ನೀವೊಬ್ಬ ಸುರಕ್ಷಿತ ವಾಹನ ಚಾಲಕರೊ?
ಒಂದು ಕಾರಿನ ಚಾಲಕ ಚಕ್ರದ ಹಿಂದಿರುವಾಗ ನಿಮ್ಮ ಮನೋಭಾವವು ನಿಮ್ಮ ಚಾಲಕ ಸಾಮರ್ಥ್ಯವನ್ನು ಆಳವಾಗಿ ಪ್ರಭಾವಿಸಬಲ್ಲದು. ಬ್ರಿಟಿಷ್ ಆಟೊಮೋಬಿಲ್ ಅಸೋಷಿಯೇಷನ್ನಿಂದ ನಡಿಸಲ್ಪಟ್ಟ ಒಂದು ಅಧ್ಯಯನವು, 17 ಮತ್ತು 20 ವರ್ಷ ಪ್ರಾಯದ ನಡುವಣ ಬ್ರಿಟಿಷ್ ಪುರುಷರಲ್ಲಿ ಪ್ರತಿ ವರ್ಷ 22 ಸೇಕಡ ಕಡಿಮೆಪಕ್ಷ ಒಂದಾದರೂ ಮೋಟಾರ್ ಅಪಘಾತದಲ್ಲಿ ಒಳಗೂಡುತ್ತಾರೆಂದು ಪ್ರಕಟಿಸಿಯದೆ.
ಅವರ ಅಸುರಕ್ಷ ಚಾಲಕ ಹವ್ಯಾಸಗಳ ಮುಖ್ಯ ಕಾರಣಾಂಶಗಳು ಯಾವುವು? ಮದ್ಯಸಾರ, ಮನೋಸ್ಥಿತಿಯಲ್ಲಿ ಬದಲಾವಣೆಗಳು, ಮತ್ತು ಗದ್ದಲದ ಸಂಗೀತ ಮಾತ್ರವಲ್ಲದೆ, “ಬಹಳ ಹೆಚ್ಚು ಮಂದಿ ಅವರ ಸಮಾನಸ್ಥರಿಂದ ಮೋಟಾರನ್ನು ಅಪಾಯಕರವಾಗಿ ನಡಿಸಲು ಪ್ರಭಾವಿಸಲ್ಪಡುತ್ತಾರೆ” ಎಂದು ಆಟೊಮೋಬಿಲ್ ಅಸೋಷಿಯೇಷನ್ನ ಉಪ ಡೈರೆಕ್ಟರ್-ಜನರಲ್, ಕೆನೆತ್ ಫಾರ್ಕ್ಲಾತ್, ಗಮನಿಸುತ್ತಾರೆ. ಫಲಿತಾಂಶವಾಗಿ, ತರಬೇತಿಯನ್ನು ಚಾಲಕನ ಮನೋಭಾವನೆಗಳ ಮೇಲೆ ಹೆಚ್ಚು ಮತ್ತು ಗಾಡಿ ನಡಿಸುವ ರೂಢಿ ವಿಧಾನಗಳ ಮೇಲೆ ಕಡಿಮೆ ಕೇಂದ್ರೀಕರಿಸಬೇಕು ಎಂದು ಆಟೊಮೋಬಿಲ್ ಅಸೋಷಿಯೇಷನ್ ಶಿಫಾರಸ್ಸು ಮಾಡುತ್ತದೆ.
ಉದಾಹರಣೆಗಾಗಿ, ನಿಮ್ಮನ್ನು ಕೇಳಿಕೊಳ್ಳಿ: ‘ಪರಿವೆಯಿಲ್ಲದೆ ಕೇಡುಗಳಿಗೆ ತಲೆಗೊಡುವ ಮೂಲಕ ನನ್ನ ಕಾರಿನಲ್ಲಿರುವವರನ್ನು ಪ್ರಭಾವಿಸಲು ನಾನು ಪ್ರಯತ್ನಿಸುತ್ತೇನೊ? ನನ್ನ ಮನೋಸ್ಥಿತಿಯು ಚಾಲಕ ಚಕ್ರದ ಹಿಂದುಗಡೆ ನನ್ನ ನಡವಳಿಕೆಯನ್ನು ನಿರ್ಧರಿಸುತ್ತದೋ? ದಾರಿಯಲ್ಲಿರುವ ಬೇರೆ ಚಾಲಕರನ್ನು ಕೇವಲ ಮೇಲಾಗಿಸಬೇಕಾದ ಅಡಚಣೆಗಳಾಗಿ ನಾನು ವೀಕ್ಷಿಸುತ್ತೇನೊ?’ ಇಂತಹ ಪ್ರಶ್ನೆಗಳಿಗೆ ಉತ್ತರಗಳು ನೀವು ಯಾವ ವಿಧದ ಚಾಲಕರೆಂಬುದನ್ನು ಪ್ರಕಟಿಸುತ್ತದೆ.
ಪುರುಷರು ಯಾ ಸ್ತ್ರೀಯರಾಗಿರಲಿ, ಎಳೆಯರು ಯಾ ವೃದ್ಧರಾಗಿರಲಿ, ಮೋಟಾರು ನಡಿಸುವಾಗ ಒಂದು ನೆರೆಹೊರೆಯ ಭಾವವನ್ನು ತೋರಿಸಿರಿ. “ಬೇರೆಯವರಿಂದ ನೀವು ಹೇಗೆ ಉಪಚರಿಸಲ್ಪಡಬಯಸುತ್ತೀರೊ ಹಾಗೆಯೆ ಅವರನ್ನು ಉಪಚರಿಸಿರಿ.” (ಮತ್ತಾಯ 7:12, ಫಿಲಿಪ್ಸ್) ಹಾಗೆ ಮಾಡುವುದರಿಂದ ಸುರಕ್ಷಿತವಾಗಿ ವಾಹನ ನಡಿಸಲು ನಿಮಗೆ ಸಹಾಯವಾಗುವುದು.