ಐಡಿಟರಾಡ್ ಸ್ಥಾಪಿಸಲ್ಪಡಲು ಹಿಡಿದ ಹತ್ತು ಶತಮಾನಗಳು
ಅಲಾಸ್ಕದ ಎಚ್ಚರ! ಸುದ್ದಿಗಾರರಿಂದ
ನಮ್ಮ ಕತ್ತುಗಳನ್ನು ಚಾಚುತ್ತ ಕೆಳಗಿರುವ ಪಟ್ಟಣದ ಮುಖ್ಯ ಬೀದಿಯನ್ನು ನಾವು ಇಣಿಕಿ ನೋಡುತ್ತೇವೆ. ಇಲ್ಲಿ ಸಂಪರ್ಕ ಮಾಧ್ಯಮಗಳ ಕ್ಯಾಮರಗಳು ಮತ್ತು ಸರಂಜಾಮುಗಳು ಕೂಡಿರುವ ಜನರ ಗುಂಪೊಂದಿದೆ. ನಾವೆಲ್ಲರೂ ಬೀದಿಯ ಕೊನೆಗೆ ನೋಡುತ್ತೇವೆ. ಇಲ್ಲಿ ಅಲಾಸ್ಕದ ನೋಮ್ನ ಓಟದಂತ್ಯ ರೇಖೆಯಲ್ಲಿ “ಐಡಿಟರಾಡ್—ಕೊನೆಯ ಮಹಾ ಓಟ”ದ ವಿಜೇತನ ಪ್ರಥಮ ನಸುನೋಟಕ್ಕಾಗಿ ನಾವು ಕಾಯುತ್ತೇವೆ.
ಜಗತ್ತಿನ ಅತ್ಯಂತ ಪ್ರಖ್ಯಾತವಾದ, ಸುಮಾರು 1,800 ಕಿಲೊಮೀಟರುಗಳ ನಾಯಿ ಜಾರುಬಂಡಿಯೋಟವು ವಾಸ್ತವವಾಗಿ ಹತ್ತು ದಿನಗಳಿಗೂ ಹೆಚ್ಚುಕಾಲ ನಡೆಯುತ್ತ ಬಂದಿದೆ. ಕಳೆದ ವರ್ಷ ಸಮಯವು ಒಂಬತ್ತು ದಿನಗಳಿಗೆ ಕೆಲವು ತಾಸು ಹೆಚ್ಚಾಗಿತ್ತೆಂದು ಪಟ್ಟಿಯಾಗಿತ್ತು. ಓಟದ ಮೊದಲಿನ 24 ತಾಸುಗಳು, ನಿಯಮಾಚಾರದ ಆರಂಭೋತ್ಸವದ ನಿಮಿತ್ತ ಈ ವರ್ಷದ ಅಧಿಕೃತ ಸಮಯದಲ್ಲಿ ಲೆಕ್ಕಿಸಲ್ಪಡದ ಕಾರಣ ಸಮಯಗಳನ್ನು ಹೋಲಿಸಲಾಗುವುದಿಲ್ಲ. ವಿವಿಧ ದೇಶಗಳ ಹತ್ತಾರು ಮಷರ್ (ಸವಾರ)ಗಳು, ಇತರ ಓಟಗಳಲ್ಲಿ ಭಾಗವಹಿಸಿದ್ದ ಅನುಭವಿಕರು ಸೇರಿ, ಓಟವನ್ನು ಪ್ರವೇಶಿಸಿದರು.
ಹತ್ತು ಅಥವಾ ಹೆಚ್ಚು ದಿನಗಳನ್ನು, ಹೆಚ್ಚು ಸಮಯ ಒಬ್ಬಂಟಿಗರಾಗಿ ನಿರಾಶ್ರಯದ ಅರಣ್ಯದಲ್ಲಿ ಕಳೆಯುವುದನ್ನು ಭಾವಿಸಿರಿ. ಗುಡ್ಡದ ಕಣಿವೆಗಳು, ಹಿಮಮಯ ಕಮರಿಗಳು, ಪಾಚಿಬಯಲು, ವಿಶಾಲವಾದ ನೀರ್ಗಲ್ಲಾಗಿರುವ ನದೀ ಹೆದ್ದಾರಿಗಳು, ಒರಟಾದ ಸಮುದ್ರ ಹಿಮದಲ್ಲಿ ಅಡಾಡ್ಡಿ, ಇಲ್ಲಿ ನೋಮ್ನಲ್ಲಿ ನಿಮ್ಮ ಗಮ್ಯಸ್ಥಾನದ ಕಡೆಗೆ ಸತತವಾಗಿ ಚಲಿಸುತ್ತಿರುವಾಗ ನಿಮಗೆ ಶೂನ್ಯಕ್ಕಿಂತ ಕೆಳಗಿನ ತಾಪಮಾನವನ್ನು ತಾಳಿಕೊಳ್ಳಬೇಕಾಗುತ್ತದೆ.
ಮನುಷ್ಯ ಮತ್ತು ನಾಯಿಯ ಮಧ್ಯೆ, ಸಾಹಸ ಮತ್ತು ಸಹಕಾರದ ಈ ಪ್ರದರ್ಶನವು ಉಂಟುಮಾಡಿರುವ ಉದ್ರೇಕವನ್ನು ಗಮನಿಸುತ್ತ ನಾವು, ‘ಇದೆಲ್ಲ ಎಲ್ಲಿಂದ ಆರಂಭವಾಯಿತು?’ ಎಂದು ಕುತೂಹಲಪಟ್ಟೆವು.
ನಾಯಿ ಮಷ್ ಮಾಡುವಿಕೆಯ ಪರಂಪರೆ
“ಮಷ್ ಮಾಡುವುದು” ಮತ್ತು “ಮಷರ್” ಎಂಬ ಪದಗಳು ಎಲ್ಲಿಂದ ಬರುತ್ತವೆ? ಕೆನಡದ ವಾಯುವ್ಯ ಭಾಗವು ನೆಲೆಸಲ್ಪಡುತ್ತಿದ್ದಾಗ ಈ ಪದಗಳು ಆರಂಭಗೊಂಡವು. ಫ್ರೆಂಚ್ ಕೆನೇಡಿಯನ್ ನಾಯಿ ಚಾಲಕರು, “ಮಾ-ರ್-ಶ್!” ಎಂದು ಕೂಗಾಡಿದರು. ಕೆನಡದ ಇಂಗ್ಲಿಷ್ ನೆಲಸಿಗರಿಗೆ ಆ ಪದ “ಮಷ್!” ಎಂಬಂತೆ ಕೇಳಿಬಂತು. ಆಗ ನಾಯಿ ಚಾಲಕನು ಮಷ್ ಮಾಡುವವನು (ಮಷರ್) ಎಂದು ಜ್ಞಾತನಾದನು.
