ಜಗತ್ತನ್ನು ಗಮನಿಸುವುದು
ಯುಎನ್ ಅಪಜಯ
“ಕೇವಲ ಸಂಯುಕ್ತ ರಾಷ್ಟ್ರ ಸಂಘಕ್ಕೆ ಮಾತ್ರವೇ ಅದು ಒಂದು ಅಪಜಯವಾಗಿರುವುದಿಲ್ಲ; ಅಂತಾರಾಷ್ಟ್ರೀಯ ಸಮುದಾಯಕ್ಕೇ ಅದೊಂದು ಅಪಜಯವಾಗಿದೆ. ಮತ್ತು ಈ ಅಪಜಯಕ್ಕೆ ನಾವೆಲ್ಲರೂ ಕಾರಣರಾಗಿದ್ದೇವೆ” ಎಂದು ರುಆಂಡದಲ್ಲಿನ ಹತ್ಯೆಯ ಕುರಿತು ಮಾತಾಡುತ್ತಾ, ಯುಎನ್ ಸೆಕ್ರಿಟರಿ-ಜನರಲ್ ಬೂಟ್ರೋಸ್ ಬೂಟ್ರೋಸ್-ಗಾಲಿ ಪ್ರಲಾಪಿಸಿದರು. “ಮಾಡಲ್ಪಟ್ಟದ್ದು ಒಂದು ಜನಾಂಗಹತ್ಯೆಯಾಗಿದೆ. 2,00,000ಕ್ಕಿಂತಲೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ ಮತ್ತು ಮಾಡಲ್ಪಡತಕ್ಕ ವಿಷಯದ ಕುರಿತು ಅಂತಾರಾಷ್ಟ್ರೀಯ ಸಮುದಾಯವು ಇನ್ನೂ ಚರ್ಚಿಸುತ್ತಾ ಇದೆ.” ಮೇ 26ರಂದು ವರದಿಸಲ್ಪಟ್ಟಂತೆ, ಅವರು ರಾಜ್ಯದ 30 ಪ್ರಮುಖರಿಗೆ ಪತ್ರ ಬರೆದಿದ್ದರೆಂದು ಮತ್ತು ಸೈನ್ಯದಳಗಳನ್ನು ಕಳುಹಿಸುವಂತೆ ಅವರನ್ನು ಬಿನ್ನವಿಸಿಕೊಂಡಿದ್ದರೆಂದು ಹಾಗೂ ಪರಿಹಾರವೊಂದನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಬೇರೆ ಬೇರೆ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸಿದ್ದರೆಂದು ಸೆಕ್ರಿಟರಿ-ಜನರಲ್ ಹೇಳಿದರು. “ಅಸಂತೋಷಕರವಾಗಿಯೆ, ನಾನು ಸೋತೆ. ಅದು ಒಂದು ಕಳಂಕವಾಗಿದೆ. ಅದನ್ನು ಹೇಳಲು ನಾನು ಮೊದಲಿಗನಾಗಿದ್ದೇನೆ” ಎಂದು ಅವರು ಕೂಡಿಸಿದರು. ವಿಶೇಷವಾಗಿ ಅದರ ಸ್ವಂತ ಹಣಕಾಸಿನ ತೊಂದರೆಗಳಿಂದಾಗಿ ಯುಎನ್, ವೆಚ್ಚ ತುಂಬಿಕೊಡಲು ವಿಳಂಬಿಸಿರುವುದರಿಂದ, ಕೆಲವೇ ಆಫ್ರಿಕನ್ ರಾಷ್ಟ್ರಗಳು ಸೈನ್ಯದಳಗಳನ್ನು ಕಳುಹಿಸುವ ವೆಚ್ಚಗಳನ್ನು ನಿರ್ವಹಿಸಲು ಸಮರ್ಥವಾಗಿವೆ. ಅಧಿಕಾಂಶ ಪಾಶ್ಚಾತ್ಯ ರಾಷ್ಟ್ರಗಳು ಒಳಗೂಡಲು ನಿರಾಕರಿಸಿವೆ, ಮತ್ತು ಅಮೆರಿಕನ್ ಮಿಲಿಟರಿ ಶಕ್ತಿಯನ್ನು ಉಪಯೋಗಿಸುವುದು ಅಪಾಯಕ್ಕೊಳಗಾಗಿರುವ ಅಭಿರುಚಿಗಳಿಂದ ಸಮರ್ಥಿಸಲ್ಪಟ್ಟಿಲ್ಲ ಎಂದು ಅಮೆರಿಕದ ಅಧ್ಯಕ್ಷರಾದ ಬಿಲ್ ಕ್ಲಿಂಟನ್ ಹೇಳಿದರು. ದ ನ್ಯೂ ಯಾರ್ಕ್ ಟೈಮ್ಸ್‌ಗನುಸಾರ, ಶ್ರೀ ಬೂಟ್ರೋಸ್-ಗಾಲಿ “ದಾತ ಬಳಲಿಕೆ”ಯ ಮೇಲೆ ತಪ್ಪುಹೊರಿಸಿದರು, ಏಕೆಂದರೆ ಸಿಬ್ಬಂದಿ ಮತ್ತು ಹಣವನ್ನು ಒದಗಿಸುವ ರಾಷ್ಟ್ರಗಳು ಸಂಯುಕ್ತ ರಾಷ್ಟ್ರ ಸಂಘದ 17 ವಿಭಿನ್ನ ಕಾರ್ಯಾಚರಣೆಗಳಿಗೆ ದಾನ ಕೊಡುವಂತೆ ಕೇಳಲ್ಪಟ್ಟಿವೆ. (g94 11⁄22)
ಮಾನವ ವಿವರಣೆ ಇಲ್ಲ
“ರುಆಂಡದ ಭೀತಿಗೊಳಿಸುವಂತಹ ಅನಿರೀಕ್ಷಿತ ರಕ್ತದಾಹವನ್ನು ಯಾವುದಾದರೂ ವಿವರಿಸಬಲ್ಲದೊ?” ಎಂದು ಲಂಡನಿನ ದಿ ಇಕಾನೊಮಿಸ್ಟ್ ಕೇಳುತ್ತದೆ. “ಕ್ರೂರವಾದ ಕೊಲೆಯನ್ನು ಬಹು ಕಾಲದಿಂದಿರುವ [ಕುಲ ಸಂಬಂಧವಾದ] ಹಗೆತನವು ಸಹ ವಿವರಿಸುವುದಿಲ್ಲ.” ಟೂಟ್ಸಿ ಮತ್ತು ಹೂಟೂ ಒಂದೇ ರೀತಿಯಲ್ಲಿ ಕಾಣದಿರಬಹುದಾದರೂ, ಶತಮಾನಗಳ ವರೆಗೆ ಅವರು ಒಬ್ಬರು ಇನ್ನೊಬ್ಬರ ಪಕ್ಕಪಕ್ಕದಲ್ಲಿಯೇ ಜೀವಿಸಿದ್ದಾರೆ ಮತ್ತು ಸಾಮಾನ್ಯ ಭಾಷೆಯನ್ನು ಮತ್ತು ಸಂಸ್ಕೃತಿಯನ್ನು ಹಂಚಿಕೊಂಡಿದ್ದಾರೆ. ಲೇಖನವು, ಅವರ ಕುಲಸಂಬಂಧವಾದ ವ್ಯತ್ಯಾಸವನ್ನು ಸ್ಕಾಟ್ಲೆಂಡಿನವರು ಮತ್ತು ಇಂಗ್ಲಿಷರ ನಡುವಿನ ವ್ಯತ್ಯಾಸಕ್ಕೆ ಹೋಲಿಸುತ್ತದೆ. “ಆದರೂ ಈಗ ಅವರು ಪರಸ್ಪರ ವಿರುದ್ಧವಾಗಿ ಎದ್ದಿದ್ದಾರೆ, ವ್ಯಕ್ತಿಸ್ವರೂಪವಿಲ್ಲದ ಸಣ್ಣ ಫಿರಂಗಿಗಳು ಅಥವಾ ದೂರ ವ್ಯಾಪ್ತಿಯ ರೈಫ್‌ಲ್‌ಗಳೊಂದಿಗಲ್ಲ, ಆದರೆ ಮಚ್ಚುಕತ್ತಿಗಳು, ಕಳೆಗುದ್ದಲಿಗಳು, ಗದೆಗಳು ಮತ್ತು ಬರಿಯ ಕೈಗಳಿಂದಲೇ. ನೆರೆಯವರು ನೆರೆಯವರನ್ನು—ಹಳೆಯ ಬಾಲ್ಯಾವಸ್ಥೆಯ ಸ್ನೇಹಿತರನ್ನು ಸಹ—ಕೊಂದಿದ್ದಾರೆ. ಪುರುಷರು, ಸ್ತ್ರೀಯರು ಮತ್ತು ಮಕ್ಕಳು ತದ್ರೀತಿಯಲ್ಲಿಯೇ ಹತಿಸಲ್ಪಟ್ಟಿದ್ದಾರೆ. ಏಕೆ? ಹೇಳಲು ಶಕ್ತರಾಗಿರುವವರು ಯಾರು ಇಲ್ಲದಿರುವಂತೆ ತೋರುತ್ತದೆ.” (g94 11⁄22)
ಪಕ್ಷಿ ಅಳಿವು ಎಚ್ಚರಿಕೆಗಳನ್ನು ಕೊಡುತ್ತದೆ
