ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g95 5/8 ಪು. 23-24
  • ಜೀವಿತದ ಅರ್ಥವೇನು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವಿತದ ಅರ್ಥವೇನು?
  • ಎಚ್ಚರ!—1995
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • “ಮೂಲ ಪ್ರಚೋದನಾ ಶಕ್ತಿ”
  • ಸೊಲೊಮೋನನ ಆವಿಷ್ಕಾರವು ಯೇಸುವಿನಿಂದ ದೃಢಪಡಿಸಲ್ಪಟ್ಟಿತು
  • ಜೀವಿತದ ಅರ್ಥವನ್ನು ಆವಿಷ್ಕರಿಸುವುದು
  • ‘ಮನುಷ್ಯನ ಕರ್ತವ್ಯ’
    ಕಾವಲಿನಬುರುಜು—1997
  • ನಿಮ್ಮ ಜೀವನ—ಅದರ ಉದ್ದೇಶವೇನು?
    ಕಾವಲಿನಬುರುಜು—1997
  • ಜೀವನವನ್ನು ಸಾರ್ಥಕವನ್ನಾಗಿ ಮಾಡುವುದು ಯಾವುದು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಜೀವಿತಕ್ಕೆ ಒಂದು ಉದ್ದೇಶವಿದೆಯೆ?
    ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?
ಇನ್ನಷ್ಟು
ಎಚ್ಚರ!—1995
g95 5/8 ಪು. 23-24

ಬೈಬಲಿನ ದೃಷ್ಟಿಕೋನ

ಜೀವಿತದ ಅರ್ಥವೇನು?

“ನೈಸರ್ಗಿಕ ವಿಂಗಡಿಕೆಯು ಜೈವಿಕ ಜೀವದ ಕುರಿತಾದ ಸಮರ್ಥ ವಿವರಣೆಯಾಗಿದೆಯೆಂದು ಡಾರ್ವಿನ್‌ವಾದಿಗಳು ವಾದಿಸುತ್ತಾರೆ. ಆದರೂ ಒಂದು ಜೀವಿಯು ಹೆಚ್ಚು ಮಹತ್ತರವಾದ ಜಟಿಲತೆ, ಸ್ವಪ್ರಜ್ಞೆ ಮತ್ತು ಬುದ್ಧಿವಂತಿಕೆಯ ಕಡೆಗೆ ವಿಕಸಿಸುವುದಾದರೆ, ಆಗ ಆ ಗುಣಗಳು ಅಪೇಕ್ಷಿಸಲ್ಪಡುವುದೇ ಅದರ ಕಾರಣವಾಗಿದೆ ಎಂಬುದು ಸಾಮಾನ್ಯ ಜ್ಞಾನದಂತೆ ಭಾಸವಾಗುತ್ತದೆ.”—ಡೈಲನ್‌ ಥಾಮಸ್‌ (1914-53, ವೆಲ್ಷ್‌ ಕವಿ ಮತ್ತು ಲೇಖಕ).

ಜೀವದ ಅರ್ಥಕ್ಕಾಗಿ ಹುಡುಕಾಟವು ಹೊಸತಲ್ಲ. ಶತಮಾನಗಳ ವರೆಗೆ ಇದು ಕುತೂಹಲಿಗಳ ಮನಸ್ಸುಗಳನ್ನು ಪೂರ್ವಾಕ್ರಮಿಸಿದೆ. ಇದು ನ್ಯೂ ಸೀಲೆಂಡಿನ ನಿವಾಸಿಗಳ ಮನಸ್ಸುಗಳಲ್ಲಿ, ಹತ್ತು ವರ್ಷಗಳ ಹಿಂದೆ ಇದುದ್ದಕ್ಕಿಂತಲೂ ಇಂದು ಹೆಚ್ಚಾಗಿದೆಯೆಂದು ಇತ್ತೀಚೆಗಿನ ಒಂದು ಎಣಿಕೆಯು ತೋರಿಸುತ್ತದೆ. 15 ವರ್ಷಗಳು ಮತ್ತು ಹೆಚ್ಚಿನ ವಯಸ್ಸುಗಳ, ಜನಸಂಖ್ಯೆಯ ನಲವತ್ತೊಂಬತ್ತು ಪ್ರತಿಶತವು, “ಅನೇಕವೇಳೆ ಜೀವಿತದ ಅರ್ಥದ ಕುರಿತಾಗಿ ಆಲೋಚಿಸಿತು,” ಎಂದು ಲಿಸ್‌ನರ್‌ ಪತ್ರಿಕೆಯಲ್ಲಿ ಪ್ರಕಾಶಿಸಲ್ಪಟ್ಟ ವರದಿಯು ತಿಳಿಸುತ್ತದೆ. ಅದು 1985ರಲ್ಲಿ ತದ್ರೀತಿಯ ಒಂದು ಸಮೀಕ್ಷೆಯು ನಡೆಸಲ್ಪಟ್ಟಾಗ 32 ಪ್ರತಿಶತದಿಂದ ವೃದ್ಧಿಯಾಗಿತ್ತು.

