ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w25 ನವೆಂಬರ್‌ ಪು. 8-9
  • ನಾನು ಗಾಡಿ ಓಡಿಸೋದನ್ನ ನಿಲ್ಲಿಸಬೇಕಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಾನು ಗಾಡಿ ಓಡಿಸೋದನ್ನ ನಿಲ್ಲಿಸಬೇಕಾ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಇತ್ತೀಚಿಗೆ ನೀವು ಹೇಗೆ ಗಾಡಿ ಓಡಿಸ್ತಿದ್ದೀರಾ?
  • ನಿರ್ಧಾರ ಮಾಡೋಕೆ ಬೈಬಲ್‌ ಕೊಡೋ ಸಲಹೆ
  • ವಾಹನ ಅಪಘಾತಗಳು ನೀವು ಸುರಕ್ಷಿತರಾಗಿದ್ದೀರೊ?
    ಎಚ್ಚರ!—2002
  • ನೀವೊಬ್ಬ ಸುರಕ್ಷಿತ ವಾಹನ ಚಾಲಕರೊ?
    ಎಚ್ಚರ!—1995
  • ಅಪಘಾತದ ಅವಾಂತರ ತಪ್ಪಿಸುವುದು ಹೇಗೆ?
    ಎಚ್ಚರ!—2012
  • ಅಂಗವಿಕಲ ಆದರೂ ವಾಹನ ಚಲಾಯಿಸಲು ಶಕ್ತನು
    ಎಚ್ಚರ!—1996
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
w25 ನವೆಂಬರ್‌ ಪು. 8-9
ವಯಸ್ಸಾಗಿರೋ ಸಹೋದರ ಕಿಟಕಿ ಹತ್ರ ಕೂತು ಕೈಯಲ್ಲಿ ಕೀ ಹಿಡ್ಕೊಂಡು ತನ್ನ ಕಾರಿನ ಬಗ್ಗೆ ಯೋಚಿಸ್ತಿದ್ದಾನೆ.

ನಾನು ಗಾಡಿ ಓಡಿಸೋದನ್ನ ನಿಲ್ಲಿಸಬೇಕಾ?

ನೀವು ಎಷ್ಟೋ ವರ್ಷಗಳಿಂದ ಗಾಡಿ ಓಡಿಸ್ತಿರಬಹುದು. ನೀವೇ ಗಾಡಿ ಓಡಿಸ್ಕೊಂಡು ಬೇರೆ ಬೇರೆ ಕಡೆ ಹೋಗೋಕೆ ನಿಮ್ಗೆ ಇಷ್ಟ ಇರಬಹುದು. ಆದ್ರೆ ಈಗ ನಿಮ್ಮ ಕುಟುಂಬದವರು, ಸ್ನೇಹಿತರು ನೀವು ಗಾಡಿ ಓಡ್ಸೋದನ್ನ ನಿಲ್ಲಿಸಬೇಕು ಅಂತ ಹೇಳ್ತಿದ್ದಾರೆ. ‘ಇವರು ಯಾಕಪ್ಪಾ ಹೀಗೆ ಹೇಳ್ತಿದ್ದಾರೆ’ ಅಂತ ನಿಮಗೆ ಅರ್ಥಾನೇ ಆಗದೆ ಇರಬಹುದು.

ನಿಮಗೂ ಯಾರಾದ್ರೂ ‘ಗಾಡಿ ಓಡ್ಸೋದನ್ನ ನಿಲ್ಲಿಸಿ’ ಅಂತ ಹೇಳ್ತಿದ್ದಾರಾ? ಒಂದುವೇಳೆ ಹೇಳ್ತಿದ್ರೆ ನಿಲ್ಲಿಸಬೇಕಾ ಬೇಡ್ವಾ ಅಂತ ನಿರ್ಧಾರ ಮಾಡೋಕೆ ನಿಮಗೆ ಯಾವುದು ಸಹಾಯ ಮಾಡುತ್ತೆ?

