ನಮ್ಮ ವಾಚಕರಿಂದ
ಇಬ್ಬಗೆಯ ಜೀವನ “ಯುವಜನರು ಪ್ರಶ್ನಿಸುವುದು . . . ಇಬ್ಬಗೆಯ ಒಂದು ಜೀವನ—ಯಾರು ತಿಳಿಯಬೇಕು?” (ಜನವರಿ 8, 1994, ಇಂಗ್ಲಿಷ್) ಎಂಬ ಲೇಖನಕ್ಕಾಗಿ ನಾನು ನಿಮಗೆ ಉಪಕಾರ ಹೇಳಲು ಬಯಸುತ್ತೇನೆ. ನಾನು 16 ವರ್ಷ ಪ್ರಾಯದವಳಾಗಿದ್ದಾಗ, ನನ್ನ ಹೆತ್ತವರಿಗೆ ತಿಳಿಯದ ಹಾಗೆ ಕುಡಿಯುವುದನ್ನು, ಧೂಮಪಾನವನ್ನು, ಮತ್ತು ವಿಹಾರನಿಶ್ಚಯ ಮಾಡುವುದನ್ನು ಪ್ರಾರಂಭಿಸಿದೆ. ದೇವರ ಕಾವಲಿನ ಕಣ್ಣಿನಿಂದ ಯಾವುದೂ ಮರೆಯಾಗಿಲ್ಲವೆಂದು ತಿಳಿಯಲು ಈ ಲೇಖನಗಳು ನನಗೆ ನಿಜವಾಗಿ ಸಹಾಯ ಮಾಡಿದವು.
ಟಿ. ಟಿ., ಫಿಜಿ
ಹಣದ ಬೆನ್ನಟ್ಟುವಿಕೆ “ಹಣದ ಬೆನ್ನಟ್ಟುವಿಕೆ—ಎಲ್ಲಿ ಅಂತ್ಯಗೊಳ್ಳುವುದು?” (ಮಾರ್ಚ್ 22, 1994, ಇಂಗ್ಲಿಷ್) ಎಂಬ ಸರಣಿಯನ್ನು ನಾನು ಈಗ ತಾನೆ ಓದಿ ಮುಗಿಸಿದೆ. ವಿಷಯದ ಅತ್ಯುತ್ತಮವಾದ ಆವರಿಸುವಿಕೆಯನ್ನು ಈ ಲೇಖನಗಳು ಕೊಟ್ಟವು. ವಲಸೆ ಹೋಗುವ ಕೆಲಸಗಾರರಿಗೆ ಮತ್ತು ಅವರ ಕುಟುಂಬಗಳಿಗೆ ಅಂಥ ಅಹಿತಕರ ಪರಿಸ್ಥಿತಿಗಳು ಈಗಲೂ ಇವೆಯೆಂದು ನನಗೆ ತಿಳಿದಿರಲಿಲ್ಲ. ನಾನು ಅವರಿಗಾಗಿ ವಿಷಾದಿಸುತ್ತೇನೆ.
ಜಿ. ಎಮ್., ಅಮೆರಿಕ
ಅಹಿತಕರ ಕೆಲಸದ ಪರಿಸ್ಥಿತಿಗಳ ಮತ್ತು ಕಡಮೆ ವೇತನಗಳ ಕುರಿತಾಗಿ ನೀವು ನಿರೂಪಿಸಿದಂಥ ವಿಧವು ನಿಷ್ಕೃಷ್ಟವಾಗಿದೆ. ಕೆಲವರು ಈ ಕೆಲಸಗಾರರನ್ನು ಹೇಗೆ ವೀಕ್ಷಿಸುತ್ತಾರೆ—ನಮ್ಮಂತಹ ಭಾವನೆಗಳನ್ನು ಹೊಂದಿರುವ ಮಾನವ ಜೀವಿಗಳಂತಲ್ಲ—ಎಂಬುದರ ಮೇಲೆ ಇದೊಂದು ದುಃಖಕರ ವ್ಯಾಖ್ಯಾನ. ಹೌದು, “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟು”ಮಾಡಿದ್ದಾನೆ!—ಪ್ರಸಂಗಿ 8:9.
