ಆನಂದಕಾರಕವಾದೊಂದು ಅಂತಾರಾಷ್ಟ್ರೀಯ ಹಣ್ಣು
ಮೆಕ್ಸಿಕೊದ ಎಚ್ಚರ! ಸುದ್ದಿಗಾರರಿಂದ
ಕ್ರಿಸ್ಟಫರ್ ಕೊಲಂಬಸ್ ಮತ್ತು ಅವನ ನಾವಿಕ ತಂಡ 1493ರಲ್ಲಿ ವೆಸ್ಟ್ ಇಂಡೀಸ್ನ ತಮ್ಮ ಕಂಡುಹಿಡಿಯುವಿಕೆಯ ಅವಧಿಯಲ್ಲಿ ಅದನ್ನು ಆಸ್ವಾದಿಸಿದ ಬಹುಶಃ ಪ್ರಥಮ ಯೂರೋಪಿಯನರಾಗಿದ್ದರು. ಅದು ಸ್ಪೆಯ್ನ್ನ ರಾಜನಿಗೆ ಕಳುಹಿಸಲ್ಪಟ್ಟಿತು, ಮತ್ತು ಅದರ ಆಸ್ವಾದದಿಂದ ಅವನು ಸಹ ಆನಂದಿತನಾದನು. ನಾವಿಕರು ಅದನ್ನು ಅಮೆರಿಕದಾದ್ಯಂತ ಜನಪ್ರಿಯವಾಗಿ ಮಾಡಿದರು ಮತ್ತು, 1548ರಲ್ಲಿ ಕೃಷಿಗಾಗಿ ಅದನ್ನು ಫಿಲಿಪ್ಪೀನ್ ದ್ವೀಪಗಳಿಗೆ ತೆಗೆದುಕೊಂಡು ಹೋದರು.
ಅನಂತರ, 1555ರ ಸುಮಾರಿಗೆ, ಈ ಆನಂದಕಾರಕ ಹಣ್ಣು ಫ್ರ್ಯಾನ್ಸಿಗೆ ಪ್ರಯಾಣಿಸಿತು. 1700ಗಳಷ್ಟರಲ್ಲಿ, ಅದು ಆಗಲೇ ಕೆಲವು ಯೂರೋಪಿಯನ್ ರಾಜರ ಮೇಜುಗಳ ಮೇಲೆ ಒಂದು ಭೋಗಪ್ರದ ಹಣ್ಣಿನೋಪಾದಿ ಹೆಮ್ಮೆಯಿಂದ ಮೆರಸಲ್ಪಟ್ಟಿತ್ತು. ಅದು ಎಷ್ಟೊಂದು ಜನಪ್ರಿಯವಾಗಿ ಪರಿಣಮಿಸಿತೆಂದರೆ, ಅದು ನಂತರ ಯೂರೋಪಿನ ಉಳಿದ ಭಾಗಗಳಿಗೆ ಮತ್ತು ಏಷ್ಯಾ ಹಾಗೂ ಆಫ್ರಿಕಾಗೆ ಹರಡಿತು. ಪ್ರಸ್ತುತದಲ್ಲಿ, ಅದು ಮುಖ್ಯವಾಗಿ ಬ್ರೆಸಿಲ್, ಹವಾಯಿ, ಮೆಕ್ಸಿಕೊ, ಫಿಲಿಪ್ಪೀನ್ಸ್, ಥಾಯ್ಲೆಂಡ್ನಲ್ಲಿ, ಮತ್ತು ಅನುಕೂಲವಾದ ವಾಯುಗುಣವನ್ನೂ ಮಣ್ಣನ್ನೂ ಹೊಂದಿರುವ ಇತರ ಕೆಲವೊಂದು ದೇಶಗಳಲ್ಲಿ ಬೆಳೆಸಲ್ಪಡುತ್ತಿದೆ.