ಗಟಿಮ್ಟುಟ್ಟಾದ ಪಕ್ಷಿಗಳ ಜಾತಿಗಳು—ಗುಬ್ಬಚ್ಚಿಗಳು, ಮೈನಗಳು, ಕಾಗೆಗಳು—ಒರಟಾದ ಪರಿಸ್ಥಿತಿಗಳ ಕೆಳಗೆ ಪ್ರವರ್ಧಮಾನಕ್ಕೆ ಬರುವಾಗ, ಲೋಕದ ಅಧಿಕಾಂಶ ಪಕ್ಷಿಗಳು ಅಭಿವೃದ್ಧಿಗೆ ಬರುತ್ತಿಲ್ಲ. 9,600 ಪಕ್ಷಿ ಜಾತಿಗಳಲ್ಲಿ, 70 ಪ್ರತಿಶತ ಅವನತಿ ಹೊಂದುತ್ತಿವೆ ಮತ್ತು 1,000 ಜಾತಿಗಳು ಸಮೀಪ ಭವಿಷ್ಯತ್ತಿನಲ್ಲಿ ನಿರ್ಮೂಲನವನ್ನು ಎದುರಿಸಬಹುದು. “ಸಂಭವಿಸುತ್ತಿರುವ ನೇರವಾದ ನಷ್ಟಗಳ ಹೊರತೂ ಗಾಬರಿಗೊಳಿಸುವ ವಿಷಯವೇನಂದರೆ, ಇತರ ಅನೇಕ ಜೀವ ರೂಪಗಳಿಗೆ ಅಸದೃಶವಾಗಿ ಪಕ್ಷಿಗಳು, ವಿಶೇಷವಾಗಿ ಇತರ ಜಾತಿಗಳ ಆರೋಗ್ಯದ—ಮತ್ತು ಇಡೀ ಜೀವಿಪರಿಸರ ವ್ಯವಸ್ಥೆಯ—ಕುರಿತಾದ ಒಳ್ಳೆಯ ನಿರ್ದೇಶಕಗಳಾಗಿವೆ” ಎಂದು ವರ್ಲ್ಡ್ ವಾಚ್ ಪತ್ರಿಕೆ ಹೇಳುತ್ತದೆ. “ನಾವು ನೋಡುತ್ತಿರುವುದು ಆಸನ್ನವಾಗುತ್ತಿರುವ ಅವನತಿಯ ಕೇವಲ ಒಂದು ಎಚ್ಚರಿಕೆ ಆಗಿಲ್ಲ, ಬದಲಾಗಿ ಸ್ವತಃ ಅವನತಿಯ ಒಂದು ಭಾಗವೇ ಆಗಿದೆ—ಗ್ರಹದ ಸ್ವಸ್ಥತೆಯನ್ನು ಸಮತೂಕತೆಯಲ್ಲಿರಿಸುವ ಜೀವಿ ಪರಿಸರೀಯ ಜಾಲದ ಛಿದ್ರಗೊಳಿಸುವಿಕೆಯಾಗಿದೆ.” ಪ್ರಾಣಿ ಮತ್ತು ಕೀಟ ಉಪದ್ರವಕಾರಿಗಳನ್ನು ಪಕ್ಷಿಗಳು ನಿಯಂತ್ರಿಸುತ್ತವೆ, ಸಸ್ಯಗಳಿಗೆ ಪರಾಗಾಧಾನ ಮಾಡುತ್ತವೆ, ಮತ್ತು ಮರಗಳ ಬೀಜಗಳನ್ನು ಅವುಗಳ ಹಿಕ್ಕೆಯಲ್ಲಿ ಹರಡುವ ಮೂಲಕ ಮತ್ತೆ ಕಾಡನ್ನು ಬೆಳೆಸುವುದರಲ್ಲಿ ನೆರವನ್ನೀಯುತ್ತವೆ. ಆದರೆ ಮಾನವರು ಭೂ ದೃಶ್ಯವನ್ನು ಮಾರ್ಪಡಿಸಿದಂತೆ—ಕಾಡುಗಳನ್ನು ಕಡಿದು ಹಾಕುವ ಮೂಲಕ, ಹುಲ್ಲುಪ್ರದೇಶಗಳನ್ನು ಮೇಯಿಸಲು ಮತ್ತು ಉಳಲು ಉಪಯೋಗಿಸುವ ಮೂಲಕ, ತರಿ ಜಮೀನುಗಳನ್ನು ಒಣಗಿಸುವ ಮೂಲಕ, ಹಾಗೂ ಅಧಿಕ ಪ್ರಮಾಣದ ಅಣೆಕಟ್ಟು ಕಾರ್ಯಯೋಜನೆಗಳಿಂದ ಬೃಹತ್ ಕ್ಷೇತ್ರಗಳನ್ನು ನಿರ್ನಾಮಗೊಳಿಸುವ ಮೂಲಕ—ಅವುಗಳ ಜೀವಗಳು ಬೆದರಿಕೆಗೊಳಗಾಗುತ್ತವೆ ಮತ್ತು ಅವುಗಳ ಇರು ನೆಲೆಗಳು ನಾಶಪಡಿಸಲ್ಪಡುತ್ತವೆ, ಮತ್ತು ಬೇಟೆಯಾಡುವಿಕೆ, ರಾಸಾಯನಿಕಗಳ ಅಧಿಕ ಉಪಯೋಗ, ವಿಷದ ಹಿಪ್ಪೆಗಳು, ಮತ್ತು ಎಣ್ಣೆ ಸುರಿಸುವಿಕೆಗಳ ಮೂಲಕ ಅವುಗಳನ್ನು ಕೊಲ್ಲುವುದು ಇದರಲ್ಲಿ ಒಳಗೂಡಿರುವುದಿಲ್ಲ. “ಇತರ ಪ್ರಾಣಿಗಳು ಮತ್ತು ಸಸ್ಯಗಳೊಂದಿಗೆ, ಪಕ್ಷಿ ಅಳಿವುಗಳ ವೇಗವು ತ್ವರಿತವಾಗಿ ವೇಗೋತ್ಕರ್ಷಿಸುವಂತೆ ತೋರುವುದು ಸಂಭವನೀಯ” ಎಂದು ಲೇಖನವು ಗಮನಿಸುತ್ತದೆ. (g94 11⁄22)