ಇತರ ರಾಷ್ಟ್ರಗಳ ಜನರಿಂದ ಹಂಚಿಕೊಳ್ಳಲ್ಪಟ್ಟ ಭಾವನೆಗಳನ್ನು ನ್ಯೂ ಸೀಲೆಂಡಿನ ನಿವಾಸಿಗಳು ವ್ಯಕ್ತಪಡಿಸುತ್ತಿರುವಂತೆ ತೋರುತ್ತದೆ. ಲಿಸ್‌ನರ್‌ ಪತ್ರಿಕೆ ಮುಂದುವರಿಸುವುದು: “ನಮ್ಮ ಅಸ್ತಿತ್ವದ ಕುರಿತಾದ ಅರ್ಥಗರ್ಭಿತತೆಯನ್ನು ಪ್ರಶ್ನಿಸುವ ಅಧಿಕಗೊಳ್ಳುತ್ತಿರುವ ಪ್ರವೃತ್ತಿಯು, ನಾವು 80ಗಳಲ್ಲಿ ಕಾತುರರಾಗಿದುದ್ದಕ್ಕಿಂತಲೂ ಈಗ ನಾವು ಹೆಚ್ಚು ಕಾತುರರಾಗಿದ್ದೇವೆಂಬುದನ್ನು, ಕೈಗೊಳ್ಳತಕ್ಕ ಸೂಕ್ತ ಮಾರ್ಗಕ್ರಮದ ಕುರಿತು ಕಡಿಮೆ ನಿಶ್ಚಿತರಾಗಿದ್ದೇವೆ ಎಂಬುದನ್ನು ಸೂಚಿಸಬಹುದು.”

ಸುವ್ಯಕ್ತವಾಗಿಯೇ, ನಾವು ಏಕೆ ಅಸ್ತಿತ್ವದಲ್ಲಿದ್ದೇವೆ? ಎಂಬ ಸಾರ್ವತ್ರಿಕ ಪ್ರಶ್ನೆಗೆ ವಿಕಾಸ ವಾದಿಗಳಿಂದ ಕೊಡಲ್ಪಡುವ ಉತ್ತರಗಳು, ಹೆಚ್ಚುತ್ತಿರುವ ಸಂಖ್ಯೆಯ ಜನರನ್ನು ತೃಪ್ತಿಪಡಿಸುತ್ತಿಲ್ಲ. ಒಬ್ಬನ ಜೀವಿತದಲ್ಲಿ ಅರ್ಥವನ್ನು ಕಂಡುಕೊಳ್ಳಲು ಅಗತ್ಯವಾಗಿರುವ ನೈತಿಕ ದಿಕ್ಸೂಚಿಯನ್ನು ಬೈಬಲು ಒದಗಿಸಬಲ್ಲದೋ?

“ಮೂಲ ಪ್ರಚೋದನಾ ಶಕ್ತಿ”

