ಮಾಟ್ರಿಯಾಷ್ಕ ಎಷ್ಟು ಮುದಾದ್ದ ಒಂದು ಬೊಂಬೆ!
ರಷ್ಯಾದ ಎಚ್ಚರ! ಸುದ್ದಿಗಾರರಿಂದ
ಸಂದರ್ಶಿಸುತ್ತಿರುವ ಪ್ರವಾಸಿಗರು ನನ್ನೆಡೆಗೆ ನಸುನೋಟವನ್ನು ಹರಿಸಿದೊಡನೆ, ನನ್ನನ್ನು ತಮ್ಮೊಂದಿಗೆ ಮನೆಗೆ ಕೊಂಡೊಯ್ಯಲು ಅವರಲ್ಲಿ ಅಧಿಕಾಂಶ ಮಂದಿ ನಿರ್ಧರಿಸಿರುವಂತೆ ತೋರುತ್ತದೆ; ಹಾಗೆ ಮಾಡಲಿಕ್ಕಾಗಿ ಹೆಚ್ಚು ಹಣವನ್ನು ವೆಚ್ಚಮಾಡಲು ಇಷ್ಟಪಡುತ್ತಾರೆ. ಅವರನ್ನು ನನ್ನೆಡೆಗೆ ಯಾವುದು ಆಕರ್ಷಿಸುತ್ತದೆಂಬುದು ನಿಜವಾಗಿಯೂ ನನಗೆ ತಿಳಿದಿಲ್ಲ. ಎಷ್ಟೆಂದರೂ, ಅವರು ನನ್ನ ಕುರಿತು ಬಹಳ ಕಡಿಮೆ ತಿಳಿದಿದ್ದಾರೆ. ಫ್ಯಾಶನ್ ಎಂದು ಅವರಿದನ್ನು ಮಾಡಬಹುದು. ಇರಲಿ, ನನ್ನನ್ನು ಪರಿಚಯಿಸಿಕೊಳ್ಳುವಂತೆ ಬಿಡಿರಿ. ನನ್ನ ಹೆಸರು ಮಾಟ್ರಿಯಾಷ್ಕ, ಮತ್ತು ನನ್ನ ಸ್ಥಳ—ಬಿಡಿ, ಆರಂಭದಿಂದ ಪ್ರಾರಂಭಿಸೋಣ.
ವಾಸ್ತವವಾಗಿ, ನಾನೆಲ್ಲಿಂದ ಬಂದೆ ಅಥವಾ ನನ್ನ ನಿಜವಾದ ಹೆತ್ತವರು ಯಾರಾಗಿದ್ದರು ಎಂಬುದು ನಿಜವಾಗಿಯೂ ಯಾರಿಗೂ ತಿಳಿದಿಲ್ಲ. ಆ ಕಥೆಗೆ ಎರಡು ಕಥನಾಂತರಗಳಿವೆ. ಪರಸ್ಪರ ಸಂಬಂಧಿತವಾದ ಅನೇಕ ಭಾಗಗಳನ್ನು ಒಳಗೊಂಡ ಅಪೂರ್ವವಾದೊಂದು ಆಟಿಕೆಯೋಪಾದಿ ನಾನು, ಜಪಾನಿನ ಹಾಂಶು ದ್ವೀಪದಲ್ಲಿ ಉದ್ಭವಿಸಿದೆನೆಂದು ಕೆಲವರು ಹೇಳುತ್ತಾರೆ. 19ನೆಯ ಶತಮಾನದ ಅಂತ್ಯದಲ್ಲಿ, ರಷ್ಯಾದ ಸಾವ ಐ. ಮಾಮಾಂಟಾಫ್ (1841- 1918) ಎಂಬ ಹೆಸರಿನ ಪೋಷಕ ಶ್ರೀಮಂತನೊಬ್ಬನ ಪತ್ನಿಯ ಮೂಲಕ ನಾನು ಹಾಂಶುವಿನಿಂದ ರಷ್ಯಾಕ್ಕೆ ತರಲ್ಪಟ್ಟೆನೆಂದು ಅವರು ಹೇಳುತ್ತಾರೆ. ಇನ್ನೊಂದು ಕಡೆಯಲ್ಲಿ, ಕೆಲವು ಜಪಾನೀಯರಿಗನುಸಾರ, ನನ್ನನ್ನು ಅಸಾಧಾರಣವಾದೊಂದು ಬೊಂಬೆಯನ್ನಾಗಿ ಮಾಡುವ ಕಲ್ಪನೆಯನ್ನು ಜಪಾನಿಗೆ ಪ್ರಥಮವಾಗಿ ತಂದವನು, ರಷ್ಯಾದ ಒಬ್ಬ ಸಂನ್ಯಾಸಿಯಾಗಿದ್ದನು. ವಿದ್ಯಮಾನವು ಏನೇ ಆಗಿರುವುದಾದರೂ, ರಷ್ಯಾದ ಕುಶಲಕರ್ಮಿಗಳು ಈ ಕಲ್ಪನೆಯನ್ನು ಮೆಚ್ಚಿದರು, ಮತ್ತು ಮಾಟ್ರಿಯಾಷ್ಕ ಅಸ್ತಿತ್ವಕ್ಕೆ ಬಂದಳು.