ಕೆ. ವಿ., ಅಮೆರಿಕ
ಸ್ತನದ ಕ್ಯಾನ್ಸರ್ “ಸ್ತನದ ಕ್ಯಾನ್ಸರ್—ಪ್ರತಿಯೊಬ್ಬ ಮಹಿಳೆಯ ಭಯ” (ಏಪ್ರಿಲ್ 8, 1994) ಎನ್ನುವ ನಿಮ್ಮ ಸರಣಿಯಲ್ಲಿ, ನೀವು, ಮೊಲೆಯೂಡಿಸುವಿಕೆಯು ಸ್ತನದ ಕ್ಯಾನ್ಸರನ್ನು ಕಡಮೆಗೊಳಿಸಬಹುದೆಂದು ಸೂಚಿಸುವ ಅಧ್ಯಯನಗಳ ಪ್ರಸ್ತಾಪವನ್ನೇ ಮಾಡಿಲ್ಲ.
ಬಿ. ಜೆ. ಎಮ್., ಜರ್ಮನಿ
ಇದನ್ನು ಬಿಟ್ಟುಬಿಟ್ಟದ್ದಕ್ಕಾಗಿ ವಿಷಾದಿಸುತ್ತೇವೆ. ಆದಾಗ್ಯೂ, 1993, ಸಪ್ಟಂಬರ 22ರ ಸಂಚಿಕೆಯ “ತಾಯಿಯ ಹಾಲಿನ ಪರವಾದ ಪ್ರಮಾಣ” ಎಂಬ ಲೇಖನದಲ್ಲಿ ಈ ವಿಷಯವು ಪ್ರಕಟವಾಗಿತ್ತು.—ಸಂಪಾ.
ಮ್ಯಾಸೆಕ್ಟ್‌ಟೊಮಿ ಶಸ್ತ್ರಚಿಕಿತ್ಸೆಗೊಳಗಾದ ಒಬ್ಬಾಕೆ ಕ್ರೈಸ್ತ ಸಹೋದರಿಯೊಡನೆ ನಾನು ಸ್ವಲ್ಪ ಸಮಯವನ್ನು ಕಳೆದೆ. ಅವಳು 62 ವರ್ಷ ಪ್ರಾಯದವಳಾಗಿದ್ದಳು ಮತ್ತು ತುಂಬಾ ಖಿನ್ನಳಾಗಿದ್ದಳು. ಅವಳಿಗೆ ಬೆಂಬಲವನ್ನು ಕೊಡಲು ಏನು ಹೇಳಬೇಕೆಂದು ನನಗೆ ತಿಳಿದಿರಲಿಲ್ಲ. ಲೇಖನಗಳಲ್ಲಿ ಎತ್ತಿಹೇಳಲ್ಪಟ್ಟ ವ್ಯಾಖ್ಯೆಗಳ ಫಲವಾಗಿ, ಈಗ ಗಣನೆಗೆ ಬರುವ ಬೆಂಬಲವನ್ನು ನಾನು ಕೊಡಬಲ್ಲೆ.
ಡಿ. ಎಚ್., ಅಮೆರಿಕ
ಸುಮಾರು ಎರಡು ವರ್ಷಗಳ ಹಿಂದೆ, ಸ್ತನದ ಕ್ಯಾನ್ಸರ್ ಇದದ್ದರಿಂದ ನಾನು ಶಸ್ತ್ರಚಿಕಿತ್ಸೆಗೊಳಪಟ್ಟಿದ್ದೆ. ಆ ವಿಷಯದ ಕುರಿತಾಗಿ ಮಾಹಿತಿಯನ್ನು ಕಂಡುಕೊಳ್ಳಲು, ಒಂದು ವೈದ್ಯಕೀಯ ಎನ್‌ಸೈಕ್ಲೋಪೀಡಿಯಾವನ್ನು ನಾನು ಕೊಂಡುಕೊಂಡೆ, ಆದರೆ ಹೆಚ್ಚಿನದನ್ನು ಅಲ್ಲಿ ನಾನು ಕಂಡುಕೊಳ್ಳಲಿಲ್ಲ. ಆದರೆ ನಿಮ್ಮ ಲೇಖನಗಳು ನನ್ನ ಪ್ರಶ್ನೆಗಳನ್ನು ಉತ್ತರಿಸಿದವು. ಅದು ನಿಜವಾಗಿಯೂ ನನಗೆ ಸಾಂತ್ವನ ನೀಡಿತು.
