ಮನೋಹರವಾದ ಈ ಚಿಟ್ಟೆಗಳು ವಿಷಪೂರಿತವಾಗಿವೆಯೊ?
ದಕ್ಷಿಣ ಆಫ್ರಿಕದ ಎಚ್ಚರ! ಸುದ್ದಿಗಾರರಿಂದ
ಚಿಟ್ಟೆಯೊಂದು ರೆಕ್ಕೆಯೊದರಿ ಹಾರಾಡುವಾಗ ನೀವೆಂದಾದರೂ ಮೈಮರೆತು ಗಮನಿಸಿದ್ದೀರೊ? ಅದರ ಸೌಂದರ್ಯ, ಅದರ ವಿನ್ಯಾಸ, ಮತ್ತು ಅದರ ಬಣ್ಣದಿಂದ ನೀವು ಪ್ರಭಾವಿಸಲ್ಪಟ್ಟಿದ್ದೀರೊ? ಅದು ಹೂವಿನಿಂದ ಹೂವಿಗೆ ಹಾರಾಡುವಾಗ, ಅದು ನಿಮ್ಮನ್ನು ಗೋಳುಗುಟ್ಟಿಸುವಂತೆ ಭಾಸವಾಗುತ್ತದೆ. ಹೆಚ್ಚು ನಿಕಟವಾಗಿ ಅವಲೋಕಿಸಲು ನೀವು ಇಷ್ಟಪಡುವಿರಿ, ಬಹುಶಃ ಒಂದು ಛಾಯಾಚಿತ್ರವನ್ನು ತೆಗೆಯಲೂ ಇಷ್ಟಪಡುವಿರಿ, ಆದರೆ ಅದು ಯಾವುದೇ ಹೂವಿನ ಮೇಲೆ ಸಾಕಷ್ಟು ದೀರ್ಘ ಸಮಯದ ವರೆಗೆ ಎಂದಿಗೂ ನಿಲ್ಲುವಂತೆ ಕಾಣುವುದಿಲ್ಲ ಮತ್ತು ಅದು ಸದಾ ತನ್ನ ರೆಕ್ಕೆಗಳನ್ನು ಮೇಲಕ್ಕೆ ಮತ್ತು ಕೆಳಕ್ಕೆ ಸೆಳೆಯುತ್ತಿರುತ್ತದೆ. ಆದರೆ ಆನಂದಕರವಾದ ಈ ಜೀವಿಗಳಲ್ಲಿ ಕೆಲವು ವಿಷಪೂರಿತವಾದವುಗಳಾಗಿ ಎಣಿಸಲ್ಪಡುತ್ತವೆಂದು ನಿಮಗೆ ತಿಳಿದಿದೆಯೆ?
ಈ ಪುಟಗಳಲ್ಲಿರುವ ಎರಡರ ಕಡೆಗೂ ನಾವು ಒಂದು ನೋಟವನ್ನು ಹರಿಸೋಣ—ಅದರ ಅಗಲವಾದ ಕಪ್ಪು ಮತ್ತು ಕಿತ್ತಿಳೆ-ಕಂದು ರೆಕ್ಕೆಗಳೊಂದಿಗಿರುವುದು ಮಾನರ್ಕ್ (ಬಲಗಡೆ) ಮತ್ತು ವೈಸ್ರಾಯ್ (ಮೇಲೆ), ಇದು ಬಹುಮಟ್ಟಿಗೆ ಮಾನರ್ಕ್ಗೆ ತದ್ರೂಪದ್ದಾಗಿ ಕಾಣುತ್ತದೆ, ಆದರೆ ಅದು ಸಾಮಾನ್ಯವಾಗಿ ಹೆಚ್ಚು ಚಿಕ್ಕದ್ದಾಗಿದೆ. ಅವುಗಳನ್ನು ಯಾವುದು ವಿಷಪೂರಿತವನ್ನಾಗಿ ಮಾಡುತ್ತದೆ, ಮತ್ತು ಅದು ಯಾವ ಉದ್ದೇಶವನ್ನು ಪೂರೈಸುತ್ತದೆ?
