ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g95 3/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1995
  • ಅನುರೂಪ ಮಾಹಿತಿ
  • ನಮ್ಮ ವಾಚಕರಿಂದ
    ಎಚ್ಚರ!—1994
  • ನಮ್ಮ ವಾಚಕರಿಂದ
    ಎಚ್ಚರ!—1994
  • ನಮ್ಮ ವಾಚಕರಿಂದ
    ಎಚ್ಚರ!—1995
  • ನಮ್ಮ ವಾಚಕರಿಂದ
    ಎಚ್ಚರ!—1995
ಇನ್ನಷ್ಟು
ಎಚ್ಚರ!—1995
g95 3/8 ಪು. 30

ನಮ್ಮ ವಾಚಕರಿಂದ

ಕೆಟ್ಟ ಶಿಷ್ಟಾಚಾರಗಳು ನಾನು ಜ್ಞಾಪಿಸಿಕೊಳ್ಳಬಹುದಾದಷ್ಟರ ಮಟ್ಟಿಗೆ, ನಾನು ಕೆಟ್ಟ ಶಿಷ್ಟಾಚಾರಗಳನ್ನು ತೋರಿಸಿದ್ದೇನೆ. “ಉಪಕಾರ,” “ದಯಮಾಡಿ ನನ್ನನ್ನು ಕ್ಷಮಿಸಿ,” ಮತ್ತು “ನಾನು ವಿಷಾದಿಸುತ್ತೇನೆ,” ಎಂಬಂತಹ ವಿನೀತತೆ ಮತ್ತು ಪರಿಗಣನೆಯ ಅಭಿವ್ಯಕ್ತಿಗಳನ್ನು ವ್ಯಕ್ತಪಡಿಸಲು ಸೋತಿರುವ ಕುರಿತು ನಾನು ಹೆಮ್ಮೆಪಟ್ಟ ಸಂದರ್ಭಗಳೂ ಇದ್ದವು. ತದನಂತರ “ಶಿಷ್ಟಾಚಾರಗಳ ಕ್ಷೀಣಿಸುವಿಕೆ” ಎಂಬ ಲೇಖನವನ್ನು ಮತ್ತು ಅಲ್ಲಿ ಉಲ್ಲೇಖಿಸಲ್ಪಟ್ಟ ಬೈಬಲಿನ ಭಾಗಗಳನ್ನು ಓದಿದೆ. (ಅಕ್ಟೋಬರ 8, 1994) ದೇವರು ತನ್ನ ಕೆಳಗಿರುವವರೊಂದಿಗೆ ವ್ಯವಹರಿಸುವಾಗ, ಅನೇಕ ವೇಳೆ “ದಯವಿಟ್ಟು” ಎಂಬ ಮರ್ಯಾದೆಯ ಮಾತನ್ನು ತಾನು ಕೇಳಿಕೊಳ್ಳುವ ವಿಷಯಕ್ಕೆ ಕೂಡಿಸಿ ಸದಾ ಶಿಷ್ಟಾಚಾರಿಯಾಗಿದ್ದಾನೆ ಎಂಬುದನ್ನು ನಾನು ಕಲಿತೆ. ಇದನ್ನು ಬೈಬಲಿನಲ್ಲಿ ಅವಲೋಕಿಸಲು ನಾನು ಬಹಳ ಆಶ್ಚರ್ಯಗೊಂಡೆ. ದೇವರನ್ನು ಅನುಕರಿಸಲು ಪ್ರಯತ್ನಿಸುವಂತೆ ಇದು ನನ್ನನ್ನು ಪ್ರಚೋದಿಸಿದೆ. ನಿಮಗೆ ಬಹಳ ಉಪಕಾರಗಳು.

ಎಮ್‌. ಇ. ಜೆ., ನೈಜೀರಿಯ

ಕ್ಯಾನ್ಸರ್‌ “ಸ್ತನದ ಕ್ಯಾನ್ಸರ್‌—ಪ್ರತಿಯೊಬ್ಬ ಮಹಿಳೆಯ ಭಯ” ಎಂಬ ಎಪ್ರಿಲ್‌ 8, 1994ರ ನಿಮ್ಮ ಸಂಚಿಕೆಯ ಒಂದು ಪ್ರತಿಯನ್ನು ನಾನು ಇತ್ತೀಚೆಗೆ ನನ್ನ ತಾಯಿಯ ವೈದ್ಯರಿಗೆ ಕೊಟ್ಟೆ. ಪುಟ 10ರಲ್ಲಿ ನೀವು ಹೈಡ್ರಜೀನ್‌ ಸಲ್ಫೇಟನ್ನು ಒಂದು “ವಿಷರಹಿತ ಔಷಧ”ದೋಪಾದಿ ವಿವರಿಸುತ್ತೀರಿ. ಅದು ಬಹಳ ವಿಷಕರವೆಂದು ತೋರಿಸುವ ವೈದ್ಯಕೀಯ ಸಾಹಿತ್ಯವನ್ನು ವೈದ್ಯರು ನಮಗೆ ತೋರಿಸಿದರು.

ಡಿ. ಎಮ್‌., ಫ್ರಾನ್ಸ್‌

ಈ ರಾಸಾಯನಿಕದ ವಿಷಪರಿಣಾಮವು ಸ್ಪಷ್ಟವಾಗಿಗಿ ವಾಗ್ವಾದದ ಒಂದು ವಿಷಯವಾಗಿರುವುದರಿಂದ, ಔಷಧವನ್ನು ವಿಷರಹಿತವೆಂದು ಕರೆಯುವುದರಲ್ಲಿ ನಾವು ತಪ್ಪನ್ನು ಮಾಡಿದೆವು. ಪ್ರಯೋಗಶಾಲೆಯ ಇಲಿಗಳಿಗೆ ಮತ್ತು ಹೆಗ್ಗಣಗಳಿಗೆ ಅಧಿಕ ಪ್ರಮಾಣಗಳಲ್ಲಿ ಕೊಡಲ್ಪಟ್ಟಾಗ, ಅದು ಬಹಳ ವಿಷಕರವಾಗಿ ಪರಿಣಮಿಸಿತೆಂದು ರಷ್ಯಾದ ಒಂದು ಸಂಶೋಧನಾ ಅಧ್ಯಯನವು ಹೇಳಿತು. ಆದಾಗಲೂ, ಯುಸಿಎಲ್‌ಎ (ಯೂನಿವರ್ಸಿಟಿ ಆಫ್‌ ಕ್ಯಾಲಿಫಾರ್ನಿಯ ಎಟ್‌ ಲಾಸ್‌ ಆ್ಯಂಜಲಿಸ್‌) ವೈದ್ಯಕೀಯ ಕೇಂದ್ರದಲ್ಲಿ ಮಾನವ ಕ್ಯಾನ್ಸರ್‌ ರೋಗಿಗಳ ಮೇಲೆ ನಡೆಸಲ್ಪಟ್ಟ ಒಂದು ಪ್ರಾಯೋಗಿಕ ಅಧ್ಯಯನದಲ್ಲಿ, ಹೈಡ್ರಜೀನ್‌ ಸಲ್ಫೇಟ್‌ ಯಾವುದೇ ವಿಷಕರ ಪರಿಣಾಮಗಳನ್ನು ವರದಿಸದೆ, 71 ಪ್ರತಿಶತ ರೋಗಿಗಳೊಂದಿಗೆ “ಮೆತು”ವಾಗಿತ್ತೆಂದು ವರದಿಸಲ್ಪಡುತ್ತದೆ. ಈ ಔಷಧದ ಅಪಾಯಗಳು ಮತ್ತು ಸಂಭವನೀಯ ಪ್ರಯೋಜನಗಳನ್ನು ಸಂಪೂರ್ಣವಾಗಿ ಗೊತ್ತುಮಾಡುವುದಕ್ಕೆ ಮೊದಲು ಅತ್ಯಧಿಕ ಸಂಶೋಧನೆಯು ಮಾಡಲ್ಪಡಬೇಕಾಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ.—ಸಂಪಾ.