ಆಧುನಿಕ ನಾಯಿ ಜಾರುಬಂಡಿಯೋಟವು ಸಾಪೇಕ್ಷವಾಗಿ ಹೊಸತಾದ ಕಾಲಕ್ಷೇಪವಾದರೂ ಬಂಡಿ ನಾಯಿಗಳನ್ನು ಕಡಮೆ ಪಕ್ಷ ಒಂದು ಸಾವಿರ ವರ್ಷಗಳಿಂದ ಉಪಯೋಗಿಸಲಾಗುತ್ತದೆ. ಆದಿಯಲ್ಲಿ ನಾಯಿಗಳು ಮತ್ತು ಬಂಡಿಗಳು, ಭೂಮಿಯ ಹಿಮಮಯ, ಬಂಜರಾದ ಉತ್ತರ ಹರವುಗಳಲ್ಲಿ ಸಾಮಾನುಗಳನ್ನು ಸಾಗಿಸಲು ಪ್ರಧಾನವಾಗಿ ಬಳಸಲ್ಪಡುತ್ತಿದ್ದವು. ಬಂಡಿಗಳನ್ನು ಎಳೆಯಲು ನಾಯಿಗಳನ್ನು ಬಳಸುತ್ತಿದ್ದ ಪ್ರಥಮ ಲಿಖಿತ ದಾಖಲೆಯು, ಹತ್ತು ಶತಮಾನಗಳ ಹಿಂದಿನ ಅರೇಬಿಯನ್ ಸಾಹಿತ್ಯದಲ್ಲಿ ಕಂಡುಬರುತ್ತದೆ. ಸೈಬೀರಿಯದ ಚುಕ್ಚಿ ಜನರು ನಾಯಿ ಮತ್ತು ಜಾರುಬಂಡಿಯ ಮೇಲೆ ಸ್ವಲ್ಪ ಮಟ್ಟಿಗಾದರೂ ಆತುಕೊಂಡವರಲ್ಲಿ ಪ್ರಥಮರು ಎಂದು ಕೆಲವು ತಜ್ಞರ ಅಭಿಪ್ರಾಯ.
ಮೂಲದ ಐಡಿಟರಾಡ್ ಹಾದಿಗೆ ದಾರಿಮಾಡಿಕೊಟ್ಟದ್ದು ಚಿನ್ನವೇ. 1908ರಲ್ಲಿ, ಆತಪಾಸ್ಕನ್ ಇಂಡಿಯನರು ಕ್ಯಾರಿಬೂ ಹಿಮಸಾರಂಗವನ್ನು ಬೇಟೆಯಾಡುತ್ತಿದ್ದ ಪ್ರದೇಶದಲ್ಲಿ ಚಿನ್ನವು ಕಂಡುಹಿಡಿಯಲ್ಪಟ್ಟಿತು. ಅವರು ಈ ಪ್ರದೇಶವನ್ನು, “ದೂರದ ಸ್ಥಳ”ವೆಂದು ಅರ್ಥವಿರುವ ಹೈಡಿಟರಾಡ್ ಎಂದು ಕರೆದರು. ಇದು ಆ ಬಳಿಕ ಐಡಿಟರಾಡ್ ಆಗಿ ಆಂಗ್ಲೀಕರಿಸಲ್ಪಟ್ಟಿತು. ಇದರ ಪರಿಣಾಮವಾಗಿ ನೋಮ್ಗೆ ಐಡಿಟರಾಡ್ ಪಟ್ಟಣದ ಮಾರ್ಗವಾಗಿ ಹೋಗುವ 1,800 ಕಿಲೊಮೀಟರುಗಳ ಹಾದಿಯನ್ನು ವಿಕಸಿಸಲಾಯಿತು. ಸಕಾಲದಲ್ಲಿ, ಇದು ಐಡಿಟರಾಡ್ ಟ್ರೇಲ್ ಎಂದು ಪ್ರಸಿದ್ಧವಾಯಿತು.
ಅಲಾಸ್ಕ ಮತ್ತು ಕೆನಡದ ಚಿನ್ನ ನುಗ್ಗಾಟದ ಸಮಯದಲ್ಲಿ, ನಾಯಿ ಜಾರುಬಂಡಿಗಳು ಸರಂಜಾಮು, ಟಪಾಲು ಮತ್ತು ಚಿನ್ನವನ್ನು ಆ ಅಪಾರ ಅರಣ್ಯಮಾರ್ಗವಾಗಿ ಸಾಗಿಸಿದವು. 1911ರ ಅಂತ್ಯಭಾಗದಲ್ಲಿ, ನಾಲ್ಕು ನಾಯಿ ತಂಡಗಳು ಒಂದು ರವಾನೆಯಲ್ಲಿ 1,200 ಕಿಲೊಗ್ರಾಮ್ ಚಿನ್ನವನ್ನು ಐಡಿಟರಾಡ್ ಟ್ರೇಲ್ನಲ್ಲಿ ಸಾಗಿಸಿ, ಜನವರಿ 10, 1912ರಲ್ಲಿ ಅಲಾಸ್ಕದ ಕಿನಿಕ್ಗೆ ಬಂದು ಸೇರಿದವು ಎಂದು ಒಂದು ವರದಿ ಹೇಳುತ್ತದೆ.
ಆಧುನಿಕ ನಾಯಿ ಜಾರುಬಂಡಿಯೋಟ ಹುಟ್ಟಿದ್ದು
ಚಿನ್ನ ನುಗ್ಗಾಟದ ಯುಗದಲ್ಲಿ, ಎಷ್ಟೋ ನಾಯಿ ತಂಡಗಳು ಕೆಲಸ ನಡೆಸುತ್ತಿದ್ದುದರಿಂದ, ನಾಯಿ ಪಂಚರ್ಗಳೆಂದು ಕರೆಯಲ್ಪಡುತ್ತಿದ್ದ ನಾಯಿ ನಿಯಂತ್ರಕರು, ತಮ್ಮ ತಂಡ ಅಥವಾ ಮುಖ್ಯ ನಾಯಿಯು ಪ್ರಾಯಶಃ ಅತಿ ಬಲಾಢ್ಯವೂ, ಅತಿ ವೇಗಿಯೂ ಅಥವಾ ಚತುರವಾದದ್ದೂ ಆಗಿದೆಯೆಂದು ನಂಬುವುದು ಸಾಮಾನ್ಯವಾಗಿತ್ತು. ಆ ಪರಿಣಾಮವಾಗಿ, ಅಡಿಗಡಿಗೆ ಸ್ಪರ್ಧೆಯು ನಡೆಯುತ್ತಿತ್ತು. ಬಳಿಕ ನೋಮ್ನಲ್ಲಿ, 1908ರಲ್ಲಿ, ಪ್ರಥಮ ಸಂಘಟಿತ ನಾಯಿ ಜಾರುಬಂಡಿಯೋಟವಾದ, ಆಲ್-ಅಲಾಸ್ಕ ಸ್ವೀಪ್ಸ್ಟೇಕ್ಸ್ ನಡೆಯಿತು. ಈ ಆಧುನಿಕ ನಾಯಿ ಜಾರುಬಂಡಿಯೋಟದ ಈ ಅಗ್ರಗಾಮಿಯು ಮಷರ್ಗಳನ್ನು ಇನ್ನೊಂದು ಓಟಕ್ಕಾಗಿ—ಚಿನ್ನದ ಕೊಡುಗೆಯನ್ನು ಪಡೆಯಲಿಕ್ಕಾಗಿ ಅಲ್ಲ, ಬದಲಿಗೆ ಜೀವಗಳನ್ನು ರಕ್ಷಿಸಲಿಕ್ಕಾಗಿ—ತಯಾರಿಸಿತು.
