ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g95 6/8 ಪು. 28-29
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1995
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • “ಅಜ್ಞಾತ ಗ್ರಹ”
  • ಅಮೆರಿಕದಲ್ಲಿರುವ ಅಗ್ರಸ್ಥಾನದ ಕೊಲೆಗಾರರು
  • 20ನೇ ಶತಮಾನದ ಮುನ್ನರಿವು
  • ಉಪ್ಪಿನಲ್ಲಿ ಅಯೊಡಿನ್‌
  • ರಕ್ತ ಪೂರಣದ ಗಂಡಾಂತರಗಳು
  • ಕರಡಿಯ ಅಂಗಗಳು
  • ಬ್ರೆಸಿಲ್‌ನ ಅಪಾಯಕ್ಕೊಳಗಾಗಿರುವ ಜಾತಿ
  • ಗ್ರಹದ ಮೇಲಿನ ಜನರು
  • ಮಹಾ ಹಸಿರು ಗೋಡೆ
  • ಜಗತ್ತನ್ನು ಗಮನಿಸುವುದು
    ಎಚ್ಚರ!—1998
  • ರಕ್ತದಿಂದ ಜೀವವನ್ನು ರಕ್ಷಿಸುವುದು—ಹೇಗೆ?
    ಕಾವಲಿನಬುರುಜು—1992
ಎಚ್ಚರ!—1995
g95 6/8 ಪು. 28-29

ಜಗತ್ತನ್ನು ಗಮನಿಸುವುದು

“ಅಜ್ಞಾತ ಗ್ರಹ”

ಕೇವಲ ಎರಡು ವರ್ಷಗಳಲ್ಲಿ ಅಮೇಸಾನ್‌ನ ಮಳೆಯಾರಣ್ಯದಲ್ಲಿ ಹಿಂದೆ ಅಜ್ಞಾತವಾಗಿದ್ದ ಮಂಗಗಳ ಮೂರು ಜಾತಿಗಳನ್ನು ಕಂಡುಹಿಡಿಯಲಾಯಿತು. ಲೋಕದಾದ್ಯಂತ ಸರಾಸರಿ, ಪ್ರತಿ ವರ್ಷ ಪಕ್ಷಿಗಳ ಮೂರು ಹೊಸ ಜಾತಿಗಳು ಕಂಡುಹಿಡಿಯಲ್ಪಡುತ್ತವೆ. ಪ್ಯಾನಮದಲ್ಲಿನ 19 ಮರಗಳ ಒಂದು ಅಧ್ಯಯನದಲ್ಲಿ ಹೆಚ್ಚುಕಡಿಮೆ 1,200 ಜೀರುಂಡೆಗಳ ಜಾತಿಗಳು ಕಂಡುಹಿಡಿಯಲ್ಪಟ್ಟವು, ಮತ್ತು ಅವುಗಳಲ್ಲಿ ಶೇಕಡ 80 ಜಾತಿಗಳು ಮುಂಚೆ ತಿಳಿದಿಲ್ಲದ್ದವುಗಳಾಗಿದ್ದವು. ಹಾಗೆಯೇ, ಯುನೆಸ್ಕೋ ಸೋರ್ಸ್‌ಸ್‌ ಪತ್ರಿಕೆಯು ಹೇಳುವುದು: “ಜೀವ ಸ್ವರೂಪಗಳ ಅಪಾರವಾದ ಸಂಖ್ಯೆಗಳು ನಮಗೆ ಅಜ್ಞಾತವಾಗೇ ಉಳಿದಿವೆ.” ದೃಷ್ಟಾಂತಕ್ಕಾಗಿ, “ದಕ್ಷಿಣ ಅಮೆರಿಕದ ಸರಿಸುಮಾರು 40 ಶೇಕಡ ಸೀನೀರಿನ ಮೀನುಗಳು ವರ್ಗೀಕೃತಗೊಳ್ಳಲು ಕಾದಿವೆ. . . . ಮತ್ತು ಬಹುಮಟ್ಟಿಗೆ ಪರಿಶೋಧಿಸದ ಸಾಗರದ ತಳಗಳಲ್ಲಿ ನಾವೇನು ಕಂಡುಕೊಳ್ಳಲಿರುವೆವು?” ಚಿಕ್ಕ ಜೀವ ಸ್ವರೂಪಗಳ ಅಪಾರವಾದ ಸಂಖ್ಯೆಗಳನ್ನು ನೀವು ಪರಿಗಣಿಸುವಾಗ, ಸಮಸ್ಯೆಯು ದಟ್ಟವಾಗುತ್ತದೆ: ಬ್ಯಾಕ್ಟೀರಿಯ, ಬೂಷ್ಟು, ತಂತುವಿನಾಕಾರದ ಹುಳುಗಳು, ಅರ್ಯಾಕ್ನಿಡ್‌ ಜಂತುಗಳು, ಕೀಟಗಳು, ಮತ್ತು ಸಸ್ಯಗಳು ಇನ್ನೂ ಕಂಡುಹಿಡಿಯಲ್ಪಡಬೇಕಾಗಿವೆ. ಕೇವಲ “ಉದಾಹರಣೆಗೆ, ಒಂದು ಗ್ರಾಮ್‌ ಉಷ್ಣವಲಯದ ಮಣ್ಣು, ಒಂಬತ್ತು ಕೋಟಿಗಳಷ್ಟು ಬ್ಯಾಕ್ಟೀರಿಯ ಮತ್ತು ಸೂಕ್ಷ್ಮಜೀವಿಗಳನ್ನು ಒಳಗೊಳ್ಳಬಲ್ಲದು.” ಭೂಮಿಯ ಮೇಲೆ “20 ಕೋಟಿಯಷ್ಟು ಹೆಚ್ಚು” ಸಂಖ್ಯೆಯ ಜಾತಿಗಳಿರಬಹುದೆಂದು ಕೆಲವರು ಅಂದಾಜು ಮಾಡಿದ್ದಾರೆಂಬುದಾಗಿ, ಯುನೆಸ್ಕೋ ಸೋರ್ಸ್‌ಸ್‌ ಹೇಳುತ್ತವೆ. ವ್ಯಾಪಕವಾದ ಪರಿಶೋಧನೆಯ ಹೊರತೂ, ಭೂಮಿಯು ಇನ್ನೂ “ಅಜ್ಞಾತ ಗ್ರಹ”ವಾಗೇ ಉಳಿದಿದೆ. (g95 5/22)