ಹೀಗೆ ಪ್ರಯಾಣದ ಸುಮಾರು ಐದು ಶತಮಾನಗಳ ಅನಂತರ, ಅದರ ಮೂಲ ಪ್ರದೇಶವಾದ, ಅಮೆರಿಕದಿಂದ ಬಹು ದೂರದ ಸ್ಥಳಗಳನ್ನು ಅದು ತಲಪಿದೆ. ನಾವು ಮಾತಾಡುತ್ತಿರುವ ಹಣ್ಣಿನ ಕುರಿತು ನಿಮಗೆ ತಿಳಿದಿದೆಯೋ? ಅದು ಆನಂದಕಾರಕ ಅನಾನಾಸ್ ಹಣ್ಣಾಗಿದೆ.
ಮೆಕ್ಸಿಕೊದಲ್ಲಿ ಅದನ್ನು ಮಾಟ್ಸಾಟ್ಲಿ, ಕ್ಯಾರಿಬಿಯನ್ನಲ್ಲಿ ಅನಾನಾ, ಮತ್ತು ಮಧ್ಯ ಹಾಗೂ ದಕ್ಷಿಣ ಅಮೆರಿಕದಲ್ಲಿ ನಾನಾ ಎಂಬುದಾಗಿ ಕರೆಯಲಾಗುತ್ತಿತ್ತು. ಪೈನ್ ಮರದ ಹಣ್ಣಿಗೆ (ಕಾಯಿ) ಅದರ ತೋರ್ಕೆಯಿರುವ ಕಾರಣ, ಸ್ಪ್ಯಾನಿಯಾರ್ಡರು ಅದನ್ನು ಪೀನ್ಯಾ ಎಂದು ಕರೆದರೆಂದು ತೋರುತ್ತದೆ. ಇಂಗ್ಲಿಷಿನಲ್ಲಿ ಪೈನ್ಆ್ಯಪ್ಲ್ ಆಗಿ ಕರೆಯಲ್ಪಡುವಾಗ, ಇಂದು ಅದು ಸ್ಪೆಯ್ನ್ನಲ್ಲಿ ಪೀನ್ಯಾ ಅಥವಾ ಅನಾನಾಸ್ ಎಂದು ಕರೆಯಲ್ಪಡುತ್ತದೆ. ಅದರ ಹೆಸರು ಏನೇ ಆಗಿರಲಿ, ಅದನ್ನು ಆಸ್ವಾದಿಸಿದವರು ಅದು ರಸನೇಂದ್ರಿಯಕ್ಕೆ ಆನಂದವನ್ನುಂಟುಮಾಡುತ್ತದೆ ಎಂದು ಸಮ್ಮತಿಸುತ್ತಾರೆ.
ಅನಾನಾಸ್ ಹಣ್ಣು ಮತ್ತು ಅದರ ಗಿಡ
ಅನಾನಾಸ್ ಹಣ್ಣು ನೋಡಲು ಹೇಗಿರುತ್ತದೆ? ಅದು ಅಂಡಾಕಾರವಾಗಿಯೂ ಗಿಡದ ಮಧ್ಯಭಾಗದಲ್ಲಿಯೂ ಇರುತ್ತದೆ. ಆ ಹಣ್ಣು ಒಂದು ಗಟ್ಟಿಯಾದ ಚಿಪ್ಪಿನಿಂದ ಆವೃತವಾಗಿದೆ, ಮತ್ತು ಮೇಲ್ಭಾಗದಲ್ಲಿ, ಹಲವಾರು ಸಣ್ಣ, ಅರೆಗಟ್ಟಿ ಹಸಿರು ಎಲೆಗಳಿಂದ ರೂಪಗೊಂಡ ಒಂದು ಮುಕುಟವಿದೆ. ಅನಾನಾಸ್ ಹಣ್ಣಿನ ಗಿಡವು ತಾನೇ, ಕಾಂಡದಿಂದ ವಿವಿಧ ಮಾರ್ಗಗಳಲ್ಲಿ ವರ್ಧಿಸುವ ಉದ್ದವಾದ, ಖಡ್ಗಾಕೃತಿಯ ಎಲೆಗಳನ್ನು ಹೊಂದಿದೆ. ಗಿಡವು 60ರಿಂದ 90 ಸೆಂಟಿಮೀಟರುಗಳಷ್ಟು ಎತ್ತರ ಬೆಳೆಯುತ್ತದೆ, ಮತ್ತು ಹಣ್ಣು ಎರಡರಿಂದ ನಾಲ್ಕು ಕಿಲೋಗ್ರಾಮ್ಗಳಷ್ಟು ತೂಕದ್ದಾಗಿರಬಲ್ಲದು.