1925ರ ನೋಮ್ ಸಿರಮ್ ಓಟ
ಐತಿಹಾಸಿಕವಾದ ನೋಮ್ ಸಿರಮ್ ಓಟವು ಸಾವಿಗೆದುರಾಗಿದ್ದ ನಾಯಿ ಜಾರುಬಂಡಿಯ ಓಟವಾಗಿತ್ತು. 1925ರಲ್ಲಿ ಗಳಚರ್ಮರೋಗ (ಡಿಫ್ತೀರಿಯ)ವು ನೋಮ್ನಲ್ಲಿ ಪ್ರಾರಂಭವಾಯಿತು. ಸಾಂಕ್ರಾಮಿಕ ರೋಗದ ಬೆದರಿಕೆಯ ಕಾರಣ, ಲಸಿಕೆಯ ಒಂದು ಸರಬರಾಯಿ ತಡವಿಲ್ಲದೆ ನೋಮ್ ತಲಪಬೇಕಾಗಿತ್ತು. 20 ನಾಯಿಬಂಡಿ ಪಂಚರ್ಗಳ ಮತ್ತು ತಂಡಗಳ ಒಂದು ಟಪ್ಪೆಯನ್ನು ಸಂಘಟಿಸಲಾಯಿತು. ಮೊದಲನೆಯ ತಂಡವು ಋಣ 46 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದ ನಿನ್ಯಾನವನ್ನು ಬಿಟ್ಟುಹೋದಾಗ, ಒಂದರಿಂದ ಇನ್ನೊಂದು 50ರಿಂದ 80 ಕಿಲೊಮೀಟರು ದೂರವಿದ್ದ ಹಳ್ಳಿಗಳ ಮಧ್ಯೆ ಟಪ್ಪೆ ಓಟವನ್ನು ಆರಂಭಿಸಿತು. ಇವುಗಳಲ್ಲಿ ಹೆಚ್ಚಿನ ಓಟಗಳು, ಕತ್ತಲೆಯಲ್ಲಿ ನಡೆದವು, ಏಕೆಂದರೆ ವರ್ಷದ ಆ ಸಮಯದಲ್ಲಿ ಉತ್ತರ ಧ್ರುವದ ಹಗಲು ಹೊತ್ತು ಕೇವಲ ಮೂರು ಅಥವಾ ನಾಲ್ಕು ತಾಸು ದೀರ್ಘವಾಗಿರುತ್ತದೆ.
ನೋಮ್ಗಿದ್ದ 1,080 ಕಿಲೊಮೀಟರಿಗಿಂತಲೂ ಹೆಚ್ಚಿನ ದೂರವನ್ನು 5 1/3 ದಿನಗಳಲ್ಲಿ ಆವರಿಸಲಾಯಿತು. ಈ ಪ್ರಯಾಣಕ್ಕೆ ಸಾಮಾನ್ಯವಾಗಿ 25 ದಿನ ಹಿಡಿಯುತ್ತಿತ್ತು. ಮಷರ್ಗಳು ಅತ್ಯುಗ್ರ ಹಿಮಪಾತಗಳ ಮಧ್ಯದಲ್ಲಿ, ಋಣ 57 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕೂ ಕಡಮೆ ಶೀತಗಾಳಿಯ ಮಧ್ಯದಲ್ಲಿ ಪ್ರಯಾಣಿಸಿದರು. ಇದು ಎಷ್ಟು ಮಹತ್ತಾದ ಸಾಹಸ ಸಾಧನೆಯಾಗಿತ್ತೆಂದರೆ ಅಮೆರಿಕದ ಅಧ್ಯಕ್ಷ ಕ್ಯಾಲ್ವಿನ್ ಕೂಲಿಜ್, ಪ್ರತಿಯೊಬ್ಬ ಭಾಗಿಗೆ ಒಂದು ಪಾರಿತೋಷಿಕ ಮತ್ತು ಸಮರ್ಥನ ಪತ್ರವನ್ನು ಕೊಟ್ಟರು.
ಮುನ್ನಾಯಿಗಳು
ಒಂದು ತಂಡದ ಮುನ್ನಾಯಿ ಅತಿ ಪ್ರಾಮುಖ್ಯ. ಮುನ್ನಾಯಿಯಾಗಿ ಅರ್ಹತೆ ಪಡೆಯುವ ನಾಯಿಗಳು ಅತಿ ಕೊಂಚ. ಒಂದು ತಂಡದಲ್ಲಿರುವ ನಾಯಿಗಳ ಸಂಖ್ಯೆಯ ಮೇಲೆ ಹೊಂದಿಕೊಂಡು, ಮುನ್ನಾಯಿಯು ಮಷರ್ನ ಮುಂದೆ 15ರಿಂದ 20 ಮೀಟರುಗಳು ಅಥವಾ ಅದಕ್ಕಿಂತಲೂ ಹೆಚ್ಚು ದೂರದಲ್ಲಿರಬಹುದೆಂದು ನೀವು ನೆಪಿನಲ್ಲಿಡಬೇಕು. ಕತ್ತಲೆಯಲ್ಲಿ ಅಥವಾ ಶ್ವೇತೀಕರಣ ಪರಿಸ್ಥಿತಿಗಳಲ್ಲಿ, ಅಥವಾ ಮೂಲೆಗಳನ್ನು ಸುತ್ತಿಕೊಂಡು ಹೋಗುವಾಗ, ಮುನ್ನಾಯಿಯು ಮಷರ್ನ ದೃಷ್ಟಿಗೆ ಪೂರ್ತಿ ಅದೃಶ್ಯವಾಗಿರಬಹುದು. ಆದಕಾರಣ, ಹಾದಿಯನ್ನು ಮೂಸಿ ಕಂಡುಹಿಡಿದು ಅದನ್ನು ಅನುಸರಿಸಿ ಹೋಗುವುದು ಅಥವಾ ಅತಿ ಭದ್ರವಾದ ಹಾದಿಯನ್ನು ಆರಿಸುವುದು ಮತ್ತು ತನ್ನ ಯಜಮಾನನಿಗೆ ಸ್ವತಂತ್ರವಾಗಿ ಬೇರೆ ಕ್ಷಣಕ್ಷಣದ ಆಯ್ಕೆಗಳನ್ನು ಮಾಡುವುದು ಈ ನಾಯಿಗೆ ಸೇರಿದೆ.