ಹದಿವಯಸ್ಸಿನ ತಾಯಂದಿರು
ಲೋಕವ್ಯಾಪಕವಾಗಿ ಪ್ರತಿ ವರ್ಷ 15 ಮತ್ತು 20ರ ನಡುವಿನ ಒಂದೂವರೆ ಕೋಟಿ ಸ್ತ್ರೀಯರು ಜನ್ಮ ನೀಡುತ್ತಿದ್ದಾರೆ, ಎಂದು ಸಂಯುಕ್ತ ರಾಷ್ಟ್ರ ಸಂಘದ ಜನಸಂಖ್ಯಾ ನಿಧಿಯ ಒಂದು ಪತ್ರಿಕೆಯಾದ ಪೋಪೂಲೈ ಅಂದಾಜುಮಾಡುತ್ತದೆ. 15ಕ್ಕಿಂತ ಎಳೆಯರಾಗಿರುವ ಹುಡುಗಿಯರನ್ನಾಗಲಿ ಗರ್ಭಪಾತಗಳನ್ನಾಗಲಿ ಗರ್ಭಸ್ರಾವಗಳನ್ನಾಗಲಿ ಈ ಸಂಖ್ಯೆಯು ಒಳಗೊಂಡಿರುವುದಿಲ್ಲ. ಆಫ್ರಿಕವೊಂದರಲ್ಲಿಯೇ ಎಲ್ಲಾ ಸ್ತ್ರೀಯರಲ್ಲಿ ಸುಮಾರು 28 ಪ್ರತಿಶತ, ಅವರು 18 ವರ್ಷ ಪ್ರಾಯರಾಗುವುದಕ್ಕೆ ಮೊದಲೇ ಜನ್ಮ ಕೊಡುತ್ತಾರೆ. ಲೈಂಗಿಕ ವಿಷಯಗಳ ಅಜ್ಞಾನ, ಕ್ಷಿಪ್ರ ವಿವಾಹಗಳು, ಮತ್ತು ವೃದ್ಧರಾದ, ಐಶ್ವರ್ಯವಂತರಾದ ಪುರುಷರೊಂದಿಗೆ ಸಿರಿಯಪ್ಪ ಸಂಬಂಧ (ಷುಗರ್ ಡ್ಯಾಡಿ)ಗಳೊಳಗೆ ಪ್ರವೇಶಿಸುವಂತೆ ಯುವ ಸ್ತ್ರೀಯರನ್ನು ಪ್ರಚೋದಿಸುವ ಆರ್ಥಿಕ ತೊಂದರೆ ಆ ಖಂಡದಲ್ಲಿ ಹದಿವಯಸ್ಸಿನ ಗರ್ಭಧಾರಣೆಗಳು ಅಧಿಕವಾಗುತ್ತಿರುವ ಕಾರಣಗಳಾಗಿವೆ ಎಂದು ಸಂಶೋಧಕರು ಹೇಳುತ್ತಾರೆ. “ಸರಾಸರಿಯಾಗಿ, 20-34 ವರ್ಷ ವಯಸ್ಸಿನ ಸ್ತ್ರೀಯರಿಗಿಂತಲೂ, ಹದಿವಯಸ್ಸಿನ ಸ್ತ್ರೀಯರು ಗರ್ಭಧಾರಣೆಯಲ್ಲಿ ಅಥವಾ ಹೆರಿಗೆಯಲ್ಲಿ ಸಾಯುವ ಎರಡರಷ್ಟು ಅಪಾಯವನ್ನು ಎದುರಿಸುತ್ತಾರೆ ಮಾತ್ರವಲ್ಲ, ಹದಿವಯಸ್ಸಿನ ತಾಯಂದಿರ ಶಿಶುಗಳು ಸಾಯುವುದು ಸಹ ಹೆಚ್ಚು ಸಂಭವನೀಯ” ಎಂದು ಪೋಪೂಲೈ ಹೇಳುತ್ತದೆ. (g94 11⁄22)
ಕಿವುಡರಿಗಾಗಿ ಕಂಪ್ಯೂಟರ್ ಸಹಾಯ
