ನಾರ್ವೆಯ ಒಲಿಂಪಿಕ್ ಸ್ಪರ್ಧೆಗಳು ಆದರ್ಶಗಳು ಸಾಕಷ್ಟಿದ್ದವೊ?
ನಾರ್ವೆಯ ಎಚ್ಚರ! ಸುದ್ದಿಗಾರರಿಂದ
ನೂರು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿಯು (ಐಓಸಿ) ಸ್ಥಾಪಿಸಲ್ಪಟ್ಟಾಗ, ಅದು ಮಹತ್ತಾದ ಸ್ವಪ್ನದರ್ಶನಗಳನ್ನು ಕಂಡಿತ್ತು. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಇಡೀ ಲೋಕದ ಯುವ ಜನರನ್ನು ಕ್ರೀಡಾ ಮೈದಾನದಲ್ಲಿ—ಹಣಕಾಸಿನ ಲಾಭವಿಲ್ಲದೆ—ಒಟ್ಟುಗೂಡುವಂತೆ ಮಾಡುವ ಮೂಲಕ ಸಹೋದರತ್ವ ಮತ್ತು ಶಾಂತಿಯನ್ನು ಪ್ರವರ್ಧಿಸುವುದು ಅದರ ಗುರಿಯಾಗಿತ್ತು. ಪ್ರಸನ್ನವಾದ ಸ್ಪರ್ಧೆಯು ಜನರ ನಡುವೆ ಐಕಮತ್ಯ ಮತ್ತು ಮೈತ್ರೀಕರಣವನ್ನು ಉಂಟುಮಾಡಬಹುದೆಂದು ನಿರೀಕ್ಷಿಸಲಾಗಿತ್ತು. ಈ ಆಧಾರದ ಮೇಲೆ ಪ್ರಾಚೀನ ಕಾಲದ ಒಲಿಂಪಿಕ್ ಸ್ಪರ್ಧೆಗಳು ಆಧುನಿಕ ಸಮಯಗಳಲ್ಲಿ ಪುನರುಜ್ಜೀವಿಸಲ್ಪಟ್ಟವು.
ಗ್ರೀಸ್ನ ಅಥೆನ್ಸ್ನಲ್ಲಿ 1896ರಲ್ಲಿ ಸಾಮಾನ್ಯ ರೀತಿಯಲ್ಲಿ ಆರಂಭವಾದ ಒಲಿಂಪಿಕ್ ಸ್ಪರ್ಧೆಗಳು, 170ಕ್ಕಿಂತಲೂ ಹೆಚ್ಚಿನ ದೇಶಗಳಿಂದ ಬರುವ 11,000 ಭಾಗಿದಾರರ ಉಚ್ಚಾಂಕದೊಂದಿಗೆ, ಲೋಕದಲ್ಲೇ ಅತ್ಯಂತ ದೊಡ್ಡ ಕ್ರೀಡಾ ಉತ್ಸವವಾಗಿ ವಿಕಸಿಸಿವೆ. ಪ್ರಥಮ ವಿಂಟರ್ (ಚಳಿಗಾಲದ) ಸ್ಪರ್ಧೆಗಳು, 1924ರಲ್ಲಿ ಫ್ರಾನ್ಸ್ನ ಶಾಮನೀಯಲ್ಲಿ ನಡೆಸಲ್ಪಟ್ಟಿದ್ದವು, ಮತ್ತು ಅವು ಯಾವಾಗಲೂ ಸಮರ್ (ಬೇಸಗೆ ಕಾಲದ) ಸ್ಪರ್ಧೆಗಳ “ಕಿರಿಯ ಸಹೋದರ”ನಾಗಿದ್ದವು. ಆದಾಗ್ಯೂ, ಬಹುಮಟ್ಟಿಗೆ 70 ದೇಶಗಳಿಂದ ಬಂದ ಸುಮಾರು 2,000 ಸ್ಪರ್ಧಾಳುಗಳು, 1994, ಫೆಬ್ರವರಿ 12-27ರಂದು ನಾರ್ವೆಯ ಲಿಲಹಾಮರ್ನಲ್ಲಿ ವಿಂಟರ್ ಒಲಿಂಪಿಕ್ ಸ್ಪರ್ಧೆಗಳಿಗಾಗಿ ಒಟ್ಟುಗೂಡಿಸಲ್ಪಟ್ಟಿದ್ದರು.a
ಪ್ರಸಿದ್ಧವಾದ ಒಲಿಂಪಿಕ್ ವರ್ತುಲಗಳಿಂದ ಸಂಕೇತಿಸಲ್ಪಟ್ಟಂತೆ ಸಹೋದರತ್ವ ಮತ್ತು ಸ್ನೇಹಮೈತ್ರಿಯ ಭಾವನೆ, ಮತ್ತು “ಸ್ವಸ್ಥ ದೇಹದಲ್ಲಿ ಸ್ವಸ್ಥ ಮನಸ್ಸು” ಎಂಬ ಅಭಿಪ್ರಾಯವು ಇಂದೆಂದಿಗಿಂತಲೂ ಹೆಚ್ಚಾಗಿ ಅಗತ್ಯವಾಗಿರುವಂತೆ ತೋರುತ್ತದೆ. ಲಿಲಹಾಮರ್ನ ಒಲಿಂಪಿಕ್ ಸ್ಪರ್ಧೆಗಳಲ್ಲಿ ಈ ಆದರ್ಶಗಳು ಯಾವ ಪಾತ್ರವನ್ನು ವಹಿಸಿದವು?