ಅದು ಪೈನ್ ಮರದ ಪೈನ್ಕಾಯಿಗೆ ತದ್ರೀತಿಯದ್ದಾಗಿರುವಾಗ, ಸಿಪ್ಪೆಯು ಕೆನ್ನೀಲಿ ಬಣ್ಣದ್ದಾಗಿ ಉಳಿಯುತ್ತದೆ. ಅದು ಮಾಗಿದಾಗ ಹಸಿರು ಬಣ್ಣದ್ದಾಗುತ್ತದೆ, ಮತ್ತು ಪರಿಪಕ್ವವಾದಾಗ ಅದು ಸಾಮಾನ್ಯವಾಗಿ ಹಳದಿ ಮಿಶ್ರ ಹಸಿರು, ಹಸಿರು ಮಿಶ್ರ ಕಿತ್ತಿಳೆ, ಅಥವಾ ಕೆಂಪು ಬಣ್ಣದ್ದಾಗುತ್ತದೆ. ಮೆದು ಭಾಗವು ಪರಿಪಕ್ವವಾದಾಗ, ಅದು—ಸುವಾಸನೆಯ ಮತ್ತು ರಸವತ್ತಾದ—ಸಿಹಿಯಾದ ರುಚಿಯನ್ನು ಹೊಂದಿರುತ್ತದೆ.
ಅದು ಹೇಗೆ ಕೃಷಿಮಾಡಲ್ಪಡುತ್ತದೆ?
ಅನಾನಾಸ್ ಹಣ್ಣನ್ನು ನೀವು ಹೇಗೆ ಕೃಷಿಮಾಡುತ್ತೀರಿ? ಮೊಟ್ಟ ಮೊದಲಾಗಿ, ಉಷ್ಣವಲಯ ಸ್ಥಳಗಳಲ್ಲಿ ಕಂಡುಬರುವಂಥ, ಮರಳಿನಂಥ, ಜೈವಿಕ ಪದಾರ್ಥದಲ್ಲಿ ಪುಷ್ಕಳವಾಗಿರುವ, ಆಮ್ಲೀಯ, ಮತ್ತು ಆರ್ದ್ರ ತೇವಾಂಶದ ಉನ್ನತವಾದೊಂದು ಮಟ್ಟದೊಂದಿಗೆ, ಖನಿಜ ಲವಣದಲ್ಲಿ ಕಡಿಮೆಯದ್ದೂ ಆಗಿರುವ ಮಣ್ಣು ಆವಶ್ಯಕ. ಅನಂತರ, ಹಣ್ಣಿನ ತಳದ ಸುತ್ತಲೂ ಹುಟ್ಟುವ ಮತ್ತು ಹಣ್ಣಿನ ಕೊಯಿನ್ಲ ಬಳಿಕ ಗಿಡದಲ್ಲಿಯೇ ಉಳಿಯುವ, ಸಣ್ಣ ಚಿಗುರುಗಳಲ್ಲಿ ಒಂದನ್ನು ನೆಡುವ ಅಗತ್ಯವಿದೆ. ಅಥವಾ ಅನಾನಾಸ್ ಹಣ್ಣಿನ ಮುಕುಟವನ್ನೇ ಕಡಿದು ನೆಡಸಾಧ್ಯವಿದೆ. ಆದರೂ, ಅದರ ಫಲವನ್ನು ಅನುಭವಿಸಶಕ್ತನಾಗಲು ಒಬ್ಬನು ತಾಳ್ಮೆಯುಳ್ಳವನಾಗಿರಬೇಕು, ಏಕೆಂದರೆ, ಅದು ಮಾಗಿ ಕೊಯ್ಲನ್ನು ಉತ್ಪಾದಿಸುವುದಕ್ಕೆ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ.