ಕಳೆದ ವರ್ಷ, ಹಿಂದಿನ ವರ್ಷ ಎರಡನೆಯದಾಗಿ ಓಟ ಮುಗಿಸಿದ ಅಲಾಸ್ಕದ ಮಷರ್ ಡೀಡೀ ಜಾನ್ರೊ, ತನ್ನ ಅತಿ ಭರವಸಾರ್ಹ ಮುನ್ನಾಯಿಯಾದ ಬಾರ್ಕ್ಲೀಯನ್ನು ಬಿಟ್ಟುಹೋಗಬೇಕಾಯಿತು. ಅದು ಅವಳ ತಂಡಕ್ಕೆ ಗುರುತರವಾದ ಪೆಟ್ಟಾಗಿ ಪರಿಣಮಿಸಿತು. ಎರಡು ವರ್ಷಗಳ ಹಿಂದೆ, ಹತ್ತು ಸಲ ಐಡಿಟರಾಡ್ ಮಷರ್ ಆಗಿ ಭಾಗವಹಿಸಿದ್ದ ಲೇವನ್ ಬರ್ವ್, ನೋಮ್ಗೆ ತಲಪಲು ಇನ್ನು 369 ಕಿಲೊಮೀಟರುಗಳು ಇರುವಾಗ, ತನ್ನ ಅನನುಭವಿಗಳಾಗಿದ್ದ ಮುನ್ನಾಯಿಗಳ ಜೊತೆಗೆ ಸದಾ ಆಜ್ಞೆಗಳನ್ನು ಅರಚಿ ಧ್ವನಿ ಒಡೆದ ಕಾರಣ ಓಟವನ್ನು ಬಿಡಬೇಕಾಯಿತು.
ಮುನ್ನಾಯಿಯ ಪ್ರಶಂಸೆಯನ್ನು ಮಾಡುವಾಗ, ತನ್ನ ತಂಡವನ್ನು ನಡೆಸಲು ಮಷರ್ ಏನೂ ಮಾಡುವುದಿಲ್ಲವೆಂದು ಅರ್ಥವಾಗುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಅವನು “ಜೀ” (ಬಲಕ್ಕೆ), “ಹಾ” (ಎಡಕ್ಕೆ), ಅಥವಾ “ವಾ” (ನಿಲ್ಲು) ಎಂಬ ಆಜ್ಞೆಗಳನ್ನು ಅಬ್ಬರಿಸಿ ನಿರ್ದೇಶಿಸುವ ಮೂಲಕ ನಿಶ್ಚಯವಾಗಿಯೂ ಯಜಮಾನನಾಗಿರುತ್ತಾನೆ. ಹಿಂದಿನ ವರ್ಷಗಳ “ಮಷ್” ಎಂಬ ಮಾತು ಈಗ ಸಾಮಾನ್ಯ ಕಾಲ್ಚೆಂಡಾಟದ ಪದವಾದ “ಹೈಕ್” ಅಥವಾ ಬರೀ “ಹೋಗೋಣ” ಎಂಬುದರಿಂದ ಸ್ಥಾನಭರ್ತಿಯಾಗಿದೆ. ಈ ಅಥವಾ ತದ್ರೀತಿಯ ಮಾತುಗಳು, ತಂಡವು ಚಲಿಸುವಂತೆ ಮಾಡಿ ಅದರ ವರ್ತನೆಗಳನ್ನು ನಿಯಂತ್ರಿಸುತ್ತವೆ. ತೀರ ತವಕದಿಂದಿರುವ ನಾಯಿಗಳು ಸಮಯಕ್ಕೆ ಮೊದಲಾಗಿ ಹೊರಡದಂತೆ ತಡೆಯುವ, ಹಿಮದೊಳಕ್ಕೆ ಒತ್ತಲ್ಪಡುವ ಒಂದು ವಿಧದ ಲಂಗರಾದ, ಮನಸ್ಸಿಗೆ ಹಿಡಿಸುವ ಒಂದು ಹಿಮ ಕೊಕ್ಕೆಯಿಂದ ಸಂಪೂರಿತವಾದ ಇಂತಹ ಆಜ್ಞೆಗಳು ಸಾಮಾನ್ಯವಾಗಿ ತಂಡವನ್ನು ನಿಯಂತ್ರಿಸುತ್ತವೆ.