1880ಗಳ ಅಂತ್ಯದಲ್ಲಿ, ರಷ್ಯಾ ತನ್ನ ಆರ್ಥಿಕ ನಿರ್ವಹಣೆ ಮತ್ತು ಸಂಸ್ಕೃತಿಯನ್ನು ವಿಕಸಿಸುತ್ತಿತ್ತು. ಅದೇ ಸಮಯದಲ್ಲಿ, ರಷ್ಯಾದವರು ಪಾರಂಪರ್ಯವಾಗಿ ಬಂದ ತಮ್ಮ ಸಂಪ್ರದಾಯವನ್ನು ಸಂರಕ್ಷಿಸುವುದರಲ್ಲಿ ಹೆಚ್ಚು ಮಹತ್ತಾದ ಆಸಕ್ತಿಯನ್ನು ತೆಗೆದುಕೊಳ್ಳುತ್ತಿದ್ದರು. ರಷ್ಯಾದ ಸಂಸ್ಕೃತಿಯನ್ನು ಅಸ್ತಿತ್ವಕ್ಕೆ ತರುವ ಉದ್ದೇಶದಿಂದ, ಇಲ್ಯ ರ್ಯೇಪ್ಯಿನ್, ವ್ಯೀಕ್ಟರ್ ವಸ್ನ್ಯೆಟ್ಸಾಫ್, ಮತ್ತು ಮ್ಯಿಕಯೀಲ್ ವ್ರೂಬ್ಯೆಲ್ರಂತಹ, ರಷ್ಯಾದ ಪ್ರಸಿದ್ಧ ವರ್ಣಚಿತ್ರಕಾರರನ್ನು ಒಳಗೊಂಡು, ವಿದ್ಯಾವಂತ ವರ್ಗವು ಮಾಮಾಂಟಾಫ್ನ ಬಳಿ ಒಟ್ಟುಗೂಡಲಾರಂಭಿಸಿತು. ರಷ್ಯಾದ ರೈತರ ಕೀರ್ತಿಯನ್ನು ಸಂರಕ್ಷಿಸಲಿಕ್ಕಾಗಿ, ಮಾಸ್ಕೋದ ಸಮೀಪದಲ್ಲಿ ಕಲೆಯ ಸ್ಟುಡಿಯೊ (ಚಿತ್ರಗಾರ)ಗಳು ನಿರ್ಮಿಸಲ್ಪಟ್ಟವು. ಅಲ್ಲಿ, ದೇಶದ ಎಲ್ಲ ಭಾಗಗಳಿಂದ, ಪಾರಂಪರ್ಯವಾಗಿ ಬಂದ ವಸ್ತುಗಳು, ಆಟಿಕೆಗಳು, ಮತ್ತು ಬೊಂಬೆಗಳು ಸಂಗ್ರಹಿಸಲ್ಪಟ್ಟವು.
