ಜಗತ್ತನ್ನು ಗಮನಿಸುವುದು
ಒಂದು ವ್ಯಾಟಿಕನ್ “ವಿರೋಧೋಕ್ತಿ”
“ಪೂಜ್ಯಪಾದರೇ, ವ್ಯಾಟಿಕನ್ ಏಕೆ ಇನ್ನೂ ಸಿಗರೇಟುಗಳನ್ನು ಮಾರಾಟ ಮಾಡುತ್ತದೆ?” ಎಂದು ರೋಮ್‌ನ ವೈದಿಕರೊಂದಿಗೆ ಪೋಪ್‌ನ ವಾರ್ಷಿಕ ಭೇಟಿಯ ಸಮಯದಲ್ಲಿ ಪಾದ್ರಿಯೊಬ್ಬನು, ಜಾನ್ ಪೌಲ್ II ಅವರನ್ನು ಕೇಳಿದನು. ಅವನು ಮುಂದುವರಿಸಿದ್ದು: “ಆರೋಗ್ಯವನ್ನು ಹಾನಿಗೊಳಿಸುವುದಲ್ಲದೆ, ಈ ವಾಣಿಜ್ಯವು ಆರೋಗ್ಯದ ಸಂರಕ್ಷಣೆಯ ಪರವಾಗಿ ನೀವು ಮಾಡುವ ಸತತ ಕೋರಿಕೆಗಳನ್ನು ಮತ್ತು ನಮ್ಮ ಕ್ರೈಸ್ತ ಪಾಲನೆಯ ಚಟುವಟಿಕೆಯನ್ನು ವಿರೋಧಿಸುತ್ತದೆ.” ಊಗೋ ಮೆಸೀನೀ ಎಂಬ 76 ವರ್ಷ ಪ್ರಾಯದ ಪಾದ್ರಿಗೆ, “ಧೂಮಪಾನ ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ” ಎಂಬ ಹೇಳಿಕೆಯೊಂದಿಗೆ ಹೊಗೆಸೊಪ್ಪು ಮತ್ತು ಸಿಗರೇಟುಗಳನ್ನು ವ್ಯಾಟಿಕನ್ ಮಾರಾಟ ಮಾಡುವ ನಿಜಾಂಶವು, ಪೋಪ್‌ನ ಸಂದೇಶಕ್ಕೆ ಒಂದು “ಪ್ರತಿಕೂಲ-ಪ್ರಮಾಣ”ವೂ ಒಂದು “ವಿರೋಧೋಕ್ತಿಯೂ” ಆಗಿದೆ. ರೋಮ್ ವಾರ್ತಾಪತ್ರಿಕೆಯಾದ ಈಲ್ ಮೆಸ್ಸಾಜೇರೋದಲ್ಲಿ ವರದಿಸಲ್ಪಟ್ಟಂತೆ, ಹೊಗೆಸೊಪ್ಪಿನ ವಿಷಯದ ಕುರಿತು ತನ್ನ “ಮನಃಸಾಕ್ಷಿಯು ನಿಷ್ಕಳಂಕವಾಗಿದೆ” ಎಂದು ಪೋಪ್ ಉತ್ತರಿಸಿದರು. ಆದರೂ, ಸಿಗರೇಟ್ ಮಾರಾಟಗಳ ಮೇಲ್ವಿಚಾರಣೆಯನ್ನು ಮಾಡುವ ಕಾರ್ಡಿನಲ್‌ನೊಂದಿಗೆ, ವ್ಯಾಟಿಕನ್‌ನ ಸಿಗರೇಟ್ ಮಾರಾಟಗಳ ಕುರಿತು ಮಾತಾಡುತ್ತೇನೆಂದು ಅವರು ವಾಗ್ದಾನವನ್ನು ನೀಡಿದರು.
