ರುಆಂಡದ ದುರಂತದ ಆಹುತಿಗಳ ಆರೈಕೆ ಮಾಡುವುದು
ಆಫ್ರಿಕದ ಮಧ್ಯ ಭಾಗದಲ್ಲಿರುವ ರುಆಂಡವು, “ಆಫ್ರಿಕದ ಸ್ವಿಟ್ಸರ್ಲೆಂಡ್” ಎಂದು ಕರೆಯಲ್ಪಟ್ಟಿದೆ. ದೇಶದ ಮೇಲಿನಿಂದ ಹಾರಿಹೋಗುವಾಗ ಜನರಿಂದ ನೋಡಲ್ಪಡುವ ಹುಲುಸಾಗಿಯೂ ಸಾರವತ್ತಾಗಿಯೂ ಇರುವ ಹಸುರು ಸಸ್ಯಗಳು ಅವರಿಗೆ ಏದೆನ್ ಉದ್ಯಾನವನದ ಭಾವನೆಯನ್ನು ಕೊಟ್ಟಿವೆ. ಅವರು ರುಆಂಡವನ್ನು ಒಂದು ಪ್ರಮೋದವನದಂತೆ ವರ್ಣಿಸುತ್ತಿದ್ದದ್ದು ಆಶ್ಚರ್ಯಕರವಾಗಿರುವುದಿಲ್ಲ.
ಒಂದಾನೊಂದು ಕಾಲದಲ್ಲಿ, ಕಡಿಯಲ್ಪಟ್ಟ ಪ್ರತಿಯೊಂದು ಮರಕ್ಕೆ ಬದಲಾಗಿ, ಎರಡು ಮರಗಳು ನೆಡಲ್ಪಡುತ್ತಿದ್ದವು. ಮತ್ತೆ ಕಾಡನ್ನು ಬೆಳೆಸಲಿಕ್ಕಾಗಿ ವರ್ಷದಲ್ಲಿ ಒಂದು ದಿನ ಮೀಸಲಾಗಿಡಲ್ಪಟ್ಟಿತು. ರಸ್ತೆಯುದ್ದಕ್ಕೂ ಹಣ್ಣಿನ ಮರಗಳು ನೆಡಲ್ಪಟ್ಟವು. ದೇಶದಲ್ಲೆಲ್ಲಾ ಪ್ರಯಾಣಿಸುವುದು ನಿರ್ಬಂಧವಿಲ್ಲದ್ದೂ ಸುಲಭವೂ ಆಗಿತ್ತು. ವಿವಿಧ ಆಡಳಿತಾಧಿಕಾರಿಗಳ ವಾಸಸ್ಥಾನಗಳಿಂದ ರಾಜಧಾನಿಯಾದ ಕಿಗಾಲಿಗೆ ಕೂಡಿಸಲ್ಪಟ್ಟ ಮುಖ್ಯ ರಸ್ತೆಗಳು ಆ್ಯಸ್ಫಾಲ್ಟ್ (ಡಾಂಬರು)ನವಾಗಿದ್ದವು. ರಾಜಧಾನಿಯು ತೀವ್ರಗತಿಯಲ್ಲಿ ಅಭಿವೃದ್ಧಿಗೊಳ್ಳುತ್ತಿತ್ತು. ತಿಂಗಳ ಕೊನೆಯಲ್ಲಿ ತನ್ನ ವೆಚ್ಚಗಳನ್ನು ಭರ್ತಿಮಾಡಲು ಸಾಕಾಗುವಷ್ಟನ್ನು ಸಾಧಾರಣಮಟ್ಟದ ಕೆಲಸಗಾರನು ಸಂಪಾದಿಸಿದನು.
ರುಆಂಡದಲ್ಲಿ ಯೆಹೋವನ ಸಾಕ್ಷಿಗಳ ಕ್ರೈಸ್ತ ಚಟುವಟಿಕೆಯು ಸಹ ಸಮೃದ್ಧವಾಗುತ್ತಿತ್ತು. ಈ ವರ್ಷದ ಆರಂಭದಲ್ಲಿ, ಕ್ಯಾತೊಲಿಕ್ ಧರ್ಮವು ಪ್ರಬಲವಾಗಿರುವ ದೇಶದ ಸುಮಾರು 80 ಲಕ್ಷ ಜನಸಂಖ್ಯೆಗೆ ಸುವಾರ್ತೆಯನ್ನು ಕೊಂಡೊಯ್ಯುವುದರಲ್ಲಿ 2,600ಕ್ಕಿಂತ ಹೆಚ್ಚು ಸಾಕ್ಷಿಗಳು ಭಾಗವಹಿಸಿದ್ದರು. (ಮತ್ತಾಯ 24:14) ಮಾರ್ಚ್ನಲ್ಲಿ ಸಾಕ್ಷಿಗಳು 10,000ಕ್ಕಿಂತಲೂ ಹೆಚ್ಚು ಬೈಬಲ್ ಅಭ್ಯಾಸಗಳನ್ನು ಜನರ ಮನೆಗಳಲ್ಲಿ ನಡೆಸುತ್ತಿದ್ದರು. ಮತ್ತು ಕಿಗಾಲಿಯ ಸುತ್ತಮುತ್ತಲೂ 15 ಸಭೆಗಳು ಇದ್ದವು.
ಯೆಹೋವನ ಸಾಕ್ಷಿಗಳ ಒಬ್ಬ ಸಂಚರಣ ಮೇಲ್ವಿಚಾರಕರು ಗಮನಿಸಿದ್ದು: “1992ರ ನವಂಬರದಲ್ಲಿ, 18 ಸಭೆಗಳಲ್ಲಿ ನಾನು ಕಾರ್ಯನಡಿಸುತ್ತಿದ್ದೆ. ಆದರೆ 1994ರ ಮಾರ್ಚ್ನಷ್ಟಕ್ಕೆ, ಇವು 27ಕ್ಕೆ ಏರಿದ್ದವು. ಪಯನೀಯರರ (ಪೂರ್ಣ ಸಮಯದ ಶುಶ್ರೂಷಕರು) ಸಂಖ್ಯೆಯು ಸಹ ಪ್ರತಿ ವರ್ಷ ಹೆಚ್ಚುತ್ತಾ ಇತ್ತು.” 1994, ಮಾರ್ಚ್ 26ರ ಶನಿವಾರದಂದು, ಕ್ರಿಸ್ತನ ಮರಣದ ಜ್ಞಾಪಕದ ಹಾಜರಿಯು 9,834 ಆಗಿತ್ತು.