ಸ್ಯಿರ್ಗೆ ಮಾಲ್ಯೂಟಿನ್ ಎಂಬ ಹೆಸರಿನ ವೃತ್ತಿಪರ ಕಲಾವಿದನೊಬ್ಬನು ನನ್ನ ಪ್ರಥಮ ರೂಪರೇಖೆಗಳನ್ನು ಬರೆದನು, ಆದರೆ ನಾನು ಆಗ ಸ್ವಲ್ಪ ಬೇರೆಯಾಗಿ ಕಾಣುತ್ತಿದ್ದೆ. ಹೊಳೆಯುವ ಕಣ್ಣುಗಳುಳ್ಳ ದುಂಡು ಮುಖದ ರೈತ ಹುಡುಗಿಯೊಬ್ಬಳನ್ನು ಚಿತ್ರಿಸುವಂತೆ ನನ್ನನ್ನು ಉದ್ದೇಶಿಸಲಾಗಿತ್ತು. ನಾನು ಒಂದು ಸಾರಫಾನ್ (ಎರಡು ಪಟ್ಟಿಗಳಿಂದ ಎತ್ತಿ ಹಿಡಿಯಲ್ಪಟ್ಟಿರುವ ನೆಲಮುಟ್ಟುವ ಉಡುಪು) ತೊಟ್ಟುಕೊಂಡಿದ್ದೆ, ಮತ್ತು ನುಣುಪಾದ ಹಾಗೂ ಹೊಳೆಯುವ ಕೂದಲು ವರ್ಣಭರಿತವಾದ ಕರವಸ್ತ್ರವೊಂದರ ಕೆಳಗೆ ಬಹು ಮಟ್ಟಿಗೆ ಮರೆಯಾಗಿರುವಂತೆ ನನ್ನನ್ನು ಜಾಗರೂಕತೆಯಿಂದ ಅಲಂಕರಿಸಲಾಗಿತ್ತು. ಇತರ ಆಕೃತಿಗಳು—ಪ್ರತಿಯೊಂದೂ ಮುಂಚಿನ ಒಂದು ಆಕೃತಿಗಿಂತ ಸಣ್ಣದು—ನನ್ನೊಳಗೆ ಇಡಲ್ಪಟ್ಟಿದ್ದವು. ಅವುಗಳಿಗೆ ಕಸವ್ಯಾರಾಟ್ಕಗಳು (ಒಂದು ಕಡೆಯಲ್ಲಿ ಬಿಗಿಯುವ ರಷ್ಯಾದ ರವಿಕೆಗಳು), ಶರ್ಟ್ಗಳು, ಪಾಡ್ಯಾಫ್ಕಗಳು (ಪುರುಷರ ಉದ್ದ ತೋಳಿನ ಕೋಟ್ಗಳು), ಮತ್ತು ಏಪ್ರನ್ (ಧೂಳುಪಾವುಡ)ಗಳನ್ನು ತೊಡಿಸಲಾಗಿತ್ತು. ಮಾಲ್ಯೂಟಿನ್ನಿಂದ ಬರೆಯಲ್ಪಟ್ಟ ರೂಪರೇಖೆಗಳಿಂದ ಪ್ರಕಟಿಸಲ್ಪಟ್ಟಂತೆ, ಸುಮಾರು 1891ರಲ್ಲಿ ಮಾಸ್ಕೋದಲ್ಲಿ ನಾನು ಮಾಡಲ್ಪಟ್ಟಾಗ ಇದು ನನ್ನ ತೋರಿಕೆಯಾಗಿತ್ತು.
ಅನೇಕವೇಳೆ ನಾನು ನನ್ನ ಹೆಸರಿನ ಕುರಿತು ಕುತೂಹಲಪಟ್ಟೆ. 19ನೆಯ ಶತಮಾನದ ಅಂತ್ಯದಲ್ಲಿ, ಮಾಟ್ರಿಯಾನ (ಮಾಟ್ರಿಯಾಷ್ಕದ ಅಲ್ಪಾರ್ಥಕ ರೂಪ) ಎಂಬುದು, ರಷ್ಯಾದಲ್ಲಿನ ಅತ್ಯಂತ ಜನಪ್ರಿಯವಾದ ಸ್ತ್ರೀ ನಾಮಗಳಲ್ಲಿ ಒಂದಾಗಿತ್ತೆಂದು ನಾನು ತಿಳಿದುಕೊಂಡೆ. ಮಾಟ್ರಾನ ಎಂಬ ಲ್ಯಾಟಿನ್ ಮೂಲದಿಂದ ಬಂದದ್ದಾಗಿದ್ದು, “ತಾಯಿ” “ಗೌರವಾನಿತ್ವ ಹೆಂಗಸು” ಅಥವಾ “ಕುಟುಂಬವೊಂದರ ತಾಯಿ” ಎಂಬುದು ಇದರ ಅರ್ಥವಾಗಿದೆ. ಒಂದು ಆಕೃತಿಯನ್ನು ಇನ್ನೊಂದು ಆಕೃತಿಯೊಳಗಿಡುವುದೂ ಫಲಶಕ್ತಿ ಮತ್ತು ಶಾಶ್ವತತೆಗೆ ಯುಕ್ತವಾದ ಸಂಕೇತವಾಗಿತ್ತು.
ಮಾಡುವುದು ಸುಲಭವಲ್ಲ
ನನ್ನನ್ನು ಮಾಡುವ ಪ್ರಯತ್ನಗಳಲ್ಲಿ, ಜನರು ಹೆಚ್ಚು ಸಾಮಗ್ರಿಯನ್ನು ಹಾಳುಮಾಡಿದ್ದಾರೆ ಮತ್ತು ಕೊನೆಯದಾಗಿ ಅಪಜಯದಿಂದ ಬಿಟ್ಟುಬಿಟ್ಟಿದ್ದಾರೆಂದು ತಿಳಿದುಬಂದಿದೆ. ಇತ್ತೀಚೆಗಿನ ವರೆಗೆ, ನನ್ನನ್ನು ಮಾಡುವ ವಿಧಾನವನ್ನು ತಿಳಿಯುವುದು ಒಂದು ರಹಸ್ಯವಾಗಿತ್ತು ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದುದರಿಂದ ಕೆಲವರು ಮಾತ್ರವೇ ನನ್ನನ್ನು ಪಡೆಯಲು ಶಕ್ತರಾಗಿದ್ದರು. ಆದರೆ ಈಗ ನಾನು ಆ ರಹಸ್ಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ.