ಎಮ್. ಜಿ., ಇಟಲಿ
ಸ್ತನದ ಕ್ಯಾನ್ಸರ್‌ನಿಂದ ಒಂಬತ್ತು ವರ್ಷಗಳ ಹಿಂದೆ ನನ್ನ ತಾಯಿಯು ಮರಣ ಹೊಂದಿದರು. ಆ ಸಮಯದಲ್ಲಿ ನಾನು ಕೇವಲ ಒಂಬತ್ತು ವರ್ಷ ಪ್ರಾಯದವಳಾಗಿದ್ದೆ, ಮತ್ತು ಅವರು ಅನುಭವಿಸಿದ ಕಷ್ಟದ ತಿಳಿವಳಿಕೆಯೇ ನನಗಿರಲಿಲ್ಲ. ಆ ಲೇಖನಗಳನ್ನು ಓದಿದ ಹಾಗೆ ನನಗೆ ಅಳದೆ ಇರಲು ಕಷ್ಟಕರವಾಗಿತ್ತು ಮತ್ತು ಅವರ ಕುರಿತು ಆಲೋಚಿಸಿದೆ. ಅವರ ಜೀವಿತದ ಕೊನೆಯ ವರ್ಷಗಳ ಕುರಿತು ನೀವು ಕೊಟ್ಟಂತಹ ಒಳನೋಟಕ್ಕೆ ನಾನು ನಿಮಗೆ ಸಾಕಷ್ಟು ಉಪಕಾರ ಹೇಳಲು ಎಂದಿಗೂ ಶಕ್ಯಳಲ್ಲ.
ಕೆ. ಎಫ್., ಅಮೆರಿಕ
ಏಡ್ಸ್‌ನ ಬಲಿಪಶುಗಳು “ಏಡ್ಸ್ ರೋಗವಿರುವವರಿಗೆ ಸಹಾಯ ಮಾಡುವುದು” (ಮಾರ್ಚ್ 22, 1994) ಎನ್ನುವ ನಿಮ್ಮ ಲೇಖನವನ್ನು ನಾನು ಓದಿದೆ. ನಾನು ಏಚ್‌ಐವಿ ಪಾಸಿಟಿವ್ ಮತ್ತು ಈ ಲೇಖನವನ್ನು ಒಪ್ಪಿಕೊಳ್ಳಲು ತುಂಬಾ ಕಷ್ಟಕರವಾಗಿತ್ತೆಂದು ಕಂಡುಕೊಂಡೆ. ವ್ಯಥೆ ಮತ್ತು ತಿರಸ್ಕಾರ ಭಾವದ ಕಾರಣದಿಂದ ನನ್ನ ಕುಟುಂಬವು ರೋದಿಸಿತು.