ಒಲಿಂಪಿಕ್ ಸ್ಪರ್ಧೆಗಳು ಮತ್ತು ದೊಡ್ಡ ವ್ಯಾಪಾರ
ವ್ಯಾಪಕವಾದ ವಾರ್ತಾ ವ್ಯಾಪ್ತಿಯು, ಒಲಿಂಪಿಕ್ ಸ್ಪರ್ಧೆಗಳಲ್ಲಿ ಸಾರ್ವಜನಿಕ ಆಸಕ್ತಿಯನ್ನು ವಿಪರೀತವಾಗಿ ಉತ್ಪಾದಿಸಿದೆ. ಸ್ಪರ್ಧಾಳುಗಳಿಗಿಂತ ನಾಲ್ಕುಪಾಲು ಹೆಚ್ಚು ಸಂಖ್ಯೆಯಲ್ಲಿ ವಾರ್ತಾಮಾಧ್ಯಮಗಳ ಜನರು ಲಿಲಹಾಮರ್ನಲ್ಲಿ ಹಾಜರಿದ್ದರು ಮತ್ತು ಸುಮಾರು ಇನ್ನೂರು ಕೋಟಿ ಜನರ ದಾಖಲೆಯು ಟಿವಿಯಲ್ಲಿ ವಿಂಟರ್ ಸ್ಪರ್ಧೆಗಳನ್ನು ವೀಕ್ಷಿಸಿತು. ಹೀಗೆ ಪ್ರಬಲವಾದ ವಾಣಿಜ್ಯ ಅಭಿರುಚಿಗಳಿಗೆ ಒಲಿಂಪಿಕ್ ಸ್ಪರ್ಧೆಗಳು ಲಾಭದಾಯಕ ವ್ಯಾಪಾರವಾಗಿ ಪರಿಣಮಿಸಿವೆ. ಮತ್ತು ಟಿವಿ ನೆಟರ್ಕ್ವ್ಗಳು ಮತ್ತು ಪ್ರಾಯೋಜಕರು ವಿಶೇಷ ಸುಯೋಗಗಳಿಗಾಗಿ ಮತ್ತು ವ್ಯಾವಹಾರಿಕ ಒಪ್ಪಂದಗಳಿಗಾಗಿ ಸ್ಪರ್ಧಿಸುತ್ತಾರೆ.
ಸಮಸ್ತ ಲೋಕದ ವ್ಯಾಪಾರ ಮತ್ತು ಕೈಗಾರಿಕೆಯ ಪ್ರತಿನಿಧಿಗಳು ಲಿಲಹಾಮರ್ನಲ್ಲಿ ಸ್ಪರ್ಧೆಗಳಿಗೆ ಹಾಜರಾದರು, ಮತ್ತು ಅವರಲ್ಲಿ ಅನೇಕರು ಈ ಅಂತಾರಾಷ್ಟ್ರೀಯ ಬೃಹತ್ ಕೂಟವನ್ನು, ವ್ಯಾಪಾರ ಸಂಬಂಧಗಳನ್ನು ವೃದ್ಧಿಮಾಡಲು ಮತ್ತು ಸೆಮಿನಾರ್ಗಳನ್ನು ಮತ್ತು ಸಮ್ಮೇಳನಗಳನ್ನು ಏರ್ಪಡಿಸಲು ಒಂದು ಸಂದರ್ಭವನ್ನಾಗಿ ಅವಲೋಕಿಸಿದರು. ಚಿಕ್ಕ ಮತ್ತು ದೊಡ್ಡ ಉದ್ಯಮಗಳು, ವಿಕ್ರಯಿಸಲ್ಪಟ್ಟ—ಪಿನ್ಗಳು ಮತ್ತು ಪೋಸ್ಟ್ಕಾರ್ಡ್ಗಳಿಂದ ಹಿಡಿದು ಅಡಿಗೆ ಮನೆಯ ಪಾತ್ರೆಗಳು ಮತ್ತು ಬಟ್ಟೆಯ ವರೆಗೆ ಎಲ್ಲವನ್ನೂ—ವಿವಿಧ ಅಸಂಖ್ಯಾತ ಒಲಿಂಪಿಕ್ ಉತ್ಪಾದನೆಗಳ ಮೂಲಕ ಅಪಾರವಾಗಿ ತೋರಿಬಂದ ಸೃಜನಶೀಲ ಸಾಮರ್ಥ್ಯವನ್ನು ತೋರಿಸಿದವು.
ಸಹಜವಾಗಿ, ಸ್ಪರ್ಧೆಗಳ ಸಮಯದಲ್ಲಿ ಸ್ಥಳೀಯ ಜನರಿಗೆ ದೈನಂದಿನ ಜೀವಿತವು ಸಂಪೂರ್ಣವಾಗಿ ಅಡಿಮೇಲಾಯಿತು. ಒಲಿಂಪಿಕ್ ಕೆಲಸಗಾರರು, ಭಾಗಿದಾರರು, ಮತ್ತು ಮುಖಂಡರ ಮಹಾ ಪ್ರವಾಹವು, ಸಾಮಾನ್ಯವಾಗಿ 20,000ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿರುವ ಲಿಲಹಾಮರ್ನ ಜನಸಂಖ್ಯೆಯನ್ನು ಇಮ್ಮಡಿಗೊಳಿಸಿತು. ಇದರೊಂದಿಗೆ ಪ್ರತಿ ದಿನ 1,00,000 ಪ್ರೇಕ್ಷಕರ “ದಾಳಿ”ಯು ಅಲ್ಲಿತ್ತು. ಈ ಗಲಭೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ, ಸ್ಥಳೀಯ ನಿವಾಸಿಗಳಲ್ಲಿ ಕೆಲವರು ರಜೆಯಲ್ಲಿ ಹೋಗಲು ಇಷ್ಟಪಟ್ಟರು ಮತ್ತು ಅವರು ಹಾಸ್ಯವ್ಯಂಗ್ಯವಾಗಿ “ಕ್ರೀಡಾ ಆಶ್ರಿತರು” ಎಂದು ನಿರ್ದೇಶಿಸಲ್ಪಟ್ಟರು.