ನನ್ನನ್ನು ಮಾಡುವುದರಲ್ಲಿ ಒಳಗೂಡಿರುವ ಕೆಲಸವು ನಿಜವಾದ ನೈಪುಣ್ಯವನ್ನು ಅಗತ್ಯಪಡಿಸುತ್ತದೆ. ಮೊದಲಾಗಿ, ಸರಿಯಾದ ವಿಧದ ಮರವನ್ನು ಆರಿಸುವುದು ಪ್ರಾಮುಖ್ಯ. ಅದರ ಮೃದುತ್ವದ ಕಾರಣದಿಂದಾಗಿ, ನಿಂಬೆಯ ಮರವನ್ನು ಸರ್ವಸಾಮಾನ್ಯವಾಗಿ ಆರಿಸಲಾಗುತ್ತದೆ; ವಿರಳವಾಗಿ ಆಲರ್ಡ್ ಅಥವಾ ಬರ್ಚ್ ಮರವನ್ನು ಆರಿಸಲಾಗುತ್ತದೆ. ಸಾಮಾನ್ಯವಾಗಿ ವಸಂತಕಾಲದ ಆರಂಭದಲ್ಲಿ ಮರಗಳನ್ನು ಕಡಿದಾದ ಬಳಿಕ, ಮರವು ಒಣಗುವಾಗ ಅದು ಸೀಳದಂತೆ ತಡೆಗಟ್ಟಲಿಕ್ಕಾಗಿ ಸಾಕಾಗುವಷ್ಟನ್ನು ಮಾತ್ರವೇ ಬಿಟ್ಟು, ಅವುಗಳ ಅಧಿಕಾಂಶ ತೊಗಟೆಯು ಸುಲಿಯಲ್ಪಡುತ್ತದೆ. ತದನಂತರ ಅವು ಒಣಗಿದಂತೆ ಸರಿಯಾದ ಗಾಳಿಯಾಡುವಿಕೆಯನ್ನು ಅನುಭೋಗಿಸಶಕ್ತವಾಗುವಂತೆ, ಆ ಮರದ ದಿಮ್ಮಿಗಳು ಅನೇಕ ವರ್ಷಗಳ ವರೆಗೆ ರಾಶಿಹಾಕಲ್ಪಡುತ್ತವೆ.
ಮರದ ಕತ್ತರಿಸುವಿಕೆಯು ಸೂಕ್ತವಾದ ಸಮಯದಲ್ಲಿ, ಅದು ತೀರ ಒಣಗಿದ್ದೂ ಅಥವಾ ತೀರ ತೇವವಾದದ್ದೂ ಆಗಿರದಿದ್ದಾಗ, ಮಾಡಲ್ಪಡಬೇಕಾದ ಅಗತ್ಯವಿದೆ. ಅದು ಯಾವಾಗ ಸೂಕ್ತವಾದದ್ದಾಗಿದೆಯೆಂದು ಕೇವಲ ಪರಿಣತನೊಬ್ಬನು ನಿಶ್ಚಯವಾಗಿ ಕಂಡುಹಿಡಿಯಬಲ್ಲನು. ಮರದ ಪ್ರತಿಯೊಂದು ತುಂಡು ಸುಮಾರು 15ರಷ್ಟು ಪ್ರತ್ಯೇಕವಾದ ಕಾರ್ಯವಿಧಾನಗಳನ್ನು ಹಾಯ್ದುಹೋಗುತ್ತದೆ. ಸರಣಿಯಲ್ಲಿ ಅತ್ಯಂತ ಸಣ್ಣದಾದ, ಪ್ರತ್ಯೇಕ ತುಂಡುಗಳಾಗಿ ಪ್ರತ್ಯೇಕಿಸಲು ಸಾಧ್ಯವಾಗದ ಒಂದು ಬೊಂಬೆಯು ಪ್ರಥಮವಾಗಿ ಮಾಡಲ್ಪಡುತ್ತದೆ. ಕೆಲವೊಮ್ಮೆ ಇದು ಎಷ್ಟು ಸಣ್ಣದಾಗಿರುತ್ತದೆಂದರೆ, ನೀವು ಪ್ರಯಾಸಪಟ್ಟು ನೋಡಬೇಕಾಗುತ್ತದೆ ಅಥವಾ ಅದನ್ನು ಸ್ಪಷ್ಟವಾಗಿಗಿ ನೋಡಲು ಒಂದು ಭೂತಕನ್ನಡಿಯನ್ನೂ ಉಪಯೋಗಿಸಬೇಕಾಗುತ್ತದೆ.