ಭೂಮಿಯ ಎಲ್ಲ ಜೀವಿಗಳಲ್ಲಿ, ಮನುಷ್ಯನು ಮಾತ್ರ ಜೀವಿತದ ಉದ್ದೇಶದ ಕುರಿತು ಪರ್ಯಾಲೋಚಿಸುತ್ತಾನೆ. ಏಕೆಂದು ನಿಮಗೆ ಗೊತ್ತೋ? ಬೈಬಲು ಪ್ರಸಂಗಿ 3:11ರಲ್ಲಿ ಒಂದು ಕಾರಣವನ್ನು ಕೊಡುತ್ತದೆ. ಸೃಷ್ಟಿಕರ್ತನ ಕುರಿತಾಗಿ ಅದು ಹೇಳುವುದು: “ಆತನು ಮನುಷ್ಯರಿಗೆ ಗತ ಕಾಲದ ಹಾಗೂ ಭವಿಷ್ಯತ್ತಿನ ಕುರಿತಾದ ಪರಿಜ್ಞಾನವನ್ನು ಕೊಟ್ಟಿದ್ದಾನೆ.” (ದ ನ್ಯೂ ಇಂಗ್ಲಿಷ್‌ ಬೈಬಲ್‌) ಎಲ್ಲಾ ಜೀವಿಗಳು ಜೀವಕ್ಕೆ ಅಂಟಿಕೊಂಡಿರುವುದಾದರೂ, ಗತ, ಪ್ರಸ್ತುತ, ಮತ್ತು ಭವಿಷ್ಯತ್ಕಾಲದ ಕಲ್ಪನೆಯನ್ನು ಪಡೆದಿರುವುದರಲ್ಲಿ ಮನುಷ್ಯನು ಅಸದೃಶನೆಂದು ತೋರುತ್ತದೆ. ಮನುಷ್ಯನು ಗತ ವಿಷಯಗಳ ಕುರಿತು ಮನನ ಮಾಡಬಲ್ಲನು ಮತ್ತು ಭವಿಷ್ಯದ ಕಡೆಗೆ ಮುನ್ನೋಡಲು, ಅದಕ್ಕಾಗಿ ಯೋಜನೆಯನ್ನು ಹಾಕಲು, ಹೌದು, ಅದರಲ್ಲಿ ಪಾಲ್ಗೊಳ್ಳಲೂ ಬಲವಾಗಿ ಅಪೇಕ್ಷಿಸುತ್ತಿರಬಲ್ಲನು. ಮತ್ತು ಅವನ ಅಲ್ಪಕಾಲದ ಜೀವಿತಾವಧಿಯ ಅಶಾಶ್ವತ ಪ್ರಕೃತಿಯ ಕಾರಣದಿಂದ ಅವನು ತನ್ನ ಕನಸುಗಳನ್ನು ಕೈಗೂಡಿಸಲು ಅಸಾಧ್ಯವಾದಾಗ ಆಶಾಭಂಗಗೊಳ್ಳಬಲ್ಲನು.

ಹೀಗೆ, ನಾನು ಏಕೆ ಇಲ್ಲಿದ್ದೇನೆ? ನಾನೆಲ್ಲಿಗೆ ಹೋಗುತ್ತಿದ್ದೇನೆ? ಎಂಬ ಪ್ರಶ್ನೆಗಳನ್ನು ಮನುಷ್ಯನು ಮಾತ್ರ ಕೇಳುತ್ತಾನೆ. ಮನೋರೋಗ ಚಿಕಿತ್ಸಕನಾದ ವಿಕರ್ಟ್‌ ಫ್ರಾಂಕ್‌ಲ್‌ ಬರೆದದ್ದು: “ಒಬ್ಬನ ಜೀವಿತದಲ್ಲಿ ಒಂದು ಅರ್ಥವನ್ನು ಕಂಡುಕೊಳ್ಳಲಿಕ್ಕಾಗಿ ಪ್ರಯತ್ನಪಡುವುದು, ಮನುಷ್ಯನಲ್ಲಿ ಮೂಲ ಪ್ರಚೋದನಾ ಶಕ್ತಿಯಾಗಿದೆ. . . . ಒಬ್ಬನ ಜೀವಿತದಲ್ಲಿ ಒಂದು ಅರ್ಥವಿದೆಯೆಂಬ ಜ್ಞಾನದಂತೆ, ಅತ್ಯಂತ ಕೆಟ್ಟ ಪರಿಸ್ಥಿತಿಗಳನ್ನು ಸಹ ಪಾರಾಗಲು ಒಬ್ಬನಿಗೆ ಇಷ್ಟು ಪರಿಣಾಮಕಾರಿಯಾಗಿ ಸಹಾಯ ಮಾಡಬಹುದಾದ ವಿಷಯವು ಲೋಕದಲ್ಲಿ ಯಾವುದೂ ಇಲ್ಲವೆಂಬುದನ್ನು ಹೇಳಲು ನಾನು ಧೈರ್ಯ ಮಾಡುತ್ತೇನೆ.”