ಕೆಲವೊಂದು ದೇಶದಲ್ಲಿ ಒಂದಿಷ್ಟು ವಯಸ್ಸಾದ್ಮೇಲೆ ಜನ ತಮ್ಮ ಡ್ರೈವಿಂಗ್‌ ಲೈಸೆನ್ಸ್‌ ರಿನ್ಯೂ ಮಾಡ್ಕೋಬೇಕು. ಆಗ ಡಾಕ್ಟರ್‌, ಆ ವ್ಯಕ್ತಿ ಗಾಡಿ ಓಡ್ಸೋಕೆ ಫಿಟ್‌ ಇದ್ದಾನಾ ಅಂತ ಚೆಕ್‌ ಮಾಡಿ ಒಂದು ಸರ್ಟಿಫಿಕೇಟ್‌ ಕೊಡ್ತಾರೆ. ಇಂಥ ದೇಶದಲ್ಲಿ ವಾಸಿಸ್ತಿರೋ ಕ್ರೈಸ್ತರು ಸರ್ಕಾರ ಇಟ್ಟಿರೋ ಆ ನಿಯಮಗಳನ್ನ ಪಾಲಿಸಬೇಕು. (ರೋಮ. 13:1) ನೀವಿರೋ ದೇಶದಲ್ಲಿ ಇಂಥ ನಿಯಮಗಳು ಒಂದುವೇಳೆ ಇಲ್ಲದ್ದಿದ್ರೂ ನಿಮ್ಗೆ ಗಾಡಿ ಓಡ್ಸೋಕೆ ಆಗುತ್ತಾ ಇಲ್ವಾ ಅಂತ ನೀವೇ ನಿರ್ಧರಿಸೋದು ಒಳ್ಳೇದು.

ಇತ್ತೀಚಿಗೆ ನೀವು ಹೇಗೆ ಗಾಡಿ ಓಡಿಸ್ತಿದ್ದೀರಾ?

‘ನಾನು ಡ್ರೈವಿಂಗ್‌ ಮಾಡಬೇಕಾ ಬೇಡ್ವಾ’ ಅನ್ನೋ ನಿರ್ಧಾರ ಮಾಡೋಕೆ ಈ ಮುಂದಿನ ಪ್ರಶ್ನೆಗಳನ್ನ ಕೇಳ್ಕೊಳಿ ಅಂತ ಅಮೇರಿಕಾದಲ್ಲಿರೋ ನ್ಯಾಷನಲ್‌ ಇನ್ಸ್‌ಟ್ಯೂಟ್‌ ಆನ್‌ ಏಜಿಂಗ್‌ (NIA) ಅನ್ನೋ ವೆಬ್‌ಸೈಟ್‌ ಹೇಳುತ್ತೆ:

  • ರೋಡಲ್ಲಿರೋ ಸೈನ್‌ ಬೋರ್ಡನ್ನ ಓದೋಕೆ ಮತ್ತು ರಾತ್ರಿಲಿ ರೋಡ್‌ ನೋಡೋಕೆ ನನಗೆ ಕಷ್ಟ ಆಗ್ತಿದ್ಯಾ?

  • ಕಾರಲ್ಲಿರೋ ಕನ್ನಡಿನ ಮತ್ತು ಬ್ಲೈಂಡ್‌ ಸ್ಪಾಟನ್ನ ನೋಡೋಕೆ ನನ್ನ ಕುತ್ತಿಗೆನ ಆರಾಮಾಗಿ ತಿರುಗಿಸೋಕೆ ಕಷ್ಟ ಆಗ್ತಿದ್ಯಾ?

  • ನಾನು ತಕ್ಷಣ ನನ್ನ ಕಾಲನ್ನ ಆಕ್ಸಿಲರೇಟರ್‌ ಮೇಲಿಂದ ತೆಗೆದು ಬ್ರೇಕ್‌ ಹಾಕೋಕೆ ಕಷ್ಟ ಪಡ್ತೀನಾ?

  • ರೋಡ್‌ ಅಲ್ಲಿ ಟ್ರಾಫಿಕ್‌ ಆಗೋ ತರ ನಾನು ನಿಧಾನವಾಗಿ ಓಡಿಸ್ತಿದ್ದೀನಾ?