ಅತ್ಯಂತ ಸಣ್ಣದಾದ ಬೊಂಬೆಯು ಮಾಡಲ್ಪಟ್ಟ ಬಳಿಕ, ಕುಶಲಕರ್ಮಿಯು, ಯಾವುದರೊಳಗೆ ಆ ಮೊದಲನೆಯ ಬೊಂಬೆಯು ಸರಿಯಾಗಿ ಜೋಡಣೆಯಾಗುತ್ತದೋ ಆ ಮುಂದಿನ ಆಕೃತಿಯನ್ನು ಮಾಡಲಾರಂಭಿಸುತ್ತಾನೆ. ಮರದ ತುಂಡೊಂದು ಅಗತ್ಯವಿರುವಷ್ಟು ಉದ್ದಕ್ಕೆ ಸಂಸ್ಕರಿಸಲ್ಪಡುತ್ತದೆ ಮತ್ತು ಅದನ್ನು ಒಂದು ಮೇಲ್ಭಾಗ ಹಾಗೂ ಒಂದು ಕೆಳಭಾಗವಾಗಿ ತುಂಡುಮಾಡಲಾಗುತ್ತದೆ. ಮೊದಲು ಬೊಂಬೆಯ ಕೆಳಭಾಗವು ಮಾಡಲ್ಪಡುತ್ತದೆ. ತದನಂತರ, ಅತ್ಯಂತ ಸಣ್ಣದಾದ ಬೊಂಬೆಯು ಅಚುಕ್ಚಟಾಗ್ಟಿ ಒಳಗೆ ಜೋಡಣೆಯಾಗುವಂತೆ ಎರಡನೇ ಬೊಂಬೆಯ ಎರಡೂ ಭಾಗಗಳ ಒಳಗಿನಿಂದ ಮರವು ತೆಗೆಯಲ್ಪಡುತ್ತದೆ. ನಿಪುಣನಾದ ಕುಶಲಕರ್ಮಿಯೊಬ್ಬನು, ಪ್ರಾಸಂಗಿಕವಾಗಿ, ಅಳತೆಗಳನ್ನು ತೆಗೆದುಕೊಳ್ಳುವುದರ ಕುರಿತು ಆತಂಕಪಡುವುದಿಲ್ಲ, ಬದಲಾಗಿ ಅನುಭವದ ಮೇಲೆಯೇ ಆತುಕೊಳ್ಳುತ್ತಾನೆ. ತದನಂತರ ಅವನು, ಮುಂಚಿನ ಎರಡು ಬೊಂಬೆಗಳು ಒಳಗೆ ಜೋಡಣೆಯಾಗುವ, ಸ್ವಲ್ಪ ಹೆಚ್ಚು ದೊಡ್ಡದಾದ ಬೊಂಬೆಯನ್ನು ಮಾಡುತ್ತಾ, ಈ ಕಾರ್ಯವಿಧಾನವನ್ನು ಪುನರಾವೃತ್ತಿಸುತ್ತಾನೆ.
ಒಂದರೊಳಗೊಂದು ಒಳಕೊಳ್ಳುವ ಬೊಂಬೆಗಳ ಸಂಖ್ಯೆಯು 2ರಿಂದ 60ರ ವರೆಗಿರುತ್ತದೆ. ಅತ್ಯಂತ ದೊಡ್ಡ ಬೊಂಬೆಯು ಅದರ ನಿರ್ಮಾಣಿಕನಷ್ಟು ಎತ್ತರವಾಗಿರಬಹುದು! ಪ್ರತಿಯೊಂದು ಬೊಂಬೆಯು ಮಾಡಿ ಮುಗಿಸಲ್ಪಡುವಾಗ, ಮೇಲ್ಭಾಗದಲ್ಲಿರುವ ಯಾವುದೇ ಟೊಳ್ಳುಗಳನ್ನು ತುಂಬುವ, ಹಿಟ್ಟಿನ ಅಂಟಿನಿಂದ ಹೊದಿಸಲಾಗುತ್ತದೆ. ಕೊನೆಯ ಒಣಗಿಸುವಿಕೆಯು ಆರಂಭವಾಗುತ್ತದೆ, ಮತ್ತು ವರ್ಣಚಿತ್ರಕಾರನು ಬಣ್ಣವನ್ನು ಒಂದೇ ಸಮವಾಗಿ ಬಳಿಯಲು ಅನುಕೂಲ ಮಾಡಲಿಕ್ಕಾಗಿ, ಬೊಂಬೆಯ ಹೊರಭಾಗವು ನುಣುಪಾಗುವಂತೆ ಉಜ್ಜಲ್ಪಡುತ್ತದೆ. ಬಳಿಕ ಬೊಂಬೆಗೆ ಅದರ ಅಸಮಾನ ಶೈಲಿಯು ಕೊಡಲ್ಪಡುತ್ತದೆ.