ಸೊಲೊಮೋನನ ಆವಿಷ್ಕಾರವು ಯೇಸುವಿನಿಂದ ದೃಢಪಡಿಸಲ್ಪಟ್ಟಿತು

ಜೀವಿತದಲ್ಲಿ ಅರ್ಥವನ್ನು ಕಂಡುಕೊಳ್ಳುವ ಅಗತ್ಯವು ಪುರಾತನ ಜನರ ಆಸಕ್ತಿಯನ್ನು ಕೆರಳಿಸಿತು. ಮೂರು ಸಾವಿರ ವರ್ಷಗಳ ಹಿಂದೆ, ಸೊಲೊಮೋನನ ಆಳಿಕೆಯ ಕೆಳಗೆ ಇಸ್ರಾಯೇಲ್‌ ಆಧಿಪತ್ಯಕ್ಕೆ ಸಂಭವಿಸಿದ, ಇತಿಹಾಸದಲ್ಲಿನ ಕೆಲವು ಘಟನೆಗಳನ್ನು ನಾವು ಪರಿಗಣಿಸೋಣ. ಅವನ ಕುರಿತಾಗಿ ಶೆಬಾ ದೇಶದ ರಾಣಿಯು ಹೇಳಿದ್ದು: “ನಾನು ನನ್ನ ದೇಶದಲ್ಲಿ ನಿನ್ನ ಜ್ಞಾನವನ್ನೂ ಕೃತ್ಯಗಳನ್ನೂ ಕುರಿತು ಕೇಳಿದ್ದು ಸತ್ಯವಾಗಿದೆ. ನಾನಾಗಿ ಇಲ್ಲಿಗೆ ಬಂದು ಕಣ್ಣಾರೆ ನೋಡುವದಕ್ಕಿಂತ ಮೊದಲು ಜನರು ಹೇಳಿದ ಸುದ್ದಿಯನ್ನು ನಂಬಲಿಲ್ಲ; ಈಗ ನೋಡಿದರೆ ನಿನ್ನ ಜ್ಞಾನವೈಭವಗಳು ನಾನು ಕೇಳಿದ್ದಕ್ಕಿಂತ ಹೆಚ್ಚಾಗಿವೆ; ಜನರು ನನಗೆ ಇದರಲ್ಲಿ ಅರ್ಧವನ್ನಾದರೂ ಹೇಳಲಿಲ್ಲ.”—1 ಅರಸು 10:6, 7.

ಪ್ರಸಂಗಿ ಪುಸ್ತಕವನ್ನು ಬರೆಯುವುದರಲ್ಲಿ, ರಾಜ ಸೊಲೊಮೋನನು ಜೀವಿತದ ಉದ್ದೇಶವನ್ನು ವಿಶದಪಡಿಸಲಿಕ್ಕಾಗಿ ತಾನು ನಡೆಸಿದ ಪ್ರಯೋಗವೊಂದರ ಫಲಿತಾಂಶಗಳ ಕುರಿತು ತನ್ನ ವಾಚಕರಿಗೆ ತಿಳಿಯಪಡಿಸಿದನು. ಪುರಾತನ ಪ್ರತಿನಿಧಿರೂಪದ ಮೂಡಲ ಅರಸನೊಬ್ಬನಿಗೆ ಅನುರೂಪವಾದ ಜೀವಿತವನ್ನು ಅನುಭೋಗಿಸುವ ಸದವಕಾಶಗಳ ಪ್ರಯೋಗವು ಅದಾಗಿತ್ತು. ಅಧ್ಯಾಯ 2ರ 1-10ನೆಯ ವಚನಗಳಲ್ಲಿ, ಇಂದು ಊಹಿಸಲೂ ಕಷ್ಟಕರವಾಗಿರುವ ಸುಖಾನುಭವದ ಒಂದು ಜೀವಿತವನ್ನು ಅವನು ಚಿತ್ರಿಸಿದನು. ಪ್ರಾಪಂಚಿಕ ಐಶ್ವರ್ಯ ಮತ್ತು ಶಾರೀರಿಕ ಸುಖಾನುಭವಗಳ ಸಂಬಂಧದಲ್ಲಿ ಜೀವಿತವು ಒದಗಿಸಿರುವುದೆಲವ್ಲನ್ನು ಅವನು ಪ್ರಯತ್ನಿಸಿದನು. ಅಂತಹ ಬೆನ್ನಟ್ಟುವಿಕೆಗಳ ಅರ್ಥಗರ್ಭಿತತೆಯ ಕುರಿತು ಅವನ ನಿರ್ಧಾರಣೆಯೇನಾಗಿತ್ತು? ಅವನ ಉತ್ತರವು ಮಿತಿಮೀರಿದ ಆತ್ಮವಿಶ್ವಾಸವುಳ್ಳವನನ್ನು ಚಕಿತಗೊಳಿಸಬೇಕು.