ಜನನ ಪ್ರಮಾಣಗಳ ಇಳಿತ
ಪೂರ್ವ ಯೂರೋಪಿನಲ್ಲಿನ ಅನೇಕ ದಂಪತಿಗಳು, ಆರ್ಥಿಕ ಮತ್ತು ಉದ್ಯೋಗ ಅಭದ್ರತೆಯ ತಮ್ಮ ಭಾವನೆಗಳ ಕಾರಣ ಗರ್ಭಧರಿಸುವುದನ್ನು ಮುಂದೂಡುತ್ತಿದ್ದಾರೆ. ಈ “ಅಭದ್ರತೆಯು ಕೇವಲ ಜನನ ಪ್ರಮಾಣದಲ್ಲಿನ ಒಂದು ತೀವ್ರವಾದ ಇಳಿಮುಖಕ್ಕೆ ಮಾತ್ರವಲ್ಲ, ಬದಲಾಗಿ ವಿವಾಹ ಪ್ರಮಾಣದಲ್ಲಿನ ಕುಸಿತಕ್ಕೂ ಸಂತಾನಶಕ್ತಿ ಹರಣಗಳಲ್ಲಿನ ಹತ್ತುಪಟ್ಟಿಗಿಂತ ಹೆಚ್ಚು ವೃದ್ಧಿಗೂ ನಡೆಸಿದೆ” ಎಂದು ದ ನ್ಯೂ ಯಾರ್ಕ್ ಟೈಮ್ಸ್ ಅವಲೋಕಿಸಿತು. ಜನಸಂಖ್ಯಾ ಶಾಸ್ತ್ರಜ್ಞರಿಗನುಸಾರ “ಅಂತಹ ಪ್ರಪಾತದಂಥ ಇಳಿಮುಖಗಳು, ಯುದ್ಧ, ಪ್ಲೇಗ್ ಅಥವಾ ಬರಗಾಲದ ಸಮಯಗಳಲ್ಲಿ ಬಿಟ್ಟು ಹಿಂದೆಂದೂ ನೋಡಲ್ಪಟ್ಟಿರುವುದಿಲ್ಲ” ಎಂಬುದಾಗಿ ಟೈಮ್ಸ್ ಕೂಡಿಸುತ್ತದೆ. ತದ್ರೀತಿಯ ಒಂದು ಪ್ರವೃತ್ತಿಯನ್ನು ಕಡಿದುಹಾಕಲು, ಬೆಲ್ಜಿಯಮ್, ಲಕ್ಸೆಮ್‌ಬರ್ಗ್, ಹಂಗೆರಿ, ಪೋಲೆಂಡ್, ಮತ್ತು ಪೋರ್ಚುಗಲ್‌ನ ಸರಕಾರಗಳು ಕೆಲವು ಸಮಯದಿಂದ, ಶಿಶುಗಳನ್ನು ಹೊಂದಲು ಒಂದು ಪ್ರೋತ್ಸಾಹಕವಾಗಿ ನವಶಿಶುಗಳಿರುವ ಕುಟುಂಬಗಳಿಗೆ ಹಣವನ್ನು ನೀಡಿವೆ. ಈಚೀಚೆಗೆ, ಬ್ರ್ಯಾಂಡೆನ್‌ಬರ್ಗ್‌ನ ಜರ್ಮನ್ ರಾಜ್ಯದ ಸರಕಾರವು ಪ್ರತಿ ನವಜನಿತ ಶಿಶುವಿಗಾಗಿ $650 ಅನ್ನು ಕೊಡಲು ಪ್ರಾರಂಭಿಸಿತು.
ಆಹಾರದ ಅಭಾವಗಳು ನಿರೀಕ್ಷಿಸಲ್ಪಡುತ್ತವೆ
“ಯಂತ್ರಕಲಾ ಶಾಸ್ತ್ರದ ಮಾರ್ಪಡಿಸುವಿಕೆಯಲ್ಲಿ ಒಂದು ಅತಿ ದೊಡ್ಡ ಬಂಡವಾಳವಿರುವ ಹೊರತು, ಅತಿ ಕಠಿಣ ಸಮಸ್ಯೆಗಳನ್ನು ನಾವು ಹೊಂದುವ ಸಂಭವನೀಯತೆಯಿದೆ,” ಎಂದು ಈಜಿಪ್‌ನ್ಟ ವಿಕಸನ ಪರಿಣಿತರೂ ವಿಶ್ವ ಬ್ಯಾಂಕ್‌ನ ಉಪಾಧ್ಯಕ್ಷರೂ ಆದ, ಇಸ್ಮಾಯಿಲ್ ಸರಾಗಿಲ್‌ಡೀನ್ ಹೇಳುತ್ತಾರೆ. ಅವರು ಮೂಲಭೂತ ಆಹಾರಗಳಿಗೆ ಹೆಚ್ಚಾಗುತ್ತಿರುವ ಅಗತ್ಯದ ಕುರಿತು, ಈಗಾಗಲೇ, ಎಲ್ಲಿ ಜನಸಂಖ್ಯಾ ಬೆಳವಣಿಗೆಯು ಅತಿ ತ್ವರಿತವಾಗಿದೆಯೋ, ಆ ಏಷ್ಯಾ ಮತ್ತು ಆಫ್ರಿಕದ ನಿರ್ದಿಷ್ಟ ಭಾಗಗಳಲ್ಲಿ ಸರಬರಾಯಿಯನ್ನು ಮೀರುತ್ತಿರುವ ಅಗತ್ಯವೊಂದರ ಕುರಿತು ಮಾತಾಡುತ್ತಿದ್ದಾರೆ. “ಆ ಬೆಳವಣಿಗೆಯನ್ನು ನಿಗ್ರಹಿಸಲು ಯಾವುದೇ ಹೆಜ್ಜೆ ತೆಗೆದುಕೊಳ್ಳಲ್ಪಡಲಿ, ಮುಂಬರುವ 20 ವರ್ಷಗಳಲ್ಲಿ 200 ಕೋಟಿ ಹೆಚ್ಚು [ಜನರ]ನ್ನು ನಾವು ಹೊಂದುವೆವು, ಮತ್ತು ಅವರಲ್ಲಿ 95 ಪ್ರತಿಶತ ಜನರು ಅತಿ ಬಡತನದ ದೇಶಗಳಲ್ಲಿರುವರು,” ಎಂದು ಅವರು ಹೇಳಿದರು. ಕಳೆದ 25 ವರ್ಷಗಳಲ್ಲಿ ಮೂಲಭೂತ ಬೆಳೆ ಉತ್ಪನ್ನಗಳಲ್ಲಿನ ನಾಟಕೀಯ ಅಭಿವೃದ್ಧಿಗಳು ಗ್ರಹಿಸಲ್ಪಟ್ಟಿರುವುದಾದರೂ, ಪರಿಸರೀಯ ಮತ್ತು ಜೀವಶಾಸ್ತ್ರೀಯ ಪರಿಮಿತಿಗಳ ಕಾರಣ ಅಧಿಕ ಆದಾಯಗಳನ್ನು ಪಡೆಯಲು ಹೆಚ್ಚೆಚ್ಚು ಕಷ್ಟವಾಗುತ್ತಾ ಇದೆ. ಹೆಚ್ಚು ದಾಳಿ ಮಾಡುವ ಬಾಧೆಗಳು ಮತ್ತು ಸಸ್ಯ ರೋಗಗಳು ಹಾಗೂ ನೆಲದ ಶಿಥಿಲತೆ ಸಹ ಆದಾಯಗಳಿಗೆ ಬೆದರಿಕೆಯನ್ನೊಡ್ಡಿವೆ. ವರ್ಲ್ಡ್‌ವಾಚ್ ಇನ್ಸ್‌ಸಿಟ್ಟ್ಯೂಟ್ ಅನುಮೋದಿಸುತ್ತದೆ. ಪರಿಸರೀಯವಾಗಿ ಪೋಷಿಸಲಶಕ್ತನಾದ ವ್ಯಾಪಾರ ರೀತಿಯ ಹಾದಿಯೊಂದರ ಮೇಲೆ ಲೋಕವಿದೆ ಎಂಬುದನ್ನು ಮೀನು ಹಿಡಿಯುವಿಕೆಯ ಕ್ಷೀಣಿಸುವಿಕೆ, ನೀರಿನ ಮಟ್ಟಗಳಲ್ಲಿನ ಇಳಿತ, ಕಡಿಮೆಯಾಗುತ್ತಿರುವ ಪಕ್ಷಿ ಸಂಖ್ಯೆಗಳು, ಕಾವಿನ ಅಲೆಗಳ ಅತಿಶಯಿಸುವಿಕೆ ಮತ್ತು ಧಾನ್ಯ ದಾಸ್ತಾನುಗಳ ನಶಿಸುವಿಕೆಯೆಂಬ ಕೇವಲ ಕೆಲವೇ ಉದಾಹರಣೆಗಳಲ್ಲಿ ನೋಡಸಾಧ್ಯವಿದೆ ಎಂಬುದು ಸುವ್ಯಕ್ತ,” ಎಂದು ಸ್ಟೇಟ್ ಆಫ್ ದ ವರ್ಲ್ಡ್ 1995ರ ತನ್ನ ವರದಿಯಲ್ಲಿ ಅದು ಹೇಳುತ್ತದೆ.
ವಯಸ್ಸು ಮತ್ತು ಪಥ್ಯ
50 ವರ್ಷಕ್ಕೆ ಮೇಲ್ಪಟ್ಟ ಜನರು ನಡುವಯಸ್ಸಿನ ತೂಕ ಗಳಿಸುವಿಕೆಯ ಕುರಿತು ಚಿಂತಿಸುವ ಅಗತ್ಯವಿಲ್ಲದಿರಬಹುದು ಎಂದು ಕೆಲವು ಸಂಶೋಧಕರು ಈಗ ಹೇಳುತ್ತಾರೆ ಎಂಬುದಾಗಿ, ಲಂಡನ್‌ನ ದ ಟೈಮ್ಸ್ ವರದಿಸುತ್ತದೆ. ದೃಷ್ಟಾಂತಕ್ಕಾಗಿ, ಗ್ರಾಹಕ ಸಂಘ ಪತ್ರಿಕೆಯ ಸಂಪಾದಕರಾದ, ಡೇವಿಡ್ ಡಿಕಿನ್ಸನ್ ಹೇಳುವುದು: “ಎತ್ತರಕ್ಕೆ ತೂಕದ ಒಂದು ಹೆಚ್ಚಿನ ಪ್ರಮಾಣವಿರುವವರು ತೀರ ದಪ್ಪವಾಗಿದ್ದಾರೆ ಮತ್ತು ಅವರು ತೆಳ್ಳಗಾಗಬೇಕು ಎಂಬ ಸಲಹೆ ತಪ್ಪಾಗಿದೆ. ಎತ್ತರ-ಭಾರ ಪ್ರಮಾಣದ ಮೇಲೆ ತೆಳ್ಳಗಾಗುವಿಕೆಯು ಮಾಡುವ ಪರಿಣಾಮವನ್ನು ಅವಲಂಬಿಸದೇ ಅದು ನಿಮ್ಮ ಆರೋಗ್ಯಕ್ಕೆ ಹಾನಿತರಬಲ್ಲದು. 50 ವರ್ಷಕ್ಕಿಂತ ಮೇಲ್ಪಟ್ಟ ಅಧಿಕಾಂಶ ಜನರು ತೆಳ್ಳಗಾಗುವ ಅಗತ್ಯವಿಲ್ಲ.” ಪೌಷ್ಟಿಕಾಂಶ ಮತ್ತು ಪಥ್ಯಶಾಸ್ತ್ರ ಪ್ರೊಫೆಸರರಾದ, ಟಾಮ್ ಸ್ಯಾಂಡರ್ಸ್ ವಿವರಿಸುವುದು: “ಸ್ಥೂಲಕಾಯದ ಆರೋಗ್ಯ ಅಪಾಯ ಸಂಭವಗಳು ಅನೇಕಸಲ ಅತಿಶಯಿಸಲ್ಪಡುತ್ತವೆ. ಅದು ಮಧುಮೇಹ ಮತ್ತು ಸಂಧಿವಾತದ ಅಪಾಯ ಸಂಭವವನ್ನು ಹೆಚ್ಚಿಸುತ್ತದೆ ನಿಜ, ಆದರೆ ಪುಷ್ಟರಾಗಿರುವುದರಿಂದ ಬರುವ ಆರೋಗ್ಯ ಅಪಾಯ ಸಂಭವಗಳು ನಿರ್ಲಕ್ಷಿಸಬಹುದಾದದ್ದಾಗಿವೆ. ಅದು ಸ್ತ್ರೀಯರಿಗೆ ಪ್ರಯೋಜನಗಳನ್ನು ಕೂಡ ನೀಡಬಹುದು.” ಮತ್ತು ಆರೋಗ್ಯದ ಇಲಾಖೆಯ ಡಾ. ಮಾರ್ಟಿನ್ ವೈಸ್‌ಮ್ಯಾನ್ ಅಭಿಪ್ರಾಯ ನೀಡುವುದು: “ಯಾವುದೇ ಪ್ರಾಯದಲ್ಲಿ ಅತಿ ದಪ್ಪವಾಗಿಲ್ಲದೆ ಅಥವಾ ಅತಿ ತೆಳ್ಳಗಾಗಿಲ್ಲದೆ ಇರುವುದು ಪ್ರಾಮುಖ್ಯ. ಇದನ್ನು ಪಡೆಯಲು ವಿವೇಕದಿಂದ ತಿನ್ನುವುದು ಮತ್ತು ಕಾರ್ಯೋನ್ಮುಖವಾಗಿರುವದು ಅತ್ಯುತ್ತಮವಾದ ವಿಧವಾಗಿದೆ, ಆದರೆ ನಮಗೆ ವಯಸ್ಸಾದಂತೆ, ತೆಳ್ಳಗಾಗಿರುವುದಕ್ಕಿಂತ ಪುಷ್ಟರಾಗಿರುವುದು ಉತ್ತಮವಾಗಿದೆ.”
ಆ ಹಲ್ಲನ್ನು ಕಾಪಾಡಿರಿ!
ಆಕಸ್ಮಿಕವಾಗಿ ಹಲ್ಲೊಂದು ಬಿದ್ದುಹೋಗುವುದಾದರೆ, ಅದನ್ನು ಎಸೆಯದಿರಿ ಎಂದು ಯೂಸೀ ಬರ್ಕ್ಲೀ ವೆಲ್‌ನೆಸ್ ಲೆಟರ್ ಸಲಹೆಯನ್ನು ನೀಡುತ್ತದೆ. “ದಂತವೈದ್ಯರಲ್ಲಿಗೆ 30 ನಿಮಿಷಗಳೊಳಗೆ ನೀವು ಹೋಗುವುದಾದರೆ, ಒಂದು ಯಶಸ್ವಿಕರವಾದ ಪುನರ್‌ಜೋಡಿಸುವಿಕೆಯ 50% ಅವಕಾಶವು ನಿಮಗಿದೆ ಎಂದು ಸಂಶೋಧನೆಯು ತೋರಿಸುತ್ತದೆ.” ನೀವೇನು ಮಾಡಬೇಕು? ಸಾಧ್ಯವಾದಷ್ಟು ಮಟ್ಟಿಗೆ ಪ್ರಶಾಂತವಾಗಿ ಉಳಿಯಲು