  • ಇತ್ತೀಚಿಗೆ ಕೂದಲೆಳೆಯಲ್ಲಿ ನಿಮಗೆ ಆಕ್ಸಿಡೆಂಟ್‌ ತಪ್ಪಿದೆಯಾ ಅಥವಾ ನಿಮ್ಮ ಗಾಡಿಗೆ ಡೆಂಟ್‌ ಆಗಿದ್ದೀಯಾ?

  • ನಾನು ಗಾಡಿ ಓಡ್ಸೋ ರೀತಿ ನೋಡಿ ಪೊಲೀಸ್‌ ನನ್ನನ್ನ ನಿಲ್ಸಿದ್ದಾರಾ?

  • ನಾನು ಗಾಡಿ ಓಡ್ಸೋವಾಗ ತೂಕಡಿಸಿದ್ದೀನಾ?

  • ನೀವು ತಗೊಳ್ಳೋ ಮಾತ್ರೆಗಳಿಂದ ಮಂಪರು ಆಗುತ್ತಾ? ಗಾಡಿ ಓಡ್ಸೋಕೆ ತೊಂದ್ರೆ ಆಗುತ್ತಾ?

  • ನಿಮ್ಮ ಕುಟುಂಬದವರು ಅಥವಾ ಸ್ನೇಹಿತರು ನೀವು ಗಾಡಿ ಓಡ್ಸೋದನ್ನ ನಿಲ್ಲಿಸಬೇಕು ಅಂತ ಹೇಳ್ತಿದ್ದಾರಾ?

ನೀವು ಮೇಲಿನ ಒಂದು ಅಥವಾ ಎರಡು ಪ್ರಶ್ನೆಗಳಿಗೆ ‘ಹೌದು’ ಅಂತ ಉತ್ರ ಕೊಟ್ಟಿದ್ರೆ, ಗಾಡಿ ಓಡಿಸೋದ್ರಲ್ಲಿ ನೀವು ಕೆಲವೊಂದು ಬದಲಾವಣೆಗಳನ್ನ ಮಾಡ್ಕೋಬೇಕು. ಉದಾಹರಣೆಗೆ, ಗಾಡಿ ಓಡಿಸೋದನ್ನ ಕಮ್ಮಿ ಮಾಡಿ, ಮುಖ್ಯವಾಗಿ ರಾತ್ರಿ ಹೊತ್ತಲ್ಲಿ ಓಡಿಸೋದನ್ನ ಕಮ್ಮಿ ಮಾಡಿ. ಆಗಿಂದಾಗ್ಗೆ ನೀವು ಹೇಗೆ ಗಾಡಿ ಓಡಿಸ್ತಿದ್ದೀರಾ ಅಂತ ಪರೀಕ್ಷೆ ಮಾಡ್ಕೊಳಿ. ನಿಮ್ಮ ಕುಟುಂಬದವ್ರನ್ನ ಅಥವಾ ಸ್ನೇಹಿತ್ರನ್ನ ‘ನಾನು ಹೇಗೆ ಡ್ರೈವಿಂಗ್‌ ಮಾಡ್ತಿದ್ದೀನಿ?’ ಅಂತ ಕೇಳಿ ನೋಡಿ. ಸಾಧ್ಯವಾದ್ರೆ ಡ್ರೈವಿಂಗ್‌ನ ಇನ್ನೂ ಸೇಫಾಗಿ ಮಾಡೋಕೆ ಟ್ರೇನಿಂಗ್‌ ತಗೊಳ್ಳಿ. ಒಂದುವೇಳೆ ತುಂಬ ಪ್ರಶ್ನೆಗಳಿಗೆ ನೀವು ‘ಹೌದು’ ಅಂತ ಉತ್ರ ಕೊಟ್ಟಿದ್ರೆ ದಯವಿಟ್ಟು ಗಾಡಿ ಓಡಿಸೋದನ್ನ ನಿಲ್ಲಿಸಿ, ಅದು ನಿಮಗೇ ಒಳ್ಳೇದು!a