ಚಿಟ್ಟೆಗಳಲ್ಲಿ 15,000ಕ್ಕಿಂತಲೂ ಹೆಚ್ಚಿನ ಜಾತಿಗಳಿದ್ದು, ನಮ್ಮ ತೋಟಗಳಲ್ಲಿ ನಾವು ನೋಡುವ ಲಲಿತ ರೆಕ್ಕೆಗಳ ಅದ್ಭುತಗಳಾಗಿ ಪರಿಣಮಿಸಲು ಅವು ಬೆಳವಣಿಗೆಯ ನಾಲ್ಕು ಹಂತಗಳನ್ನು ಹಾದುಹೋಗುತ್ತವೆ. ಇವುಗಳಲ್ಲಿ ಒಂದು ಲಾರ್ವ ಅಥವಾ ಕಂಬಳಿಹುಳುವಿನ ಹಂತವಾಗಿದೆ. ಮಾನರ್ಕ್ ಕಂಬಳಿಹುಳುವು, ಹಾಲಿನಂಥ ರಸವುಳ್ಳ—ವಿಷದ—ಕಾಡುಗಿಡವನ್ನು ತಿನ್ನುತ್ತದೆ, ಮತ್ತು ಹೀಗೆ ಅದು “ಒಂದು ನಿಜವಾದ ವಿಷದ ಚಿಟ್ಟೆಯಾಗಿ ಪರಿಣಮಿಸಿ, ಅದನ್ನು ತಿನ್ನುವ ಮತ್ತು ಅದನ್ನು ಹಿಂದಿರುಗಿ ವಾಂತಿಮಾಡದ ಯಾವುದೇ ಪಕ್ಷಿಗೆ ಮಾರಕವಾಗಿರುವುದು ಸಂಭವನೀಯ”ವೆಂದು ಪ್ರತಿಪಾದಿಸಲ್ಪಡುತ್ತದೆ ಎಂದು ಟಿಮ್ ವಾಕರ್ ಸೈಯನ್ಸ್ ನ್ಯೂಸ್ನಲ್ಲಿ ಹೇಳುತ್ತಾರೆ. ಆ ವಿಷವು ಕಾರ್ಡನೋಲೈಡ್, ಹೃದಯದ ವಿಷವಾಗಿದೆ. (ದ ರ್ಯಾಂಡಮ್ ಹೌಸ್ ಎನ್ಸೈಕ್ಲೊಪೀಡಿಯ) ವೈಸ್ರಾಯ್ ಚಿಟ್ಟೆಗಳ ಕುರಿತಾಗಿ ಏನು?
ವಾಕರ್ ಹೇಳುವುದು: “ಒಂದು ಶತಮಾನಕ್ಕಿಂತಲೂ ಅಧಿಕ ಸಮಯದ ವರೆಗೆ, ರೆಕ್ಕೆಗಳಿರುವ ಈ ಕೀಟವು, ವಿಷದ ಮಾನರ್ಕ್ ಚಿಟ್ಟೆಯಾದ ಡ್ಯಾನಾಸ್ ಪೆಕ್ಲ್ಸಿಪಸ್ನ ಬಣ್ಣಗಳಿಂದ ವೇಷಾಂತರಗೊಳಿಸಲ್ಪಟ್ಟು, ರುಚಿಹುಟ್ಟಿಸುವ ದೇಹವನ್ನು ಗೋಪ್ಯವಾಗಿಡುತ್ತದೆಂದು ಸಾಮಾನ್ಯವಾಗಿ ನಂಬಲಾಗಿತ್ತು.” ನೀವು ಛಾಯಾಚಿತ್ರಗಳಿಂದ ನೋಡಸಾಧ್ಯವಿರುವಂತೆ, ವೈಸ್ರಾಯ್ ಚಿಟ್ಟೆಯ ಕೆಳಗಿನ ರೆಕ್ಕೆಗಳ ಮೇಲೆ ಒಳಗಿನ ಕಪ್ಪು ಗೆರೆಯನ್ನು ಹೊರತು ಎರಡೂ ಚಿಟ್ಟೆಗಳು