ತದನಂತರ, ರುಆಂಡದಲ್ಲಿ ಸನ್ನಿವೇಶವು ಅನಿರೀಕ್ಷಿತವಾಗಿ ದುರಂತಕರವಾಗಿ ಬದಲಾಯಿತು.a
ಸ್ಥಾಪಿತ ವ್ಯವಸ್ಥೆಗೆ ಅನಿರೀಕ್ಷಿತ ಅಂತ್ಯ
1994, ಎಪ್ರಿಲ್ 6ರಂದು, ಸುಮಾರು 8 ಗಂಟೆಗೆ, ರುಆಂಡ ಮತ್ತು ಬುರುಂಡಿಯ ರಾಷ್ಟ್ರಾಧ್ಯಕ್ಷರು—ಇಬ್ಬರೂ ಹೂಟುಗಳು—ಕಿಗಾಲಿಯಲ್ಲಿ ನಡೆದ ವಿಮಾನ ಆಘಾತದಲ್ಲಿ ಕೊಲ್ಲಲ್ಪಟ್ಟರು. ಆ ರಾತ್ರಿಯಲ್ಲಿ ಪೋಲಿಸರ ಸಿಳ್ಳುಹಾಕುವಿಕೆಯು ರಾಜಧಾನಿಯಲ್ಲಿಲ್ಲಾ ಕೇಳಸಾಧ್ಯವಿತ್ತು, ಮತ್ತು ರಸ್ತೆಗಳು ತಡೆಗಟ್ಟಲ್ಪಟ್ಟಿದ್ದವು. ತದನಂತರ ಬೆಳಗಿನ ಆರಂಭದ ತಾಸುಗಳಲ್ಲಿ, ಸೈನಿಕರು ಮತ್ತು ಮಚ್ಚುಕತ್ತಿಗಳಿಂದ ಸಜ್ಜಿತರಾದ ಪುರುಷರು ಟೂಟ್ಸಿಯರಾಗಿದ್ದ ಜನರನ್ನು ಕೊಲ್ಲಲು ಆರಂಭಿಸಿದರು. ಟಾಬಾನ ಯೂಜೀನ್—ಕಿಗಾಲಿಯಲ್ಲಿ ಯೆಹೋವನ ಸಾಕ್ಷಿಗಳ ಪಟ್ಟಣದ ಮೇಲ್ವಿಚಾರಕ—ಅವನ ಹೆಂಡತಿ, ಅವನ ಮಗ, ಮತ್ತು ಅವನ ಮಗಳು ಪ್ರಥಮವಾಗಿ ಹತಿಸಲ್ಪಟ್ಟವರ ಮಧ್ಯ ಇದ್ದರು.
ಯೆಹೋವನ ಸಾಕ್ಷಿಗಳ ಒಂದು ಯೂರೋಪಿಯನ್ ಕುಟುಂಬವು, ಟೂಟ್ಸಿಗಳಾಗಿದ್ದ ಅನೇಕ ನೆರೆಯವರೊಂದಿಗೆ ಬೈಬಲನ್ನು ಅಭ್ಯಸಿಸುತ್ತಿತ್ತು. ಕ್ರೂರ ಮತ್ತು ಅನಿಯಂತ್ರಿತ ಹಂತಕರು ಮನೆಯಿಂದ ಮನೆಗೆ ಹೋದಾಗ, ಈ ನೆರೆಯವರಲ್ಲಿ ಒಂಬತ್ತು ಮಂದಿ ಯೂರೋಪಿಯನರ ಮನೆಯಲ್ಲಿ ಆಶ್ರಯವನ್ನು ಪಡೆದುಕೊಂಡರು. ನಿಮಿಷಗಳೊಳಗೆ, ವಸ್ತುಗಳನ್ನು ಅಪ್ಪಳಿಸುತ್ತಾ, ಪೀಠೋಪಕರಣಗಳನ್ನು ಉರುಳಿಸುತ್ತಾ ಸುಮಾರು 40 ಲೂಟಿಗಾರರು ಮನೆಯಲಿದ್ದರು. ದುಃಖಕರವಾಗಿ, ಟೂಟ್ಸಿ ನೆರೆಯವರು ಕೊಲ್ಲಲ್ಪಟ್ಟರು. ಆದರೂ, ಇತರರು ತಮ್ಮ ಸ್ನೇಹಿತರನ್ನು ರಕ್ಷಿಸಲಿಕ್ಕಾಗಿ ಮಾಡಿದ ತಮ್ಮ ಪ್ರಯತ್ನಗಳ ಹೊರತಾಗಿಯೂ, ತಮ್ಮ ಜೀವಗಳೊಂದಿಗೆ ಪಾರಾಗುವಂತೆ ಅನುಮತಿಸಲ್ಪಟ್ಟರು.
ಹತ್ಯೆಯು ವಾರಗಳ ವರೆಗೆ ಮುಂದುವರಿಯಿತು. ಕಟ್ಟಕಡೆಗೆ ಅಂದಾಜು ಮಾಡಲ್ಪಟ್ಟ 5,00,000 ಅಥವಾ ಹೆಚ್ಚು ರುಆಂಡದವರು ಕೊಲ್ಲಲ್ಪಟ್ಟರು. ಸಾವಿರಾರು ಮಂದಿ ತಮ್ಮ ಜೀವಗಳನ್ನು ಉಳಿಸಲು ಪಲಾಯನ ಮಾಡಿದರು—ವಿಶೇಷವಾಗಿ ಟೂಟ್ಸಿಗಳು. ಪರಿಹಾರ ಸರಬರಾಯಿಗಾಗಿರುವ ತಮ್ಮ ಆವಶ್ಯಕತೆಯನ್ನು ಯೆಹೋವನ ಸಾಕ್ಷಿಗಳ ಜಾಎರ್ ಬ್ರಾಂಚ್ ಆಫೀಸು ಫ್ರಾನ್ಸ್ನಲ್ಲಿರುವ ಸಹೋದರರಿಗೆ ತಿಳಿಯಪಡಿಸಿತು. “ಒಂದು ಪೆಟ್ಟಿಗೆ (ಕಂಟೆಯ್ನರ್) ಉಪಯೋಗಿಸಲ್ಪಟ್ಟ ಬಟ್ಟೆಗಾಗಿ ನಾವು ಕೇಳಿಕೊಂಡೆವು” ಎಂದು ಜಾಎರ್ ಬ್ರಾಂಚ್ ವಿವರಿಸುತ್ತದೆ. “ಬಹುಮಟ್ಟಿಗೆ ಹೊಸತಾದ ಬಟ್ಟೆಯ ಮತ್ತು ಷೂಗಳ ಐದು ಪೆಟ್ಟಿಗೆಗಳನ್ನು ಫ್ರಾನ್ಸ್ನಲ್ಲಿರುವ ನಮ್ಮ ಸಹೋದರರು ನಮಗೆ ಕಳುಹಿಸಿದ್ದಾರೆ.” ಜೂನ್ 11ರಂದು ಸುಮಾರು 65 ಟನ್ನುಗಳಷ್ಟು ಬಟ್ಟೆಗೆಳನ್ನು ಕಳುಹಿಸಲಾಯಿತು. ಕೆನ್ಯ ಬ್ರಾಂಚ್ ಸಹ, ಆಶ್ರಿತರಿಗೆ ಬಟ್ಟೆಗೆಳನ್ನು ಮತ್ತು ಔಷಧಗಳನ್ನು, ಹಾಗೂ ಅವರ ಸ್ಥಳೀಯ ಭಾಷೆಯಲ್ಲಿ ಕಾವಲಿನಬುರುಜು ಪತ್ರಿಕೆಗಳನ್ನು ಕಳುಹಿಸಿತು.
ಜುಲೈಯಷ್ಟಕ್ಕೆ ರುಆಂಡದ ದೇಶಭಕ್ತ ಸೇನೆಯೆಂದು ಕರೆಯಲ್ಪಟ್ಟ ಟೂಟ್ಸಿ-ಪ್ರಬಲವಾದ ಸೇನೆಗಳು, ಹೂಟು-ಪ್ರಬಲವಾದ ಸರಕಾರದ ಸೇನೆಗಳನ್ನು ಸೋಲಿಸಿದ್ದವು. ಅದಾದ ಬಳಿಕ, ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಹೂಟುಗಳು ದೇಶವನ್ನು ಬಿಟ್ಟು ಓಡಿಹೋಗಲು ಆರಂಭಿಸಿದರು. ನೆರೆಹೊರೆಯ ದೇಶಗಳಲ್ಲಿ ಅವಸರದಿಂದ ಸ್ಥಾಪಿಸಲ್ಪಟ್ಟ ಶಿಬಿರಗಳಲ್ಲಿ 20 ಲಕ್ಷ ಅಥವಾ ಹೆಚ್ಚು ರುಆಂಡದವರು ಆಶ್ರಯವನ್ನು ಪಡೆದುಕೊಂಡಂತೆ ಅವ್ಯವಸ್ಥಿತ ಸ್ಥಿತಿಯು ಫಲಿಸಿತು.