ಆ್ಯಡಿಯ ಕಥೆ “ಆ್ಯಡಿ ತಡವಾಗಿ ಉತ್ತರವನ್ನು ಕಂಡುಕೊಂಡಳು—ಆದರೆ ತೀರ ತಡವಾಗಿ ಅಲ್ಲ” (ಆಗಸ್ಟ್‌ 8, 1994) ಎಂಬ ಲೇಖನವು ಅದ್ಭುತಕರವಾಗಿತ್ತು! ಅದು ಒಂದು ಕಾದಂಬರಿಯನ್ನು ಓದುವಂತಿತ್ತು, ಆದರೆ ಅದು ನಿಜವಾಗಿಯೂ ಒಂದು ಸತ್ಯ ಕಥೆಯಾಗಿತ್ತು. ನಮ್ಮ ನೆರೆಯವರಿಗೆ ಸಹಾಯ ಮಾಡುವ ಅತ್ಯಂತ ಪರಿಣಾಮಕಾರಿ ವಿಧಾನವು ಸಾರುವಿಕೆಯ ಮೂಲಕ ಎಂದು ಅವಳ ಕಥೆಯ ನೀತಿಯನ್ನು ನಾನು ಗ್ರಹಿಸಿದಾಗ ನಾನು ಪ್ರಭಾವಿತಳಾದೆ!

ಡಿ. ಎಲ್‌., ಇಟಲಿ

ನಾನು ಈಗತಾನೆ ಆ್ಯಡಿ ಕ್ಲಿಂಟನ್‌ ಫ್ಯೂಳ ಜೀವನ ಕಥೆಯನ್ನು ಓದಿದೆ, ಮತ್ತು ನಾನು ಎಚ್ಚರ!ವನ್ನು ಓದುತ್ತಿರುವ 19 ವರ್ಷಗಳಲ್ಲಿ ಪ್ರಥಮ ಬಾರಿಗೆ ನಿಮಗೆ ಉಪಕಾರ ಹೇಳಲು ನಾನು ಬರೆಯುತ್ತಿದ್ದೇನೆ! ನಾನು ಕೂಡ ಕರಿಯಳು ಮತ್ತು ನನ್ನ ಜೀವಿತದಲ್ಲಿಲ್ಲಾ ಸಾಮಾಜಿಕ ಅನ್ಯಾಯಗಳ ಚುಚ್ಚು ಮಾತುಗಳನ್ನು ಅನುಭವಿಸಿದ್ದೇನೆ. ಆದರೆ ಯೆಹೋವನು ನಿಜವಾಗಿ ಕರಿಯ ಜನರ ಸ್ಥಿತಿಗಾಗಿ ಲಕ್ಷ್ಯಕೊಡುತ್ತಾನೆ ಮತ್ತು ಆತನು ವಾಗ್ದಾನ ಮಾಡಿದ ಹೊಸ ಲೋಕವು ಎಲ್ಲಾ ಅಕ್ರಮಗಳನ್ನು ಸರಿಪಡಿಸುವುದೆಂದು ನಾನು ಕಲಿತಿದ್ದೇನೆ.

ಎಲ್‌. ಎನ್‌., ಅಮೆರಿಕ

ಅವಳ ದೈನ್ಯದೊಂದಿಗೆ ಜೊತೆಗೊಂಡ ಅವಳ ವಿವೇಕ ಮತ್ತು ವಿನೋದ ಪ್ರವೃತ್ತಿಯನ್ನು ಲೇಖನವು ತೋರಿಸಿತ್ತು. ಅವಳು ಒಬ್ಬ ದೊಡ್ಡ ಕಥೆಗಾರ್ತಿ! ಮುಕ್ತಾಯವು ಬಹಳ ಸ್ಪರ್ಶಿಸುವಂತಹದ್ದಾಗಿ ನಾನು ಕಂಡುಕೊಂಡೆ. ನಾನು ಬಸ್ಸಿನಲ್ಲಿ ಒಂದು ಕ್ಷಣ ಒಳಗೊಳಗೇ ನಗುತ್ತಾ, ಮತ್ತೊಂದು ಕ್ಷಣ ಅಳುತ್ತಾ ಇದ್ದೆ.