ಸ್ಪರ್ಧೆಗಳ ಕ್ರೀಡಾ ಅಂಶದ ಮತ್ತು ಒಲಿಂಪಿಕ್ ಆದರ್ಶಗಳ ಕುರಿತೇನು?
ಕಿಟ್ಯುಸ್, ಆಲ್ಟ್ಯುಸ್, ಫಾರ್ಟ್ಯುಸ್
ಒಲಿಂಪಿಕ್ ಆದರ್ಶಸೂತ್ರಕ್ಕೆ ಹೊಂದಿಕೆಯಲ್ಲಿ—ಕಿಟ್ಯುಸ್, ಆಲ್ಟ್ಯುಸ್, ಫಾರ್ಟ್ಯುಸ್ (ಹೆಚ್ಚು ವೇಗವಾಗಿ, ಹೆಚ್ಚು ಎತ್ತರವಾಗಿ, ಮತ್ತು ಹೆಚ್ಚು ಬಲವಾಗಿ)—ಒಬ್ಬ ಒಲಿಂಪಿಕ್ ಸ್ಪರ್ಧಾಳು ದಾಖಲೆಯನ್ನು ಮುರಿಯಲು ಮತ್ತು ತನ್ನ ಪ್ರತಿಸ್ಪರ್ಧಿಯನ್ನು ಮೀರಿಸಲು ಪ್ರಯತ್ನಿಸುತ್ತಾನೆ. ಇದನ್ನು ಸಾಧಿಸಲು ಇಂದು, ಕ್ರೀಡೆಗಳನ್ನು ಕೇವಲ ಬಿಡುವಿನ ಕಾಲದ ಒಂದು ಚಟುವಟಿಕೆಯಾಗಿ ಮಾಡುವುದು ಸಾಮಾನ್ಯವಾಗಿ ಸಾಕಾಗುವುದಿಲ್ಲವೆಂದು ಒಲಿಂಪಿಕ್ ಸ್ಪರ್ಧಾಳುಗಳು ಕಂಡುಕೊಳ್ಳುತ್ತಾರೆ. ಅಧಿಕಾಂಶ ಒಲಿಂಪಿಕ್ ಸ್ಪರ್ಧಾಳುಗಳಿಗೆ ಅದು ಒಂದು ಪೂರ್ಣ ಸಮಯದ ಉದ್ಯೋಗ ಮತ್ತು ಜೀವನೋಪಾಯವಾಗಿದೆ, ಬಹು ಮಟ್ಟಿಗೆ ವಿಸ್ತಾರವಾಗಿರುವ ಜಾಹೀರಾತಿನ ಹಿಂಬರಹಗಳಿಂದ ಅವರಿಗೆ ಬರುವ ಆದಾಯವು, ಅವರು ಸಾಧಿಸುವ ಫಲಿತಾಂಶಗಳ ಮೇಲೆ ಅವಲಂಬಿಸಿರುತ್ತದೆ. ಆರಂಭದ ಹವ್ಯಾಸಿ ಆದರ್ಶವು ಹಣ ಮತ್ತು ಕಸಬುದಾರಿಕೆಗೆ ಬಲಿಬಿದ್ದಿತು.