ಅನಾನಾಸ್ ಹಣ್ಣಿನ ಕೃಷಿಯಲ್ಲಿ 25 ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಕೆಲಸ ಮಾಡುತ್ತಿರುವ, ಆ್ಯಂಟೋನ್ಯೋ, ಉಪಯೋಗಿಸಲ್ಪಡುವ ನಿರ್ದಿಷ್ಟವಾದೊಂದು ವಿಧಾನವನ್ನು ವಿವರಿಸುತ್ತಾನೆ: “ಹಣ್ಣು ಬೆಳೆಯಲು ಪ್ರಾರಂಭವಾಗುವ ಮುನ್ನ ಗಿಡದ ಮಧ್ಯದಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ನ ಒಂದು ಸಣ್ಣ ಪ್ರಮಾಣವನ್ನು ಹಾಕುವ ಆವಶ್ಯಕತೆಯಿದೆ. ಇದು ಎಲ್ಲ ಅನಾನಾಸ್ ಹಣ್ಣುಗಳನ್ನು ಏಕಕಾಲದಲ್ಲಿ ಕೊಯ್ಲು ಮಾಡಸಾಧ್ಯವಾಗುವಂತೆ ಮಾಡುತ್ತದೆ, ಸ್ವಾಭಾವಿಕವಾಗಿ ಬೆಳೆಯಲು ಬಿಡಲ್ಪಟ್ಟಲ್ಲಿ, ಕೆಲವು, ಇತರ ಹಣ್ಣುಗಳಿಗಿಂತ ಹೆಚ್ಚು ಬೇಗ ಬೆಳೆಯುವುವು ಮತ್ತು ಕೊಯ್ಲು ಹೆಚ್ಚು ಕಷ್ಟಕರವಾಗಿರುವುದು.”
ಅನಾನಾಸ್ ಹಣ್ಣು ಮಾಗಿರುವಾಗ, ಆದರೆ ಇನ್ನೂ ಪರಿಪಕ್ವವಾಗಿಲದ್ಲೆ ಇರುವಾಗ, ಸೂರ್ಯನಿಂದ ಸುಡಲ್ಪಡುವುದನ್ನು ತಡೆಯಲು ಅದು ಮುಚ್ಚಿಡಲ್ಪಡತಕ್ಕದ್ದು. ಅದನ್ನು ಕಾಗದ ಅಥವಾ ಅದೇ ಗಿಡದ ಎಲೆಗಳಿಂದ ಮುಚ್ಚಲಾಗುತ್ತದೆ. ಆವಶ್ಯಕ ಸಮಯವು ದಾಟಿದ ನಂತರ, ಅನಾನಾಸ್ ಹಣ್ಣು ಕೊಯ್ಲಿಗೆ ಸಿದ್ಧವಾಗುತ್ತದೆ. ಚಿಪ್ಪನ್ನು ಕತ್ತರಿಸಿ ಹೋಳುಗಳಲ್ಲಿ ಅದನ್ನು ಆಸ್ವಾದಿಸಿರಿ! ಆದರೆ ಜಾಗರೂಕರಾಗಿರಿ. ಹಣ್ಣಿನ ತಿರುಳನ್ನು ತಿನ್ನುವುದು ನಾಲಿಗೆಯ ತುರಿಕೆಯನ್ನುಂಟುಮಾಡಬಲ್ಲದು. ಆ ಕಾರಣದಿಂದಲೇ ಕೆಲವು ಜನರು ಕೇವಲ ಮೆದು ಭಾಗವನ್ನು ಆಸ್ವಾದಿಸಿ ತಿರುಳನ್ನು ಎಸೆದುಬಿಡುತ್ತಾರೆ.