ಅಮೆರಿಕದಲ್ಲಿರುವ ಅಗ್ರಸ್ಥಾನದ ಕೊಲೆಗಾರರು

ಅಮೆರಿಕದಲ್ಲಿನ ಮರಣಕ್ಕೆ ಮುಖ್ಯವಾದ ಕಾರಣಗಳಾವುವು? ಒಂದು ವರ್ಷದಲ್ಲಿ ಮರಣಗಳಿಗೆ ಕಾರಣಭೂತವಾದ ಮುಖ್ಯವಾದ ಬಾಹ್ಯ ಅಥವಾ ತಳಿಶಾಸ್ತ್ರವಲ್ಲದ ಅಂಶಗಳನ್ನು ದ ಜರ್ನಲ್‌ ಆಫ್‌ ದಿ ಅಮೆರಿಕನ್‌ ಮೆಡಿಕಲ್‌ ಆ್ಯಸೋಸಿಯೇಷನ್‌ನಲ್ಲಿ ಪ್ರಕಾಶಿಸಲ್ಪಟ್ಟ ಇತ್ತೀಚಿನ ಒಂದು ಪರಿಶೀಲನೆಯು ಕಂಡುಹಿಡಿಯಿತು. ಸಂಖ್ಯಾಸಂಗ್ರಹಣಗಳ ವ್ಯಾಪಕವಾದ ಒಂದು ಸಮೀಕ್ಷೆಯ ಅನಂತರ, 1990ರಲ್ಲಿ ಅಮೆರಿಕದಲ್ಲಿಯ 21,48,000 ಮರಣಗಳಲ್ಲಿ, ಸುಮಾರು 4,00,000 ಜನರ ಮರಣ ಹೊಗೆಸೊಪ್ಪಿನಿಂದ; ಆಹಾರ ಪಥ್ಯ ಮತ್ತು ವ್ಯಾಯಾಮದ ಅಭ್ಯಾಸಗಳಿಂದ 3,00,000; ಮದ್ಯಸೇವನೆಯಿಂದ 1,00,000; ಅತಿ ಸೂಕ್ಷ್ಮ ಜೀವಿಗಳಿಂದ 90,000; ಪರಿಸರದ ಮಾಲಿನ್ಯಗಳ ಅಥವಾ ಆಹಾರದಲ್ಲಿ ಯಾ ನೀರಿನಲ್ಲಿನ ರೋಗ ಕ್ರಿಮಿಗಳಂಥ ವಿಷಕಾರಕ ಜೀವಿಗಳಿಂದ 60,000; ಬಂದೂಕುಗಳಿಂದ 35,000; ಲೈಂಗಿಕ ವ್ಯವಹಾರದಿಂದ 30,000; ರಸ್ತೆ ಅಪಘಾತಗಳಿಂದ 25,000; ಮತ್ತು ನ್ಯಾಯ ವಿರುದ್ಧವಾದ ಮಾದಕೌಷಧದ ಉಪಯೋಗದಿಂದ 20,000 ಎಂದು ಪರಿಶೀಲನೆಯು ತೀರ್ಮಾನಿಸಿತು. ಎಲ್ಲವನ್ನು ಪರಿಗಣಿಸಿದಾಗ, ಒಂದು ವರ್ಷದಲ್ಲಿ ಸಂಭವಿಸಿದ ಎಲ್ಲ ಮರಣಗಳ ಅರ್ಧದಷ್ಟು, ಬಾಹ್ಯ ಅಂಶಗಳಿಂದ ಆಗಿತ್ತೆಂದು ಪರಿಶೀಲನೆಯು ಕಂಡುಕೊಂಡಿತು. (g95 6/8)