ಹೊಸದಾಗಿ ವಿಕಸಿಸಲ್ಪಟ್ಟಿರುವ ಒಂದು ಕಂಪ್ಯೂಟರ್ ವ್ಯವಸ್ಥೆಯ ಅತಿಬೇಗನೆ ಕಿವುಡ ಜನರಿಗೆ ಸಾಮಾನ್ಯವಾಗಿ ಮಾತಾಡಲು ಕಲಿಯುವಂತೆ ಬಹುಶಃ ಸಹಾಯ ಮಾಡಬಹುದು. ಕಿವುಡರಿಗೆ, ಮಾತಾಡಲು ಕಲಿಯುವುದು ಬಹುಮಟ್ಟಿಗೆ ಪರಕೀಯ ಭಾಷೆಯೊಂದನ್ನು ಕಲಿಯುವಂತೆಯೇ ಇರುತ್ತದೆ. ಸ್ಕಾಟ್‌ಲೆಂಡ್‌ನ ಎಡಿನ್‌ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಭಾಷಾ ಯಂತ್ರ ಕಲಾಶಾಸ್ತ್ರದ ಸಂಶೋಧನಾ ಕೇಂದ್ರದಿಂದ ಈ ಕಾರ್ಯಕ್ರಮದ ವಿಕಸನವನ್ನು ಈ ಸಂಗತಿಯು ತಾನೇ ಉತ್ತೇಜಿಸಿತು. ಆ ವ್ಯವಸ್ಥೆಯ ಕಂಪ್ಯೂಟರ್, ವಿದ್ಯಾರ್ಥಿಯೊಬ್ಬನ ಮಾತನ್ನು ವಿಶೇಷ್ಲಿಸುತ್ತದೆ ಮತ್ತು ಸೂಕ್ತವಾದ ಉಚ್ಚಾರಣೆಗಾಗಿ ಎಲ್ಲಿ ತಿದ್ದಾಣಿಕೆಗಳು ಮತ್ತು ಸರಿಹೊಂದಿಸುವಿಕೆಗಳು ಅಗತ್ಯವಾಗಿವೆ ಎಂಬುದನ್ನು ತತ್‌ಕ್ಷಣವೇ ಸೂಚಿಸುತ್ತದೆ ಎಂದು ಏಜೆನ್ಸಿ ಫ್ರಾನ್ಸ್-ಪ್ರೆಸ್ ನ್ಯೂಸ್ ಸರ್ವಿಸ್ ಹೇಳುತ್ತದೆ. ಇದಕ್ಕೆ ಕೂಡಿಸಿ, ಕಿವುಡರು ಕ್ರಮೇಣ ತಮ್ಮ ಮಾತಿನ ಸರ್ವಭಾರವನ್ನು ಮತ್ತು ತಾಳಗತಿಯನ್ನು ಪ್ರಗತಿಗೊಳಿಸಲು ಸಹಾಯ ಮಾಡಲಿಕ್ಕಾಗಿ ಪಾಠಗಳ ಒಂದು ಸರಣಿಯನ್ನು ಕಾರ್ಯಕ್ರಮವು ಒಳಗೊಳ್ಳುವುದು. ಕಿವುಡ ವಿದ್ಯಾರ್ಥಿಗಳಿಗೆ ವಿದೇಶೀ ಭಾಷೆಗಳನ್ನು ಕಲಿಸಲಿಕ್ಕಾಗಿ ಸಹ ಈ ವ್ಯವಸ್ಥೆಯ ಹೊಂದಿಸಿಕೊಳ್ಳಲ್ಪಡುವುದು. (g94 11⁄22)
ಅಜ್ಜಅಜಿಯ್ಜರ ಪಾತ್ರವು ಅಧಿಕಗೊಳ್ಳುತ್ತದೆ
ಅಜ್ಜಅಜ್ಜಿಯರು, ವಿಶೇಷವಾಗಿ ಅಜ್ಜಿಯರು ತಮ್ಮ ಮೊಮ್ಮಕ್ಕಳ ಜೀವಿತಗಳಲ್ಲಿ ಅಧಿಕವಾದ ಪಾತ್ರವನ್ನು ವಹಿಸುತ್ತಿದ್ದಾರೆಂದು ಅಮೆರಿಕದಲ್ಲಿ ಅಧ್ಯಯನಗಳು ಸೂಚಿಸುತ್ತವೆ. 1931 ಮತ್ತು 1941ರ ನಡುವೆ ಜನಿಸಿದವರಲ್ಲಿ 69 ಪ್ರತಿಶತ ಅಜ್ಜಅಜಿಯ್ಜರಾಗಿದ್ದಾರೆ ಎಂದು ವೃದ್ಧಾಪ್ಯದ ಕುರಿತ ರಾಷ್ಟ್ರೀಯ ಸಂಸ್ಥೆಯಿಂದ ನಡೆಯುತ್ತಿರುವ ಅಧ್ಯಯನವು ಕಂಡುಕೊಂಡಿದೆ; ಅವರಲ್ಲಿ ಸುಮಾರು 44 ಪ್ರತಿಶತ ಮಂದಿ, ಒಬ್ಬ ಅಥವಾ ಹೆಚ್ಚು ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಾ ಒಂದು ವರ್ಷದಲ್ಲಿ 100ಕ್ಕಿಂತಲೂ ಹೆಚ್ಚು ತಾಸುಗಳನ್ನು ವ್ಯಯಿಸುತ್ತಾರೆ. ಸರಾಸರಿಯಲ್ಲಿ, ಈ ಅಜ್ಜಅಜ್ಜಿಯರು