ನಮ್ಮ ವಾಚಕರಿಂದ
ಕಾಲಹರಣ “ಕಾಲಹರಣ—ಕಾಲ ಚೋರ” (ಎಪ್ರಿಲ್ 8, 1995) ಎಂಬ ಲೇಖನವು ಪ್ರಾಯೋಗಿಕವೂ ವಿನೋದ ಶೀಲವೂ ಆದ ಒಂದು ರೀತಿಯಲ್ಲಿ ಬರೆಯಲ್ಪಟ್ಟಿತ್ತು. ಅದನ್ನು ನಾನು ಓದಿದ ಹಾಗೆ, ಕಾಲಹರಣ ಮಾಡುವ ದುಸ್ಸಾಧ್ಯವಾದ ಹವ್ಯಾಸವು ನನಗಿರುವ ಕಾರಣ, ನನ್ನನ್ನು ನೋಡಿ ನಾನೇ ನಗುತ್ತಿರುವುದನ್ನು ಕಂಡುಕೊಂಡೆ.
ಎಫ್. ಬಿ. ಎಚ್., ಬ್ರೆಸಿಲ್
ನಾನು ನನ್ನ ಜೀವನದ ಹೆಚ್ಚಿನ ಭಾಗ ಅಸ್ಥಿಗತವಾಗಿ ಕಾಲಹರಣ ಮಾಡುವವಳಾಗಿದ್ದೆ, ಆದುದರಿಂದ ಇದು ನನಗೆ ಸಮಯೋಚಿತವಾದ ಮಾಹಿತಿಯಾಗಿತ್ತು. ಅದು ಉತ್ತಮವಾಗಿ ಬರೆಯಲ್ಪಟ್ಟಿತ್ತು, ಮತ್ತು ನಾನು ನನ್ನ ಸಮಯವನ್ನು ಅತ್ಯುತ್ತಮವಾಗಿ ರೂಪಿಸಲು ಸಹಾಯಕವಾಗಿ ಮಾಹಿತಿಯನ್ನು ಉಪಯೋಗಿಸಲು ನಾನು ಯೋಜಿಸುತ್ತೇನೆ. ಅನೇಕ ಸಲ ನಾನು ವಿಭಿನ್ನ ಲೇಖನಗಳಿಗಾಗಿ ಉಪಕಾರ ಹೇಳುವ ಪತ್ರವೊಂದನ್ನು ಬರೆಯಲು ಬಯಸಿದೆ ಮತ್ತು ಅದನ್ನು ಎಂದೂ ಮಾಡಲಿಲ್ಲ. ಈಗ ಕಟ್ಟಕಡೆಗೆ ನಾನು ಅದನ್ನು ಪೂರೈಸಿದ್ದೇನೆ!
ಎಮ್. ಏಚ್., ಅಮೆರಿಕ
ಲೇಖನವನ್ನು ನಾನು ಗಮನಿಸಿದಾಗ, ಪತ್ರಿಕೆಯ ಪುಟಗಳನ್ನು ನಾನು ತಿರುವಿಹಾಕುತ್ತಿದ್ದೆ. ನಾನು ಲೇಖನದ ಉಳಿದ ಭಾಗವನ್ನು ನಂತರ ಓದುವೆನೆಂದು ಯೋಚಿಸುತ್ತಾ, ಪೀಠಿಕೆಯನ್ನು ಓದಿದೆ. ಆದರೆ ಆರಂಭದ ಮಾತುಗಳು ಹೇಳಿದ್ದು: “ನಿಲ್ಲಿ! ಈ ಲೇಖನ ಓದುವುದನ್ನು ನಿಲ್ಲಿಸಬೇಡಿ!” ಕಾಲಹರಣದಿಂದಾಗಿ ಸಮಯವು ನನ್ನಿಂದ ಕಸಿದುಕೊಳ್ಳಲ್ಪಡುವಂತೆ ಅನುಮತಿಸಿದ್ದೇನೆಂದು ನಾನು ಈಗ ತಿಳಿದಿದ್ದೇನೆ.