20ನೇ ಶತಮಾನದ ಮುನ್ನರಿವು

ಕಳೆದ ಶತಮಾನದಲ್ಲಿ ಜೀವಿಸುತ್ತಿದ್ದ ಯಾರಾದರೊಬ್ಬರಿಗೆ, ಮೋಟಾರು ಗಾಡಿಗಳ, ಸಮೂಹ ವಾಹನ ಸೌಕರ್ಯ, ಇಲೆಕ್ಟಾನ್ರಿಕ್‌ ಸಂಗೀತ, ಮತ್ತು ಫ್ಯಾಕ್ಸ್‌ ಯಂತ್ರಗಳಂಥ ಆಧುನಿಕ ದಿನದ ಬೆಳವಣಿಗೆಗಳ ಕುರಿತು ಊಹಿಸಲು ಸಾಧ್ಯವಿತ್ತೋ? 1863ರಲ್ಲಿ, ಅರೌಂಡ್‌ ದ ವರ್ಲ್ಡ್‌ ಇನ್‌ 80 ಡೇಸ್‌ ಮತ್ತು 20,000 ಲೀಗ್ಸ್‌ ಅಂಡರ್‌ ದ ಸೀಯಂಥ ಕಾರ್ಯಗಳಿಗಾಗಿ ಪ್ರಸಿದ್ಧರಾದ, ಫ್ರೆಂಚ್‌ ಕಾದಂಬರಿಕಾರ ಜೂಲ್ಸ್‌ ವರ್ನ್‌, ಪ್ಯಾರಿಸ್‌ ಇನ್‌ ದ 20ಯತ್‌ ಸೆಂಚ್ಯುರಿ ಎಂಬ ಹೆಸರುಳ್ಳ ಹಿಂದೆ ಅಪ್ರಕಾಶಿತ ಕಾದಂಬರಿಯಲ್ಲಿ ಆ ಬೆಳವಣಿಗೆಗಳನ್ನು ಮತ್ತು ಹೆಚ್ಚಿನವುಗಳನ್ನು ಮುಂತಿಳಿಸಿದರು. ವರ್ನ್‌ನ ಪ್ರಕಾಶಕನು ಅದನ್ನು ಸುಗಮವಲ್ಲದ್ದೂ ಅವಿಶ್ವಸನೀಯವೂ ಎಂದು ಹೇಳಿ ನಿರಾಕರಿಸಿದನಾದರೂ, ಇತ್ತೀಚೆಗೆ ಕಂಡುಹಿಡಿಯಲ್ಪಟ್ಟ ಈ ಕೃತಿಯ, ಮುಂದುವರಿದ ಶಸ್ತ್ರಗಳು, ವಿದ್ಯುದಾಸನ, ಮಾಲಿನ್ಯ, ಸಂಚಾರ ಅಡಚಾಟಗಳನ್ನು ಒಳಗೊಂಡ, ನಮ್ಮ 20ನೇ ಶತಮಾನದಲ್ಲಿಯ ಜೀವನದ ವಿಸ್ಮಯಕಾರಿಯಾದ ಒಂದು ನಿಷ್ಕೃಷ್ಟ ಚಿತ್ರವನ್ನು ಒದಗಿಸುತ್ತದೆ. ಹಿಂದಿನ ಸಾಂಪ್ರದಾಯಿಕ ಸಾಧನೆಗಳಲ್ಲಿ ಮತ್ತು ಸಂಸ್ಕೃತಿಯಲ್ಲಿ ಅಭಿರುಚಿಯನ್ನು ಕಳೆದುಕೊಂಡ ಒಂದು ಪೀಡಿತ ಜನಸಂಖ್ಯೆಯನ್ನು, ವಾಣಿಜ್ಯ ಮನೋಭಾವದಿಂದ ದಾಸತ್ವಕ್ಕಗೊಳಗಾದ ಮತ್ತು ಯಂತ್ರಕಲಾ ಶಾಸ್ತ್ರಕ್ಕೆ ವ್ಯಸನಿಯಾಗಿದ್ದ ಒಂದು ಸಮಾಜವನ್ನು ವರ್ನ್‌ ಮುನ್ನೋಡಿದನು. ಪ್ಯಾರಿಸ್‌ ಇಂಟರ್‌ನ್ಯಾಷನಲ್‌ ಹೆರಾಲ್ಡ್‌ ಟ್ರಿಬ್ಯುನ್‌ ಹೇಳಿದ್ದು: “ವರ್ನ್‌ ಕೇವಲ ಆಧುನಿಕ ಯಂತ್ರಕಲಾ ಶಾಸ್ತ್ರದ ಅನೇಕ ಕರಕೌಶಲಗಳನ್ನು ಮುಂತಿಳಿಸಿದನು ಮಾತ್ರವಲ್ಲ, ಅತ್ಯಂತ ಭೀತಿಕಾರಕ ಪರಿಣಾಮಗಳಲ್ಲಿ ಕೆಲವನ್ನು ಸಹ ಆತನು ಗ್ರಹಿಸಿದನು.” (g95 05/22)