ಅವರು ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡಲು ಪ್ರಯತ್ನಿಸಿದರು
ಕಿಗಾಲಿಯಲ್ಲಿರುವ ಯೆಹೋವನ ಸಾಕ್ಷಿಗಳ ಟ್ರಾನ್ಸ್ಲೇಶನ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿಯಲ್ಲಿ ಇಬ್ಬರು—ಆನಾನೀ ಬಾಂಡಾ ಮತ್ತು ಮೂಕಾಗಿಸಾಗಾರಾ ಡನೀಜ್—ಟೂಟ್ಸಿಗಳಾಗಿದ್ದರು. ಅವರನ್ನು ರಕ್ಷಿಸಲಿಕ್ಕಾಗಿ ಹೂಟು ಸಹೋದರರ ಪ್ರಯತ್ನಗಳು ಕೆಲವು ವಾರಗಳ ವರೆಗೆ ಯಶಸ್ವಿಯಾದವು. ಆದರೆ 1994ರ ಮೇ ತಿಂಗಳ ಅಂತ್ಯದಲ್ಲಿ ಈ ಇಬ್ಬರು ಸಾಕ್ಷಿಗಳು ಕೊಲ್ಲಲ್ಪಟ್ಟರು.
ತಮ್ಮ ಸ್ವಂತ ಜೀವಗಳನ್ನು ಅಪಾಯಕ್ಕೀಡುಮಾಡಿ—ಬಲಿಗೀಡುಮಾಡಿ ಸಹ—ಯೆಹೋವನ ಸಾಕ್ಷಿಗಳು ಒಂದು ಭಿನ್ನವಾದ ಕುಲದ ಹಿನ್ನೆಲೆಯ ಜೊತೆ ಕ್ರೈಸ್ತರನ್ನು ಸಂರಕ್ಷಿಸಲು ಪ್ರಯತ್ನಿಸಿದರು. (ಯೋಹಾನ 13:34, 35; 15:13) ಉದಾಹರಣೆಗೆ, ಮೂಕಾಬಾಲೀಸ ಶಾಂಟಾಲ್ ಒಬ್ಬ ಟೂಟ್ಸಿಯಾಗಿದ್ದಳು. ಅವಳು ನೆಲೆಸಿದ್ದಂತಹ ಕ್ರೀಡಾಂಗಣದಲ್ಲಿ ಹೂಟುಗಳಿಗಾಗಿ ರುಆಂಡದ ದೇಶಭಕ್ತ ಸೇನೆಯ ಸದಸ್ಯರು ಹುಡುಕುತ್ತಿದ್ದಾಗ, ಅವಳು ತನ್ನ ಹೂಟು ಸ್ನೇಹಿತರ ಪರವಾಗಿ ಅಡ್ಡಬಂದಳು. ಅವಳ ಪ್ರಯತ್ನದಿಂದ ದಂಗೆಕೋರರು ಕೋಪಗೊಂಡಿದ್ದರೂ, ಒಬ್ಬನು ಉದ್ಗರಿಸಿದು: “ನೀವು ಯೆಹೋವನ ಸಾಕ್ಷಿಗಳು ನಿಜವಾಗಿ ಒಂದು ಬಲವಾದ ಸಹೋದರತ್ವವನ್ನು ಹೊಂದಿದ್ದೀರಿ. ನಿಮ್ಮ ಧರ್ಮವು ಅತ್ಯುತ್ತಮವಾದದ್ದಾಗಿದೆ!”
ಕುಲಸಂಬಂಧವಾದ ದ್ವೇಷದಿಂದ ಸ್ವತತ್ರರಾಗಿರಿಸಿಕೊಳ್ಳುವುದು
ಇದು ಆಫ್ರಿಕದ ಈ ಕ್ಷೇತ್ರದಲ್ಲಿ ನೂರಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಕುಲಸಂಬಂಧವಾದ ದ್ವೇಷಗಳಿಗೆ ಯೆಹೋವನ ಸಾಕ್ಷಿಗಳು ಸಂಪೂರ್ಣವಾಗಿ ವಿನಾಯಿತಿ ಪಡೆದಿದ್ದಾರೆ ಎಂಬುದಾಗಿ ಹೇಳಲಿಕ್ಕಲ್ಲ. ಪರಿಹಾರ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದ, ಫ್ರಾನ್ಸ್ನಿಂದ ಬಂದ ಸಾಕ್ಷಿಯೊಬ್ಬನು ದಾಖಲಿಸಿದ್ದು: “ವಿವರಿಸಲು ಅಸಾಧ್ಯವಾಗಿರುವ ಹತ್ಯೆಗಳಿಗೆ ಕಾರಣವಾಗಿರುವ ದ್ವೇಷದಿಂದ ಕಲುಷಿತರಾಗುವುದನ್ನು ತಡೆಯಲಿಕ್ಕಾಗಿ ನಮ್ಮ ಕ್ರೈಸ್ತ ಸಹೋದರರೂ ಮಹತ್ತಾದ ಪ್ರಯತ್ನವನ್ನು ಪ್ರಯೋಗಿಸಬೇಕು.
“ತಮ್ಮ ಕಣ್ಣುಗಳ ಮುಂದೆಯೇ ಅವರ ಕುಟುಂಬಗಳು ಹತಿಸಲ್ಪಟ್ಟದ್ದನ್ನು ಕಂಡಂತಹ ಸಹೋದರರನ್ನು ನಾವು ಭೇಟಿಮಾಡಿದೆವು. ಉದಾಹರಣೆಗೆ, ಒಬ್ಬ ಕ್ರೈಸ್ತ ಸ್ತ್ರೀಯ ಗಂಡನು ಕೊಲ್ಲಲ್ಪಟ್ಟಾಗ, ಅವಳು ವಿವಾಹವಾಗಿ ಕೇವಲ ಎರಡು ದಿವಸಗಳಾಗಿದ್ದವು. ಕೆಲವು ಸಾಕ್ಷಿಗಳು ತಮ್ಮ ಮಕ್ಕಳು ಮತ್ತು ಹೆತ್ತವರು ಕೊಲ್ಲಲ್ಪಟ್ಟದ್ದನ್ನು ನೋಡಿದರು. ಈಗ ಯುಗಾಂಡದಲ್ಲಿರುವ ಒಬ್ಬ ಸಹೋದರಿಯು, ತನ್ನ ಗಂಡನನ್ನು ಒಳಗೊಂಡು, ಅವಳ ಇಡೀ ಕುಟುಂಬವು ಹತಿಸಲ್ಪಟ್ಟದ್ದನ್ನು ನೋಡಿದಳು. ಯೆಹೋವನ ಸಾಕ್ಷಿಗಳ ಪ್ರತಿಯೊಂದು ಕುಟುಂಬಕ್ಕೆ ತಟ್ಟಿರುವ, ಭಾವನಾತ್ಮಕ ಹಾಗೂ ಶಾರೀರಿಕ ಕಷ್ಟಾನುಭವವನ್ನು ಇದು ಎತ್ತಿತೋರಿಸುತ್ತದೆ.”