ಬಿ. ಜೆ., ಅಮೆರಿಕ
ನಮ್ಮ ಮಧ್ಯೆಯಿರುವ ಕ್ಲೇಶಗೊಂಡ ಅಂಥ ಎಲ್ಲರಿಗೂ ಸಹಾನುಭೂತಿಯನ್ನು ನಾವು ತೋರಿಸುವವರಾಗಿದ್ದೇವೆ. ನಮ್ಮ ಲೇಖನವು ಅವರ ಅಗತ್ಯಗಳನ್ನು ಅಧಿಕಾಂಶ ಜನರ ಚಿಂತೆಗಳೊಂದಿಗೆ ಸಮತೋಲದಲ್ಲಿಡಲು ಯತ್ನಿಸಿತು. ದೇವರ ಆಜ್ಞೆಯು ಇಸ್ರಾಯೇಲ್ಯರಿಗೆ ಇಡೀ ಜನಾಂಗದ ಆರೋಗ್ಯವನ್ನು ಕಾಪಾಡಲು ದೃಢವಾದ ಕ್ರಮಗಳನ್ನು ತೆಗೆದುಕೊಂಡದರ್ದಿಂದ, ಸಮಂಜಸವಾದ ಆರೋಗ್ಯ ಮುನ್ನೆಚ್ಚರಿಕೆಗಳನ್ನು ಶಿಫಾರಸ್ಸು ಮಾಡುವುದು ಸೂಕ್ತವೆಂದು ನಾವು ನೆನಸಿದೆವು. (ಹೋಲಿಸಿ ಯಾಜಕಕಾಂಡ 13:21, 33.) “ಒಬ್ಬನು ಏಡ್ಸ್ ರೋಗಿಗಳ ಮಧ್ಯೆ ಇರುವುದರಿಂದ ಅನಾವಶ್ಯಕವಾಗಿ ಭಯವುಳ್ಳವನಾಗುವ ಅಗತ್ಯವಿಲ್ಲ” ಎಂಬದನ್ನು ನಾವು ಮಾನ್ಯಮಾಡಿದ್ದೇವೆ. ಆದರೂ, ವೈದ್ಯರು ಭರವಸೆಕೊಟ್ಟ ಹೊರತೂ, ಅನೇಕರು ಭಯವುಳ್ಳವರಾಗಿ ಮುಂದುವರಿಯುತ್ತಾರೆ. ಆದುದರಿಂದ, ಶಾರೀರಿಕ ಒಲವನ್ನು ತೋರಿಸುವುದು ಅಹಿತವೆಂದೆಣಿಸುವ ಇತರರ ಅನಿಸಿಕೆಗಳನ್ನು ಏಡ್ಸ್ ಸಂತಪಿತರು ಗೌರವಿಸುವಂತೆ ನಾವು ಪ್ರೋತ್ಸಾಹಿಸಿದೆವು. ಸೋಂಕು ತಗಲದಿರುವವರು ಈ ವಿಷಯದ ಸಂಬಂಧವಾಗಿ ಏನು ಮಾಡಬೇಕೆನ್ನುವುದು ಅವರ ವೈಯಕ್ತಿಕ ನಿರ್ಣಯವಾಗಿದೆ. ಯಾವುದೇ ಸಂದರ್ಭದಲ್ಲಿ, ಎಲ್ಲಾ ಕ್ರೈಸ್ತರು ಸಂತಪಿಸುವವರಿಗೆ ಕರುಣೆಯನ್ನು ಮತ್ತು ಅನುಕಂಪವನ್ನು ತೋರಿಸುವುದರಲ್ಲಿ ಮನಪೂರ್ವಕವಾದ ಇಚ್ಛೆ ಹೊಂದಿರಬೇಕು.—ಸಂಪಾ.
ಇಂಥ ಒಂದು ಕನಿಕರಪೂರ್ಣ ಮತ್ತು ಸುಲಿಖಿತ ಲೇಖನವು ಒದಗಿಸಲ್ಪಟ್ಟದ್ದಕ್ಕೆ ನಾನು ತೀರಾ ಪ್ರೋತ್ಸಾಹಿತಳು. “ಸಾರ್ವತ್ರಿಕ ಮುನ್ನೆಚ್ಚರಿಕೆ”ಗಳನ್ನು ತೆಗೆದುಕೊಳ್ಳುವಾಗ ನಾವು ಅನುಕಂಪವನ್ನು ತೋರಿಸಬೇಕೆಂಬ ಮತ್ತು ಸಹಾನುಭೂತಿಯಾದ ಸಹಾಯವನ್ನು ಒದಗಿಸಬೇಕೆಂಬ ಸಲಹೆಗಳನ್ನು ನಾನು ವಿಶೇಷವಾಗಿ ಗಣ್ಯಮಾಡುತ್ತೇನೆ.
ಎಮ್. ಎಚ್., ಅಮೆರಿಕ