒದಗಿಸುವುದಿಲ್ಲ. ಅನುಕೂಲ ಪ್ರತಿಕೂಲಗಳೇನು?

[ಅಧ್ಯಯನ ಪ್ರಶ್ನೆಗಳು]

a ಶಾಲಾ ಮಟ್ಟಗಳ ಹೆಸರುಗಳು ದೇಶದಿಂದ ದೇಶಕ್ಕೆ ವಿಭಿನ್ನವಾಗಿವೆ. ಇಲ್ಲಿ “ಹೈ ಸ್ಕೂಲ್‌” ಕಡ್ಡಾಯ ಶಾಲಾ ಶಿಕ್ಷಣದ ಪೂರ್ತಿ ಹರವನ್ನು ಪ್ರತಿನಿಧೀಕರಿಸುತ್ತದೆ. “ಕಾಲೆಜ್‌,” “ಯೂನಿವರ್ಸಿಟಿ,” “ಟೆಕ್ನಿಕಲ್‌ ಸ್ಕೂಲ್‌,” ಮತ್ತು “ವೊಕೇಷನಲ್‌ ಸ್ಕೂಲ್‌” ಇವುಗಳು, ನಿಯಮವು ಅವಶ್ಯಪಡಿಸದಿದ್ದರೂ ಸ್ವಯಂಪ್ರೇರಿತವಾಗಿ ಬೆನ್ನಟ್ಟಲ್ಪಡುವ ಹೆಚ್ಚಿಗೆಯ ವಿದ್ಯಾಭ್ಯಾಸದ ವಿಧಗಳನ್ನು ಸೂಚಿಸುತ್ತವೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