ಮಕ್ಕಳೊಂದಿಗೆ 659 ತಾಸುಗಳನ್ನು ವ್ಯಯಿಸಿದರು, ಎಂಟು ತಾಸುಗಳ 82 ದಿನಗಳಿಗೆ ಇದು ಸಮಾನವಾದದ್ದಾಗಿದೆ, ಎಂದು ದ ವಾಲ್ ಸ್ಟ್ರೀಟ್ ಜರ್ನಲ್ ಗಮನಿಸುತ್ತದೆ. ಸ್ತ್ರೀಯರು ವಾರವೊಂದಕ್ಕೆ ಸರಾಸರಿ 15ರಿಂದ 20 ತಾಸುಗಳನ್ನು ಮೊಮ್ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ ಕಳೆದರು ಮತ್ತು ಅವರು ಅಂತಹ ಪೋಷಕರಾಗಿರುವುದು ಪುರುಷರಿಗಿಂತಲೂ 2.5 ಬಾರಿ ಹೆಚ್ಚು ಸಂಭವನೀಯವಾಗಿತ್ತು. (g94 12⁄8)
ಮಕ್ಕಳ ಶಬ್ದ ಭಂಡಾರ
ಸಾಮಾನ್ಯವಾಗಿ ವಯಸ್ಕರು ಪರಿಗಣಿಸುವುದಕ್ಕಿಂತಲೂ ಮಕ್ಕಳು ಆಧುನಿಕ ಲೋಕದ ಅಹಿತಕರ ನೈಜತೆಗಳ ಕುರಿತು ಬಹಳ ಹೆಚ್ಚು ತಿಳಿದಿರಬಹುದು ಎಂದು ಇಟೆಲಿಯ ಅಧ್ಯಯನವೊಂದು ಪ್ರಕಟಿಸಿತು. ಆರರಿಂದ ಹತ್ತರ ವರೆಗಿನ ಶಾಲಾಮಕ್ಕಳಿಂದ ಬರೆಯಲ್ಪಟ್ಟ 5,000ಕ್ಕಿಂತಲೂ ಹೆಚ್ಚಿನ ಪ್ರಬಂಧಗಳನ್ನು, ಇಟೆಲಿಯ ರಾಷ್ಟ್ರೀಯ ಸಂಶೋಧನಾ ಕೇಂದ್ರದಿಂದ ಬಂದ ತಂಡವೊಂದು ಪರೀಕ್ಷಿಸಿತು. ಲಾ ರೇಪೂಬಿಕ್ಲಾ ವಾರ್ತಾಪತ್ರಕ್ಕನುಸಾರ, ವಯಸ್ಕರಿಂದ ಬರೆಯಲ್ಪಟ್ಟ ಮಕ್ಕಳ ವಾಚನ ವಿಷಯದೊಂದಿಗೆ ಅವರ 6,000-ಶಬ್ದ ಭಂಡಾರದ ಒಂದು ಹೋಲಿಕೆಯು ಪ್ರಕಟಪಡಿಸಿತೇನಂದರೆ, ಮಕ್ಕಳಿಗೆ ಕೊಡಲ್ಪಟ್ಟ “ಬಹುಮಟ್ಟಿಗೆ ಕಾಲ್ಪನಿಕವಾದ, ಸಮಸ್ಯೆಗಳಿಲ್ಲದ ಪ್ರಶಾಂತ ಲೋಕವು ಅವರನ್ನು ವಂಚಿಸಲಿಲ್ಲ.” ಪತ್ರವು ಕೂಡಿಸುವುದು: “‘ಅಮಲೌಷಧಗಳು’ ‘ಏಯ್ಡ್ಸ್’ ಮತ್ತು ‘ಬಲಾತ್ಕಾರ ಸಂಭೋಗ’ವು ಏನನ್ನು ಅರ್ಥೈಸುತ್ತವೆಂಬುದನ್ನು ಅವರು ನಿಖರವಾಗಿ ತಿಳಿದಿದ್ದಾರೆ.” “ಮಕ್ಕಳ ಬರಹಗಳ ಲೋಕವು” ವಯಸ್ಕರು ಬರೆದಿರುವ “ಅವರ ವಾಚನ ಪುಸ್ತಕಗಳಿಗಿಂತ ಕಾಲಗತಿಯೊಂದಿಗೆ ಹೆಚ್ಚು ಮುಂದುವರಿದದ್ದೂ ಹೆಚ್ಚು ಸಮಹೆಜ್ಜೆಹಾಕುವಂತಹದ್ದೂ ಆಗಿದೆ” ಎಂದು ಸಂಶೋಧಕರು ಹೇಳುತ್ತಾರೆ ಎಂದು ಕೋರೀಎರೆ ಡೇಲಾ ಸೇರಾ ಗಮನಿಸುತ್ತದೆ. (g94 12⁄8)
ವೆನಿಸ್ವೇಲದ ಹಮಿಂಗ್‌ಬರ್ಡ್ ಅಪಾಯದಲ್ಲಿ