ಈ ಎಲ್ಲ ವಿಷಯಗಳನ್ನು ಅವನು ಪೂರ್ವದೃಷ್ಟಿಯಿಂದ ವೀಕ್ಷಿಸಿದಾಗ, ಅವನ ನ್ಯಾಯತೀರ್ಪು ಅನೇಕವೇಳೆ ನಕಾರಾತ್ಮಕವಾಗಿತ್ತು. ಅವು ನಿರರ್ಥಕವೂ, ಸಮಯ ನಷ್ಟವೂ ಆಗಿದ್ದವು. ಅವನು ಬರೆದದ್ದು: “ಆಗ ನನ್ನ ಕೈಯಿಂದ ನಡಿಸಿದ ಎಲ್ಲಾ ಕೆಲಸಗಳಲ್ಲಿಯೂ ನಾನು ಪಟ್ಟ ಪ್ರಯಾಸದಲ್ಲಿಯೂ ದೃಷ್ಟಿಯಿಟ್ಟೆನು; ಆಹಾ, ಗಾಳಿಯನ್ನು ಹಿಂದಟ್ಟಿದ ಹಾಗೆ ಸಮಸ್ತವೂ ವ್ಯರ್ಥವಾಯಿತು, ಲೋಕದಲ್ಲಿ ಯಾವ ಲಾಭವೂ ಕಾಣಲಿಲ್ಲ.”—ಪ್ರಸಂಗಿ 2:11.

ಹೆಚ್ಚೆಂದರೆ, ಭೂಮಿಯ ಸುಖಾನುಭವಗಳು ತಾತ್ಕಾಲಿಕವಾದ ಸುಖಾನುಭವವನ್ನು ಮಾತ್ರವೇ ತರುತ್ತವೆಂದು ಅವನು ತೀರ್ಮಾನಿಸಿದನು. ಮಾನವ ಜ್ಞಾನವು ಸಹ, ಮನುಷ್ಯನನ್ನು ವೇದನೆ ಮತ್ತು ಜೀವಿತದ ಬೇಗುದಿಯಿಂದ ವಿಮೋಚಿಸಲಾರದು.

ಪ್ರಾಪಂಚಿಕ ಬಾಧ್ಯತೆಯ ಕುರಿತಾಗಿ ಒಬ್ಬ ಮನುಷ್ಯನ ಅನುಚಿತ ಚಿಂತೆಗೆ ಪ್ರತ್ಯುತ್ತರವಾಗಿ, ಯೇಸು ಕ್ರಿಸ್ತನು ತದ್ರೀತಿಯಲ್ಲಿ ತೀರ್ಮಾನಿಸಿದನು. ಆಲಿಸುತ್ತಿದ್ದ ಗುಂಪಿಗೆ ಅವನು ಹೇಳಿದ್ದು: “ಎಲ್ಲಾ ಲೋಭಕ್ಕೂ ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ.”—ಲೂಕ 12:15.

ಯೆಹೋವ ದೇವರು ಮಾತ್ರ ದೈನಂದಿನ ಜೀವಿತದಲ್ಲಿನ ಮಾನವ ದೌರ್ಬಲ್ಯವನ್ನು ಸಂಪೂರ್ಣವಾಗಿ ಜಯಿಸಬಲ್ಲನು ಮತ್ತು ಮನುಷ್ಯನ ಚಟುವಟಿಕೆಗಳಿಗೆ ವಿವೇಕವುಳ್ಳ ಉದ್ದೇಶವನ್ನು ಕೊಡಬಲ್ಲನು. ಆದುದರಿಂದ, ದೇವರಿಲ್ಲದ ಜೀವಿತವು ನಿರರ್ಥಕ. ಪ್ರಸಂಗಿ 12:13ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಸೊಲೊಮೋನನು ವಿವರಿಸಿದ್ದು: “ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.”