ಎ. ಇ., ಇಟಲಿ
ನಾನೊಬ್ಬ ದರ್ಜಿ, ಮತ್ತು ಕಾಲಹರಣವು ನನ್ನ ಜೀವನದ ಒಂದು ರೀತಿಯಾಗಿತ್ತು. ಪಟ್ಟಿಗಳನ್ನು ಮಾಡುವುದು, ಉಚಿತವಾದ ಸಮಯದಲ್ಲಿ ಒಪ್ಪಿಸುವುದು, ಮತ್ತು ತಡೆಗಳಿಗಾಗಿ ಯೋಜಿಸುವುದನ್ನು ನಾನು ಅಸಡ್ಡೆಮಾಡಿದೆ. ಆದರೆ ಈಗ ನಾನು ನಿಮ್ಮ ಸಲಹೆಗಳನ್ನು ಉಪಯೋಗಕ್ಕೆ ಹಾಕಲು ಕಲಿತಿದ್ದೇನೆ, ಮತ್ತು ನಾನು ಪ್ರತಿಫಲಗಳನ್ನು ಅನುಭವಿಸುತ್ತಿದ್ದೇನೆ.
ಎಸ್. ಎನ್., ನೈಜಿರೀಯ
ಕಡೆಯ ದಿವಸಗಳು ಒಬ್ಬ ಪೂರ್ಣಸಮಯದ ಸೌವಾರ್ತಿಕಳೋಪಾದಿ, ನಮ್ಮ ಪತ್ರಿಕೆಗಳಿಗಾಗಿ ನಾನು ನಿಮಗೆ ಉಪಕಾರವನ್ನು ಹೇಳಲು ಬಯಸುತ್ತೇನೆ. ಮೇ 8, 1995ರ ಸಂಚಿಕೆಯಲ್ಲಿನ “ಇವು ಕಡೆಯ ದಿವಸಗಳೊ?” ಎಂಬ ಲೇಖನಗಳ ವೈಶಿಷ್ಟ್ಯ ಸರಣಿಯನ್ನು ನಾನು ಓದುತ್ತಿದ್ದಂತೆ, ‘ಈ ಲೇಖನಗಳು ಎಷ್ಟೊಂದು ಸ್ಫುಟವೂ, ನೇರವೂ, ಉತ್ತಮವಾಗಿ ದೃಷ್ಟಾಂತಿಸಲ್ಪಟ್ಟವುಗಳೂ ಆಗಿವೆ!’ ಎಂಬುದಾಗಿ ನಾನು ನನ್ನಷ್ಟಕ್ಕೆ ಯೋಚಿಸಿದೆ. ವಿನ್ಯಾಸ, ಅತ್ಯುತ್ಕೃಷ್ಟವಾದ ಛಾಯಾಚಿತ್ರ, ಮತ್ತು ವಿವರಣೆಯ ಬರಹಗಳು ನಿಜವಾಗಿಯೂ ನೈಜ ಅಂಶಗಳನ್ನು ತಂದವು ಮತ್ತು ಲೇಖನಗಳನ್ನು ಓದಲು ಮತ್ತು ಗ್ರಹಿಸಲು ಸುಲಭವಾಗಿ ಮಾಡಿದವು. ಅಂಥ ಪತ್ರಿಕೆಯನ್ನು ನಮ್ಮ ನೆರೆಹೊರೆಯವರಿಗೆ ನೀಡುವುದು ಸಂತೋಷಕರವಾಗಿತ್ತು!