ವೆನಿಸ್ವೇಲದಲ್ಲಿ ಹಮಿಂಗ್‌ಬರ್ಡ್‌ಗಳ ಇಪ್ಪತ್ತೆಂಟು ವಿವಿಧ ಜಾತಿಗಳು ನಿರ್ಮೂಲನದ ಅಪಾಯದಲ್ಲಿವೆ. ಇವುಗಳಲ್ಲಿ ಕೆಲವು ಲೋಕದಲ್ಲಿ ಬೇರೆಲಿಯ್ಲೂ ಕಂಡುಕೊಳ್ಳಲ್ಪಡುವುದಿಲ್ಲ. ಹಮಿಂಗ್‌ಬರ್ಡ್ ಪಕ್ಷಿಗಳು ಪಶ್ಚಿಮಾರ್ಧಗೋಳದ ಸಹಜ ನಿವಾಸಿಗಳಾಗಿದ್ದು, ಅಲಾಸ್ಕದಿಂದ ಅರ್ಜೆಂಟೀನ ಮತ್ತು ಚಿಲಿಯ ವರೆಗೆ ಕಂಡುಬರುತ್ತದೆ. ಅದು ಎರಡರಿಂದ ಒಂಬತ್ತು ಗ್ರ್ಯಾಮ್‌ಗಳಷ್ಟು ತೂಕದ್ದಾಗಿದ್ದು, ಅತಿ ಚಿಕ್ಕದ್ದು ಸುಮಾರು ಐದು ಸೆಂಟಿಮೀಟರುಗಳಷ್ಟು ಉದ್ದವಿರುವ ಬೀ ಹಮಿಂಗ್‌ಬರ್ಡ್, ಮತ್ತು ಅತಿ ದೊಡ್ಡದು, 21 ಸೆಂಟಿಮೀಟರುಗಳ ಜಯಂಟ್ ಹಮಿಂಗ್‌ಬರ್ಡ್ ಆಗಿದೆ. ವೆನಿಸ್ವೇಲದಲ್ಲಿ ಹಮಿಂಗ್‌ಬರ್ಡನ್ನು ಯಾವುದು ನಾಶಪಡಿಸುತ್ತಿದೆ? ಒಂದು ರೋಗವೊ ಅಥವಾ ಒಂದು ವೈರಿಯೊ? ಇಲ್ಲ. ಎಣ್ಣೆ ಕಂಪೆನಿ ಲಾಗೋವೆನ್‌ನಿಂದ ಪ್ರಕಾಶಿಸಲ್ಪಟ್ಟ ಒಂದು ವಾರ್ತಾಪತ್ರವಾದ ಕಾರ್ಟಾ ಎಕೊಲಾಹಿಕವು, ಅರಣ್ಯನಾಶವು—ಪಕ್ಷಿಯ ಇರು ನೆಲೆಯ ವ್ಯವಸ್ಥಿತ ನಿರ್ಮೂಲನ—ಅಪರಾಧಿಯೆಂದು ಪ್ರಕಟಿಸುತ್ತದೆ. ಮಾನವನ ಮಳೆಕಾಡುಗಳ ನಿಷ್ಕಾರುಣ್ಯ ನಾಶನದ ಅನೇಕ ಬಲಿಪಶುಗಳಲ್ಲಿ ಈ ಸಣ್ಣ, ಆಕರ್ಷಕವಾದ, ವಿವಿಧ ವರ್ಣದ ಜೀವಿಯು ಕೇವಲ ಒಂದಾಗಿದೆ. (g94 12⁄8)
ಹಾನಿಯನ್ನುಂಟುಮಾಡುವ ಹವ್ಯಾಸ ಬಹಿಷ್ಕರಿಸಲ್ಪಟ್ಟದ್ದು
ಸಿಗರೇಟಿನ ಪೊಟ್ಟಣಗಳ ಮೇಲೆ ಇರುವಂತಹ ರೀತಿಯ ಆರೋಗ್ಯ ಎಚ್ಚರಿಕೆಗಳನ್ನು ಅಡಕೆಯ ಪೊಟ್ಟಣಗಳು ಹೊಂದಿರಬೇಕು ಎಂದು ಪಾಕಿಸ್ತಾನಿನ ಸರಕಾರವು ನಿಯಮವನ್ನು ಹೊರಡಿಸಿದೆ ಎಂದು ಏಷಿಯಾವೀಕ್ ಪತ್ರಿಕೆ ವರದಿಸುತ್ತದೆ. ದಕ್ಷಿಣ ಏಷಿಯಾದಲ್ಲಿ ಲಕ್ಷಾಂತರ ಜನರು ಪಾನ್ ಮಸಾಲಾ—ಅಡಕೆ ಮತ್ತು ವಿವಿಧ ಎಣ್ಣೆಗಳು ಹಾಗೂ ಇತರ ಘಟಕಾಂಶಗಳು ಒಂದು ವೀಳ್ಯದೆಲೆಯಲ್ಲಿ ಸುತ್ತಲ್ಪಟ್ಟಿರುತ್ತವೆ—ಕ್ಕೆ ವ್ಯಸನಿಗಳಾಗಿದ್ದಾರೆ ಎಂದು ಪತ್ರಿಕೆಯು ಗಮನಿಸುತ್ತದೆ. ಇದು ಅಗಿಯುವಂತಹದ್ದಾಗಿದೆ. ಅದು ಬಾಯಿಯ ಕ್ಯಾನ್ಸರ್‌ನೊಂದಿಗೆ ಸಾಮಾನ್ಯ ಸಂಬಂಧವನ್ನು ಹೊಂದಿರುವುದರಿಂದ, ಭಾರತವು ಈಗಾಗಲೆ ಅಡಕೆಯ ಪೊಟ್ಟಣಗಳ ಮೇಲೆ ಎಚ್ಚರಿಕೆಗಳನ್ನು ಹೊರಡಿಸಿದೆ. ಮತ್ತು ಅಡಕೆಯನ್ನು ಅಗಿಯುವುದರಿಂದ ಮಕ್ಕಳು ಉಸಿರುಕಟ್ಟಿ ಸಾಯುವುದು ವಿದಿತವಾಗಿದೆ. ಐದು ವರ್ಷಗಳ ಕೆಳಗಿನ ಮಕ್ಕಳಿಗೆ ಅಡಕೆ ಮಾರುವುದನ್ನು ಪಾಕಿಸ್ತಾನಿನ ಹೊಸ ಕಾನೂನುಗಳು ನಿಷೇಧಿಸುವುವು. (g94 12⁄8)
ಹಳೆಯ ಪ್ರಯೋಜನಕಾರಿ ಸರಕು ಪೆಟ್ಟಿಗೆಗಳು
ಲೋಹದ ಚೂರುಪಾರಿನಂತೆ ದೊಡ್ಡ ಸರಕು ಪೆಟ್ಟಿಗೆಗಳನ್ನು ಎಸೆಯುವುದಕ್ಕೆ ಬದಲಾಗಿ, ಭಾರವಾದ ಸರಕುಗಳನ್ನು ಇನ್ನುಮುಂದೆ ರವಾನಿಸಲು ಅವು ತೀರ ಸವೆದಿರುವಾಗ ಅವುಗಳಿಗಾಗಿ ಚತುರವಾದ ಕೆಲವು ಉಪಯೋಗಗಳನ್ನು ದಕ್ಷಿಣ ಆಫ್ರಿಕದ ರವಾನಿಸುವ ಕಂಪೆನಿಯೊಂದು ಕಂಡುಕೊಂಡಿದೆ. ಈ ದೊಡ್ಡ ಲೋಹದ ಎರಡು ಪೆಟ್ಟಿಗೆಗಳನ್ನು ಜೋಡಿಸಿದಾಗ, ತಕ್ಕಷ್ಟು ದೊಡ್ಡ ಗಾತ್ರದ ಶಾಲಾ ತರಗತಿಕೋಣೆಯಾಗುತ್ತದೆ. ಸಹಜವಾಗಿ, ಪ್ರತಿಯೊಂದು ಪೆಟ್ಟಿಗೆಯ ಒಂದು ಪಕ್ಕವು ತೆಗೆಯಲ್ಪಡತಕ್ಕದ್ದು, ಮತ್ತು ಉಳಿದ ಭಾಗಗಳಿಗೆ ಕಿಟಕಿಗಳು ಹಾಗೂ ಬಾಗಿಲುಗಳು ಕೂಡಿಸಲ್ಪಡಬೇಕು. ಹಳೆಯ ಪೆಟ್ಟಿಗೆಗಳು ಮನೆಗಳು, ಅಂಗಡಿಗಳು, ಚಿಕಿತ್ಸಾಲಯಗಳು, ಮತ್ತು ಗ್ರಂಥಾಲಯಗಳೋಪಾದಿ ಸಹ ಕಾರ್ಯನಡಿಸಬಲ್ಲವು. ಒಂದು ವಿದ್ಯಮಾನದಲ್ಲಿ, ಆಫ್ರಿಕನ್ ಪ್ಯಾನೊರಾಮ ಪತ್ರಿಕೆಗನುಸಾರ, “ಪರಿವರ್ತಿತವಾದ 16 ಪೆಟ್ಟಿಗೆಗಳು, 1,000 ವಿದ್ಯಾರ್ಥಿಗಳಿಗೆ 8 ವಿಶಾಲ ತರಗತಿಕೋಣೆಗಳನ್ನು ಒದಗಿಸುತ್ತವೆ.” ಹೀಗೆ ದಕ್ಷಿಣ ಆಫ್ರಿಕದ ಅಗತ್ಯವಿರುವ ಸಮುದಾಯಗಳಿಗೆ ಸುಮಾರು 1,000 ಪೆಟ್ಟಿಗೆಗಳು ದೊರೆಯುವಂತೆ ಮಾಡಲ್ಪಟ್ಟಿದೆ. ಆದರೆ ಒಳಗೂಡಿರುವ ಕಂಪೆನಿಯ ಹಳೆಯ ಪೆಟ್ಟಿಗೆಗಳ ದಾಸ್ತಾನು ಮುಗಿದುಹೋಗುತ್ತಿದೆ ಮತ್ತು ಇತರ ಅಂತಾರಾಷ್ಟ್ರೀಯ ರವಾನಿಸುವ ಕಂಪೆನಿಗಳು ತಮ್ಮ ಹೆಚ್ಚಿಗೆಯ ಹಳೆಯ ಪೆಟ್ಟಿಗೆಗಳನ್ನು ಕೊಡುವಂತೆ ಅದು ಸಹಾಯಕ್ಕಾಗಿ ಕರೆನೀಡುತ್ತಿದೆ. (g94 12⁄8)