“ಸಾಮಾನ್ಯವಾಗಿ” ಎಂಬ ಪದವು ಇಲ್ಲಿ ಬಳಸಲ್ಪಡುವ ಕಾರಣವೇನಂದರೆ, ಮಿನಸೋಟದ ಮಷರ್ ಮಾರ್ಕ್ ನಾರ್ಡ್ಮನ್ ಸ್ವಲ್ಪದರಲ್ಲಿ ಮುನ್ನಾಯಿಯ ವಿಶ್ವಾಸಾರ್ಹತೆ ಅಥವಾ ಆಜೆಗ್ಞಳಿಗೆ ತಂಡದ ಪ್ರತಿವರ್ತನೆಯ ಕುರಿತು ವಾದಿಸಬಹುದು. ಇತ್ತೀಚೆಗಿನ ಒಂದು ಓಟದಲ್ಲಿ, ಒಂದು ತನಿಖೆ ಕಟ್ಟೆಗೆ ತುಸು ಮೊದಲು ಜಡೆಗಟ್ಟಿದ ಹಗ್ಗಗಳನ್ನು ಸರಿಪಡಿಸಲು ಅವನು ತನ್ನ ತಂಡವನ್ನು ನಿಲ್ಲಿಸಿದನು. ಅವನು ಕೆಲಸ ಮಾಡುತ್ತಿದ್ದಾಗ, ನಾಯಿಗಳು ತಮ್ಮ ಹಗ್ಗಗಳನ್ನು ತಿರುಚಿಸಿ, ಯಾವುದು ಬಂಡಿಯಿಂದ ಪ್ರತಿ ನಾಯಿಗೆ ಕಟ್ಟಿರುತ್ತದೊ ಆ ಲೋಹದ ಎಳೆಸರಿಗೆಯಾದ ಗ್ಯಾಂಗ್ಲೈನನ್ನು ಬಿಡುಗಡೆಮಾಡಿದವು, ಮತ್ತು ನಾಯಿಗಳು ಓಡತೊಡಗಿದವು. ತಂಡವು ಬಂಡಿಯನ್ನು ಬಿಟ್ಟು ಹೊರಟಾಗ ಮಾರ್ಕ್ ಥಟ್ಟನೆ ಮುಂದೆ ಹಾರಿ, ಕೊನೆಯ ನಾಯಿಗಳು ಇನ್ನೇನು ದಾಟಿಹೋಗುತ್ತಿವೆ ಎಂಬಂತಿದ್ದಾಗ ಹಿಂದಿನಿಂದ ಹಿಡಿದನು. (ಅರಣ್ಯದಲ್ಲಿ ನಿಮ್ಮ ತಂಡವನ್ನು ಕಳೆದುಕೊಳ್ಳುವುದು ತೀರ ಅಪಾಯಕರ ವಿಷಯವಾಗಿರಬಲ್ಲದು.) ಮುಂದಿನ ಅರ್ಧ ಕಿಲೊಮೀಟರ್ ಮಾರ್ಗದಲ್ಲಿ ಅವನ ತಂಡವು ಮಂಜುದಿಣ್ಣೆ ಮತ್ತು ನದೀ ಜಲಾಧಿಕ್ಯಗಳ ಮಧ್ಯೆ ಅವನನ್ನು ಎಳೆದುಕೊಂಡು ಹೋದಾಗ ಅವನು ಹಿಮನೇಗಿಲು ಮತ್ತು ಜಲ ಜಾರಾಟಗಾರನೂ ಆದನು. ಅವನು ತನ್ನ ತಂಡದ ಹಿಂದಿನಿಂದ ಜಾರುತ್ತ, ನಿಲ್ಲಬೇಕೆಂಬ ಆಜ್ಞೆಗಳನ್ನು ಸದಾ ಅರಚುತ್ತ ಹೋದಾಗ ಅವನ ಪಾರ್ಕ ಜುಬ್ಬ ನೀರನ್ನು ಗೋರಿತು, ಮತ್ತು ಹಿಮವು ಅವನ ಗಲ್ಲದಡಿ ಒಟ್ಟುಗೂಡಿತು. ನಾಯಿಗಳು ಕೊನೆಗೆ ಮಾತಿಗೆ ಕಿವಿಗೊಟ್ಟಾಗ ಅವನು ತಾನು ತೊರೆದಿದ್ದ ಬಂಡಿಯನ್ನು ಮರಳಿ ಪಡೆಯಲು ನಡೆದು ಹೋದನು. ಆ ಕ್ಷಣದಲ್ಲಿ, ತನ್ನ ಮುನ್ನಾಯಿಯ ವಿಧೇಯತೆಯ ಕುರಿತು ಅವನು ನಿರಾಶನಾದನು!
ಆದರೂ, ಮುನ್ನಾಯಿಯ ವಿಶ್ವಾಸಾರ್ಹತೆಗೆ ಹೆಚ್ಚು ಸಂತೋಷದ ಪರಿಣಾಮಗಳಿರುವ ಸಂದರ್ಭಗಳು ಇರುತ್ತವೆ. ಐಡಿಟರಾಡ್ ಸಮಯದಲ್ಲಿ, ನಿದ್ರೆ ದೊರೆಯುವುದು ಕಷ್ಟ. ಹಾದಿಯು ನೆಟ್ಟಗೆ ಮತ್ತು ಸಮತಟ್ಟಾಗಿರುವಾಗ, ಮಷರ್ ಜಾರುಬಂಡಿಯಲ್ಲಿ ನಸು ನಿದ್ದೆ ಮಾಡುವಾಗ ತನ್ನ ತಂಡವನ್ನು ಮುನ್ನಾಯಿಯ ವಶಕ್ಕೆ ಒಪ್ಪಿಸುವ ಸಮಯಗಳಿವೆ. ಈ ಎಲ್ಲ ಸಮಯದಲ್ಲಿ ನಾಯಿಗಳು ತಮ್ಮ ಗಮ್ಯಸ್ಥಾನವಾದ ನೋಮ್ನ ಕಡೆಗೆ ಜೋರಾದ ವೇಗದಿಂದ ಹೋಗುತ್ತ ಇರುತ್ತವೆ.
ಕೆಲವು ಬಾರಿ, ಉತ್ತಮವಾದ ಹಾದಿಯಿರುವಲ್ಲಿ ಒಂದು ತಂಡವು ತಾಸಿಗೆ 18ರಿಂದ 19 ಕಿಲೊಮೀಟರ್ ಸುಲಭವಾಗಿ ಓಡಬಲ್ಲದು ಅಥವಾ ಕಡಮೆ ಸಮಯಾವಧಿಗಳಲ್ಲಿ ತಾಸಿಗೆ 30 ಕಿಲೊಮೀಟರ್ ವೇಗವಾಗಿ ಓಡಬಲ್ಲದು. ಸರಾಸರಿಯು ಇದಕ್ಕಿಂತ ತೀರ ಕಡಮೆಯಾದರೂ, ಅವು ಅನೇಕ ಬಾರಿ ಒಂದು ದಿನಕ್ಕೆ 160 ಕಿಲೊಮೀಟರುಗಳನ್ನು ಆವರಿಸುತ್ತವೆ. ಒಂದು ಸ್ಪರ್ಧಾಶ್ರೇಷ್ಠ ತಂಡವು ಪೂರ್ತಿ ಹತ್ತು ದಿನಗಳ ಓಟದಲ್ಲಿ ತಾಸಿಗೆ ಸುಮಾರು ಸರಾಸರಿ ಏಳು ಕಿಲೊಮೀಟರು ಓಡಿತು.
ಅಲಾಸ್ಕದ ಜಾರುಬಂಡಿ ನಾಯಿ
ಜಾರುಬಂಡಿ ನಾಯಿಗಳು ಮನುಷ್ಯನಿಂದ ಶೋಷಿಸಲ್ಪಟ್ಟು ಪ್ರಾಯಶಃ ಪೀಡಿಸಲ್ಪಡುವುದಿಲ್ಲವೊ ಎಂದು ಕೆಲವರು ಕುತೂಹಲಪಡುತ್ತಾರೆ. ಮನುಷ್ಯನು ಕೆಲವು ಸಲ ಪ್ರಾಣಿಗಳ ಮೇಲೆ ಹೇರಿರುವ ಅಪಪ್ರಯೋಗವನ್ನು ಒಪ್ಪಿಕೊಳ್ಳಬೇಕಾಗಿರುವುದರಿಂದ ಈ ಚಿಂತೆ ಅವಿವೇಕದ್ದಲ್ಲ.