ಕುಲಸಂಬಂಧವಾದ ಹಿಂಸಾಕೃತ್ಯದಲ್ಲಿ ಒಟ್ಟಿಗೆ ಸುಮಾರು 400 ಸಾಕ್ಷಿಗಳು ಕೊಲ್ಲಲ್ಪಟ್ಟರು. ಆದರೂ ಇವರಲ್ಲಿ ಯಾರೊಬ್ಬರೂ ಜೊತೆ ಸಾಕ್ಷಿಗಳಿಂದ ಕೊಲ್ಲಲ್ಪಡಲಿಲ್ಲ. ಆದರೂ, ರೋಮನ್ ಕ್ಯಾತೊಲಿಕ್ ಮತ್ತು ಪ್ರಾಟೆಸ್ಟಂಟ್ ಚರ್ಚುಗಳ ಟೂಟ್ಸಿ ಮತ್ತು ಹೂಟು ಸದಸ್ಯರು ಸಾವಿರಗಟ್ಟಲೆಯಲ್ಲಿ ಹತ್ಯೆಗೈದರು. ಸಮರ್ಪಕವಾಗಿ ದಾಖಲಿಸಲ್ಪಟ್ಟಿರುವಂತೆ, ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳು ಯಾವುದೇ ರೀತಿಯ ಯುದ್ಧಗಳು, ಕ್ರಾಂತಿಗಳು, ಅಥವಾ ಈ ಲೋಕದ ಅಂತಹ ಇತರ ಯಾವುದೇ ಹೋರಾಟಗಳಲ್ಲಿ ಭಾಗವನ್ನು ತೆಗೆದುಕೊಳ್ಳುವುದಿಲ್ಲ.—ಯೋಹಾನ 17:14, 16; 18:36; ಪ್ರಕಟನೆ 12:9.
ವರ್ಣನಾತೀತ ಕಷ್ಟಾನುಭವ
ಈ ಕಳೆದ ಬೇಸಿಗೆಯಲ್ಲಿ, ಬಹುಮಟ್ಟಿಗೆ ನಂಬಲಸಾಧ್ಯವಾದ ಮಾನವ ಕಷ್ಟಾನುಭವವನ್ನು ಲೋಕವ್ಯಾಪಕವಾಗಿ ಜನರು ಚಲನಚಿತ್ರಗಳು ಮತ್ತು ಚಿತ್ರಗಳಲ್ಲಿ ನೋಡಲು ಶಕ್ತರಾದರು. ರುಆಂಡದ ನೂರಾರು ಸಾವಿರ ಆಶ್ರಿತರು ನೆರೆಹೊರೆಯ ದೇಶಗಳಿಗೆ ಪ್ರವಾಹದಂತೆ ಬರುತ್ತಿದ್ದುದನ್ನು ಮತ್ತು ಅಲ್ಲಿ ನೈರ್ಮಲ್ಯವಿಲ್ಲದ ಪರಿಸ್ಥಿತಿಗಳ ಕೆಳಗೆ ನೆಲೆಸುತ್ತಿದ್ದುದನ್ನು ನೋಡಲಾಯಿತು. ಫ್ರಾನ್ಸ್ನ ಪರಿಹಾರ ಮಂಡಲಿಯಲ್ಲಿದ್ದ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನು, ಜುಲೈ 30ರಂದು ತನ್ನ ಪ್ರತಿನಿಧಿಗಳ ತಂಡವು ನೋಡಿದ ಸನ್ನಿವೇಶವನ್ನು ಹೀಗೆ ವಿವರಿಸುತ್ತಾನೆ.
“ಸಂಪೂರ್ಣ ಭಯಭ್ರಾಂತ ದೃಶ್ಯಗಳನ್ನು ನಾವು ಎದುರಿಸಿದೆವು. ಅನೇಕ ಕಿಲೊಮೀಟರುಗಳ ವರೆಗೆ ಮೃತ ದೇಹಗಳು ರಸ್ತೆಯಲ್ಲಿ ಸಾಲುಗಟ್ಟಿದ್ದವು. ಸಾಮುದಾಯಿಕ ಸಮಾಧಿಗಳು ಸಾವಿರಾರು ಶವಗಳಿಂದ ತುಂಬಲ್ಪಟ್ಟಿದ್ದವು. ಮೃತ ದೇಹಗಳ ಪಕ್ಕದಲ್ಲಿಯೇ ಆಡುತ್ತಿದ್ದ ಮಕ್ಕಳಿದ್ದ, ಕ್ಷೋಭೆಗೊಂಡ ಜನಸಮೂಹದ ಮೂಲಕ ನಾವು ಹಾದುಹೋದಂತೆ ಬಂದ ದುರ್ವಾಸನೆಯು ಸಹಿಸಲಸಾಧ್ಯವಾಗಿತ್ತು. ಯಾರ ಮಕ್ಕಳು ಇನ್ನೂ ಬದುಕಿದ್ದು, ಹೆತ್ತವರ ಬೆನ್ನಿಗೆ ಅಂಟಿಕೊಂಡಿದ್ದವೋ, ಅಂತಹ ಹೆತ್ತವರ ಶವಗಳು ಅಲ್ಲಿದ್ದವು. ಅನೇಕಾನೇಕ ಬಾರಿ ಪುನರುತ್ಪತ್ತಿಯಾದ ಅಂತಹ ದೃಶ್ಯಗಳು ಒಂದು ಆಳವಾದ ಪ್ರಭಾವವನ್ನು ಬಿಟ್ಟುಹೋಗುತ್ತವೆ. ಸಂಪೂರ್ಣ ನಿಸ್ಸಹಾಯಕ ಭಾವನೆಯಿಂದ ವ್ಯಕ್ತಿಯೊಬ್ಬನು ಪೂರ್ತಿಯಾಗಿ ಆವರಿಸಲ್ಪಡುತ್ತಾನೆ, ಮತ್ತು ಭಯಂಕರತೆ ಹಾಗೂ ಶೂನ್ಯಸ್ಥಿತಿಯ ವಿಸ್ತಾರ್ಯದಿಂದ ಅವನು ಪ್ರಚೋದಿತನಾಗದೆ ಇರಸಾಧ್ಯವಿಲ್ಲ.”
ಜುಲೈಯ ಮಧ್ಯದಲ್ಲಿ ಜಾಎರ್ಗೆ ಹತ್ತಾರು ಸಾವಿರ ಸಂಖ್ಯೆಯಲ್ಲಿ ಆಶ್ರಿತರು ಪ್ರವಾಹದಂತೆ ಬರುತ್ತಿರುವಾಗ, ಜಾಎರ್ನಲ್ಲಿರುವ ಸಾಕ್ಷಿಗಳು ಗಡಿ ಪ್ರದೇಶಕ್ಕೆ ಹೋದರು ಮತ್ತು ತಮ್ಮ ಕ್ರೈಸ್ತ ಸಹೋದರರು ಮತ್ತು ಆಸಕ್ತರು ಅವರನ್ನು ಗುರುತಿಸಸಾಧ್ಯವಾಗುವಂತೆ ತಮ್ಮ ಬೈಬಲ್ ಪ್ರಕಾಶನಗಳನ್ನು ಎತ್ತಿಹಿಡಿದರು. ಬಳಿಕ ರುಆಂಡದ ಆಶ್ರಿತ ಸಾಕ್ಷಿಗಳನ್ನು ಒಟ್ಟುಗೂಡಿಸಲಾಯಿತು ಮತ್ತು ಅವರಿಗೆ ಎಲ್ಲಿ ಪರಾಮರಿಕೆಯನ್ನು ಒದಗಿಸಲಾಯಿತೋ ಆ ಸಮೀಪದ ಗೋಮದಲ್ಲಿರುವ ರಾಜ್ಯ ಸಭಾಗೃಹಗಳಿಗೆ ಕೊಂಡೊಯ್ಯಲಾಯಿತು. ಸಾಕಷ್ಟು ಔಷಧಗಳು ಮತ್ತು ಸೂಕ್ತವಾದ ಸೌಕರ್ಯಗಳ ಕೊರತೆಯಿದ್ದಾಗ್ಯೂ, ಅಸ್ವಸ್ಥ ಜನರ ಸಂಕಟವನ್ನು ಕಡಿಮೆಗೊಳಿಸಲು ವೈದ್ಯಕೀಯ ಅನುಭವವಿದ್ದ ಸಾಕ್ಷಿಗಳು ಕಠಿನವಾಗಿ ಶ್ರಮಿಸಿದರು.