ಜೆ. ಬಿ., ಅಮೆರಿಕ
ಉಡಿದದ್ದು “ಉಡಿದದ್ದು (ಹರ್ಪಿಸ್)—ನೋವನ್ನು ನಿಭಾಯಿಸುವುದು,” ಎಂಬ ನಿಮ್ಮ ಲೇಖನವನ್ನು ನಾನು ಓದಿದೆ. (ಮೇ 8, 1995) ಮೂರು ದಿನಗಳ ಅನಂತರ ನಿಮ್ಮ ಲೇಖನದಲ್ಲಿನ ಉಡಿದದ್ದಿನ ಬಣ್ಣಿಸುವಿಕೆಗೆ ನಿಕಟವಾಗಿ ಹೋಲುವ ಚರ್ಮದ ಮೇಲಿನ ಗುಳ್ಳೆಯನ್ನು ನಾನು ಹೊಂದಿದೆ. ನಾನು ವೈದ್ಯರಲ್ಲಿಗೆ ಹೋದೆ ಮತ್ತು ಅವರಿಗೆ ನಾನು ಪ್ರಾಯಶಃ ಉಡಿದದ್ದನ್ನು ಹೊಂದಿದ್ದೇನೆಂದು ನೆನಸಿದೆನೆಂದು ಹೇಳಿದೆ. ಅವರು ನನಗೆ “ನೀನು ಬಹಳ ಬುದ್ಧಿವಂತೆ” ಎಂದು ಹೇಳಿದರು—ನನ್ನ ರೋಗ ನಿರ್ಣಯವು ಸರಿಯಾಗಿತ್ತು! ಆರಂಭದ ಹಂತದಲ್ಲಿಯೇ ರೋಗವು ಕಂಡುಹಿಡಿಯಲ್ಪಟ್ಟದ್ದರಿಂದ, ಅಧಿಕಾಂಶ ಉಡಿದದ್ದಿನ ರೋಗಿಗಳು ಪಡೆಯುವ ಹೆಚ್ಚಿನ ನೋವನ್ನು ನಾನು ತಪ್ಪಿಸಿಕೊಳ್ಳುವೆನೆಂದು ಅವರು ಹೇಳಿದರು. ನಿಮ್ಮ ಲೇಖನಕ್ಕಾಗಿ ಉಪಕಾರಗಳು!
ಕೆ. ಬಿ., ಅಮೆರಿಕ
ಮಾಟ್ರಿಯಾಷ್ಕ “ಮಾಟ್ರಿಯಾಷ್ಕ—ಎಷ್ಟು ಮುದ್ದಾದ ಒಂದು ಬೊಂಬೆ!” ಎಂಬ ಲೇಖನಕ್ಕಾಗಿ ನಿಮಗೆ ಉಪಕಾರ. (ಮೇ 8, 1995) ನಾನು ಅದನ್ನು ಓದಿದಂತೆ, ಅದು ಬರೆಯಲ್ಪಟ್ಟಿದ್ದ ರೀತಿಯಿಂದ ನಾನು ಪ್ರಭಾವಿಸಲ್ಪಟ್ಟೆ. ಛಾಯಾಚಿತ್ರಗಳು ಮನೋಹರವಾಗಿವೆ! ನಾನು ಚಿಕ್ಕವಳಾಗಿದ್ದಾಗಿನಿಂದ, ಈ ಬೊಂಬೆಯಿಂದ ನಾನು ಮೋಹಗೊಳಿಸಲ್ಪಟ್ಟಿದ್ದೇನೆ, ಆದರೆ ಅದರ ಮೂಲದ ಬಗ್ಗೆ ನನಗೆ ಯಾವುದೇ ವಿಷಯವು ತಿಳಿದಿರಲಿಲ್ಲ. ನನಗಾಗಿ ಒಂದು ಬೊಂಬೆಯನ್ನು ಖರೀದಿಸಲು ನಾನು ಈಗ ಯಾರಾದರೊಬ್ಬರನ್ನು ಮನವೊಪ್ಪಿಸಬೇಕಾಗಿದೆ!