ಜಾರುಬಂಡಿ ನಾಯಿಗಳು ತಮ್ಮ ಕೆಲಸವನ್ನು ಆವೇಶದಿಂದ ನಡಿಸುತ್ತಿರುವಂತೆ ಕಾಣುತ್ತದೆ. ಪ್ರತಿಯೊಂದು ನಾಯಿ ಹಾದಿಗಿಳಿಯುವ ತನ್ನ ಬಯಕೆಗೆ ಸರ್ವವನ್ನು ಕೂಡಿಸುತ್ತ ಇರುವಾಗ ಓಟಾರಂಭದ ಸಾಲು ಅವುಗಳ ಬೊಗಳುವಿಕೆಯಿಂದ ತುಂಬುತ್ತದೆ. ಕೆಲವು ನಾಯಿಗಳು ಹೊರಟುಹೋಗಲು ಅತ್ಯಂತ ತವಕಪಡುತ್ತವೆ. ಹತ್ತರ ಒಂದು ತಂಡವು ತನ್ನ ಸಜ್ಜನ್ನು ಎಷ್ಟು ಶಕಿಯ್ತಿಂದ ಎಳೆಯಿತೆಂದರೆ, ಅವುಗಳು ತಾವು ಕಟ್ಟಲ್ಪಟ್ಟಿದ್ದ ಟ್ರಕ್ಕನ್ನು—ಆ ಟ್ರಕ್ಕು ಪಾರ್ಕಿಂಗ್ ಬ್ರೇಕ್ ಹಾಕಿದ್ದಾಗಿ ಗಿಯರ್ನಲ್ಲಿತ್ತು—ಎಳೆದುಕೊಂಡು ಹೋದವು!
ತಮ್ಮ ನಾಯಿಗಳ ಯೋಗಕ್ಷೇಮದ ವಿಷಯದಲ್ಲಿ ಮಷರ್ಗಳು ಬಲು ಆಸಕ್ತಿಯುಳ್ಳವರು. ವಿಶ್ರಮಕ್ಕಾಗಿ ನಿಲ್ಲುವಾಗ, ಆ ಸಮಯದಲ್ಲಿ ಹೆಚ್ಚಿನದ್ದು ನಾಯಿಗಳಿಗೆ ಆಹಾರ ತಯಾರಿಸುವುದರಲ್ಲಿ, ಅವುಗಳ ಹಿಮಮಯ ಹಾಸಿಗೆಯಲ್ಲಿ ಹುಲ್ಲು ಹರಡಿ ಅವುಗಳನ್ನು ಪ್ರತ್ಯೇಕಿಸುವುದರಲ್ಲಿ, ಅವುಗಳ ಪಂಜಾಗಳನ್ನು ರಕ್ಷಿಸುವ ಮೋಜಗಳನ್ನು ಪರೀಕ್ಷಿಸುವುದರಲ್ಲಿ ಹಾಗೂ ಯಾವುದಾದರೂ ಗಾಯಗಳ ಆರೈಕೆ ಮಾಡುವುದರಲ್ಲಿ ಹೋಗುತ್ತದೆ. ಐಡಿಟರಾಡ್ನಲ್ಲಿ ಮಷರ್ಗಳಿಗಿರುವ ವಿಶ್ರಾಂತಿಯು ಯಾವುದಾದರೂ ಒಂದು ಸಮಯದಲ್ಲಿ ಒಂದೂವರೆಯಿಂದ ಎರಡು ತಾಸುಗಳದ್ದು. ಆದರೆ ಕಡ್ಡಾಯವಾಗಿರುವ 24 ತಾಸುಗಳ ಒಂದು ನಿಲುಗಡೆಯಲ್ಲಿ ಮಷರ್ಗಳು ಆರೋ ಏಳೋ ತಾಸುಗಳ ವಿಶ್ರಾಂತಿಯನ್ನು ಪಡೆಯಬಹುದು. ಆದರೆ ಸಂತೋಷಕರವಾಗಿ, ನಾಯಿಗಳಿಗೆ ಮಷರ್ಗಳಿಗಿಂತ ಹೆಚ್ಚು ವಿಶ್ರಾಂತಿ ದೊರೆಯುತ್ತದೆ.
ಒಬ್ಬ ಮಷರ್ನ ಅಭ್ಯಾಸದ ನೆಪ್ಪು ಏನೆಂದರೆ ಒಂದು ನಾಯಿ ತನ್ನ ಸ್ವಂತ ಭಾರಕ್ಕಿಂತ ಹೆಚ್ಚನ್ನು ಎಳೆಯಬಾರದು. ಮಷರ್ನನ್ನು ಸೇರಿಸಿ ಐಡಿಟರಾಡ್ನ ಜಾರುಬಂಡಿಯ ಸರಾಸರಿ ಭಾರವು 140ರಿಂದ 230 ಕಿಲೊಗ್ರಾಮ್. ಒಬ್ಬ ಓಟಗಾರನಿಗೆ 15 ನಾಯಿಗಳ ಒಂದು ತಂಡವಿರುವಲ್ಲಿ, ಪ್ರತಿಯೊಂದು ನಾಯಿ 15 ಕಿಲೊಗ್ರಾಮ್ ಅಥವಾ ಕಡಮೆಯನ್ನು ಅಂದರೆ, ಅದರ ಸರಾಸರಿ 25 ಕಿಲೊಗ್ರಾಮ್ಗಿಂತ ಎಷ್ಟೋ ಕಡಮೆಯಾದುದನ್ನು ಎಳೆಯುತ್ತದೆ. ಇದಕ್ಕೆ ಕೂಡಿಸಿ, ಹೆಚ್ಚು ಸಮಯ, ಮಷರ್ ಜಾರುಬಂಡಿಯಲ್ಲಿ ಸವಾರಿ ಮಾಡುವುದಿಲ್ಲ. ಬದಲಿಗೆ, ಅವನು ಹಿಂದಿನಿಂದ ಓಡಿ, ಪ್ರಾಯಶಃ ಬಂಡಿ ಗುಡ್ಡ ಹತ್ತಿಹೋಗುವಾಗ ಅಥವಾ ಒರಟಾದ ಪ್ರದೇಶದಲ್ಲಿರುವಾಗ ನೆರವು ನೀಡುತ್ತ ದೂಡುತ್ತಾನೆ.
ಆದರೂ, ಮಷರ್ಗಳು ತಮ್ಮ ನಾಯಿಗಳಿಗೆ ನೀಡುವ ಪರಾಮರಿಕೆಯ ಹೊರತೂ, ಓಟಗಳು ಅವುಗಳಲ್ಲಿ ಕೆಲವಕ್ಕೆ ಹಾನಿಮಾಡುತ್ತವೆಂದು ಕೆಲವರ ವಾದ. ದ ನ್ಯೂ ಯಾರ್ಕ್ ಟೈಮ್ಗೆ ಬರೆಯಲ್ಪಟ್ಟ ಒಂದು ಪತ್ರವು, ಅಮೆರಿಕದ ಪರೋಪಕಾರ ಸಂಘವು ಕೆಲವು ನಾಯಿಗಳಿಗೆ ಓಟವನ್ನು ಮುಗಿಸಲಿಕ್ಕಾಗುವುದಿಲ್ಲವೆಂದೂ ವಿಪರೀತ ಓಡಿಸಲ್ಪಡುವುದರಿಂದಾಗಿ ಕೆಲವು ನಾಯಿಗಳು ಸಾಯುವುದೂ ಇದೆಯೆಂದು ವಾದಿಸಿತೆಂದು ಗಮನಿಸಿತು. ಇದಕ್ಕೆ ಬಹುಮಟ್ಟಿಗಿನ ಕಾರಣವು ಪ್ರಾಯೋಜಕ ಸಂಸ್ಥೆಗಳು ಒದಗಿಸುವ ದೊಡ್ಡ ಮೊತ್ತದ ಬಹುಮಾನ ಹಣವೇ ಎಂದು ಹೇಳಲಾಯಿತು.
ನಾಯಿಗಳ ನಾಲ್ಕು ವರ್ಗಗಳು
ವೇಗವಾಗಿ ಓಡುತ್ತ ಅದರಲ್ಲಿ ಆನಂದಿಸುತ್ತದೆಂದು ತೋರುವ ಈ ನಾಯಿ ಯಾವ ತೆರದವು? ಎಳೆಯಲು ತರಬೇತು ಹೊಂದಿರುವ ಯಾವುದೇ ನಾಯಿ ಜಾರುಬಂಡಿಯನ್ನು ಎಳೆಯಬಲ್ಲದು. ಆದರೆ ಅಲಾಸ್ಕದಲ್ಲಿರುವ ಓಟದ ಜಾರುಬಂಡಿ ನಾಯಿಯು ಸಾಧಾರಣವಾಗಿ ನಾಲ್ಕು ಪ್ರಧಾನ ಜಾತಿಗಳಲ್ಲಿ ಒಂದು: ಅಲಾಸ್ಕನ್ ಮ್ಯಾಲಮ್ಯೂಟ್, ಸೈಬೀರಿಯನ್ ಹಸ್ಕೀ, ಅಲಾಸ್ಕನ್ ಹಸ್ಕೀ ಅಥವಾ ವಿಲೆಜ್ ಅಥವಾ ಇಂಡಿಯನ್ ನಾಯಿ, ಎನ್ನುತ್ತಾರೆ ಲೇಖಕಿ ಲಾರ್ನ ಕಾಪಿಂಗರ್, ತಮ್ಮ ಜಾರುಬಂಡಿ ನಾಯಿಗಳ ಜಗತ್ತು (ಇಂಗ್ಲಿಷ್) ಎಂಬ ಪುಸ್ತಕದಲ್ಲಿ.
1) ಅಲಾಸ್ಕನ್ ಮ್ಯಾಲಮ್ಯೂಟ್ ಉತ್ತರ ಧ್ರುವ ಪ್ರದೇಶದ ಒಂದು ವಿಶಿಷ್ಟ ಸ್ಥಳೀಯ ಜಾತಿ. ರಷ್ಯನ್ ದೇಶ ಪರಿಶೋಧಕರು ಕಾಟ್ಸಿಬ್ಯೂ ಸೌಂಡ್ನ, ಆಗ ಮಾಲಮುಟ್ ಅಥವಾ ಮಾಲಮ್ಯುಟ್ ಎಂದು ಜ್ಞಾತರಾಗಿದ್ದ ಇನ್ಯವಟ್ ಮೂಲನಿವಾಸಿಗಳಲ್ಲಿ ಮ್ಯಾಲಮ್ಯೂಟನ್ನು ಕಂಡುಹಿಡಿದರು. ಈ ನಾಯಿಯ ಮೈಕಟ್ಟು ದೊಡ್ಡದು ಮತ್ತು ಅದು ಅತಿ ಬಲಶಾಲಿ. ಚಿನ್ನ ನುಗ್ಗಾಟದ ಯುಗದಲ್ಲಿ ದೊಡ್ಡ ಭಾರಗಳನ್ನು ಸಾಗಿಸಲು ಅದು ಅತ್ಯುತ್ಕೃಷವ್ಟಾಗಿ ಪರಿಣಮಿಸಿತು. ಅದರ ಕಡಮೆ ವೇಗವನ್ನು ಅದಕ್ಕಿರುವ ಭಾರಿ ಶಕ್ತಿ ಮತ್ತು ಸಹಿಷ್ಣುತೆ ಸರಿದೂಗಿಸುತ್ತದೆ.
2) ಅನೇಕ ವೇಳೆ ಹಿಮಮಯ ನೀಲಕಣ್ಣುಗಳಿರುವ ಸೈಬೀರಿಯನ್ ಹಸ್ಕೀಯನ್ನು ಸಹ ತದ್ರೀತಿ ಒಂದು ಜಾತಿಯಾಗಿ ಗುರುತಿಸಲಾಗುತ್ತದೆ. ಅದು ಚಿಕ್ಕ ಗಾತ್ರದ್ದೂ ಬುದ್ಧಿಶಕ್ತಿಯದ್ದೂ ಆಗಿದ್ದು ವಿಶಿಷ್ಟ ಗುರುತುಗಳುಳ್ಳದ್ದಾಗಿದೆ. ಅದನ್ನು ಮೊದಲನೆಯದಾಗಿ 1909ರಲ್ಲಿ, ಯಾರು ತನ್ನ ಹತ್ತು ಸೈಬೀರಿಯನ್ಗಳ ತಂಡವನ್ನು ಎರಡನೆಯ ಆಲ್-ಅಲಾಸ್ಕ ಸ್ವೀಪ್ಸ್ಟೇಕ್ಸಿಗೆ ಸೇರಿಸಿದನೊ, ಆ ಒಬ್ಬ ರಷ್ಯನ್ ತುಪ್ಪುಳು ವ್ಯಾಪಾರಿಯು ತಂದಿದ್ದನು.