ತೀರ ಸಮಾನ ರೂಪದ ವಿನ್ಯಾಸಗಳನ್ನು ಹೊಂದಿವೆ. ಈ ಅರೋಚಕ ಚಿಟ್ಟೆಯಿಂದ ದೂರವಿರಿಸಿಕೊಳ್ಳಲು ಕಲಿತಿರುವ ಪಕ್ಷಿಗಳಿಂದ ಆಕ್ರಮಣಗಳನ್ನು ತಡೆಗಟ್ಟುವ ಪ್ರಯತ್ನದಿಂದಾಗಿ, ವಿಷಪೂರಿತ ಮಾನರ್ಕ್ಗೆ ತದ್ರೂಪದ ಒಂದು ರೆಕ್ಕೆಯ ವಿನ್ಯಾಸವನ್ನು ವೈಸ್ರಾಯ್ ವಿಕಸಿಸಿಕೊಂಡಿತು ಎಂದು ಕಳೆದ 100 ವರ್ಷಗಳಲ್ಲಿ, ವಿಕಾಸ ವಾದಿಗಳು ನಂಬಿದ್ದರು. ಅದು ಮಾನರ್ಕ್ ಚಿಟ್ಟೆಯನ್ನು ಹೋಲುತ್ತದೆ ಎಂಬ ವಾಸ್ತವಾಂಶದ ಹೊರತು, ವೈಸ್ರಾಯ್ ಪಕ್ಷಿಗಳಿಗೆ ರುಚಿ ಹುಟ್ಟಿಸುವಂತಹದ್ದಾಗಿತ್ತು ಎಂದು ನಂಬಲಾಗಿತ್ತು.
ತನಿಖೆಗಾರರು ಇತ್ತೀಚೆಗೆ ಏನನ್ನು ಕಂಡುಹಿಡಿದಿದ್ದಾರೆ? ವಾಕರ್ ಬರೆಯುವುದು: “ಆದಾಗ್ಯೂ, ಹೊಸ ಸಂಶೋಧನೆಯು ಸೂಚಿಸುತ್ತದೇನಂದರೆ, ವೈಸ್ರಾಯ್ ಚಿಟ್ಟೆಯು ಪಕ್ಷಿಗಳನ್ನಲ್ಲ, ವಿಜ್ಞಾನಿಗಳನ್ನು ಸಫಲವಾಗಿಯೇ ವಂಚಿಸಿದೆ. . . . ಸೂಕ್ಷ್ಮ ದೃಷ್ಟಿಯುಳ್ಳ ಪಕ್ಷಿಗಳಿಗೆ, ವೈಸ್ರಾಯ್ ಚಿಟ್ಟೆಯು ಹೊಲಸಾದ ಮಾನರ್ಕ್ನಷ್ಟೇ ಹೇಸಿಕೆಯದ್ದಾಗಿ ಕಾಣಬಲ್ಲದು ಎಂದು ಇಬ್ಬರು ಪ್ರಾಣಿ ಶಾಸ್ತ್ರಜ್ಞರು ನಿರೂಪಿಸಿದ್ದಾರೆ.” ವಿಶೇಷವಾಗಿ ವೈಸ್ರಾಯ್ ಲಾರ್ವಗಳು ವಿಷದ ಸಸ್ಯಗಳನ್ನಲ್ಲ, ವಿಷರಹಿತವಾದ ಕುರುಚಲು ಸಸ್ಯಗಳನ್ನು ತಿನ್ನುವುದಾದರೂ ಅದು ಯಾಕೆ ಅರೋಚಕವಾಗಿದೆ? ವಾಕರ್ ಬರೆಯುವುದು: “ವೈಸ್ರಾಯ್ ಚಿಟ್ಟೆಗಳು ತಮ್ಮ ಸ್ವಂತ ರಾಸಾಯನಿಕ ರಕ್ಷೆಯನ್ನು ಹೇಗೋ ತಯಾರಿಸುತ್ತವೆಂದು ಇದು ಸೂಚಿಸುತ್ತದೆ.”