ಕಷ್ಟಾನುಭವಕ್ಕೆ ಶೀಘ್ರ ಪ್ರತಿಕ್ರಿಯೆ
ಜುಲೈ 22ರ ಶುಕ್ರವಾರದಂದು, ಫ್ರಾನ್ಸ್ನಲ್ಲಿರುವ ಯೆಹೋವನ ಸಾಕ್ಷಿಗಳಿಗೆ ಆಫ್ರಿಕದಿಂದ ಸಹಾಯ ಕೋರಿ ಕಳುಹಿಸಿದ ಫ್ಯಾಕ್ಸ್ ಸಿಕ್ಕಿತು. ರುಆಂಡದಿಂದ ಪಲಾಯನಮಾಡುತ್ತಿರುವ ಅವರ ಕ್ರೈಸ್ತ ಸಹೋದರರ ಭೀಕರ ಅವಸ್ಥೆಯನ್ನು ಅದು ವಿವರಿಸಿತು. ಪತ್ರವನ್ನು ಪಡೆದುಕೊಂಡ ಐದು ಅಥವಾ ಹತ್ತು ನಿಮಿಷಗಳೊಳಗೆ, ಒಂದು ಸರಕು ವಿಮಾನವನ್ನು ಪರಿಹಾರ ಸರಬರಾಯಿಗಳಿಂದ ತುಂಬಿಸಲು ಸಹೋದರರು ನಿರ್ಧರಿಸಿದರು. ಇದು ವಾರಾಂತ್ಯದ ತೀವ್ರವಾದ ಒಂದು ತಯಾರಿಗೆ ಮುನ್ನಡೆಸಿತು, ವಿಶೇಷವಾಗಿ ಅಂತಹ ಬೃಹತ್ ಪರಿಹಾರ ಪ್ರಯತ್ನವನ್ನು ಸ್ವಲ್ಪ ಸಮಯದಲ್ಲಿ ವ್ಯವಸ್ಥಾಪಿಸುವುದರಲ್ಲಿ ಅವರ ಅನುಭವದ ಸಂಪೂರ್ಣವಾದ ಕೊರತೆಯ ದೃಷ್ಟಿಯಲ್ಲಿ, ಅದು ಗಮನಾರ್ಹವಾದದ್ದಾಗಿತ್ತು.
ಪರಿಹಾರ ನಿಧಿಗಾಗಿದ್ದ ಆವಶ್ಯಕತೆಗೆ ಮಹತ್ತರವಾದ ಪ್ರತಿಕ್ರಿಯೆ ಇತ್ತು. ಫ್ರಾನ್ಸ್ನ ಬೆಲ್ಜಿಯಮ್ ಮತ್ತು ಸ್ವಿಟ್ಸರ್ಲೆಂಡ್ನ ಸಾಕ್ಷಿಗಳೇ 16,00,000ಕ್ಕಿಂತಲೂ ಹೆಚ್ಚಿನ ಡಾಲರುಗಳನ್ನು ದಾನವಾಗಿ ನೀಡಿದರು. ಆಹಾರ, ಔಷಧ, ಮತ್ತು ರಕ್ಷಕ ಸಾಧನಗಳನ್ನು ಒಳಗೊಂಡ ಪರಿಹಾರ ಸಾಧನಗಳನ್ನು ಪಡೆದುಕೊಳ್ಳಲಾಯಿತು, ಮತ್ತು ಫ್ರಾನ್ಸ್ನ ಲೂವೀಎಯಲ್ಲಿರುವ ಯೆಹೋವನ ಸಾಕ್ಷಿಗಳ ಸೌಕರ್ಯಗಳಲ್ಲಿ ಎಲ್ಲವನ್ನೂ ಬಾಕ್ಸ್ಗಳಲ್ಲಿ ಹಾಕಿ ಗುರುತು ಪಟ್ಟಿಯನ್ನು ಅಂಟಿಸಲಾಯಿತು. ಬೆಲ್ಜಿಯಮ್ನ ಆಸ್ಟೆಂಡ್ಗೆ ತಲಪಿಸಲಿಕ್ಕಾಗಿ ಸರಕನ್ನು ರವಾನೆಗಾಗಿ ಭರ್ತಿಮಾಡಲು ಸಾಕ್ಷಿಗಳು ಹಗಲುರಾತ್ರಿ ಕೆಲಸ ಮಾಡಿದರು. ಅಲ್ಲಿನ ವಿಮಾನ ನಿಲ್ದಾಣದಲ್ಲಿ ಜುಲೈ 27ರ ಬುಧವಾರದಂದು, 35 ಟನ್ನುಗಳನ್ನು ಸರಕು ವಿಮಾನಕ್ಕೆ ತುಂಬಿಸಲಾಯಿತು. ಮಾರನೆಯ ದಿನ ಮುಖ್ಯವಾಗಿ ವೈದ್ಯಕೀಯ ಸರಬರಾಯಿಗಳಿದ್ದ ಒಂದು ಸಣ್ಣ ರವಾನೆ ಸರಕು ಕಳುಹಿಸಲ್ಪಟ್ಟಿತು. ಎರಡು ದಿನಗಳ ಬಳಿಕ ಶನಿವಾರದಂದು, ಆಹುತಿಗಳಿಗಾಗಿ ಹೆಚ್ಚು ವೈದ್ಯಕೀಯ ಸರಬರಾಯಿಗಳನ್ನು ಇನ್ನೊಂದು ವಿಮಾನವು ಕೊಂಡೊಯ್ಯಿತು.
ಒಬ್ಬ ವೈದ್ಯಕೀಯ ಡಾಕ್ಟರ್ನನ್ನು ಒಳಗೊಂಡು ಫ್ರಾನ್ಸಿನ ಸಾಕ್ಷಿಗಳು ಗೋಮಕ್ಕೆ—ದೊಡ್ಡ ರವಾನೆ ಸರಕಿಗಿಂತ ಮುಂದಾಗಿಯೇ—ಹೋದರು. ಜುಲೈ 25ರ ಸೋಮವಾರದಂದು, ಡಾ. ಆನ್ರಿ ಟಾಲೆಟ್ ಗೋಮಕ್ಕೆ ಆಗಮಿಸಿದಾಗ, ಕಾಲರದಿಂದ ಸುಮಾರು 20 ಸಾಕ್ಷಿಗಳು ಈಗಾಗಲೇ ಮರಣ ಹೊಂದಿದ್ದರು, ಮತ್ತು ಇತರರು ದಿನಾಲೂ ಸಾಯುತ್ತಿದ್ದರು. ಸುಮಾರು 250 ಕಿಲೊಮೀಟರ್ ದೂರದ, ಬುರುಂಡಿಯ ಬೂಜಂಬೂರದ ಮಾರ್ಗವಾಗಿ ರವಾನೆ ಸರಕನ್ನು ತಲಪಿಸಬೇಕಾಗಿದದ್ದರಿಂದ ಅದು ಜುಲೈ 29, ಶುಕ್ರವಾರ ಬೆಳಗ್ಗಿನ ತನಕ ಗೋಮಕ್ಕೆ ಬಂದು ಮುಟ್ಟಿರಲಿಲ್ಲ.