ಎಮ್. ಟಿ., ಇಟಲಿ
ಸಲಿಂಗಿ ಕಾಮ ನಾನು ಒಬ್ಬ ಶುಶ್ರೂಷಾ ಸೇವಕನು ಮತ್ತು ಪಯನೀಯರ್ ಒಬ್ಬ ಪೂರ್ಣಸಮಯದ ಸೌವಾರ್ತಿಕನೋಪಾದಿ ಸೇವೆಸಲ್ಲಿಸುತ್ತೇನೆ. ಸಲಿಂಗಿ ಕಾಮದ ಮೇಲಿನ “ಯುವ ಜನರು ಪ್ರಶ್ನಿಸುವುದು . . .” ಎಂಬ ಲೇಖನಗಳು ನನಗಾಗಿ ಬರೆಯಲ್ಪಟ್ಟಿವೆ ಎಂಬಂತೆ ತೋರುತ್ತದೆ! (ಫೆಬ್ರವರಿ 8, ಮಾರ್ಚ್ 8, ಮತ್ತು ಎಪ್ರಿಲ್ 8, 1995) ನನ್ನ ಆದಿ ಮತ್ತು ಹದಿವಯಸ್ಸಿನ ನಡುಭಾಗದಲ್ಲಿ, ನಾನು ಸಲಿಂಗಿ ಕಾಮವನ್ನು ಪರೀಕ್ಷಿಸಿ ನೋಡಿದೆ. ನಾನು ಅದನ್ನು ನಿಲ್ಲಿಸಿದೆ, ಆದರೆ ಅಂದಿನಿಂದ ನಾನು ಈ ಅನಿಸಿಕೆಗಳನ್ನು ಹೋರಾಡುವುದನ್ನು ಕಷ್ಟಕರವಾದದ್ದಾಗಿ ಕಂಡುಕೊಂಡಿದ್ದೇನೆ. ಹಾಗಿದ್ದರೂ, ಈ ಲೇಖನಗಳಿಂದ, ಕಟ್ಟಕಡೆಗೆ ನನ್ನ ಅನಿಸಿಕೆಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ, ಮತ್ತು ನಾನು ಹೋರಾಡುತ್ತಾ ಇರಲು ಸಹಾಯವನ್ನು ಪಡೆದಿದ್ದೇನೆ!
ಹೆಸರನ್ನು ತಡೆಹಿಡಿಯಲಾಗಿದೆ, ಡೆನ್ಮಾರ್ಕ್
ನಾನು ಬಾಲ್ಯಾವಸ್ಥೆಯಿಂದ ಲೈಂಗಿಕ ದುರುಪಯೋಗದ ಕಾರಣ ನೋವನ್ನು ಅನುಭವಿಸಿದೆ. ನನಗೆ ಪ್ರೀತಿ ಅಥವಾ ವಾತ್ಸಲ್ಯವು ಎಂದೂ ತೋರಿಸಲ್ಪಡಲಿಲ್ಲ. ನಾನು ಸಲಿಂಗಿ ಕಾಮವನ್ನು ಅಭ್ಯಸಿಸಿದೆ; ಆದರೆ ಸಲಿಂಗಿ ಕಾಮದ ಮನೋಭಾವಗಳು ತರುವಂಥ, ಲಜ್ಜೆ, ನೋವು, ದುಃಖ, ಮತ್ತು ಹತಾಶೆಗಳ ಕುರಿತು ಯುವ ಜನರು ತಿಳಿಯುವಲ್ಲಿ, ಅವರು ಅವುಗಳಿಂದ ದೂರ ಓಡಿಹೋಗುವರು. ಅನೇಕರು ಈ ವಿಷಯದ ಕುರಿತು ಮಾತಾಡುವುದರಿಂದ ದೂರವಿರುತ್ತಾರೆ, ಆದರೆ ನೀವು ಅದನ್ನು ಒಂದು ಸ್ಫುಟವಾದ ರೀತಿಯಲ್ಲಿ ನಿರ್ವಹಿಸಿದಿರಿ. ಅಂಥ ವಿಷಯಗಳನ್ನು ಪ್ರಕಟಿಸಿದ್ದಕ್ಕಾಗಿ ನಾನು ನನ್ನ ಪೂರ್ಣಹೃದಯದಿಂದ ಉಪಕಾರವನ್ನು ಹೇಳುತ್ತೇನೆ.
ಹೆಸರು ತಡೆಹಿಡಿಯಲ್ಪಟ್ಟಿದೆ, ಬ್ರೆಸಿಲ್