ಪ್ರತಿಯಾಗಿ, ಜನತೆಯು ಅದು ಬಯಸುವ ಎಲ್ಲಾ ನಾಟಕ ಮತ್ತು ಮನೋರಂಜನೆಯನ್ನು ಪಡೆದುಕೊಳ್ಳುತ್ತದೆ. ಕೆಲವೊಂದು ದಶಮಾನಗಳ ಮೊದಲು ಯೋಚಿಸಲಸಾಧ್ಯವಾಗಿದ್ದ ಸಾಧನೆಗಳಿಗೆ ಇತ್ತೀಚಿಗಿನ ಒಲಿಂಪಿಕ್ ಸ್ಪರ್ಧೆಗಳಲ್ಲಿ ಸ್ಥಾಪಿಸಲ್ಪಟ್ಟ ಅನೇಕ ದಾಖಲೆಗಳು ರುಜುವಾತನ್ನು ಒದಗಿಸುತ್ತವೆ. ಇದಕ್ಕೆ ಕಾರಣವು ಅಧಿಕವಾದ ತರಬೇತಿ ಮತ್ತು ಹೆಚ್ಚು ಮಹತ್ತಾದ ವಿಶಿಷ್ಟೀಕರಣಕ್ಕೆ ಮಾತ್ರವಲ್ಲ, ಅಭಿವೃದ್ಧಿಗೊಂಡಿರುವ ಸಾಧನಸಲಕರಣೆ ಮತ್ತು ಉತ್ತಮ ಸೌಕರ್ಯಗಳು ಸಹ ಆಗಿವೆ. ಉದಾಹರಣೆಗೆ, ಲಿಲಹಾಮರ್ನ ಸ್ಪರ್ಧೆಗಳಲ್ಲಿ, ಪುರುಷರ ವೇಗದ ಸ್ಕೇಟಿಂಗ್ನ ಐದು ಸಂಭವಗಳಲ್ಲಿ ನಾಲ್ಕು ವಿಶ್ವ ದಾಖಲೆಗಳು ಮತ್ತು ಐದು ಒಲಿಂಪಿಕ್ ದಾಖಲೆಗಳು ಸ್ಥಾಪಿಸಲ್ಪಟ್ಟಿತ್ತು. ವೃತ್ತಿಪರ ಸ್ಕೇಟಿಂಗ್ಗಾಗಿ ಹಿಮವನ್ನು ಯೋಗ್ಯವಾದದ್ದಾಗಿ ಮಾಡಲಿಕ್ಕಾಗಿ ವೈಜ್ಞಾನಿಕ ಕಾರ್ಯಕ್ರಮಗಳು ಎಲ್ಲಿ ಅಂಗೀಕರಿಸಲ್ಪಟ್ಟಿದ್ದವೊ ಆ ಹೊಸ ಸ್ಕೇಟಿಂಗ್ ಹಾಲ್ಗೆ ಸ್ವಲ್ಪ ಪ್ರಶಂಸೆಯು ಕೊಡಲ್ಪಟ್ಟಿತು.
ಅಸಂತೋಷಕರವಾಗಿ, ಕೆಲವು ಸ್ಪರ್ಧಾಳುಗಳು ಒಲಿಂಪಿಕ್ ಪ್ರಮಾಣ ವಚನದಲ್ಲಿ ಅವರು ವಾಗ್ದಾನ ಮಾಡುವಂತೆ “ಕ್ರೀಡೆಯ ಮಹಿಮೆಗಾಗಿ, ನಿಜ ಕ್ರೀಡಾಸಕ್ತ ಆತ್ಮದಿಂದ” ಸ್ಪರ್ಧಿಸದಿರುವ ಮೂಲಕ ಪ್ರಮುಖರಾಗಿ ಎದ್ದು ತೋರುತ್ತಾರೆ. ಈ ವರ್ಷದ ವಿಂಟರ್ ಸ್ಪರ್ಧೆಯಲ್ಲಿ ಸೋತ ಕಾರಣ ಸಿಟ್ಟಾದ ಸ್ಪರ್ಧಾಳುಗಳಿದ್ದಾರೆ ಮತ್ತು ಕೆಲವು ಸ್ಪರ್ಧಾಳುಗಳು ಜೊತೆ ಪ್ರತಿಸ್ಪರ್ಧಿಗಳಿಗೆ ಹಾನಿಮಾಡಲು ಪ್ರಯತ್ನಿಸಿದರು. ಇತ್ತೀಚಿಗಿನ ವರ್ಷಗಳಲ್ಲಿ ಅಮಲೌಷಧಗಳನ್ನು ಮತ್ತು ಸಿರ್ಟಾಯ್ಡ್ಗಳನ್ನು ನಿರೋಧಿಸುವುದು ಆವಶ್ಯಕವಾದದ್ದಾಗಿದೆ. ಲಿಲಹಾಮರ್ನಲ್ಲಿ, ಒಬ್ಬ ಭಾಗಿದಾರನು ಮಾದಕ ವಸ್ತುವನ್ನು ಸೇವಿಸುತ್ತಿದ್ದುದರಿಂದ ಆರಂಭದ ದಿನದಂದೇ ಮನೆಗೆ ಕಳುಹಿಸಲ್ಪಟ್ಟನು. ಆದಾಗ್ಯೂ, ಸ್ಪರ್ಧೆಗಳ ಸಮಯದಲ್ಲಿ ಸ್ಪರ್ಧಾಳುಗಳು ಪರೀಕ್ಷಿಸಲ್ಪಟ್ಟಾಗ, ಅಮಲೌಷಧದ ಯಾವುದೇ ಕುರುಹು ಕಂಡುಕೊಳ್ಳಲ್ಪಡಲಿಲ್ಲ.
ಲಿಲಹಾಮರ್ ಸ್ಪರ್ಧೆಗಳಿಗೆ ಸಂಬಂಧಿಸಿದ ಒಲಿಂಪಿಕ್ ಆದರ್ಶಗಳಿಗೆ ಕೆಲವು ಹೊಸ ಮಾರ್ಗಗಳು ಇದ್ದವು.