3) ಅಲಾಸ್ಕನ್ ಹಸ್ಕೀಯನ್ನು ಒಂದು ಜಾತಿಯಾಗಿ ಪರಿಗಣಿಸುವುದಿಲ್ಲವಾದರೂ ಅದನ್ನು ಅನೇಕ ಗುಣಲಕ್ಷಣಗಳ ಪ್ರತ್ಯೇಕತೆಯುಳ್ಳದ್ದೆಂದು ಗುರುತಿಸಲಾಗುತ್ತದೆ. ಅದು ಉತ್ತರದ ನಾಯಿಗಳ ಒಂದು ಮಿಶ್ರಣವಾಗಿದ್ದು ಎಸ್ಕಿಮೊ ಪದಕ್ಕಿರುವ ಸ್ವದೇಶೀ ಪದವಾದ ಹಸ್ಕೀ ಅಥವಾ ಹಸ್ಕಿ ಅಂದರೆ, “ಹಸಿ ಮಾಂಸ ತಿನ್ನುವವನು” ಎಂಬುದರಿಂದ ಬರುತ್ತದೆ. ಆ ಹೆಸರು ಅಯೋಗ್ಯವಲ್ಲ, ಏಕೆಂದರೆ ಉತ್ತರದ ಮಷರ್ಗಳು ಗತ ವರುಷಗಳಲ್ಲಿ ತಮ್ಮ ತಂಡಗಳಿಗೆ ತಿನ್ನಿಸಲು ಒಣಮೀನಿನ ಮೇಲೆ ಬಹಳವಾಗಿ ಆತುಕೊಂಡಿದ್ದಾರೆ.
4) ಇಂದು ಅಲಾಸ್ಕದ ಓಟದ ಜಾರುಬಂಡಿ ನಾಯಿಗಳಲ್ಲಿ ಅತಿ ಸಾಮಾನ್ಯ ನಾಯಿಯಾದ ಇಂಡಿಯನ್ ಅಥವಾ ವಿಲೆಜ್ ನಾಯಿಯು ಅನೇಕ ವೇಳೆ ಅವರ್ಗ್ಯವಾಗಿದೆ. ಅದು ಎಲ್ಲಿ ಬೆಳೆಯುತ್ತದೊ ಆ ಹಳ್ಳಿ ಪ್ರದೇಶದಲ್ಲಿ ಲಭ್ಯವಾಗುವ ವಂಶವಾಹಿ ಸಂಗ್ರಹಣದ ಆರಿಸಿಕೊಂಡ ಉತ್ಪಾದನೆಯೇ ಇದಾಗಿದೆ. ಈ ನಾಯಿ ಬಹುಮಟ್ಟಿಗೆ ಎರಡು ನಿಮಿಷಗಳಲ್ಲಿ ಒಂದು ಕಿಲೊಮೀಟರ್ ಪಯಣಿಸಿ, ಒಂದು 30 ಕಿಲೊಮೀಟರ್ ಓಟವನ್ನು ತಾಸಿಗೆ 27 ಕಿಲೊಮೀಟರಿಗಿಂತಲೂ ಹೆಚ್ಚು ವೇಗದಲ್ಲಿ ಓಡಬಲ್ಲದು. ಇಷ್ಟು ಮಾಡಿಯೂ ನಾಳಿನ ಓಟವನ್ನು ಆತುರದಿಂದ ಎದುರುನೋಡುವಷ್ಟು ಶಕ್ತಿ ಅದಕ್ಕಿದೆ. ಅದು ಕೆಲವರ ಮನಸ್ಸಿಗೆ ಹಿಡಿಸುವುದಿಲ್ಲವಾದರೂ, ಅದಕ್ಕೆ ಯೋಗ್ಯವಾದ ಭಂಗಿಯಿರುವುದಾದರೆ, ಅದು ಮಷರ್ಗೆ ಸೊಗಸಾದುದಾಗಿದೆ.
ಓಟದಂತ್ಯ
ವಿಜೇತನ ಆಗಮನವು ಐಡಿಟರಾಡನ್ನು ಮುಗಿಸುವುದಿಲ್ಲ. ಓಟವು ಅಧಿಕೃತವಾಗಿ ಅಂತ್ಯಗೊಳ್ಳಲು ಮತ್ತು ಓಟದಂತ್ಯದ ರೇಖೆಯನ್ನು ದಾಟುವ ಕೊನೆಯ ಮಷರ್ಗೆ ರೆಡ್ ಲ್ಯಾಂಟರ್ನ್ ಬಹುಮಾನವನ್ನು ನೀಡಲು ಇನ್ನೂ ಎಂಟರಿಂದ ಹತ್ತು ದಿನಗಳು ಇದಾವ್ದು. ರೆಡ್ ಲ್ಯಾಂಟರ್ನ್ ಸಂಕೇತವನ್ನು ಆ ರೆಯ್ರ್ಲೋಡ್ ದಿನಗಳಿಂದ, ಟ್ರೇನ್ನ ಕೊನೆಯಲ್ಲಿ ಅಥವಾ ಕೊನೆಯ ಡಬ್ಬಿಯಲ್ಲಿ ಒಂದು ಕೆಂಪು ಲಾಂದ್ರವನ್ನು ನೇತುಹಾಕುತ್ತಿದ್ದ ದಿನಗಳಿಂದ ತೆಗೆಯಲಾಗಿದೆ.
ಐಡಿಟರಾಡ್ನ ಕುರಿತು ಪುನರಾಲೋಚಿಸುವಾಗ, ಯಾವುದು ಮನುಷ್ಯ ಮತ್ತು ನಾಯಿಗೆ 1,800ಕ್ಕಿಂತಲೂ ಹೆಚ್ಚು ಕಿಲೊಮೀಟರುಗಳ ವಿಪರೀತ ಕಷ್ಟಕರ ಪ್ರದೇಶದಲ್ಲಿ, ಅತಿ ಅನಾದರಣೆಯ ಹವಾಮಾನದಲ್ಲಿ ಪ್ರಯಾಣಿಸಲು ಸಾಧ್ಯಮಾಡುತ್ತದೊ, ಆ ತಂಡಸಹಕಾರವು ನಮ್ಮ ಮನಸ್ಸಿಗೆ ಹಿಡಿಸುತ್ತದೆ. ಆದರೂ ಕೆಲವು ತಂಡಗಳು ಇದನ್ನು ಸುಮಾರು ಹತ್ತೂವರೆ ದಿವಸಗಳಲ್ಲಿ ಮಾಡಿ ಮುಗಿಸುತ್ತವೆ. ಸೃಷ್ಟಿಕರ್ತನು ಮನುಷ್ಯ ಮತ್ತು ಮೃಗ ಇಂತಹ ಸಾಹಸ ಕಾರ್ಯವನ್ನು ಸಾಧಿಸುವರೆ ಅವರಲ್ಲಿ ಹಾಕಿರುವ ಅದ್ಭುತಕರವಾದ ಶಾರೀರಿಕ ಹಾಗೂ ಮಾನಸಿಕ ಸಾಮರ್ಥ್ಯಗಳಿಂದಲೂ ನಾವು ಮನಮುಟ್ಟಿದವರಾಗುತ್ತೇವೆ.
[ಪುಟ 23 ರಲ್ಲಿರುವ ಚಿತ್ರ ಕೃಪೆ]
Photos: © Jeff Schultz/ Alaska Stock Images