ನಿರ್ಧಾರ ಮಾಡೋಕೆ ಬೈಬಲ್‌ ಕೊಡೋ ಸಲಹೆ

‘ನಾನ್‌ ಚೆನ್ನಾಗೇ ಡ್ರೈವಿಂಗ್‌ ಮಾಡ್ತೀನಲ್ಲ’ ಅಂತ ನಿಮಗೆ ಅನಿಸ್ತಿರಬಹುದು. ಆದ್ರಿಂದ, ಯಾರಾದ್ರೂ ‘ನೀವು ಗಾಡಿ ಓಡ್ಸೋದನ್ನ ನಿಲ್ಲಿಸಬೇಕು’ ಅಂತ ಹೇಳಿದ್ರೆ ಬೇಜಾರಾಗಬಹುದು. ಹಾಗಾದ್ರೆ ಇದ್ರ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಿ ಒಳ್ಳೆ ನಿರ್ಧಾರ ತಗೊಳೋಕೆ ಯಾವ ಬೈಬಲ್‌ ಸಲಹೆ ಸಹಾಯ ಮಾಡುತ್ತೆ? ಬನ್ನಿ, ಅದ್ರಲ್ಲಿ ಎರಡನ್ನ ನೋಡೋಣ.

ದೀನತೆ ತೋರಿಸಿ. (ಜ್ಞಾನೋ. 11:2) ವಯಸ್ಸಾಗ್ತಾ ಆಗ್ತಾ ಕಣ್ಣು ಮಂಜಾಗುತ್ತೆ, ಸರಿಯಾಗಿ ಕೇಳ್ಸಲ್ಲ, ಕೈ ಕಾಲು ನಡುಗುತ್ತೆ ಮತ್ತು ಯಾವುದನ್ನೂ ಬೇಗ ಮಾಡಕ್ಕಾಗಲ್ಲ. ಅದಕ್ಕೇ ಕೆಲವರು ವಯಸ್ಸಾದ ಮೇಲೆ ಕೆಲವೊಂದು ಆಟ ಆಡೋದನ್ನ ನಿಲ್ಲಿಸ್ತಾರೆ. ಯಾಕಂದ್ರೆ ವಯಸ್ಸಾದ ಮೇಲೆ ಅವ್ರಿಗೆ ಬೇಗ ಗಾಯ ಆಗುತ್ತೆ. ಗಾಡಿ ಓಡಿಸೋ ವಿಷ್ಯದಲ್ಲೂ ಇದೇ ತರನೇ. ವಯಸ್ಸಾದ ಮೇಲೂ ಡ್ರೈವಿಂಗ್‌ ಮಾಡ್ತಿದ್ರೆ ಈ ಎಲ್ಲ ತೊಂದ್ರೆಗಳಿಂದ ಆಕ್ಸಿಡೆಂಟ್‌ ಆಗಬಹುದು. (ಜ್ಞಾನೋ. 22:3) ಹಾಗಾಗಿ ಯಾರಾದ್ರೂ ‘ನೀವು ಗಾಡಿ ಓಡ್ಸೋದನ್ನ ನಿಲ್ಲಿಸಿದ್ರೆ ಒಳ್ಳೇದು’ ಅಂತ ಹೇಳಿದ್ರೆ ನಾವು ದೀನತೆಯಿಂದ ಅವ್ರ ಮಾತನ್ನ ಕೇಳಬೇಕು.—2 ಸಮುವೇಲ 21:15-17 ಹೋಲಿಸಿ.

ರಕ್ತಪರಾಧದಿಂದ ದೂರ ಇರಿ. (ಧರ್ಮೋ. 22:8) ಸರಿಯಾಗಿ ಓಡಿಸಿಲ್ಲ ಅಂದ್ರೆ ನಮ್ಮ ಗಾಡಿಗಳು ಜನ್ರ ಪ್ರಾಣವನ್ನು ತೆಗೆದುಬಿಡುತ್ತೆ. ನಾವು ಗಾಡಿ ಓಡಿಸೋ ರೀತಿಯಲ್ಲಿ ತೊಂದ್ರೆ ಇದೆ ಅಂತ ಗೊತ್ತಾದ್ಮೇಲೂ ಗಾಡಿ ಓಡಿಸಿದ್ರೆ ಬೇರೆಯವರ ಪ್ರಾಣ ಹೋಗೋಕೆ ನಾವು ಕಾರಣ ಆಗ್ತೀವಿ!

ಗಾಡಿ ಓಡ್ಸೋದನ್ನ ನಿಲ್ಲಿಸಬೇಕಾ ಅನ್ನೋ ನಿರ್ಧಾರ ಮಾಡೋ ಪರಿಸ್ಥಿತಿ ಬಂದ್ರೆ, ‘ಇನ್ನು ಮೇಲೆ ಜನ ನಂಗೆ ಮರ್ಯಾದೆ ಕೊಡೋದಿಲ್ವೆನೋ’ ಅಂತ ಯೋಚಿಸಬೇಡಿ. ಆದ್ರೆ ಆ ತರ ಯೋಚ್ನೆ ಮಾಡಬೇಡಿ. ಯೆಹೋವ ನಿಮ್ಮಲ್ಲಿರೋ ದೀನತೆ ಮತ್ತು ನಿಸ್ವಾರ್ಥ ಗುಣಗಳನ್ನ ನೋಡಿ ನಿಮ್ಮನ್ನ ಪ್ರೀತಿಸ್ತಾನೆ. ‘ನಿಮ್ಮ ಕೈ ಹಿಡಿದು ನಡೆಸ್ತೀನಿ ಮತ್ತು ಕಾಪಾಡ್ತೀನಿ’ ಅಂತ ಮಾತು ಕೊಟ್ಟಿದ್ದಾನೆ. (ಯೆಶಾ. 46:4) ಹಾಗಾಗಿ ಪ್ರಾರ್ಥನೆ ಮಾಡಿ ‘ಸರಿಯಾಗಿರೋ ನಿರ್ಧಾರವನ್ನ ಮಾಡೋಕೆ ವಿವೇಕ ಮತ್ತು ತಿಳುವಳಿಕೆ ಕೊಡಪ್ಪ’ ಅಂತ ಬೇಡ್ಕೊಳ್ಳಿ.

ಬೇರೆಯವರು ಹೇಗೆ ಸಹಾಯ ಮಾಡಬಹುದು

ಡ್ರೈವಿಂಗ್‌ ಮಾಡೋದ್ರ ಬಗ್ಗೆ ವಯಸ್ಸಾದವ್ರ ಜೊತೆ ಅವ್ರ ಕುಟುಂಬದವರು ಮಾತಾಡಿದ್ರೆ ಚೆನ್ನಾಗಿರುತ್ತೆ. ನಿಮ್ಮ ಫ್ರೆಂಡ್‌ ಬಗ್ಗೆ ಬೇರೆಯವರು ನಿಮ್ಮ ಹತ್ರ ‘ಇತ್ತೀಚಿಗೆ ಅವ್ರಿಗೆ ಸೇಫ್‌ ಆಗಿ ಡ್ರೈವಿಂಗ್‌ ಮಾಡೋಕೆ ಆಗ್ತಿಲ್ಲ, ಅದಕ್ಕೆ ನೀವೇ ಅವ್ರ ಗಾಡಿ ಓಡಿಸಿದ್ರೆ ಚೆನ್ನಾಗಿರುತ್ತೆ’ ಅಂತ ಹೇಳಬಹುದು. ಅವ್ರ ಮಾತನ್ನ ತಳ್ಳಿಹಾಕಬೇಡಿ. ನೀವು ನಿಮ್ಮ ಫ್ರೆಂಡ್‌ ಹತ್ರ ಹೋಗಿ ದಯೆಯಿಂದ ಆದ್ರೆ ನೇರವಾಗಿ ಅವ್ರ ಡ್ರೈವಿಂಗ್‌ ಬಗ್ಗೆ ಮಾತಾಡಿ. ‘ನಿಂಗೆ ತುಂಬ ವಯಸ್ಸಾಗಿದೆ ಇನ್ಮೇಲೆ ಗಾಡಿ ಓಡಿಸಬೇಡ’ ಅಂತ ಹೇಳೋ ಬದಲು ಅವರು ಗಾಡಿ ಓಡಿಸೋದ್ರಿಂದ ಏನೆಲ್ಲ ತೊಂದ್ರೆ ಆಗಬಹುದು ಅಂತ ಅರ್ಥ ಮಾಡ್ಸಿ. ಹಾಗಂತ ‘ನಿನಗೆ ಚೆನ್ನಾಗಿ ಗಾಡಿ ಓಡಿಸೋಕೆ ಬರಲ್ಲ’ ಅಂತ ಹೇಳಬೇಡಿ. ಬದಲಿಗೆ ‘ನೀನು ಡ್ರೈವಿಂಗ್‌ ಮಾಡೋದ್ರಿಂದ ಸಮಸ್ಯೆ ಆಗುತ್ತೆ, ಅದ್ರಿಂದ ನಿನಗೇ ಅಪಾಯ’ ಅಂತ ಪ್ರೀತಿಯಿಂದ ಹೇಳಿ. ಅವ್ರ ಜೊತೆ ಮಾತಾಡ್ವಾಗ ಈ ಲೇಖನದಲ್ಲಿ ಕೊಟ್ಟಿರೋ ವಚನಗಳನ್ನ ಬಳಸಿ. ಬೈಬಲ್‌ ಮೇಲೆ ಅವ್ರಿಗಿರೋ ಪ್ರೀತಿ ನೀವು ಹೇಳೋ ಮಾತನ್ನ ಅವರು ಕೇಳೋ ತರ ಮಾಡುತ್ತೆ.