ಪರಿಸರೀಯ ಸಂರಕ್ಷಣೆ, ಪರಿಹಾರ ಕಾರ್ಯ, ಮತ್ತು ಶಾಂತಿಯ ಪ್ರಯತ್ನಗಳು
ವ್ಯಾಪಕ ವಿಕಸನಗಳು ಮತ್ತು ಹಿಪ್ಪೆಯ ದೊಡ್ಡ ಪ್ರಮಾಣದ ಉತ್ಪಾದನೆಯನ್ನು ಒಳಗೊಳ್ಳುವ, ಒಲಿಂಪಿಕ್ ಸ್ಪರ್ಧೆಯಷ್ಟು ದೊಡ್ಡದಾದ ಒಂದು ಬೃಹತ್ ಕಾರ್ಯಾಚರಣೆಯು, “ಸಂಪನ್ಮೂಲಗಳ ಮಿತವ್ಯಯಿಯಾಗಲಿ ಅಥವಾ ಪರಿಸರೀಯವಾಗಿ ಮಿತ್ರಭಾವದ್ದಾಗಲಿ ಆಗಿರುವುದಿಲ್ಲ.” (ಮಿಲ್ಯೂಸ್ಪೆಸೀಲ್, ಲಿಲಹಾಮರ್ ಒಲಿಂಪಿಕ್ ಸ್ಪರ್ಧೆಗಳಿಗಾಗಿರುವ ಪರಿಸರೀಯ ಲಘುಪ್ರಕಟನೆ) ಒಲಿಂಪಿಕ್ ಆತ್ಮದೊಂದಿಗೆ ಇದು ಅಸಮಂಜಸವಾಗಿತ್ತೆಂದು ಅನೇಕ ಜನರು ಭಾವಿಸಿದರು ಮತ್ತು 1994ರ ವಿಂಟರ್ ಸ್ಪರ್ಧೆಗಳನ್ನು ಪರಿಸರೀಯ ಪ್ರದರ್ಶನವನ್ನಾಗಿ ಮಾಡುವ ಸಲಹೆಯನ್ನಿತ್ತರು. ಈ ಅಭಿಪ್ರಾಯವು ಅಂಗೀಕರಿಸಲ್ಪಟ್ಟಿತು, ಮತ್ತು ಲಿಲಹಾಮರ್ ಸ್ಪರ್ಧೆಗಳು “ಒಂದು ‘ಹಸಿರು’ ಪಾರ್ಶ್ವದೃಶ್ಯದೊಂದಿಗೆ ಪ್ರಥಮ ಒಲಿಂಪಿಕ್ ಸ್ಪರ್ಧೆಗಳಾ”ಗಿ ಅಂತರಾಷ್ಟ್ರೀಯ ಗಮನವನ್ನು ಆಕರ್ಷಿಸಿದವು. ಇದು ಏನನ್ನು ಸೂಚಿಸಿತು?
ಪರಿಸರದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಕಮ್ಮಿಮಾಡಲು ಹೊಸ ಕ್ರೀಡಾ ಸ್ಥಳಗಳ ಸ್ಥಾನ ನಿರ್ದೇಶ, ವಿನ್ಯಾಸ ಮತ್ತು ದೀರ್ಘಾವಧಿಯ ಕಾರ್ಯಾಚರಣೆಗಳು ಪರಿಗಣಿಸಲ್ಪಟ್ಟವು. ಎಲ್ಲಾ ಕ್ಷೇತ್ರಗಳಲ್ಲಿ, ಮರ, ಕಲ್ಲು, ಮತ್ತು ರಟ್ಟುಕಾಗದಗಳಂತಹ ಪರಿಸರೀಯ ಹಿತಕಾರಕ ಮತ್ತು ಪುನರ್ಪರಿವರ್ತನೀಯ ವಸ್ತುಗಳು ವಿಸ್ತಾರವಾಗಿ ಉಪಯೋಗಿಸಲ್ಪಟ್ಟವು, ಮತ್ತು ಎಲ್ಲಾ ಪ್ರಾಯೋಜಕರಿಗೆ ಮತ್ತು ಸರಬರಾಯಿಗಾರರಿಗಾಗಿ ಉನ್ನತವಾದ ಪರಿಸರೀಯ ಮಟ್ಟಗಳು ಸ್ಥಾಪಿಸಲ್ಪಟ್ಟವು. ಒಳಗೆ ಧೂಮಪಾನ ಮಾಡುವುದರ ಕುರಿತು ಸಂಪೂರ್ಣ ನಿಷೇಧವಿತ್ತು.
ಒಲಿಂಪಿಕ್ ಗುರಿಗಳ ಕುರಿತ ಒಂದು ಅಧ್ಯಯನವು, ಲಿಲಹಾಮರ್ ಒಲಿಂಪಿಕ್ ಏಡ್ ಪರಿಹಾರ ಸಂಘಟನೆಯ ಸ್ಥಾಪನೆಗೂ ಮುನ್ನಡಿಸಿತು. ಬಾಸ್ನೀಯ ಮತ್ತು ಹರ್ಟ್ಸಗೋವೀನದ ಹಿಂದಿನ ಒಲಂಪಿಕ್ ನಗರವಾದ ಸಾರಯೇವೊವಿನ ಮಕ್ಕಳಿಗೆ ಸಹಾಯ ಮಾಡುವ ಒಂದು ನಿಧಿ ಸಂಗ್ರಹದೋಪಾದಿ ಆರಂಭವಾದ ಅದು, ಬಳಿಕ ಸಮಸ್ತ ಲೋಕದಲ್ಲಿರುವ ಯುದ್ಧದ ಯುವ ಬಲಿಪಶುಗಳಿಗೆ ಸಹಾಯ ಮಾಡುವ ವರೆಗೆ ವಿಸ್ತರಿಸಲ್ಪಟ್ಟಿತು. ಚಿನ್ನದ ಪದಕಕಾರರಲ್ಲಿ ಒಬ್ಬನು ಸ್ಪರ್ಧೆಗಳಲ್ಲೊಂದರಿಂದ ಬಂದ ತನ್ನ ವಿಜಯದ ಬೋನಸ್ಸಿನ ಎಲ್ಲಾ ಹಣವನ್ನು (ಸುಮಾರು 30,000 ಡಾಲರುಗಳು) ಬೆಂಬಲಕ್ಕಾಗಿ ದಾನವಾಗಿ ಕೊಟ್ಟ ಬಳಿಕ, ಈ ಸಂಘಟನೆಗೆ ಮಹತ್ತರವಾದ ಪ್ರಚೋದನೆಯು ಕೊಡಲ್ಪಟ್ಟಿತು. ಭವಿಷ್ಯತ್ತಿನ ಸ್ಪರ್ಧೆಗಳ ಸಮಯದಲ್ಲಿ ಒಲಿಂಪಿಕ್ ಏಡ್ ಮುಂದುವರಿಯುವುದೆಂದು ಅದನ್ನು ಆರಂಭಿಸಿದವರು ನಿರೀಕ್ಷಿಸುತ್ತಾರೆ.