ಒಂದು ಸಿಹಿಯಾದ ಮತ್ತು ರಸವತ್ತಾದ ಅನಾನಾಸ್ ಹಣ್ಣನ್ನು ರುಚಿಸಲು ನೀವು ಬಯಸುವುದಾದರೆ, ಅದರ ಹೊರ ತೋರಿಕೆಯಿಂದ ಪ್ರಭಾವಿತರಾಗದಿರಿ. ಅವುಗಳಲ್ಲಿ ಒಂದನ್ನು ನಮಗೆ ತೋರಿಸುತ್ತಿರುವಾಗ, ಆ್ಯಂಟೋನ್ಯೋ ವಿವರಿಸುವುದು: “ಕೆಲವು ಜನರು ಒಂದು ಅನಾನಾಸ್ ಹಣ್ಣನ್ನು, ಅದು ಹಸಿರಾಗಿದೆಯೋ ಹಳದಿಯಾಗಿದೆಯೋ ಎಂದು ನೋಡಿ, ಅದರ ಚಿಪ್ಪಿನ ಬಣ್ಣದಿಂದ ಆರಿಸಿಕೊಳ್ಳುತ್ತಾರೆ. ಆದರೆ ಅದರ ಚಿಪ್ಪು ಹಸಿರಾಗಿರುವುದಾದರೂ ಹಣ್ಣು ಪರಿಪಕ್ವವಾಗಿರಸಾಧ್ಯವಿದೆ. ನೀವು ಅದನ್ನು ನಿಮ್ಮ ಬೆರಳುಗಳಿಂದ ಹೊಡೆಯಬೇಕು. ಅದು ಒಂದು ಟೊಳ್ಳಾದ, ಅಥವಾ ಬರಿದಾದ ಶಬ್ದವನ್ನುಂಟುಮಾಡಿದಲ್ಲಿ, ಅದರ ಮೆದು ಭಾಗವು ಬಿಳಿ ಬಣ್ಣದ್ದೂ ಅದರ ರುಚಿಯು ನಿಸ್ಸಾರವಾದದ್ದೂ ಆಗಿರುವುದು. ಆದರೆ ಅದು ನೀರಿನಿಂದ ತುಂಬಿದೆಯೋ ಎಂಬಂತೆ, ಒಂದು ಗಟ್ಟಿಯಾದ ಶಬ್ದವನ್ನು ಉಂಟುಮಾಡಿದಲ್ಲಿ, ಆಗ ಅದು ಸಿಹಿಯಾದದ್ದೂ, ರಸವತ್ತಾದದ್ದೂ ಆಗಿ ತಿನ್ನಲು ಸಿದ್ಧವಾಗಿದೆ.” ಈ ಹಣ್ಣಿನಲ್ಲಿ ಹಲವಾರು ಬಗೆಗಳಿವೆ, ಆದರೆ ಅತ್ಯಂತ ಜನಪ್ರಿಯವಾದದ್ದೊಂದು ಮೃದುಲವಾದ ಕೈಎನ್ (ಕಯೆನಾ) ಎಂದು ಕರೆಯಲ್ಪಡುವ ಹಣ್ಣಾಗಿದೆ.
ಒಂದು ನಿಜವಾದ ಮಹದಾನಂದ
ರಸದ ಅಥವಾ ಹಣ್ಣಿನ ಹೋಳುಗಳಲ್ಲಿ ಸವಿಯಾದ ರುಚಿಯನ್ನು ಆಸ್ವಾದಿಸುವುದಲ್ಲದೆ, ಅದನ್ನು ಕೆಲವು ದೇಶಗಳಲ್ಲಿ ಪೂರ್ವಸಿದ್ಧವಾಗಿ ಲಭ್ಯವಿರುವ, ಪಾನಕದ ರೀತಿಯಲ್ಲಿ ನೀವು ಆಸ್ವಾದಿಸಬಹುದು. ಅಲ್ಲದೆ, ಅನಾನಾಸ್ ಹಣ್ಣು ಶರ್ಕರಷ್ಟಿ, ನಾರು, ಮತ್ತು ಜೀವಸತ್ತಗ್ವಳನ್ನು, ಮುಖ್ಯವಾಗಿ ಎ ಮತ್ತು ಸಿ ಜೀವಸತ್ತಗ್ವಳಂಥ ನಿರ್ದಿಷ್ಟವಾದ ಪೌಷ್ಟಿಕಾಂಶಗಳನ್ನು ಒಳಗೊಂಡಿರುತ್ತದೆ.