ವಯಸ್ಸಾದವರು ಗಾಡಿ ಓಡ್ಸೋದನ್ನ ನಿಲ್ಲಿಸುವಾಗ ಅವ್ರಿಗೆ ಹೇಗೆ ಅನಿಸುತ್ತೆ ಅಂತ ಅರ್ಥಮಾಡ್ಕೊಳ್ಳಿ. ‘ನನ್ನಷ್ಟಕ್ಕೆ ನಾನು ಎಲ್ಲೂ ಹೋಗೋಕಾಗಲ್ಲ’ ಅಂತ ಅವ್ರಿಗೆ ಬೇಜಾರಾಗಿರುತ್ತೆ. ಹಾಗಾಗಿ ನೀವು ಅವ್ರಿಗೆ ಸಹಾಯ ಮಾಡಬಹುದು. (ಜ್ಞಾನೋ. 17:17) ‘ನನಗೆ ಸ್ವಲ್ಪ ಡ್ರಾಪ್‌ ಕೊಡ್ತೀಯಾ’ ಅಂತ ಅವರೇ ಕೇಳೋವರೆಗೂ ಕಾಯಬೇಡಿ. ಅವ್ರಿಗೆ ಆ ತರ ಕೇಳೋಕೆ ಕಷ್ಟ ಆಗಬಹುದು. ಹಾಗಾಗಿ ನೀವೇ ಅವ್ರ ಹತ್ರ ಹೋಗಿ ಕೇಳಿ. ಉದಾಹರಣೆಗೆ, ‘ಮೀಟಿಂಗ್‌ಗೆ, ಸೇವೆಗೆ, ಶಾಪಿಂಗ್‌ಗೆ, ಆಸ್ಪತ್ರೆಗೆ ನಾನೇ ನಿಮ್ಮನ್ನು ಕರ್ಕೊಂಡು ಹೋಗ್ಲಾ?’ ಅಂತ ಕೇಳಬಹುದು. ‘ನಿಮಗೆ ಸಹಾಯ ಮಾಡೋಕೆ, ನಿಮ್ಮ ಜೊತೆ ಟೈಮ್‌ ಕಳೆಯೋಕೆ ನಂಗೆ ತುಂಬ ಇಷ್ಟ’ ಅಂತ ಹೇಳಬಹುದು.—ರೋಮ. 1:11, 12.

a ಇದ್ರ ಬಗ್ಗೆ ಇನ್ನೂ ಜಾಸ್ತಿ ತಿಳ್ಕೊಳ್ಳೋಕೆ ಅಕ್ಟೋಬರ್‌ 8, 2002ರ ಎಚ್ಚರ! ಪತ್ರಿಕೆಯಲ್ಲಿರೋ “ವಾಹನ ಅಪಘಾತಗಳು ನೀವು ಸುರಕ್ಷಿತರಾಗಿದ್ದೀರೊ?” ಅನ್ನೋ ಲೇಖನ ಓದಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