ಒಲಿಂಪಿಕ್ ಸ್ಪರ್ಧೆಯ ಆರಂಭೋತ್ಸವದ ಸಮಯದಲ್ಲಿ ಪಾರಿವಾಳಗಳ ಸಾಂಪ್ರದಾಯಿಕವಾದ ಬಿಡುಗಡೆಯು, ಶಾಂತಿಯ ಒಂದು ಮೌನವಾದ ಸಂದೇಶವನ್ನು ಲೋಕಕ್ಕೆ ಕಳುಹಿಸಿತು. ಐಓಸಿಯ ಕ್ಯಾಟಲೋನಿಯನ್ ಅಧ್ಯಕ್ಷರಾದ ವಾನ್ ಅಂಟೋನಿಯೊ ಸಾಮರಾಂಚ್, ಭೂಮಿಯ ಎಲ್ಲಾ ಜನರಿಗಾಗಿ ಶಾಂತಿಯ ಕುರಿತು ಪುನಃ ಪುನಃ ಮಾತಾಡಿದಂತೆ, 1994ರ ವಿಂಟರ್ ಸ್ಪರ್ಧೆಯೊಂದಿಗೆ ಸಂಬಂಧಿಸಿ ಶಾಂತಿಯ ಆದರ್ಶವು ಇನ್ನೂ ಕೇಂದ್ರಕ್ಕೆ ತರಲ್ಪಟ್ಟಿತು.
ಸಾಧಿಸಲ್ಪಡಲಿರುವ ಆದರ್ಶಗಳು
ಎಲ್ಲಾ ಮಾನವರಲ್ಲಿ ಆಳವಾಗಿ ಬೇರೂರಿರುವ ಒಂದು ಅಪೇಕ್ಷೆಯನ್ನು ಒಲಿಂಪಿಕ್ ಆದರ್ಶಗಳು ಪ್ರತಿಬಿಂಬಿಸುತ್ತವೆ—ಸಹೋದರತ್ವ, ಶಾಂತಿ, ನೀತಿ, ಸಂತೋಷ, ಮತ್ತು ಶಾರೀರಿಕ ಹಾಗೂ ಮಾನಸಿಕ ಸ್ವಸ್ಥತೆಯ ಅಪೇಕ್ಷೆಯೇ. ಒಲಿಂಪಿಕ್ ಸ್ಪರ್ಧೆಗಳ ಮೂಲ ಗುರಿಗಳನ್ನು ಪುನಃ ಗಮನಕ್ಕೆ ತಂದದ್ದಕ್ಕಾಗಿ ಈ ವರ್ಷದ ವಿಂಟರ್ ಸ್ಪರ್ಧೆಗಳು ಪ್ರಶಂಸಿಸಲ್ಪಟ್ಟವು ಮತ್ತು ಅವುಗಳು “ಎಲ್ಲಾ ಸಮಯಗಳ ಅತ್ಯುತ್ತಮ ಒಲಿಂಪಿಕ್ ವಿಂಟರ್ ಸ್ಪರ್ಧೆಗಳು” ಎಂದು ಪ್ರಸ್ತಾವಿಸಲ್ಪಟ್ಟವು. ಆದಾಗ್ಯೂ, ಒಲಿಂಪಿಕ್ ಚಟುವಟಿಕೆಯು ಪುನಃ ಒಮ್ಮೆ ತನ್ನ ಆದರ್ಶಗಳಿಗೆ ಎಟುಕದೆಹೋಯಿತು.
ಕ್ರೀಡೆಯ ಮೂಲಭೂತ ಆದರ್ಶಗಳಿಗಿಂತ ಪ್ರತಿಷ್ಠೆ ಮತ್ತು ವಾಣಿಜ್ಯ ತತ್ವವು ಮೇಲುಗೈಯಾಗತೊಡಗಿತು. ಅನೇಕವೇಳೆ ಸ್ಪರ್ಧೆಯು, ಸಹೋದರತ್ವ ಮತ್ತು ಮೈತ್ರೀಕರಣಕ್ಕೆ ಬದಲಾಗಿ ಅಹಂಭಾವ ಮತ್ತು ರಾಷ್ಟ್ರೀಯತೆಯನ್ನು ಉಂಟುಮಾಡಿದ ತೀವ್ರ ಸ್ಪರ್ಧೆಯಾಗಿ ಪರಿಣಮಿಸಿತು.