ಉಪ್ಪಿನಲ್ಲಿ ಅಯೊಡಿನ್‌

ಆಹಾರದಲ್ಲಿನ ಅಯೊಡಿನ್‌ ಕೊರತೆಯು, ಕಡಿಮೆ ಪಕ್ಷ 60 ಕೋಟಿ ಜನರ ಕ್ಷೇಮವನ್ನು ಬಾಧಿಸುತ್ತದೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ ಅಂದಾಜು ಮಾಡುತ್ತದೆ. ಬಾಧಿಸಲ್ಪಟ್ಟವರಲ್ಲಿ, ನ್ಯೂನತೆಯು ಒಂದು ವರ್ಷಕ್ಕೆ ಸುಮಾರು 1,00,000 ಶಿಶುಗಳು ಕುರೂಪಿದಡ್ಡರಾಗಿ (ಥೈರಾಯ್ಡ್‌ ಗ್ರಂಥಿಯ ತೀವ್ರತರನಾದ ನ್ಯೂನತೆಯಿಂದ ದೈಹಿಕವಾಗಿ ಕುಂಠಿತ ಮತ್ತು ಮಾನಸಿಕವಾಗಿ ನ್ಯೂನವಾದ) ಮತ್ತು ಇನ್ನೊಂದು 5 ಕೋಟಿ ಮಕ್ಕಳು ದೈಹಿಕವಾಗಿಯೂ ಮಾನಸಿಕವಾಗಿಯೂ ದುರ್ಬಲತೆಯಿಂದ ಹುಟ್ಟುವಂತೆ ಮಾಡುತ್ತದೆ ಎಂದು ನಂಬಲಾಗುತ್ತದೆ. ಥೈರಾಯ್ಡ್‌ ಗ್ರಂಥಿಯ ಒಂದು ಊತವಾದ, ಗಳಗಂಡವನ್ನು ಸಹ ಅಯೊಡಿನ್‌ ಕೊರತೆಯು ಉಂಟುಮಾಡುತ್ತದೆ. ಅಯೊಡಿನ್‌ ನ್ಯೂನತೆಯ ವಿರುದ್ಧ ಕಾಪಾಡಿಕೊಳ್ಳುವುದು ಸುಲಭವೂ ಅಲ್ಪ ವ್ಯಯದ್ದೂ ಆಗಿದೆ—ಕೇವಲ ಅಯೊಡಿನ್‌ ಸಂಯುಕ್ತಗಳಿಂದ ಮಾಡಿದ ಉಪ್ಪನ್ನು ಉಪಯೋಗಿಸಿರಿ. ಇಸವಿ 1995ರ ಅವಧಿಯಲ್ಲಿ ಲೋಕದ ಉಪ್ಪು ಮಾರಾಟಗಳನ್ನು ಅಯೊಡಿನ್‌ ಸಂಯುಕ್ತಗಳನ್ನಾಗಿ ಮಾಡಲು ಮತ್ತು 2000 ವರ್ಷದೊಳಗೆ ಅಯೊಡಿನ್‌ ನ್ಯೂನತೆಯ ವ್ಯಾಧಿಗಳನ್ನು ತೆಗೆದುಹಾಕಲು ಪ್ರಯತ್ನಗಳು ನಡೆಯುತ್ತಿವೆ. (g95 6/8)