ಮೆಕ್ಸಿಕೊದಲ್ಲಿ, ಅನಾನಾಸ್ ಹಣ್ಣಿನ ಸಿಪ್ಪೆಗಳಿಂದ ಮಾಡಿದ ಒಂದು ದಣಿವನ್ನಾರಿಸುವ ಪಾನೀಯವನ್ನು ನೀವು ಆಸ್ವಾದಿಸಬಲ್ಲಿರಿ. ನೀವೇ ಸ್ವತಃ ಅದನ್ನು ಮಾಡಲು, ಸಿಪ್ಪೆಗಳನ್ನು ನೀರು ಮತ್ತು ಸಕ್ಕರೆಯೊಂದಿಗೆ ಒಂದು ಗಾಜಿನ ಪಾತ್ರೆಯಲ್ಲಿ ಎರಡು ಅಥವಾ ಮೂರು ದಿನಗಳ ತನಕ ಇಡಿರಿ. ಇದು ಒಮ್ಮೆ ಹುಳಿಹಿಡಿಯಲ್ಪಟ್ಟಿತೆಂದರೆ, ಐಸ್ ಹಾಕಿದ ತಂಪು ಪಾನೀಯದೋಪಾದಿ ನೀವು ಅದನ್ನು ಕೊಡಬಲ್ಲಿರಿ. ಅದು ಟೆಪಾಚ ಎಂದು ಕರೆಯಲ್ಪಡುವ ಹೆಚ್ಚು ಚೈತನ್ಯದಾಯಕವಾದ ಒಂದು ಪಾನೀಯವಾಗಿದೆ ಮತ್ತು ಸಿಹಿ ಮತ್ತು ಹುಳಿ ರುಚಿಯನ್ನು ಹೊಂದಿದೆ. ನೀವು ಒಂದು ಲೋಟ ಪಾನೀಯವನ್ನು ಬಯಸುವಿರೋ? ಫಿಲಿಪ್ಪೀನ್ಸ್ನಲ್ಲಿ, ಅನಾನಾಸ್ ಹಣ್ಣು, ಅದರ ಎಲೆಗಳಿಂದ ನಾರನ್ನು ಪಡೆಯಲು ಕೃಷಿಮಾಡಲ್ಪಡುತ್ತದೆ. ಇವುಗಳು ಹೊಳಪಿಲ್ಲದ, ಪಾರದರ್ಶಕವಾದ, ಮತ್ತು ನವಿರಾದೊಂದು ವಸ್ತ್ರವನ್ನು ಮಾಡಲು ಉಪಯೋಗಿಸಲ್ಪಡುತ್ತವೆ. ಇದು ಕರವಸ್ತ್ರ, ಟವೆಲ್, ಬೆಲ್ಟ್, ಷರ್ಟ್, ಮತ್ತು ಮಕ್ಕಳ ಹಾಗೂ ಮಹಿಳೆಯರ ಉಡುಪುಗಳನ್ನು ಮಾಡಲು ಉಪಯೋಗಿಸಲ್ಪಡುತ್ತದೆ.
ಕೆಲವು ಗತ ಶತಮಾನಗಳಲ್ಲಿ, ಅನಾನಾಸ್ ಹಣ್ಣು ಎಲ್ಲಿ ಅದನ್ನು ಬೆಳೆಯಲಾಗುವುದಿಲ್ಲವೋ, ಆ ಅನೇಕ ದೇಶಗಳಿಗೆ ರಫ್ತು ಮಾಡಲ್ಪಟ್ಟಿದೆ. ಅದರ ರುಚಿಯನ್ನು ಆಸ್ವಾದಿಸಿದವರೆಲರ್ಲೂ, ಅದು ಮಾನವಕುಲವನ್ನು ಆನಂದಪಡಿಸುತ್ತಾ, ಲೋಕದ ಸುತ್ತಲೂ ತನ್ನ ಪ್ರಯಾಣವನ್ನು ಮುಂದುವರಿಸುವುದೆಂಬುದಾಗಿ ಆಶಿಸುತ್ತಾರೆ.
[ಪುಟ 27 ರಲ್ಲಿರುವ ಚಿತ್ರ ಕೃಪೆ]
Above: Pineapple. Century Dictionary