ಕಾಲವು ಬದಲಾವಣೆಗಳನ್ನು ತಂದಿದೆ
ಜನರು ಹೆಚ್ಚು ವೃದ್ಧರಾದಂತೆ ಅವರು ಬದಲಾಗುತ್ತಾರೆ, ಮತ್ತು ನನ್ನ ಕುರಿತೂ ಅದನ್ನೇ ಹೇಳಸಾಧ್ಯವಿದೆ. ಮಾಟ್ರಿಯಾಷ್ಕ ಬೊಂಬೆಯನ್ನೇ ಮಾಡುವ ಕಲಾತಂತ್ರವು ಕ್ರಮೇಣವಾಗಿ ಮಾಸ್ಕೋದಿಂದ, ಸಮ್ಯಾನಫ್, ಪಾಲ್ಸಾಫ್ಕಿ ಮೈಡನ್, ವೀಎಟ್ಕ, ಮತ್ತು ಟವೀರ್ಗಳನ್ನು ಒಳಗೊಂಡು, ಇತರ ನಗರಗಳು ಹಾಗು ಪಟ್ಟಣಗಳಿಗೆ ಹಬ್ಬಿತ್ತು.a ಪ್ರತಿಯೊಂದು ಸ್ಥಳವೂ ತನ್ನದೇ ಆದ ಶೈಲಿಯನ್ನು ಮತ್ತು ಅಲಂಕರಣ ವಿಧಾನವನ್ನು ವಿಕಸಿಸಿತು. ನನ್ನ ನಿಜವಾದ ಗುರುತಿಸುವಿಕೆಯ ನಷ್ಟವು ತೊಂದರೆಯನ್ನುಂಟುಮಾಡುವಂತಿತ್ತು, ಆದರೆ ನಾನು ಗೊಣಗಲಿಲ್ಲ. 1812ನೆಯ ಯುದ್ಧದ ಶತಮಾನೋತ್ಸವದ ಸಮಯದಲ್ಲಿ, ರಷ್ಯಾದ ಜನರಲ್ ಮ್ಯಿಕಯೀಲ್ ಕೂಟೂಸಫ್ ಮತ್ತು ಫ್ರೆಂಚ್ ಜನರಲ್ ನೆಪೋಲಿಯನ್ ಬೋನಪಾರ್ಟ್ರನ್ನು ಚಿತ್ರಿಸುವ, ಒಂದು ಜೊತೆ ಬೊಂಬೆಗಳಿಗಾಗಿ ಯಾರೋ ಒಬ್ಬರು ಆರ್ಡರ್ ಮಾಡಿದ್ದರು. ಈ ಇಬ್ಬರು ಜನರಲ್ಗಳು ಅತ್ಯಂತ ದೊಡ್ಡ ಬೊಂಬೆಗಳಾಗಿದ್ದರು ಮತ್ತು ಯುದ್ಧದಲ್ಲಿ ಒಳಗೂಡಿದ್ದ ವಿರುದ್ಧ ಪಕ್ಷದ ಜನರಲ್ಗಳು, ತಮ್ಮ ವೈಯಕ್ತಿಕ ಸೇನಾನಾಯಕರ ಒಳಗೆ ಜೋಡಣೆಯಾಗುವಂತೆ ಹೆಚ್ಚು ಸಣ್ಣದಾಗಿ ಮಾಡಲ್ಪಟ್ಟಿದ್ದರು.
ಬಹಳ ಸಮಯದ ವರೆಗೆ, ರಾಜಕೀಯ ಆಕೃತಿಗಳನ್ನು ಚಿತ್ರಿಸುವ ಈ ರೀತಿಯ ಬೊಂಬೆಗಳನ್ನು ಮಾಡುವುದು ಮತ್ತು ಮಾರುವುದು ಕಟ್ಟುನಿಟ್ಟಾಗಿ ನಿಯಂತ್ರಿಸಲ್ಪಟ್ಟಿತ್ತು. ಆದರೆ 1980ಗಳ ಅಂತ್ಯದಲ್ಲಿನ ರಾಜಕೀಯ ಬದಲಾವಣೆಗಳು ಕುಶಲಕರ್ಮಿಗಳಿಗೆ ಹೊಸ ಸಾಧ್ಯತೆಗಳನ್ನು ಮತ್ತು ಸ್ವಾತಂತ್ರ್ಯಗಳನ್ನು ಕೊಟ್ಟಿತು. ಈಗ ಅವರು ತಮ್ಮ ಉತ್ಪನ್ನಗಳನ್ನು ಭಯವಿಲ್ಲದೆ ಮಾಡಲು ಮತ್ತು ಮಾರಲು ಸಾಧ್ಯವಿತ್ತು.