ರಕ್ತ ಪೂರಣದ ಗಂಡಾಂತರಗಳು

“ಕೆನಡದ ರಕ್ತ ಸರಬರಾಯಿಯು ಇಂದಿನಿಂದ ಒಂದು ಸಾವಿರ ವರ್ಷಗಳ ತನಕ ಸೂಕ್ಷ್ಮ ಪರಿಶೀಲನೆಯನ್ನು ಮಾಡಬಲ್ಲದಾದರೂ ಪೂರಣಗಳ ಗಂಡಾಂತರಗಳು ಇನ್ನೂ ಅಸ್ತಿತ್ವದಲ್ಲಿರುವುದು,” ಎಂದು ದ ಟೊರಾಂಟೋ ಸ್ಟಾರ್‌ ವರದಿಸಿತು. ಸೆಂಟ್‌ ಮೈಖಲ್‌ ಆಸ್ಪತ್ರೆಯ ಡಾ. ವಿಲಿಯಮ್‌ ನೋಬೆಲ್‌, ಕೆನಡದ ರಕ್ತ ಸರಬರಾಯಿಯ ಸುರಕ್ಷಣೆ ತನಿಖೆಯ ಅಯೋಗದ ಮುಂದೆ ಒತ್ತಿ ಹೇಳಿದ್ದು: “ಅವುಗಳು (ಗಂಡಾಂತರಗಳು) ಅಸ್ತಿತ್ವದಲ್ಲಿವೆ ಮತ್ತು ಅವು ಯಾವಾಗಲೂ ಅಸ್ತಿತ್ವದಲ್ಲಿರುವವು.” “ರಕ್ತದಾನದಿಂದ, ಅಲರ್ಜಿ ಪ್ರತಿ ಪರಿಣಾಮದಿಂದ ಹಿಡಿದು ಏಯ್ಡ್ಸ್‌ ಪಡೆಯುವ ವರೆಗೆ ಪ್ರತಿಯೊಂದನ್ನು” ರಕ್ತ ಪೂರಣದ ಗಂಡಾಂತರಗಳು ಒಳಗೊಳ್ಳುತ್ತವೆ ಎಂದು ಸ್ಟಾರ್‌ ಹೇಳುತ್ತದೆ. ರಕ್ತದಿಂದ ಏಯ್ಡ್ಸ್‌ ಪಡೆಯುವುದರ ಕುರಿತು ಇಂದು ಹೆಚ್ಚೆಚ್ಚು ರೋಗಿಗಳು ಚಿಂತಿತರಾಗಿದ್ದಾರೆಂದು, ರಕ್ತ ಪೂರಣಗಳನ್ನು ನಿರ್ವಹಿಸುವ ಪ್ರವೀಣರು ಹೇಳುತ್ತಾರೆ. ಡಾ. ನೋಬೆಲ್‌ ಹೇಳುವುದು: “‘ನಾನು ಪೂರಣವೊಂದನ್ನು ಕೊಡಬೇಕೋ ಅಥವಾ ಕೊಡಬಾರದೋ?’ ಎಂಬುದರ ಕುರಿತಾದ ಒಂದು ಸಂಭಾಷಣೆಯಿಲ್ಲದೆ ಒಂದು ದಿನವೂ ಕಳೆಯುವುದಿಲ್ಲ.” (g95 5/22)