ಒಲಿಂಪಿಕ್ ಮಹತ್ವಾಕಾಂಕ್ಷೆಗಳು ಸಾಧಿಸಲ್ಪಡಲು ಯಾವುದಾದರೂ ಒಂದು ಮಾರ್ಗವಿದೆಯೆ? ಒಂದು ಆದರ್ಶವಾದ ಲೋಕವನ್ನು ಸಾಧಿಸುವ ಮಾನವ ಪ್ರಯತ್ನಗಳು ವಿಫಲವಾಗುವುವು ಎಂದು ಬೈಬಲ್ ತೋರಿಸುತ್ತದೆ. ಆದಾಗ್ಯೂ, ಭೂಮಿಗೆ ಪರಿಪೂರ್ಣವಾದ ಪ್ರಮೋದವನ ಪರಿಸ್ಥಿತಿಗಳನ್ನು ತರಲಿಕ್ಕಾಗಿ ದೇವರ ರಾಜ್ಯವು ಬೇಗನೆ ಕ್ರಿಯೆಗೈಯುವುದು. (ಯೆರೆಮೀಯ 10:23; 2 ಪೇತ್ರ 3:13) ಅಂತಹ ಒಂದು ಲೋಕವು, ಕ್ರೀಡೆಗೆ ಸಂಬಂಧಿಸಿದ ವಿಕಸನದ ಮೇಲಾಗಲಿ ಒಲಿಂಪಿಕ್ ಮೂಲನಿಯಮಗಳು ಹಾಗೂ ಸಂಪ್ರದಾಯಗಳಿಗೆ ನಿಷ್ಠೆಯ ಮೇಲಾಗಲಿ ಅವಲಂಬಿಸಿರುವುದಿಲ್ಲ—ಬದಲಿಗೆ ಸೃಷ್ಟಿಕರ್ತನಿಗೆ ಸತ್ಯ ಆರಾಧನೆಯ ಮೇಲೆ ಅವಲಂಬಿಸಿರುತ್ತದೆ. ಅಪೊಸ್ತಲ ಪೌಲನು ಹೇಳಿದ್ದು: “ದೇಹಸಾಧನೆಯು ಸ್ವಲ್ಪಮಟ್ಟಿಗೆ ಪ್ರಯೋಜನವಾಗಿದೆ, [ದಿವ್ಯ, NW] ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಪ್ರಯೋಜನವಾದದ್ದು; ಅದಕ್ಕೆ ಇಹಪರಗಳಲ್ಲಿಯೂ ಜೀವವಾಗ್ದಾನ ಉಂಟು.” ಇಂದಿನ ವರೆಗೆ ‘[ತಮ್ಮ] ಗುರಿಯಾಗಿ ದಿವ್ಯ ಭಕ್ತಿಯೊಂದಿಗೆ’ ಸ್ವತಃ ತರಬೇತಿ ಪಡೆದುಕೊಳ್ಳುವವರಿಗೆ, ಫಲಿತಾಂಶವು ನಿಜವಾಗಿಯೂ ಸ್ವಸ್ಥ ದೇಹದಲ್ಲಿ ಸ್ವಸ್ಥ ಮನಸ್ಸು ಆಗಿರುವುದು.—1 ತಿಮೊಥೆಯ 4:7, 8.
[ಅಧ್ಯಯನ ಪ್ರಶ್ನೆಗಳು]
a ಇಸವಿ 1992ರಲ್ಲಿ ಸಹ ಒಲಿಂಪಿಕ್ ಸ್ಪರ್ಧೆಗಳು ಏರ್ಪಡಿಸಲ್ಪಟ್ಟಿದ್ದವು, ಆದರೆ ಸಮರ್ ಮತ್ತು ವಿಂಟರ್ ಸ್ಪರ್ಧೆಗಳು ಒಂದೇ ವರ್ಷದಲ್ಲಿ ನಡೆಸಲ್ಪಟ್ಟದ್ದು ಅದೇ ಕೊನೆಯ ಬಾರಿಯಾಗಿತ್ತು. ಈಗಿನಿಂದ ಅವುಗಳು ಪ್ರತಿ ಎರಡು ವರ್ಷಕ್ಕೆ ಪರ್ಯಾಯವಾಗಿ ನಡೆಯುವಂತೆ ಏರ್ಪಡಿಸಲ್ಪಡುತ್ತವೆ.