ರೋಗವನ್ನು ನಿಭಾಯಿಸುವುದು
ಈ ಮಧ್ಯೆ, ಗೋಮದಲ್ಲಿರುವ ಸಣ್ಣ ರಾಜ್ಯ ಸಭಾಗೃಹವು ಇದ್ದಂತಹ ತುಂಡುನೆಲದ ಮೇಲೆ, ಸುಮಾರು 1,600 ಸಾಕ್ಷಿಗಳು ಮತ್ತು ಅವರ ಸ್ನೇಹಿತರನ್ನು ತುಂಬಿಸಲಾಗಿತ್ತು. ಈ ಎಲ್ಲಾ ಜನರಿಗೆ ಒಂದೇ ಪಾಯಖಾನೆ ಅಲ್ಲಿತ್ತು, ನೀರು ಇರಲಿಲ್ಲ, ಮತ್ತು ತೀರ ಸ್ವಲ್ಪ ಆಹಾರವಿತ್ತು. ಕಾಲರದಿಂದ ಸೋಂಕಿತರಾದ ಡಜನ್ಗಟ್ಟಲೆ ಜನರು ರಾಜ್ಯ ಸಭಾಗೃಹದಲ್ಲಿ ತುಂಬಿದ್ದರು. ಮರಣ ನಷ್ಟವು ಹೆಚ್ಚಾಗುತ್ತಾ ಹೋಗುತ್ತಿತ್ತು.
ಕಾಲರವು ವ್ಯಕ್ತಿಯೊಬ್ಬನನ್ನು ಸಂಪೂರ್ಣವಾಗಿ ನಿರ್ಜಲೀಕರಿಸುತ್ತದೆ. ಕಣ್ಣುಗಳು ನಿಸ್ತೇಜವಾಗುತ್ತವೆ ಮತ್ತು ತದನಂತರ ಮೇಲಕ್ಕೆ ಹೊರಳುತ್ತವೆ. ಪುನರ್ಜಲ ಸಂಯೋಗ ಚಿಕಿತ್ಸೆಯನ್ನು ಸಕಾಲದಲ್ಲಿ ಆರಂಭಿಸುವುದಾದರೆ, ವ್ಯಕ್ತಿಯು ಎರಡು ದಿನಗಳಲ್ಲಿ ಚೇತರಿಸಿಕೊಳ್ಳುತ್ತಾನೆ. ಆದುದರಿಂದ, ಲಭ್ಯವಿದ್ದ ಸ್ವಲ್ಪ ಔಷಧದಿಂದ ಸಹೋದರರಿಗೆ ಪುನರ್ಜಲ ಸಂಯೋಗ ಮಾಡುವ ಪ್ರಯತ್ನಗಳು ಆ ಕೂಡಲೆ ಮಾಡಲ್ಪಟ್ಟವು.
ಇದರೊಂದಿಗೆ, ಅಸ್ವಸ್ಥರನ್ನು ಪ್ರತ್ಯೇಕಿಸಲು ಮತ್ತು ಅವರು ಇತರರನ್ನು ಕಲುಷಿತಗೊಳಿಸುವುದನ್ನು ತಡೆಗಟ್ಟಲು ಸಹೋದರರು ಪ್ರಯತ್ನಿಸಿದರು. ಗೋಮದ ಭೀಕರ ಪರಿಸ್ಥಿತಿಗಳಿಂದ ಆಶ್ರಿತರನ್ನು ದೂರಕ್ಕೆ ಸ್ಥಳಾಂತರಿಸಲು ಅವರು ಪ್ರಯತ್ನಿಸಿದರು. ಗಾಳಿಯಲ್ಲಿ ದಟ್ಟವಾಗಿ ಹರಡಿಕೊಂಡಿದ್ದ, ಶವಗಳ ದುರ್ವಾಸನೆ ಮತ್ತು ಧೂಳಿನಿಂದ ದೂರವಾಗಿ, ಕೀವೂ ಸರೋವರದ ಬಳಿ ಸೂಕ್ತವಾದ ಒಂದು ನೆಲೆಯನ್ನು ಕಂಡುಹಿಡಿಯಲಾಯಿತು.
ಪಾಯಖಾನೆಗಳು ಅಗೆಯಲ್ಪಟ್ಟವು, ಮತ್ತು ಕಟ್ಟುನಿಟ್ಟಾದ ಆರೋಗ್ಯ ಸೂತ್ರಗಳು ವಿಧಿಸಲ್ಪಟ್ಟವು. ಪಾಯಖಾನೆಗೆ ಹೋದ ಬಳಿಕ ಬ್ಲೀಚ್ ಮತ್ತು ನೀರಿನ ಬಟ್ಟಲಿನಲ್ಲಿ ಒಬ್ಬನ ಕೈಗಳನ್ನು ತೊಳೆಯುವುದೂ ಇವುಗಳಲ್ಲಿ ಒಳಗೊಂಡಿತ್ತು. ಈ ಸೂತ್ರಗಳ ಪ್ರಮುಖತೆಯನ್ನು ಒತ್ತಿಹೇಳಲಾಯಿತು ಮತ್ತು ಜನರು ಅವರಿಂದ ಏನನ್ನು ಅಗತ್ಯಪಡಿಸಲಾಗಿತ್ತೋ ಅದನ್ನು ಅಂಗೀಕರಿಸಿದರು. ಆ ಮಾರಕ ರೋಗದ ಹಬ್ಬುವಿಕೆಯು ಬೇಗನೆ ಕಡಿಮೆಯಾಯಿತು.
ಜುಲೈ 29ರ ಶುಕ್ರವಾರದಂದು ಪರಿಹಾರ ಸರಬರಾಯಿಯ ದೊಡ್ಡ ರವಾನೆ ಸರಕು ಆಗಮಿಸಿದಾಗ, ಗೋಮದ ರಾಜ್ಯ ಸಭಾಗೃಹದಲ್ಲಿ ಒಂದು ಚಿಕ್ಕ ಆಸ್ಪತ್ರೆಯನ್ನು ಸ್ಥಾಪಿಸಲಾಯಿತು. ಸುಮಾರು 60 ಕ್ಯಾಂಪುಹಾಸಿಗೆಗಳನ್ನು ಹಾಗೂ ಜಲ ಶುದ್ಧೀಕರಣ ವ್ಯವಸ್ಥೆಯನ್ನು ಒದಗಿಸಲಾಯಿತು. ಇದಕ್ಕೆ ಕೂಡಿಸಿ, ಕೀವೂ ಸರೋವರದ ದಡದಲ್ಲಿ ನೆಲೆಸಿದ್ದ ಸಾಕ್ಷಿಗಳಿಗೆ ಡೇರೆಗಳನ್ನು ಕೊಂಡೊಯ್ಯಲಾಯಿತು. ಅಲ್ಪ ಅವಧಿಯಲ್ಲಿಯೇ, ಅವರು ನೀಟಾದ, ವ್ಯವಸ್ಥಿತ ಸಾಲುಗಳಲ್ಲಿ 50 ಡೇರೆಗಳನ್ನು ಸ್ಥಾಪಿಸಿದರು.
ಒಮ್ಮೆ ಸುಮಾರು 150 ಸಾಕ್ಷಿಗಳು ಮತ್ತು ಅವರ ಸ್ನೇಹಿತರು ಗುರುತರವಾಗಿ ಅಸ್ವಸ್ಥರಾಗಿದ್ದರು. ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಅವರಲ್ಲಿ 40ಕ್ಕಿಂತಲೂ ಹೆಚ್ಚು ಮಂದಿ ಗೋಮದಲ್ಲಿ ಸತ್ತರು. ಆದರೆ ಅನೇಕ ಜೀವಗಳನ್ನು ಕಾಪಾಡಲು ಮತ್ತು ಮಹತ್ತರವಾದ ಕಷ್ಟಾನುಭವವನ್ನು ನಿಲ್ಲಿಸಲು ವೈದ್ಯಕೀಯ ಸರಬರಾಯಿಗಳು ಮತ್ತು ಸಹಾಯವು ಸಕಾಲದಲ್ಲಿ ಆಗಮಿಸಿದವು.
ಕೃತಜ್ಞತೆಯುಳ್ಳ, ಆತ್ಮಿಕ ಜನರು
ಆಶ್ರಿತ ಸಾಕ್ಷಿಗಳು ಅವರಿಗಾಗಿ ಮಾಡಲಾದ ಎಲ್ಲಾ ವಿಷಯಗಳಿಗಾಗಿ ವಿಪರೀತ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಬೇರೆ ದೇಶಗಳಲ್ಲಿರುವ ತಮ್ಮ ಕ್ರೈಸ್ತ ಸಹೋದರರಿಂದ ತೋರಿಸಲ್ಪಟ್ಟ ಪ್ರೀತಿಯಿಂದ ಮತ್ತು ತಾವು ನಿಜವಾಗಿಯೂ ಒಂದು ಅಂತಾರಾಷ್ಟ್ರೀಯ ಸಹೋದರತ್ವಕ್ಕೆ ಸೇರಿದವರಾಗಿದ್ದೇವೆ ಎಂಬುದರ ಸ್ಪಷ್ಟವಾಗಿದ ಸಾಕ್ಷ್ಯದಿಂದ ಅವರು ಪ್ರಭಾವಿಸಲ್ಪಟ್ಟರು.
ಅವರ ಕಷ್ಟಗಳ ಹೊರತಾಗಿಯೂ, ಆಶ್ರಿತರು ತಮ್ಮ ಆತ್ಮಿಕತೆಯನ್ನು ಕಾಪಾಡಿಕೊಂಡಿದ್ದಾರೆ. ವಾಸ್ತವವಾಗಿ, “ಅವರಿಗೆ ಎಲ್ಲದರ ಆವಶ್ಯಕತೆಯು ಜರೂರಿಯದ್ದಾಗಿದ್ದರೂ, ಭೌತಿಕ ಸಹಾಯಕ್ಕಿಂತಲೂ ಹೆಚ್ಚಾಗಿ ಅವರು ಆತ್ಮಿಕ ಆಹಾರವನ್ನು ಸ್ವೀಕರಿಸಲು ಹೆಚ್ಚು ಚಿಂತಿತರಾಗಿದ್ದಂತೆ ಕಾಣುತ್ತಿದ್ದರು” ಎಂದು ಒಬ್ಬ ಪ್ರೇಕ್ಷಕನು ಗಮನಿಸುತ್ತಾನೆ. ಕೋರಿಕೆಯ ಮೇರೆಗೆ, ರುಆಂಡದ ಭಾಷೆಯಾದ ಕೀನ್ಯರುಆಂಡದಲ್ಲಿ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಬೈಬಲ್ ಅಭ್ಯಾಸ ಸಹಾಯಕದ 5,000 ಪ್ರತಿಗಳು, ಬೇರೆ ಬೇರೆ ಆಶ್ರಿತ ಶಿಬಿರಗಳಿಗೆ ರವಾನಿಸಲ್ಪಟ್ಟವು.b
ಆಶ್ರಿತರು ಪ್ರತಿದಿನ ಬೈಬಲ್ ವಚನವನ್ನು ಪರಿಶೀಲಿಸಿದರು, ಮತ್ತು ಅವರು ಸಭಾ ಕೂಟಗಳನ್ನು ವ್ಯವಸ್ಥಾಪಿಸಿದರು. ಮಕ್ಕಳಿಗಾಗಿ ಶಾಲಾ ತರಗತಿಗಳನ್ನು ನಡೆಸಲಿಕ್ಕಾಗಿ ಸಹ ಏರ್ಪಾಡುಗಳನ್ನು ಮಾಡಲಾಯಿತು. ಆರೋಗ್ಯ ಸೂತ್ರಗಳನ್ನು ಪಾಲಿಸುವುದರ ಮೇಲೆ ಬದುಕಿ ಉಳಿಯುವಿಕೆಯು ಅವಲಂಬಿಸಿದೆ ಎಂಬುದನ್ನು ಒತ್ತಿ ಹೇಳುತ್ತಾ, ಅವುಗಳ ಕುರಿತು ಬೋಧನೆಯನ್ನು ಕೊಡಲಿಕ್ಕಾಗಿ ಈ ತರಗತಿಗಳನ್ನು ಶಿಕ್ಷಕರು ಉಪಯೋಗಿಸಿಕೊಂಡರು.
ಮುಂದುವರಿಯುತ್ತಿರುವ ಆರೈಕೆ ಅಗತ್ಯವಿದೆ
ಗೋಮ ಮಾತ್ರವಲ್ಲದೆ, ರುಟ್ಶೂರುನಂತಹ ಇತರ ಸ್ಥಳಗಳಲ್ಲಿ ನೂರಾರು ಸಾಕ್ಷಿ ಆಶ್ರಿತರು ನೆಲೆಸಿದ್ದರು. ತದ್ರೀತಿಯ ಸಹಾಯವನ್ನು ಈ ಸಹೋದರರಿಗೂ ಒದಗಿಸಲಾಯಿತು. ಜುಲೈ 31ರಂದು, ಗೋಮದಿಂದ ದಕ್ಷಿಣಕ್ಕೆ ಬುಕಾವುಗೆ—ಸುಮಾರು 450 ಸಾಕ್ಷಿ ಆಶ್ರಿತರಿದ್ದ ಸ್ಥಳಕ್ಕೆ—ಏಳು ಪ್ರತಿನಿಧಿಗಳ ಸಾಕ್ಷಿ ತಂಡವೊಂದು ಹೋಯಿತು. ಇವರಲ್ಲಿ ಅನೇಕರು ಬುರುಂಡಿಯಿಂದ ಸಹ ಬಂದವರಾಗಿದ್ದರು. ಅಲ್ಲಿ ಕಾಲರ ತಲೆದೋರಿತ್ತು, ಮತ್ತು ಸಹೋದರರೊಳಗೆ ಯಾವುದೇ ಮರಣಗಳನ್ನು ತಡೆಗಟ್ಟುವ ಪ್ರಯತ್ನದಲ್ಲಿ ಸಹಾಯವು ಒದಗಿಸಲ್ಪಟ್ಟಿತು.