ಕರಡಿಯ ಅಂಗಗಳು

“ಅಂತಾರಾಷ್ಟ್ರೀಯ ಮಾದಕೌಷಧದ ಉದ್ಯಮದಲ್ಲಿ ಭಾಗವಹಿಸುವುದಕ್ಕಿಂತ, ಕೆನಡದಿಂದ ತರುವ ಕರಿವರ್ಣದ ಕರಡಿಯ ಅಂಗಗಳ ಅಕ್ರಮ ಉದ್ಯಮವು ಹೆಚ್ಚು ಲಾಭಕರವಾಗಿರಬಲ್ಲದು,” ಎಂದು ದ ಟೊರಾಂಟೋ ಸ್ಟಾರ್‌ ಹೇಳುತ್ತದೆ. ಏಷ್ಯಾದಲ್ಲಿನ, ಚೈನಾ, ದಕ್ಷಿಣ ಕೊರಿಯ, ಜಪಾನ್‌, ತೈವಾನ್‌, ಮತ್ತು ಹಾಂಗ್‌ ಕಾಂಗ್‌ನಂಥ ಶ್ರೀಮಂತ ದೇಶಗಳಲ್ಲಿರುವ ಸಾಂಪ್ರದಾಯಿಕ ಔಷಧದ ವೃತ್ತಿಗಾರರಿಂದ, ಕರಿವರ್ಣದ ಕರಡಿಯ ಪಿತ್ತಕೋಶ ಮತ್ತು ಪಂಜಾಗಳಿಗಾಗಿ ಅಸಾಧಾರಣವಾದ ಒಂದು ಬೇಡಿಕೆಯಿದೆ. “ಪಿತ್ತರಸವು ಹಸು ಅಥವಾ ಹಂದಿಗಳ ಪಿತ್ತರಸದೊಂದಿಗೆ ‘ನಿಸ್ಸಾರ’ವಾಗುವಷ್ಟರಲ್ಲಿ (ತೆಳ್ಳಗೆ ಮಾಡುವುದು), ಏಷ್ಯಾದಲ್ಲಿ ಒಂದು ಕಿಲೋಗ್ರಾಮ್‌ನ ಕರಡಿಯ ಪಿತ್ತಕೋಶದ ‘ಗ್ರಾಹಕ ಬೆಲೆ’ಯು (ಅಂತಿಮ ಗ್ರಾಹಕನಿಗಾದ ಬೆಲೆ) 10 ಲಕ್ಷ ಡಾಲರುಗಳಿಗಿಂತ ಹೆಚ್ಚು ಏರಿತೆಂದು ಕ್ಯಾಲಿಫೊರ್ನಿಯದ ಒಬ್ಬ ಕ್ರಮಕೈಗೊಳ್ಳುವ ಅಧಿಕಾರಿ ಅಭಿಪ್ರಯಿಸಿದರು,” ಎಂಬುದಾಗಿ ಸ್ಟಾರ್‌ ಕೂಡಿಸುತ್ತದೆ. “ಇದಕ್ಕೆ ಹೋಲಿಕೆಯಲ್ಲಿ ಟೊರಾಂಟೋ ರಾಜಧಾನಿಯಲ್ಲಿಯ ಕೋಕೈನ್‌ನ ಗ್ರಾಹಕ ಬೆಲೆ, ಕಿಲೋಗ್ರಾಮ್‌ಗೆ 1,00,000 ಡಾಲರುಗಳೆಂದು ಅಂದಾಜು ಮಾಡಲಾಗಿದೆ.” ಲೋಕ ವನ್ಯಜೀವಿ ನಿಧಿ/ಕೆನಡದ, ಅಪಾಯಕ್ಕೀಡಾದ ಪ್ರಾಣಿ ಜಾತಿಗಳ ವಿಶೇಷಜ್ಞರಾದ, ಕರೋಲ್‌ ಸ್ಯಾನ್‌ ಲೋರಾನ್‌, ಹೇಳುವುದು: “ಇದು ಒಂದು ಅಪರಿಮಿತವಾದ ದೊಡ್ಡ ವ್ಯಾಪಾರವಾಗಿದೆ.” ಕರಡಿಯ ಅಂಗಗಳಿಗಾಗಿ ಬೇಡಿಕೆಯು ಏರುತ್ತಾ ಮುಂದುವರಿಯುವುದು ಎಂಬ ಭಯವಿದೆ. ಏಷ್ಯಾದಲ್ಲಿ ಈಗಾಗಲೇ ಕರಡಿಯ ಸಂಖ್ಯೆಯು ಬಹು ಮಟ್ಟಿಗೆ ತೊಡೆದುಹಾಕಲ್ಪಟ್ಟಿದೆ. (g95 5/22)

ಬ್ರೆಸಿಲ್‌ನ ಅಪಾಯಕ್ಕೊಳಗಾಗಿರುವ ಜಾತಿ

“ಇತರ ಯಾವುದೇ ದೇಶಗಳಿಗಿಂತ ಮೂರು ಪಟ್ಟು ಹೆಚ್ಚು ಉಷ್ಣವಲಯದ ಅರಣ್ಯಗಳನ್ನು ಬ್ರೆಸಿಲ್‌ ಹೊಂದಿದೆ, ಜೀವಶಾಸ್ತ್ರೀಯ ವೈವಿಧ್ಯದಲ್ಲಿ ಲೋಕದ ನಾಯಕ ಸ್ಥಾನದಲ್ಲಿದೆ, ಮತ್ತು ತನ್ನ ಕ್ಷೇತ್ರದಲ್ಲಿ ಇನ್ನೂ 460 ಜಾತಿಯ, ಸಸ್ತನಿ ಅತಿ ವಿವಿಧ ಪ್ರಾಣಿ ವರ್ಗವನ್ನು ಹೊಂದಿದೆ,” ಎಂದು ಓ ಎಸ್ಟ್ಯ್‌ಡೋ ಡಿ ಎಸ್‌. ಪೌಲೋ ವಾರ್ತಾಪತ್ರಿಕೆಯು ಹೇಳುತ್ತದೆ. “ಆದರೆ ಬ್ರೆಸಿಲ್‌ ಅಪಾಯಕ್ಕೊಳಗಾಗಿರುವ ಜಾತಿಗಳಿಗೆ ನಾಯಕನೂ ಆಗಿದೆ, ಇವುಗಳಲ್ಲಿ 310ರಲ್ಲಿ 58 ಸಸ್ತನಿಗಳಾಗಿವೆ.” ಇಷ್ಟರ ತನಕ ಯಾವ ಸಸ್ತನಿಯು ನಿರ್ನಾಮವಾಗಿಲ್ಲದಿರುವುದಾದರೂ, “ಕೇವಲ ಬ್ರೆಸಿಲ್‌ನಲ್ಲಿ ಅಸ್ತಿತ್ವದಲ್ಲಿರುವ ಲಯನ್‌ ಟ್ಯಾಮರಿನ್‌”ನಂಥ “12 ಶೇಕಡ ಬ್ರೆಸಿಲ್‌ ಸಸ್ತನಿಗಳು ಅಪಾಯದಲ್ಲಿವೆ.” ಅಪಾಯದಲ್ಲಿರುವ ಕೆಲವು ಜಾತಿಗಳು “ಎಂಥ ನಿರ್ಬಂಧಿತ ಸ್ಥಳಗಳಲ್ಲಿ ಜೀವಿಸುತ್ತವೆಯೆಂದರೆ ಅವುಗಳ ಸ್ವಾಭಾವಿಕ ನೆಲೆಯಲ್ಲಿ ಯಾವುದೇ ಒಂದು ಮಧ್ಯೆ ಬರುವಿಕೆಯು ಅವುಗಳ ನಿರ್ನಾಮಕ್ಕೆ ನಡೆಸಬಲ್ಲದು.” ಆ ವಾರ್ತಾಪತ್ರಿಕೆಗನುಸಾರ, ವನ್ಯಪ್ರದೇಶದಲ್ಲಿ ಯಾವುದೇ ನಮೂನೆಯನ್ನು ಕಂಡುಕೊಳ್ಳದೆ 50 ವರ್ಷಗಳು ದಾಟುವುದಾದರೆ, ಆ ಜಾತಿ ನಿರ್ನಾಮಗೊಂಡಿದೆಯೆಂದು ಪರಿಗಣಿಸಲಾಗುತ್ತದೆ.