ಜೀವಿತದ ಅರ್ಥವನ್ನು ಆವಿಷ್ಕರಿಸುವುದು

ದೇವರ ಕುರಿತಾದ ಹಿತಕರವಾದ ಭಯದಿಂದ ಜೀವಿತದ ಅರ್ಥವನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂಬ ಸೊಲೊಮೋನನ ಸತ್ಯ ನಿರ್ಣಯವು ಯೇಸು ಕ್ರಿಸ್ತನಿಂದ ಆಗಾಗ್ಗೆ ದೃಢಪಡಿಸಲ್ಪಟ್ಟಿತು. ದೇವರ ವಾಕ್ಯವನ್ನು ಉದ್ಧರಿಸುತ್ತಾ ಯೇಸು ಹೇಳಿದ್ದು: “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು ಎಂದು ಬರೆದದೆ.” (ಮತ್ತಾಯ 4:4; ಧರ್ಮೋಪದೇಶಕಾಂಡ 8:3) ಹೌದು, ಒಬ್ಬನ ಜೀವಿತವನ್ನು ಸಫಲಗೊಳಿಸಲಿಕ್ಕಾಗಿ, ಆತ್ಮಿಕ ಅಂಶಗಳನ್ನು ಅಲಕ್ಷಿಸಸಾಧ್ಯವಿಲ್ಲ. ಸ್ವತಃ ತನ್ನ ಕುರಿತು ಯೇಸು ಇನ್ನೂ ಹೇಳಿದ್ದು: “ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು.” (ಯೋಹಾನ 4:34) ತನ್ನ ಸ್ವರ್ಗೀಯ ತಂದೆಯನ್ನು ವಿಧೇಯತೆಯಿಂದ ಸೇವಿಸುವುದು, ಆನಂದದ ಹಾಗೂ ಸಂತೃಪ್ತಿಯ ಮೂಲವಾಗಿತ್ತು. ಅದು ಆತನನ್ನು ಪೋಷಿಸಿತು. ಅದು ಆತನ ಜೀವಿತಕ್ಕೆ ಉದ್ದೇಶವನ್ನು ಕೊಟ್ಟಿತು.

ಆದುದರಿಂದ, ದೇವರಿಲ್ಲದೆ ಜೀವಿತವು ತನ್ನ ಸಂಪೂರ್ಣ ಸಾಧ್ಯತೆಯನ್ನು ಮುಟ್ಟಬಲ್ಲದೋ? ಇಲ್ಲ! ಆಸಕ್ತಿಭರಿತವಾಗಿಯೇ, ಇತಿಹಾಸಗಾರ ಅರ್ನಾಲ್ಡ್‌ ಟಾಯಿನ್‌ಬೀ ಒಮ್ಮೆ ಬರೆದದ್ದು: “ಒಂದು ಹೆಚ್ಚು ಶ್ರೇಷ್ಠ ಧರ್ಮದ ನಿಜೋದ್ದೇಶವು, ಅದರ ಸಾರವಾಗಿರುವ ಆತ್ಮಿಕ ಸಲಹೆಗಳು ಮತ್ತು ಸತ್ಯಗಳನ್ನು ತಲಪಸಾಧ್ಯವಿರುವಷ್ಟು ಜನರಿಗೆ ಹರಡುವುದೇ. ಹೀಗೆ ಅವರಲ್ಲಿ ಪ್ರತಿಯೊಬ್ಬನು ಮನುಷ್ಯನ ನಿಜೋದ್ದೇಶವನ್ನು ನೆರವೇರಿಸಲು ಸಮರ್ಥನಾಗಬಹುದು. ಮನುಷ್ಯನ ನಿಜೋದ್ದೇಶವು ದೇವರನ್ನು ಮಹಿಮೆಪಡಿಸುವುದು ಹಾಗೂ ಆತನನ್ನು ಸದಾ ಅನುಭೋಗಿಸುವುದು ಆಗಿದೆ.” ಪ್ರವಾದಿಯಾದ ಮಲಾಕಿಯನು ದೇವರ ನೋಟವನ್ನು ವ್ಯಕ್ತಪಡಿಸಿದ್ದು: “ಆಗ ಶಿಷ್ಟರಿಗೂ ದುಷ್ಟರಿಗೂ ದೇವರನ್ನು ಸೇವಿಸುವವರಿಗೂ ಸೇವಿಸದವರಿಗೂ ಇರುವ ತಾರತಮ್ಯವನ್ನು ಮತ್ತೆ ಕಾಣುವಿರಿ.”—ಮಲಾಕಿಯ 3:18.

[ಪುಟ 34 ರಲ್ಲಿರುವ ಚಿತ್ರ]

“ದ ಥಿಂಕರ್‌,” ರಾಡಿನ್‌ರಿಂದ

[ಕೃಪೆ]

Scala/Art Resource, N.Y.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