ಪ್ರಥಮವಾಗಿ ಯಾರ ಬೊಂಬೆಗಳು ಸಾರ್ವಜನಿಕವಾಗಿ ಜನಪ್ರಿಯವಾಗಿ ಪರಿಣಮಿಸಿದವೋ ಅವರಲ್ಲಿ, ಸ್ಯಿಕಾರ್ಸ್ಕಿ ಎಂಬ ಹೆಸರಿನ ಒಬ್ಬ ವರ್ಣಚಿತ್ರಕಾರನು ಒಬ್ಬನಾಗಿದ್ದನು. ಅವನ ಬೊಂಬೆಗಳಿಗೆ ಅತ್ಯಂತ ಹೆಚ್ಚು ಬೆಲೆಯಿದೆ; ಒಂದೊಂದು ಜೊತೆ 3,000 ಡಾಲರ್ಗಳಷ್ಟು ಬೆಲೆಬಾಳುತ್ತದೆ. ಅವನ ಯಶಸ್ವಿಯು ಇತರ ಕಲಾವಿದರನ್ನು ಪ್ರಚೋದಿಸಿತು, ಮತ್ತು ಕಳೆದ ಆರು ವರ್ಷಗಳಲ್ಲಿ ಮಾಟ್ರಿಯಾಷ್ಕವನ್ನು ಮಾಡುವುದಕ್ಕೆ ಕಾರ್ಯಶಕ್ತಿಯುಳ್ಳ ಪ್ರಚೋದನೆಯು ಕೊಡಲ್ಪಟ್ಟಿದೆ.
ಮಾಟ್ರಿಯಾಷ್ಕ ಎಂಬ ನನ್ನ ಹೆಸರು ಈಗ, ಒಂದರೊಳಗೊಂದು ಜೋಡಣೆಯಾಗುವಂತೆ ಮಾಡುವ ಎಲ್ಲ ಬೊಂಬೆಗಳಿಗೆ ಅನ್ವಯವಾಗುತ್ತಿದೆ. ವಿವಿಧ ಮುಖ್ಯ ವಿಷಯಗಳು ಪ್ರದರ್ಶಿಸಲ್ಪಡುತ್ತವೆ: ಹೂವುಗಳು, ಚರ್ಚುಗಳು, ಪ್ರತಿಮೆಗಳು, ದಂತ ಕಥೆಗಳು, ಕುಟುಂಬದ ಮುಖ್ಯ ವಿಷಯಗಳು, ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಸಹ. ಈಗ ಲಭ್ಯವಿರುವ ವ್ಯಾಪಕವಾದ ವೈವಿಧ್ಯವು ನನ್ನನ್ನು ತೀರ ನ್ಯಾಯವಾದ ಬೆಲೆಯಲ್ಲಿಡಲು ಸಹಾಯ ಮಾಡುತ್ತದೆ.
ಮಾಸ್ಕೋದಲ್ಲಿ 1993ರ ಬೇಸಿಗೆಯಲ್ಲಿ ಎಂದಿನಂತೆ ಅಂಗಡಿಯೊಂದರ ಪ್ರದರ್ಶನ ಪೆಟ್ಟಿಗೆಯಲ್ಲಿ ನಾನು ನಿಂತಿದ್ದಾಗ, ಸಮೀಪಿಸುತ್ತಿರುವ ವಿದೇಶೀ ಪ್ರವಾಸಿಗರ ಒಂದು ಗುಂಪಿನ ಧ್ವನಿಗಳನ್ನು ನಾನು ಥಟ್ಟನೆ ಕೇಳಿಸಿಕೊಂಡೆ. ಅವರು ಹಾಜರಾಗುತ್ತಿದ್ದ ಯೆಹೋವನ ಸಾಕ್ಷಿಗಳ ಅಧಿವೇಶನವೊಂದರ ಕುರಿತು ಅವರು ಏನನ್ನೋ ಹೇಳುತ್ತಿದ್ದುದ್ದನ್ನು ನಾನು ಕೇಳಿಸಿಕೊಂಡೆ ಮತ್ತು ಅದ್ಭುತವಾದ ಅಂತಹ ಒಂದು ಘಟನೆಯ ಜ್ಞಾಪಕಾರ್ಥವಾಗಿ, ಅವರಲ್ಲಿ ಪ್ರತಿಯೊಬ್ಬರೂ ನನ್ನನ್ನು ತಮ್ಮೊಂದಿಗೆ ಮನೆಗೆ ಕೊಂಡೊಯ್ಯಲು ಬಯಸಿದರು. ಕಾರಣವೇನೆಂದು ಕುತೂಹಲಪಡುತ್ತಾ, ಅಗಲವಾದ ಕಣ್ಣುಗಳಿಂದ ನಾನು ಅವರನ್ನು ದಿಟ್ಟಿಸು ನೋಡಿದೆ. ಉತ್ತರ ನೀಡಲಿಕ್ಕಾಗಿಯೋ ಎಂಬಂತೆ ಅವರಲ್ಲಿ ಒಬ್ಬಳು ಹೇಳಿದ್ದು: “ಇವಳು ಕೇವಲ ಒಂದು ಸ್ಮರಣೆಯ ವಸ್ತುವಿಗಿಂತಲೂ ಹೆಚ್ಚಿನವಳಾಗಿದ್ದಾಳೆ. ನನ್ನ ಗೆಳತಿಯರು ಇವಳ ಕಣ್ಣುಗಳನ್ನು ನೋಡುವಂತೆ ನಾನು ಬಯಸುತ್ತೇನೆ. ಬೈಬಲಿನಲ್ಲಿ ಕಂಡುಬರುವಂತೆ ರಾಜ್ಯದ ಕುರಿತು ಮತ್ತು ದೇವರ ನಾಮದ ಕುರಿತು ನಾನು ಮಾತಾಡಿದಂತಹ ರಷ್ಯಾದ ಜನರ ಕಣ್ಣುಗಳಲ್ಲಿ ನಾನು ಕಂಡಂತಹದ್ದೇ ಅಭಿವ್ಯಕ್ತಿಯನ್ನು ನಾನು ಅವರಲ್ಲಿ ಕಾಣುತ್ತೇನೆ.”
ಯೆಹೋವನ ಸಾಕ್ಷಿಗಳು? ರಾಜ್ಯ? ದೇವರ ನಾಮ? ಬೈಬಲ್? ನಾನು ಕಿವಿಗೊಟ್ಟಂತೆ ನನ್ನ ಕಣ್ಣುಗಳು ಹೆಚ್ಚು ಅಗಲವಾದವು, ಮತ್ತು ಸಂತೋಷಕರವಾಗಿ ಕಾಣುವ ಈ ಜನರಲ್ಲಿ ಕೆಲವರಿಂದ ಬಹು ದೂರದ ಸ್ಥಳಗಳಿಗೆ ಕೊಂಡೊಯ್ಯಲ್ಪಡುವ ಪ್ರತೀಕ್ಷೆಯಿಂದ ನನ್ನ ಹೃದಯವು ಕೊಂಚಮಟ್ಟಿಗೆ ಹೆಚ್ಚು ವೇಗವಾಗಿ ಬಡಿಯಿತು. ರಷ್ಯಾವನ್ನು ಸಂದರ್ಶಿಸುತ್ತಿರುವುದಕ್ಕಾಗಿ ಅವರ ಮುಖ್ಯ ಉದ್ದೇಶವೇನಾಗಿತ್ತು ಎಂಬುದರ ಕುರಿತು ಬಹುಶಃ ನಾನು ಹೆಚ್ಚನ್ನು ಕಲಿಯಸಾಧ್ಯವಿದೆ. ನನ್ನನ್ನು, ಮಾಟ್ರಿಯಾಷ್ಕ ಎಂಬ ಹೆಸರಿನ ಒಂದು ಬೊಂಬೆಯನ್ನು, ಕೇವಲ ಭೇಟಿ ಮಾಡುವುದಕ್ಕಿಂತಲೂ ಹೆಚ್ಚಿನದ್ದಕ್ಕಾಗಿಯೇ ಅವರು ಬಂದಿರಬೇಕೆಂದು ನನಗೆ ಖಾತ್ರಿಯಿದೆ.
[ಅಧ್ಯಯನ ಪ್ರಶ್ನೆಗಳು]
a 1930ಗಳಲ್ಲಿ, ವೀಎಟ್ಕವು ಕೈರಾವ್ ಎಂಬದಾಗಿಯೂ ಟವೀರ್, ಕಾಲೀನನ್ ಎಂದೂ ಪ್ರಸಿದ್ಧವಾದವು. ಸೋವಿಯೆಟ್ ಒಕ್ಕೂಟದ ಕುಸಿಯುವಿಕೆಯಂದಿನಿಂದ, ಮೂಲ ಹೆಸರುಗಳು ಪುನಸ್ಸಾಧ್ವೀನಪಡಿಸಲ್ಪಟ್ಟಿವೆ.