ಗ್ರಹದ ಮೇಲಿನ ಜನರು

ಯುಎನ್‌ಎಫ್‌ಪಿಎ (ಸಂಯುಕ್ತ ರಾಷ್ಟ್ರಗಳ ಜನಸಂಖ್ಯಾ ನಿಧಿ) ಸಂಖ್ಯಾ ಸಂಗ್ರಹಣಕ್ಕನುಸಾರ, 1994ರ ಮಧ್ಯಭಾಗದಲ್ಲಿ ಗ್ರಹದ ಮೇಲಿನ ಜನರ ಸಂಖ್ಯೆಯು 566 ಕೋಟಿಗಳಷ್ಟಕ್ಕೆ ಮುಟ್ಟಿತು. ಹತ್ತಿರ ಹತ್ತಿರ ಎಲ್ಲ ಅಭಿವೃದ್ಧಿಯು ಏಷ್ಯಾ, ಆಫ್ರಿಕ, ಮತ್ತು ಲ್ಯಾಟಿನ್‌ ಅಮೆರಿಕದಲ್ಲಿ ಸಂಭವಿಸುತ್ತಿರುವುದರೊಂದಿಗೆ, 1998ರಷ್ಟಕ್ಕೆ 600 ಕೋಟಿಗಳು, ಇಸವಿ 2025ರಷ್ಟಕ್ಕೆ 850 ಕೋಟಿಗಳು, ಮತ್ತು 2050ರಷ್ಟಕ್ಕೆ 1,000 ಕೋಟಿಗಳಷ್ಟು ಸಂಖ್ಯೆಯು ಹೆಚ್ಚಾಗುವುದೆಂದು ಭವಿಷ್ಯತ್ತಿನ ಸಂಭವನೀಯತೆಗಳು ಅಂದಾಜು ಮಾಡಿವೆ. 2.9 ಶೇಕಡದ ವಾರ್ಷಿಕ ಜನಸಂಖ್ಯೆಯ ಅಭಿವೃದ್ಧಿಯ ಪ್ರಮಾಣದೊಂದಿಗೆ ಆಫ್ರಿಕವು, ವಿಶ್ವದಲ್ಲೇ ಅತ್ಯಂತ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಯಾಗುತ್ತಿರುವ ಸ್ಥಳವಾಗಿದೆ. ಯುರೋಪ್‌—0.3 ಶೇಕಡ—ಅತಿ ಕಡಿಮೆಯದ್ದಾಗಿದೆ. ಶತಮಾನದ ಅಂತ್ಯದಷ್ಟಕ್ಕೆ, ಇಂದಿನಿಂದ ಕೇವಲ ಐದು ವರ್ಷಗಳಲ್ಲಿ, ವಿಶ್ವದ ಅರ್ಧದಷ್ಟು ಜನರು ನಗರದ ಕ್ಷೇತ್ರದಲ್ಲಿ ಜೀವಿಸುವರು ಎಂದು ಸಹ ಯುಎನ್‌ಎಫ್‌ಪಿಎ ಹೇಳುತ್ತದೆ. ಇಂದಿರುವ 125 ನಗರಗಳೊಂದಿಗಿನ ಹೋಲಿಕೆಯಲ್ಲಿ, ಆಗ ವರ್ಧಿಷ್ಣು ದೇಶಗಳಲ್ಲಿಯ 300 ನಗರಗಳು ಹತ್ತು ಲಕ್ಷಕ್ಕಿಂತ ಹೆಚ್ಚು ಜನರನ್ನು ಒಳಗೊಳ್ಳುವುದು. (g95 05/22)