ಮರುದಿನ ಆ ಪ್ರತಿನಿಧಿ ತಂಡವು ರಸ್ತೆಯ ಮಾರ್ಗವಾಗಿ ಸುಮಾರು 150 ಕಿಲೊಮೀಟರ್ ಪ್ರಯಾಣಿಸಿ ಜಾಎರ್ನ ಊವೀರಕ್ಕೆ ಬಂತು. ಇಲ್ಲಿ ದಾರಿಯುದ್ದಕ್ಕೂ ಸುಮಾರು ಏಳು ಸ್ಥಳಗಳಲ್ಲಿ ರುಆಂಡ ಮತ್ತು ಬುರುಂಡಿ, ಈ ಎರಡು ದೇಶಗಳ ಸುಮಾರು 1,600 ಸಾಕ್ಷಿಗಳಿದ್ದರು. ರೋಗದಿಂದ ಅವರು ಸ್ವತಃ ಹೇಗೆ ರಕ್ಷಿಸಿಕೊಳ್ಳಸಾಧ್ಯವಿದೆ ಎಂಬುದರ ಕುರಿತು ಬೋಧನೆಯು ಒದಗಿಸಲ್ಪಟ್ಟಿತು. ಪ್ರತಿನಿಧಿಗಳ ತಂಡದ ಕಂಡುಹಿಡಿತಗಳ ಮೇಲೆ ಆಧಾರಿತವಾದ ಒಂದು ವರದಿಯು ಹೇಳಿದ್ದು: “ಇಷ್ಟರ ವರೆಗೆ ಮಾಡಲ್ಪಟ್ಟಿರುವುದೆಲ್ಲವೂ ಕೇವಲ ಆರಂಭವಾಗಿದೆ, ಮತ್ತು ನಮ್ಮ ಸಹಾಯವನ್ನು ಈಗ ಪಡೆದುಕೊಳ್ಳುತ್ತಿರುವ 4,700 ವ್ಯಕ್ತಿಗಳಿಗೆ ಅನೇಕ ತಿಂಗಳುಗಳ ವರೆಗೆ ಇನ್ನೂ ಹೆಚ್ಚು ಸಹಾಯದ ಅಗತ್ಯವಿದೆ.”
ವರದಿಗನುಸಾರ ಆಗಸ್ಟ್ ತಿಂಗಳೊಳಗೆ ನೂರಾರು ಸಾಕ್ಷಿಗಳು ರುಆಂಡಕ್ಕೆ ಹಿಂದಿರುಗಿದ್ದಾರೆ. ಆದರೂ ಕಾರ್ಯತಃ ಎಲ್ಲಾ ಮನೆಗಳು ಮತ್ತು ಸ್ವತ್ತುಗಳು ಲೂಟಿ ಮಾಡಲ್ಪಟ್ಟಿವೆ. ಆದುದರಿಂದ ಮನೆಗಳನ್ನು ಮತ್ತು ರಾಜ್ಯ ಸಭಾಗೃಹಗಳನ್ನು ಪುನಃ ನಿರ್ಮಿಸುವ ಕಷ್ಟದ ಕೆಲಸವು ಇದೆ.
ರುಆಂಡದಲ್ಲಿ ಅಷ್ಟು ಭೀಕರವಾಗಿ ಕಷ್ಟಾನುಭವಿಸಿರುವವರ ಪರವಾಗಿ ದೇವರ ಸೇವಕರು ಗಾಢವಾಗಿ ಪ್ರಾರ್ಥಿಸುವುದನ್ನು ಮುಂದುವರಿಸುತ್ತಾರೆ. ಈ ವಿಷಯಗಳ ವ್ಯವಸ್ಥೆಯ ಅಂತ್ಯವು ಸಮೀಪಿಸಿದಂತೆ ಹಿಂಸಾಕೃತ್ಯವು ಅಧಿಕಗೊಳ್ಳಬಹುದೆಂದು ನಮಗೆ ತಿಳಿದಿದೆ. ಆದರೂ, ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳು ತಮ್ಮ ಕ್ರೈಸ್ತ ತಾಟಸ್ಥ್ಯವನ್ನು ಕಾಪಾಡಿಕೊಳ್ಳುವುದನ್ನು ಮತ್ತು ತಮ್ಮ ನೈಜ ಸಹಾನುಭೂತಿಯನ್ನು ತೋರಿಸುವುದನ್ನು ಮುಂದುವರಿಸುವರು.
[ಅಧ್ಯಯನ ಪ್ರಶ್ನೆಗಳು]
a ಕಾವಲಿನಬುರುಜು, 1994, ದಶಂಬರ 15ರ “ರುಆಂಡದಲ್ಲಿ ದುರಂತ—ಯಾರು ಜವಾಬ್ದಾರರು?” ಎಂಬ ಲೇಖನವನ್ನು ನೋಡಿರಿ.
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್.ರಿಂದ ಪ್ರಕಾಶಿತ.
[Map on page 12]
(For fully formatted text, see publication)
ರುಆಂಡ
ಕಿಗಾಲಿ
ಯುಗಾಂಡ
ಜಾಎರ್
ಊವೀರ
ಗೋಮ
ಕೀವೂ ಸರೋವರ
ಬುಕಾವು
ರುಟ್ಶೂರು
ಬುರುಂಡಿ
ಬೂಜಂಬೂರ
[ಪುಟ 26 ರಲ್ಲಿರುವ ಚಿತ್ರಗಳು]
ಎಡಕ್ಕೆ: ಟಬಾನ ಯೂಜೀನ್ ಮತ್ತು ಅವರ ಕುಟುಂಬವು ಹತಿಸಲ್ಪಟ್ಟಿತು. ಬಲಗಡೆ: ಅವಳನ್ನು ರಕ್ಷಿಸಲು ಹೂಟು ಸಹೋದರರಿಂದ ಮಾಡಲ್ಪಟ್ಟ ಪ್ರಯತ್ನಗಳ ಹೊರತಾಗಿಯೂ, ಒಬ್ಬ ಟೂಟ್ಸಿಯಾಗಿದ್ದ ಮೂಕಾಗಿಸಾಗಾರಾ ಡನೀಜ್ ಕೊಲ್ಲಲ್ಪಟ್ಟಳು.
[Pictures on page 16, 17]
ಮೇಲೆ: ಗೋಮಾದ ರಾಜ್ಯ ಸಭಾಗೃಹದಲ್ಲಿ ಅಸ್ವಸ್ಥರ ಆರೈಕೆ ಮಾಡುವುದು. ಕೆಳಗಿನಿಂದ ಎಡಕ್ಕೆ: ಸಾಕ್ಷಿಗಳಿಂದ ಸಿದ್ಧಗೊಳಿಸಲಾದ 35 ಟನ್ನುಗಳಷ್ಟು ಪರಿಹಾರ ಸರಬರಾಯಿಗಳನ್ನು ಸರಕು ಜೆಟ್ ವಿಮಾನದ ಮೂಲಕ ಕಳುಹಿಸಲಾಯಿತು. ಕೆಳಗೆ: ಸಾಕ್ಷಿಗಳು ಸ್ಥಳಾಂತರಿಸಲ್ಪಟ್ಟ ಕೀವೂ ಸರೋವರದ ಬಳಿ. ಕೆಳಗಿನಿಂದ ಬಲಕ್ಕೆ: ಜಾಎರ್ನ ಒಂದು ರಾಜ್ಯ ಸಭಾಗೃಹದಲ್ಲಿ ರುಆಂಡದ ಆಶ್ರಿತರು