ವಾಸ್ತವವಾಗಿ, ಪರಿಣತರಿಗೆ ಇನ್ನೂ ಅಧಿಕವಾದುದನ್ನು ಕಲಿಯಲಿಕ್ಕಿದೆ ಮತ್ತು ಬಹುಶಃ ತಮ್ಮ “ಸಾಂಪ್ರದಾಯಿಕ ವಿವೇಕ”ದ ಮೇಲೆ ಕಡಿಮೆ ಅವಲಂಬಿತರಾಗಿರಬೇಕು ಎಂದು ಕೀಟ ವಿಜ್ಞಾನದ ಪ್ರಸ್ತುತ ಸ್ಥಿತಿಯು ಸೂಚಿಸುತ್ತದೆ. ಮಾನರ್ಕ್ ಚಿಟ್ಟೆಯ ಮೇಲಿನ ಇತ್ತೀಚಿಗಿನ ಒಂದು ಪುಸ್ತಕದ ಕುರಿತು ವಿಮರ್ಶಕನೊಬ್ಬನು ಇದನ್ನು ಬರೆದನು: “ಮಾನರ್ಕ್ನ ಕುರಿತು ನಾವು ಹೆಚ್ಚನ್ನು ಕಲಿತಷ್ಟೂ ಭರವಸೆಯಿಂದ ‘ತಿಳಿಯುವುದು’ ಕಡಿಮೆಯಾಗುತ್ತದೆ ಎಂದು ಗಮನಾರ್ಹವಾದ ಈ ಪುಸ್ತಕವು ತೋರಿಸುತ್ತದೆ.”
ಬದಲಾಗಿ, ಅದು ಬೈಬಲು ಹೇಳುವಂತಿದೆ: “ಕರ್ತನೇ [ಯೆಹೋವನೇ, NW], ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಪ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು.”—ಪ್ರಕಟನೆ 4:11.
ಮನುಷ್ಯನು ಭೂಮಿಯ ಮೇಲಿರುವ ಎಲ್ಲಾ ರೀತಿಯ ಜೀವಗಳ ಕುರಿತು ಇನ್ನೂ ಅಧಿಕವಾದುದನ್ನು ಕಲಿಯಲಿಕ್ಕಿದೆ ಎಂಬುದು ವ್ಯಕ್ತ. ಸೃಷ್ಟಿಕರ್ತ-ವಿನ್ಯಾಸಗಾರನೊಬ್ಬನ ಕ್ರಿಯಾಶೀಲ ಪಾತ್ರವನ್ನು ಮತ್ತು ಅಸ್ತಿತ್ವವನ್ನು ಅಂಗೀಕರಿಸಲು ಅನೇಕ ವಿಜ್ಞಾನಿಗಳು ನಿರಾಕರಿಸಿರುವುದೇ ನಿಷ್ಕೃಷ್ಟ ಜ್ಞಾನಕ್ಕೆ ಒಂದು ಮೂಲಭೂತವಾದ ತಡೆಯಾಗಿದೆ. ಗಣಿತಶಾಸ್ತ್ರ ಭೌತವಿಜ್ಞಾನದ ಪ್ರೊಫೆಸರರಾದ ಪಾಲ್ ಡೇವೀಸ್, ದ ಮೈಂಡ್ ಆಫ್ ಗಾಡ್ ಎಂಬ ತಮ್ಮ ಪುಸ್ತಕದಲ್ಲಿ ಬರೆದದ್ದು: “ಅನೇಕ ವಿಜ್ಞಾನಿಗಳು ಯಾವುದೇ ರೀತಿಯ ಆಧ್ಯಾತ್ಮಿಕ . . . ವಾಗ್ವಾದಗಳನ್ನು ಮನೋಧರ್ಮಕ್ಕನುಸಾರವಾಗಿ ವಿರೋಧಿಸಿದ್ದಾರೆ. ಒಬ್ಬ ದೇವರು ಅಥವಾ ವ್ಯಕ್ತಿಸ್ವರೂಪವಿಲ್ಲದ ಸೃಷ್ಟಿಶೀಲ ನಿಯಮ ಯಾ ನಿಜತ್ವವನ್ನು ಬೆಂಬಲಿಸುವ ಒಂದು ಕಾರಕವು ಅಸ್ತಿತ್ವದಲ್ಲಿರಬಹುದು ಎಂಬುದನ್ನು ಅವರು ಧಿಕ್ಕರಿಸುತ್ತಾರೆ. . . . ವೈಯಕ್ತಿಕವಾಗಿ ನಾನು ಅವರ ತಿರಸ್ಕಾರದಲ್ಲಿ ಪಾಲ್ಗೊಳ್ಳುವುದಿಲ್ಲ. . . . ಈ ವಿಶ್ವದಲ್ಲಿ ನಮ್ಮ ಅಸ್ತಿತ್ವವು ಕೇವಲ ವಿಧಿಯ ಚಮತ್ಕಾರ, ಇತಿಹಾಸದ ಆಕಸ್ಮಿಕತೆ, ವಿಶ್ವದ ಮಹಾ ನಾಟಕದಲ್ಲಿ ಆಕಸ್ಮಿಕ ಬಿಂಬವಾಗಿದೆ ಎಂದು ನಾನು ನಂಬಲಾರೆ.”
ಕೀರ್ತನೆಗಾರ ದಾವೀದನು ಬರೆದದ್ದು: “ದುರ್ಮತಿಗಳು—ದೇವರಿಲ್ಲ [ಯೆಹೋವನು, NW]ವೆಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ; ಅವರು ಕೆಟ್ಟುಹೋದವರು; ಹೇಯಕೃತ್ಯಗಳನ್ನು ನಡಿಸುತ್ತಾರೆ. ಅವರಲ್ಲಿ ಒಳ್ಳೆಯದನ್ನು ಮಾಡುವವರೇ ಇಲ್ಲ.” ಇನ್ನೊಂದು ಕಡೆ, ಪ್ರವಾದಿಯಾದ ಯೆಶಾಯನಂತೆ ವಿವೇಕಿಯಾದ ವ್ಯಕ್ತಿಯು ಸೃಷ್ಟಿಕರ್ತನನ್ನು ದೈನ್ಯದಿಂದ ಅಂಗೀಕರಿಸುವನು: “ಆಕಾಶಮಂಡಲವನ್ನು ಸೃಷ್ಟಿಸಿದ ಯೆಹೋವನ ಮಾತನ್ನು ಕೇಳಿರಿ; ಆತನೇ ದೇವರು, ಭೂಲೋಕವನ್ನು ನಿರ್ಮಿಸಿ ರೂಪಿಸಿ ಸ್ಥಾಪಿಸಿದನು; ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು. ಈತನು ಹೀಗನ್ನುತ್ತಾನೆ—ನಾನೇ ಯೆಹೋವನು, ಇನ್ನು ಯಾವನೂ ಇಲ್ಲ.”—ಕೀರ್ತನೆ 14:1; ಯೆಶಾಯ 45:18.
[ಪುಟ 22,23 ರಲ್ಲಿರುವಚಿತ್ರಗಳು]
ಮಾನರ್ಕ್ (ಮೇಲೆ), ವೈಸ್ರಾಯ್ (ಪುಟ 22), ವೈಸ್ರಾಯ್ನ ಹಿಂದಿನ ರೆಕ್ಕೆಗಳಲ್ಲಿರುವ ಕಪ್ಪು ಗೆರೆಯು ಒಂದು ಪ್ರಮುಖ ವ್ಯತ್ಯಾಸವಾಗಿದೆ. (ಬಿಂಬಗಳು ಪ್ರಮಾಣಕ್ಕನುಸಾರವಾಗಿಲ್ಲ)