ಮಹಾ ಹಸಿರು ಗೋಡೆ

ಶತಮಾನಗಳ ಹಿಂದೆ ದಾಳಿಕೋರ ಮಂಗೋಲಿಯ ಬುಡಕಟ್ಟಿನ ಪಡೆಗಳನ್ನು ಹಿಮ್ಮೆಟ್ಟಿಸಲು ಕೇವಲ ಆಂಶಿಕವಾಗಿ ಸಫಲತೆಯನ್ನು ಹೊಂದಿದ್ದ, ಚೈನಾದ ಮಹಾ ಗೋಡೆಯು ಕಟ್ಟಕಡೆಗೆ ಅದಕ್ಕೆ ಸಲ್ಲಬೇಕಾಗಿರುವ ಮಾನ್ಯತೆಯನ್ನು ಪಡೆದಿರಬಹುದು. ಸೈಎನ್ಸ್‌ ನ್ಯೂಸ್‌ಗನುಸಾರ, 1950ಗಳಂದಿನಿಂದ ಗೋಡೆಯ ಮಗ್ಗುಲಲ್ಲಿ ಮರಗಳ ಅತಿ ದೊಡ್ಡ ವಲಯಗಳನ್ನು ನೆಡಲಾಗಿದೆ. ಮಹಾ ಹಸಿರು ಗೋಡೆ ಎಂದು ಕರೆಯಲ್ಪಡುವ ಇದು, ಸುಮಾರು 30 ಕೋಟಿಗಳಷ್ಟು ಮರಗಳನ್ನು ಒಳಗೊಂಡಿದೆ. ಅದರ ಉದ್ದೇಶವು: ಗೋಬಿ ಮರುಭೂಮಿ ಮತ್ತು ಇತರ ಶುಷ್ಕ ಪ್ರದೇಶಗಳಿಂದ ಬಿರುಗಾಳಿಯ ಮೂಲಕ ಚೈನಾದೊಳಕ್ಕೆ ಬರುವ ಧೂಳಿಗೆ ತಡೆಯೋಪಾದಿ ಕಾರ್ಯನಡಿಸುವುದೇ ಆಗಿದೆ. ಫಲಿತಾಂಶಗಳೇನು? 1950ಗಳಲ್ಲಿ, ಬೇಜಿಂಗ್‌ ನಗರವು ಪ್ರತಿ ವಸಂತ ಕಾಲದಲ್ಲಿ 10ರಿಂದ 20 ಧೂಳೆಬ್ಬಿಸುವ ಬಿರುಗಾಳಿಗಳಿಂದ ಆಕ್ರಮಿಸಲ್ಪಡುತ್ತಿತ್ತು. ಪ್ರತಿ ಮಾಸ 30ರಿಂದ 90 ತಾಸುಗಳ ವರೆಗೆ ಒಂದು ಕಿಲೋಮೀಟರಕ್ಕಿಂತ ಕಡಿಮೆ ದೃಗ್ಗೋಚರತ್ವವನ್ನು ತಗ್ಗಿಸುತ್ತಿತ್ತು. ಆದರೆ 1970ಗಳೊಳಗೆ ಈ ಧೂಳಿಗಾಳಿಗಳು ಪ್ರತಿ ವಸಂತಕಾಲಕ್ಕೆ ಐದಕ್ಕಿಂದಲೂ ಕಡಿಮಗೆ ಇಳಿದಿದ್ದು, ಒಂದು ತಿಂಗಳಿಗೆ ಹತ್ತು ತಾಸುಗಳಿಗೂ ಕಡಿಮೆ ದೃಗ್ಗೋಚರತ್ವದ ಸೌಮ್ಯ ಇಳಿತಗಳನ್ನು ಉಂಟುಮಾಡಿದ್ದವು. ವಾಯುಮಂಡಲದ ಒಬ್ಬ ರಸಾಯನಶಾಸ್ತ್ರಜ್ಞನು ಈ ಅಪಾರವಾದ ವನ್ಯ ವಲಯಗಳನ್ನು “20ನೇ ಶತಮಾನದಲ್ಲಿ ಹವಾಮಾನದ ಮಿತೀಕರಣ ಕಾರ್ಯಕ್ರಮಗಳ ಅತ್ಯಂತ ಆಕ್ರಮಕವಾದವುಗಳಲ್ಲಿ ಪ್ರಾಯಶಃ ಒಂದಾಗಿದೆ” ಎಂದು ಹೇಳಿರುವುದಾಗಿ ಸೈಎನ್ಸ್‌ ನ್ಯೂಸ್‌ ಉದ್ಧರಿಸುತ್ತದೆ. (g95 6/8)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