ಪ್ರಯತ್ನಿಸಿರಿ. ಬಿದ್ದುಹೋದ ಹಲ್ಲಿನ ಸವೆದ ಭಾಗವನ್ನು ಹಿಡಿದು ತುಸು ಬೆಚ್ಚಗೆನ ನೀರಿನಲ್ಲಿ ಸೌಮ್ಯವಾಗಿ ಜಾಲಿಸಿರಿ—ಅದನ್ನು ಉಜ್ಜಬೇಡಿರಿ. ನಿಮ್ಮ ಭೇಟಿಯ ಕುರಿತಾಗಿ ತಿಳಿಸಲು ನಿಮ್ಮ ದಂತವೈದ್ಯರಿಗೆ ಫೋನ್ ಮಾಡಿರಿ ಮತ್ತು, ಅವರು ಇನ್ನೇನನ್ನಾದರೂ ಹೇಳದಿದ್ದರೆ, ಹಲ್ಲನ್ನು ಅದರ ಕುಳಿಯಲ್ಲಿ ಹಿಂದೆ ಸೌಮ್ಯವಾಗಿ ಸೇರಿಸಿರಿ. ಹಲ್ಲನ್ನು ಕುಳ್ಳಿರಿಸಲು ಶುದ್ಧವಾದೊಂದು ಬಟ್ಟೆ ಅಥವಾ ಕರವಸ್ತ್ರವನ್ನು ಭದ್ರವಾಗಿ ಐದು ನಿಮಿಷಗಳ ತನಕ ಕಚ್ಚಿಹಿಡಿಯಿರಿ, ಮತ್ತು ದಂತವೈದ್ಯರನ್ನು ನೀವು ನೋಡುವ ತನಕ ಮಿತವಾದ ಒತ್ತಡದೊಂದಿಗೆ ಕಚ್ಚುತ್ತಾ ಇರಿ. ತತ್‌ಕ್ಷಣವೇ ನಿಮಗೆ ಹಲ್ಲನ್ನು ಪುನಃಸೇರಿಸಲಸಾಧ್ಯವಾದಲ್ಲಿ, ಅದನ್ನು ನಿಮ್ಮ ಬಾಯಿಯಲ್ಲಿನ ಲಾಲಾರಸದಲ್ಲಿ ನೆನೆಯುವಂತೆ ಇಡಿರಿ. ಯಾವ ಮಕ್ಕಳು ತಮ್ಮ ಹಲ್ಲನ್ನು ನುಂಗಬಹುದಾದಷ್ಟು ಎಳೆಯರಾಗಿದ್ದಾರೋ, ಅವರ ಹಲ್ಲನ್ನು ಒಂದು ಪ್ಲ್ಯಾಸ್ಟಿಕ್ ಚೀಲದಲ್ಲಿ ಅಥವಾ ಒಂದು ಬಟ್ಟಲಿನಲ್ಲಿಡಿರಿ ಮತ್ತು ಅದನ್ನು ಒಂದು ಚಿಟಿಕೆ ಉಪ್ಪನ್ನು ಒಳಗೊಂಡಿರುವ ಹಾಲು ಅಥವಾ ನೀರಿನಲ್ಲಿ ಮುಳುಗಿಸಿರಿ. ದೀರ್ಘಸಮಯವು ಕಳೆದುಹೋಗಿರುವುದಾದರೂ, ದಂತವೈದ್ಯರಲ್ಲಿಗೆ ಹೋಗುವುದು ಅತ್ಯುತ್ತಮವಾಗಿದೆ ಮತ್ತು ಏನು ಮಾಡಬೇಕೆಂಬುದನ್ನು ಅವರು ನಿರ್ಧರಿಸಲಿ. “ಹಲ್ಲೊಂದನ್ನು ಕಾಪಾಡುವದು ನಿಶ್ಚಯವಾಗಿಯೂ ಪರಿಶ್ರಮಕ್ಕೆ ತಕ್ಕ ಪ್ರತಿಫಲವಾಗಿದೆ,” ಎಂದು ವರದಿಯು ಹೇಳುತ್ತದೆ.
ಪೋಲಿಯೋ ಮೇಲೆ ಆಂಶಿಕ ಜಯ
ಸಾಮಾನ್ಯವಾಗಿ ಪೋಲಿಯೋ ಎಂದು ಕರೆಯಲ್ಪಡುವ ಪ್ಯಾರಲಿಟಿಕ್ ಪೊಲಿಯೋಮೈಅಲೈಟಿಸ್, ಇತಿಹಾಸದಾದ್ಯಂತ ಒಂದು ಕೋಟಿಗಿಂತ ಹೆಚ್ಚು ಜನರನ್ನು ಕೊಂದಿದೆ ಅಥವಾ ಅಂಗವಿಕಲಗೊಳಿಸಿದೆ ಎಂದು ಹೇಳಲಾಗಿದೆ. ಅದು ಪುರಾತನ ಈಜಿಪ್ಟ್, ಗ್ರೀಸ್, ಮತ್ತು ರೋಮ್‌ನ ಹಿಂದಿನ ಆ ಕಾಲದಲ್ಲಿ ಅಸ್ತಿತ್ವ ಪಡೆದಿರುವ ಕೆತ್ತನೆಗಳಲ್ಲಿ ಚಿತ್ರಿಸಲ್ಪಟ್ಟಿದೆ. ಅಧಿಕಾಂಶವಾಗಿ ಎಳೆಯರನ್ನು ಬಾಧಿಸುತ್ತಾ, ಅದು ಪಾರ್ಶ್ವವಾಯುವನ್ನು ಅಥವಾ ಶ್ವಾಸಬಂಧನದ ಮೂಲಕ ಸಾವನ್ನು ಉಂಟುಮಾಡಬಲ್ಲದು. ಈಗ, ವಿಶ್ವ ಸಂಸ್ಥೆಯ ಒಂದು ವಿಭಾಗವಾದ, ಪ್ಯಾನ್ ಅಮೆರಿಕನ್ ಆರೋಗ್ಯ ಸಂಸ್ಥೆಗನುಸಾರ, ಪಶ್ಚಿಮಾರ್ಧಗೋಳದಲ್ಲಿ ಪೋಲಿಯೋ ತೊಡೆದುಹಾಕಲ್ಪಟ್ಟಿದೆ. ವರದಿಸಲ್ಪಟ್ಟ ಕೊನೆಯ ಕೇಸ್, 1991ರಲ್ಲಿ ಒಂದು ಕಾಲನ್ನು ಕಳೆದುಕೊಂಡು ಪಾರಾಗಿ ಉಳಿದ ಪೆರುವಿಯನ್ ಮಗುವಿನದ್ದಾಗಿತ್ತು. ಹಾಗಿದ್ದರೂ, 1977ರಲ್ಲಿ ವಿಶ್ವವ್ಯಾಪಕವಾಗಿ ನಿರ್ಮೂಲಗೊಳಿಸಲ್ಪಟ್ಟ ಸಿಡುಬಿಗೆ ಅಸದೃಶವಾಗಿ, ಪೋಲಿಯೋ ವೈರಸ್ ಇತರ ಸ್ಥಳಗಳಲ್ಲಿ ಇನ್ನೂ ಇದೆ ಮತ್ತು ಸಂಭವನೀಯವಾಗಿ, ವಲಸೆ ಮತ್ತು ಪ್ರಯಾಣದಿಂದ ಅಮೆರಿಕದೊಳಗೆ ಪುನಃ ಪ್ರವೇಶಗೊಳ್ಳಬಹುದು. ಕಳೆದ ಸಂಪೂರ್ಣ ವರದಿಯು, ವರ್ಷಕ್ಕೆ 10,000ಕ್ಕಿಂತ ಸ್ವಲ್ಪ ಕಡಿಮೆ ಕೇಸ್‌ಗಳನ್ನು ತೋರಿಸಿತು. ಸಂಪೂರ್ಣವಾಗಿ ಜಯಿಸಲ್ಪಡುವ ತನಕ, ರೋಗದ ವಿರುದ್ಧ ಸೋಂಕುರಕ್ಷಣೆಯು ಮುಂದುವರಿಯತಕ್ಕದ್ದು ಎಂದು ಆರೋಗ್ಯ ಪರಿಣಿತರು ಹೇಳುತ್ತಾರೆ.
ತಗ್ಗಿಹೋದ ಡಬ್ಬಿಗಳಲ್ಲಿ ಆಹಾರವನ್ನು ಕೊಳ್ಳುವುದು
“ಕಿರಾಣಿ ಅಂಗಡಿಗೆ ಹೋಗುವವರು ಹಣ ಉಳಿತಾಯಮಾಡಲು ಪ್ರಯತ್ನಿಸುತ್ತಾ, ಅಪಾಯಕರವಾಗಿರಲು ಸಾಮಾರ್ಥ್ಯವಿರುವುದರಿಂದ ಹೊರಗೆ ಎಸೆಯಲ್ಪಡಬೇಕಾದ ಡಬ್ಬಿಗಳನ್ನು ಕೊಂಡುಕೊಳ್ಳುತ್ತಿರಬಹುದು ಅಥವಾ ಇಟ್ಟುಕೊಳ್ಳತ್ತಿರಬಹುದು,” ಎಂದು ವಿನ್ನಿಪೆಗ್ ಫ್ರೀ ಪ್ರೆಸ್ ಎಚ್ಚರಿಸುತ್ತದೆ. “ತಗ್ಗಿಹೋಗಿರುವ ಅನೇಕ ಡಬ್ಬಿಗಳು ಸ್ವೀಕಾರಾರ್ಹವಾಗಿವೆ, ಆದರೆ ಕೆಲವು ಸ್ವೀಕಾರಾರ್ಹವಾಗಿರುವುದಿಲ್ಲ,” ಎಂದು ನಗರದ ಆರೋಗ್ಯ ಇಲಾಖೆಯ ಪೀಟರ್ ಪ್ರಿಸ್ ಹೇಳಿದರು. “ಸಾಮಾನ್ಯವಾಗಿ ಪ್ಯಾಕಿಂಗ್ ಮಾಡುವ ಸಮಯದಲ್ಲಿ ಡಬ್ಬಿಗಳು ಸುರಕ್ಷಿತವಾಗಿರುತ್ತವೆ; ಹಾನಿಯು ಅನಂತರ ಬರುತ್ತದೆ.” ನಗರದ ಆರೋಗ್ಯ ಇಲಾಖೆಗನುಸಾರ, ಯಾವುದು ಎಸೆಯಲ್ಪಡಬೇಕೋ ಆ ಪಟ್ಟಿಯಲ್ಲಿ, ತಮ್ಮ ಸೇರುವೆಯ ಸಂದುಗಳಲ್ಲಿ ತುಕ್ಕುಹಿಡಿದಿರುವ ಡಬ್ಬಿಗಳು, ಡಬ್ಬಿಯ ಮೇಲೆ ಅಥವಾ ಇತರ ಭಾಗದಲ್ಲಿನ ಸುಲಭವಾಗಿ ತೊಡೆದುಹಾಕಲ್ಪಡಲಸಾಧ್ಯವಾದ ತುಕ್ಕು, ಅಥವಾ ಅಲುಗಾಡಿಸಿದಾಗ ಕೊಚಕೊಚ ಶಬ್ದವನ್ನುಂಟುಮಾಡುವ, ಹಾಗೂ ಯಾವುದೇ ವಿಧದಲ್ಲಿ ಉಬ್ಬಿರುವ ಯಾ ಊದಿರುವ ಡಬ್ಬಿಗಳು, ಸೋರುವ ಡಬ್ಬಿಗಳು, ಮತ್ತು ಕಾಣೆಯಾಗಿರುವ ಅಥವಾ ಅವಧಿ ತೀರಿಹೋದ ಲೇಬ್‌ಲ್ ಅನ್ನು ಹೊಂದಿರುವ ಡಬ್ಬಿಗಳು ಒಳಗೊಳ್ಳುತ್ತವೆ. ವಾರ್ತಾಪತ್ರಿಕೆಯ ವರದಿ ಎಚ್ಚರಿಸುವುದು: “ಒಮ್ಮೆ ಮೊಹರು ಮುರಿದುಹಾಕಲ್ಪಟ್ಟಿತೆಂದರೆ, ಡಬ್ಬಿಗಳು ಸಾಲ್‌ಮನೆಲಾ ಮತ್ತು ಸ್ಟ್ಯಾಫಿಲೊಕಾಕಸ್ ಬ್ಯಾಕ್ಟೀರಿಯಾಗಳಿಗೆ ಬೆಳೆಯಲು ಅನುಕೂಲಕರವಾಗಿ ಪರಿಣಮಿಸುತ್ತವೆ. ಪ್ರತಿ ಬ್ಯಾಕ್ಟೀರಿಯ ಅತಿಸಾರ, ವಾಂತಿ ಮತ್ತು ಸೆಡತವನ್ನುಂಟುಮಾಡಬಲ್ಲದು.”
ಕಲ್ನಾರು ಅಪಾಯಸೂಚನೆ ಮುಂದುವರಿಯುತ್ತದೆ
ಸೇಫ್ಟಿ ಅಧಿಕಾರಿಗಳ ತಪ್ಪೆಣಿಕೆಯೊಂದರ ಕಾರಣ, ಸಾವಿರಾರು ಬ್ರಿಟಿಷ್ ನಿರ್ಮಾಣ ಕಾರ್ಮಿಕರು ಕಲ್ನಾರು ಸಂಬಂಧಿತ ಕ್ಯಾನ್ಸರಿನಿಂದ ಸಾಯುವರು, ಎಂದು ನ್ಯೂ ಸೈಎನ್‌ಟಿಸ್ಟ್ ಪತ್ರಿಕೆಯು ವರದಿಸುತ್ತದೆ. ವರ್ಷಗಳ ಹಿಂದೆ, 1960ಗಳಲ್ಲಿ ಕಲ್ನಾರು ತಂತುಗಳು ಆರೋಗ್ಯಕ್ಕೆ ಅಪಾಯವಾಗಿವೆ ಎಂದು ವೈದ್ಯಕೀಯ ಪರಿಣಿತರು ಹೇಳುತ್ತಿದ್ದಾಗ, ಗಾಳಿಯಲ್ಲಿ ಈ ತಂತುಗಳ ಸಾಂದ್ರೀಕರಣವನ್ನು ಮಿತಿಗೊಳಿಸಲು ಬ್ರಿಟಿಷ್ ಸರಕಾರವು ಕೈಗಾರಿಕಾ ನಿಬಂಧನೆಗಳನ್ನು ಪರಿಚಯಿಸಿತು. ಹಾಗಿದ್ದರೂ, ಅತ್ಯಂತ ಹೆಚ್ಚು ಅಪಾಯದ ಸ್ಥಿತಿಯಲ್ಲಿರುವವರು, ಕಲ್ನಾರು ಸಂಬಂಧಿತ ಉತ್ಪನ್ನಗಳೊಂದಿಗೆ ಅರಕ್ಷಿತವಾಗಿ ಕೆಲಸಮಾಡಿದವರಾದ, ಮರಗೆಲಸದವರು, ಈಲೆಕ್ಟಿಷ್ರನ್‌ಗಳು, ಕೊಳಾಯಿಗಾರರು, ಮತ್ತು ಗ್ಯಾಸ್ ಅಳವಡಿಸುವವರೆಂದು ಈಗ ಸಂಶೋಧನಕಾರರು ಕಂಡುಕೊಂಡರು. ಶ್ವಾಸಕೋಶ ಕ್ಯಾನ್ಸರಿನ ಒಂದು ನಮೂನೆಯು ಬೆಳೆಯಲು 30 ವರ್ಷಗಳನ್ನು ತೆಗೆದುಕೊಳ್ಳುವುದರಿಂದ, ತಪ್ಪು ಕೇವಲ ಇತ್ತೀಚೆಗೆ ಬೆಳಕಿಗೆ ಬಂದಿದೆ. ಪ್ರಸ್ತುತವಾಗಿ, ಯಾವ ನಿರ್ಮಾಣ ಕಾರ್ಯವಿಧಾನಗಳು ಅಥವಾ ಕಲ್ನಾರು ಉತ್ಪನ್ನಗಳು ಅತ್ಯಂತ ಅಪಾಯಕಾರಿಯಾಗಿವೆ ಎಂಬುದು ಅಜ್ಞಾತವಾಗಿದೆ. ಪರಿಣಾಮವಾಗಿ, ಬ್ರಿಟನಿನ ಹೆಲ್ತ್ ಆ್ಯಂಡ್ ಸೇಫ್ಟಿ ಎಕ್ಸಿಕ್ಯೂಟಿವ್, ಕಲ್ನಾರನ್ನು ಒಳಗೊಂಡಿರುವ ಪದಾರ್ಥವೊಂದನ್ನು ನಿರ್ಮಾಣ ಕಾರ್ಮಿಕರು ಕಂಡುಹಿಡಿಯುವುದಾದರೆ ಅತ್ಯಂತ ಎಚ್ಚರಿಕೆಯನ್ನು ವಹಿಸಬೇಕೆಂದು ಮತ್ತು ತಮ್ಮ ಚಿಂತೆಗಳನ್ನು ತಮ್ಮ ಧಣಿಗಳಿಗೆ ವರದಿಸಬೇಕೆಂದು ಅವರನ್ನು ಪ್ರೋತ್ಸಾಹಿಸುತ್ತದೆ. ಅವರು ವಿಷಯಗಳ ತನಿಖೆ ನಡೆಸಿ ಸಮರ್ಪಕವಾದ ರಕ್ಷಣೆಯನ್ನು ಒದಗಿಸಬೇಕು.
ದೀರ್ಘಕಾಲ ಉಳಿಯುವ ಯುದ್ಧ ಪರಿಣಾಮಗಳು
ಹಿಂದಿನ ಯುಗೊಸ್ಲಾವಿಯಾದಲ್ಲಿನ ಯುದ್ಧದ ದುರ್ಘಟನೆಗಳು, ಗುಂಡಿನಿಂದ ಅಥವಾ ಬಾಂಬ್‌ಗಳಿಂದ ಕೊಲ್ಲಲ್ಪಟ್ಟವರು ಯಾ ಊನಮಾಡಲ್ಪಟ್ಟವರಿಗಿಂತ ಇನ್ನೂ ಹೆಚ್ಚಿನವರನ್ನು ಒಳಗೊಂಡಿದೆ. “ಬೆಂಕಿ, ಸ್ಫೋಟನೆ ಮತ್ತು ರಾಸಾಯನಿಕ ಸೋರುವಿಕೆಯಿಂದ ಪರಿಸರದೊಳಕ್ಕೆ ಬಿಡಲ್ಪಟ್ಟ ನೂರಾರು ಟನ್‌ಗಳ ವಿಷಪೂರಿತ ಪದಾರ್ಥಗಳು ಅತಿ ಗಂಭೀರವಾದ ಆರೋಗ್ಯ ಪರಿಣಾಮಗಳನ್ನು ಮಾಡಲಿರುವುದು,” ಎಂದು ಇತ್ತೀಚಿನ ಅಧ್ಯಯನವು ಹೊರಗೆಡಹುತ್ತದೆ ಎಂಬುದಾಗಿ ದ ಮೆಡಿಕಲ್ ಪೋಸ್ಟ್ ಹೇಳುತ್ತದೆ. ಈ ರಾಸಾಯನಿಕ ಮತ್ತು ವಿಷಪೂರಿತ ಲೋಹಗಳು, ನದಿಗಳನ್ನು ಮಲಿನಗೊಳಿಸುತ್ತಿವೆ ಮತ್ತು ಭೂಗತ ಜಲಸಮೂಹವನ್ನು ಕೂಡ ಕಲುಷಿತಗೊಳಿಸುತ್ತಿರಬಹುದು. ಪೋಸ್ಟ್‌ಗನುಸಾರವಾಗಿ, “ಹೆತ್ತವರು ವಿಷಪೂರಿತ ಪದಾರ್ಥಗಳಿಂದ ಕಲುಷಿತಗೊಂಡ ನೀರನ್ನು ಕುಡಿಯುವುದರ ಪರಿಣಾಮವಾಗಿ, ಆಜನ್ಮ ವಿಕೃತಿಗಳಿರುವ ಮಕ್ಕಳ ಒಂದು ಗಮನಾರ್ಹವಾದ ವೃದ್ಧಿ”ಯಿರುವುದು ಎಂಬುದಾಗಿ ಪರಿಣಿತರು ಎಚ್ಚರಿಸುತ್ತಿದ್ದಾರೆ.