ಡಿ. ಎಮ್‌., ಅಮೆರಿಕ

ತೂಕಾಧಿಕ್ಯ “ಯುವ ಜನರು ಪ್ರಶ್ನಿಸುವುದು . . . ನಾನೇಕೆ ಇಷ್ಟು ದಪ್ಪವಾಗಿದ್ದೇನೆ?” (ಮೇ 8, 1994) ಎಂಬ ಲೇಖನದಿಂದ ನಾನು ಪ್ರಭಾವಿಸಲ್ಪಟ್ಟೆ. ನಾನು ಯಾವಾಗಲೂ ನನ್ನ ತೂಕದ ಕುರಿತು ಕ್ಷೋಭೆಗೊಂಡಿದ್ದೆ, ಆದರೆ ಯೆಹೋವನು ನಿಮ್ಮ ಹೊರತೋರಿಕೆಯನ್ನು ನೋಡುವುದಿಲ್ಲ, ಬದಲಿಗೆ ನಿಮ್ಮ ಹೃದಯದಲ್ಲಿ ಏನಿದೆ ಎಂಬುದನ್ನು ನೋಡುತ್ತಾನೆ ಎಂದು ಲೇಖನವು ಹೇಳಿತು. ಉಪಕಾರ.

ಎನ್‌. ಸಿ., ಅಮೆರಿಕ

ನಾನು ನಿಜವಾಗಿ ದಪ್ಪವಾಗಿಲ್ಲದಿರುವುದಾದರೂ, ಕೆಲವೊಮ್ಮೆ ಆ ರೂಪದರ್ಶಿಗಳ ಹಾಗೆ ಕಾಣಬೇಕೆಂದು ನಾನು ಬಯಸುತ್ತೇನೆ. ಕೆಲವೊಮ್ಮೆ ನಾನು ನಿರಾಶೆಗೊಳ್ಳುತ್ತೇನೆ ಹಾಗೂ ಅಳುತ್ತೇನೆ. ಹೀಗೆ ಭಾವಿಸುತ್ತಿರುವುದು ನಾನೊಬ್ಬಳೇ ಅಲ್ಲ ಎಂಬುದನ್ನು ಕಾಣಲು ನಿಮ್ಮ ಲೇಖನವು ನನಗೆ ಸಹಾಯ ಮಾಡಿತು, ಮತ್ತು ಅದು ತೃಪ್ತಿದಾಯಕವಾಗಿತ್ತು.

ಆರ್‌. ಎಮ್‌., ಅಮೆರಿಕ

ನಾನು ಸ್ಥೂಲಕಾಯವುಳ್ಳವಳಾಗಿಲ್ಲ, ಆದರೆ ನಾನು ಅಗಲವಾದ ಭುಜಗಳುಳ್ಳ ಬಹಳ ದೃಢಕಾಯವುಳ್ಳ ಹುಡುಗಿ. ನನ್ನ ಸೋದರಸಂಬಂಧಿಗಳು ಮತ್ತು ಅಣ್ಣಂದಿರಿಂದ ಪೀಡಿಸಲ್ಪಡುತ್ತೇನೆ. ನಾನು ದೃಢಕಾಯವುಳ್ಳವಳಾಗಿರಬಹುದು, ಆದರೆ ಅದು ನಾನು ತೂಕವನ್ನು ಕಳೆದುಕೊಳ್ಳಬೇಕೆಂದು ಅರ್ಥೈಸುವುದಿಲ್ಲವೆಂಬ ನಿಮ್ಮ ಅಂಶವನ್ನು ನಾನು ಗಣ್ಯಮಾಡಿದೆ.

ಎಮ್‌. ಟಿ., ಅಮೆರಿಕ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