[ಪುಟ 26 ರಲ್ಲಿರುವ ಚೌಕ]
ಒಲಿಂಪಿಕ್ ಧಾರ್ಮಿಕ ಸಂಮಿಶ್ರಣ
ಒಲಿಂಪಿಕ್ ಸ್ಪರ್ಧೆಗಳು ಗ್ರೀಕ್ ಧರ್ಮದಲ್ಲಿ ಬೇರೂರಿವೆ. ಗ್ರೀಕ್ ದೇವರುಗಳಲ್ಲಿ ಶ್ರೇಷ್ಠನಾದ ಜೂಸ್ನನ್ನು ಘನಪಡಿಸಲಿಕ್ಕಾಗಿ ಒಂದು ಧಾರ್ಮಿಕ ಉತ್ಸವದೋಪಾದಿ ಅವು ಉದ್ಭವಿಸಿದವು. ಆಧುನಿಕ ಸ್ಪರ್ಧೆಗಳ ವಿವಿಧ ವೈಶಿಷ್ಟ್ಯಗಳು ಧಾರ್ಮಿಕತೆಯ ವರ್ಚಸ್ಸನ್ನು ಹೊಂದಿವೆ: ಒಲಿಂಪಿಕ್ ಧ್ವಜ, “ಪವಿತ್ರ” ಜ್ವಾಲೆ, ಮತ್ತು ಒಲಿಂಪಿಕ್ ಪ್ರಮಾಣ—ಇವುಗಳಿಗೆ ಶಾಸ್ತ್ರೋಕ್ತ ಸಂಸ್ಕಾರವೇ. ಸ್ಪರ್ಧೆಗಳು ಆರಂಭವಾಗುವಾಗ ಹಾಡಲ್ಪಡುವ ಸುಮಾರು 100 ವರ್ಷ ಹಳೆಯ ಗ್ರೀಕ್ ಸ್ತೋತ್ರಗೀತೆಯು, ಲಿಲಹಾಮರ್ನ ಪ್ರಾರಂಭೋತ್ಸವದಲ್ಲಿ ನಾರ್ವೇಜಿಯನ್ಗೆ ಭಾಷಾಂತರಿಸಲ್ಪಟ್ಟಿತು. ಈ ಒಲಿಂಪಿಕ್ ಸ್ತೋತ್ರಗೀತೆಯು ಬಲವಾದ ಧಾರ್ಮಿಕ ಅನುಸ್ವರವನ್ನು ಹೊಂದಿದೆ. ಅದು ಜೂಸ್ನಿಗೆ ಒಂದು ಸ್ತೋತ್ರಗೀತೆಯೆಂದು ತಿಳಿಯಲಾಗುತ್ತದೆ. ಭಾವಗೀತೆಯು ಈ ಕೆಳಗಿನ ಹೇಳಿಕೆಗಳನ್ನು ಒಳಗೊಳ್ಳುತ್ತದೆ: “ಪ್ರಾಚೀನತೆಯ ಅಮರ ಆತ್ಮನೇ,⁄ಸತ್ಯ, ಸುಂದರ ಮತ್ತು ಒಳ್ಳೆಯದರ ಪಿತನೇ,⁄ಅವರೋಹಿಸು, ಗೋಚರಿಸು, ನಿನ್ನ ಬೆಳಕನ್ನು ನಮ್ಮ ಮೇಲೆ ಬೀರು⁄ . . . ಆ ಉದಾತ್ತ ಸ್ಪರ್ಧೆಗಳಿಗೆ ಜೀವ ಮತ್ತು ಲವಲವಿಕೆಯನ್ನು ಕೊಡು!⁄ . . . ಎಲ್ಲಾ ಜನಾಂಗಗಳೂ ನಿನ್ನನ್ನು ಆರಾಧಿಸಲು ಕಿಕ್ಕಿರಿಯುವರು,⁄ಓ ಪ್ರಾಚೀನತೆಯ ಅಮರ ಆತ್ಮನೇ!”
ತನ್ನ ಸ್ವಂತ ಒಲಿಂಪಿಕ್ ಸಮಿತಿಯ ಮೂಲಕ ನಾರ್ವೇಜಿಯನ್ ಲ್ಯೂತರನ್ ಚರ್ಚು, ವ್ಯಾಪಕವಾದ ಸಂಗೀತ ಮತ್ತು ಧಾರ್ಮಿಕ ಕಾರ್ಯಕ್ರಮಕ್ಕಾಗಿ ಏರ್ಪಾಡುಗಳನ್ನು ಮಾಡಿತು. ಎಲ್ಲಾ ಪ್ರಮುಖ ಚರ್ಚ್ ಸಂಸ್ಥೆಗಳು ಒಂದು ದೊಡ್ಡ ಮಿಶ್ರನಂಬಿಕೆಯ ಕಾರ್ಯಯೋಜನೆಯಿಂದ ಪ್ರತಿನಿಧಿಸಲ್ಪಟ್ಟಿದ್ದವು. ಅಧಿಕೃತ ಒಲಿಂಪಿಕ್ ಪಾದ್ರಿ ಮತ್ತು ಅಂತಾರಾಷ್ಟ್ರೀಯ ಹಾಗೂ ಕ್ರೈಸ್ತ ಪ್ರಪಂಚದ ಪುರೋಹಿತರ ತಂಡವು ಲಿಲಹಾಮರ್ನ ಒಲಿಂಪಿಕ್ ಗ್ರಾಮದಲ್ಲಿ ಲಭ್ಯವಿತ್ತು.
[ಪುಟ 24,25 ರಲ್ಲಿರುವಚಿತ್ರಗಳು]
ಮೇಲೆ: 10,000 ಮೀಟರ್ ಓಟದ ಪಂದ್ಯದಲ್ಲಿ ಸ್ಪೀಡ್ ಸ್ಕೇಟರನು ಚಿನ್ನದ ಪದಕಕ್ಕಾಗಿ ಮುನ್ನುಗ್ಗುತ್ತಿರುವುದು
ಮಧ್ಯ: ಫ್ರೀಸ್ಟೈಲ್ ಅಂತರಿಕ್ಷ ಚಲನೆಗಳು ಒಂದು ಹೊಸ ಒಲಿಂಪಿಕ್ ಸಂಭವವನ್ನು ಪ್ರತಿನಿಧಿಸಿದವು
ಕೆಳಗೆ: ಕೆಳ ಹಿಮಜಾರು ಪಂದ್ಯದಲ್ಲಿ ಸ್ಪರ್ಧಿಸುತ್ತಿರುವುದು—ತಾಸಿಗೆ 75 ಮೈಲುಗಳಿಗಿಂತಲೂ ಹೆಚ್ಚು ವೇಗದಲ್ಲಿ
[ಕೃಪೆ]
Photos: NTB